Tag: Eid- Milad

  • ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

    ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

    ವಿಜಯಪುರ: ಈದ್‌ಮಿಲಾದ್ (Eid Milad) ಮೆರವಣಿಗೆ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಎಂಬ ಹಾಡನ್ನು ಪ್ರಸಾರ ಮಾಡಿದ ಮೂವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸ್ (Suo Moto Case) ದಾಖಲಿಸಿಕೊಂಡಿದ್ದಾರೆ.

    ವಿಜಯಪುರ (Vijayapura) ನಗರದಲ್ಲಿ ಸೆ.5 ರಂದು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆಯಲ್ಲಿ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ (15 ಮಿನಿಟ್ ಕೆಲಿಯೆ ಪೊಲೀಸಕೋ ಹಠಾಲೋ) ಎಂಬ ಹಾಡನ್ನು ಪ್ರಸಾರ ಮಾಡಲಾಗಿತ್ತು. ಇದೀಗ ಪೊಲೀಸರು ಈ ಹಾಡನ್ನು ಪ್ರಸಾರ ಮಾಡಿದ ಮೂವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಈ ಹಾಡು ಪ್ರಸಾರ ಮಾಡಿದ ಡಿಜೆ ವಾಹನದ ಮಾಲೀಕ, ಡಿಜೆ ಆಪರೇಟರ್, ಹಾಗೂ ಇದನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಎಂ.ಟಿ ತೌಸಿಫ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಗಾಂಧಿಚೌಕ್ ಪೊಲೀಸ್ (Gandhi Chowk Police) ಠಾಣೆಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಜಿ.ಕೆ ದೇವಕರ್ ಅವರು ಮೂವರ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ್ದಾರೆ.

  • ಈದ್ ಮಿಲಾದ್ ಹಬ್ಬ ಮೆರವಣಿಗೆ ವೇಳೆ ಗಣೇಶನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಬಾಂಧವರು

    ಈದ್ ಮಿಲಾದ್ ಹಬ್ಬ ಮೆರವಣಿಗೆ ವೇಳೆ ಗಣೇಶನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಬಾಂಧವರು

    ಹಾವೇರಿ: ತಾಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನ ಭಾವೈಕ್ಯತೆಯಿಂದ ಆಚರಿಸಲಾಯಿತು. ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸಿದರು.

    ಸರ್ವಧರ್ಮ ಮಹಾ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಭಾಂದವರು, ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ. ಹಿಂದೂ-ಮುಸ್ಲಿಂ ಬಾಂಧವರೆಲ್ಲ ಸೇರಿ ಗಣಪನಿಗೆ ಪೂಜೆ ಸಲ್ಲಿಸಿ ಮಾರ್ಲಾಪಣೆ ಮಾಡಿದರು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಈದ್ ಮಿಲಾದ್ ಹಬ್ಬ ಮೆರವಣಿಗೆ ಮಾಡಿ ಅರ್ಥಪೂರ್ಣವಾಗಿ ಆಚರಿಸಿದರು.

    ಪ್ರತಿ ವರ್ಷ ಗ್ರಾಮದಲ್ಲಿ ಸರ್ವಧರ್ಮ ಆಶಯದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ.‌ ವಿವಿಧ ಧರ್ಮದ ಜನರೂ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಸಹ ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನ ಮಾಡುತ್ತಾರೆ.

  • ವಿದೇಶಿ ಇಸ್ಲಾಂ ಮುಖಂಡರು ಧಾರ್ಮಿಕ ಭಾಷಣ ಮಾಡುವಂತಿಲ್ಲ – ಸಂಘಟಕರಿಗೆ ಖಾಕಿ ಖಡಕ್ ಸೂಚನೆ

    ವಿದೇಶಿ ಇಸ್ಲಾಂ ಮುಖಂಡರು ಧಾರ್ಮಿಕ ಭಾಷಣ ಮಾಡುವಂತಿಲ್ಲ – ಸಂಘಟಕರಿಗೆ ಖಾಕಿ ಖಡಕ್ ಸೂಚನೆ

    – ʻಮಿಲದುನ್ನಬಿʼ ಕಾರ್ಯಕ್ರಮದಲ್ಲಿಂದು ಸಿಎಂ, ಡಿಸಿಎಂ ಭಾಗಿ
    – 500ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ

    ಬೆಂಗಳೂರು: ಈದ್ ಮಿಲಾದ್ (Eid Milad) ಪ್ರಯುಕ್ತ ಅರಮನೆ ಮೈದಾನದಲ್ಲಿಂದು ಆಯೋಜಿಸಿರುವ ʻಮಿಲದುನ್ನಬಿʼ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿದೇಶಿ ಧಾರ್ಮಿಕ ಮುಖಂಡರು ಹಾಗೂ ಕಾರ್ಯಕ್ರಮದ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ.

    ಭಾರತದ ವೀಸಾ ನಿಯಮಗಳನ್ನ ಉಲ್ಲಂಘನೆ ಮಾಡದಂತೆ ಕಾರ್ಯಕ್ರಮ ಆಯೋಜಕರಿಗೆ ಈಗಾಗಲೇ ಪೊಲೀಸ್ರು ಸೂಚನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆಶಿ ಭಾಗಿಯಾಗ್ತಿದ್ದು, ಸಿಎಂ ಹಾಗೂ ಡಿಸಿಎಂಗೆ ಮುಜುಗರ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ – ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ

    Zameer Ahmed Khan 2

    ಕಾರ್ಯಕ್ರಮಕ್ಕೆ ಆಗಮಿಸುವ ವಿದೇಶಿ ಗಣ್ಯರು ಕೇವಲ ಗೆಸ್ಟ್ ಆಗಿರಬೇಕು. ಕಾರ್ಯಕ್ರಮದಲ್ಲಿ ಧಾರ್ಮಿಕ ವಿಚಾರಗಳ (Religious Issue) ಬಗ್ಗೆ ಮಾತನಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಉಮರ್ ಬಿನ್ ಹಮಿದ್ ಅಲ್ ಜೀಲಾನಿ, ಶೇಖ್ ಮುಹಮ್ಮದ್ ಉಪಾದ್ ಅಲ್ ಶಂಶಿರಿ, ಅಬ್ದುಲ್ ಖಬೀರ್ ಅಲ್ ಮದಿನಾ, ಖಾದರ್ ಅಲ್ ಜೀಲಾನಿ (ಬಾಗ್ದಾದ್) ಭಾಗಿ ಸಾಧ್ಯತೆಯಿದೆ. ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ಇಡೀ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಲಿದ್ದು, ಆಯೋಜಕರು ಹಾಗೂ ಪೊಲೀಸ್‌ ಇಲಾಖೆಯಿಂದ ವಿಡಿಯೋಗ್ರಫಿ ಮಾಡಲಾಗುತ್ತೆ. ಅಲ್ಲದೇ ಎಫ್ಆರ್‌ಆರ್‌ಓ ನಿಂದಲೂ ನಿಗಾ ವಹಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿದೇಶಿ ಮುಖಂಡರಿಂದ ಭಾಷಣ, ಸಂದೇಶ ಸಾಧ್ಯತೆಯಿದೆ‌. ಆದ್ದರಿಂದ ಎಲ್ಲರ ಭಾಷಣಗಳ ಮೇಲೂ ಖಾಕಿ ನಿಗಾ ವಹಿಸಿದೆ.

    ಈ ನಡುವೆ ಅರಮನೆ ಮೈದಾನದಲ್ಲಿ ಈದ್ ಮೀಲಾದ್ ಸಮಾವೇಶಕ್ಕೆ ವಿದೇಶಿ ಮುಸ್ಲಿಂ ಧರ್ಮಗುರುಗಳಿಗೆ ನೀಡಿದ್ದ ಆಹ್ವಾನ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಇನ್ನುಳಿದಂತೆ ಅರಮನೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. ಜಂಟಿ ಆಯುಕ್ತರು, ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಗೋವಾ | ಹಾಸ್ಟೆಲ್ ರೂಮ್‌ನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

  • ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ – ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ

    ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ – ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ

    – ಟೂರಿಸ್ಟ್ ವೀಸಾದಲ್ಲಿ ಬಂದವರಿಂದ ಪ್ರಚಾರ ಭಾಷಣ

    ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿನ ಈದ್ ಮಿಲಾದ್ (Eid Milad) ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮದಲ್ಲಿ ಟೂರಿಸ್ಟ್ ವೀಸಾ ಪಡೆದು ಬಂದವರಿಂದ ಧರ್ಮ ಪ್ರಚಾರಕ್ಕೆ ಮುಂದಾಗಿರೋದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಅಂತ ಸಚಿವ ಜಮೀರ್ (Zameer Ahmed Khan) ಸ್ಪಷ್ಟನೆ ಕೊಟ್ಟಿದ್ದಾರೆ.

    ಹೌದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ʻಮಿಲದುನ್ನಬಿʼ ಕಾನ್ಫರೆನ್ಸ್ ಹೆಸರಿನಲ್ಲಿ ಆಯೋಜಿಸಿರೋ ಈದ್ ಮಿಲಾದ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಹಿನ್ನೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದೇಶದಿಂದ ಬಂದ ಧರ್ಮಗುರುಗಳಿಂದ ಪ್ರಚಾರ ನಡೆಸೋದು ಅಗತ್ಯ ಇತ್ತೇ ಅನ್ನೋ ಪ್ರಶ್ನೆ ಎದ್ದಿದೆ.

    ನಿಯಮ ಏನ್‌ ಹೇಳುತ್ತೆ?
    * ಟೂರಿಸ್ಟ್ ವೀಸಾ ಪಡೆದು ಧರ್ಮ ಪ್ರಚಾರ ಮಾಡುವಂತಿಲ್ಲ.
    * ಕಾರ್ಯಕ್ರಮದಲ್ಲಿ ಮಾತ್ರ ಭಾಗಿ ಆಗಬಹುದು.
    * ಧರ್ಮಪ್ರಚಾರಕರು ಭಾಷಣ ಮಾಡುವಂತಿಲ್ಲ.

    ಹಿಂದೂ ಸಂಘಟನೆಗಳಿಂದ ವಿರೋಧ
    ಸೆಪ್ಟೆಂಬರ್ 5ರಂದು ನಡೆಯುತ್ತಿರೋ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಅಂತ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

    “ ಭಾರತೀಯ ವೀಸಾ ನಿಯಮಗಳು ಹಾಗೂ ಫಾರಿನರ್ಸ್ ಆಕ್ಟ್ ಅನ್ವಯ ಭಾರತಕ್ಕೆ ಧರ್ಮಭೋಧನೆಗೆ ಧರ್ಮ ಪ್ರಚಾರಕ್ಕೆ ಅಡ್ಡ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವೀಸಾ ಪಡೆದರೂ ಭಾಗವಹಿಸುವಂತಿಲ್ಲ. ಈಗ ನಿಜಾಮುದ್ದೀನ್ ಜಮಾತ್ ಘಟನೆಯ ಬಳಿಕ ಬೆಂಗಳೂರು ನಗರದಲ್ಲಿ ಬೆಂಗಳೂರು ಪೊಲೀಸರು 19 ವಿದೇಶಿಯರನ್ನು ಬಂಧಿಸಿದ್ದಾರೆ. ದುರಂತವೆಂದರೆ ಇವರೆಲ್ಲರೂ ಟೂರಿಸ್ಟ್ ವೀಸಾ ಪಡೆದ ಭಾರತದಲ್ಲಿ ಧರ್ಮ ಪ್ರಚಾರಕ್ಕೆ ಬಂದಿದ್ದರು ಎನ್ನಲಾಗಿದೆ. ಇವರ ಕಾರ್ಯಕ್ರಮಗಳು ಹಾಗು ಓಡಾಟಗಳು ಗುಪ್ತವಾಗಿರುವುದರಿಂದ ಇವರು ರಾಷ್ಟ್ರದ ಆಂತರಿಕ ಭದ್ರತೆಗೆ ಮಾರಕವಾಗಿದ್ದಾರೆ. ಆಲ್ಲದೇ ಬಾಂಗ್ಲಾದೇಶ ಹಾಗೂ ಇತರೆ ರಾಷ್ಟ್ರಗಳಿಂದ ಬಂದಿರುವ ಪ್ರಜೆಗಳು ವೀಸಾ ದುರ್ಬಳಕೆ ಮಾಡುತ್ತಿದ್ದಾರೆ. ಕೆಲವರ ವೀಸಾ ಅವಧಿ ಮುಗಿದು ಹೋಗಿದೆ. ವೀಸಾ ನಿಯಮ ಕೇಂದ್ರದ ವಿಷಯವಾಗಿದ್ದರೂ, ರಾಜ್ಯದ ಆಂತರಿಕ ಭದ್ರತೆ ಹಾಗೂ ಐಕ್ಯತ ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ವೀಸಾ ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಂಡು ಅಂತಹವರನ್ನು ಗಡಿಪಾರು ಮಾಡಬೇಕಾಗಿ ಕೋರುತ್ತೇವೆ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

    ತೀವ್ರ ಟೀಕೆ ಬಳಿಕ ಎಚ್ಚೆತ್ತ ಗೃಹ ಸಚಿವರು
    ಇನ್ನು, ತೀವ್ರ ಟೀಕೆ ಬಳಿಕ ಗೃಹ ಸಚಿವ ಪರಮೇಶ್ವರ್ ಎಚ್ಚೆತ್ತುಕೊಂಡಿದ್ಧಾರೆ. ಹಿಂದೂ ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರ ಭಾಷಣಕ್ಕೆ ಅವಕಾಶ ನೀಡಬಾರದು ಅಂತ ಸೂಚಿಸಿದ್ದಾರೆ. ವಿದೇಶಿಗರು ಬಂದು ಧಾರ್ಮಿಕ ಪ್ರಚಾರ ಮಾಡೋದಕ್ಕೆ ಅವಕಾಶ ಇಲ್ಲ. ಇದನ್ನ ನಿಯಂತ್ರಣ ಮಾಡಬೇಕು ಅಂತ ಆಯೋಜಕರಿಗೆ ಪರಂ ತಿಳಿಸಿದ್ಧಾರೆ. ಅಲ್ಲಿ ಏನಾದ್ರು ಉಲ್ಲಂಘನೆ ಮಾಡಿದ್ರೆ ನಿಗಾ ಇಡುತ್ತೇವೆ ಅಂತ ಪರಮೇಶ್ವರ್ ತಿಳಿಸಿದ್ದಾರೆ.

  • ಈದ್ ಮಿಲಾದ್ ಬಗ್ಗೆ ಮಾತ್ರ ಯಾಕೆ ಮಕ್ಕಳು ಅಧ್ಯಯನ ಮಾಡಬೇಕು – ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ಈದ್ ಮಿಲಾದ್ ಬಗ್ಗೆ ಮಾತ್ರ ಯಾಕೆ ಮಕ್ಕಳು ಅಧ್ಯಯನ ಮಾಡಬೇಕು – ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ವಿಜಯಪುರ: 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯ ವಿರುದ್ದ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್‌ (Basangouda Patil Yatnal) ಕಿಡಿ ಕಾರಿದ್ದಾರೆ. ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ಕೂಡಲೆ ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ.

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿ (21 Day Activity Guide) ಒಂದು ಕೋಮಿನ ಹಬ್ಬವನ್ನು ತಿಳಿದುಕೊಳ್ಳಲು ನಿರ್ದೇಶಿಸಲಾಗಿದೆ. ಓದುವ ಅಭಿಯಾನವನ್ನು ಸರ್ಕಾರ (Congress) ಪರಿಚಯಿಸಿದ್ದರೆ ಅದರಲ್ಲಿ ಪ್ರಚಲಿತ ವಿದ್ಯಮಾನ, ಕನ್ನಡ ಸಾಹಿತ್ಯ, ವಿಜ್ಞಾನ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಓದಲು ಉತ್ತೇಜಿಸಬೇಕು ಎಂದರು. ಇದನ್ನೂ ಓದಿ: ಪೊಲೀಸ್‌ ಅಧಿಕಾರಿಗಳನ್ನೂ ಬಿಡದ ಸೈಬರ್‌ ವಂಚಕರು – ಕೆಜಿಎಫ್‌ ಎಸ್ಪಿ ಫೇಸ್‌ಬುಕ್‌, ಇನ್‌ಸ್ಟಾ ಖಾತೆ ನಕಲು

    ಯಾವುದೋ ಒಂದು ಕೋಮಿನ ಓಲೈಕೆಗೆ ಅವರ ಹಬ್ಬದ ಬಗ್ಗೆ ತಿಳುವಳಿಕೆ ನೀಡುವುದರಿಂದ ಮಕ್ಕಳ ಜ್ಞಾನವಾಗಲಿ, ಬೌದ್ಧಿಕ ಮಟ್ಟವಾಗಲಿ ಸುಧಾರಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಸರ್ಕಾರ ಈ ರೀತಿಯಾದ ಓಲೈಕೆ ರಾಜಕಾರಣವನ್ನು ಬಿಡಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: 22 ವರ್ಷದ ಯುವತಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

    ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತಹ ಪಠ್ಯಕ್ರಮವನ್ನು, ವಿಷಯಗಳನ್ನು ಪರಿಚಯಿಸಲಿ. ಚಟುವಟಿಕೆ ಮಾರ್ಗದರ್ಶಿಯಲ್ಲಿ ಕೂಡಲೇ ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ತೆಗೆದು ಹಾಕಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಿನ್ನಯ್ಯ ಈಗ ಡಬಲ್‌ ಗೇಮ್‌ ಆಡುತ್ತಿದ್ದಾನೆ: ಜಯಂತ್‌

  • ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಿಸ್ತೀನ್‌ ಧ್ವಜ ಪ್ರದರ್ಶನ – 8 ಜನರ ವಿರುದ್ಧ ಕೇಸ್‌

    ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಿಸ್ತೀನ್‌ ಧ್ವಜ ಪ್ರದರ್ಶನ – 8 ಜನರ ವಿರುದ್ಧ ಕೇಸ್‌

    ರಾಯಚೂರು: ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ಪ್ಯಾಲಿಸ್ತೀನ್‌ ಧ್ವಜ ಪ್ರದರ್ಶನ ಹಿನ್ನೆಲೆ ರಾಯಚೂರಿನಲ್ಲಿ ಎರಡು ಪ್ರತ್ಯೇಕ ‌ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ನೋಟೀಸ್ ಕೊಟ್ಟಿದ್ದಾರೆ. ರಾಯಚೂರು (Raichur) ನಗರದ ಸದರ್ ಬಜಾರ್ ಮತ್ತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

    ರಾಯಚೂರು ಗ್ರಾಮೀಣ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಸದರ್ ಬಜಾರ್ ಠಾಣೆಯಲ್ಲಿ ಓರ್ವನ ವಿರುದ್ಧ ಕೇಸ್ ದಾಖಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರೊ ಆರೋಪದಡಿ ದೂರು ದಾಖಲಾಗಿವೆ. ಇದನ್ನೂ ಓದಿ: Tamil Nadu | ಹೊಸೂರಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಟಾಟಾ ಕಂಪನಿ

    ನಗರದ ಪರಕೋಟಾ ಪ್ರದೇಶದ ನಿವಾಸಿ ಶೇಕ್ ಮಾಸೂಮ್ ಹಾಗೂ ನಗರದ ಆಶ್ರಯ ಕಾಲೋನಿಯ ನಿವಾಸಿಗಳಾದ ಸೋಫಿ, ಮೇಹರಾಜ್, ರಹೀಸ್ ಹುಸೇನ್, ಸೈಯದ್ ಜಬಾರ್ ಸೇರಿ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

    ಎರಡು ಪ್ರಕರಣಗಳಲ್ಲಿ ಎಂಟು ಆರೋಪಿಗಳನ್ನ ವಶಕ್ಕೆ ಪಡೆದು, ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನೆಲೆ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ‌. ಸದ್ಯ ಎರಡು ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಹಿನ್ನೆಲೆ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ 

  • ಕೋಲಾರ| ಈದ್ ಮೆರವಣಿಗೆ ವೇಳೆ 2 ಗುಂಪಿನ ನಡುವೆ ಘರ್ಷಣೆ – 5ಕ್ಕೂ ಹೆಚ್ಚು ಮಂದಿಗೆ ಗಾಯ

    ಕೋಲಾರ| ಈದ್ ಮೆರವಣಿಗೆ ವೇಳೆ 2 ಗುಂಪಿನ ನಡುವೆ ಘರ್ಷಣೆ – 5ಕ್ಕೂ ಹೆಚ್ಚು ಮಂದಿಗೆ ಗಾಯ

    ಕೋಲಾರ: ನಗರದಲ್ಲಿ ಈದ್ ಮಿಲಾದ್ (Eid Milad) ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಘರ್ಷಣೆ ಸಂಭವಿಸಿದ್ದು, 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ನಗರದ ಕ್ಲಾಕ್ ಟವರ್ ಬಳಿ ಮೆರವಣಿಗೆ ಸಾಗುವಾಗ ಮಾತಿಗೆ ಮಾತು ಬೆಳೆದು ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಒಂದು ಗುಂಪು ಥಳಿಸಿದೆ. ಸೈಯದ್ ಸಲ್ಮಾನ್, ಸೈಫ್, ಹುಸೇನ್ ಕಾಷಿಪ್, ಕಲೀಲ್ ಅಹ್ಮದ್ ಎಂಬುವರಿಗೆ ಗಾಯವಾಗಿದ್ದು, ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಂಗಳೂರು, ನಾಗಮಂಗಲ ಎಲ್ಲಾ ಕಡೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ: ದಿನೇಶ್ ಗುಂಡೂರಾವ್

    ಸಯ್ಯದ್ ವಸೀಂ ಪಾಷಾ, ಥಾಹೀರ್ ಗುಂಪಿನಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು ಅರೋಪಿಗಳು ಪರಾರಿಯಾಗಿದ್ದಾರೆ. ಅರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸ್ಥಳಕ್ಕೆ ಧಾವಿಸಿದ್ದು, ಗುಂಪುಗೂಡಿದ್ದ ಜನರನ್ನು ಚದುರಿಸಿದ ಬಳಿಕ ಮೆರವಣಿಗೆ ಮುಂದೆ ಸಾಗಿದೆ. ಇದನ್ನೂ ಓದಿ: ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

    ಗಾಯಳುಗಳು ದಾಖಲಾಗಿದ್ದ ಕೋಲಾರ (Kolar) ಜಿಲ್ಲಾಸ್ಪತ್ರೆಯ ಬಳಿ 300 ಕ್ಕೂ ಹೆಚ್ಚು ಜನರು ಜಮಾವಣೆ ಆಗುತ್ತಿದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಗುಂಪನ್ನು ಚದುರಿಸಿ ಕಳುಹಿಸಿದರು. ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ನಿಫಾ ವೈರಸ್ ಭೀತಿ, ಕೇರಳಕ್ಕೆ ತೆರಳಿದ 25 ಜನರಿಗೆ ಟೆಸ್ಟ್: ದಿನೇಶ್ ಗುಂಡೂರಾವ್

  • ಮಂಗಳೂರು, ನಾಗಮಂಗಲ ಎಲ್ಲಾ ಕಡೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ: ದಿನೇಶ್ ಗುಂಡೂರಾವ್

    ಮಂಗಳೂರು, ನಾಗಮಂಗಲ ಎಲ್ಲಾ ಕಡೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಮಂಗಳೂರಿನಲ್ಲಿ (Mangaluru) ಈದ್ ಮಿಲಾದ್ (Eid Milad) ಗಲಾಟೆ, ನಾಗಮಂಗಲದ (Nagamangala) ಎಲ್ಲಾ ಕಡೆಯು ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಮಂಗಳೂರು ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.

    ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೆಲ ಕೋಮುವಾದಿ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪರಿಸ್ಥಿತಿಯನ್ನು ಶಾಂತಿಯುತವಾಗಿ ಇಥ್ಯರ್ತ ಮಾಡಿದ್ದಾರೆ. ಕೆಲ ಮುಖಂಡರ ಮಾತಿನಿಂದ ಉದ್ವೇಗಕ್ಕೆ ಒಳಗಾಗಿ ಈ ರೀತಿ ಘಟನೆ ಸಂಭವಿಸಿದೆ. ಬಂಟ್ವಾಳದಲ್ಲಿ ಕಲ್ಲು ತೂರಾಟ ನಡೆದಿದೆ. ಮಂಗಳೂರು ಸೂಕ್ಷ್ಮ ಪ್ರದೇಶ, ಈ ರೀತಿಯ ಘಟನೆಗಳಿಗೆ ಪ್ರಚೋದನೆ ಇದ್ದೇ ಇರುತ್ತದೆ. ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

    ಶಾಂತಿಭಂಗ ಯಾರೂ ಮಾಡಬಾರದು. ಕೆಲ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವರು ಪ್ರಚೋದನೆ ಮಾಡುತ್ತಾರೆ. ಅವರಿಗೆ ಶಾಂತಿ ನೆಮ್ಮದಿ ಇರಬಾರದು. ಅತಿಯಾದ ಕೋಮುವಾದದ ಮನಸ್ಥಿತಿಯಿಂದ ಹೀಗಾಗುತ್ತದೆ. ಘಟನೆ ಆದಾಗ ಕಾನೂನು ಪ್ರಕಾರ ಕ್ರಮಕ್ಕೆ ಪೊಲೀಸ್ ಮುಂದಾಗುತ್ತಾರೆ. ಇದು ಇಂಟಲಿಜೆನ್ಸ್ ಫೈಲ್ಯೂರ್ ಅಲ್ಲ.ಎಲ್ಲಾ ಕಡೆ ಪೊಲೀಸರು ಇರಲು ಸಾಧ್ಯವಿರಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ನಿಫಾ ವೈರಸ್ ಭೀತಿ, ಕೇರಳಕ್ಕೆ ತೆರಳಿದ 25 ಜನರಿಗೆ ಟೆಸ್ಟ್: ದಿನೇಶ್ ಗುಂಡೂರಾವ್

    ನಾಗಮಂಗಲ ಪ್ರಕರಣದಲ್ಲಿ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಎರಡು ಕಡೆ ಹೇಳಿಕೆಯನ್ನು ಪಡೆದಿದ್ದಾರೆ. ನಮ್ಮ ಇಲಾಖೆಯವರು ಶಾಂತಿ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆರ್ ಅಶೋಕ್ (r Ashok) ಅವರಿಗೆ ಒಂದೇ ಕೋಮಿನ ಮೇಲೆ ಅತಿಯಾದ ಪ್ರೀತಿ. ಅವರು ಒಂದೇ ಕೋಮಿನ ಮೇಲೆ ದ್ವೇಷ ಮಾಡುತ್ತಾರೆ. ಹಿಂದೂಗಳು ಏನು ಮಾಡಿದರೂ ಅವರಿಗೆ ಸರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ – 48 ಗಂಟೆಗಳ ಕಾಲ ಮದ್ಯದಂಗಡಿ ಬಂದ್

    ನಮ್ಮ ಸರ್ಕಾರಕ್ಕೆ ಎಲ್ಲಾ ಜನಾಂಗದವರು ಬೇಕು. ತಪ್ಪು ಮಾಡುವವರು ಎಲ್ಲಾ ಪಕ್ಷ, ಎಲ್ಲಾ ಜನಾಂಗದಲ್ಲೂ ಇರುತ್ತಾರೆ. ನಮ್ಮ ಸರ್ಕಾರ ಯಾವುದೇ ಪಕ್ಷಪಾತ ಮಾಡುವುದಿಲ್ಲ. ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಪಕ್ಷ ಯಾವುದು ಎಂದು ಜನರಿಗೆ ತಿಳಿದಿದೆ. ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ ಅನುಮತಿ ಕೊಡೋದು ತಪ್ಪು ಅಂತ ಹೇಳಲಾಗುವುದಿಲ್ಲ. ನಾಗಮಂಗಲ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿರುವ ಇಬ್ಬರು ಅರೆಸ್ಟ್ ಆಗಿದ್ದಾರೆ ಎನ್ನಲಾಗಿದೆ. ಉದ್ದೇಶ ಪೂರ್ವಕವಾಗಿ ಗಲಭೆ ಮಾಡಿಸಿರಲು ಸಾಧ್ಯವಿಲ್ಲ. ಕೋಮವಾದದಲ್ಲಿ ನಂಬಿಕೆ ಇಟ್ಟವರು ಹೀಗೆ ಮಾಡಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಶ್ವದ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ ಯಶಸ್ವಿ – ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

    ಗುಜರಾತ್‌ನಲ್ಲಿ (Gujarat) ಆದ ಪ್ರಕರಣದ ಬಗ್ಗೆ ಮೋದಿ ಅವರು ಮಾತನಾಡುವುದಿಲ್ಲ. ಆದರೆ ನಾಗಮಂಗಲದ ಬಗ್ಗೆ ಮಾತನಾಡುತ್ತಾರೆ. ಮಣಿಪುರ ಬೆಂಕಿ ಹಚ್ಚಿ ಉರಿತಿದೆ. ಈ ತನಕ ಪಿಎಂ ಒಂದೇ ಒಂದು ಮಾತಾನಾಡಲಿಲ್ಲ. ಅವರು ರಾಜ್ಯದಲ್ಲಿ ಆಗುವ ದುರ್ಘಟನೆ ಬಗ್ಗೆ ಮಾತಾಡಲ್ಲ, ನಮ್ಮ ರಾಜ್ಯದಲ್ಲಿ ಆಗುವ ಗಲಭೆ ಅವರಿಗೆ ರಾಷ್ಟ್ರೀಯ ಸುದ್ದಿ. ಬಂಟ್ವಾಳದಲ್ಲಿ (Bantwal) ಶಾಂತಿಯುತ ಮೆರವಣಿಗೆ ನಡೆದಿದೆ. ಸುರತ್ಕಲ್‌ನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ ಆಗಿದೆ. ಕೃತ್ಯವೆಸಗಿದವರನ್ನು ಪೊಲೀಸ್ ಅರೆಸ್ಟ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್

    ನನ್ನ ಮನವಿ ಏನೆಂದರೆ ಯಾರು ಕೂಡ ಅನವಶ್ಯಕವಾಗಿ ಗೊಂದಲ ಸೃಷ್ಟಿಸಬಾರದು. ಶಾಂತಿಭಂಗ ಪ್ರಯತ್ನ ಮಾಡಬಾರದು, ಯಾರೋ ಮಾಡೋ ತಪ್ಪಿನಿಂದ ಸಮಾಜದಲ್ಲಿ ಹೀಗೆ ಆಗುತ್ತದೆ. ಬಂಟ್ವಾಳದ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟವರನ್ನು ಬಂಧಿಸಲಾಗಿದೆ. ನಾಗಮಂಗಲ ಪ್ರಕರಣದ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಯಾರೇ ಕಿಡಿಗೇಡಿಗಳು ಇರಲಿ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆ ಇದೆ. ಅಶೋಕ್ ಅವರು ಒಂದೇ ಕೋಮಿನ ಮೇಲೆ ದ್ವೇಷ ಸಾಧಿಸುತ್ತಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇರಲಿ ಯಾರು ತಪ್ಪು ಮಾಡಿದರೂ ನಾವು ಕ್ರಮ ಕೈಗೊಳ್ಳುತ್ತೇವೆ ತಿಳಿಸಿದರು. ಇದನ್ನೂ ಓದಿ: ಮಂಗಳವಾರ ಸಚಿವ ಸಂಪುಟ ಸಭೆ – ಇಂದೇ ಕಲಬುರಗಿ ತಲುಪಿದ ಸಿಎಂ

    ಅಶೋಕ್ ಅವರಿಗೆ ಹಿಂದುಗಳ ಬಗ್ಗೆ ಯಾವ ಆಲೋಚನೆಯೂ ಇರುವುದಿಲ್ಲ. ಅವರು ಏನಾದರು ಮಾಡಲಿ ಎಂದು ಮಾತನಾಡುತ್ತಾರೆ. ಆದರೆ ನಮಗೆ ಹಾಗಲ್ಲ, ನಮಗೆ ರೂಲ್ ಆಫ್ ಲಾ ಇರಬೇಕು. ನಾಗಮಂಗಲದಲ್ಲಿ ನಮ್ಮ ಪಕ್ಷದವರು ಕೂಡ ಇದ್ದಾರೆ ಎಂದು ಗೊತ್ತಾಯಿತು. ಹಿಂದೆ ಮುಂದೆ ನೋಡದೇ ಕೂಡಲೇ ಕ್ರಮ ಕೈಗೊಂಡಿದ್ದೇವೆ. ತಪ್ಪು ಮಾಡುವವರು ಎಲ್ಲಾ ಪಕ್ಷದಲ್ಲೂ ಇರ್ತಾರೆ. ಕಾನೂನಿನ ಕ್ರಮ ಇದ್ದಾಗಷ್ಟೇ ಜನರಿಗೆ ವಿಶ್ವಾಸ ಹುಟ್ಟುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಅಶೋಕ್ ಆಗ್ರಹ

  • ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ – ಬಿ.ಸಿ ರೋಡ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ

    ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ – ಬಿ.ಸಿ ರೋಡ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ

    – ಬೈಕ್ ರ‍್ಯಾಲಿ ವೇಳೆ ಹಸಿರು ಬಾವುಟ ಪ್ರದರ್ಶನ – ಬಜರಂಗದಳ, ವಿಹೆಚ್‌ಪಿ ಆಕ್ರೋಶ

    ಮಂಗಳೂರು: ಈದ್ ಮಿಲಾದ್ (Eid Milad) ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ (Bike Rally) ಪೊಲೀಸರು ಅನುಮತಿ ನೀಡಿದ ಬಳಿಕ ಬಂಟ್ವಾಳ (Bantwal) ತಾಲೂಕಿನ ಬಿ.ಸಿ ರೋಡ್‌ನಲ್ಲಿ (B C Road) ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

    ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿತ್ತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪೊಲೀಸರು ಈದ್ ಮಿಲಾದ್ ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿ ಅನುಮತಿ ನೀಡಿದ್ದರು. ಈ ವೇಳೆ ಬೈಕ್ ರ‍್ಯಾಲಿ ಮಾಡುತ್ತಾ ಯುವಕರು ಹಸಿರು ಧ್ವಜವನ್ನು ಹಾರಿಸಿದರು. ಇದನ್ನು ಕಂಡ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರ‍್ಯಾಲಿ ವಿರೋಧಿಸಿ ಬಜರಂಗದಳ ಹಾಗೂ ವಿಹೆಚ್‌ಪಿ ಹಿಂದೂ ಸಂಘಟನೆಗಳು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಈದ್‌ ಮೆರವಣಿಗೆಗೆ ಪ್ರತಿಯಾಗಿ ಬಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋಗೆ ಕರೆ

    ಅಲ್ಲದೇ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಬಳಿಕ ಎಚ್ಚೆತ್ತ ಪೊಲೀಸರು ಮುಸ್ಲಿಂ ಯುವಕರಿಂದ ಹಸಿರು ಧ್ವಜ ಹಾಗೂ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ಏನಿದರ ಹಿನ್ನೆಲೆ?
    ಬಜರಂಗದಳ (Bajarangadala) ಹಾಗೂ ವಿಹೆಚ್‌ಪಿಯಿಂದ (VHP) ಬಿ.ಸಿ ರೋಡ್ ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್‌ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು.ಇದನ್ನೂ ಓದಿ: ಈದ್ ಮಿಲಾದ್, ಹಿಂದೂ ಸಂಘಟನೆ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿದೆ: ದ.ಕ ಎಸ್ಪಿ

    ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಮುಸ್ಲಿಂ ಯುವಕರ ಬೈಕ್ ರ‍್ಯಾಲಿಗೆ ಅನುಮತಿ ನೀಡಿದ್ದು, ಬೈಕ್ ರ‍್ಯಾಲಿ ವೇಳೆ ಮುಸ್ಲಿಂ ಯುವಕರು ಹಸಿರು ಬಾವುಟ ಹಾರಿಸಿರುವುದು ತ್ರೀವ ಆಕ್ರೋಶ ಉಂಟಾಗಿದೆ. ಮತ್ತೆ ಉದ್ವಿಗ್ನ ಪರಿಸ್ಥಿತಿ ತಲುಪಿದೆ.

  • ಈದ್ ಮಿಲಾದ್, ಹಿಂದೂ ಸಂಘಟನೆ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿದೆ: ದ.ಕ ಎಸ್ಪಿ

    ಈದ್ ಮಿಲಾದ್, ಹಿಂದೂ ಸಂಘಟನೆ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿದೆ: ದ.ಕ ಎಸ್ಪಿ

    ಮಂಗಳೂರು: ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಗಿರೀಶ್.ಎನ್  (Girish.N) ತಿಳಿಸಿದ್ದಾರೆ.

    ಬಜರಂಗದಳ ಹಾಗೂ ವಿಹೆಚ್‌ಪಿಯಿಂದ ಬಿ.ಸಿ ರೋಡ್ (B C Road) ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್‌ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಈದ್‌ ಮೆರವಣಿಗೆಗೆ ಪ್ರತಿಯಾಗಿ ಬಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋಗೆ ಕರೆ

    ಪೊಲೀಸರ ಬಿಗಿ ಬಂದೋಬಸ್ತಿನಿಂದಾಗಿ ಬಿ.ಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿರುವ ಕುರಿತು ದ.ಕ ಎಸ್ಪಿ ಎನ್. ಯತೀಶ್ (N. Yatish) ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಎನ್.ಯತೀಶ್ ಮಾತನಾಡಿ, ಬಂಟ್ವಾಳದ ಬಿ.ಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ದ.ಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ರೂಟ್ ಬದಲಾವಣೆ ನಾವು ಮಾಡಿಲ್ಲ. ಹಿಂದೂ ಸಂಘಟನೆಯವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು. ಹಾಗಾಗಿ ಬಿ.ಸಿ ರೋಡ್ ಜಂಕ್ಷನ್‌ನಲ್ಲಿ ಅವಕಾಶ ನೀಡಿದ್ದೇವು. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇವೆ ಅಷ್ಟೇ ಎಂದು ತಿಳಿಸಿದರು.

    ಪ್ರಚೋದನಾಕಾರಿ ಆಡಿಯೋ ಹರಿಬಿಟ್ಟ ಇಬ್ಬರ ಮೇಲೆಯೂ ಕ್ರಮವಾಗಿದೆ. ಶರೀಫ್ ಹಾಗೂ ಹಸೀನಾರ್ ಇಬ್ಬರನ್ನು ಬಂಧಿಸಿದ್ದೇವೆ. ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಮುನ್ನವೇ ಶಾಂತಿ ಸಭೆ ಮಾಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಬಿ.ಸಿ ರೋಡಿನಲ್ಲಿ ಬಂದೋಬಸ್ತ್ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

    ಮತ್ತೋರ್ವ ಅಧಿಕಾರಿ ಗಿರೀಶ್.ಎನ್ ಮಾತನಾಡಿ, ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಿ.ಸಿ.ರೋಡ್ ಚಲೋ ಹಾಗೂ ಈದ್ ಮಿಲಾದ್ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಘಟನೆಗೆ ಕಾರಣವಾದ ಆಡಿಯೋ ಹರಿಬಿಟ್ಟಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು?