Tag: Egg Rice

  • ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

    ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

    ಬಾಗಲಕೋಟೆ: ಕುಡಿದ ನಶೆಯಲ್ಲಿ ಎಗ್ ರೈಸ್ (Egg Rice) ತಿಂದು ಹಣ ಕೇಳಿದ್ದಕ್ಕೆ ಜಗಳ ಶುರುವಾಗಿ ಎಗ್‌ರೈಸ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢ ಪಟ್ಟಣದಲ್ಲಿನ ಬಸ್ ನಿಲ್ದಾಣದ ಬಳಿ ರಾತ್ರಿ ಘಟನೆ ನಡೆದಿದೆ. ಗೈಬುಸಾಬ್ ಮುಲ್ಲಾ (29) ಕೊಲೆಯಾದ ವ್ಯಕ್ತಿಯಾದರೆ ಮಸ್ತಫಾ ಜಂಗಿ (22) ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಅಪಘಾತದಲ್ಲಿ ಮೂವರು ಸಾವು

    ಮುಸ್ತಫಾ ಕುಡಿದ ನಶೆಯಲ್ಲಿ ಗೈಬುಸಾಬ್ ಮುಲ್ಲಾ ಅಂಗಡಿಗೆ ಬಂದು ಎಗ್ ರೈಸ್ ತಿಂದಿದ್ದ. ಬಳಿಕ ಗೈಬುಸಾಬ್ ಹಣ ಕೇಳಿದ್ದಕ್ಕೆ ಆತ ಕೊಡಲ್ಲ ಎಂದು ವಾದಿಸಿದ್ದ. ಇದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಮುಸ್ತಫಾ ಚಾಕುವಿನಿಂದ ಇರಿದು ಗೈಬುಸಾಬ್‌ನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೂಲ್ಸ್ ನೆಪದಲ್ಲಿ ಎಗ್‍ರೈಸ್ ಬಂಡಿ ವ್ಯಾಪಾರಿಗಳಿಂದ ಪೊಲೀಸರು ಲಂಚ!

    ರೂಲ್ಸ್ ನೆಪದಲ್ಲಿ ಎಗ್‍ರೈಸ್ ಬಂಡಿ ವ್ಯಾಪಾರಿಗಳಿಂದ ಪೊಲೀಸರು ಲಂಚ!

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಕೊಲೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪೊಲೀಸರು, ಬಡ ಬೀದಿಬದಿಯ ವ್ಯಾಪಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ.

    ದುಡಿದು ತಿನ್ನುತ್ತಿರುವವರ ಮೇಲೆ ದರ್ಪತೋರಿ ಕಿತ್ತು ತಿನ್ನುತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸರ ಲಂಚಾವತಾರಕ್ಕೆ ಬೀದಿ ಬದಿಯಲ್ಲಿನ ವ್ಯಾಪಾರಿಗಳು ಬೇಸತ್ತಿದ್ದಾರೆ. ರಾತ್ರಿ 10 ಗಂಟೆಗೆ ಸರಿಯಾಗಿ ಬಂದ್ ಆಗಬೇಕಂತೆ ಎಗ್‍ರೈಸ್ (Egg Rice Stall) ಬಂಡಿಗಳು. ಇಲ್ಲದಿದ್ದರೆ ಬಿಳುತ್ತೆ ಸಾವಿರಾರ ರೂಪಾಯಿ ದಂಡ.

    ರೂಲ್ಸ್ ನೆಪದಲ್ಲಿ ಬಡ ವ್ಯಾಪಾರಿಗಳಿಂದ ಪೊಲೀಸರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಬಡವರ ಮೇಲೆ ಅಷ್ಟೇ ಇವರ ದೌರ್ಜನ್ಯ ಆದರೆ ದೊಡ್ಡ ದೊಡ್ಡ ಹೊಟೇಲ್ ಗಳು ತಡರಾತ್ರಿ 12 ಗಂಟೆಯ ತನಕವೂ ಓಪನ್ ಇದ್ದರೆ ಡೋಂಟ್ ಕೇರ್ ಎನ್ನುತಾರೆ ಅಂತ ವ್ಯಾಪಾರಿಗಳು ತಮ್ಮ ನೋವು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಸ್ ಕಂಡಕ್ಟರ್‌ಗೆ ಮಹಿಳೆಯರಿಂದ ತರಾಟೆ – ವೀಡಿಯೋ ವೈರಲ್

     

  • ಪತ್ನಿ ಜೊತೆ ಜಗಳ – ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಕೊಂದ ತಂದೆ

    ಪತ್ನಿ ಜೊತೆ ಜಗಳ – ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಕೊಂದ ತಂದೆ

    ವಿಜಯಪುರ: ತಂದೆಯೊಬ್ಬ ತನ್ನ ಪತ್ನಿ ಜಮೀನು ಮಾರಲು ಒಪ್ಪದಕ್ಕೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ತಿನ್ನಿಸಿದ್ದು, ಪುತ್ರ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.

    ಶಿವರಾಜ್ ಅರಸನಾಳ (2) ಹತ್ಯೆಗೀಡಾದ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದನು. ಮಾರಾಟ ಮಾಡಲು ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.

    ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ

    ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ

    ಇಂದು ಭಾನುವಾರ ರಜೆಯಾಗಿರುವುದರಿಂದ ಮನೆಯಲ್ಲಿಯೇ ಎಲ್ಲರು ಇರುತ್ತಾರೆ. ಮಕ್ಕಳು, ಮನೆಯ್ಲಲಿರುವವರು ಖಾರಖಾರವಾಗಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂದುಕೊಂಡಿರುತ್ತಾರೆ. ಹೊರಗಡೆ ಹೋಗೋಣ ಎಂದರೆ ಮೋಡ ಮುಸುಕಿದ ವಾತಾವರಣ. ಆದ್ದರಿಂದ ಮನೆಯಲ್ಲಿಯೇ ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ ನಿಮಗಾಗಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮೊಟ್ಟೆ – 2-3
    2. ಅನ್ನ – 1 ಬಟ್ಟಲು
    3. ದಪ್ಪ ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
    4. ಹಸಿ ಮೆಣಸಿನಕಾಯಿ – 5ರಿಂದ6
    (ಖಾರದ ಪುಡಿ ಬೇಕಾದ್ರೆ ಬಳಸಬಹುದು)
    5. ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ
    6. ಗರಂ ಮಸಾಲ – ಒಂದೂವರೆ ಚಮಚ
    7. ಕಡ್ಲೆಬೇಳೆ – 1-2 ಚಮಚ
    8. ನಿಂಬೆಹಣ್ಣು – ಅರ್ಧ ಹೋಳು
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ಅರಿಶಿನ ಪುಡಿ – ಚಿಟಿಕೆ
    11. ಜೀರಿಗೆ+ಸಾಸಿವೆ – ಅರ್ಧ ಚಮಚ
    12. ಉಪ್ಪು – ರುಚಿಗೆ ತಕ್ಕಷ್ಟು
    13. ಎಣ್ಣೆ – 3-4 ಚಮಚ

    ಮಾಡುವ ವಿಧಾನ
    * ಮೊದಲಿಗೆ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡ್ಲೆಬೇಳೆ ಹಾಕಿ ಫ್ರೈ ಮಾಡಿರಿ.
    * ಬಳಿಕ ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸೇರಿಸಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
    * ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ಮೊಟ್ಟೆ ಒಡೆದು ಹಾಕಿ ಕಲಸಿರಿ.
    * ಬಳಿಕ ಅದನ್ನು 2 ನಿಮಿಷ ಬಿಡಿ.
    * ಮೊಟ್ಟೆ ಫ್ರೈ ಆದ ಮೇಲೆ ಅದಕ್ಕೆ ಬೇಯಿಸಿದ ಅನ್ನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿರಿ.
    * ಕೆಳಗಿಳಿಸುವಾಗ ನಿಂಬೆಹಣ್ಣು ಹಿಂಡಿ ಮತ್ತೊಮ್ಮೆ ತಿರುಗಿಸಿ.
    * ಬಿಸಿಬಿಸಿಯಾಗಿ ರುಚಿರುಚಿಯಾದ ಎಗ್ ರೈಸ್ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv