Tag: education

  • ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ದಾವಣಗೆರೆ: ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಚನ್ನಗಿರಿ ತಾಲೂಕಿನ ದೇವನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಓದುವ ಕನಸು ಕಾಣುತ್ತಿದ್ದರೂ ಬಡತನ ಅಡ್ಡಿಯಾಗಿದೆ.

    ದೇವನಹಳ್ಳಿ ಗ್ರಾಮದ ಹನುಮಂತಯ್ಯ ಹಾಗೂ ಮಂಜುಳಾಬಾಯಿಯರ ಪುತ್ರನಾಗಿರುವ ಚೇತನ್ ಬಡತನ ಎನ್ನುವ ಬೆಂಕಿಯಲ್ಲಿ ಅರಳಿದ ಪ್ರತಿಭೆಯಾಗಿದ್ದಾನೆ. ಇಡೀ ಶಾಲೆಗೆ ಓದಿನಲ್ಲಿ ಪ್ರಥಮನಾಗಿರುವ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದಾರೆ. ಅವರು ದುಡಿದರೇ ಮಾತ್ರ ಕುಟುಂಬಕ್ಕೆ ಒಂದು ತುತ್ತು ಅನ್ನ ಇಲ್ಲವಾದರೆ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ. ಆದರೆ ಓದಿ ಓಳ್ಳೆಯ ಕೆಲಸ ಪಡೆದು ತಾಯಿಯನ್ನು ಸುಖವಾಗಿ ನೋಡಿಕೊಳ್ಳುವ ಆಸೆ ಈ ಹುಡುಗನದ್ದು. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಈ ಪ್ರತಿಭಾವಂತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ.

     

    ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್, ತಾಯಿ ಮಂಜುಳಾಬಾಯಿ ಗ್ರಾಮದ ನವೋದಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ತಂದೆಗೆ ಕೆಲವು ವರ್ಷಗಳ ಹಿಂದೆ ಅಪಘಾತವಾಗಿ ಸೊಂಟ ಮುರಿದು ಹೋಗಿದೆ. ಅಂದಿನಿಂದ ತಾಯಿಯೇ ನವೋದಯ ಶಾಲೆಯಲ್ಲಿ ಕೆಲಸ ಮಾಡಿ ಬಂದ 6 ಸಾವಿರ ರೂಪಾಯಿ ಸಂಬಳದಿಂದ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಇದರ ಫಲವಾಗಿ ಮಗ ಚೇತನ್ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 94% ಅಂಕ ಪಡೆದು ಜಿಲ್ಲೆಗೆ 3ನೇ ರ‍್ಯಾಂಕ್ ತಂದು ಕೊಟ್ಟಿದ್ದಾನೆ.

    ಬಡತನದ ನಡೆಯುವೆಯೂ ಚೇತನ್ ಓದಿ ಉತ್ತಮ ಅಂಕ ಪಡೆದಿದ್ದನ್ನು ನೋಡಿ ವ್ಯಕ್ತಿಯೊಬ್ಬರು ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ಶೃಂಗೇರಿ  ಬಿಜಿಎಸ್ ಸೈನ್ಸ್ ಪಿಯು ಕಾಲೇಜಿಗೆ ಪ್ರಥಮ ಪಿಯುಸಿ ಪಿಸಿಎಂಬಿಗೆ ಅಡ್ಮಿಷನ್ ಮಾಡಿಸಿದ್ದರು. ಆದರೆ ಶುಲ್ಕ ಪಾವತಿ ಮಾಡದೇ ಕೈಕೊಟ್ಟಿದ್ದಾರೆ. ಆದಾಗಿ ತಾಯಿ ತನ್ನ ಮಾಂಗಲ್ಯ ಮಾರಿ ಶುಲ್ಕ ಪಾವತಿ ಮಾಡಿ ಓದಿಸಿದ್ದಾರೆ. ಮಗ ಚೇತನ್ ಪ್ರಥಮ ಪಿಯುಸಿ ಪಿಸಿಎಂಬಿಯಲ್ಲಿ ಶೇಕಡಾ 94% ಅಂಕ ಗಳಿಸಿದ್ದಾನೆ. ಆದರೆ ಈಗ ದ್ವಿತೀಯ ಪಿಯುಸಿಗೆ ಪ್ರವೇಶ ಶುಲ್ಕ ಭರಿಸಲಾಗದೇ ತಾಯಿ ಕಷ್ಟಕ್ಕೆ ಸಿಲುಕಿದ್ದಾರೆ.

    ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ಪೋಷಕರನ್ನು ನೋಡಿಕೊಳ್ಳಬೇಕು, ತಂಗಿಯನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಂಡಿರುವ ಚೇತನ್‍ಗೆ ಬಡತನ ಅಡ್ಡಿಯಾಗಿದೆ. ಮಗಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು ಸಹಾಯ ಮಾಡಿ ಎಂದು ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=yFZYGNtdb1o

     

  • ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ ಬೇಕು. ಇನ್ನು ಈ ಗ್ರಾಮದ ಜನರಿಗೆ ಸ್ವಂತ ಮನೆಯಿದ್ದರು ಬಾಡಿಗೆ ಮನೆಯಲ್ಲಿ ಇರುವ ಸ್ಥಿತಿ ಇಲ್ಲಿಯದ್ದು, ಇದೊಂದು ಶಾಪಗ್ರಸ್ಥ ಗ್ರಾಮವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 20 ಕಿಲೋಮೀಟರ್ ದೂರದ ವೈಲವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಮ್ಮಳೆ ಜೋಗ್ ಗ್ರಾಮದಲ್ಲಿ ಯುವಕರಿಗೆ ಮದುವೆಯಾಗದಂತೆ ಅಡ್ಡಿಯಾಗಿರುವುದು. ಈ ಗ್ರಾಮದ ಸುತ್ತಲೂ ಕಾಳಿ ನದಿನೀರು ಹರಿಯುತಿದ್ದು, ದ್ವೀಪ ಪ್ರದೇಶವಾಗಿದೆ. ಹೀಗಾಗಿ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು.

    ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 500 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯವನ್ನು ನಂಬಿ ಬದುಕುತಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮಮನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇನ್ನು ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ.

    ಈ ಭಾಗದಲ್ಲಿ ಭತ್ತ, ತೆಂಗು, ಬಾಳೆ ಫಸಲನ್ನು ಬೆಳಸುತ್ತೇವೆ. ಆದರೆ ಅವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ಕೊಂಡೊಯ್ಯಬೇಕಿದ್ದು ಬಲು ತ್ರಾಸದಾಯಕವಾಗಿದೆ. ಹೀಗಾಗಿ ಹಲವರು ವ್ಯವಸಾಯವನ್ನು ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೋಗಿಟ್ಟು ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ಭೂಮಿಯನ್ನೇ ನಂಬಿ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ನಡೆಸಿ ಮನವಿ ಸಹ ನೀಡಿದ್ದಾರೆ. ಆದರೆ ಈವರೆಗೂ ಸರ್ಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಮ್ಮ ಊರಿಗೆ ಒಂದು ಸೇತುವೆಯಾದರೆ ಊರಿನಲ್ಲಿ ಮದುವೆಯಾಗದೇ ಉಳಿದ ಯುವಕರಿಗೆ ಮದುವೆ ಭಾಗ್ಯ ಸಿಗುತ್ತದೆ. ಕೆಲಸಮಾಡಲಾಗದೇ ಬರಡಾಗಿ ಬಿಟ್ಟ ಭೂಮಿ ಹಸನಾಗುತ್ತದೆ ಎಂಬ ಆಶಾ ಭಾವನೆಯಲ್ಲಿ ಈ ಗ್ರಾಮದವರು ಇಟ್ಟುಕೊಂಡಿದ್ದಾರೆ.

  • ಗೌರಿ ಕೇಸ್:  ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ರಾಯಚೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಕುರಿತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.

    ರಾಯಚೂರಿನ ಮಾನ್ವಿಯ ಇಸ್ಲಾಂನಗರದಲ್ಲಿರುವ ಅಲ್ ಫುರ್ ಖಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೆ ಪರಶುರಾಮ್ ವಿದ್ಯಾಭ್ಯಾಸ ನಡೆಸಿದ್ದಾನೆ. ಅಲ್ಲದೇ ಪರಶುರಾಮ್ ಕುಟುಂಬ ಮಾನ್ವಿಯಲ್ಲಿ ನೆಲೆಸಿದ್ದ ವೇಳೆ ಮುಸ್ಲಿಮರು ಹೆಚ್ಚು ವಾಸಿಸುವ ಇಸ್ಲಾಂ ನಗರದಲ್ಲೇ ವಾಸವಾಗಿತ್ತು.

    ಉಳಿದಂತೆ 1997 ರಿಂದ 2005ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಪರಶುರಾಮ್, ಮಾನ್ವಿಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯನ್ನ ಓದಿದ್ದಾನೆ. 2007 ರಿಂದ 2009ರಲ್ಲಿ ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ಮುಗಿಸಿ ಬಳಿಕ ಅದೇ ಕಾಲೇಜಿನಲ್ಲಿ ಬಿಕಾಂ ಸೇರಿದ್ದ. ಆದರೆ ಬಿಕಾಂ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಗಳಲ್ಲಿ ಫೇಲ್ ಆಗಿದ್ದ ಆಕರಣ ಬಳಿಕ ಬಿಕಾಂ ಮೂರನೇ ಸೆಮಿಸ್ಟರ್ ಗೆ ಲಿಂಗಸುಗೂರಿನ ವಿಸಿಬಿ ಎಜುಕೇಶನ್ ಸೊಸೈಟಿ ಕಾಲೇಜ್ ಗೆ ಪ್ರವೇಶ ಪಡೆದಿದ್ದ.

    ಈ ಕುರಿತು ಮಾಹಿತಿ ನೀಡಿದರುವ ಕಾಲೇಜು ಪ್ರಾಂಶುಪಾಲರು ಕಾಲೇಜಿಗೆ ಪ್ರವೇಶದ ಪಡೆದ ಪರಶುರಾಮ್ ಬಳಿಕ ತರಗತಿಗಳಿಗೆ ಹಾಜರಾಗಿಲ್ಲ. ಇದರಿಂದ ಆತನ ಓದು ಅಲ್ಲಿಗೆ ಅಂತ್ಯವಾಗಿದೆ ಎಂದು ತಿಳಿಸಿದ್ದು, ಈ ವೇಳ ಪರಶುರಾಮ್ ಯಾವ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡಿರುವ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಕರ್ನಾಟಕ ರಾಜ್ಯ ಮುಕ್ತ ವಿವಿ ಕೊನೆಗೂ ಪುನರಾರಂಭ

    ಕರ್ನಾಟಕ ರಾಜ್ಯ ಮುಕ್ತ ವಿವಿ ಕೊನೆಗೂ ಪುನರಾರಂಭ

    ಬೆಂಗಳೂರು:2018-19 ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಮುಕ್ತ ವಿವಿ ಪುನರಾರಂಭಕ್ಕೆ ಕೊನೆಗೂ ಅನುಮತಿ ದೊರೆತು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆಶಾಕಿರಣ ಮೂಡಿದೆ.

    2013ರಿಂದ ಮಾನ್ಯತೆ ರದ್ದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದಿಂದ ಮಾನ್ಯತೆ ಸಿಕ್ಕಿದೆ. ಸಾಕಷ್ಟು ಹೋರಾಟದ ನಂತರ ಮುಕ್ತ ವಿವಿ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದೆ.

    ಇದೇ ವಿಚಾರವಾಗಿ ಜೂನ್ 4ರಂದು ಮೈಸೂರಿನಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆದಿತ್ತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹಾಗೂ ಲೋಕಸಭೆ ಹಾಗೂ ರಾಜ್ಯಸಭೆಯ 16 ಮಂದಿ ಸಂಸದರು ಭಾಗವಹಿಸಿದ್ದರು. ಸಭೆಯಲ್ಲಿ ವಿವಿ ಎದುರಿಸುತ್ತಿರುವ ಸಮಸ್ಯೆಯನ್ನು ಕುಲಪತಿ ವಿವರವಾಗಿ ಪ್ರಸ್ತುತ ಪಡಿಸಿದ್ದರು.

    2013, 14ರಿಂದ ವಿ.ವಿ.ಗೆ ಮಾನ್ಯತೆಯಿಲ್ಲ. ಇಲ್ಲಿ ವ್ಯಾಸಂಗ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಾನ್ಯತೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ಆಯೋಗ ಪಾಲಿಸುತ್ತಿಲ್ಲ ಎಂದು ಕಟುವಾಗಿ ತಮ್ಮ ವಾದ ಮಂಡಿಸಿದ್ದರು. 2013,14 ಹಾಗೂ 2015,16 ಸಾಲಿಗೂ ಮಾನ್ಯತೆ ನೀಡಲು ಕೋರಿ ಸಮಿತಿಯ ಅಧ್ಯಕ್ಷರಿಗೆ ಮನವಿ ಪತ್ರವನ್ನೂ ನೀಡಿದ್ದರ ಕಾರಣ ಮಾನ್ಯತೆ ದೊರೆಯುವಲ್ಲಿ ಸಹಾಯವಾಗಿದೆ ಎನ್ನಲಾಗಿದೆ.

    2018,19ನೇ ಸಾಲಿಗೆ ಮಾನ್ಯತೆ ಕೋರಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ತಲುಪಿದೆ. ಮಾನ್ಯತೆ ನೀಡಲು ನಾವು ಸಿದ್ಧರಿದ್ದೇವೆ. ಅರ್ಜಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರಿ ಎಂದು ವಿವಿ ಗೆ ಯುಜಿಸಿ ಜೂನ್ 6ರಂದು ಪತ್ರ ಬರೆದಿದೆ.

    2013 ರಿಂದ 2018ರವರೆಗಿನ ಶೈಕ್ಷಣಿಕ ವಿಚಾರದ ಕುರಿತು ಯುಜಿಸಿ ಯಾವುದೇ ನಿರ್ಧಾರವನ್ನ ತಿಳಿಸಿಲ್ಲ. 2018-19 ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಯುಜಿಸಿ ನಡೆ ಕುತೂಹಲ ಮೂಡಿಸಿದೆ.

    ಕರ್ನಾಟಕ ರಾಜ್ಯ ಮುಕ್ತ ವಿವಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಯುಜಿಸಿ ವಿವಿ ಮಾನ್ಯತೆಯನ್ನು 2013 ರಲ್ಲಿ ರದ್ದು ಮಾಡಿತ್ತು.ಇದನ್ನೂ ಓದಿ:ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!

  • ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ, 16ರಲ್ಲಿ ಎಂಜಿನಿಯರಿಂಗ್: ಪೋರಿಯಿಂದ ವಿಶೇಷ ಸಾಧನೆ

    ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ, 16ರಲ್ಲಿ ಎಂಜಿನಿಯರಿಂಗ್: ಪೋರಿಯಿಂದ ವಿಶೇಷ ಸಾಧನೆ

    ಹೈದರಾಬಾದ್: ಸಾಮಾನ್ಯವಾಗಿ ಕೆಲವು ಮಕ್ಕಳು ಬಾಲ್ಯದಲ್ಲಿಯೇ ಅನೇಕ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಆದರೆ ನಾವು ಅದನ್ನು ಗುರುತಿಸಿ ಮಕ್ಕಳನ್ನು ಉತ್ತೇಜಿಸಬೇಕು. ಆಗ ಅವರು ಏನ್ನಾದರೂ ಸಾಧನೆ ಮಾಡುತ್ತಾರೆ. ಇದಕ್ಕೆ ತೆಲಂಗಾಣದ 16 ವರ್ಷದ ಈ ಬಾಲಕಿಯೇ ಸಾಕ್ಷಿಯಾಗಿದ್ದಾಳೆ.

    ತೆಲಂಗಾಣದ ಕಾಸಿಬಟ್ಟ ನಿವಾಸಿ ಸಂಹಿತಾ ವಿಶೇಷವಾದ ಸಾಧನೆ ಮಾಡಿದ್ದಾಳೆ. ಈಕೆ ತನ್ನ 10ನೇ ವಯಸ್ಸಿನಲ್ಲಿಯೇ 10ನೇ ತರಗತಿಯನ್ನು ಪಾಸ್ ಮಾಡಿದ್ದಳು. ಈಗ ಸಂಹಿತಾಗೆ 16 ವರ್ಷವಾಗಿದ್ದು, ಈಗ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾಳೆ.

    ನಾನು 10ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್ ಮಾಡಿದ್ದೇನೆ. ಈಗ ಎಂಜಿನಿಯರಿಂಗ್ 10ನೇ ಸ್ಥಾನದಲ್ಲಿ 8.8 ಜಿಡಿಪಿ ಪಡೆದಿದ್ದು, ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಶೇ.89 ಅಂಕ ಬಂದಿತ್ತು ಎಂದು ಸಂಹಿತಾ ಹೇಳಿದ್ದಾಳೆ. ಸದ್ಯ ತಮ್ಮ ಮುಂದಿನ ಗುರಿಯ ಕುರಿತು ಸ್ಪಷ್ಟನೆ ನೀಡಿರುವ ಸಂಹಿತಾ, ಸೇವಾ ವಲಯದಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದು, ದೇಶದ ಬಡ ಜನರಿಗೆ ಉತ್ತಮ ಆಡಳಿತ ನೀಡಿ ವಿಶ್ವ ಮಟ್ಟದಲ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡುವುದಾಗಿ ತಿಳಿಸಿದ್ದಾಳೆ.

    ಸಂಹಿತಾ ಮೂರು ವರ್ಷದವಳಿದ್ದಾಗ ವಿವಿಧ ದೇಶಗಳ ರಾಜಧಾನಿಯ ಹೆಸರನ್ನು ಹೇಳುತ್ತಿದ್ದಳು. ಇದನ್ನು ನೋಡಿ ಪೋಷಕರಲ್ಲಿ ಆಶ್ಚರ್ಯ ಪಟ್ಟಿದ್ದರು. ಆಗ ಈಕೆಯ ಪ್ರತಿಭೆಯನ್ನು ಗುರುತಿಸಿ ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದಾಳೆ.

    ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಸಂಹಿತಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾಳೆ. ಈ ಮೂಲಕ ತೆಲಂಗಾಣದ ಅತಿ ಕಿರಿಯ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

  • ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ ಬಿಜಿಎಸ್ ಸಂಸ್ಥೆಗಳು

    ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ ಬಿಜಿಎಸ್ ಸಂಸ್ಥೆಗಳು

    ಭೈರವೈಕ್ಯ ಪರಮಪೂಜ್ಯ ಜಗದ್ಗುರು `ಪದ್ಮ ಭೂಷಣ’ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಈ ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆ ತಮಗೆ ತಿಳಿದ ವಿಷಯವಾಗಿದೆ. ಪೂಜ್ಯ ಮಹಾಸ್ವಾಮೀಜಿಯವರು ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ ದೇಶಾದ್ಯಂತ ಸುಮಾರು 500 ಶಿಕ್ಷಣ ಸಂಸ್ಥೆಗಳನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)ನ ಅಡಿಯಲ್ಲಿ ಸ್ಥಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಪೂಜ್ಯರು 2011-02ನೇ ಸಾಲಿನಲ್ಲಿ ಕೆಂಗೇರಿಯ ಬಿಜಿಎಸ್ ಹೆಲ್ತ್ ಆಂಡ್ ಎಜುಕೇಷನ್ ಸಿಟಿಯಲ್ಲಿ, ಬಿಜಿಎಸ್ ಮತ್ತು ಎಸ್‍ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಇಂದಿಗೆ ಯಶಸ್ವಿಯಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ 17 ವರ್ಷಗಳನ್ನು ಪೂರೈಸಿದೆ.

     ಈ ಸಮೂಹ ಶಿಕ್ಷಣ ಸಂಸ್ಥೆಗಳ ವಿವರ ಈ ಕೆಳಗಿನಂತಿದೆ.
    1. ಬಿಜಿಎಸ್-ಗ್ಲೋಬಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
    2. ಎಸ್‍ಜೆಬಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    3. ಎಸ್‍ಜೆಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ & ಪ್ಲಾನಿಂಗ್
    4. ಬಿಜಿಎಸ್ ಸ್ಕೂಲ್ ಆಫ್ ಆರ್ಚಿಟೆಕ್ನಾಲಜಿ & ಪ್ಲಾನಿಂಗ್
    5. ಎಸ್‍ಜೆಬಿ ಸ್ಕೂಲ್/ಕಾಲೇಜ್ ಆಫ್ ನರ್ಸಿಂಗ್
    6. ಎಸ್‍ಜೆಬಿ ಕಾಲೇಜ್ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ (ಬಿಬಿಎಮ್&ಬಿ.ಕಾಂ)
    7. ಬಿಜಿಎಸ್ ಇಂಟರ್‍ನ್ಯಾಷನಲ್ ರೆಸಿಡೆಂಟಲ್ ಸ್ಕೂಲ್
    8. ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹುಳಿಮಾವು
    9. ಬಿಜಿಎಸ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ನ್ಯೂ ದೆಹಲಿ
    10. ಬಿಜಿಎಸ್ ಪಬ್ಲಿಕ್ ಸ್ಕೂಲ್
    11. ಎಸ್‍ಜೆಬಿ ಕಾಲೇಜ್ ಆಫ್ ಎಜುಕೇಷನ್
    12. ಬಿಜಿಎಸ್ ಪಿಯು ಕಾಲೇಜ್
    13. ಎಸ್‍ಜೆಬಿ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ & ಡೆಕೊರೇಷನ್ (ಬಿ.ಎಸ್‍ಸಿ)
    14. ಎಸ್‍ಜೆಬಿ ಸ್ಕೂಲ್ ಆಫ್ ಫ್ಯಾಷನ್ & ಅಪ್ರೈಲ್ ಡಿಸೈನ್ (ಬಿ.ಎಸ್‍ಸಿ)

    ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ. ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಮೇಲ್ಕಾಣಿಸಿದ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪೂಜ್ಯ ಶ್ರೀ ಶ್ರೀ ಡಾ. ಪ್ರಕಾಶ್‍ನಾಥ ಸ್ವಾಮೀಜಿಯವರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಲು ಪ್ರೇರಣೆಯೊಂದಿಗೆ ಹಾಗೂ ಸಂಶೋಧನಾ ಸಾಮಥ್ರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಅನುಕೂಲವಾಗುವಂತಹ ಕೊಡುಗೆಗಳನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮೇಲ್ಕಂಡ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ.

    ವೆಬ್ ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.bgsirs.orgwww.sjbit.edu.in

  • ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ನವದೆಹಲಿ: ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಬೇಕಾದರೆ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು.

    ಮಕ್ಕಳ ಶಿಕ್ಷಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರು ಕೊಳ್ಳಲು ಹೊರ ದೇಶಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಆರ್ ಬಿ ಐ  ಹೇಳಿದೆ.

    ರಿಸರ್ವ್ ಬ್ಯಾಂಕ್ ಉದಾರ ಪಾವತಿ ಯೋಜನೆ(ಎಲ್‍ಆರ್‍ಎಸ್) ನಿಯಮದ ಅಡಿ ಇಲ್ಲಿಯವರೆಗೆ 25 ಸಾವಿರ ಡಾಲರ್(ಅಂದಾಜು 16.75 ಲಕ್ಷ ರೂ.) ವರೆಗಿನ ಹಂಣವನ್ನು ಕಳುಹಿಸಲು ಯಾವುದೇ ದಾಖಲೆಗಳ ಅಗತ್ಯವಿರಲ್ಲ. ಆದರೆ ಈ ಹಣವನ್ನು ಕಳುಹಿಸುವ ಮೂಲಕ ಅಕ್ರಮಗಳು ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರ್ ಬಿ ಐ ಈಗ ನಿಯಮವನ್ನು ಬಿಗಿಗೊಳಿಸಿದೆ.

    ಈ ಹೊಸ ನಿಯಮದಿಂದಾಗಿ ದೇಶದಿಂದ ಹೊರ ಹೋಗುತ್ತಿದ್ದ ಅನಧಿಕೃತ ಹಣಕ್ಕೆ ಬ್ರೇಕ್ ಬೀಳಲಿದೆ. ಅಲ್ಲದೇ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸ ತುಂಬಲಿದೆ. ವ್ಯವಸ್ಥೆಯಲ್ಲಿ ಪಾನ್ ಕಾರ್ಡ್ ಕಡ್ಡಾಯವಾದ್ದರಿಂದ ಹಣ ಸಂದಾಯ ಮಾಡುವವರ ಖಾತೆಗಳ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.

    ಹೊರದೇಶಗಳಿಗೆ ತಮ್ಮ ಮಕ್ಕಳ ಶಿಕ್ಷಣ, ವಿದೇಶಿ ಸ್ಟಾಕ್ ಮಾರುಕಟ್ಟೆಗಳಲ್ಲಿ ಹಣ ಹೂಡಬಯಸುವ ಹಾಗೂ ವಿದೇಶಗಳಲ್ಲಿ ಆಸ್ತಿ ಖರೀದಿಸಬಯಸುವ ಭಾರತೀಯರಿಗೆ ಈ ನಿಯಮ ಅನ್ವಯವಾಗಲಿದೆ.

  • ಕಾಂಗ್ರೆಸ್ ಮುಖಂಡನ ಮಗಳು ಆತ್ಮಹತ್ಯೆಗೆ ಶರಣು!

    ಕಾಂಗ್ರೆಸ್ ಮುಖಂಡನ ಮಗಳು ಆತ್ಮಹತ್ಯೆಗೆ ಶರಣು!

    ಧಾರವಾಡ: ಜಿಲ್ಲೆಯ ಕಾಂಗ್ರೆಸ್ ಮುಖಂಡರ ಪುತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿ ನಡೆದಿದೆ.

    ಪೂರ್ಣಿಮಾ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಪೂರ್ಣಿಮಾ ಧಾರವಾಡದ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶಿವಶಂಕರಪ್ಪ ಹಂಪಣ್ಣ ಎಂಬವರ ಪುತ್ರಿಯಾಗಿದ್ದಾರೆ.

    ಉದ್ಯಮಿಯೂ ಆಗಿರುವ ಶಿವಶಂಕರ ಹಂಪಣ್ಣ ಅವರು ಮಗಳಾದ ಪೂರ್ಣಿಮಾ ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಹೋಗಲು ಇಚ್ಚಿಸಿದ್ದರು. ಮನೆಯಲ್ಲಿ ಕುಟುಂಬಸ್ಥರ ಪ್ರೀತಿಗೆ ಪಾತ್ರಳಾಗಿದ್ದ ಪೂರ್ಣಿಮಾರನ್ನು ಬೆಂಗಳೂರಿಗೆ ಕಳುಹಿಸಲು ತಂದೆ ಹಿಂದೇಟು ಹಾಕಿದಾಗ ಮನನೊಂದು ಪೂರ್ಣಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಧಾರವಾಡ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಪೂರ್ಣಿಮಾ ಪದವಿ ಬಳಿಕ ಬೆಂಗಳೂರಿಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶನಿವಾರ ರಾತ್ರಿ ಮನೆಯಲ್ಲಿ ಚರ್ಚೆ ಕೂಡಾ ನಡೆದಿತ್ತು ಎಂದು ತಿಳಿದು ಬಂದಿದೆ.

    ಸದ್ಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಜಿಲ್ಲೆಯ ಶಹರ ಪೊಲೀಸ್ ಠಾಣೆ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

  • ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

    ಯಾದಗಿರಿ:“ಕಾನೂನ್ ಕೆ ಘರ್ ಮೆ ದೇರ್ ಹೈ, ಲೇಕಿನ್ ಅಂಧೇರ್ ನಹೀಂ?”(ನ್ಯಾಯ ಸಿಗೋದು ತಡವಾಗಬಹುದು, ಅದ್ರೆ, ಸತ್ಯವೇ ಗೆಲ್ಲೋದು, ಕತ್ತಲು ಆವರಿಸೋಲ್ಲ) ಇಂತಹುದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಯಾದಗಿರಿ ಜಿಲ್ಲೆಯ ಬಡ ಯುವಕನೊಬ್ಬನ ಸತತ ಹೋರಾಟ.

    ನ್ಯಾಯಯುತವಾಗಿ ತನಗೆ ಸಿಗಬೇಕಾಗಿದ್ದ ಸರ್ಕಾರಿ ಶಿಕ್ಷಕ ಹುದ್ದೆಗೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಅವಿರತ ಹೋರಾಟ ನಡೆಸಿ, ಕೊನೆಗೂ ಯಶಸ್ವಿಯಾದ. ಯಾದಗಿರಿಯ ವಡ್ನಳ್ಳಿ ಗ್ರಾಮದ ಶಿವಯೋಗಿ ಬಿನ್ ಚಂದ್ರಾಮ ಛಲಬಿಡದ ತ್ರಿವಿಕ್ರಮ.? ಏನಿದು ಒಂಬತ್ತು ವರ್ಷಗಳ ಹೋರಾಟ.? ಇಲ್ಲಿದೆ ಶಿವಯೋಗಿಯ ಹೋರಾಟದ ಕತೆ.

    ಯಾದಗಿರಿ ನಗರದಿಂದ 14 ಕಿ.ಮೀ. ದೂರದ ವಡ್ನಳ್ಳಿ ಗ್ರಾಮದ ಬಡ ರೈತ ಕುಟುಂಬದ ಶಿವಯೋಗಿಯ ಹೋರಾಟ 2008-09ರಿಂದ ಆರಂಭಗೊಂಡಿದೆ. ಆಗ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶಿವಯೋಗಿ, ನೇಮಕಾತಿಗೆ ಅರ್ಹರಾಗಿದ್ದರೂ, ಇವರ ಬದಲು ಸರ್ಕಾರಕ್ಕೇ ವಂಚಿಸಿ, ಒಂದೇ ವರ್ಷದಲ್ಲಿ ಎರಡೆರಡು ಪದವಿಗಳನ್ನು ಪೂರೈಸಿದ್ದ ಸಂಗನಸಬಸವ ಅನ್ನೋವ್ರಿಗೆ ನೌಕರಿ ಸಿಕ್ಕಿತ್ತು.

    ಶಿಕ್ಷಣ ಇಲಾಖೆಯಲ್ಲಿನ ಮಧ್ಯವರ್ತಿಗಳ ಹಾವಳಿಯಿಂದ ಶಿವಯೋಗಿ ನೌಕರಿಯಿಂದ ವಂಚಿತಗೊಂಡಿದ್ದರು. ವಂಚನೆಯಾದ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ 2012 ಏಪ್ರಿಲ್ 25 ರಂದು ಶಿವಯೋಗಿ ವರದಿಯೂ ಪ್ರಸಾರವಾಗಿತ್ತು. ನಿರಂತರವಾಗಿ ಹೋರಾಡಿದ ಶಿವಯೋಗಿಗೆ ಕೊನೆಗೂ ಈಗ ಜಯ ಸಿಕ್ಕಿದೆ.

    ವಂಚನೆಯನ್ನು ಪ್ರಶ್ನಿಸಿ ಶಿವಯೋಗಿ ಕಾನೂನು ಇಲಾಖೆಯ ಮೊರೆ ಹೋಗಿದ್ದರು. ಆಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅವರ ಎದುರು ಅಳಲು ತೋಡಿಕೊಂಡಿದ್ದರು. ರಾಜಭವನದಲ್ಲೂ ಇವರ ಹೋರಾಟ ಮಾರ್ದನಿಸಿತ್ತು. ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಿದ್ದ ಎದುರಾಳಿ, ಇವರ ಹೋರಾಟವನ್ನು ಹಿಮ್ಮೆಟ್ಟಿಸಿದ್ದರು.

    ಯಾದಗಿರಿ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿಗಳ ಷಡ್ಯಂತ್ರವೂ ಸಹ ಇವರ ಹೋರಾಟಕ್ಕೆ ಅಡ್ಡಿಯಾಗತೊಡಗಿತ್ತು. ಈ ಹೋರಾಟದಿಂದ ಹಿಂದೆ ಸರಿಯುವಂತೆ ಅನೇಕ ಬಾರಿ ಇವರ ಮೇಲೆ ಹಲ್ಲೆ ಯತ್ನ ಹಾಗೂ ಬೆದರಿಕೆ ಒಡ್ಡುವ ಪ್ರಯತ್ನಗಳೂ ನಡೆದವು. ದಶಕದ ಈ ಹೋರಾಟದಲ್ಲಿ ಮನೆ-ಹೊಲ, ಆಸ್ತಿಪಾಸ್ತಿಯೆಲ್ಲವನ್ನೂ ಮಾರಾಟ ಮಾಡಿದ್ದ ಶಿವಯೋಗಿ ಕುಟುಂಬವೂ ಹತಾಶರಾಗಿತ್ತು.

    ಕೊನೆಗೆ, ಎಲ್ಲ ವಿಚಾರಣೆಗಳ ನಂತರ, ಶಿಕ್ಷಣ ಇಲಾಖೆಯ ಶ್ರೀಮತಿ ಶಾಲಿನಿ ರಜನೀಶ್ ಗೋಯೆಲ್ ಅವರು ನೀಡಿದ ಅದೇಶವನ್ನೂ ಸ್ಥಳೀಯ ಅಧಿಕಾರಿಗಳು ಮುಚ್ಚಿಟ್ಟಾಗ, ಪಬ್ಲಿಕ್ ಟವಿಯ ವರದಿಯನ್ನು ಗಮನಿಸಿದ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್ ಜೆ, ಎಲ್ಲವನ್ನೂ ಪರಿಶೀಲಿಸಿ, ಇದಕ್ಕೆ ತೊಡರುಗಾಲಾಗುತ್ತಿದ್ದ ಯಾದಗಿರಿ ಡಿಡಿಪಿಐ ಹಾಗೂ ಸಿಬ್ಬಂದಿಗೆ ಪಾಠ ಕಲಿಸಿದ ಜಿಲ್ಲಾಧಿಕಾರಿ, ಕೇವಲ ಒಂದೇ ದಿನದಲ್ಲಿ ಆದೇಶ ಕೈಸೇರುವಂತೆ ಮಾಡಿದರು.

    ಯಾದಗಿರಿಯ ಶಿವಯೋಗಿಯ ಈ ಹೋರಾಟ ಅನೇಕರಿಗೆ ಸ್ಫೂರ್ತಿ. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನೋ ಹಾಗೆ, ಛಲಬಿಡದ ತ್ರಿವಿಕ್ರಮನಂತೆ ಅಲೆದಾಡಿ ಕೊನೆಗೂ ನ್ಯಾಯ ಪಡೆಯುವಲ್ಲಿ ಗೆದ್ದ ಶಿವಯೋಗಿಯ ಹಠ ಇಡೀ ಶಿಕ್ಷಣ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ. ಕಾನೂನು ರೀತ್ಯ ಹಾಗೂ ನಿಯಮಾನುಸಾರ ನೇಮಕಾತಿಗೆ ಅರ್ಹನಿದ್ದೂ, ಹತ್ತು ವರ್ಷಗಳಿಂದಲೂ ನೌಕರಿಯಿಂದ ವಂಚಿತಗೊಂಡಿದ್ದ ಶಿವಯೋಗಿ ಹೋರಾಟ ನಿಜಕ್ಕೂ ಶ್ಲಾಘನೀಯ.

  • ಹಾಜರಿ ಕೂಗಿದ್ರೆ ಎಸ್ ಸರ್ ಬದಲು ಮಕ್ಳು ಜೈ ಹಿಂದ್ ಹೇಳ್ಬೇಕು!

    ಹಾಜರಿ ಕೂಗಿದ್ರೆ ಎಸ್ ಸರ್ ಬದಲು ಮಕ್ಳು ಜೈ ಹಿಂದ್ ಹೇಳ್ಬೇಕು!

    ಭೋಪಾಲ್: ಶಾಲೆಯಲ್ಲಿ ಶಿಕ್ಷಕರು ಹಾಜರಿ ಕೂಗಿದಾಗ ಮಕ್ಕಳು “ಎಸ್ ಸರ್, ಎಸ್ ಮೇಡಂ” ಎನ್ನುವಂತಿಲ್ಲ. ಅದರ ಬದಲಿಗೆ `ಜೈ ಹಿಂದ್’ ಎಂದು ಹೇಳಬೇಕು ಎನ್ನುವ ಆದೇಶವನ್ನು ಮಧ್ಯಪ್ರದೇಶ ಸರ್ಕಾರ ಹೊರಡಿಸಿದೆ.

    2017ರ ಅಕ್ಟೋಬರ್ ತಿಂಗಳಿನಲ್ಲಿ ಸತ್ನಾ ಜಿಲ್ಲೆಯಲ್ಲಿರುವ ಶಾಲೆಗಳಲ್ಲಿ ಸರ್ಕಾರದ ಈ ಆದೇಶವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈಗ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಅನ್ವಯವಾಗುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಜಾರಿಗೊಳಿಸಿದೆ.

    ಮಕ್ಕಳಲ್ಲಿ ದೇಶಭಕ್ತಿ ಮೂಡಿಸಲು ಹಾಗೂ ಬೆಳೆಸಲು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ರಾಜ್ಯ ಶಿಕ್ಷಣ ಮಂಡಳಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಸದ್ಯ 1.22 ಲಕ್ಷ ಸರ್ಕಾರಿ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿದ್ದು, ನಂತರ ಹಂತದಲ್ಲಿ ಖಾಸಗಿ ಶಾಲೆಗಳು ಅಳವಡಿಸಿಕೊಳ್ಳಲು ಸಲಹೆ ನೀಡುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.

    ಮಕ್ಕಳು ದೇಶದ ಭವಿಷ್ಯ. ಅವರಲ್ಲಿ ದೇಶದ ಮೇಲೆ ಪ್ರೀತಿ ಗೌರವ ಹಾಗೂ ಭಕ್ತಿಯನ್ನು ಬೆಳಸಬೇಕು. ಆದ್ದರಿಂದ ಜೈ ಹಿಂದ್ ಹೇಳಬೇಕು ಎಂದು ತಮ್ಮ ನಿರ್ಧಾರವನ್ನು ಈ ಹಿಂದೆ ವಿಜಯ್ ಶಾ ಸಮರ್ಥಿಸಿಕೊಂಡಿದ್ದರು.

    ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷರ ಕೊರತೆಯಿದ್ದು, ನೇಮಕಾತಿಗೆ ಸರ್ಕಾರ ಮುಂದಾಗಬೇಕು. ಶಿಕ್ಷಣ ಗುಣಮಟ್ಟಕ್ಕೆ ಗಮನ ನೀಡಬೇಕೇ ಹೊರತು, ಮಕ್ಕಳಲ್ಲಿ ಬಲವಂತವಾಗಿ ದೇಶಭಕ್ತಿ ಮೂಡಿಸಲು ಮುಂದಾಗಿರುವ ಈ ಕ್ರಮ ಸೂಕ್ತವಲ್ಲ. ಅಲ್ಲದೇ, ಇದನ್ನ ಕಡ್ಡಾಯಗೊಳಿಸಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಕೆ.ಮಿಶ್ರಾ ಅವರು ಪ್ರಶ್ನಿಸಿದ್ದಾರೆ.

    ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಅವರು ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು ಉತ್ತಮ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಶಾಲೆಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯ ಮಾಡಿದೆ.