Tag: Eidgah Ground

  • ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ

    ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ

    ಹುಬ್ಬಳ್ಳಿ: ಪ್ರತಿ ಬಾರಿಯೂ ಗಣೇಶೋತ್ಸವದ (Ganesh Chaturthi) ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ಈದ್ಗಾ ಗ್ರೌಂಡ್ (Eidgah Ground) ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು (Rani Chennamma Ground) ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದರು.

    ಈ ಬಾರಿಯ ಗಣೇಶೋತ್ಸವವು ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಈ ಬಗ್ಗೆ ಮಹಾನಗರ ಪಾಲಿಕೆಯು ಠರಾವು ಪಾಸ್ ಮಾಡಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಿರುವುದು ಹಿಂದೂಪರ ಸಂಘಟನೆಗಳ ಹಾಗೂ ಗಜಾನನ ಉತ್ಸವ ಸಮಿತಿಯವರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಗಣೇಶೋತ್ಸವವು ವಿಸರ್ಜನೆಯ ಮೂಲಕ ಸಂಪನ್ನಗೊಂಡಿದೆ. ವಿವಾದದಲ್ಲೇ ಅಂತ್ಯಗೊಳ್ಳುತ್ತಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶೋತ್ಸವ ಈ ಬಾರಿ ಅತ್ಯಂತ ಶಾಂತಿಪ್ರಿಯವಾಗಿ ನಡೆದಿದೆ.

    ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹಗೆ ಸಾಥ್ ನೀಡಿದರು.

  • ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್‌

    ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್‌

    ಬೆಂಗಳೂರು: ಈದ್ಗಾ ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಪಾಲಿಕೆಯ ಹೇಳಿಕೆ ಖಂಡಿಸಿ ಜುಲೈ 12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್ ಆಗಲಿದೆ.

    ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಬಂದ್‌ ಕರೆ ನೀಡಿದ್ದು ಶಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ರ್‍ಯಾಲಿ ನಡೆಯಲಿದೆ.


    ಚಾಮರಾಜಪೇಟೆ ಕ್ಷೇತ್ರದ ಜನ, ವಿವಿಧ ಸಂಘಟನೆಗಳ ಜೊತೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ವರ್ತಕರು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

    ಈದ್ಗಾ ಮೈದಾನ ಸರ್ಕಾರದ ಆಸ್ತಿ. ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ನಮಾಜ್‌ ಮಾಡಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಹೀಗಿದ್ದರೂ ಈದ್ಗಾ ಮೈದಾನ ವಕ್ಫ್‌ ಬೋರ್ಡ್‌ಗೆ ಸೇರಿದೆ ಎಂದು ಹೇಳಿ ಗೊಂದಲ ಮೂಡಿಸುತ್ತಿದೆ. ಶಾಸಕ ಜಮೀರ್‌ ಹೇಳಿದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಾಗರಿಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv

  • ಈದ್ಗಾ ಮೈದಾನ ವಕ್ಫ್‌ ಬೋರ್ಡ್‍ನ ಆಸ್ತಿ- ದಾಖಲೆ ಬಿಡುಗಡೆ ಮಾಡಿದ ಶಫಿ ಸಅದಿ

    ಈದ್ಗಾ ಮೈದಾನ ವಕ್ಫ್‌ ಬೋರ್ಡ್‍ನ ಆಸ್ತಿ- ದಾಖಲೆ ಬಿಡುಗಡೆ ಮಾಡಿದ ಶಫಿ ಸಅದಿ

    ಬೆಂಗಳೂರು: ಈದ್ಗಾ ಮೈದಾನ ವಿವಾದ ಇನ್ನೇನು ಅಂತ್ಯ ಕಂಡಿದೆ ಎನ್ನುವಷ್ಟರಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ವಕ್ಫ್ ಬೋರ್ಡ್‍ದ್ದೇ ಆಸ್ತಿ ಎಂದು ದಾಖಲೆಯಲ್ಲಿ ಉಲ್ಲೇಖವಾಗಿರುವುದರ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ದಾಖಲೆ ಬಿಡುಗಡೆ ಮಾಡಿದ್ದಾರೆ.

    ವಿವಾದಿತ ಈದ್ಗಾ ಮೈದಾನವು ವಕ್ಫ್ ಬೋರ್ಡ್‍ದ್ದೇ ಆಸ್ತಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಬಿಬಿಎಂಪಿ ಅವರು ಕಳೆದುಹೋದ ಆಟದ ಮೈದಾನವನ್ನು ಹುಡುಕಲಿ. ಅದು ಬಿಟ್ಟು ನಮ್ಮ ವಕ್ಫ್ ಆಸ್ತಿಯನ್ನು ಆಟದ ಮೈದಾನ ಎನ್ನುವುದು ಬೇಡ ಎಂದಿದ್ದಾರೆ.

    ಮೈಸೂರು ಸಂಸ್ಥಾನದ ಆಡಳಿತ ಕಾಲದಲ್ಲಿ ಈ ಸ್ವತ್ತಿನ ಮಾಲೀಕರು ಕಾರ್ಪೋರೇಷನ್ ಎಂದು ಉಲ್ಲೇಖವಾಗಿದೆ. ಇನ್ನೊಂದಡೆ ಬಿಬಿಎಂಪಿ ದಾಖಲೆಯಲ್ಲಿ ಬಿಬಿಎಂಪಿ ಆಟದ ಮೈದಾನ ಅಂತ ಉಲ್ಲೇಖವಾಗಿದೆ. ವಕ್ಫ್ ಬೋರ್ಡ್ ದಾಖಲೆಯಲ್ಲೂ ವಕ್ಫ್‌ಗೆ ಸೇರಿದ್ದು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಭಾರಿ ಗೊಂದಲ ಸೃಷ್ಟಿಯಾಗಿದ್ದು, ಮತ್ತೊಂದು ಆಯಾಮಕ್ಕೆ ಈ ವಿವಾದ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ಇದನ್ನೂ ಓದಿ: ಈದ್ಗಾ ಮೈದಾನ ಆಟದ ಮೈದಾನ, ಬಿಬಿಎಂಪಿ ಆಸ್ತಿ: ಹರೀಶ್ ಕುಮಾರ್

    ಈಗಾಗಲೇ ಈದ್ಗಾ ಮೈದಾನ ವಿವಾದ ವಿಚಾರವಾಗಿ ಸಾಲು ಸಾಲು ಸಂಘಟನೆಗಳಿಂದ ಅರ್ಜಿ ಹಾಕಲು ಸಿದ್ಧತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಆಗಸ್ಟ್ 15ರಂದು ಕಾರ್ಯಕ್ರಮಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿತ್ತು.

    ಅಷ್ಟೇ ಅಲ್ಲದೇ ಸೋಮವಾರ ಈ ವಿಚಾರ ದೊಡ್ಡದಾಗುತ್ತಿದ್ದಂತೆ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್, ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ. ಕೋರ್ಟ್ ನಿರ್ದೇಶನದ ಪ್ರಕಾರ ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತಿದೆ. ಕೋರ್ಟ್ ನೀಡಿರುವ 2 ಅವಧಿ ಬಿಟ್ಟು ಅವಕಾಶ ಕೇಳಿದ್ದರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು

    BBMP

    ಆದರೆ ಇದೀಗ ಈದ್ಗಾ ವಿವಾದದಲ್ಲಿ ಬಿಬಿಎಂಪಿ ಯೂಟರ್ನ್ ಹೊಡೆದಿದೆ. ಈ ಬಗ್ಗೆ ಜಂಟಿ ಆಯುಕ್ತ ಶಿವಸ್ವಾಮಿ ಮಾತನಾಡಿ, ಕಾರ್ಯಕ್ರಮ ನಡೆಸಬಾರದೆಂದು ಸುಪ್ರೀಂ ಆದೇಶ ಇದೆ. ವಕ್ಫ್ ಬೋರ್ಡ್ ಏನ್ ಹೇಳ್ತಾರೆ ಪೇಪರ್ ಕೊಡಲಿ ಪರಿಶೀಲನೆ ಮಾಡಲಾಗುತ್ತದೆ. ಇದಾದ ಮೇಲೆ ಮತ್ತೆ ಬಿಬಿಎಂಪಿ ಅಂತಿಮ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು, ಇದು ಆಟದ ಮೈದಾನ ಅಂತ ಬಿಬಿಎಂಪಿಯೇ ಹೇಳಿದ ಮೇಲೆ ಮತ್ತೆ ಪರಿಶೀಲನೆ ಮಾಡುವುದು ಏನಿದೆ. ವಕ್ಪ್ ಬೋರ್ಡ್ ಜೊತೆ ಯಾಕೆ ಪರಿಶೀಲನೆ ನಡೆಸಬೇಕು ಎಂದು ಬಿಬಿಎಂಪಿ ವಿರುದ್ಧ ಕಿಡಿಕಾರಿದೆ. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?

  • ಈದ್ಗಾ ಮೈದಾನ ವಿಚಾರವಾಗಿ ಚನ್ನಪಟ್ಟಣ ಕೋರ್ಟ್ ಬಳಿಯೇ ಎರಡು ಗುಂಪುಗಳಿಂದ ಗಲಾಟೆ

    ಈದ್ಗಾ ಮೈದಾನ ವಿಚಾರವಾಗಿ ಚನ್ನಪಟ್ಟಣ ಕೋರ್ಟ್ ಬಳಿಯೇ ಎರಡು ಗುಂಪುಗಳಿಂದ ಗಲಾಟೆ

    ರಾಮನಗರ: ಈದ್ಗಾ ಮೈದಾನ ವಿಚಾರವಾಗಿ ಕೋರ್ಟ್ ಬಳಿಯೇ ಎರಡು ಗುಂಪಿನ ಜನರು ಗಲಾಟೆ ಮಾಡಿಕೊಂಡ ಘಟನೆ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

    ಚನ್ನಪಟ್ಟಣ ನ್ಯಾಯಾಲಯವನ್ನು ಸಿಎಂ ಕುಮಾರಸ್ವಾಮಿ ಅವರು ಫೆಬ್ರವರಿ 2ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಕೋಮಿನ ಜನರು ಈದ್ಗಾ ಮೈದಾನ ಹಾಗೂ ಕೋರ್ಟ್ ಮಧ್ಯೆ ಶೀಟ್‍ಗಳಿಂದ ತಡೆಗೊಡೆ ನಿರ್ಮಿಸಿದ್ದಾರೆ. ಇದನ್ನು ವಿರೋಧಿಸಿ ಮತ್ತೊಂದು ಕೋಮಿನ ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆದಿದ್ದಾರೆ.

    ಎರಡು ಕೋಮಿನ ಜನರನ್ನು ಸಮಾಧಾನ ಪಡಿಸಲು ಪೊಲೀಸರು, ಅಧಿಕಾರಿಗಳ ಹರಸಾಹಸ ಪಡುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಪರಿಸ್ಥಿಯನ್ನು ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಎರಡೂ ಗುಂಪಿನ ಜನರನ್ನು ಚದುರಿಸಿದ್ದಾರೆ.

    ಏನಿದು ಪ್ರಕರಣ?:
    ಚನ್ನಪಟ್ಟಣದ ಈದ್ಗಾ ಮೈದಾನದ ಆರು ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಪಡೆದು ಕೋರ್ಟ್ ನಿರ್ಮಿಸಲಾಗಿದೆ. ಜಾಗವನ್ನು ಪಡೆಯುವಾಗ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್ ಅವರು, ಬೇರೆ ಕಡೆಗೆ ಈದ್ಗಾ ಮೈದಾನಕ್ಕೆ ಹಾಗೂ ನಮಾಜ್‍ಗೆ ಜಾಗವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆ ಹಂತಕ್ಕೆ ಬಂದರೂ ಬೇರೆ ಕಡೆ ಜಾಗ ಮಂಜೂರಾಗಿರಲಿಲ್ಲ. ಜೊತೆಗೆ ಈದ್ಗಾ ಮೈದಾನದ ಜಾಗದಲ್ಲಿ 10 ಗುಂಟೆ ಜಾಗವನ್ನು ವಾಹನಗಳ ಪಾರ್ಕಿಂಗ್‍ಗೆ ಬಳಕೆ ಮಾಡಲಾಗಿದೆ.

    ಈಗಾಗಲೇ ನೀಡಿರುವ ನಾಲ್ಕು ಎಕರೆ ಜಾಗವನ್ನು ಹೊರತುಪಡಿಸಿ, ಮತ್ತೆ ಜಾಗವನ್ನು ನೀಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಈದ್ಗಾ ಮೈದಾನ ಹಾಗೂ ಕೋರ್ಟ್ ಮಧ್ಯದಲ್ಲಿ ಶೀಟ್‍ಗಳಿಂದ ತಡೆಗೋಡೆ ನಿರ್ಮಿಸಿದ್ದಾರೆ. ಆದರೆ ತಡೆಗೋಡೆ ತೆರವುಗೊಳಿಸುವಂತೆ ಕೇಳಲು ಹೋಗಿದ್ದ ಪೊಲೀಸರ ಜೊತೆಗೆ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ತಡೆಗೋಡೆಯನ್ನು ತೆರವುಗೊಳಿಸುತ್ತಿದ್ದಂತೆ ಪ್ರತಿಭಟನಾ ನಿರತರು ತಡೆಯಲು ಮುಂದಾದರು.

    ಈದ್ಗಾ ಮೈದಾನಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಜನರು ಪ್ರತಿಭಟನಾ ಸ್ಥಳದಿಂದ ಹೋಗವವರೆಗೂ ನಾವು ಹೋಗುವುದಿಲ್ಲ ಎಂದು ಮತ್ತೊಂದು ಕೋಮಿನ ಜನರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv