Tag: Eiffel tower

  • Eiffel Tower: ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ

    Eiffel Tower: ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ

    ಪ್ಯಾರಿಸ್: ವಿಶ್ವದಲ್ಲೇ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳ ಪೈಕಿ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ (Eiffel Tower) ಕೂಡ ಒಂದು. ವಿಶ್ವವಿಖ್ಯಾತ ಐಫೆಲ್‌ ಟವರ್‌ಗೂ ಕಂಟಕ ಎದುರಾಗಿದೆ.

    ಹೌದು, ಪ್ಯಾರಿಸ್‌ನ (Paris) ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್‌ ಪೊಲೀಸರು ತಿಳಿಸಿದ್ದಾರೆ. ಬಾಂಬ್‌ ಬೆದರಿಕೆ ಕರೆ ಬರುತ್ತಿದ್ದಂತೆ ಐಫೆಲ್‌ ಟವರ್‌ ವೀಕ್ಷಣೆಗೆ ಬಂದಿದ್ದ ಪ್ರವಾಸಿರನ್ನು ಸ್ಥಳಾಂತರ ಮಾಡಲಾಗಿದೆ. ಐಫೆಲ್‌ ಟವರ್‌ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಐಫೆಲ್ ಟವರ್‌ನ ರೋಚಕ ಇತಿಹಾಸ

    ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್‌ ಟವರ್‌ ವೀಕ್ಷಣೆ ಮಾಡಿದ್ದರು. ಈಗ ಅಲ್ಲಿ ಭದ್ರತಾ ಎಚ್ಚರಿಕೆ ವಹಿಸಲಾಗಿದೆ. ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

    ಫ್ರಾನ್ಸ್‌ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಐಫೆಲ್ ಟವರ್‌ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಗೋಪುರವನ್ನು ಮಾರ್ಚ್ 15, 1889 ರಂದು ಸಂಪೂರ್ಣವಾಗಿ ನಿರ್ಮಿಸಲಾಗಿದ್ದರೂ, ಇದನ್ನು ಮಾರ್ಚ್ 31 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನೂ ಓದಿ: ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಫೆಲ್ ಟವರ್‌ನ  ರೋಚಕ ಇತಿಹಾಸ

    ಐಫೆಲ್ ಟವರ್‌ನ ರೋಚಕ ಇತಿಹಾಸ

    ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಸ್ಮಾರಕಗಳಲ್ಲಿ ಐಫೆಲ್ ಟವರ್ (Eiffel Tower) ಕೂಡ ಒಂದು. ಫ್ರಾನ್ಸ್ (France) ದೇಶದ ಪ್ಯಾರಿಸ್‌ನಲ್ಲಿರುವ (Paris) ಈ ಸುಂದರವಾದ ಗೋಪುರಕ್ಕೆ ಇಂಜಿನಿಯರ್ ಗುಸ್ಟಾವ್ ಐಫೆಲ್ ಅವರ ಹೆಸರನ್ನು ಇಡಲಾಗಿದೆ. ಈ ಗೋಪುರವು 330 ಮೀಟರ್ ಎತ್ತರ ಹಾಗೂ 81 ಅಂತಸ್ತುಗಳನ್ನು ಹೊಂದಿದೆ.

    ಫ್ರಾನ್ಸ್ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಗೋಪುರವು 18,000 ಕ್ಕೂ ಹೆಚ್ಚು ಲೋಹದ ಭಾಗಗಳನ್ನು ಒಳಗೊಂಡಿದೆ, ಇವುಗಳನ್ನು 2.5 ಮಿಲಿಯನ್ ರಿವೆಟ್‌ಗಳು ಸೇರಿಸುತ್ತವೆ. 20 ವರ್ಷಗಳ ನಂತರ ಅದನ್ನು ಕಿತ್ತುಹಾಕುವ ಯೋಜನೆ ಇತ್ತು. ಆದರೆ ರೇಡಿಯೊ ಆಂಟೆನಾ ಮತ್ತು ವೈರ್‌ಲೆಸ್ ಟೆಲಿಗ್ರಾಫ್ ಟ್ರಾನ್ಸ್‌ಮೀಟರ್‌ ಅನ್ನು ಗೋಪುರದಲ್ಲಿ ಇರಿಸಿದ್ದರ ಪರಿಣಾಮ ಅದು ಉಳಿದುಕೊಂಡಿತು. ಗೋಪುರವು 1889 ರಿಂದ 1930 ರವರೆಗೆ, ಅಂದರೆ 40 ವರ್ಷಗಳವರೆಗೆ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ರಚನೆಯ ದಾಖಲೆಯನ್ನು ಹೊಂದಿತ್ತು.

    ಚಂಡಮಾರುತದ ಸಮಯದಲ್ಲಿ ಈ ಗೋಪುರ ತೂಗಾಡುತ್ತದೆ. ಅಲ್ಲದೇ ಸೂರ್ಯನ ಶಾಖವು ಕಬ್ಬಿಣವನ್ನು ವಿಸ್ತರಿಸಲು ಕಾರಣವಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಗೋಪುರವು ಕೆಲವು ಸೆಂಟಿಮೀಟರ್‌ಗಳಷ್ಟು ಬೆಳೆಯುತ್ತದೆ. ಅಲ್ಲದೇ ಸರಾಸರಿ ಆರು ಇಂಚುಗಳಷ್ಟು ವಾಲುತ್ತದೆ. ಏಕೆಂದರೆ ನೇರ ಬೆಳಕನ್ನು ಎದುರಿಸುತ್ತಿರುವ ಒಂದು ಬದಿಯು ಇತರ ಮೂರು ಬದಿಗಳಿಗಿಂತ ವೇಗವಾಗಿ ಬಿಸಿಯಾಗುವುದು ಇದಕ್ಕೆ ಕಾರಣವಾಗಿದೆ.

    ಇದಕ್ಕಾಗಿ 19 ನೇ ಶತಮಾನದಲ್ಲಿ ಕೆಲಸ ಮಾಡಿದ ಫ್ರೆಂಚ್ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳನ್ನು ಹಲವಾರು ಪ್ಯಾರಿಸ್ ಬೀದಿಗಳಿಗೆ ಇಡಲಾಗಿದೆ. ಅಲ್ಲದೇ ಅವುಗಳಲ್ಲಿ 72 ಹೆಸರನ್ನು ಐಫೆಲ್ ಟವರ್‌ನಲ್ಲಿ ಕೆತ್ತಲಾಗಿದೆ.

    ಪ್ರತಿ ಏಳು ವರ್ಷಗಳಿಗೊಮ್ಮೆ ಸುಮಾರು 60 ಟನ್ ಬಣ್ಣವನ್ನು ಗೋಪುರಕ್ಕೆ ಬಳಿಯಲಾಗುತ್ತದೆ. ಇದು ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಸಹಾಯ ಮಾಡುತ್ತದೆ. 20,000 ಬಲ್ಬ್‌ಗಳನ್ನು ಒಳಗೊಂಡಿರುವ ಈ ಗೋಪುರ ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಕಾಣುತ್ತದೆ.

    ಒಟ್ಟು 1,665 ಮೆಟ್ಟಿಲುಗಳಿದ್ದು ಅದು ಐಫೆಲ್ ಟವರ್‌ನ ಮೇಲ್ಭಾಗಕ್ಕೆ ಹೋಗುತ್ತದೆ. ಪ್ರತಿ ವರ್ಷ ಇದರ ಎಲಿವೇಟರ್ 64,001 ಮೈಲುಗಳನ್ನು (1,03,000 ಕಿಲೋಮೀಟರ್) ಕ್ರಮಿಸುತ್ತದೆ. ಐಫೆಲ್ ಟವರ್ ಅತಿ ಹೆಚ್ಚು ಭೇಟಿ ನೀಡಿದ ಸ್ಮಾರಕವಾಗಿದ್ದು, ಪ್ರತಿ ವರ್ಷ ಸುಮಾರು 70 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.

    ಐಫೆಲ್ ಟವರ್‌ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಗೋಪುರವನ್ನು ಮಾರ್ಚ್ 15, 1889 ರಂದು ಸಂಪೂರ್ಣವಾಗಿ ನಿರ್ಮಿಸಲಾಗಿದ್ದರೂ, ಇದನ್ನು ಮಾರ್ಚ್ 31 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.

    ಮೊದಲು 28 ಜನವರಿ 1887 ರಂದು ಇದರ ಕೆಲಸ ಪ್ರಾರಂಭವಾಯಿತು. ಮಾರ್ಚ್ 31, 1889 ರಂದು ಗೋಪುರವನ್ನು ಎರಡು ವರ್ಷ, ಎರಡು ತಿಂಗಳು ಮತ್ತು ಐದು ದಿನಗಳಲ್ಲಿ ಪೂರ್ಣಗೊಳಿಸಲಾಯಿತು.

    ಆಗಸ್ಟ್ 1944 ರಲ್ಲಿ ಅಡಾಲ್ಫ್ ಹಿಟ್ಲರ್ ನಗರವನ್ನು ನೆಲಸಮಗೊಳಿಸಲು ತನ್ನ ಸೇನೆಗೆ ಆದೇಶಿಸಿದ್ದ. ಟವರ್‌ನ್ನು ಸ್ಫೋಟಿಸಲು ಯೋಜನೆಯನ್ನೂ ರೂಪಿಸಲಾಗಿತ್ತು. ಆದರೆ ಅದೃಷ್ಟವಶಾತ್ ಆ ವೇಳೆಗಾಗಲೇ ಮಿತ್ರಪಕ್ಷದ ಪಡೆಗಳು ನಡೆಸಿದ ದಾಳಿಯಿಂದ ನಾಜಿಗಳನ್ನು ಹಿಮ್ಮೆಟ್ಟಿಸಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ಪ್ಯಾರಿಸ್: ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣವನ್ನು ವಿದ್ಯುತ್‌ ದೀಪಾಲಂಕಾರದಿಂದ ಬೆಳಗಿಸುವ ಮೂಲಕ ರಷ್ಯಾ ಯುದ್ಧವನ್ನು ಫ್ರಾನ್ಸ್‌ ವಿರೋಧಿಸಿದೆ.

    ಪ್ಯಾರಿಸ್‌ ಮೇಯರ್‌ ಆನ್ನೆ ಹಿಡಾಲ್ಗೊ ಅವರ ಕೋರಿಕೆಯ ಮೇರೆಗೆ ಐಫೆಲ್‌ ಟವರ್‌ ಶುಕ್ರವಾರ ಉಕ್ರೇನ್‌ನ ರಾಷ್ಟ್ರೀಯ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಬೆಳಗಿತು. ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್‌ ಜನರೊಂದಿಗೆ ಒಗ್ಗಟ್ಟನ್ನು ಸೂಚಿಸುವ ಸಂಕೇತ ಇದು ಎಂದು ಮೇಯರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ರಷ್ಯಾ ಸೇನಾ ಪಡೆ ಈಗಾಗಲೇ ಉಕ್ರೇನ್‌ ರಾಜಧಾನಿ ಕೀವ್‌ ಪ್ರವೇಶಿಸಿದ್ದು, ಗಗನಚುಂಬಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

    ಉಕ್ರೇನ್‌ ಮಿಲಿಟರಿ ಮೇಲೆ ನಿಯಂತ್ರಣ ಸಾಧಿಸಲು ಈ ಯುದ್ಧ ನಡೆಸಲಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ. ಆದರೆ ಪುಟಿನ್‌ ನಿರ್ಧಾರಕ್ಕೆ ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಉಕ್ರೇನ್‌ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಇಬ್ಬರೊಂದಿಗೂ ಮಾತುಕತೆ ನಡೆಸಿದ್ದಾರೆ.

  • 2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    – ಐಫೆಲ್ ಟವರ್‌ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭಿಸಿದೆ.

    ಐಫೆಲ್ ಟವರ್ ಗಿಂತ ಎತ್ತರವಾಗಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಗ್ರಾಮದ ಕತ್ರಾ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, 1.3 ಕಿ.ಮೀ ಉದ್ದವಿದೆ. ಈ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣದ 5-6 ಗಂಟೆ ಸಮಯವನ್ನು ಕಡಿಮೆ ಮಾಡಲಿದೆ.

    ಈ ಕುರಿತು ಮಾತನಾಡಿರುವ ಡೆಪ್ಯುಟಿ ಚೀಫ್ ಮುಖ್ಯ ಎಂಜಿನಿಯರ್, 2022ರ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಕಾರ್ಯ ಹಲವು ಸವಾಲುಗಳಿಂದ ಕೂಡಿದೆ. ಆದರೆ ಸೇತುವೆ ನಿರ್ಮಾಣ ಕಾರ್ಯ ವೈಷ್ಣೋ ದೇವಿ ಪುಣ್ಯ ಕ್ಷೇತ್ರಕ್ಕೆ ಪ್ರಸಿದ್ಧಿಯಾಗಿರುವ ಜಿಯಾಸಿ ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣವಾಗುವ ಕಾರಣ ಜನರು ತಮ್ಮ ಚಾಫರ್ ಮೂಲಕ ಇಲ್ಲಿಗೆ ಆಗಮಿಸಬಹುದು ಎಂದಿದ್ದಾರೆ.

    ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದು, 2004ರಲ್ಲಿ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಉಧಮಾಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿದೆ. ಈ ಮಾರ್ಗದಲ್ಲಿ ಉಧಮಾಪುರ-ಕಾತ್ರ (25 ಕಿಮೀ) ಸೆಕ್ಷನ್, ಬನಿಹಾಳ್-ಕ್ವಾಜಿಗುಂಡ್ (18 ಕಿಮೀ) ಸೆಕ್ಷನ್ ಹಾಗೂ ಕ್ವಾಜಿಗುಂಡ್-ಬಾರಾಮುಲ್ಲಾ (118 ಕಿಮೀ) ವಿಭಾಗವನ್ನು ಈಗಾಗಲೇ ನಿರ್ಮಿಸಲಾಗಿದೆ.

    ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ 266 ಕಿಮೀ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 120 ವರ್ಷಗಳ ಕಾಲಮಿತಿಯನ್ನು ಸೇತುವೆ ಹೊಂದಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ದಾವಣಗೆರೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯು ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ 5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ವಿವಿಧ ಹೂಗಳಿಂದ ರಚಿಸಿರುವ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಕೆಂಪು, ಬಿಳಿ ರೋಸ್ ಬಳಸಿ ಐಫೆಲ್ ಟವರ್ ರಚಿಸಲಾಗಿದೆ.

    ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯಿಂದ ಒಮ್ಮೆ ಮಾತ್ರ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಲ್ಲಿ ಎರಡನೇ ಬಾರಿಗೆ ಫಲಪುಪ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 30 ಅಡಿ ಎತ್ತರ, 23 ಅಡಿ ಅಗಲದಲ್ಲಿ ಕೆಂಪು, ಬಿಳಿ ಗುಲಾಬಿ ಹೂವುಗಳಿಂದ ಐಫೆಲ್ ಟವರ್ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ ಈ ಐಫೆಲ್ ಟವರ್ ತಲೆ ಎತ್ತಿದ್ದು ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಐಫೆಲ್ ಟವರ್ ಜೊತೆಗೆ ಆರು ಅಡಿ ಎತ್ತರ, ನಾಲ್ಕು ಅಡಿ ಅಗಲದ ಅಣಬೆ ಆಕಾರದ ಹೂವಿನ ಕಲಾಕೃತಿಯನ್ನು ಎರಡು ಸಾವಿರ ಗುಲಾಬಿ, ಸೇವಂತಿಗೆ ಬಳಸಿ ನಿರ್ಮಿಸಲಾಗಿದೆ. ಇದರ ಜೊತೆ ಫೋಟೋ ಫ್ರೇಮ್, ವಿದೇಶಿ ಹೂವುಗಳನು ಜನರನ್ನು ಆಕರ್ಷಿಸಿತು. ಅಲ್ಲದೆ ಹಣ್ಣಿನೊಳಗೆ ಮಾಡಿದ್ದ ಕಲಾಕೃತಿಗಳು ಮಕ್ಕಳ ಅಚ್ಚುಮೆಚ್ಚಿಗೆ ಕಾರಣವಾದವು. ಇದನ್ನು ನೋಡಿ ಜನರು ಫುಲ್ ಖುಷಿಯಾದರು. ಗ್ಲಾಸ್ ಹೌಸ್‍ನಲ್ಲಿ ಹೂ, ಹಣ್ಣಿನ ಅಲಂಕಾರಕ್ಕೆ ಬಂದ ಜನರು ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

  • ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಐಫೆಲ್ ಟವರ್‍ ಗಿಂತ ಎತ್ತರವಾದ ರೈಲ್ವೆ ಸೇತುವೆಯೊಂದು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗ್ತಿದ್ದು, 2019ರೊಳಗೆ ಸೇತುವೆ ನಿರ್ಮಾಣ ಪೂರ್ಣವಾಗಲಿದೆ. ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಆಗಲಿದೆ.

    ಈ 1.3 ಕಿ.ಮೀ ಉದ್ದದ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 1,110 ಕೋಟಿ. ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗ್ತಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.