Tag: Egg Biryani

  • ʼಎಗ್ ಬಿರಿಯಾನಿʼ ಮಾಡುವ ಸುಲಭ ವಿಧಾನ

    ʼಎಗ್ ಬಿರಿಯಾನಿʼ ಮಾಡುವ ಸುಲಭ ವಿಧಾನ

    ಗ್ ಬಿರಿಯಾನಿ ಎಂದರೇ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಅದರಲ್ಲಿಯೂ ರೆಸ್ಟೋರೆಂಟ್ ಶೈಲಿಯಲ್ಲಿ ಮಾಡುವ ಎಗ್ ಬಿರಿಯಾನಿ ಬಾಯಲ್ಲಿ ನೀರು ಬರುತ್ತೆ. ಅದಕ್ಕೆ ಇಂದು ಸರಳ ವಿಧಾನದಲ್ಲಿ ಹೇಗೆ ಎಗ್ ಬಿರಿಯಾನಿ ಮಾಡಬೇಕು ಎಂದು ಟಿಪ್ಸ್ ಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಬಾಸುಮತಿ ಅಕ್ಕಿ -2 ಕಪ್
    * ಮೊಟ್ಟೆಗಳು – 6
    * ಕಟ್ ಮಾಡಿದ ಈರುಳ್ಳಿ – 1
    * ಕತ್ತರಿಸಿದ ಹಸಿರು ಮೆಣಸಿನಕಾಯಿಗಳು – 10
    * ಪಲಾವ್ ಎಲೆ – 2
    * ಲವಂಗ – 4
    * ಕಾಳುಮೆಣಸು – 1/2 ಟೀಸ್ಪೂನ್

    * ದಾಲ್ಚಿನ್ನಿ – 1 ಇಂಚು
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಪಲಾವ್ ಮಸಾಲಾ – 1 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಆರು ಮೊಟ್ಟೆಗಳಲ್ಲಿ ನಾಲ್ಕನ್ನು ಬೇಯಿಸಿಕೊಳ್ಳಿ.
    * ದೊಡ್ಡ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ, ಪಲಾವ್ ಎಲೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ.
    * ಕೆಲವು ಸೆಕೆಂಡುಗಳ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಉಳಿದ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಅಕ್ಕಿಯನ್ನು ಸೇರಿಸಿ, ಒಂದು ನಿಮಿಷ ಫ್ರೈ ಮಾಡಿ. ಉಪ್ಪಿನೊಂದಿಗೆ ಪಲಾವ್ ಮಸಾಲಾ ಹಾಕಿ ಚೆನ್ನಾಗಿ ಫ್ರೈ ಮಾಡಿ.

    * ಈಗ ಬೇಯಿಸಿದ ಮೊಟ್ಟೆಗಳನ್ನು ಹಾಕಿ. ನಾಲ್ಕು ಕಪ್ ನೀರು ಹಾಕಿ ಅಕ್ಕಿಯನ್ನು ಬೇಯಿಸಿ.
    * ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿರುವಾಗಲ್ಲೇ ಬಡಿಸಿ.

  • ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.

    ಬೇಕಾಗುವ ಪದಾರ್ಥಗಳು

    ಅಕ್ಕಿ- 2ಕಪ್‌
    ಮೊಟ್ಟೆ- 5
    ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ- ಸ್ವಲ್ಪ
    ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಹಸಿಮೆಣಸಿನ ಕಾಯಿ- 3
    ಈರುಳ್ಳಿ- 2
    ಟೊಮೆಟೋ- 2
    ಕೊಬ್ಬಂಬರಿ ಸೊಪ್ಪು- ಸ್ವಲ್ಪ
    ಮೊಸರು – ಅರ್ಧ ಕಪ್‌
    ದನಿಯಾ ಪುಡಿ- 1 ಚಮಚ
    ಖಾರದ ಪುಡಿ- 1 ಚಮಚ
    ಬಿರಿಯಾನಿ ಮಸಾಲೆ ಪುಡಿ- 2 ಚಮಚ
    ಅರಿಶಿಣದ ಪುಡಿ- ಅರ್ಧ ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಅಡುಗೆ ಎಣ್ಣೆ- ಅಧ ಕಪ್‌
    ತುಪ್ಪ- 2 ಚಮಚ

    ಮಾಡುವ ವಿಧಾನ:
    *ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

    *ತದನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

    * ಬಳಿಕ ಮೊಸಲು ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.

  • ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ನಾಳೆ ಭಾನುವಾರ ಹೀಗಾಗಿ ಎಲ್ಲರೂ ಮನೆಯಲ್ಲಿರುತ್ತೀರ. ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಪ್ರತಿ ಬಾರಿಯೂ ಚಿಕನ್ ಬಿರಿಯಾನಿ, ಕಬಾಬ್, ಮಟನ್ ತಿಂದು ಬೇಸರವಾಗಿರುತ್ತದೆ. ಹೊಸದಾಗಿ ಏನಾದರೂ ಮಾಡೋಣ ಎಂದು ಪ್ಲಾನ್ ಮಾಡುತ್ತಿರುತ್ತೀರಿ. ಮೊಟ್ಟೆ ಅಂದರೆ ಎಲ್ಲರಿಗೂ ಇಷ್ಟ. ಮೊಟ್ಟೆಯಲ್ಲಿ ಅನೇಕ ಅಡುಗೆಯನ್ನು ತಯಾರಿಸಬಹುದು. ಆದ್ದರಿಂದ ನಿಮಗಾಗಿ ಸ್ಪೈಸಿ ಆದ ಎಗ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 5
    2. ಅಕ್ಕಿ – ಒಂದು ಗ್ಲಾಸ್
    3. ಈರುಳ್ಳಿ – 2
    4. ಟೊಮೆಟೊ – 3
    5. ಹಸಿರು ಮೆಣಸಿನಕಾಯಿ – 3
    6. ಖಾರದ ಪುಡಿ- 1.5 ಚಮಚ
    7. ಗರಂ ಮಸಾಲ – 1.5 ಚಮಚ
    8. ದನಿಯಾ ಪುಡಿ – 1.5 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ


    10. ಎಣ್ಣೆ – 3 ಚಮಚ
    11. ಉಪ್ಪು – ರುಚಿಗೆ ತಕ್ಕಷ್ಟು
    12. ಪುದಿನ, ಕೊತ್ತಂಬರಿ ಸೊಪ್ಪು
    13. ಲವಂಗ, ಚಕ್ಕೆ, ಸ್ಟಾರ್ ಹೂ – 2
    14. ಏಲಕ್ಕಿ, ಪಲವ್ ಎಲೆ – 2
    15. ಅರಿಶಿಣ – 1 ಚಮಚ

    ಮಾಡುವ ವಿಧಾನ
    * ಮೊದಲಿಗೆ 5 ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಬೇಕು.
    * ಸ್ಟೌವ್ ಮೇಲೆ ಒಂದು ಕುಕ್ಕರ್ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಅರ್ಧ ಚಮಚ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಲಾ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ.
    * ಅದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಮೊಟ್ಟೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಒಂದು ಬೌಲ್‍ಗೆ ಎತ್ತಿಟ್ಟುಕೊಳ್ಳಿ.
    * ಈಗ ಅದೇ ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಲವಂಗ, ಚಕ್ಕೆ, ಸ್ಟಾರ್ ಹೂ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಹಸಿರು ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.


    * ನಂತರ ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ (ಸಣ್ಣದಾಗಿ ಕಟ್ ಮಾಡಿರಬೇಕು)
    * ಈಗ ಪುದಿನ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ದನಿಯಾ, ಗರಂ ಮಸಲಾ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಅದಕ್ಕೆ ಒಂದು ಗ್ಲಾಸ್ ಅಕ್ಕಿ ತೆಗೆದುಕೊಂಡಿದ್ದರೆ ಅದಕ್ಕೆ 2 ಗ್ಲಾಸ್ ನೀರು ಹಾಕಿ. (ನೀವು ಅಕ್ಕಿ ತೆಗೆದುಕೊಳ್ಳುವುದರ ಮೇಲೆ ನೀರು ಹಾಕಿಕೊಳ್ಳಬೇಕು.)
    * ಮತ್ತೆ ಸ್ವಲ್ಪ ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.
    * ಕೊನೆಯಲ್ಲಿ ಬೇಯಿಸಿದ ಮೊಟ್ಟೆ ಹಾಕಿ ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ರುಚಿಯಾದ ಎಗ್ ಬಿರಿಯಾನಿ ಸವಿಯಲು ಸಿದ್ಧ