Tag: eidmilad

  • ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ – 48 ಗಂಟೆಗಳ ಕಾಲ ಮದ್ಯದಂಗಡಿ ಬಂದ್

    ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ – 48 ಗಂಟೆಗಳ ಕಾಲ ಮದ್ಯದಂಗಡಿ ಬಂದ್

    ಮಂಗಳೂರು: ಈದ್ ಮಿಲಾದ್ (Eid Milad) ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿದ ಬಳಿಕ ಬಿ.ಸಿ.ರೋಡ್‌ನಲ್ಲಿ (BC Road) ಮತ್ತೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಮದ್ಯದಂಗಡಿ ಬಂದ್ ಮಾಡುವುದಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ (Mullai Muhilan) ಆದೇಶ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದ.ಕ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

    ಬಂಟ್ವಾಳ (Bantwal) ಪುರಸಭಾ ವ್ಯಾಪ್ತಿಯಲ್ಲಿ 48 ಗಂಟೆಗಳ ಕಾಲ ಮದ್ಯದಂಗಡಿ, ಶೇಂದಿ ಮಾರಾಟದ ಅಂಗಡಿಗಳ ಬಾಗಿಲು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಅಂಗಡಿಗಳ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರು ಬಿದ್ದಿದೆ. ಇದನ್ನೂ ಓದಿ: ಮಂಗಳವಾರ ಸಚಿವ ಸಂಪುಟ ಸಭೆ – ಇಂದೇ ಕಲಬುರಗಿ ತಲುಪಿದ ಸಿಎಂ

    ಬಜರಂಗದಳ ಹಾಗೂ ವಿಹೆಚ್‌ಪಿಯಿಂದ (VHP) ಬಿ.ಸಿ ರೋಡ್ ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್‌ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಪೊಲೀಸರು ಬಿಗಿ ಬಂದೋಬಸ್ತ್ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಮುಸ್ಲಿಂ ಯುವಕರ ಬೈಕ್ ರ‍್ಯಾಲಿಗೆ ಅನುಮತಿ ನೀಡಿದ್ದು, ಬೈಕ್ ರ‍್ಯಾಲಿ ವೇಳೆ ಮುಸ್ಲಿಂ ಯುವಕರು ಹಸಿರು ಬಾವುಟ ಹಾರಿಸಿರುವುದು ತ್ರೀವ ಆಕ್ರೋಶ ಉಂಟಾಗಿದೆ. ಮತ್ತೆ ಉದ್ವಿಗ್ನ ಪರಿಸ್ಥಿತಿ ತಲುಪಿದೆ. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್

    ಉದ್ವಿಗ್ನಗೊಂಡಿದ್ದು ಯಾಕೆ?
    ನಾಗಮಂಗಲ (Nagamangala) ಗಲಭೆ ಖಂಡಿಸಿ ಸೆ.12ರಂದು ಮಂಗಳೂರಿನಲ್ಲಿ (Mangaluru) ನಡೆದಿದ್ದ ಪ್ರತಿಭಟನಾ ಭಾಷಣದಲ್ಲಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್, ಸರ್ಕಾರ ಈದ್ ಮಿಲಾದ್ ಮೆರವಣಿಗೆ ತಡೆಯಬೇಕು. ಇಲ್ಲದಿದ್ದಲ್ಲಿ ಮತ್ತೆ ಇವರು ಗಲಭೆ ನಡೆಸ್ತಾರೆ ಎಂದಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶರೀಫ್ ಹಾಗೂ ಆತನ ಸಹೋದರ ಹಸೀನಾರ್ ತಾಕತ್ ಇದ್ದರೆ ಸೋಮವಾರ ಬಿಸಿ ರೋಡ್‌ನ ಈದ್ ಮಿಲಾದ್ ಮೆರವಣಿಗೆಗೆ ಬನ್ನಿ ಅಂತ ಶರಣ್ ಪಂಪ್ ವೆಲ್‌ಗೆ ಸವಾಲ್ ಹಾಕಿ ಆಡಿಯೋ ಹರಿಯ ಬಿಟ್ಟಿದ್ದರು. ಆಡಿಯೋ ಹರಿ ಬಿಟ್ಟಿದ್ದ ಇಬ್ಬರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಸವಾಲು ಸ್ವೀಕರಿಸಿದ ಬಜರಂಗದಳ-ವಿಎಚ್‌ಪಿ ಇವತ್ತು ಬಿ.ಸಿ.ರೋಡ್ ಚಲೋ ಕರೆ ನೀಡಿತ್ತು. ಇದನ್ನೂ ಓದಿ: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

  • ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತೆ- ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

    ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತೆ- ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

    ಹುಬ್ಬಳ್ಳಿ: ನಗರದ ಗಣೇಶ ಪೇಟೆ ನನಗೆ ಪಾಕಿಸ್ತಾನದಂತೆ ಕಾಣುತ್ತದೆ. ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದು ಮೌಲ್ವಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿ ಶನಿವಾರ ನಡೆದ ಈದ್ ಮಿಲಾದ್ ಹಬ್ಬದ ವೇಳೆ ಗಣೇಶ ಪೇಟೆಯ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಎನ್ನುವ ಮೌಲ್ವಿಯೇ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

    ಗಣೇಶ್ ಪೇಟೆ ನನಗೆ ಪಾಕಿಸ್ತಾನ ಹಾಗೇ ಕಾಣುತ್ತಿದೆ, ಪಾಕಿಸ್ತಾನಕ್ಕೆ ಹೋಗಿ ನೋಡುವ ಅವಶ್ಯಕತೆ ಇಲ್ಲ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ. ನಾವು ಒಗ್ಗಟ್ಟಿನಿಂದ ಹಾಗೂ ಎದೆ ಸೆಟೆದು ನಡೆದರೆ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ಹೇಳಿದ್ದಾರೆ.

    ಮೌಲ್ವಿಯ ಈ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಮೌಲ್ವಿ ಈ ರೀತಿ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲೇ ಉತ್ತರ ವಲಯ ಎಸಿಪಿ ದಾವೂದ್ ಖಾನ್ ಹಾಗೂ ಪೊಲೀಸರು ಇದ್ದರು. ಪೊಲೀಸರ ಎದುರು ವಿವಾದಾತ್ಮಕ ಹೇಳಿಕೆ ನೀಡಿದ್ದರು ಪೊಲೀಸರು ಸುಮ್ಮನೆ ಕುಳಿತುಕೊಂಡಿದ್ದಕ್ಕೆ ವ್ಯಾಪಕ ಟೀಕೆ ಬಂದಿದೆ.

    ವಿವಾದಾತ್ಮಕ ಹೇಳಿಕೆ ನೀಡಿದ್ರು ಸುಮ್ಮನೇ ಕುಳಿತ ಪೊಲೀಸರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇಂತ ದೇಶದ್ರೋಹ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.