Tag: Eidgah

  • ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾಸ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್- ಉಲ್-ಫಿತ್ (Eid namaz) ಅಂಗವಾಗಿ ನಮಾಜ್‌ ಮಾಡಿದ 1,700 ಮಂದಿ ಅಪರಿಚಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

    ನಿಷೇಧಾಜ್ಞೆ ನಡುವೆಯೂ ಏಪ್ರಿಲ್‌ 22ರಂದು ನಗರದ ಬೆನಜಬಾರ್‌ನಲ್ಲಿರುವ ಜಜ್ಮೌ ಈದ್ಗಾ, ಬಾಬುಪುರ್ವಾ ಈದ್ಗಾ ಮತ್ತು ಬದಿ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹಾಗಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 200, ಬೇಗಂಪುರವಾ ಪೊಲೀಸ್ ಠಾಣೆಯಲ್ಲಿ 40 ರಿಂದ 50 ಹಾಗೂ ಬೆನಜ್‌ಹಬರ್‌ ಪೊಲೀಸ್ ಠಾಣೆಯಲ್ಲಿ ಸುಮಾರು 1,500 ಮಂದಿ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

    ಇದಕ್ಕೆ ಪ್ರತಿಕ್ರಿಯಿಸಿರುವ ಬೇಗಂಪುರವಾ ಪೊಲೀಸ್‌ ಠಾಣೆ ಉಸ್ತುವಾರಿ ಬ್ರಿಜೇಶ್‌ ಕುಮಾರ್‌, ಈದ್ ಹಬ್ಬಕ್ಕೂ ಮುನ್ನ ಶಾಂತಿ ಸಮಿತಿ ಸಭೆ ನಡೆಸಲಾಗಿತ್ತು. ಸಾರ್ವಜನಿಕ ಸ್ಥಳಗಳು, ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ನಮಾಜ್‌ ಮಾಡದಂತೆ ಸೂಚಿಸಲಾಗಿತ್ತು. ಇದರ ಹೊರತಾಗಿಯೂ ಅಂದು ರಸ್ತೆಯಲ್ಲೇ ಜಮಾಯಿಸಿ ನಮಾಜ್‌ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: Breaking -ನಟಿ ಜಿಯಾ ಖಾನ್ ಸಾವಿನ ಪ್ರಕರಣ : ಸ್ನೇಹಿತ ಸೂರಜ್ ಪಾಂಚೋಲಿ ನಿರಪರಾಧಿ

    ಈ ಹಿನ್ನೆಲೆಯಲ್ಲಿ ಈದ್ಗಾ ಸಮಿತಿ ಸದಸ್ಯರೂ ಸೇರಿದಂತೆ 1,700 ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 186 (ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು), 188 (ಸೆಕ್ಷನ್ -144 ಉಲ್ಲಂಘಿಸಿ ಗುಂಪುಗೂಡುವುದು), 283 (ಜನಸಂದಣಿ ರಸ್ತೆ ತಡೆಯುವುದು), 341 (ಅಡಚಣೆ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಓಂವೀರ್ ಸಿಂಗ್ ತಿಳಿಸಿದ್ದಾರೆ.

  • ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    ಹುಬ್ಬಳ್ಳಿ: ಈದ್ಗಾ ಮೈದಾನ ಗಣೇಶ ಚತುರ್ಥಿಗೆ ಮಾತ್ರ ನೀಡಿದರೆ ಸಾಕಾಗುವುದಿಲ್ಲ ನಮಗೂ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ ಎಂದು ಕ್ರೈಸ್ತರು ಪಾಲಿಕೆಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟಲ ನೇತೃತ್ವದಲ್ಲಿ ಕಮಿಷನರ್ ಗೋಪಾಲ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿರುವ ಕ್ರೈಸ್ತ ಧರ್ಮದ ಮುಖಂಡರು, ನಮಗೂ ಸಹ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮತ್ತು ಯೇಸು ಬಗೆಗಿನ ಕಾರ್ಯಕ್ರಮಗಳನ್ನು ಮಾಡುವ ಆಸೆಯಿದೆ. ಹೀಗಾಗಿ ನಮ್ಮ ಧರ್ಮಕ್ಕೂ‌ ಸಹ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್

    ಈ ವೇಳೆ ಫಾದರ್ ಸಲ್ಮಾನ್ ಬಿಜ್ಜ, ಓಬಲ್ ರಾವ್ ಸೇರಿದಂತೆ ಕ್ರೈಸ್ತ ಸಮಾಜದ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂಪುರದಲ್ಲಿ ನೂತನ ಈದ್ಗಾ ಲೋಕಾರ್ಪಣೆ

    ಇಸ್ಲಾಂಪುರದಲ್ಲಿ ನೂತನ ಈದ್ಗಾ ಲೋಕಾರ್ಪಣೆ

    ನೆಲಮಂಗಲ: ನೆಲಮಂಗಲದ ಕಣೇಗೌಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಇಸ್ಲಾಂಪುರದಲ್ಲಿ ನೂತನವಾಗಿ ಮುಸ್ಲಿಂ ಧಾರ್ಮಿಕ ಈದ್ಗಾ ಉದ್ಘಾಟನೆ ಮಾಡಲಾಯಿತು.

    ಈಗಾಗಲೇ ಇಸ್ಲಾಂಪುರದಲ್ಲಿ ಹಳೆಯ ಈದ್ಗಾವಿದ್ದು ವರ್ಷಕ್ಕೊಮ್ಮೆ ಬರುವಂತಹ ಪವಿತ್ರವಾದ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಿಗೆ ಈದ್ಗಾಗಳಲೇ ನಮಾಜ್ ಮಾಡುವುದು ಸಂಪ್ರದಾಯ. ಹಳೆಯ ಈದ್ಗಾದ ಜಾಗ ತುಂಬಾ ಚಿಕ್ಕವಾಗಿದ್ದು, ಹೆಚ್ಚು ಜನ ನಮಾಜ್ ಸಲ್ಲಿಸಲು ಸಾಧ್ಯವಾಗದ ಕಾರಣ ನೂತನವಾಗಿ ಮತ್ತೊಂದು ಈದ್ಗಾದ ನಿರ್ಮಾಣ ಮಾಡಲಾಯಿತು. ಇದನ್ನೂ ಓದಿ:  ತ್ವಚೆ ಡಲ್ ಆಗಿದ್ಯ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ

    ಮಾಧ್ಯಮದ ಜೊತೆ ಮಾತನಾಡಿದ ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಗ್ರಾಮದ ಮುಸಲ್ಮಾನರು ಹಬ್ಬದ ನಮಾಜ್ ಮಾಡಲು ಅವರ ಅನುಕೂಲಕ್ಕಾಗಿ ಈದ್ಗಾದ ಉದ್ಘಾಟನೆಯನ್ನು ಮಾಡಿದ್ದೇವೆ. ನಾನು ಆಶ್ವಾಸನೆ ಕೊಡುವಂತಹ ರಾಜಕಾರಣಿಯಲ್ಲ ಇಸ್ಲಾಂಪುರ ಮುಖ್ಯ ರಸ್ತೆಯ ಕಾಮಗಾರಿ ಆದೇಶವನ್ನು ಕಾಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆಯ ಕಾಮಗಾರಿ ಆದೇಶ ಬಂದ ಮೇಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.  ಇದನ್ನೂ ಓದಿ: ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಂಜನಮೂರ್ತಿ, ಪಿಳ್ಳಪ್ಪ ಮಾಜಿ ಪುರಸಭೆ ಅಧ್ಯಕ್ಷ, ಮೋಹದೀನ್ ಹಾಲಿ, ಕಣೇ ಗೌಡನಹಳ್ಳಿ ಪಂಚಾಯಿತಿ ಅಧ್ಯಕ್ಷ, ಕಲೀಂ ಉಲ್ಲಾ ಕಾಂಗ್ರೆಸ್ ಮುಖಂಡರು, ರಜಾಕ್ ಸಾಹೇಬರು ಮಾಜಿ ಸದಸ್ಯರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.