Tag: egypt

  • ಇಸ್ರೇಲ್‌ ನಿಯಂತ್ರಣವಿಲ್ಲದ ಏಕೈಕ ಕ್ರಾಸಿಂಗ್‌ ದಾಟಿ ಈಜಿಪ್ಟ್‌ಗೆ ಹೊರಟ ವಿದೇಶಿಯರು

    ಇಸ್ರೇಲ್‌ ನಿಯಂತ್ರಣವಿಲ್ಲದ ಏಕೈಕ ಕ್ರಾಸಿಂಗ್‌ ದಾಟಿ ಈಜಿಪ್ಟ್‌ಗೆ ಹೊರಟ ವಿದೇಶಿಯರು

    ದೋಹಾ: ಯುದ್ಧ ಪೀಡಿತ ಗಾಜಾ (Gaza) ಪಟ್ಟಿಯಿಂದ ಈಜಿಪ್ಟ್‌ಗೆ ತೆರಳಲು ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರ ಮೊದಲ ಗುಂಪಿಗೆ ಅನುಮತಿ ನೀಡಲಾಗಿದೆ ಎಂದು ರಫಾ (Rafah Crossing) ಗಡಿ ದಾಟುವ ಈಜಿಪ್ಟ್ (Egypt) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರ ಮೊದಲ ಗುಂಪು ರಫಾ ಟರ್ಮಿನಲ್ ಮೂಲಕ ಈಜಿಪ್ಟ್‌ಗೆ ಹೋಗಲಿದೆ. ಸುಮಾರು 400 ವಿದೇಶಿಯರು ಮತ್ತು ಸ್ಥಳೀಯ ಪ್ರಜೆಗಳು ಬುಧವಾರ ಗಡಿ ದಾಟುವ ನಿರೀಕ್ಷೆಯಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

    ಇಸ್ರೇಲಿ (Israel) ವಾಯುದಾಳಿಯಿಂದಾಗಿ ಗಾಜಾದಲ್ಲಿ ಗಾಯಗೊಂಡ ವಿದೇಶಿಯರು ರಫಾ ಗಡಿ ದಾಟುವ ಮೂಲಕ ಈಜಿಪ್ಟ್‌ಗೆ ಹೋಗುತ್ತಿದ್ದಾರೆ. ಇಸ್ರೇಲ್‌ ನಿಯಂತ್ರಣದಲ್ಲಿ ಇಲ್ಲದ ಗಾಜಾದಲ್ಲಿನ ಏಕೈಕ ಕ್ರಾಸಿಂಗ್‌ ಇದಾಗಿದೆ.

    ಗಾಯಗೊಂಡ ನೂರಾರು ಗಾಜಾ ನಿವಾಸಿಗಳು ಮತ್ತು ವಿದೇಶಿಗರು ಇಂದು ಈಜಿಪ್ಟ್ ಗಡಿಯಲ್ಲಿ ಜಮಾಯಿಸಿದ್ದರು. ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಮಾರಣಾಂತಿಕ ದಾಳಿ ನಡೆಸುತ್ತಿದೆ. ಇದರಿಂದ ತತ್ತರಿಸಿ ಹೋಗಿರುವ ಜನ ಬೇರೆಡೆಗೆ ವಲಸೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ವಿಮಾನ ಪತನ – ಮಗು ಸೇರಿ 12 ಮಂದಿ ಸಾವು

    ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ಹಮಾಸ್ ದಾಳಿ ನಡೆಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ 24 ಲಕ್ಷ ಜನರಿರುವ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ಬಾಂಬ್‌ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ 44 ದೇಶಗಳ ಪಾಸ್‌ಪೋರ್ಟ್ ಹೊಂದಿರುವ ವಿದೇಶಿ ಪ್ರಜೆಗಳು ಸಂಕಷ್ಟದಲ್ಲಿದ್ದಾರೆ.

    ಗಾಜಾದಲ್ಲಿ ಆರೋಗ್ಯ ಸಚಿವಾಲಯದ ಪ್ರಕಾರ, ಬಾಂಬ್ ದಾಳಿಯಲ್ಲಿ 8,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಈ ಭಾಗವು ನೀರು, ಆಹಾರ, ವಿದ್ಯುತ್‌ ಸಮಸ್ಯೆ ಎದುರಿಸುತ್ತಿದೆ. ಇದನ್ನೂ ಓದಿ: ಫೇಸ್‍ಬುಕ್ ಗೆಳೆಯನಿಗಾಗಿ ಪಾಕ್‍ಗೆ ತೆರಳಿದ್ದಾಕೆಗೆ ಈಗ ಮಕ್ಕಳನ್ನು ನೋಡುವ ಬಯಕೆ!

    ಗಂಭೀರ ಅನಾರೋಗ್ಯ, ಗಾಯಗೊಂಡ ಪ್ಯಾಲೆಸ್ತೀನಿಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಈಜಿಪ್ಟ್‌ಗೆ ಬರಲು ಮೊದಲ ಪ್ರಾಮುಖ್ಯತೆ ನೀಡಲಾಗುವುದು ಈಜಿಪ್ಟ್‌ ಹೇಳಿದೆ. ಈಜಿಪ್ಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ 88 ಜನರನ್ನು ಕರೆದೊಯ್ಯುವ ನಿರೀಕ್ಷೆಯಿದೆ ಎಂದು ಪ್ಯಾಲೇಸ್ಟಿನಿಯನ್ ಮೂಲಗಳು ತಿಳಿಸಿವೆ.

    ಗಾಜಾದಲ್ಲಿನ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ದಾಳಿ ನಡೆಸಿದ್ದರಿಂದ ಕ್ರಾಸಿಂಗ್ ತೆರೆಯುವ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೈರೋದ ಗಿಜಾ ಪಿರಮಿಡ್‌ಗೆ ಭೇಟಿ ನೀಡಿದ ಮೋದಿ

    ಕೈರೋದ ಗಿಜಾ ಪಿರಮಿಡ್‌ಗೆ ಭೇಟಿ ನೀಡಿದ ಮೋದಿ

    ಕೈರೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಈಜಿಪ್ಟ್ (Egypt) ರಾಜಧಾನಿಯ ಹೊರವಲಯದಲ್ಲಿರುವ ಗಿಜಾದ ದೈತ್ಯ ಪಿರಮಿಡ್‌ಗಳನ್ನು (Giza Pyramid) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ವೀಕ್ಷಿಸಿದ್ದಾರೆ.

    ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ತೆರಳಿದ ಮೋದಿ ಉತ್ತರ ಈಜಿಪ್ಟ್‌ನ ಅಲ್-ಜಿಜಾ (ಗಿಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4ನೇ ರಾಜವಂಶದ 3 ಪಿರಮಿಡ್‌ಗಳಿಗೆ ಭೇಟಿ ನೀಡಿದರು.

    ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಹಾಗೂ ಪ್ರಾಚೀನ ಸಾಮ್ರಾಜ್ಯದ 4ನೇ ರಾಜವಂಶದ ಅಡಿಯಲ್ಲಿ ಆಳಿದ ಫೇರೋ ಖುಫು ಅವರ ಸಮಾಧಿಯ ಬಗ್ಗೆ ಮೋದಿ ಮಾಹಿತಿಗಳನ್ನು ಪಡೆದುಕೊಂಡರು. 26ನೇ ಶತಮಾನದಲ್ಲಿ ಸುಮಾರು 27 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾದ ಈ ಪಿರಮಿಡ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಇದು ಹಳೆಯದೂ ಆಗಿದ್ದು, ಬಹುಮಟ್ಟಿಗೆ ಹಾಗೇ ಉಳಿದುಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ನೀಡಿ ಗೌರವಿಸಿದ ಈಜಿಪ್ಟ್

    ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಈಜಿಪ್ಟ್ ಪ್ರವಾಸದಲ್ಲಿದ್ದಾರೆ. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ.

    ಮೋದಿ ಭಾನುವಾರ ಮುಂಜಾನೆ ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಹಾಗೂ ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

  • ಪ್ರಧಾನಿ ಮೋದಿಗೆ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ನೀಡಿ ಗೌರವಿಸಿದ ಈಜಿಪ್ಟ್

    ಪ್ರಧಾನಿ ಮೋದಿಗೆ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ನೀಡಿ ಗೌರವಿಸಿದ ಈಜಿಪ್ಟ್

    ಕೈರೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಈಜಿಪ್ಟ್‌ನ (Egypt) ಅತ್ಯುನ್ನತ ರಾಜ್ಯ ಗೌರವವಾದ ʼಆರ್ಡರ್ ಆಫ್ ದಿ ನೈಲ್’ (Order Of The Nile) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

    ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ (Abdel Fattah El-Sisi) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ದಿ ನೈಲ್ ಅನ್ನು ನೀಡಿ ಗೌರವಿಸಿದ್ದಾರೆ. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿ ಅವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.

    ಏನಿದರ ವಿಶೇಷತೆ?
    ನೈಲ್ ಎಂಬುದು ಈಜಿಪ್ಟ್‌ನ ಪ್ರಮುಖ ನದಿಯಾಗಿದೆ. ಭಾರತಕ್ಕೆ ಗಂಗಾ ನದಿಯಂತೆ ಈಜಿಪ್ಟ್‌ಗೆ ನೈಲ್ ನದಿ ಪ್ರಮುಖವಾದುದು. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ನದಿಯೂ ಆಗಿರುವುದರಿಂದ ಈಜಿಪ್ಟ್‌ನ ಅತ್ಯುನ್ನತ ಪ್ರಶಸ್ತಿಗೆ ನೈಲ್ ನದಿಯ ಹೆಸರು ಇಡಲಾಗಿದೆ.

    ಈಜಿಪ್ಟ್‌ನ ಪ್ರೆಸಿಡೆನ್ಸಿಯ ವೆಬ್‌ಸೈಟ್ ಪ್ರಕಾರ ಆರ್ಡರ್ ಆಫ್ ದಿ ನೈಲ್ ಎಂಬುದು 3 ಚದರ ಯುನಿಟ್‌ಗಳನ್ನೊಳಗೊಂಡ ಶುದ್ಧ ಚಿನ್ನದ ಮಾಲೆಯಾಗಿದೆ. ಅದರ ಮೇಲೆ ಫರೋನಿಕ್ ಚಿಹ್ನೆಗಳಿವೆ. ಮೊದಲ ಯುನಿಟ್‌ನಲ್ಲಿ ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೇ ಘಟಕದಲ್ಲಿ ನೈಲ್ ನದಿಯಿಂದಾದ ಸಮೃದ್ಧಿ ಹಾಗೂ ಸಂತೋಷವನ್ನು ಹೋಲುತ್ತದೆ ಮತ್ತು ಮೂರನೇ ಘಟಕದಲ್ಲಿ ಸಂಪತ್ತು ಹಾಗೂ ಸಹಿಷ್ಣುತೆಯನ್ನು ಸೂಚಿಸುತ್ತದೆ.

    ಅಮೂಲ್ಯ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ವೃತ್ತಾಕಾರದ ಚಿನ್ನದ ಹೂವಿನ ಘಟಕಗಳು ಒಂದಕ್ಕೊಂದು ಸಂಪರ್ಕಿಸಿವೆ. ಮಾಲೆಯಲ್ಲಿ ಷಡ್ಭುಜಾಕೃತಿಯ ಪೆಂಡೆಂಟ್ ಇದ್ದು, ಅದರಲ್ಲಿ ಫರೋನಿಕ್ ಶೈಲಿಯ ಹೂವುಗಳು ಹಾಗೂ ರತ್ನಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ: ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

    26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್ಗೆ ಭೇಟಿ ನೀಡಿದ್ದಾರೆ. ಭಾನುವಾರ ಮುಂಜಾನೆ ಮೋದಿ ಅವರು ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಹಾಗೂ ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಈಜಿಪ್ಟ್‌ನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ತಮ್ಮ ರಾಷ್ಟ್ರಕ್ಕೂ  ಭೇಟಿ ನೀಡುವಂತೆ ಆಹ್ವಾನಿಸಿದರು. ಇದನ್ನೂ ಓದಿ: ಈಜಿಪ್ಟ್‌ನಲ್ಲಿ ‘ಯೇ ದೋಸ್ತಿ’ ಹಾಡು ಹೇಳಿ ಮೋದಿ ಸ್ವಾಗತಿಸಿದ ಮಹಿಳೆಯರು

  • ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

    ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

    – ಭಾರತದ ದಾವೂದಿ ಬೊಹ್ರಾ ಸಮುದಾಯ ನೆರವಿನಿಂದ ಪುನಃಸ್ಥಾಪಿಸಿದ್ದ ಮಸೀದಿ ಅಲ್‌-ಹಕೀಮ್‌

    ಕೈರೋ: ಅಮೆರಿಕದಿಂದ (America) ನೇರವಾಗಿ ಈಜಿಪ್ಟ್‌ಗೆ 2 ದಿನ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಸಾವಿರ ವರ್ಷ ಹಳೆಯದಾದ ಅಲ್‌-ಹಕೀಮ್‌ ಮಸೀದಿಗೆ (Al-Hakim Mosque) ಭೇಟಿ ನೀಡಿದರು.

    ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ ಕೈರೋದಲ್ಲಿನ 11 ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆ ನೋಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಜಿಪ್ಟ್‌ನಲ್ಲಿ ‘ಯೇ ದೋಸ್ತಿ’ ಹಾಡು ಹೇಳಿ ಮೋದಿ ಸ್ವಾಗತಿಸಿದ ಮಹಿಳೆಯರು

    ಮಸೀದಿ ವಿಶೇಷತೆ ಏನು?
    ಸಾವಿರ ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಕೈರೋದಲ್ಲಿನ 4ನೇ ಅತ್ಯಂತ ಹಳೆಯ ಮಸೀದಿಯಾಗಿದೆ. ನಗರದಲ್ಲಿ ನಿರ್ಮಿಸಲಾದ ಎರಡನೇ ಫಾತಿಮಿಡ್ ಮಸೀದಿಯಾಗಿದೆ. ಮಸೀದಿಯು 13,560 ಚದರ ಮೀಟರ್‌ಗಳಷ್ಟು ವಿಸ್ತೀರ್ಣ ಹೊಂದಿದೆ. ಸಾಂಪ್ರದಾಯಿಕ ಕೇಂದ್ರ ಪ್ರಾಂಗಣವು 5,000 ಚದರ ಮೀಟರ್‌ ವೀಸ್ತೀರ್ಣವಿದೆ.

    ದಾವೂದಿ ಬೋಹ್ರಾ ಮುಸ್ಲಿಮರು ಇಸ್ಲಾಂ ಅನುಯಾಯಿಗಳಲ್ಲಿ ಒಂದು ಪಂಗಡ. ಅವರು 11 ನೇ ಶತಮಾನದಲ್ಲಿ ಭಾರತದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಮೊದಲು ಈಜಿಪ್ಟ್‌ನಿಂದ ಯೆಮೆನ್‌ಗೆ ಸ್ಥಳಾಂತರಗೊಂಡಿದ್ದರು. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

    ಮಸೀದಿ ಭೇಟಿ ಬಳಿಕ ಮೋದಿ ಅವರು, ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ವೀರಾವೇಶದಿಂದ ಹೋರಾಡಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಇಲ್ಲಿ ಮೊದಲ ವಿಶ್ವಯುದ್ಧದಲ್ಲಿ ಸುಮಾರು 4,000 ಭಾರತೀಯ ಯೋಧರು ಹುತಾತ್ಮರಾಗಿದ್ದರು.

  • ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಮೊದಲ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮತ್ತು ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಸೋಮವಾರ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ (USA, Egypt Tour) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜೂನ್ 24 ಮತ್ತು 25 ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ ಎಂದರು.

    ಈ ವರ್ಷದ ಗಣರಾಜೋತ್ಸವದಲ್ಲಿ ಈಜಿಪ್ಟ್ ಪ್ರಧಾನಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು, ಆನಂತರ ಎರಡು ದೇಶಗಳ ನಡುವಿನ ಒಡನಾಟ ಹೆಚ್ಚಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಜಿಪ್ಟ್‌ಗೆ ಭೇಟಿ ನೀಡಿದ್ದರು. ಈಜಿಪ್ಟ್‌ನ ಮೂರ್ನಾಲ್ಕು ಮಂದಿ ಸಚಿವರು ತಮ್ಮ ನಿಯೋಗದೊಂದಿಗೆ ಭಾರತಕ್ಕೆ ಬಂದಿದ್ದರು. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ಕೈರೋ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಭಾರತದ ಘಟಕದೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ಈಜಿಪ್ಟ್‌ನಲ್ಲಿರುವ ಸಣ್ಣ ಭಾರತೀಯ ಸಮುದಾಯದೊಂದಿಗೆ ಸಭೆ ನಡೆಸಲಿದ್ದಾರೆ. ಈಜಿಪ್ಟ್‌ನ ಕೆಲವು ಪ್ರಮುಖ ಗಣ್ಯರನ್ನ ಭೇಟಿ ಮಾಡಿದ ಬಳಿಕ ಅವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.

    ಅಲ್-ಹಕೀಮ್ ಮಸೀದಿ (Al-Hakim Mosque) 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಸದ್ಯ ಮತ್ತು ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ (World War) ಈಜಿಪ್ಟ್‌ಗಾಗಿ ಹೋರಾಡಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ಬಳಿಕ ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷರನ್ನ ಭೇಟಿ ಮಾಡಲಿದ್ದಾರೆ. ಇಲ್ಲಿ ಈಜಿಪ್ಟ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು, ವಿವಿಧ ಎಂಒಯುಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಈ ಒಪ್ಪಂದ ಎರಡು ದೇಶಗಳ‌ ನಡುವಿನ ವ್ಯಾಪಾರ, ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಕ್ವಾತ್ರಾ ಹೇಳಿದರು.

  • ಮೋದಿ ಅಮೆರಿಕ ಪ್ರವಾಸ – ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ, ಮೊದಲ ಬಾರಿ ಈಜಿಪ್ಟ್‌ಗೆ ನಮೋ

    ಮೋದಿ ಅಮೆರಿಕ ಪ್ರವಾಸ – ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ, ಮೊದಲ ಬಾರಿ ಈಜಿಪ್ಟ್‌ಗೆ ನಮೋ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 20ರಿಂದ ಅಮೆರಿಕ (America) ಪ್ರವಾಸ ಕೈಗೊಳ್ಳಲಿದ್ದು ಜೂನ್ 22 ರಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

    ಮೋದಿ ಅದೇ ದಿನ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಾಷಿಂಗ್ಟನ್‌ನಲ್ಲಿ ಮೋದಿ ಪ್ರಮುಖ ಸಿಇಒಗಳು, ವೃತ್ತಿಪರರು, ಇತರೆ ಉದ್ಯಮಿಗಳ ಜೊತೆ ಸಂವಾದಗಳನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

    ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಜೂನ್ 21 ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ (International Yoga Day) ಆಚರಣೆಯನ್ನು ಪ್ರಧಾನ ಮಂತ್ರಿ ಮೋದಿ ಮುನ್ನಡೆಸಲಿದ್ದಾರೆ.

    ಜೂನ್ 21 ರಂದು ಆಚರಿಸಲಾಗುವ 9ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೊದಲ ಬಾರಿಗೆ ಯೋಗ ಅಧಿವೇಶನವನ್ನು ಮುನ್ನಡೆಸಲಿದ್ದಾರೆ. ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಗುರಿಯನ್ನು ಅಂತಾರಾಷ್ಟ್ರೀಯ ಯೋಗ ದಿನ ಹೊಂದಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಜೂನ್ 23 ರಂದು ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ವಿಶೇಷ ಆಹ್ವಾನಿತ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. 15 ಭಾರತೀಯ ರಾಜ್ಯಗಳನ್ನು ಪ್ರತಿನಿಧಿಸುವ 25 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲು 160 ಕ್ಕೂ ಹೆಚ್ಚು ಕಲಾವಿದರು ಕಳೆದ ವಾರದಿಂದ ಅಮೆರಿಕದಲ್ಲಿ ತಾಲೀಮು ನಡೆಸುತ್ತಿದ್ದಾರೆ. ಬಹುತೇಕ ಕಲಾವಿದರು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರಲಿದ್ದಾರೆ.

    ಜೂನ್ 24-25 ರಂದು ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್‌ನ (Egypt) ಕೈರೋಗೆ ತೆರಳಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಆಹ್ವಾನದ ಮೇರೆಗೆ ಮೋದಿ ತೆರಳುತ್ತಿದ್ದು ಇದು ಅವರ ಮೊದಲ ಈಜಿಪ್ಟ್ ಭೇಟಿಯಾಗಲಿದೆ. ಮಾತ್ರವಲ್ಲದೇ ಇದೊಂದು ಐತಿಹಾಸಿಕ ಕಾರ್ಯಕ್ರವಾಗಲಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

  • ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಕೈರೋ: ಸಮುದ್ರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಪ್ರವಾಸಿಗನ (Russian Tourist) ಮೇಲೆ ಟೈಗರ್ ಶಾರ್ಕ್ ದಾಳಿ ನಡೆಸಿ, ತನ್ನ ತಂದೆ ಎದುರೇ ಕೊಂದು ತಿಂದಿರುವ ಘಟನೆ ಈಜಿಪ್ಟ್‌ನ (Egypt) ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್‌ನಲ್ಲಿ ನಡೆದಿದೆ.

    ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಪ್ರವಾಸಿಗ ವ್ಲಾಡಿಮಿರ್ ಪೊಪೊವ್ (23) ಎಂದು ಗುರುತಿಸಲಾದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್ನ ಪರಿಸರ ಸಚಿವಾಲಯ ತಿಳಿಸಿದೆ.

    ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಮೀ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಮೃತನ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಪಾರ್ಕ್‌ನಲ್ಲಿ ಆಡುತ್ತಿದ್ದ ಶಾಲಾ ಮಕ್ಕಳ ಮೇಲೆ ಮನಬಂದಂತೆ ಚಾಕುವಿನಿಂದ ಇರಿತ – 3 ಮಕ್ಕಳ ಸ್ಥಿತಿ ಗಂಭೀರ

    ಏನಿದು ಘಟನೆ?
    ಶಾರ್ಕ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್ನಿಂದ ತಪ್ಪಿಸಿಕೊಳ್ಳಲು ಪ್ರವಾಸಿಗ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿದ್ದಾನೆ. ಈ ವೇಳೆ ಶಾರ್ಕ್ ಎರಡ್ಮೂರು ಬಾರಿ ದಾಳಿ ಮಾಡಿ, ಅಂತಿಮವಾಗಿ ವ್ಯಕ್ತಿಯನ್ನ ನೀರಿನ ಒಳಕ್ಕೆ ಎಳೆದೊಯ್ದಿದೆ. ಲೈಫ್‌ಗಾರ್ಡ್ ಸಹಾಯಕ್ಕಾಗಿ ಕೂಗಿಕೊಂಡರೂ ಆತನನ್ನು ರಕ್ಷಿಸಲು ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ಹೋಗುವಷ್ಟರಲ್ಲೇ ಶಾರ್ಕ್ ಆತನನ್ನು ಮತ್ತಷ್ಟು ನಿರೀನ ಆಳಕ್ಕೆ ಎಳೆದುಕೊಂಡು ಹೋಗಿತ್ತು.

    ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಷ್ಯಾ ರಾಯಭಾರ ಕಚೇರಿ (Embassy of Russia) ಎಚ್ಚರಿಸಿದೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

  • ಚರ್ಚ್‌ಗೆ ಬೆಂಕಿ ಬಿದ್ದು 41 ಮಂದಿ ದುರ್ಮರಣ

    ಚರ್ಚ್‌ಗೆ ಬೆಂಕಿ ಬಿದ್ದು 41 ಮಂದಿ ದುರ್ಮರಣ

    ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಭಾನುವಾರ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಚರ್ಚ್‌ನಲ್ಲಿದ್ದ 41 ಜನರು ಸಾವನ್ನಪ್ಪಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಧಾನಿಯ ವಾಯುವ್ಯ, ಕಾರ್ಮಿಕ ವರ್ಗದ ಜಿಲ್ಲೆಯ ಇಂಬಾಬಾದಲ್ಲಿರುವ ಅಬು ಸಿಫೈನ್ ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಉದ್ಭವಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ಮೂಟೆಗಟ್ಟಲೇ ಗುಟ್ಕಾ, ತಂಬಾಕು ಪ್ಯಾಕೆಟ್‍ ಪತ್ತೆ

    ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ಪ್ರದೇಶಗಳಿಂದ ಸೇವೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಹಿಂದೆ ಆಪ್ತ ಸ್ನೇಹಿತರೂ ಸೇರಿದ್ದಾರೆ: ತಂದೆ ಆರೋಪ

    ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್‌ನಲ್ಲಿ ಹಲವಾರು ಮಾರಣಾಂತಿಕ ಬೆಂಕಿ ಅವಘಡಗಳು ನಡೆದಿವೆ. 2021ರ ಮಾರ್ಚ್‌ನಲ್ಲಿ ಕೈರೋದ ಜವಳಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು. 2020ರಲ್ಲಿ 2 ಆಸ್ಪತ್ರೆಗಳಲ್ಲಿ ಬೆಂಕಿ ಹೊತ್ತಿದ್ದರಿಂದ 14 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನವದೆಹಲಿ: ಉತ್ಪಾದನೆ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತವು ಗೋಧಿ ರಫ್ತಿಗೆ ನಿಷೇಧ ಹೇರಿತ್ತು. ಆದರೆ ನಿಷೇಧ ಹೇರುವುದಕ್ಕೂ ಮುನ್ನವೇ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ನಿಗದಿತ ಪ್ರಮಾಣದ ಗೋಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಮೇ 13ಕ್ಕೂ ಮುನ್ನವೇ ಕಸ್ಟಮ್ಸ್ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದ್ದು, ಅಂತಹ ಸರಕುಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    Wheat 1

    ಜೊತೆಗೆ ಗೋಧಿ ರಫ್ತು ಮಾಡಲು ತೊಡಗಿರುವ ಮೇರಾ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈ.ಲಿ. ಈಜಪ್ಟ್‌ 61,500 ಮೆಟ್ರಿಕ್ ಟನ್ ಲೋಡ್ ಗೋಧಿ ರಫ್ತಿಗೆ ಅನುಮತಿ ನೀಡಿದೆ. ಅದರಲ್ಲಿ 44,340 ಮೆಟ್ರಿಕ್ ಟನ್ ಈಗಾಗಲೇ ಲೋಡ್ ಮಾಡಲಾಗಿದೆ. ಇನ್ನು 17,160 ಮೆಟ್ರಿಕ್ ಟನ್ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಗೋಧಿಯನ್ನು ಸರಬರಾಜು ಮಾಡಲು ನಿರ್ಧರಿಸಿದೆ ಎಂದು ಹೇಳಿದೆ.

    WHEAT

    ರಫ್ತಿಗೆ ನಿಷೇಧ ಹೇರಿದ್ದು ಏಕೆ?: ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    WHEAT EXPORT

    ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ.

  • ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    ನವದೆಹಲಿ: ಭಾರತದಿಂದ ಗೋಧಿಯನ್ನು ಖರೀದಿಸಲು ಈಜಿಪ್ಟ್‌ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಈಜಿಪ್ಟ್‌ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯನ್ನು ಆಮದು ಮಾಡುತ್ತಿತ್ತು. ಆದರೆ ಯುದ್ಧದಿಂದಾಗಿ ಈಜಿಪ್ಟ್‌ ಈಗ ಭಾರತದಿಂದ 3 ಮಿಲಿಯನ್‌ ಟನ್‌ ಗೋಧಿ ಖರೀದಿಸಲು ಮುಂದಾಗಿದೆ.

    ಈಜಿಪ್ಟ್‌ ದೇಶದ ಕೃಷಿ ಅಧಿಕಾರಿಗಳು ಭಾರತದ ವಿವಿಧ ಸಂಸ್ಕರಣಾ ಘಟಕ, ಬಂದರುಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌ನ ಕೃಷಿ ಭೂಮಿಗಳನ್ನು ವೀಕ್ಷಣೆ ಮಾಡಿದ್ದರು. ಈಗ ಈಜಿಪ್ಟ್‌ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡಲಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ

    ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಹಿನ್ನೆಯಲ್ಲಿ ಗೋಧಿ ಆಮದಿಗಾಗಿ ಈಜಿಪ್ಟ್‌ ಅಧಿಕಾರಿಗಳು ಬೇರೆ ಬೇರೆ ದೇಶಗಳನ್ನು ಸಂಪರ್ಕಿಸಿತ್ತು. ಕಳೆದ ತಿಂಗಳು ದುಬೈನಲ್ಲಿ ಪಿಯೂಶ್‌ ಗೋಯಲ್‌ ಈಜಿಪ್ಟ್‌ ಸರ್ಕಾರದ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧವಾಗಿದೆ ಎಂದು ತಿಳಿಸಿದ್ದರು.

    2021 ರಲ್ಲಿ ಈಜಿಪ್ಟ್ 6.1 ದಶಲಕ್ಷ ಟನ್ (mt) ಗೋಧಿಯನ್ನು ಆಮದು ಮಾಡಿಕೊಂಡಿದೆ. ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿರಲಿಲ್ಲ.

    ರಷ್ಯಾ ಮತ್ತು ಉಕ್ರೇನ್‌ನಿಂದ ಈಜಿಪ್ಟ್‌ ಶೇ.80ರಷ್ಟು ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು 2021ರಲ್ಲಿ ಅಂದಾಜು 2 ಶತಕೋಟಿ ಡಾಲರ್‌ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ.

    ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಶ್ರೀಲಂಕಾ, ಓಮನ್ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆಯಿದ್ದು ಭಾರತ ರಫ್ತು ಮಾಡುತ್ತಿದೆ. ಅಷ್ಟೇ ಅಲ್ಲದೇ ಯೆಮೆನ್, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತು ಹೆಚ್ಚಿಸಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ದನ್ನೂ ಓದಿ: ತಾಯ್ನಾಡಲ್ಲಿ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಅನಾವರಣಗೊಳಿಸಿದ ಮೋದಿ

    2020-21ರವರೆಗೆ ಜಾಗತಿಕ ಗೋಧಿ ವ್ಯಾಪಾರದಲ್ಲಿ ಭಾರತದ ರಫ್ತು ಪ್ರಮಾಣ ಕಡಿಮೆ ಇದೆ. ಭಾರತವು 2019-20 ಮತ್ತು 2020-21 ರಲ್ಲಿ ಕ್ರಮವಾಗಿ ಸುಮಾರು 0.2 ಮತ್ತು 2 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ರಫ್ತು ಮಾಡಿದೆ.

    2021-22ರ ಹಣಕಾಸು ವರ್ಷದಲ್ಲಿ ಭಾರತ 418 ಕೋಟಿ ಡಾಲರ್‌( ಅಂದಾಜು 31.4 ಲಕ್ಷ ಕೋಟಿ ರೂ.) ದಾಖಲೆ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈಗ ಗೋಧಿ ರಫ್ತಿನಿಂದಾಗಿ ರೈತರಿಗೂ ಅನುಕೂಲಕರವಾಗಲಿದೆ.

    ಭಾರತದಿಂದ ಆಹಾರ ಉತ್ಪನ್ನಗಳು ರಫ್ತು ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಆಹಾರ ಪರೀಕ್ಷೆ ಮಾಡುವ ಲ್ಯಾಬ್‌ಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ರೈಲ್ವೇ ಮತ್ತು ವಾಣಿಜ್ಯ ಸಚಿವಾಲಯ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ವೇಗವಾಗಿ ಸರಕು ಬಂದರು ತಲುಪವಂತೆ ಮಾಡಲು ಈಗ ಕೆಲಸ ಮಾಡುತ್ತಿದೆ. ಗೋಧಿಯನ್ನು ತ್ವರಿತವಾಗಿ ರಫ್ತು ಮಾಡಲು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಆಹಾರ ಸಚಿವಾಲಯ ಅಧಿಕಾರಿಗಳ ಪ್ರಕಾರ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಭಾರತ ವಾರ್ಷಿಕ 10 ದಶಲಕ್ಷ ಟನ್‌ ಗೋಧಿ  ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    ಮೋದಿ ಹೇಳಿದ್ದೇನು?
    ಗುಜರಾತ್‌ನ ಅದಾಲಾಜ್‌ನಲ್ಲಿರುವ ಅನ್ನಪೂರ್ಣ ಧಾಮದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ ಉದ್ಘಾಟನೆ ಮಾಡಿದ ಭಾಷಣ ಮಾಡಿದ್ದ ಮೋದಿ, ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಗೆ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.

    ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸುಮಾರು 80 ಕೋಟಿ ಜನರಿಗೆ 2 ವರ್ಷಗಳ ಕಾಲ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದೆ. ಇದನ್ನು ನೋಡಿ ಇಡೀ ವಿಶ್ವವೇ ಬೆರಗಾಗಿದೆ. ಈಗ ಉಕ್ರೇನ್‌-ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಜಗತ್ತು ಆಹಾರದ ಅಭಾವವನ್ನು ಎದುರಿಸುತ್ತಿದೆ. ಹಾಗಾಗಿ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜೊತೆಗಿನ ಮಾತುಕತೆಯ ವೇಳೆ ತಿಳಿಸಿದ್ದೇನೆ ಎಂದು ಹೇಳಿದ್ದರು.