Tag: Eggplant

  • ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ‘ಹಸಿ ಕೈ ಗೊಜ್ಜು’. ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ‘ಹಸಿ ಕೈ ಗೊಜ್ಜು’ ಟ್ರೈ ಮಾಡಿ ರುಚಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ.

    ಬೇಕಾಗಿರುವ ಸಾಮಾಗ್ರಿಗಳು:
    * ಬದನೆಕಾಯಿ – 2
    * ಟೊಮೊಟೊ – 1
    * ಕಟ್ ಮಾಡಿದ ಈರುಳ್ಳಿ – 1
    * ಮೆಣಸಿನಕಾಯಿ – 5
    * ಹುಣಸೆಹಣ್ಣು – 1/4 ಗ್ರಾಂ
    * ಜೀರಿಗೆ – 1/4 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1/2 ಟೀಸ್ಪೂನ್
    * ರುಚುಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ.
    * ಬದನೆಕಾಯಿಯನ್ನು ಚಾಕುವಿನಿಂದ ಚುಚ್ಚಿ ಅದನ್ನು ಗ್ಯಾಸ್ ಉರಿಯಲ್ಲಿ ಬೇಯಿಸಿ. ಅದೇ ರೀತಿ ಟೊಮೆಟೊ ಮತ್ತು ಮೆಣಸಿನಕಾಯಿಯನ್ನು ಬೇಯಿಸಿ ಪಕ್ಕಕ್ಕೆ ಇಡಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ.
    * ಈಗ ಫ್ರೈಗೆ ಈರುಳ್ಳಿ, ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಚೀನಾ: ಮಲಬದ್ಧತೆಯಿಂದ ರೋಸಿ ಹೋಗಿದ್ದ ವ್ಯಕ್ತಿಯೊಬ್ಬ ಮನೆ ಮದ್ದಿನ ಮೂಲಕ ಗುಣಪಡಿಸಕೊಳ್ಳಬಹುದೆಂದು ತಿಳಿದು, 30 ಸೆಂ.ಮೀ ಉದ್ದದ ಬದನೆಕಾಯಿಯನ್ನು ಬಳಸಿ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ಘಟನೆ ಚೀನಾದಲ್ಲಿ ನಡೆದಿದೆ.

    50 ವರ್ಷದ ವ್ಯಕ್ತಿಯೊಬ್ಬ ಮಲಬದ್ಧತೆಯ ಕಾಯಿಲೆಯಿಂದ ಬೇಸತ್ತಿದ್ದನು. ಹೀಗಾಗಿ ಮನೆ ಮದ್ದು ಇದಕ್ಕೆ ಪರಿಹಾರವೆಂದು ಭಾವಿಸಿ ಬದನೆಕಾಯಿಯನ್ನು ಬಳಸಿದ್ದಾನೆ. ಆದರೆ ಇದು ಅವನ ಕಾಯಿಲೆ ಗುಣಪಡಿಸುವುದಕ್ಕಿಂತ ಅವನ ಜೀವಕ್ಕೆ ಆಪತ್ತು ತಂದಿದೆ.

    ಬದನೆಕಾಯಿ ಬಳಸಿದ ಎರಡು ದಿನದ ನಂತರ ಆತನಲ್ಲಿ ಮಲಬದ್ಧತೆ ಮತ್ತು ಕಿಬ್ಬೊಟ್ಟೆಯಲ್ಲಿ ಹೆಚ್ಚಿನ ನೋವುಕಾಣಿಸಿಕೊಂಡಿದೆ. ವಿಪರೀತ ವಾಕರಿಕೆ ಮತ್ತು ವಾಂತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯಲ್ಲಿ ಎಕ್ಸ್‍ರೇ ಮಾಡಿದ ವೇಳೆ ಸುಮಾರು 30 ಸೆಂ.ಮೀ ಬದನೆಕಾಯಿಯು ದೇಹದ ಒಳಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ. ಇದು ಅವನ ಶ್ವಾಸಕೋಶಕ್ಕೆ ಹಾನಿಯುಂಟುಮಾಡಿದೆ. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬದನೆಕಾಯಿಯನ್ನು ದೇಹದಿಂದ ಹೊರತೆಗೆದಿದ್ದಾರೆ. ಸದ್ಯ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

    ನಮ್ಮಲ್ಲಿ ಅನೇಕರು ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದುಗಳನ್ನು ಉಪಯೋಗಿಸುವುದು ಅನಾಧಿ ಕಾಲದಿಂದಲೂ ರೂಢಿಯಲ್ಲಿದೆ. ಈ ರೀತಿ ಮನೆಮದ್ದುಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.