ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಅವರ ಎಕ್ಸ್ ಖಾತೆಯನ್ನು (X Account) ಹ್ಯಾಕ್ ಮಾಡಿದ್ದು, ಹ್ಯಾಕರ್‌ಗಳು ಅವರ ಖಾತೆಯಿಂದ ಪಾಕಿಸ್ತಾನ (Pakistan) ಮತ್ತು ಟರ್ಕಿಯ (Turkey) ಧ್ವಜಗಳನ್ನು ಪೋಸ್ಟ್ ಮಾಡಿದ್ದಾರೆ.
ಖಾತೆ ಹ್ಯಾಕ್ ಆಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸೈಬರ್ ಅಪರಾಧ ಪೊಲೀಸರ ಗಮನಕ್ಕೆ ತಂದಿದ್ದೇವೆ. ಹ್ಯಾಕ್ ಆದ ಬಳಿಕ ಸುಮಾರು 30-45 ನಿಮಿಷಗಳ ಒಳಗಾಗಿ ಖಾತೆಯನ್ನು ಮರುಸ್ಥಾಪಿಸಲಾಗಿದೆ. ಅಲ್ಲದೇ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲಾರ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಟ ಧ್ರುವ ಸರ್ಜಾ ವಿಶೇಷ ಪೂಜೆ
ಮುಂಬೈ: ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ (Stand up comedian Kunal Kamra) ಅವರು ಮುಂಬೈ ಪೊಲೀಸರು (Mumbai Police) ದಾಖಲಿಸಿದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ (Bombay Highcourt) ಅರ್ಜಿ ಸಲ್ಲಿಸಿದ್ದಾರೆ.
ಕುನಾಲ್ ಕಾಮ್ರಾ ತಮ್ಮ ಇತ್ತೀಚಿನ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮ `ನಯಾ ಭಾರತ್’ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರನ್ನು ಪರೋಕ್ಷವಾಗಿ `ಗದ್ದಾರ್’ (ದ್ರೋಹಿ) ಎಂದು ಕರೆದಿದ್ದರು. ಈ ಪ್ರದರ್ಶನವು ಮುಂಬೈನ ಖಾರ್ ಪ್ರದೇಶದ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ನಡೆದಿದ್ದು, ಇದರ ವೀಡಿಯೋ ಯೂಟ್ಯೂಬ್‌ನಲ್ಲಿ ಪ್ರಕಟವಾದ ನಂತರ ವೈರಲ್ ಆಗಿತ್ತು. ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಾ?
ವಿವಾದ ತಾರಕಕ್ಕೇರಿದ ನಂತರ ಕಾಮ್ರಾ ತಮಿಳುನಾಡಿನಲ್ಲಿ ಇರುವ ಕಾರಣ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮಾ. 28ರಂದು ಮದ್ರಾಸ್ ಹೈಕೋರ್ಟ್ ಅವರಿಗೆ ಏ. 7ವರೆಗೆ ಮಧ್ಯಂತರ ಪೂರ್ವಭಾವಿ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಅವಧಿ ಮುಗಿದ ನಂತರ, ಕಾಮ್ರಾ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಏ. 21ರಂದು ನ್ಯಾ.ಸಾರಂಗ್ ಕೊತ್ವಾಲ್ ಮತ್ತು ಶ್ರೀರಾಮ್ ಎಂ. ಮೊದಕ್ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಇದನ್ನೂ ಓದಿ: Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ
ಎಫ್‌ಐಆರ್ ತಮ್ಮ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ‍್ಯ (ವಿಧಿ 19(1)(ಎ)), ಯಾವುದೇ ವೃತ್ತಿ ಅಥವಾ ವ್ಯಾಪಾರ ನಡೆಸುವ ಹಕ್ಕು (ವಿಧಿ 19(1)(ಜಿ)), ಮತ್ತು ಜೀವನ ಮತ್ತು ಸ್ವಾತಂತ್ರ‍್ಯದ ಹಕ್ಕು (ವಿಧಿ 21)ಗಳನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ಕುನಾಲ್ ಕಾಮ್ರಾ ಉಲ್ಲೇಖಿಸಿದ್ದಾರೆ.
– ನಿರ್ಮಲಾ ಸೀತಾರಾಮನ್ ವಿರುದ್ಧ ಕಾಮ್ರಾ ವ್ಯಂಗ್ಯ – ವಿಡಿಯೋ ವೈರಲ್
ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ವಿರುದ್ಧ ʻದೇಶದ್ರೋಹಿʼ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ (Stand up comedian Kunal Kamra)ಗೆ ಪೊಲೀಸರು 2ನೇ ಸಮನ್ಸ್ ಜಾರಿಗೊಳಿಸಿದ್ದಾರೆ.
ಕುನಾಲ್ ಕಾಮ್ರಾ ಹೇಳಿದ್ದೇನು?
ಮುಂಬೈನ (Mumbai) ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇದು ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಕೋಲಾಹಲ ಎಬ್ಬಿಸಿತ್ತು.
ಇದರಿಂದ ರೊಚ್ಚಿಗೆದ್ದ ಶಿವಸೇನೆ ಶಿಂಧೆ ಬಣದ ಕಾರ್ಯಕರ್ತರು ಕಾರ್ಯಕ್ರಮ ನಡೆದ ಸ್ತಳದಲ್ಲಿ ದಾಂಧಲೆ ನಡೆಸಿದ್ದರು. ಈ ಆರೋಪದ ಮೇಲೆ ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಮತ್ತು 11 ಮಂದಿ ಇತರರನ್ನು ಬಂಧಿಸಿದ್ದಾರೆ. ದಾಂಧಲೆ ನಡೆಸಿದವರ ಪೈಕಿ 15-20 ಮಂದಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್
ಸೀತಾರಾಮನ್‌ಗೆ ಸರ್ವಾಧಿಕಾರಿ ಎಂದು ಟೀಕೆ
ಕುನಾಲ್ ಕಾಮ್ರಾ ಬುಧವಾರ ಹೊಸ ಪ್ಯಾರಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಿದ್ದರು. ಬಿಜೆಪಿಯನ್ನ ʻಸರ್ವಾಧಿಕಾರಿʼ ಎಂದು ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಲು ಕಾಮ್ರಾ ʻಮಿಸ್ಟರ್ ಇಂಡಿಯಾʼ ಚಿತ್ರದ ʻಹವಾ ಹವಾಯಿʼ ಹಾಡಿನ ಪ್ಯಾರಡಿಯನ್ನ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ, ಕಾಮೆಡಿಯನ್ ಇಬ್ಬರೂ ಸಂವಿಧಾನ ಓದಿಲ್ಲ – ಕಾಮ್ರಾ ವಿರುದ್ಧ ಕಾನೂನು ಕ್ರಮ: ಫಡ್ನವಿಸ್
ʻಟ್ರಾಫಿಕ್ ಜಾಮ್ ಮಾಡಲು ಇವಳು ಬಂದಳು, ಸೇತುವೆ ಕೆಡವಲು ಇವಳು ಬಂದಳು, ಇದನ್ನ ಸರ್ವಾಧಿಕಾರ ಎನ್ನುತ್ತಾರೆ. ಜನರ ದುಡಿಮೆಯನ್ನ ಲೂಟಿ ಮಾಡಲು ಇವಳು ಬಂದಳು, ಸೀರೆ ಹುಟ್ಟೋ ಅಕ್ಕ ಬಂದಳು, ಸಂಬಳ ಕದಿಯಲು ಇವಳು ಬಂದಳು, ಮಧ್ಯಮ ವರ್ಗವನ್ನ ತುಳಿಯಲು ಇವಳು ಬಂದಳು, ಪಾಪ್‌ಕಾರ್ನ್ ತಿನ್ನಿಸಲು ಇವಳು ಬಂದಳು, ಇದನ್ನ ನಿರ್ಮಲಾ ತಾಯಿ ಎನ್ನುತ್ತಾರೆʼ ಎಂದು ಹಾಡಿದ್ದರು. ಇದು ಕಾಮ್ರಾ ವಿರುದ್ಧ ಮತ್ತಷ್ಟು ಆಕ್ರೋಶ ಹೆಚ್ಚಿಸಲು ಕಾರಣವಾಯಿತು.
ಮುಂಬೈ: ಡಿಸಿಎಂ ಏಕನಾಥ್ ಶಿಂಧೆ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ವಿರುದ್ಧ ಶಿವಸೇನಾ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಅವರು, ಕಾಮ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಮ್ರಾ ಮಾಡಿದ್ದು ಕಾಮೆಡಿ ಅಲ್ಲ, ಶಿಂಧೆ ಅವರಿಗೆ ಮಾಡಿದ ಅವಮಾನ, ಅದಕ್ಕಾಗಿ ಅವರು ಕ್ಷಮೆ ಕೇಳಬೇಕು. ಇಂತಹ ಅಪಮಾನಗಳನ್ನು ಸಹಿಸಲಾಗಲ್ಲ. ಕಳೆದ ಚುನಾವಣೆಗಳು ದೇಶದ್ರೋಹಿಗಳು ಯಾರೆಂಬುದನ್ನು ಸಾಬೀತು ಮಾಡಿವೆ. ಹೀಗಿದ್ದಾಗ ಅಂತಹ ದೊಡ್ಡ ನಾಯಕನನ್ನು ದ್ರೋಹಿ (Traitor) ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಕಾಮ್ರಾ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯೂ ಸಂವಿಧಾನ ಓದಿಲ್ಲ:
ಕುನಾಲ್ ಕಾಮ್ರಾ ಅವರು ರಾಹುಲ್ ಗಾಂಧಿ (Rahul Gandhi) ತೋರಿಸಿದ ಅದೇ ಕೆಂಪು ಸಂವಿಧಾನದ ಪುಸ್ತಕವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಸಂವಿಧಾನ ಓದಿಲ್ಲ. ಸಂವಿಧಾನವು ನಮಗೆ ಮಾತನಾಡುವ ಸ್ವಾತಂತ್ರ್ಯ ನೀಡಿದೆ, ಆದರೆ ಅದಕ್ಕೆ ಮಿತಿಗಳಿವೆ. ಈ ದೇಶದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡಲು ಸ್ವಾತಂತ್ರ್ಯವಿದೆ, ಹಕ್ಕಿದೆ. ಹಾಗಂತ ಓರ್ವ ಉಪಮುಖ್ಯಮಂತ್ರಿಗಳ ಮಾನಹಾನಿ ಮಾಡುವುದನ್ನು ಸಹಿಸಲ್ಲ. 2024ರ ಚುನಾವಣೆಯಲ್ಲೇ ಮಹಾರಾಷ್ಟ್ರದ ಜನ ʻದೇಶದ್ರೋಹಿʼ ಯಾರೆಂದು ನಿರ್ಧರಿಸಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಜನ ನಮಗೆ ಮತ ನೀಡಿ ಬೆಂಬಲಿಸಿದ್ದಾರೆ, ದೇಶದ್ರೋಹಿಗಳನ್ನು ಮನೆಗೆ ಕಳುಹಿಸಿದ್ದಾರೆ. ಬಾಳಾಸಾಹೇಬ್ ಠಾಕ್ರೆಯವರ ಜನಾದೇಶ ಮತ್ತು ಸಿದ್ಧಾಂತವನ್ನು ಅವಮಾನಿಸಿದವರಿಗೆ ಜನರು ತಮ್ಮ ಸ್ಥಾನವನ್ನು ತೋರಿಸಿದ್ದಾರೆ. ಹಾಸ್ಯವನ್ನು ಸೃಷ್ಟಿಸಬಹುದು, ಆದರೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಫಡ್ನವಿಸ್ ಆಕ್ರೋಶ ಹೊರಹಾಕಿದ್ದಾರೆ.
ಕುನಾಲ್ ಕಾಮ್ರಾ ಹೇಳಿದ್ದೇನು?
ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ: ಮಹಾರಾಷ್ಟ್ರದ ಡಿಸಿಎಂ ಏಕನಾಥ್ ಶಿಂಧೆ (Eknath Shinde) ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ (Stand up comedian Kunal Kamra) ವಿರುದ್ಧ ಶಿವಸೇನಾ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
#WATCH | Mumbai: Shiv Sena (Eknath Shinde faction) MLA Murji Patel lodged an FIR at MIDC police station against comedian Kunal Kamra for his remarks on Maharashtra DCM Eknath Shinde.
Murji Patel says, “We have filed an FIR against Kunal Kamra for his comments against our leader… pic.twitter.com/qLXb9bWkUU
ಹೌದು. ಮುಂಬೈನಲ್ಲಿ (Mumbai) ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಮೆಡಿಯನ್ ಕಾಮ್ರಾ ಏಕನಾಥ್ ಶಿಂಧೆ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಕಮ್ರಾ ಸ್ವತಃ ಹಂಚಿಕೊಂಡ ಕಾರ್ಯಕ್ರಮದ ಕ್ಲಿಪ್‌ನಲ್ಲಿ ಅವರು ʻಥಾಣೆಯ ನಾಯಕʼ ಎಂದು ಉಲ್ಲೇಖಿಸಿದ್ದರು. ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಶಿಂಧೆ ಅವರನ್ನು ಟೀಕಿಸಿದರಲ್ಲದೇ ಏಕನಾಥ್ ಶಿಂಧೆ ಅವರನ್ನ ʻದೇಶದ್ರೋಹಿʼ ಎಂದೂ ಸಹ ಕರೆದಿದ್ದಾರೆ ಎನ್ನಲಾಗಿದೆ.
ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ ಈ ಬಗ್ಗೆ ಕಾಮಿಡಿಯನ್‌ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಾರ್ಯಕರ್ತರು ಶಿವಸೇನಾ (ಶಿಂಧೆ ಬಣ) ಕಾರ್ಯಕರ್ತರು (Shiv Sena Worker) ಕುನಾಲ್ ಕಮ್ರಾಗೆ ಬೆದರಿಕೆ ಹಾಕಿ, ಕಾಮ್ರಾ ಪ್ರದರ್ಶನ ನೀಡಿದ ಖಾರ್‌ನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ಗೆ ಹಾನಿ ಮಾಡಿದ್ದರು. ಈ ಬೆನ್ನಲ್ಲೇ ಶಾಸಕ ಮುರ್ಜಿ ಪಟೇಲ್ ಅವರು ಕಾಮ್ರಾ ವಿರುದ್ಧ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಭಾರೀ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.
ಕುನಾಲ್ ಕಾಮ್ರಾ ಹೇಳಿದ್ದೇನು?
ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಮ್ರಾಗೆ ಉದ್ಧವ್ ಠಾಕ್ರೆ ಬಣ ಬೆಂಬಲ
ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಅವರು ಕಾಮ್ರಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ನಲ್ಲಿ ʻಕುನಾಲ್ ಕಿ ಕಮಾಲ್, ಜೈ ಮಹಾರಾಷ್ಟ್ರʼ ಎಂದು ಬರೆದಿದ್ದಾರೆ. ಮತ್ತೊಬ್ಬ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಕೂಡ ಕಾಮ್ರಾಗೆ ಬೆಂಬಲ ನೀಡಿದ್ದು, ʻಪ್ರಿಯ ಕುನಾಲ್, ಧೈರ್ಯವಾಗಿರು. ನೀವು ಬಹಿರಂಗಪಡಿಸಿದ ವ್ಯಕ್ತಿ ಮತ್ತು ತಂಡ ನಿಮ್ಮನ್ನು ಬೆನ್ನಟ್ಟುತ್ತಾರೆ. ನಿಮ್ಮ ಮನಸ್ಸಿನ ಮಾತನ್ನು ಹೇಳುವ ಹಕ್ಕನ್ನು ನಾನು ಸಾಯುವವರೆಗೂ ಸಮರ್ಥಿಸಿಕೊಳ್ಳುತ್ತೇನೆʼ ಎಂದು ಎಂದಿದ್ದಾರೆ.
ಮುಂಬೈ: ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ (PM Modi) ಅವರ ಬಳಿ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಮುಂಬೈಗೆ ಹಿಂದಿರುಗಿದ ಬೆನ್ನಲ್ಲೇ ಠಾಕ್ರೆ ನಿರ್ಧಾರ ಬದಲಿಸಿದರು ಎಂದು ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಆರೋಪಿಸಿದ್ದಾರೆ.
ಶಿವಸೇನೆ (ಉದ್ಧವ್ ಬಣ) ನಾಯಕ ಅನಿಲ್ ಪರಬ್ ಕೂಡ ಇದೇ ರೀತಿಯ ಹಿಂಬಾಗಿಲಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಿಂಧೆ ಆರೋಪಿಸಿದ್ದಾರೆ. ಅನಿಲ್ ಪರಬ್, ನಿಮಗೆ ನೋಟಿಸ್ ಬಂದಾಗ ನೀವು (ಬಿಜೆಪಿ ನಾಯಕರನ್ನು ಭೇಟಿ ಮಾಡಲು) ಹೋಗಿದ್ದೀರಿ. ಪ್ರಕರಣದಿಂದ ಪಾರಾಗಲು ನೀವು ಕೇಳಿದ್ದೀರಿ. ನಿಮಗೆ ಪರಿಹಾರ ಸಿಕ್ಕ ನಂತರ, ನೀವು ಪಕ್ಷ ಬದಲಾಯಿಸಿದ್ದೀರಿ. ಇದು ನನಗೆ ಚೆನ್ನಾಗಿ ತಿಳಿದಿದೆ ಎಂದು ಡಿಸಿಎಂ ಕಾಲೆಳೆದಿದ್ದಾರೆ.
ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ನಾವು ಗೌಪ್ಯವಾಗಿ ಏನೂ ಮಾಡಲಿಲ್ಲ. ಬಿಲ್ಲು-ಬಾಣದ ಸಂಕೇತವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ಈ ನಿಲುವು ತೆಗೆದುಕೊಂಡೆವು. ನೀವು (ಠಾಕ್ರೆ) ಔರಂಗಜೇಬ್ ಅವರ ಸಿದ್ಧಾಂತವನ್ನು ಸ್ವೀಕರಿಸಿದಾಗ, ನಾವು ನಿಮ್ಮ ಬಂಡಿಯನ್ನು ಉರುಳಿಸಿದೆವು ಎಂದು ಶಿಂಧೆ ಸದನದಲ್ಲಿ ಹೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರ (Maharashtra) ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಗೆ (Eknath Shinde) ಬಾಂಬ್ ಬೆದರಿಕೆ (Bomb threat) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಕಾರಿಗೆ ಬಾಂಬ್ ಹಾಕುವುದಾಗಿ ಗೋರೆಗಾಂವ್ ಮತ್ತು ಜೆ.ಜೆ ಮಾರ್ಗ್ ಪೊಲೀಸ್ ಠಾಣೆಗಳಿಗೆ ಇ-ಮೇಲ್ ಬೆದರಿಕೆ ಸಂದೇಶಗಳು ಬಂದಿದ್ದವು. ಮರಾಠಿ ಭಾಷೆಯಲ್ಲಿದ್ದ ಇ-ಮೇಲ್‌ಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಎರಡೂ ಪೊಲೀಸ್ ಠಾಣೆಗಳಿಗೆ ಆರೋಪಿಗಳು ಕಳುಹಿಸಿದ್ದರು. ಇ-ಮೇಲ್ ಐಪಿ ಅಡ್ರಸ್‌ಗಳನ್ನು ಟ್ರ್ಯಾಕ್ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಫೋನ್ 16ಇ ಬಿಡುಗಡೆ | ಬೆಲೆ ಎಷ್ಟು? ಬೇರೆ ದೇಶದಲ್ಲಿ ಎಷ್ಟು? ಭಾರತದಲ್ಲಿ ದುಬಾರಿ ಯಾಕೆ?
ಶಿಂಧೆ ಅವರಿಗೆ ಬಂದಿರುವ ಬೆದರಿಕೆಯು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಜನರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ್ ಟೀಕಿಸಿದ್ದಾರೆ. ಇದನ್ನೂ ಓದಿ: ಹೃದಯ ಕುಂಡದಲ್ಲಿ ಹೂಗಳ ಜೋಡಿಸುವ ಅವಳ ಮಾತುಗಳು ನಂಗಿಷ್ಟ!
ಮುಂಬೈ: ಮಹಾರಾಷ್ಟ್ರದ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಅವರ ಕಾರನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ (Mumbai Police) ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎಂದು ವರದಿಯಾಗಿದೆ.
ಗೋರೆಗಾಂವ್, ಜೆ.ಜೆ ಮಾರ್ಗ್ ಪೊಲೀಸ್ ಠಾಣೆ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯದ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶಗಳು ಬಂದಿವೆ. ಈ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಇಮೇಲ್ ವಿಳಾಸ ಪತ್ತೆ ಹೆಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್ – ರಾಯಭಾರ ಕಚೇರಿ ಮಾಹಿತಿ
ಶಿಂಧೆ ಅವರ ಕಾರನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ (Bomb Threat) ಹಾಕಿದ್ದಾನೆ. ಈ ಹಿನ್ನೆಲೆ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಅಲ್ಲದೇ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ 2 ವಾರಗಳ ಬಳಿಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಸಚಿವ ಸಂಪುಟ ಸದಸ್ಯರಿಗೆ ಶನಿವಾರ ಖಾತೆ ಹಂಚಿಕೆ ಮಾಡಿದ್ದಾರೆ.
ಗೃಹ ಇಲಾಖೆ, ಇಂಧನ ಇಲಾಖೆ ಹಾಗೂ ಸಾಮಾನ್ಯ ಆಡಳಿತ ಖಾತೆ ಸೇರಿದಂತೆ ಅನೇಕ ಪ್ರಬಲ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಇಲಾಖೆಗಳ ಉಸ್ತುವಾರಿ ವಹಿಸಿದ್ದರೆ, ಮತ್ತೋರ್ವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರಿಗೆ ಹಣಕಾಸು, ಅಬಕಾರಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: Punjab | ಮೊಹಾಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಮಹಿಳೆ ಸಾವು – ಸಿಎಂ ಭಗವಂತ್ ಮಾನ್ ಕಂಬನಿ
ಉಳಿದಂತೆ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ. ಪಂಕಜಾ ಮುಂಡೆ ಅವರಿಗೆ ಪರಿಸರ, ಮಾಣಿಕ್ರಾವ್ ಕೊಕಾಟೆ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ. ಧನಂಜಯ್ ಮುಂಡೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು. ಅಶೋಕ್ ಅವರಿಗೆ ಬುಡಕಟ್ಟು ಅಭಿವೃದ್ಧಿ, ಆಶಿಶ್ ಶೆಲಾರ್ ಅವರಿಗೆ ಐಟಿ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ನೀಡಲಾಗಿದೆ. ಇದನ್ನೂ ಓದಿ: Bengaluru| ಓವರ್‌ಟೇಕ್ ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಕಾರು ಡಿಕ್ಕಿ – ಮೂವರು ಗಂಭೀರ
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಡ ಭರ್ಜರಿ ಗೆಲುವು ಸಾಧಿಸಿತು. ಆ ನಂತರ ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಏಕನಾಥ್ ಶಿಂಧೆ, ಅಜಿತ್ ಪವಾರ್ ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆಗಳನ್ನ ಹಂಚಿಕೆ ಮಾಡಲಾಗಿದ್ದು, ಅದರ ಕಂಪ್ಲೀಟ್ ಲಿಸ್ಟ್ ಈ ಕೆಳಕಂಡಂತಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು
ಬಿಜೆಪಿ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳು
ಚಂದ್ರಶೇಖರ ಬಾವನಕುಳೆ – ಕಂದಾಯ
ರಾಧಾಕೃಷ್ಣ ವಿಖೆ ಪಾಟೀಲ್ – ಜಲ ಸಂಪನ್ಮೂಲ, ಕೃಷ್ಣಾ ಮತ್ತು ಗೋದಾವರಿ ಕಣಿವೆ ಅಭಿವೃದ್ಧಿ ನಿಗಮ
ಚಂದ್ರಕಾಂತ್ ಪಾಟೀಲ್ – ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಸಂಸದೀಯ ವ್ಯವಹಾರ
ಗಿರೀಶ್ ಮಹಾಜನ್ – ಜಲ ಸಂಪನ್ಮೂಲ, ವಿದರ್ಭ, ತಾಪಿ, ಕೊಂಕಣ ಅಭಿವೃದ್ಧಿ ನಿಗಮ ಮತ್ತು ವಿಪತ್ತು ನಿರ್ವಹಣೆ
ಮುಂಬೈ: ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ (Maharashtra Cabinet Formation) ಖಾತೆ ಹಂಚಿಕೆ ಕುರಿತ ಸಸ್ಪೆನ್ಸ್‌ಗೆ ಡಿ.14ರಂದು ತೆರೆ ಬೀಳಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಡಿಸೆಂಬರ್ 14ರಂದು ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಫಡ್ನವಿಸ್ (Devendra Fadnavis )ಅವರು ಬುಧವಾರ ತಡರಾತ್ರಿ ದೆಹಲಿಗೆ ತೆರಳಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುಖ್ಯಸ್ಥ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಬಳಿಕ ಇದೊಂದು ಸೌಜನ್ಯದ ಭೇಟಿ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಏಕನಾಥ್ ಶಿಂಧೆ (Eknath Shinde) ಈ ಬಾರಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಮೂರು ಮಿತ್ರಪಕ್ಷಗಳ ಪೈಕಿ ಅತಿ ದೊಡ್ಡ ಪಕ್ಷವಾದ ಬಿಜೆಪಿ ಗೃಹ ಸಚಿವಾಲಯ ಖಾತೆಯಯನ್ನು ಉಳಿಸಿಕೊಳ್ಳಲಿದ್ದು, ಪಿಡಬ್ಲ್ಯುಡಿ (ಲೋಕೋಪಯೋಗಿ ಇಲಾಖೆ) ಮತ್ತು ಯುಡಿ (ನಗರಾಭಿವೃದ್ಧಿ) ಶಿಂಧೆ ಪಾಳೆಯಕ್ಕೆ ನೀಡುವ ಸಾಧ್ಯತೆಯಿದೆ. ಹಣಕಾಸು ಖಾತೆ ಅಜಿತ್ ಪವಾರ್ ಪಕ್ಷದ ಪಾಲಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಹೊಸ ಸೂತ್ರಕ್ಕೆ ಒಪ್ಪಿಗೆ:
ಮೂಲಗಳ ಪ್ರಕಾರ, ಮಹಾಯುತಿಯ ಮೂವರು ನಾಯಕರಾದ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಖಾತೆ ಹಂಚಿಕೆಯ ಹೊಸ ಸೂತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. ಅದರಂತೆ ಬಿಜೆಪಿ 20 ಇಲಾಖೆಗಳನ್ನು ಹೊಂದಿರುತ್ತದೆ, ಶಿವಸೇನೆ ಮತ್ತು ಎನ್‌ಸಿಪಿ ತಲಾ 10 ಖಾತೆಗಳನ್ನು ಹೊಂದಿರಲಿವೆ. ಇತ್ತ ಬಿಜೆಪಿ ಮತ್ತು ಎನ್‌ಸಿಪಿ ಹಾಲಿ ಸಚಿವರಿಗೆ ಸಚಿವ ಸ್ಥಾನ ನೀಡುವ ಪ್ಲ್ಯಾನ್ ಮಾಡಿದ್ದರೆ, ಶಿಂಧೆ ಬಣದ ಶಿವ ಸೇನೆ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ನಡೆದ ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆಸ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಬಿಜೆಪಿ 132 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿತು. ಇದೇ ಡಿಸೆಂಬರ್ 5 ರಂದು ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.