Tag: Eid al-Fitr

  • ರಂಜಾನ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ – 17 ಮಂದಿ ದುರ್ಮರಣ

    ರಂಜಾನ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ – 17 ಮಂದಿ ದುರ್ಮರಣ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ (Accident) 17 ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, 41 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಟ್ರಕ್ ಮಿತಿಮೀರಿದ ವೇಗದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಯಾತ್ರಾರ್ಥಿಗಳು ಈದ್ ಅಲ್-ಫಿತರ್ (Eid al-Fitr) ರಜೆಯ ಹಿನ್ನೆಲೆಯಲ್ಲಿ ನೈರುತ್ಯ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕೇಂದ್ರವೊಂದಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕ ಟ್ರಕ್‍ನಿಂದ ಜಿಗಿದಿದ್ದು, ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜೋತಿಷ್ಯ ಪ್ರಭಾವ – ಸಂಗಾತಿ, ಮಕ್ಕಳನ್ನ ಕೊಂದು ತಾನೂ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಜನರ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ರಸ್ತೆ ಸುರಕ್ಷತಾ ಕ್ರಮಗಳು ಸಡಿಲವಾಗಿದ್ದು, ಚಾಲಕ ತರಬೇತಿಯು ಕಳಪೆಯಾಗಿದೆ. ಇದರೊಂದಿಗೆ ಸಾರಿಗೆ ಮೂಲಸೌಕರ್ಯವು ಕ್ಷೀಣಿಸುತ್ತಿದೆ. ಇದರಿಂದ ರಸ್ತೆ ಅಪಘಾತಗಳು ಪಾಕ್‍ನಲ್ಲಿ ಸಾಮಾನ್ಯವಾಗಿದೆ.

    ಜನವರಿ 2023 ರಲ್ಲಿ, ತೈಲದ ಕಂಟೇನರ್‍ಗಳನ್ನು ತುಂಬಿದ ಟ್ರಕ್ ಹಾಗೂ ಬಸ್ ಬಲೂಚಿಸ್ತಾನ್ ಪ್ರಾಂತ್ಯದ ಕಂದಕಕ್ಕೆ ಉರುಳಿ ಸಂಭವಿಸಿದ್ದ ಅಪಘಾತದಲ್ಲಿ 41 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗುವ ಸಮಯ ಬಂದಿದೆ: ಕಿಮ್ ಜಾಂಗ್ ಉನ್

  • ಇಂದು ಎಲ್ಲೆಲ್ಲಿ ಮದ್ಯ ಸಿಗಲ್ಲ?- ದೇಶದಲ್ಲಿ ಎಣ್ಣೆ ಸಿಗದ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    ಇಂದು ಎಲ್ಲೆಲ್ಲಿ ಮದ್ಯ ಸಿಗಲ್ಲ?- ದೇಶದಲ್ಲಿ ಎಣ್ಣೆ ಸಿಗದ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    ನವದೆಹಲಿ: ಇಂದು ದೇಶಾದ್ಯಂತ ರಂಜಾನ್‌ ಅಥವಾ ಈದ್ ಉಲ್ ಫಿತರ್ (Eid al-Fitr) ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ನಿಮಿತ್ತ ಇಂದು ಹಲವಾರು ರಾಜ್ಯಗಳು ಮತ್ತು ನಗರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

    ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ಇಲಾಖೆ ವಿವರವಾದ ಆದೇಶವನ್ನು ಬಿಡುಗಡೆ ಮಾಡಿತು. ಈದ್ ಹಬ್ಬ ಸೇರಿದಂತೆ ನಗರದಲ್ಲಿ 5 ದಿನಗಳನ್ನು ʼDry Dayʼ ಎಂದು ಘೋಷಿಸಿತು. ಈದ್ (ಏಪ್ರಿಲ್ 11), ರಾಮ ನವಮಿ (ಏಪ್ರಿಲ್ 17) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ರಂದು ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿತ್ತು.

    ಇದರ ಜೊತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಡಿ ಭಾಗಗಳಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಸಂಜೆ 6ರಿಂದ 26ರ ಸಂಜೆ 6ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ!

    ದೇಶದಲ್ಲಿ ಯಾವ ದಿನ ಮದ್ಯ ಸಿಗಲ್ಲ..? : ಏಪ್ರಿಲ್‌ 14: ಅಂಬೇಡ್ಕರ್ ಜಯಂತಿ, ಏಪ್ರಿಲ್ 17: ರಾಮ ನವಮಿ, ಏಪ್ರಿಲ್ 21: ಮಹಾವೀರ ಜಯಂತಿ, ಮೇ 1: ಮಹಾರಾಷ್ಟ್ರ ದಿನ (ಮಹಾರಾಷ್ಟ್ರದಲ್ಲಿ ಮಾತ್ರ), ಮೇ 23: ಬುದ್ಧ ಪೂರ್ಣಿಮೆ, ಮೇ 17: ಬಕ್ರೀದ್, ಜುಲೈ 17: ಮೊಹರಂ ಮತ್ತು ಆಷಾದಿ ಏಕಾದಶಿ, ಜುಲೈ 21: ಗುರು ಪೂರ್ಣಿಮೆ, ಆಗಸ್ಟ್ 15: ಸ್ವಾತಂತ್ರ್ಯ ದಿನ, ಆಗಸ್ಟ್ 2: ಜನ್ಮಾಷ್ಠಮಿ, ಸೆಪ್ಟೆಂಬರ್ 7: ಗಣೇಶ ಚತುರ್ಥಿ (ಮಹಾರಾಷ್ಟ್ರದಲ್ಲಿ ಮಾತ್ರ), ಸೆಪ್ಟೆಂಬರ್ 17: ಈದ್-ಎ-ಮಿಲಾದ್ ಮತ್ತು ಅನಂತ ಚತುರ್ದಶಿ.

    ಅಕ್ಟೋಬರ್ 2: ಗಾಂಧಿ ಜಯಂತಿ, ಅಕ್ಟೋಬರ್ 12: ದಸರಾ, ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ, ನವೆಂಬರ್ 1: ದೀಪಾವಳಿ, ನವೆಂಬರ್ 12: ಕಾರ್ತಿಕಿ ಏಕಾದಶಿ, ನವೆಂಬರ್ 15: ಗುರುನಾನಕ್ ಜಯಂತಿ, ಡಿಸೆಂಬರ್ 25: ಕ್ರಿಸ್ಮಸ್ ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.

    ಈದ್ ಉಲ್-ಫಿತರ್: ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ 10 ನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಈದ್ ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಇದು ತಿಂಗಳ ಅವಧಿಯ ರಂಜಾನ್ ಉಪವಾಸ ಮತ್ತು ಶವ್ವಾಲ್ ಆರಂಭವನ್ನು ಸೂಚಿಸುತ್ತದೆ. ಹಿಂದಿನಿಂದಲೂ ಇಸ್ಲಾಮಿಕ್ ಸಂಸ್ಕೃತಿಯ ಭಾಗವಾಗಿರುವ ಚಂದ್ರನ ದರ್ಶನದಿಂದಾಗಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಪ್ರವಾದಿ ಮುಹಮ್ಮದ್ ಹೊಸ ತಿಂಗಳ ಆರಂಭವನ್ನು ಸೂಚಿಸಿದಂತೆ ಅರ್ಧಚಂದ್ರನ ದೃಶ್ಯಗಳ ಸುದ್ದಿಗಾಗಿ ಕಾಯುತ್ತಿದ್ದರು ಎಂದು ನಂಬಲಾಗಿದೆ.

  • ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಮಂದಿ ಬಲಿ

    ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಮಂದಿ ಬಲಿ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಾಬೂಲ್ ಪೊಲೀಸರ ವಕ್ತಾರ ಫರ್ಡಾವ್ಸ್ ಫ್ರಮುರ್ಜ್, ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದ್ದು, ಘಟನೆ ವೇಳೆ 15 ಮಂದಿ ಗಾಯಗೊಂಡಿದ್ದಾರೆ ಮತ್ತು ಮಸೀದಿಯ ಇಮಾಮ್ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಗುರುವಾರ ತಾಲಿಬಾನ್ ಉಗ್ರರು ಮತ್ತು ಸರ್ಕಾರಿ ಮಿಲಿಟರಿ ಸೈನಿಕರ ನಡುವೆ ಈದ್ ಅಲ್-ಫಿತರ್ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ನಡೆದು ತಾತ್ಕಾಲಿಕ ಒಪ್ಪಂದ ನಡೆದಿತ್ತು. ಆದರೆ ಮಾತುಕತೆಯ ಮರು ದಿನವೇ ಸ್ಫೋಟ ಸಂಭವಿಸಿದೆ.