Tag: eega

  • ‘ಈಗ 2’ ಬರುವ ಬಗ್ಗೆ ನಾನಿ ಕೊಟ್ರು ಇಂಟರೆಸ್ಟಿಂಗ್ ಅಪ್‌ಡೇಟ್

    ‘ಈಗ 2’ ಬರುವ ಬಗ್ಗೆ ನಾನಿ ಕೊಟ್ರು ಇಂಟರೆಸ್ಟಿಂಗ್ ಅಪ್‌ಡೇಟ್

    ನ್ಯಾಚುರಲ್ ಸ್ಟಾರ್ ನಾನಿ (Nani) ಸದ್ಯ ಮುಂಬರುವ ‘ಸೂರ್ಯನ ಸಾಟರ್ಡೆ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಈಗ 2’ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಸದ್ಯಕ್ಕೆ ‘ಈಗ ಪಾರ್ಟ್ 2’ (Eega 2) ಬರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ರಿಪ್ಪನ್ ಸ್ವಾಮಿ’ ಚಿತ್ರದ ಪೋಸ್ಟರ್‌ ಔಟ್- ರಾ ಲುಕ್‌ನಲ್ಲಿ ವಿಜಯ್ ರಾಘವೇಂದ್ರ

    ‘ಈಗ’ (Eega) ಸಿನಿಮಾದ ಕಥೆ ಬರೆದಿದ್ದು ರಾಜಮೌಳಿ (Rajamouli) ಅವರ ತಂದೆ ವಿಜಯೇಂದ್ರ ಪ್ರಸಾದ್. ನಮ್ಮಿಬ್ಬರ ನಡುವೆ ಸೀಕ್ವೆಲ್ ಬಗ್ಗೆ ಎಂದೂ ಚರ್ಚೆ ನಡೆದಿಲ್ಲ. ಈ ಹಿಂದೆ ರಾಜಮೌಳಿ ಅವರ ಬಳಿ ತಮಾಷೆಯಾಗಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಏನಾಯಿತು ಸರ್? ನಾನು ಮತ್ತೆ ಬರುತ್ತೇನೆ ಎಂದಿದ್ದೀರಿ. ಅದು ಯಾವಾಗ? ಎಂದು ಕೇಳುತ್ತಿದ್ದೆ. ಅವರು ಈಗ 2 ಚಿತ್ರ ಮಾಡುತ್ತೇನೆ. ಆದರೆ ಅದಕ್ಕೆ ನಿನ್ನ ಅಗತ್ಯ ಇಲ್ಲ ಎಂದು ನಗುತ್ತಿದ್ದರು ಎಂದಿದ್ದಾರೆ ನಾನಿ. ಸರಿಯಾದ ಸಮಯ ಬಂದಾಗ ಅವರು ‘ಈಗ 2’ ಮಾಡುತ್ತಾರೆ. ಆದರೆ ಸದ್ಯಕ್ಕೆ ಇದರ ಸೀಕ್ವೆಲ್ ಮಾಡಲ್ಲ ಎಂದಿದ್ದಾರೆ ನಾನಿ.

    ನಾನಿ, ಕಿಚ್ಚ ಸುದೀಪ್ (Sudeep), ಸಮಂತಾ (Samantha) ನಟನೆಯ ‘ಈಗ’ ಸಿನಿಮಾ 2012ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ನೊಣದ ಕಥೆಯನ್ನು ಅದ್ಭುತವಾಗಿ ತೋರಿಸಿದ್ದರು. ಈ ಚಿತ್ರದ ಸೀಕ್ವೆಲ್ ಮಾಡಿದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಆಶಯಕ್ಕೆ ಸಂದರ್ಶನವೊಂದರಲ್ಲಿ ನಾನಿ (Nani) ಕಡೆಯಿಂದ ಉತ್ತರ ಸಿಕ್ಕಿದೆ.

    ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ ಜೋಡಿಯಾಗಿ ನಟಿಸಿದರು. ಕನ್ನಡದ ನಟ ಕಿಚ್ಚ ಸುದೀಪ್ ವಿಲನ್ ಆಗಿ ಮಿಂಚಿದ್ದರು.

  • ಕಿಚ್ಚನಿಗೆ ಇಂದು ವಿಶೇಷ ದಿನ : ಫ್ಯಾನ್ಸ್ ಸಂಭ್ರಮ

    ಕಿಚ್ಚನಿಗೆ ಇಂದು ವಿಶೇಷ ದಿನ : ಫ್ಯಾನ್ಸ್ ಸಂಭ್ರಮ

    ಕಿಚ್ಚನಿಗೆ (Kiccha) ಎಂದು ಮರೆಯಲಾಗದ ದಿನವಿಂದು. ಅಲ್ಲದೇ, ಸುದೀಪ್ (Sudeep) ಅವರ ವೃತ್ತಿ ಬದುಕಿಗೆ ಇವತ್ತಿನ ದಿನ ತುಂಬಾ ಸ್ಪೆಷಲ್. ಅದಕ್ಕೊಂದು ಕಾರಣವಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಈ ದಿನ ಬಹಳ ವಿಶೇಷ. ಸುದೀಪ್ ಸಿನಿಕರಿಯರ್ ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ (Huchcha) ಬಿಡುಗಡೆಯಾಗಿ ಸರಿಯಾಗಿ 22 ವರ್ಷ ಕಳೆದಿದೆ.

    2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ ಗಳಲ್ಲಿ ಕಾಣಿಸಿಕೊಂಡ ಸುದೀಪ್ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

    ಅದಾಗಿ 11 ವರ್ಷ ಕಳೆಯುವುದರಲ್ಲಿ ಅಂದರೆ 2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ಜಕ್ಕಣ್ಣ ಕೈ ಜೋಡಿಸಿ ‘ಈಗ’  (Eega)  ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜುಲೈ 6ರಂದು. ಅಂದರೆ ಇವತ್ತಿಗೆ 11 ವರ್ಷ. ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ತುಂಬಾ ಸ್ಪೆಷಲ್.

    ಧೂಳ್ ಎಬ್ಬಿಸಿದ ಕಿಚ್ಚ 46 ಟೀಸರ್

    ಕಿಚ್ಚ ಸುದೀಪ್ ಸದ್ಯ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 2ರಂದು ಯೂಟ್ಯೂಬ್ ಲೋಕಕ್ಕೆ ಎಂಟ್ರಿ ಕೊಟ್ಟ ಡಿಮೋನ್ ಟೀಸರ್ ಭಾರೀ ಸದ್ದು ಮಾಡ್ತಿದೆ. ರಕ್ತಸಿಕ್ತ ದೇಹದ ಹೆಬ್ಬುಲಿ ಘರ್ಜನೆ ಜೋರಾಗಿದೆ. ಇದೇ ಜುಲೈ 15ರಿಂದ ಸುದೀಪ್ ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಬಾಹುಬಲಿ’ ನಿರ್ದೇಶಕನ ಗ್ಯಾಂಗ್‌ಗೆ ಮತ್ತೆ ಕಿಚ್ಚನ ಎಂಟ್ರಿ.!

    `ಬಾಹುಬಲಿ’ ನಿರ್ದೇಶಕನ ಗ್ಯಾಂಗ್‌ಗೆ ಮತ್ತೆ ಕಿಚ್ಚನ ಎಂಟ್ರಿ.!

    ಕಿಚ್ಚ ಸುದೀಪ್ ಅಭಿನಯದ `ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಕೆಲಸದಲ್ಲಿ ಕಿಚ್ಚ ಸುದೀಪ್ ಆ್ಯಂಡ್ ಟೀಮ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್‌ಗೆ ಬಾಹುಬಲಿ ನಿರ್ದೇಶಕನಿಂದ ಬುಲಾವ್ ಬಂದಿದೆ.

    ಭಿನ್ನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಸುದೀಪ್ ನಟನೆಯಲ್ಲಿ ಚಕ್ರವರ್ತಿ, ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ನಟಿಸಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಸದ್ಯ `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಸುದೀಪ್‌ಗೆ ಮತ್ತೆ ರಾಜಮೌಳಿ ಕ್ಯಾಂಪ್‌ನಿಂದ ಕರೆ ಬಂದಿದೆ. ಹೊಸ ಚಿತ್ರದ ವಿಷ್ಯವಾಗಿ ಮಾತನಾಡಲು ರೈಟರ್‌ ವಿಜಯೇಂದ್ರ ಪ್ರಸಾದ್‌ ಕಡೆಯಿಂದ ಕಿಚ್ಚನಿಗೆ ಬುಲಾವ್ ಬಂದಿದೆ. ಅಷ್ಟೇ ಅಲ್ಲ, ಈ ವಿಷ್ಯವಾಗಿ ಮಾತುಕಥೆ ನಡೆಸಲು ಕಿಚ್ಚ ಕೂಡ ಹೈದರಾಬಾದ್‌ಗೆ ಹಾರಿದ್ದಾರೆ. ಇದನ್ನೂ ಓದಿ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ: 21 ಸಿಟಿಗಳಲ್ಲಿ ಚಾರ್ಲಿ-777 ಪ್ರೀಮಿಯರ್

    ಈಗಾಗಲೇ ರಾಜಮೌಳಿ ಜತೆ ಈಗ, ಬಾಹುಬಲಿ ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಜತೆ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲು ರಾಜಮೌಳಿ ಕಡೆಯಿಂದ ಕರೆ ಬಂದಿದೆ. ಜಕ್ಕಣ್ಣನ ಜೊತೆ ಮೊದಲ ಚಿತ್ರದಿಂದ ಇಂದಿನವೆರಗೂ ಒಳ್ಳೆಯ ಬಾಂದವ್ಯವಿರುವ ಕಿಚ್ಚನಿಗಾಗಿ ಮತ್ತೆ ಹೊಸ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲು ರೆಡಿಯಾಗಿದ್ದಾರೆ. ರಾಜಮೌಳಿ ತಂದೆ ಖ್ಯಾತ ರೈಟರ್ ವಿಜಯೇಂದ್ರ ಪ್ರಸಾದ್ ಕರೆ ಮಾಡಿ, ಸುದೀಪ್ ಜತೆ ಮಾತುಕಥೆ ನಡೆಸಿದ್ದಾರೆ.

    ಸದ್ಯ ರಾಜಮೌಳಿ ಆರ್‌ಆರ್‌ಆರ್ ಸಕ್ಸಸ್ ನಂತರ ಮಹೇಶ್ ಬಾಬುಗೆ ನಿರ್ದೇಶನ ಮಾಡ್ತಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೋ ಅಥವಾ ಕಿಚ್ಚನಿಗಾಗಿ ಮತ್ತೊಂದು ಚಿತ್ರ ಮಾಡುತ್ತಿದ್ದಾರೋ ಅನ್ನೋದರ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಸುದೀಪ್‌ಗಾಗಿ ಒಂದು ಕಥೆ ರೆಡಿ ಮಾಡಿರೋದಂತೂ ಗ್ಯಾರೆಂಟಿ. ಈ ಎಲ್ಲದರ ಕುರಿತು ಚಿತ್ರತಂಡ ಅಧಿಕೃತ ಅನೌನ್ಸ್ ಮಾಡುವವರೆಗೂ ಕಾಯಲೇಬೇಕು.

  • ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

    ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಇಂದು ಮಹತ್ವದ ದಿನ. 25 ವರ್ಷಗಳ ಸಿನಿ ಜರ್ನಿಯಲ್ಲಿ ಸುದೀಪ್‍ರವರು ಸಕ್ಸಸ್ ಕಾಣಲು ಜುಲೈ 6 ಪ್ರಮುಖ ಪಾತ್ರವಹಿಸಿದೆ.

    ಹೌದು, ಜುಲೈ 6 ಕಿಚ್ಚ ಸುದೀಪ್ ಅಭಿನಯಿಸಿದ ಹುಚ್ಚ ಹಾಗೂ ಈಗ ಎರಡು ಸಿನಿಮಾಗಳು ಬಿಡುಗಡೆಯಾದ ದಿನ. ಸಿನಿರಂಗದಲ್ಲಿ ಸುದೀಪ್‍ರವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾ ಹುಚ್ಚ ಆದರೆ, ಇಡೀ ಭಾರತೀಯ ಸಿನಿಮಾ ರಂಗವೇ ಕಿಚ್ಚನ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಈಗ. ಸದ್ಯ ಈ ಕುರಿತಂತೆ ಸುದೀಪ್‍ರವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ತಾಯವ್ವ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುದೀಪ್, ನಂತರ ರಮೇಶ್ ಅರವಿಂದ್ ಅಭಿನಯದ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಿರ್ದೇಶಕ ಕುಮಾರ್ ದೇಸಾಯಿ ನಿರ್ದೇಶಿಸಿದ ಸ್ಪರ್ಶ ಸಿನಿಮಾದ ಮೂಲಕ ನಾಯಕರಾಗಿ ಹೊರಹೊಮ್ಮಿದರು. ಆದರೆ ಈ ಸಿನಿಮಾ ಸುದೀಪ್‍ರವರಿಗೆ ಅಷ್ಟಾಗಿ, ಖ್ಯಾತಿ ಹಾಗೂ ಯಶಸ್ಸು ತಂದು ಕೊಡಲಿಲ್ಲ.

    ಆದರೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಸುದೀಪ್‍ರವರ ಕಾಂಬೀನೇಷನ್‍ನಲ್ಲಿ 2001ರ ಜುಲೈ 6 ರಂದು ಬಿಡುಗಡೆಯಾದ ಹುಚ್ಚ ಸಿನಿಮಾ ಚಂದನವನದಲ್ಲಿ ಬಿಗ್ ಸಕ್ಸಸ್ ಕಂಡಿತು. ಈ ಸಿನಿಮಾ ಸುದೀಪ್‍ರವರ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡುವುದರ ಜೊತೆಗೆ ಕಿಚ್ಚ ಎಂಬ ಸ್ಟಾರ್ ಪಟ್ಟ ತಂದು ಕೊಟ್ಟಿತು. ಸದ್ಯ ಹುಚ್ಚ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ ತುಂಬಿದೆ.

    ಮತ್ತೊಂದು ವಿಶೇಷವೆಂದರೆ ಕಿಚ್ಚ ಸುದೀಪ್ ಅಭಿನಯಿಸಿದ ಟಾಲಿವುಡ್ ಸಿನಿಮಾ ಈಗ ಕೂಡ 2012 ಜುಲೈ 6 ರಂದು ಬಿಡುಗಡೆಗೊಂಡಿತು. ಮೊದಲ ಬಾರಿಗೆ ತೆಲುಗಿನಲ್ಲಿ ಬಣ್ಣ ಹಚ್ಚಿದ್ದ ಸುದೀಪ್‍ರವರಿಗೆ ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುವುದರ ಜೊತೆಗೆ, ಬಿಗ್ ಸಕ್ಸಸ್ ಕಂಡಿತು. ನಂತರ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸುದೀಪ್ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

    ಸದ್ಯ ಈ ವಿಶೇಷ ದಿನದ ಪ್ರಯುಕ್ತ ಸುದೀಪ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ, 11 ವರ್ಷಗಳ ಅಂತರದಲ್ಲಿ. ರೆಹಮಾನ್ ಮತ್ತು ಓಂ ಪ್ರಕಾಶ್, ಸಾಯಿ ಗುರು ಹಾಗೂ ರಾಜಮೌಳಿಯವರಿಗೆ ಬಹಳ ಧನ್ಯವಾದ, ಲವ್ ಯೂ ಆಲ್ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  • ಜುಲೈ 6, ನನ್ನ ಜೀವನದಲ್ಲಿ ಯಾವಾಗಲೂ ತುಂಬಾ ವಿಶೇಷವಾದ ದಿನ: ಸುದೀಪ್

    ಜುಲೈ 6, ನನ್ನ ಜೀವನದಲ್ಲಿ ಯಾವಾಗಲೂ ತುಂಬಾ ವಿಶೇಷವಾದ ದಿನ: ಸುದೀಪ್

    ಬೆಂಗಳೂರು: ನಟ-ನಟಿ ಯಾರೆ ಆಗಲಿ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಒಂದು ದಿನ ಇರುತ್ತದೆ. ಅಂದಿನ ದಿನಗಳಲ್ಲಿ ನಡೆದ ವಿಚಾರಗಳು ಅಥವಾ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅದೇ ರೀತಿ ಈಗ ನಟ ಕಿಚ್ಚ ಸುದೀಪ್ ತನ್ನ ಜೀವನದಲ್ಲಿ ಜುಲೈ 6 ಎಂದಿಗೂ ಮರೆಯಲಾಗದ ದಿನವಾಗಿದೆ ಎಂದು ಹೇಳುತ್ತಿದ್ದಾರೆ.

    ಸುದೀಪ್ ಜೂಲೈ 6 ತಮ್ಮ ಸಿನಿಮಾರಂಗದಲ್ಲಿ ಮರೆಯಲಾಗದ ದಿನ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಜುಲೈ 6 ರಂದು ಸುದೀಪ್ ಅವರಿಗೆ ಎರಡು ರೀತಿಯ ತಿರುವನ್ನು ಸಿನಿಮಾರಂಗ ನೀಡಿದೆ. ಆದ್ದರಿಂದ ಅವರು ಈ ದಿನವನ್ನು ಅವರು ಈಗ ಸ್ಮರಿಸಿದ್ದಾರೆ.

    ಜುಲೈ 6 2001 ರಲ್ಲಿ ಸುದೀಪ್ ನಟನಾಗಿ ಅಭಿನಯ ಮಾಡಿದ `ಹುಚ್ಚ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದ ಮೂಲಕವೇ ಅವರು ಸ್ಯಾಂಡಲ್‍ ವುಡ್ ನಲ್ಲಿ ಭರವಸೆಯ ನಟನಾಗಿ ಪರಿಚಯಗೊಂಡಿದ್ದರು. ಅದೇ ರೀತಿ ಸುದೀಪ್ ಟಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದ `ಈಗ’ ಚಿತ್ರ ಕೂಡ 2012 ಜುಲೈ 6 ರಂದೇ ಬಿಡುಗಡೆಗೊಂಡಿತ್ತು. `ಈಗ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸ್ಟಾರ್ ಟಾಲಿವುಡ್ ನಲ್ಲಿಯೂ ಮಿಂಚಿದ್ದರು.

    ತಮ್ಮ ಸಿನಿಮಾರಂಗದ ಬದುಕಿನಲ್ಲಿ ತಿರುವು ಕೊಟ್ಟ ಜುಲೈ 6ನೇ ದಿನವನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. `ಹುಚ್ಚ’ ಮತ್ತು `ಈಗ’ ಎರಡು ಸಿನಿಮಾದ ತಂಡದವರಿಗೆ ಧನ್ಯವಾದಗಳು. ಈ ದಿನ ನನಗೆ ಬಹಳ ವಿಶೇಷವಾಗಿದ್ದು, ಒಬ್ಬ ನಟನಾಗಿ ನನ್ನನ್ನು ಪರಿಚಯಿಸಿದ ದಿನವಾಗಿದೆ. ಜೊತೆಗೆ ಅಭಿಮಾನಿಗಳು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಜುಲೈ 6 ನನ್ನ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಕಿಚ್ಚ ಸುದೀಪ್‍ಗೆ ಆಂಧ್ರ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿ

    ಕಿಚ್ಚ ಸುದೀಪ್‍ಗೆ ಆಂಧ್ರ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿ

    ಹೈದರಾಬಾದ್: ಬಹುಭಾಷಾ ನಟ ಕಿಚ್ಚ ಸುದೀಪ್‍ಗೆ ಆಂಧ್ರ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿ ಸಿಕ್ಕಿದೆ.

    2012ನೇ ಸಾಲಿನ ಚಲನ ಚಿತ್ರ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದ್ದು, ‘ಈಗ’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅವರಿಗೆ ಅತ್ಯುತ್ತಮ ಖಳ ನಟ ಪ್ರಶಸ್ತಿ ಸಿಕ್ಕಿದೆ. ಈ ಪಟ್ಟಿಯಲ್ಲಿ ಈಗ ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 6 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

    ಅತ್ಯುತ್ತಮ ನಿರ್ದೇಶನ ಮತ್ತು ಚಿತ್ರಕಥೆ ಸಂಭಾಷಣೆ ವಿಭಾಗದಲ್ಲಿ ರಾಜಮೌಳಿ ಅವರಿಗೆ ಪ್ರಶಸ್ತಿ ಸಿಕ್ಕಿದರೆ, ಅತ್ಯುತ್ತಮ ಛಾಯಾಗ್ರಾಹಕ ವಿಭಾಗದಲ್ಲಿ ಸೆಂಥಿಲ್ ಕುಮಾರ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಸಂಕಲನ ಮಾಡಿದ್ದಕ್ಕೆ ಎಡಿಟರ್ ವೆಂಕಟೇಶ್ವರ ರಾವ್ ಅವರಿಗೆ ಪ್ರಶಸ್ತಿ ಸಿಕ್ಕಿದೆ.

    ತೆಲುಗುವಿನಲ್ಲಿ ಅಭಿನಯಿಸಿದ ಮೊದಲ ಚಿತ್ರದಲ್ಲೇ ಸುದೀಪ್ ಅವರು ‘ನಂದಿ ಪ್ರಶಸ್ತಿ’ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ತೆಲುಗು ನಟ ನಾನಿ ಮತ್ತು ಸಮಂತಾ ನಾಯಕ, ನಾಯಕಿಯಾಗಿ ಅಭಿನಯಿಸಿದ್ದ ‘ಈಗ’ದಲ್ಲಿ ಸುದೀಪ್ ವಿಲನ್ ಆಗಿ ಅಭಿನಯಿಸಿದ್ದರು.