Tag: Ekam

  • ‘ಏಕಂ’ ವೆಬ್ ಸಿರೀಸ್ ರಿಲೀಸ್‌ ಬಗ್ಗೆ ಮಾಹಿತಿ ಹಂಚಿಕೊಂಡ ಸಿಂಪಲ್‌ ಸ್ಟಾರ್

    ‘ಏಕಂ’ ವೆಬ್ ಸಿರೀಸ್ ರಿಲೀಸ್‌ ಬಗ್ಗೆ ಮಾಹಿತಿ ಹಂಚಿಕೊಂಡ ಸಿಂಪಲ್‌ ಸ್ಟಾರ್

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ತಮ್ಮದೇ ನಿರ್ಮಾಣ ಸಂಸ್ಥೆಯ ‘ಏಕಂ’ (Ekam) ವೆಬ್ ಸಿರೀಸ್ ರಿಲೀಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಆ್ಯನಿಮೇಷನ್ ಪಾತ್ರದ ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    2020 ಜನವರಿ. ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ ಇರಲಿ. ಪರಂವಃ ಹಾಗು ಜರ್ನಿಮ್ಯಾನ್ ಫಿಲಂಸ್ ಒಟ್ಟಿಗೆ ‘ಏಕಂ’ ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿತ್ತು. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರ ಬರಲು ಇದೆ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೋವಿಡ್ ವಕ್ಕರಿಸಿತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು ಎಂದು ರಕ್ಷಿತ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸದ್ಯಕ್ಕಿನ್ನು ಆರೋಪಿಯಷ್ಟೇ, ಅಪರಾಧಿಯಾಗಿಲ್ಲ- ಅನುಷಾ ರೈ ರಿಯಾಕ್ಷನ್

    ಅಕ್ಟೋಬರ್ 2021. ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು ‘ಏಕಂ’ ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಎಲ್ಲೆಡೆ ನಿರಾಸೆ. ಅದೇ ನೆಪ. ಅದೇ ಸಬೂಬು ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ, ಹಾಗು ಹಕ್ಕು. ಪ್ರೇಕ್ಷಕರಿಗಿರಬೇಕು ಎಂದು ಭಾವಿಸುತ್ತೇನೆ ಎಂದಿದ್ದಾರೆ.

     

    View this post on Instagram

     

    A post shared by Rakshit Shetty (@rakshitshetty)

    ಹಾಗಾಗಿ, ‘ಏಕಂ’ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು. ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ. ನಂಬಿದ್ದೇನೆ. ‘ಏಕಂ’ ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನ ಸ್ವೀಕರಿಸುತ್ತೀರಿ ಎಂದು ಆಶಿಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

    ಅಂದಹಾಗೆ, ಜುಲೈ 13ರಂದು ‘ಏಕಂ’ ವೆಬ್ ಸಿರೀಸ್ ಆಗಲಿದೆ. ಇದರಲ್ಲಿ ರಾಜ್ ಬಿ ಶೆಟ್ಟಿ, ಶೈನ್ ಶೆಟ್ಟಿ, ಪ್ರಕಾಶ್ ರಾಜ್, ಕಾಂತಾರ ನಟಿ ಮಾನಸ ಸುದೀರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಹುಟ್ಟುಹಬ್ಬದಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

    ಹುಟ್ಟುಹಬ್ಬದಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

    ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಜೂನ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಈ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 41ನೇ ವರ್ಷಕ್ಕೆ ಕಾಲಿಟ್ಟಿರುವ ‘ಸಿಂಪಲ್ ಸ್ಟಾರ್’ ಇದೀಗ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ ನಟನೆಯ ‌’ಕೋಟಿ’ ಟ್ರೈಲರ್‌ ಔಟ್

    ‘ಏಕಂ’ ಎಂಬ ವೆಬ್ ಸಿರೀಸ್ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ, ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆ ಸಣ್ಣ ಒಂದು ಭಾಗದಲ್ಲಿ ಜನರು ಮೆಟ್ಟಿಕೊಂಡೇ ಓಡಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಏಕಂ ಬಗ್ಗೆ ಅಪ್‌ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ನಟ ಬರೆದುಕೊಂಡಿದ್ದಾರೆ. ಜೂನ್ 17ರಂದು ಅಧಿಕೃತ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

     

    View this post on Instagram

     

    A post shared by Rakshit Shetty (@rakshitshetty)

    ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಒಟಿಟಿ ಫ್ಲಾರ್ಟ್ ಫಾರಂಗೆ 8 ಎಪಿಸೋಡ್‌ಗಳ ‘ಏಕಂ’ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

    ‘ರಿಚರ್ಡ್ ಆ್ಯಂಟನಿ’ ಸಿನಿಮಾ ಸೇರಿದಂತೆ ರಕ್ಷಿತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ, ನಿರ್ದೇಶನ ಮತ್ತು ನಿರ್ಮಾಣ ಅಂತ ನಟ ತೊಡಗಿಸಿಕೊಂಡಿದ್ದಾರೆ.

  • ಮುಹೂರ್ತ ಒಂದು ಸಿನಿಮಾ ಎರಡು: ಹೊಸ ತಂಡದ ಪ್ರಯತ್ನ

    ಮುಹೂರ್ತ ಒಂದು ಸಿನಿಮಾ ಎರಡು: ಹೊಸ ತಂಡದ ಪ್ರಯತ್ನ

    ಷಾಢ ಮಾಸದಲ್ಲಿ ಹೊಸಬರ ತಂಡವೊಂದು ಒಟ್ಟಿಗೆ ಎರಡು ಸಿನಿಮಾಗಳ ಮುಹೂರ್ತ ಆಚರಿಸಿಕೊಂಡಿದೆ. ಮೊದಲನೆಯದಾಗಿ ’ಬಾಲಿ’ ಚಿತ್ರದ ಕ್ರೀಡೆ ಕುರಿತ ಕಥೆಯಲ್ಲಿ ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಹಾದಿಯಲ್ಲಿ ಸಫಲ ಆಗುತ್ತಾಳಾ ಎನ್ನುವುದು ಒಂದು ಎಳೆಯ ಸಾರಾಂಶವಾಗಿದೆ. ಜೊತೆಗೆ ಶಾಲೆಯ ಅಂಶಗಳು ಇರಲಿದೆ.

    ಕುಮಾರಿ ಹರಿಣಿ ಜಯರಾಜ್ ಮೂಲತಃ ಅಥ್ಲೇಟ್ ಆಗಿದ್ದು, ಅದಕ್ಕೆ ತಕ್ಕಂತೆ ಪಾತ್ರ ಸಿಕ್ಕಿರುವುದರಿಂದ ಸಹಜವಾಗಿ ಖುಷಿಯಾಗಿದೆ. ಕ್ರೀಡಾ ಮಾರ್ಗದರ್ಶಿಯಾಗಿ ಉತ್ತರಭಾರತದ ನೀರಜ್‌ಕುಮಾರ್, ತಾಯಿಯಾಗಿ ಮೀನಾಕಿರಣ್, ಸಂದೀಪ್‌ಮಲಾನಿ, ಪ್ರಶಾಂತ್ ಮುಂತಾದವರು ಅಭಿನಯಿಸುತ್ತಿದ್ದಾರೆ. ರಚನೆ,ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡುತ್ತಿರುವ ಗನಿದೇವ್‌ ಕಾರ್ಕಳ ಅವರು ಅಕ್ಷರ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಜಯಕುಮಾರ್‌ ಭಕ್ತವತ್ಸಲಂ-ಯೋಗಿತ ಬಾಲಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ಅಮೋಘ್‌ ಕೊಡಂಗಾಲ ಅವರದಾಗಿದೆ. ಕುಂದಾಪುರ, ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    ಎರಡನೆಯದಾಗಿ ’ಏಕಮ್’ ಚಿತ್ರವು ಬಹುಕಥಾ ಹೊಂದಿದೆ. ಅಕ್ಷರಾ ಪ್ರೊಡಕ್ಷನ್ ಮೂಲಕ ಗಣಿದೇವ್ ಕಾರ್ಕಳ ನಿರ್ಮಾಣ ಮಾಡುತ್ತಿದ್ದಾರೆ. ಧಾರಾವಾಹಿ ಮತ್ತು ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇರುವ ವಿದ್ಯತ್‌ ಶಿವ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಲಿವುಡ್‌ನ ಅಲೆಜಾಂಡ್ರೆ ಇನರುತು ನಿರ್ದೇಶನದ ’ಬೆಬಲ್’ ಚಿತ್ರದ ಪ್ರೇರಣೆಯಿಂದ ನಿರ್ದೇಶಕರು ಕಥೆಯನ್ನು ರಚಿಸಿದ್ದಾರೆ.

    ಐದು ಜನರ ಜೀವನದ ಕಥೆಯಲ್ಲಿ ಒಬ್ಬ ವ್ಯಕ್ತಿಯಿಂದ ಆಗುವಂತ ಅನಾಹುತಗಳು ಇನ್ನೊಬ್ಬ ವ್ಯಕ್ತಿಗೆ ಬರುವಂತ ಘರ್ಷಣೆಗಳು ಒಂದಕ್ಕೊಂದು ಪ್ರಾರಂಭದಿಂದಲೇ ಲಿಂಕ್ ಆಗುತ್ತಾ ಹೋಗುತ್ತದೆ. ಜೊತೆಗೆ ಸುಂದರ ಪ್ರೀತಿ ಕಥೆಯಲ್ಲಿ ತೊಂದರೆಗಳು ಬರುತ್ತವೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ. ಇಂತಹುದೇ ಜಾನರ್ ಅಂಥ ಹೇಳಲಿಕ್ಕ ಆಗುವುದಿಲ್ಲ. ಪ್ರೀತಿ, ರಕ್ತಪಾತ, ಫ್ಯಾಂಟಸಿ ಹೀಗೆ ತರಹೇವಾರಿ ಕಥೆಗಳು ಇರಲಿದೆ. ಸಂಗೀತ ಸಂಯೋಜಿಸುತ್ತಿರುವ ಅಮೋಘ್‌ ಕೊಡಂಗಾಲ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಶಹನ, ಹರೀಶ್‌ರಾಮ್, ಮೀನಾಕಿರಣ್, ಹರೀಶ್‌ರಾಮ್, ಐಶ್ವರ್ಯ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಅಲನ್‌ಭರತ್, ಸಂಕಲನ ಸ್ಟೀಫೆನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]