Tag: Egg Bhurji

  • ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ನೀವು ಎಗ್ ಬುರ್ಜಿ, ಎಗ್ ರೋಸ್ಟ್ ಎಲ್ಲಾ ಮಾಡಿದ್ದರೆ ಇದೊಂದು ಸರಳವಾದ ರೆಸಿಪಿ ಟ್ರೈ ಮಾಡಿ ನೋಡಿ, ರುಚಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಮೊಟ್ಟೆಯನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು, ನೀವು ಮೊಟ್ಟೆಯಿಂದ ಸಾರು ಅಥವಾ ಬುರ್ಜಿ ಮಾಡುವಾಗ ಕೆಲವು ಮಸಾಲೆಯನ್ನು ಹಾಕಿದರೆ ಅದೇ ವಿಭಿನ್ನವಾದ ರುಚಿಯನ್ನು ಕೊಡುತ್ತದೆ. ನಾವು ಇಂದು ಮನೆಯಲ್ಲಿಯೇ ಇರುವ ಕೆಲವೇ ಸಾಮಗ್ರಿಗಳು ಬಳಸಿಕೊಂಡು ರುಚಿಯಾಗಿ ಮಾಡುವ ಮೊಟ್ಟೆ ಪಲ್ಯ ಮಾಡುವ ವಿಧಾನ ಇಲ್ಲಿದೆ.


    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆ – 4
    * ಕ್ಯಾಪ್ಸಿಕಂ -1 (ಇದರ ಬೀಜ ಹಾಕಬೇಡಿ)
    * ಟೊಮೆಟೊ -1
    * ಅಡುಗೆ ಎಣ್ಣೆ -4 ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ಜೀರಿಗೆ ಪುಡಿ -1 ಚಮಚ
    * ರುಚಿಗೆ ತಕ್ಕ ಉಪ್ಪು
    * ಖಾರದ ಪುಡಿ – 1 ಚಮಚ
    * ಕಸೂರಿ ಮೇಥಿ – 1 ಚಮಚ
    * ಎಗ್ ಮಸಾಲ 1 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಮೊದಲು ಮೊಟ್ಟೆಗಳನ್ನು ಬೇಯಿಸಿ ಕಟ್ ಮಾಡಿ ಇಟ್ಟುಕೊಳ್ಳಿ
    * ಒಂದು ಬಾಣಲೆ ತೆಗೆದುಕೊಂಡು ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ

    * ಎಣ್ಣೆ ಬಿಸಿಯಾದಾಗ ಕತ್ತರಿಸಿದ ಕ್ಯಾಪ್ಸಿಕಂ, ಟೊಮೆಟೊ, ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.
    * ನಂತರ ಕಸೂರಿ ಮೇಥಿಯನ್ನು ಕೈಯಲ್ಲೇ ಪುಡಿ ಮಾಡಿ ಹಾಕಿ. ಇದನ್ನೂ ಓದಿ: ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

    * ಈಗ ಕತ್ತರಿಸಿದ ಮೊಟ್ಟೆಯನ್ನು ಮಸಾಲೆಗೆ ಹಾಕಿ.
    * ಈಗ ಒಂದು ಚಮಚ ಎಗ್ ಮಸಾಲ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ಸಿಂಪಲ್ ಆಗಿ ಎಗ್ ಬುರ್ಜಿ ಮಾಡುವ ವಿಧಾನ

    ಸಿಂಪಲ್ ಆಗಿ ಎಗ್ ಬುರ್ಜಿ ಮಾಡುವ ವಿಧಾನ

    ಭಾನುವಾರ ಬಂದರೆ ಸಾಕು ಮನೆಯಲ್ಲಿ ನಾವ್ ವೆಜ್ ಮಾಡಿ ಎಂದು ಕೇಳುತ್ತಾರೆ. ಮೊಟ್ಟೆ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚು. ಆದರೆ ಬೇಯಿಸಿದ ಮೊಟ್ಟೆ, ಆಮ್ಲೇಟ್ ಮಾಡಿ ತಿಂದು ಬೇಸರವಾಗಿರುತ್ತದೆ. ಆದ್ದರಿಂದ ನಿಮಗಾಗಿ ಸುಲಭವಾಗಿ ಎಗ್ ಬುರ್ಜಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮೊಟ್ಟೆ – 4
    2. ಈರುಳ್ಳಿ – 1
    3. ಹಸಿ ಮೆಣಸಿನಕಾಯಿ – 3
    4. ಕೊತ್ತಂಬರಿ ಸೊಪ್ಪು – ಸ್ವಲ್ಪ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – 3 ಚಮಚ
    7. ಕೊತ್ತಂಬರಿ ಪುಡಿ – 1 ಚಮಚ
    8. ಅರಿಶಿಣ – 1/4 ಚಮಚ
    9. ತೆಂಗಿನ ತುರಿ – ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಸ್ಟವ್ ಮೇಲೆ ಬಾಣಲೆ ಇಟ್ಟು, ಅದಕ್ಕೆ 3 ಚಮಚ ಎಣ್ಣೆ ಹಾಕಿ.
    * ಎಣ್ಣೆ ಬಿಸಿಯಾದ ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಹಾಕಿ ಫ್ರೈ ಮಾಡಿ.
    * ನಂತರ ಅರಿಶಿಣ, 1 ಚಮಚ ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈಗ ಸಣ್ಣ ಉರಿಯಲ್ಲಿ ಒಂದೊಂದೆ ಮೊಟ್ಟೆ ಒಡೆದು ಹಾಕಿ (ಬೇರೆ ಬೌಲ್ ನಲ್ಲಿ ಮೊಟ್ಟೆಗಳನ್ನು ಒಡೆದು ಇಟ್ಟುಕೊಳ್ಳಬಹುದು)
    * ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
    * ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ತೆಂಗಿನ ತುರಿ ಹಾಕಿ ಫ್ರೈ ಮಾಡಿದರೆ ಎಗ್ ಬುರ್ಜಿ ಸವಿಯಲು ಸಿದ್ಧ
    * ಎಗ್ ಬುರ್ಜಿಯನ್ನು ಚಪಾತಿಯ ಜೊತೆಯಲ್ಲಿಯೂ ತಿನ್ನಬಹುದು. ಇಲ್ಲ ಸ್ನ್ಯಾಕ್ ರೀತಿಯಲ್ಲೂ ತಿನ್ನಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv