Tag: eknath shindhe

  • ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರ Y-ಭದ್ರತೆ ವಾಪಸ್ ಪಡೆದ ಫಡ್ನವಿಸ್

    ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರ Y-ಭದ್ರತೆ ವಾಪಸ್ ಪಡೆದ ಫಡ್ನವಿಸ್

    – ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು?

    ನವದೆಹಲಿ: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಹೆಚ್ಚಾಗುತ್ತಿದೆ ಎಂಬ ಊಹಾಪೋಹಗಳ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಗೃಹ ಇಲಾಖೆಯು ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರಿಗೆ ನೀಡಲಾಗಿದ್ದ ವೈ-ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಕೆಲವು ಶಾಸಕರ ಭದ್ರತಾ ರಕ್ಷಣೆಯನ್ನು ಸಹ ಕಡಿಮೆ ಮಾಡಲಾಗಿದ್ದರೂ, ಶಿವಸೇನೆಯವರಿಗಿಂತ ಈ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ವರದಿಯಾಗಿದೆ. ರಾಜ್ಯ ಸಂಪನ್ಮೂಲಗಳ ದುರುಪಯೋಗವನ್ನು ತಡೆಯುವ ಸರ್ಕಾರದ ಉಪಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಂತ್ರಿಗಳಲ್ಲದಿದ್ದರೂ ಈ ಶಾಸಕರಿಗೆ ಹೆಚ್ಚುವರಿ ಸವಲತ್ತಾಗಿ ವೈ-ಭದ್ರತಾ ರಕ್ಷಣೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಿನ್ನಾಭರಣ, ಹಣ ದೋಚಿ ಸಿಕ್ಕಿಬೀಳುವ ಭಯದಲ್ಲಿ ಡಿವಿಆರ್ ಹೊತ್ತೊಯ್ದ ಕಳ್ಳರು!

    2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಪಕ್ಷಾಂತರಗೊಂಡ ನಂತರ ಈ ಶಾಸಕರಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಯಿತು. ಬಳಿಕ ಕಾಂಗ್ರೆಸ್ ಎನ್‌ಸಿಪಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಫಡ್ನವಿಸ್ ಸರ್ಕಾರದ ನಿರ್ಧಾರವು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌ ಬೆಡಗಿಗೆ ಕಾರವಾರ ನೌಕಾನೆಲೆಯ ಮಾಹಿತಿ, ಪ್ರತಿ ತಿಂಗಳು 5,000 ಜಮೆ -‌ ಎನ್‌ಐಎಯಿಂದ ಇಬ್ಬರು ಅರೆಸ್ಟ್

    ಸರ್ಕಾರದ ಈ ನಡೆಯನ್ನು ಫಡ್ನವಿಸ್ ತನ್ನ ಅಧಿಕಾರವನ್ನು ಪ್ರತಿಪಾದಿಸಲು ನಡೆಸಿದ ಕಾರ್ಯತಂತ್ರದ ತಂತ್ರವೆಂದು ಗ್ರಹಿಸಲಾಗಿದೆ. ರಾಯಗಡ ಮತ್ತು ನಾಸಿಕ್‌ನ ನಾಯಕರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಬಿಜೆಪಿ ಮತ್ತು ಶಿಂಧೆ ಸೇನಾ ನಡುವಿನ ಬಿಕ್ಕಟ್ಟು ಸೃಷ್ಠಿಯಾಗಿತ್ತು. ಇನ್ನೂ ಈ ಸಮಸ್ಯೆ ಬಗೆಹರಿದಿಲ್ಲ. ಇದು ಇತರ ಪ್ರದೇಶಗಳಿಗೂ ವ್ಯಾಪಿಸಿದೆ. ಇದನ್ನೂ ಓದಿ: ಇಡೀ ದೇಶದ ಪೋಷಕರನ್ನು ನೀವು ಅವಮಾನಿಸಿದ್ದೀರಿ – ಯೂಟ್ಯೂಬರ್ ರಣವೀರ್ ಹೇಳಿಕೆಗೆ ಸುಪ್ರೀಂ ಕೆಂಡಾಮಂಡಲ

  • ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ

    ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ

    – ಡಿಸಿಎಂ ಆಗಿ ಶಿಂಧೆ, ಅಜಿತ್ ಪವಾರ್ ಪದಗ್ರಹಣ

    ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ (Devendra Fadnavis) ಆಯ್ಕೆಯಾಗಿದ್ದು, ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ, ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆಯೇ ಗಟ್ಟಿಯಾಗಿದೆ. ಸರ್ಕಾರ ರಚನೆಯ ಮೈತ್ರಿ ಸೂತ್ರ ಇಂದು ರಿವೀಲ್ ಆಗಲಿದೆ.

    ಈಗ ಮುಂಗಾರು ಕಮ್ಮಿ ಆಗಿದೆ ಅಂತಾ ಕರಾವಳಿಯಲ್ಲಿ ನಿಮ್ಮ ಮನೆ ಕಟ್ಟಲು ಧೈರ್ಯ ಮಾಡಬೇಡಿ. ನಾನು ಸಮುದ್ರ ಇದ್ದಂತೆ, ಮತ್ತೆ ಬಂದೇ ಬರುತ್ತೇನೆ ಎಂದು 2019ರಲ್ಲಿ ದೇವೇಂದ್ರ ಫಡ್ನವೀಸ್ ಅಂದಿನ ಸಿಎಂ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ  ಎಚ್ಚರಿಕೆ ನೀಡಿದ್ದರು. ಅದಾಗಿ ಐದು ವರ್ಷಕ್ಕೇ ಅವತ್ತಿನ ವಾರ್ನಿಂಗ್ ನಿಜವಾಗಿದೆ. ಸಿಎಂ ಕುರ್ಚಿಗಾಗಿ ಬಿಜೆಪಿ ಸಂಬಂಧವನ್ನು ಮುರಿದುಕೊಂಡಿದ್ದ ಉದ್ಧವ್ ಠಾಕ್ರೆಗೆ ಈಗ ನೆಲೆಯೇ ಇಲ್ಲದಂತೆ ಫಡ್ನವೀಸ್ ಮಾಡಿದ್ದಾರೆ. ಅಂದು ಶಿವಸೇನೆಯ ನಡೆಯಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದ ದೇವೇಂದ್ರ ಫಡ್ನವೀಸ್ ಈಗ ಮತ್ತೊಮ್ಮೆ ಮಹಾರಾಷ್ಟ್ರದ (Maharashtra) ಸಿಎಂ ಆಗುತ್ತಿದ್ದು, ಐದು ವರ್ಷದಲ್ಲಿ ತಮ್ಮ ತಾಕತ್ತು ಏನು ಎಂಬುದನ್ನು ಉದ್ಧವ್ ಠಾಕ್ರೆ ಸೇರಿ ಮಹಾ ವಿಕಾಸ್ ಅಘಾಡಿಗೆ ತೋರಿಸಿದ್ದಾರೆ. ಈ ಮೂಲಕ ಐದು ವರ್ಷದ ಹಿಂದೆ ಸಮುದ್ರದಂತೆ ನಾನು ವಾಪಸ್ ಬರುತ್ತೇನೆ ಎಂದು ಮಾಡಿದ್ದ ಶಪಥವನ್ನು ಈಡೇರಿಸಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

     

    ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರಬಿದ್ದು ಬರೋಬ್ಬರಿ 12 ದಿನಗಳು ಕಳೆದ ಬಳಿಕ ಮಹಾಯುತಿ ಸರ್ಕಾರ ರಚನೆಯಾಗುತ್ತಿದೆ. ಬಿಜೆಪಿ, ಶಿವಸೇನೆ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಹಾವು ಏಣಿ ಆಟ ಅಂತ್ಯವಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಇಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಆಗಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ (Eknath Shindhe) ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಡಿಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ: ಕೊಲೆ ಕೇಸ್‌ ಆರೋಪಿ ಕೈಬಿಟ್ಟ ಆರೋಪ; ಇನ್‌ಸ್ಪೆಕ್ಟರ್‌ ಸೇರಿ 6 ಸಿಬ್ಬಂದಿ ಅಮಾನತು

    ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು, ಸಂಜೆ 5:30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಬುಧವಾರ ರಾಜಭವನಕ್ಕೆ ಭೇಟಿ ನೀಡಿದ್ದ ಮಹಾಯುತಿ ಮೈತ್ರಿಕೂಟದ ನಾಯಕರು ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಜ್ಯಪಾಲರಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ, ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾಯುತಿ ಸರ್ಕಾರ ರಚನೆಗೆ ಹಕ್ಕು ಸಾಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಬೆಂಬಲಿಸಿದ್ದಕ್ಕಾಗಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಕೂಡ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು

    ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಬಿಜೆಪಿ ಎನ್‌ಡಿಎ ಆಡಳಿತದ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊರತುಪಡಿಸಿ ಇನ್ನೂ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೂರು ಪಕ್ಷಗಳ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: GDP ಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್ – ಸಿದ್ದರಾಮಯ್ಯ

    ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರನ್ನು ಬಿಜೆಪಿ ನಾಯಕರು ಮನವೊಲಿಸಿದ್ದಾರೆ. ಗೃಹಖಾತೆಯ ಜೊತೆಗೆ ಡಿಸಿಎಂ ಆಗಲು ಏಕನಾಥ್ ಶಿಂಧೆ ಅವರು ಒಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಎನ್‌ಸಿಪಿಯ ಅಜಿತ್ ಪವಾರ್ ಕೂಡ ಇಂದು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಹರಾಷ್ಟ್ರದಲ್ಲಿ ಮಹಾಯುತಿ 2.0 ದರ್ಬಾರ್ ಇಂದಿನಿಂದ ಶುರುವಾಗಲಿದೆ. ಇದನ್ನೂ ಓದಿ: ಕೆನರಾ ಬ್ಯಾಂಕ್ ಜೊತೆಗೆ KKRTC ಒಪ್ಪಂದ – ಸಾರಿಗೆ ನೌಕರರಿಗೆ 1 ಕೋಟಿ ಅಪಘಾತ ವಿಮೆ ಯೋಜನೆ ಜಾರಿ

  • ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಭುಗಿಲೆದ್ದ ಹಿಂಸಾಚಾರ; 72 ಮಂದಿ ಅರೆಸ್ಟ್‌!

    ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಭುಗಿಲೆದ್ದ ಹಿಂಸಾಚಾರ; 72 ಮಂದಿ ಅರೆಸ್ಟ್‌!

    – ಆಗಸ್ಟ್‌ 24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ

    ಮುಂಬೈ: ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮಹಾರಾಷ್ಟ್ರದ ಬದ್ಲಾಪುರದಲ್ಲಿ ಉದ್ನಿಗ್ನ (Badlapur Violence) ಪ್ರತಿಸ್ಥಿತಿ ನಿರ್ಮಿಸಿದೆ. ಸಾರ್ವಜನಿಕರ ಪ್ರತಿಭಟನೆ ಬುಧವಾರ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಇದೇ ವೇಳೆ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ 72 ಪ್ರತಿಭಟನಾಕಾರರನ್ನ (Protester) ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರ ನಡೆದಿದ್ದ ಪ್ರತಿಭಟನೆಯಲ್ಲಿ ರೈಲ್ವೆ ನಿಲ್ದಾಣ ಮತ್ತು ಬದ್ಲಾಪುರದ ಇತರ ಭಾಗಗಳಲ್ಲಿ ಕಲ್ಲು ತೂರಾಟದ ಘಟನೆಗಳಲ್ಲಿ ಕನಿಷ್ಠ 17 ನಗರ ಪೊಲೀಸ್ (Maharashtra Police) ಸಿಬ್ಬಂದಿ ಮತ್ತು ಸುಮಾರು 8 ರೈಲ್ವೆ ಪೊಲೀಸರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದೆ. ಇನ್ನೂ ನಿಷೇಧಾಜ್ಞೆ ಉಲ್ಲಂಘನೆ ಆರೋಪದ ಮೇಲೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಾರಾಷ್ಟ್ರ ಬಂದ್‌ಗೆ ಕರೆ:
    ಈ ಹೀನ ಕೃತ್ಯ ಖಂಡಿಸಿ ಮತ್ತು ಮಹಿಳಾ ಸುರಕ್ಷತೆಗಾಗಿ ಮಹಾ ವಿಕಾಸ್‌ ಅಗಾಡಿ ಆ.24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ. ಅಗಾಡಿಯ ಮಹಾಸಭೆಯಲ್ಲಿ, ಕಾಂಗ್ರೆಸ್, ಶಿವಸೇನೆ (UBT) ಮತ್ತು NCP ಮೂರು ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಬದ್ಲಾಪುರ ಘಟನೆ ಮತ್ತು ರಾಜ್ಯದ ಒಟ್ಟಾರೆ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆಯ ಬಗ್ಗೆ ಚರ್ಚಿಸಿದರು.

    ಏನಿದು ಹೀನ ಕೃತ್ಯ?
    ಮಹಾರಾಷ್ಟ್ರದ ಥಾಣೆಯಲ್ಲಿ ಆಂಗ್ಲ ಮಾಧ್ಯಮ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ 23 ವಯಸ್ಸಿನ ಸ್ವಚ್ಛತಾ ಸಿಬ್ಬಂದಿ 4 ವರ್ಷದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಶೌಚಾಲಯದ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿತ್ತು. ಆಗಸ್ಟ್‌ 12-13ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಅಂದು ಬೆಳಗ್ಗೆ ತರಗತಿಯ ವೇಳೆ ಬಾಲಕಿಯರು ವಾಶ್‌ರೂಮ್‌ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಘಟನೆ ಖಂಡಿಸಿ ಸಾರ್ವಜನಿಕರು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಹಳಿಗಳಿಗೆ ಇಳಿದು ಪ್ರತಿಭಟನೆ ನಡೆಸಿದ ಕಾರಣ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು.

    ಆರೋಪಿ, ಅಕ್ಷಯ್ ಶಿಂಧೆಯನ್ನು ಆಗಸ್ಟ್ 1, ರಂದು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಯಿತು. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಬಾಲಕಿಯರ ಶೌಚಾಲಯವನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆ ಆತನಿಗೆ ನೀಡಲಾಗಿತ್ತು. ಶುಕ್ರವಾರ ರಾತ್ರಿ ಇಬ್ಬರು ಬಾಲಕಿಯರ ಪೋಷಕರು ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

    ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

    – ಶಾಲೆಯ ಸ್ವಚ್ಛತಾ ಸಿಬ್ಬಂದಿಯಿಂದ ಮಕ್ಕಳ ಮೇಲೆ ದೌರ್ಜನ್ಯ

    ಮುಂಬೈ: ಇಲ್ಲಿನ ನರ್ಸರಿಯಲ್ಲಿ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಸ್ವಚ್ಛತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ ನಡೆದಿದೆ.

    ಆಂಗ್ಲ ಮಾಧ್ಯಮ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ 23 ವಯಸ್ಸಿನ ಸ್ವಚ್ಛತಾ ಸಿಬ್ಬಂದಿ 4 ವರ್ಷದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಶೌಚಾಲಯದ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಘಟನೆ ಖಂಡಿಸಿ ಸಾರ್ವಜನಿಕರು ಹಾಗೂ ಪೋಷಕರು ಮುಂಬೈನ (Mumbai) ಬಾದಲ್‌ಪುರ ಎಂಬಲ್ಲಿ ರೈಲು ಮಾರ್ಗದ ಬಳಿ ಪ್ರತಿಭಟನೆ ನಡೆಸಿದರು. ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ ನರ್ಸರಿಯಲ್ಲಿ ವಿಫಲಗೊಂಡಿದೆ. ಮಕ್ಕಳಿಗೆ ನರ್ಸರಿಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದಕ್ಕೆ ಈ ಘಟನೆ ಸಂಭವಿಸಿದೆ. ಇದಕ್ಕೆಲ್ಲಾ ಶಾಲೆ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮಂಡಳಿಯು, ಪ್ರಾಂಶುಪಾಲರನ್ನು ವಜಾಗೊಳಿಸಿದೆ. ಶಿಕ್ಷಕರು ಹಾಗೂ ದಾದಿಯರನ್ನು ಅಮಾನತು ಮಾಡಿದೆ. ಆದರೆ ವಿದ್ಯಾರ್ಥಿಗಳ ಪೋಷಕರು ಅಷ್ಟಕ್ಕೆ ಸುಮ್ಮನಾಗಿಲ್ಲ. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ

    ನರ್ಸರಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೈಕೊಟ್ಟಿವೆ ಎಂದು ಪೊಲೀಸ್ ತನಿಖೆಯಲ್ಲಿ ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fudnavis) ಆದೇಶಿಸಿದ್ದಾರೆ. ಈ ಪ್ರಕರಣವನ್ನು ಫಾಸ್ಟ್ರ‍್ಯಕ್  ನ್ಯಾಯಾಲಯಕ್ಕೆ ವಹಿಸಲು ಇಂದೇ ಪ್ರಸ್ತಾವನೆ ಸಲ್ಲಿಸುವಂತೆ ಥಾಣೆ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಹುಮತ ಬಂದ್ರೆ ಬಿಜೆಪಿ ತಂದಿದ್ದ ಭೂ ಕಂದಾಯ ಕಾಯ್ದೆ ರದ್ದು ಮಾಡ್ತೀನಿ: ಸಿದ್ದರಾಮಯ್ಯ

    ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shindhe) ಕೂಡ ಈ ಘಟನೆಯ ಬಗ್ಗೆ ಗಮನ ಹರಿಸಿ, ಈ ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಇದರ ಬಗ್ಗೆ (ಎಸ್‌ಐಟಿ) ತನಿಖೆ ನಡೆಯುತ್ತಿದೆ. ಇದನ್ನು ನಾನು ಸುಮ್ಮನೇ ಬಿಡುವುದಿಲ್ಲ. ಸರಿಯಾದ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ

    ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಹಾರಾಷ್ಟ  ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ (Vijay Namdevrao Wadettiwar) ಆರೋಪಿಸಿದ್ದಾರೆ. ಈ ಘಟನೆಯು ಮಹಾರಾಷ್ಟçಕ್ಕೆ ನಾಚಿಗೇಡಿನ ಸಂಗತಿಯಾಗಿದೆ. ಎಲ್ಲರೂ ಈ ಘಟನೆಯನ್ನು ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

    ಇಲ್ಲಿ ಯಾವುದೇ ರಾಜಕೀಯ ಮಾಡಬಾರದು. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಒತ್ತಾಯಿಸಿದ್ದಾರೆ. ಹತ್ತು ವರ್ಷಗಳ ಹಿಂದೆ, ದೆಹಲಿಯಲ್ಲಿ ಸಂಭವಿಸಿದ ನಿರ್ಭಯಾ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಬಹಳ ಸಮಯದ ನಂತರ ಶಿಕ್ಷೆಯಾಯಿತು. ನ್ಯಾಯ ವಿಳಂಬ ಆಗಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಪುತ್ತೂರಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ

  • ಅನರ್ಹತೆ ಅಸ್ತ್ರ- ಶಿಂಧೆ, ಠಾಕ್ರೆ ಬಣದ ಶಾಸಕರಿಗೆ ಸ್ಪೀಕರ್ ನೋಟೀಸ್

    ಅನರ್ಹತೆ ಅಸ್ತ್ರ- ಶಿಂಧೆ, ಠಾಕ್ರೆ ಬಣದ ಶಾಸಕರಿಗೆ ಸ್ಪೀಕರ್ ನೋಟೀಸ್

    ಮುಂಬೈ: ಮಹಾರಾಷ್ಟ್ರ (Maharastra) ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ (Speaker  ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 40 ಶಾಸಕರು ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ತಮ್ಮ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.

    ಶಾಸಕರಿಗೆ ಪ್ರತಿಕ್ರಿಯೆ ನೀಡಲು 7 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅನರ್ಹತೆಯ ವಿರುದ್ಧದ ಕ್ರಮವನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಬೇಕು ಎಂದು ಸ್ಪೀಕರ್ ಕಚೇರಿಯಿಂದ ಸೂಚನೆ ನೀಡಲಾಗಿದೆ. ಅನರ್ಹತೆ ಅರ್ಜಿಗಳ ವಿಚಾರಣೆಯು ಶೀಘ್ರದಲ್ಲೇ ನಡೆಯಲಿದೆ. ಇದನ್ನೂ ಓದಿ: ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ!

    ಏಕನಾಥ್ ಶಿಂಧೆ (Eknath Shindhe) ಮತ್ತು ಉದ್ಧವ್ ಠಾಕ್ರೆ (Uddhav Thackeray) ಇಬ್ಬರನ್ನೂ ಸ್ಪೀಕರ್ ಅವರು ಸಾಕ್ಷ್ಯಾಧಾರಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಕರೆಯಬಹುದು. ಕುತೂಹಲಕರ ಬೆಳವಣಿಗೆಯಲ್ಲಿ ಕಳೆದ ವರ್ಷ ಉದ್ಧವ್ ಠಾಕ್ರೆ ಬಣದಿಂದ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಗೆದ್ದಿದ್ದ ಆದಿತ್ಯ ಠಾಕ್ರೆ ಮತ್ತು ರುತುಜಾ ಲಟ್ಕೆ ಅವರಿಗೆ ನೋಟಿಸ್ ನೀಡಲಾಗಿಲ್ಲ.

    ಇದಕ್ಕೂ ಮುನ್ನ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಶಾಸಕ ಸುನೀಲ್ ಪ್ರಭು (Sunil Prabhu) ಅವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಏಕನಾಥ್ ಶಿಂಧೆ ಸೇರಿದಂತೆ ಶಿವಸೇನೆಯ 16 ಶಾಸಕರ ಭವಿಷ್ಯವನ್ನು ನಿರ್ಧರಿಸುವಂತೆ ಮೇ 11 ರಂದು ಸುಪ್ರೀಂಕೋರ್ಟ್ ಸ್ಪೀಕರ್ ಗೆ ಸೂಚಿಸಿತ್ತು.

    ಕಳೆದ ವರ್ಷ ಜೂನ್‍ನಲ್ಲಿ, ಏಕನಾಥ್ ಶಿಂಧೆ ಮತ್ತು ಇತರ 15 ಶಾಸಕರು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ತರುವಾಯ ಶಿಂಧೆ ಮತ್ತು ಬಂಡಾಯ ಶಾಸಕರು ಹೊಸ ಸರ್ಕಾರ ರಚಿಸಲು ಬಿಜೆಪಿ ಜೊತೆ ಕೈಜೋಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]