Tag: eggs

  • ಮೊಟ್ಟೆ ಪ್ರಿಯರು ಮಾಡಿ ಸವಿಯಿರಿ ‘ಎಗ್ ಫಿಂಗರ್ಸ್’

    ಮೊಟ್ಟೆ ಪ್ರಿಯರು ಮಾಡಿ ಸವಿಯಿರಿ ‘ಎಗ್ ಫಿಂಗರ್ಸ್’

    ಕೆಲವರಿಗೆ ಮಟನ್ ಇಷ್ಟವಾಗುವುದಿಲ್ಲ, ಇನ್ನೂ ಕೆಲವರಿಗೆ ಚಿಕನ್ ಇಷ್ಟವಾಗುವುದಿಲ್ಲ. ಆದರೆ ಎಲ್ಲಾ ನಾನ್‍ವೆಜ್ ಪ್ರಿಯರು ಇಷ್ಟಪಟ್ಟು ತಿನ್ನುವುದು ಮೊಟ್ಟೆ. ಅದಕ್ಕೆ ಸ್ವಲ್ಪ ಮಸಾಲಾ ಟೆಸ್ಟ್ ಸಿಕ್ಕರೆ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವೇ ಇಲ್ಲ. ಇಂದು ‘ಎಗ್ ಫಿಂಗರ್ಸ್’ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ನೀವೂ ಟ್ರೈ ಮಾಡಿ ನೋಡಿ.

    ಬೇಕಾಗಿರುವ ಪದಾರ್ಥಗಳು:
    * ಮೊಟ್ಟೆಗಳು – 10
    * ಉಪ್ಪು – 1/4 ಟೀಸ್ಪೂನ್
    * ಕಪ್ಪು ಉಪ್ಪು – 1/4 ಟೀಸ್ಪೂನ್
    * ಕಪ್ಪು ಮೆಣಸು ಪುಡಿ – 1/3 ಟೀಸ್ಪೂನ್


    * ಚಾಟ್ ಮಸಾಲಾ – 1/2 ಟೀಸ್ಪೂನ್
    * ಕಾರ್ನ್ ಫ್ಲೋರ್ – 1/4 ಕಪ್
    * ಕಡ್ಲೆ ಹಿಟ್ಟು – 1 ಕಪ್
    * ಚಿಲ್ಲಿ ಫ್ಲೇಕ್ಸ್ – 1/2 ಟೀಸ್ಪೂನ್
    * ಇಟಾಲಿಯನ್ ಮಸಾಲೆ – 1/2 ಟೀಸ್ಪೂನ್
    * ಬ್ರೆಡ್ ಕ್ರಂಬ್ – 1/2 ಕಪ್
    * ಡೀಪ್ ಫ್ರೈಗೆ ಎಣ್ಣೆ

    ಮಾಡುವ ವಿಧಾನ:
    * ಒಂದು ಬೌಲ್ ತೆಗೆದುಕೊಂಡು ಮೊಟ್ಟೆಗಳನ್ನು ಒಡೆದು ಅದಕ್ಕೆ ಉಪ್ಪು, ಕಪ್ಪು ಉಪ್ಪು, ಕಪ್ಪು ಮೆಣಸು ಮತ್ತು ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಕಾರ್ನ್ ಫ್ಲೋರ್, ಕಡ್ಲೆ ಹಿಟ್ಟು ಚಿಲ್ಲಿ ಫ್ಲೇಕ್ಸ್ ಮತ್ತು ಇಟಾಲಿಯನ್ ಮಸಾಲೆ ಹಾಕಿ ಕಲಸಿ. ಇದಕ್ಕೆ ಎಗ್ ಮಿಶ್ರಣವನ್ನು ಸೇರಿಸಿ ಬೆರಳಿನಾಕಾರದಲ್ಲಿ ಕಟ್ ಮಾಡಿ.
    * ಇನ್ನೊಂದು ತಟ್ಟೆಯಲ್ಲಿ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಎಗ್ ಮಿಶ್ರಣದ ಮೇಲೆ ಲೇಪಿಸಿ.

    * ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ. ಇವು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಪೇಪರ್ ಮೇಲೆ ಕರಿದ ಎಗ್ ಫಿಂಗರ್ಸ್ ಹಾಕಿ.

    – ಟೊಮೆಟೊ ಕೆಚಪ್‍ನೊಂದಿಗೆ ಎಗ್ ಫಿಂಗರ್ಸ್ ಬಡಿಸಿ ಮತ್ತು ಚಹಾದೊಂದಿಗೆ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ಮಿಸ್ ಮ್ಯಾಚ್ ಜೋಡಿ ಎಂದೇ ಖ್ಯಾತರಾಗಿರುವ ತಮಿಳಿನ ರವೀಂದ್ರ ಚಂದ್ರಶೇಖರ್ (Ravindra) ಮತ್ತು ಮಹಾಲಕ್ಷ್ಮಿ ಜೋಡಿ ಇದೀಗ ಮೊಟ್ಟೆ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ ಮಧ್ಯರಾತ್ರಿ ಹೆಂಡತಿಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಬಿರಿಯಾನಿ ಕೊಡಿಸಿದ್ದ ರವೀಂದ್ರ, ಇದೀಗ ಮನೆಯಲ್ಲೇ ಮೊಟ್ಟೆ ಬೇಯಿಸಲು ಹೋಗಿ ಹೆಂಡತಿ ಏನು ಮಾಡಿದ್ದಾಳೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸೀದು ಹೋದೆ ಮೊಟ್ಟೆಯ ಫೋಟೋವನ್ನೂ ಅವರು ಅಪ್ ಲೋಡ್ ಮಾಡಿದ್ದಾರೆ.

    ಮಹಾಲಕ್ಷ್ಮಿಯನ್ನು (Mahalakshmi) ಮದುವೆಯಾದ ನಂತರ ಶೂಟಿಂಗ್ ಸ್ಥಳಕ್ಕೆ ಮನೆಯಿಂದಲೇ ಊಟ ತಗೆದುಕೊಂಡು ಹೋಗಿದ್ದರು ರವೀಂದ್ರ. ಆನಂತರ ಬೇರೆ ಬೇರೆ ಹೋಟೆಲ್ ಗಳಲ್ಲಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಊಟ ಕೊಡಿಸಿದ್ದರು. ಬಹುಶಃ ಹೋಟೆಲ್ ಊಟ ಸಾಕು ಅನಿಸಿರಬೇಕು. ಹಾಗಾಗಿಯೇ ಹೆಂಡತಿಗೆ ಮೊಟ್ಟೆ ಬೇಯಿಸಲು ರವೀಂದ್ರ ಹೇಳಿದ್ದರಂತೆ. ಆದರೆ, ಮಹಾಲಕ್ಷ್ಮಿಗೆ ಮೊಟ್ಟೆಯನ್ನೂ ಸರಿಯಾಗಿ ಬೇಯಿಸಲು ಬರುವುದಿಲ್ಲ ಎನ್ನುವುದು ಇವರ ಆಕ್ಷೇಪನೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಎರಡು ಮೊಟ್ಟೆಗಳನ್ನು (eggs) ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಅವರು ಶೇರ್ ಮಾಡಿದ್ದಾರೆ. ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನ್ಯೂ ಲೈಫ್ ಮೈ ವೈಫ್ ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!

    ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!

    ಚೆನ್ನೈ: ಪಾಪಿ ತಾಯಿಯೊಬ್ಬಳು ತನ್ನ 16 ವರ್ಷದ ಪುತ್ರಿಗೆ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಆರೋಪಿ ತಾಯಿಯನ್ನು ಇಂದ್ರಾಣಿ ಅಲಿಯಾಸ್ ಸುಮಯ್ಯಾ(33) ಎಂದು ಗುರುತಿಸಲಾಗಿದೆ. ಈಕೆಯ ಜೊತೆಗೆ ಪತಿ ಸೈಯದ್ ಅಲಿ (40) ಹಾಗೂ ಮಾಲತಿ (30) ಎಂಬಿಬ್ಬರನ್ನು ಕೂಡ ಬಂಧಿಸಿ ಜೈಲಿಗಟ್ಟಲಾಗಿದೆ. ಸೈಯದ್ ಅಲಿಯನ್ನು ಇಂದ್ರಾಣಿ ಎರಡನೇ ಮದುವೆಯಾಗಿದ್ದಾಳೆ. ಈಕೆ ಖಾಸಗಿ ಫರ್ಟಿಲಿಟಿ ಕೇಂದ್ರಕ್ಕೆ ಅಂಡಾಣು ದಾನ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾಳೆ.

    ಇಂದ್ರಾಣಿಯ ಮೊದಲ ಪತಿಯಲ್ಲಿ ಓರ್ವ ಮಗಳಿದ್ದಾಳೆ. ಇದೀಗ 16 ವರ್ಷದ ತನ್ನ ಮಗಳನ್ನು ಅಂಡಾಣು ದಾನ ಮಾಡುವಂತೆ ತಾಯಿ ಇಂದ್ರಾಣಿ ಒತ್ತಾಯಿಸಿದ್ದಾಳೆ. ಇದಕ್ಕೆ ಅಪ್ರಾಪ್ತೆಯ ಮಲ ತಂದೆಯಾಗಿರುವ ಸೈಯದ್ ಅಲಿ ಕೂಡ ಸಾಥ್ ನೀಡಿದ್ದಾನೆ. ಅಲ್ಲದೆ ಈತ ಹವಾರು ಬಾರಿ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ

    ಸದ್ಯ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಪರಾರಿಯಾಗುವ ಮುನ್ನ 8 ಬಾರಿ ಅಂಡಾಣು ದಾನ ಮಾಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಪ್ರತಿ ಅಂಡಾಣು ದಾನದಲ್ಲಿಯೂ ಸುಮಯ್ಯ 20 ಸಾವಿರ ಹಾಗೂ ಮಾಲತಿ 5 ಸಾವಿರ ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಈರೋಡ್ ದಕ್ಷಿಣ ಪೊಲೀಸ್ ಇನ್ಸ್ ಪೆಕ್ಟರ್ ಪಿ ವಿಜಯಾ ತಿಳಿಸಿದ್ದಾರೆ.

    ಈ ಸಂಬಂಧ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣ ಕುರಿತು ತನಿಖೆ ಕೈಗೊಳ್ಳಲಾಗಿದೆ. ಖಾಸಗಿ ಕೇಂದ್ರ ಬಲವಂತವಾಗಿ ಅಂಡಾಣು ದಾನ ಮಾಡಿರುವುದು ಕಂಡುಬಂದಲ್ಲಿ ಅದರ ವಿರುದ್ಧವೂ ಕಠೀನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ಕೊಪ್ಪಳ: ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕೊಪ್ಪಳದ ವಿದ್ಯಾರ್ಥಿನಿ ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದು ಸವಾಲು ಹಾಕಿದ್ದಾಳೆ.

    ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧಿಸಿದ್ದಕ್ಕೆ ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ತಿರುಗಿ ಬಿದ್ದಿದ್ದಾಳೆ. ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದು ಮಠಾಧೀಶರಿಗೆ ಸವಾಲು ಹಾಕಿದ್ದಾಳೆ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ಮಕ್ಕಳು ದೇವರು ಸಮಾನ ಅಂತಾರೆ ಹಾಗಾದರೆ ದೇವರ ಆಸೆ ಏಕೆ ಈಡೇರಿಸಲ್ಲ. ಮಠಕ್ಕೆ ಬಂದು ದಕ್ಷಿಣೆ ಹಾಕಿಲ್ವಾ? ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದರೂ ಇಳಿಯುತ್ತೇವೆ. ನಮಗೆ ಯಾರು ಎಲ್ಲ ಎಂದು ತಿಳಿದುಕೊಳ್ಳಬೇಡಿ. ನಮಗೆ ಎಸ್‍ಎಫ್‍ಆರ್ ಸಂಸ್ಥೆ ಇದೆ. ನಮಗೆ ಮೊಟ್ಟೆ ಮತ್ತೆ ಬಾಳೆಹಣ್ಣು ಬೇಕು. ಒಂದಲ್ಲ ಎರಡು ತಿನ್ನುತ್ತೇವೆ. ಅದನ್ನು ಕೇಳಲು ನೀವು ಯಾರು? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

    ನಾವು ಮೊಟ್ಟೆ ತಿಂದು, ಸ್ನಾನ ಮಾಡಿ ನಿಮ್ಮ ಮಠಕ್ಕೆ ಬಂದಿಲ್ಲವಾ? ಮತ್ತೆ ದಕ್ಷಿಣೆಯನ್ನು ಹಾಕಿಲ್ಲವಾ? ಮತ್ತೆ ಏಕೆ ನೀವು ನಮ್ಮ ದುಡ್ಡಿನಲ್ಲಿ ತಿನ್ನುತ್ತೀರಾ? ಬಿಸಾಕಿ ಆ ದುಡ್ಡು ಅಥವಾ ನಮಗೆ ತಂದು ಕೊಡಿ ಎಂದು ಕಿಡಿಕಾರಿದ್ದಾಳೆ.

    ನಿಮಗೆ ಬಡವರ ಕಷ್ಟ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಬಡತನವಿರುವುದರಿಂದ ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತೇವೆ. ನಿಮ್ಮ ಮಠಕ್ಕೆ ಜಿಲ್ಲೆಯ ಎಲ್ಲ ಮಕ್ಕಳು ಬಂದ್ರೆ ನಿಮ್ಮ ಮಠ ಉಳಿಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ. ಪ್ರಸ್ತುತ ಈ ವಿದ್ಯಾರ್ಥಿನಿಯ ಹೇಳಿಕೆ ಫುಲ್ ವೈರಲ್ ಆಗಿದೆ.

  • ಒಂದೇ ದಿನ ತೀರಕ್ಕೆ ಬಂದ 72 ಸಾವಿರಕ್ಕೂ ಅಧಿಕ ಕಡಲಾಮೆಗಳು

    ಒಂದೇ ದಿನ ತೀರಕ್ಕೆ ಬಂದ 72 ಸಾವಿರಕ್ಕೂ ಅಧಿಕ ಕಡಲಾಮೆಗಳು

    – ಒಂದು ಗೂಡಿನಲ್ಲಿ 100ಕ್ಕೂ ಅಧಿಕ ಮೊಟ್ಟೆ

    ಭುವನೇಶ್ವರ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರ ಓಡಾಟ ಇಲ್ಲದಿರುವುದರಿಂದ ಮಾಲಿನ್ಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇತ್ತ ಜನರ ಓಡಾಟದಿಂದ ಕಂಗೆಟ್ಟಿದ್ದ ಪ್ರಾಣಿ-ಪಕ್ಷಿಗಳಿಗೆ ಸ್ವಾತಂತ್ರ ಸಿಕ್ಕಿದ್ದಂತಾಗಿದೆ. ಒಡಿಶಾದ ತೀರವೊಂದರಲ್ಲಿ ಒಂದೇ ದಿನ ಬರೋಬ್ಬರಿ 72 ಸಾವಿರಕ್ಕೂ ಅಧಿಕ ಆಮೆಗಳು ಕಡಲಿಗೆ ಬಂದಿದ್ದವು.

    ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಬೀಚ್‍ನಲ್ಲಿ ಒಲಿವ್ ರಿಡ್ಲಿ ಕಡಲಾಮೆಗಳು ಕಳೆದ ಐದು ದಿನಗಳಿಂದ ಆರು ಕಿಲೋಮೀಟರ್ ದೂರದವರೆಗೂ ಬಂದು ವಿಹಾರಿಸುತ್ತಿವೆ. ಈ ಅಪರೂಪದ ಕಡಲಾಮೆಗಳು ರುಶಿಕುಲ್ಯ ಬೀಚ್‍ನಲ್ಲಿ ಒಟ್ಟಾಗಿ ತಮ್ಮ ಗೂಡಿಗೆ ಬರುತ್ತವೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆದ ಕಾರಣ ಸಾವಿರಾರು ಕಡಲಾಮೆಗಳು ಒಟ್ಟಾಗಿ ಬಂದಿವೆ ಎಂದು ಒಡಿಶಾ ವನ್ಯಜೀವಿ ಸಂಸ್ಥೆ ಹೇಳಿದೆ.

    ಮಾರ್ಚ್ 22 ರಂದು ಮುಂಜಾನೆ ಸುಮಾರು 2 ಗಂಟೆಗೆ 2,000 ಹೆಣ್ಣಾಮೆಗಳು ಬೀಚ್‍ಗೆ ಬರಲು ಶುರುಮಾಡಿದ್ದವು. ಹೆಣ್ಣಾಮೆಗಳು ತಾವು ಹುಟ್ಟಿದ್ದ ಸ್ಥಳಕ್ಕೆ ಬಂದು ಮತ್ತೆ ಮೊಟ್ಟೆಗಳನ್ನಿಡುತ್ತವೆ. ಒಡಿಶಾ ಕಡಲ ತೀರಾ ಆಮೆಗಳಿಗೆ ಅಧಿಕ ಮೊಟ್ಟೆ ಇಡುವ ಸ್ಥಳವಾಗಿದೆ. 2,78,502ಕ್ಕೂ ಹೆಚ್ಚು ಹೆಣ್ಣಾಮೆಗಳು ಏಕಕಾಲಕ್ಕೆ ಮೊಟ್ಟೆಯಿಡಲು ಬಂದಿದ್ದವು. ಅದರಲ್ಲೂ ಮಂಗಳವಾರ ಬೆಳಿಗ್ಗೆ 72,142ಕ್ಕೂ ಹೆಚ್ಚು ಕಡಲಾಮೆಗಳು ತಮ್ಮ ಗೂಡುಗಳಿಗೆ ಬಂದಿದ್ದವು ಎಂದು ಅರಣ್ಯ ಅಧಿಕಾರಿ ಆಮ್ಲಾನ್ ನಾಯಕ್ ಹೇಳಿದ್ದಾರೆ.

    ಆಮೆಗಳು ಮೊಟ್ಟೆ ಇಡಲು ಮಾಡುವ ಪ್ರತಿಯೊಂದು ಗೂಡಿನಲ್ಲೂ ಸುಮಾರು 100ಕ್ಕೂ ಹೆಚ್ಚು ಮೊಟ್ಟೆಗಳಿರುತ್ತವೆ. ಅವುಗಳು ಮರಿಯಾಗಲು 45 ದಿನಗಳ ಕಾಲಾವಧಿಬೇಕು. ಈ ಹಿಂದೆ ತ್ಯಾಜ್ಯಗಳು, ಮಾಲೀನ್ಯದಿಂದ ಆಮೆಗಳು ಮೊಟ್ಟೆ ಇಡಲು ತೀರಕ್ಕೆ ಬರುತ್ತಿರಲಿಲ್ಲ.

    ಈ ವರ್ಷ ಅತಿ ಹೆಚ್ಚು ಆಮೆಗಳು ಕಂಡುಬಂದಿವೆ. ಹಿಂದಿನ ಎರಡು ವರ್ಷಗಳಲ್ಲಿ ಇಷ್ಟೊಂದು ಆಮೆಗಳು ತೀರಕ್ಕೆ ಬಂದಿರಲಿಲ್ಲ. ಹೀಗಾಗಿ ಈ ವರ್ಷ ರುಶಿಕುಲ್ಯ ಕಡಲತೀರದಲ್ಲಿ ಕನಿಷ್ಠ 4.75 ಲಕ್ಷ ಆಮೆಗಳು ಗೂಡಿಗೆ ಬಂದಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

    ಮಾರ್ಚ್ 24 ರಿಂದ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಪರಿಣಾಮ ರುಶಿಕುಲ್ಯ ಬೀಚ್‍ಗೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ. ಆದರೆ ಸಂಶೋಧಕರು ಮತ್ತು ಪರಿಸರವಾದಿಗಳಿಗೆ ಆಮೆ ಗೂಡುಕಟ್ಟುವ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ವರ್ಷ ಕಡಲಾಮೆಗಳು ಸುಮಾರು 6 ಕೋಟಿ ಮೊಟ್ಟೆಗಳನ್ನಿಟ್ಟಿವೆ ಎಂದು ಅಂದಾಜಿಸಲಾಗಿದೆ.

    https://twitter.com/_harikrishnan_s/status/1242994351967318016

  • 14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 14 ಕೋಳಿ ಮೊಟ್ಟೆ ನುಂಗಿ, ತೆವಳಲಾಗದೆ ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದ ಏಳು ಅಡಿ ಉದ್ದದ ನಾಗರಹಾವೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.

    ಬಡವನದಿಣ್ಣೆ ಗ್ರಾಮದ ನಿವಾಸಿ ಮಂಜಯ್ಯ ಮನೆಯಲ್ಲಿ ಮರಿಗೆಂದು ಬುಟ್ಟಿಯಲ್ಲಿಟ್ಟಿದ್ದ 14 ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಮೊಟ್ಟೆ ಕಂಡ ಕೂಡಲೇ ಹಾವು ಆಸೆಯಿಂದ ಎಲ್ಲವನ್ನೂ ನುಂಗಿದೆ. ನಂತರ ಮುಂದೆ ಹೋಗಲಾಗದೆ ನರಳಾಡುತಿತ್ತು. ಇದನ್ನ ಗಮನಿಸ ಮನೆ ಮಾಲೀಕ ಮಂಜಯ್ಯ ಕೂಡಲೇ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಅವರು ಮೊದಲು ಮನೆಯೊಳಗಿದ್ದ ಹಾವನ್ನ ಬಯಲು ಪ್ರದೇಶಕ್ಕೆ ತಂದಿದ್ದಾರೆ. ಬಳಿಕ ಅದರ ಬಾಲ ಹಿಡಿದು ಹೊರಳಾಡಿಸುತ್ತಿದ್ದಂತೆ ನುಂಗಿದ್ದ ಎಲ್ಲಾ ಮೊಟ್ಟೆಗಳನ್ನ ಹಾವು ಕಕ್ಕಿ ತನ್ನ ಜೀವ ಉಳಿಸಿಕೊಂಡಿದೆ.

    ಬಳಿಕ ಹಾವನ್ನು ರಕ್ಷಿಸಿ, ಅದನ್ನು ಸ್ನೇಕ್ ಆರೀಫ್ ಅವರು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

    https://www.youtube.com/watch?v=ICtheGVDfyk

  • ಕಾಮಗಾರಿ ವೇಳೆ ಹೊರ ಬಂದ ನಾಗ

    ಕಾಮಗಾರಿ ವೇಳೆ ಹೊರ ಬಂದ ನಾಗ

    ಬೆಂಗಳೂರು: ನಗರದ ಬಾಣಸವಾಡಿಯ ಖಾಲಿ ನಿವೇಶನವೊಂದರ ಸಮತಟ್ಟು ಮಾಡುತ್ತಿದ್ದ ವೇಳೆ ನಾಗರಹಾವು ಕಾಣಿಸಿಕೊಂಡಿದೆ.

    ಖಾಲಿ ನಿವೇಶನವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡುವಾಗ ಬುಸ್ ಎಂದು ನಾಗರಹಾವೊಂದು ಬಿಲದಿಂದ ಹೊರಬಂದಿದೆ. ನಾಗರಹಾವನ್ನು ನೋಡಿದ ಮಾಲೀಕರು ತಕ್ಷಣ ಕೆಲಸ ನಿಲ್ಲಿಸಿ ಸ್ನೇಕ್ ಮೋಹನ್‍ಗೆ ಕರೆ ಮಾಡಿದರು.

    ಈ ವಿಷಯ ತಿಳಿದು ಸ್ನೇಕ್ ಮೋಹನ್ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ನಾಗರಹಾವನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳದಲ್ಲಿ ಬಿಟ್ಟರು. ಅಲ್ಲದೆ ಆ ನಾಗರಹಾವಿನ ಆರೇಳು ಮೊಟ್ಟೆಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ನೇಕ್ ಮೋಹನ್ ನಾಗರಹಾವನ್ನು ಹಿಡಿದ ರೋಚಕ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ.

  • ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

    ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

    ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ.

    ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು ಹೇಳಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೋಳಿ ಮೊಟ್ಟೆ ಮಾನವನ ದೇಹದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೊಟ್ಟೆಯನ್ನ ಬಾಲಕನ ದೇಹದೊಳಗೆ ಹಾಕಲಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ.

    ಇಂಡೋನ್ಯೇಷ್ಯಾದ ಗೋವಾದವನಾದ ಅಕ್ಮಲ್‍ಗೆ ಎಕ್ಸ್ ರೇ ಕೂಡ ಮಾಡಿಸಲಾಗಿದ್ದು, ಆತ ನಿಜ ಹೇಳುತ್ತಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪೋಷಕರು ಹೇಳಿದ್ದಾರೆ.

    ಅಕ್ಮಲ್ ತಂದೆ ರುಸ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 2 ವರ್ಷಗಳಲ್ಲಿ ಆತ 18 ಮೊಟ್ಟೆ ಇಟ್ಟಿದ್ದು, ಈಗ ಎರಡು ಮೊಟ್ಟೆ ಇಟ್ಟಿದ್ದಾನೆ. ಹೀಗಾಗಿ ಒಟ್ಟು 20 ಆಗಿದೆ. ನಾನು ಮೊದಲ ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಹಳದಿ ಅಂಶ ಮಾತ್ರ ಇತ್ತು, ಬಿಳಿಯದ್ದು ಇರಲಿಲ್ಲ. ಒಂದು ತಿಂಗಳ ಬಳಿಕ ಮತ್ತೊಂದು ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಪೂರ್ತಿ ಬಿಳಿ ಅಂಶ ಇತ್ತು, ಹಳದಿ ಬಣ್ಣದ್ದು ಇರಲಿಲ್ಲ ಎಂದು ಹೇಳಿದ್ದಾರೆ.

    ಆಸ್ಪತ್ರೆಯ ವಕ್ತಾರರು ಈ ಬಗ್ಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ಅಕ್ಮಲ್‍ನ ಗುದನಾಳಕ್ಕೆ ಮೊಟ್ಟೆಗಳನ್ನ ತುರುಕಲಾಗಿದೆ ಎಂಬ ಅನುಮಾನ ನಮಗಿದೆ. ನಾವು ಅದನ್ನ ನೇರವಾಗಿ ನೋಡಿಲ್ಲ ಎಂದು ಹೇಳಿದ್ದಾರೆ.

    ಬಾಲಕನ ಮೇಲೆ ವೈದ್ಯರು ಸೂಕ್ಷ್ಮವಾಗಿ ಗಮನಹರಿಸಬೇಕೆಂಬ ಉದ್ದೇಶದಿಂದ ಸೈಕ್ ಯೂಸಫ್ ಆಸ್ಪತ್ರೆಯಲ್ಲಿ ಅಕ್ಮಲ್‍ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.

    https://www.youtube.com/watch?v=zZNwT2GIJ3o