Tag: Egg Bonda

  • ‘ಎಗ್ ಬೋಂಡಾ’ ಮಾಡುವ ಸರಳವಾದ ವಿಧಾನ – ಟ್ರೈ ಮಾಡಿ

    ‘ಎಗ್ ಬೋಂಡಾ’ ಮಾಡುವ ಸರಳವಾದ ವಿಧಾನ – ಟ್ರೈ ಮಾಡಿ

    ಮೊಟ್ಟೆ ಪ್ರಿಯರಿಗೆ ಇಂದು ಮತ್ತೊಂದು ಸೂಪರ್ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ಇಂದು ನಾವು ಹೇಳಿಕೊಡುತ್ತಿರುವುದು ‘ಎಗ್ ಬೋಂಡಾ’. ಇದನ್ನು ಹೆಚ್ಚು ಜನರು ತಿಂದಿರುತ್ತಾರೆ. ಆದರೆ ಮನೆಯಲ್ಲಿ ಮಾಡುವುದು ತುಂಬಾ ಕಡಿಮೆ. ಆದರೆ ಈ ರೆಸಿಪಿ ತುಂಬಾ ಸರಳವಾಗಿರುತ್ತೆ. ಸವಿಯಲು ಸಖತ್  ಟೇಸ್ಟಿಯಾಗಿರುತ್ತೆ. ನೀವು ಟ್ರೈ ಮಾಡಿ.

    ಬೇಕಾಗಿರುವ ವಿಧಾನ:
    * ಬೇಯಿಸಿದ ಮೊಟ್ಟೆ – 3
    * ಅಕ್ಕಿ ಹಿಟ್ಟು – 1/2 ಕಪ್
    * ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್


    * ಕರಿಮೆಣಸು – 1/2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 2
    * ಕಡ್ಲೆ ಹಿಟ್ಟು – ಅರ್ಧ ಕಪ್
    * ಅಗತ್ಯವಿರುವಷ್ಟು ಉಪ್ಪು
    * ಡೀಪ್ ಫ್ರೈ ಮಾಡಲು ಎಣ್ಣೆ

    ಮಾಡುವ ವಿಧಾನ:
    * ಬೇಯಿಸಿದ ಮೊಟ್ಟೆಗಳನ್ನು ಎರಡು ಭಾಗಗಳಾಗಿ ಕತ್ತರಿಸಿ ಮೊಟ್ಟೆಗಳ ಮೇಲೆ ಸ್ವಲ್ಪ ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ.
    * ಮಧ್ಯಮ ಉರಿಯಲ್ಲಿ ಒಂದು ಬಾಣಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುವ ಮುನ್ನ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿಗಳು, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಸ್ವಲ್ಪ ನೀರು ಸೇರಿಸಿ.
    * ಬೇಯಿಸಿದ ಮೊಟ್ಟೆಯ ತುಂಡುಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯೊಳಗೆ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬರುವವರೆಗೆ ಡೀಪ್ ಫ್ರೈ ಮಾಡಿ.

    – ಇದಕ್ಕೆ ಟೊಮೆಟೊ ಕೆಚಪ್ ಅಥವಾ ಹಸಿರು ಚಟ್ನಿಯೊಂದಿಗೆ ‘ಎಗ್ ಬೋಂಡಾ’ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ರುಚಿಕರವಾದ ಎಗ್ ಬೋಂಡಾ ಮನೆಯಲ್ಲೇ ಮಾಡಿ ಸವಿಯಿರಿ

    ರುಚಿಕರವಾದ ಎಗ್ ಬೋಂಡಾ ಮನೆಯಲ್ಲೇ ಮಾಡಿ ಸವಿಯಿರಿ

    ಸಾಮಾನ್ಯವಾಗಿ ಮೊಟ್ಟೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಕೆಲವರು ಬೇಯಿಸಿ ತಿಂದ್ರೆ ಇನ್ನೂ ಕೆಲವರು ಆಫ್ ಬಾಯಿಲ್ಡ್ ಮಾಡಿ ತಿಂತಾರೆ. ಮತ್ತೆ ಕೆಲವರು ಆಮ್ಲೆಟ್ ಮಾಡಿ ತಿಂತಾರೆ. ಆದ್ರೆ ಮೊಟ್ಟೆಯನ್ನು ಬೋಂಡಾ ಮಾಡಿ ತಿನ್ನಬಹುದು. ಅದಕ್ಕಾಗಿ ಸಲಭ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    ಬೇಯಿಸಿದ ಮೊಟ್ಟೆ- 5
    ಉಪ್ಪು- ರುಚಿಗೆ ತಕ್ಕಷ್ಟು
    ಅರಿಶಿಣ ಪುಡಿ- 1/4 ಚಮಚ
    ಚಿಲ್ಲಿ ಪೌಡರ್- 2 ಚಮಚ
    ಕರಿಮೆಣಸಿನ ಪುಡಿ- 1 ಚಮಚ
    ಕಡಲೆ ಹಿಟ್ಟು- 1/2 ಕಪ್
    ಅಕ್ಕಿ ಹುಡಿ- 2 ಚಮಚ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಈರುಳ್ಳಿ- 1
    ಕರಿಯಲು ಎಣ್ಣೆ
    ನೀರು

    ಮಾಡುವ ವಿಧಾನ:
    * ಒಂದು ಪ್ಲೇಟ್ ನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಶಿಣ ಪುಡಿ ಹಾಗೂ 1 ಚಮಚ ಚಿಲ್ಲಿ ಪೌಡರ್, 1/2 ಚಮಚ ಕರಿಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಬೇಯಿಸಿದ ಮೊಟ್ಟೆಯ ಮೇಲಿನ ಭಾಗವನ್ನಷ್ಟೇ ಕತ್ತರಿಸಿ.
    * ಕತ್ತರಿಸಿಕೊಂಡ ಬಳಿಕ ಮಿಕ್ಸ್ ಮಾಡಿದ ಪುಡಿಯನ್ನು ಮೊಟ್ಟೆಯ ಮೇಲೆ ಸವರಿ.

    * ನಂತರ ಒಂದು ಪಾತ್ರೆಯಲ್ಲಿ ಅರ್ಧ ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಚಿಲ್ಲಿ ಪೌಡರ್, ಅರ್ಧ ಚಮಚ ಕರಿಮೆಣಸಿನ ಪುಡಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈ ಮಿಕ್ಸ್ ಸ್ವಲ್ಪ ದಪ್ಪವಾಗಿರಬೇಕು. ಬಳಿಕ ಅದಕ್ಕೆ ಈಗಾಗಲೇ ರೆಡಿ ಮಾಡಿಟ್ಟಿದ್ದ ಮೊಟ್ಟೆಯ ಸುತ್ತಲೂ ಕವರ್ ಆಗುವಂತೆ ಡಿಪ್ ಮಾಡಿ.

    * ಇತ್ತ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ಬಳಿಕ ಮೊಟ್ಟೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
    * ಬೆಂದ ನಂತರ ಇನ್ನೊಂದು ಪಾತ್ರೆಗೆ ಬೋಂಡಾವನ್ನು ಎತ್ತಿಟ್ಟುಕೊಳ್ಳಿ.
    * ಬಳಿಕ ಬೋಂಡವನ್ನು 2 ಭಾಗವಾಗಿ ಕತ್ತರಿಸಿ ಅದಕ್ಕೆ ಕಟ್ ಮಾಡಿದ ಈರುಳ್ಳಿ ಮತ್ತು ಸ್ವಲ್ಪ ಚಿಲ್ಲಿ ಪೌಡರ್ ಹಾಕಿ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv