Tag: education

  • ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ

    ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ

    ಬೆಂಗಳೂರು: ನಾನು ವಿದ್ಯಾರ್ಥಿ (Student) ವಿರುದ್ದ ಕ್ರಮಕ್ಕೆ ಸೂಚನೆ ನೀಡಿಲ್ಲ. ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ‌ ನೀಡಿದ್ದು ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಯೂಟರ್ನ್ ಹೊಡೆದಿದ್ದಾರೆ.

    ಶಿಕ್ಷಣ ಸಚಿವರಿಗೆ ಕನ್ನಡ (Kannada) ಬರುವುದಿಲ್ಲ ಎಂದಿದ್ದ ವಿದ್ಯಾರ್ಥಿ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡುವಾಗ ಮತ್ತೆ ಮಾಧ್ಯಮಗಳ ಮೇಲೆ ಗರಂ ಆದರು. ನಾನು ಟ್ರೋಲ್‌ಗೆ (Troll) ಹೆದರುವುದಿಲ್ಲ. ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದು. ನಾನೇ ಅದನ್ನು ಹೇಳಿದ್ದೇನೆ ಎಂದರು.

    ನಾನು ಶಿಕ್ಷಣ ಸಚಿವ. ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುತ್ತೀರಿ. ನಿಮ್ಮ ಮಕ್ಕಳನ್ನು ತಪ್ಪು ಮಾಡೋಕೆ‌ ಬಿಡ್ತೀರಾ ಟ್ರೋಲ್‌ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಮಧು ಬಂಗಾರಪ್ಪ ಅಲ್ಲ ನಾನು. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತ ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಿಮ್ಮ ಮಗ ಹಾಗೆ ಮಾತನಾಡಿದ್ರೆ ನೀವು ಏನ್ ಮಾಡ್ತಿದ್ರಿ?ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ ಅಂತ ಮತ್ತೆ ರಾಂಗ್ ಆದ್ರು. ಮಾಧ್ಯಮಗಳು ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ಕಿಡಿಕಾರಿದರು.

     

    ಮೊಟ್ಟೆ ಕೊಟ್ಟಿರೋ ವಿಚಾರ ಯಾರು ಹೇಳುವುದಿಲ್ಲ . ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎನ್ನುವುದನ್ನು ಹಾಕುತ್ತೀರಿ. 60-70 ಸಾವಿರ ಮಕ್ಕಳು ಇದ್ದಾಗ ಮಾತಾಡೋದು ಮಕ್ಕಳು ಸರಿಯಲ್ಲ. ಇದನ್ನ ಶಾಲೆಯಲ್ಲಿ ಶಿಸ್ತು ತರೋಕೆ ಆಗುತ್ತಾ? ನಾನು ತಂದೆಯಾಗಿ ನಾನು ಇದನ್ನ ಹೇಳ್ತಿದ್ದೇನೆ. ನೀವು ಟ್ರೋಲ್ ಮಾಡಿದ್ರೆ ಪುಕ್ಸಟ್ಟೆ ನನಗೇನು ಆಗಬೇಕಿದೆ. ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರುತ್ತಾನೆ‌ ಅಂತ ತಿಳಿಸಿದರು. ಇದನ್ನೂ ಓದಿ: RC 16: ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಸ್ಕ್ರಿಪ್ಟ್‌ ಹಿಡಿದು ನಿಂತ ‘ಉಪ್ಪೇನ’ ಡೈರೆಕ್ಟರ್‌

    ಬಿಸಿ ನಾಗೇಶ್ ಅವರು ಮಧು ಬಂಗಾರಪ್ಪ ಗೆ ಇಲಾಖೆ ಏನು ಗೊತ್ತಿಲ್ಲ ಅಂದರು. ಅದಕ್ಕೆ ‌ನಮ್ಮಂತ ದಡ್ಡರನ್ನ ಹೈ ಲೀಡ್ ನಲ್ಲಿ ಗೆಲ್ಲಿಸಿ ಅವರನ್ನ ಸೋಲಿಸಿದ್ದಾರೆ. ಸಭಾಪತಿ ಹೊರಟ್ಟಿ ಅವರು ನನಗೆ ಕರೆ ಮಾಡಿ ಒಳ್ಳೆ ಕೆಲಸ ಮಾಡಿದ್ದೀಯಾ ಅಂದರು. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಟ್ರೋಲ್ ಮಾಡಿದವರು ನಿಮ್ಮ ಮಕ್ಕಳು ಹೀಗೆ ಮಾಡಿದ್ರೆ ಏನ್ ಮಾಡ್ತೀರಾ ಯೋಚನೆ ಮಾಡಿ. ಸಿದ್ದರಾಮಯ್ಯ ಕೊಟ್ಟ ಜವಾಬ್ದಾರಿ ನಾನು ನನ್ನ ಮಕ್ಕಳನ್ನ ನೋಡಿಕೊಂಡಂತೆ ಶಾಲಾ ಮಕ್ಕಳನ್ನು ನೋಡಿಕೊಳ್ತೀನಿ. ಇನ್ನು ಮೇಲೆ ಇದೆಲ್ಲ ರಬ್ಬಿಶ್ ಅನ್ನ ನಿಲ್ಲಿಸಿ ಸಾಕು ಇದು ಸರಿಯಲ್ಲ ಅಂತ ಮಾಧ್ಯಮಗಳ ಮೇಲೆ ಕಿಡಿಕಾರಿದರು.

     

    ಟ್ರೋಲ್ ಮಾಡಿಕೊಂಡು ನನ್ನನ್ನ ಬಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನನ್ನ ವಿರುದ್ದ 7-8 ತಿಂಗಳಿಂದ ಟ್ರೋಲ್‌ ನಡೆಯುತ್ತಿದೆ. ಮಕ್ಕಳನ್ನ ಸರಿ ದಾರಿಗೆ ತರಬೇಕು. ಅಂತಹ ಕಾರ್ಯಕ್ರಮದಲ್ಲಿ ಹಾಗೆ ಮಾತಾಡಿದ್ರೆ ಹೇಗೆ ಹೇಳಿ. ನಾಳೆ ಸಿಎಂ, ನ್ಯಾಯಾಧೀಶರ ಕಾರ್ಯಕ್ರಮದಲ್ಲಿ ಇದ್ದಾಗ ಹಾಗೆ ಹೇಳಿದ್ರೆ ಹೇಗೆ. ತಲೆಯಲ್ಲಿ ಏನಾದ್ರು ಇದ್ದರೆ ಟ್ಯಾಕ್ಸ್ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡ್ತಿದ್ದೇವೆ. ಅದನ್ನ ಮಾಡಿ ಎಂದರು.

    ನನಗೆ ಕನ್ನಡ ಬರಲ್ಲ ಅಂದರೆ ನೀವು ಹೇಳಿಕೊಟ್ರೆ ನಾನೇನು ಉದ್ದಾರ ಆಗಲ್ಲ. ನನ್ ರಕ್ತದಲ್ಲಿ ಕನ್ನಡ ಇದೆ. ನಾವು ಚಿಕ್ಕವರು ಇದ್ದಾಗ ನಮಗೆ ಹೇಳಿ ಕೊಟ್ಟಿದ್ದೇ ಇಷ್ಟು. ನಾನು ನಿಮಗೆ ಎಕ್ಸಾಂ ಮಾಡ್ತೀನಿ. 1 ರಾಂಕ್ ನಿಂದ 30 ರಾಂಕ್ ಬರ್ತಿರಾ. 30 ರಾಂಕ್ ಇರೋನು ಕೆಟ್ಟೋನು ಅಂತೀರಾ‌. ಇದೆಲ್ಲ ಬಿಟ್ಟು ಬಿಡಬೇಕು. ಇದೆಲ್ಲ ಸಾಕು ಅಂತ ಮಾಧ್ಯಮಗಳ ಮೇಲೆ ಕಿಡಿಕಾರಿದರು.

     

  • ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ – ಮಧು ಬಂಗಾರಪ್ಪಗೆ ಭಾರೀ ಮುಜುಗರ

    ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ – ಮಧು ಬಂಗಾರಪ್ಪಗೆ ಭಾರೀ ಮುಜುಗರ

    – ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸಚಿವರ ಸೂಚನೆ

    ಬೆಂಗಳೂರು: ವಿದ್ಯಾರ್ಥಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಭಾರೀ ಮುಜುಗರವಾಗಿದೆ.

    ವಿಧಾನಸೌಧದಲ್ಲಿ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು.

    ಈ ವೇಳೆ ವಿದ್ಯಾರ್ಥಿಗಳ (Students) ಜೊತೆ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್‌ (video conference) ಮೂಲಕ ಸಂವಾದ ನಡೆಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ (Kannada) ಬರಲ್ಲ ಎಂದು ನೇರವಾಗಿಯೇ ಹೇಳಿದ್ದಾನೆ.

     

    ಈ ಮಾತನ್ನು ಕೇಳಿಸಿಕೊಂಡ ಮಧು ಬಂಗಾರಪ್ಪ, ಯಾರೋ ಅದು ಹೇಳಿದ್ದು, ಏನಂತ ಹೇಳಿದ್ದು? ನಾನೇನು ಉರ್ದು ಮಾತಾಡಿದ್ನಾ? ಕನ್ನಡದಲ್ಲೇ ಮಾತನಾಡಿದ್ದು ಎಂದು ಗರಂ ಆದರು. ನಂತರ ಪಕ್ಕದಲ್ಲಿ ಕುಳಿತಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಲ್ಲಿ, ಯಾರು ನೋಡಿ ರೆಕಾರ್ಡ್ ಮಾಡಿ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಇದನ್ನೂ ಓದಿ: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್

    ಮಾಧ್ಯಮಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ವಿದ್ಯಾರ್ಥಿ ನೇರವಾಗಿ ಹೇಳಿದ್ದರಿಂದ ತಕ್ಷಣವೇ ಗಲಿಬಿಲಿಗೊಂಡ ಮಧು ಬಂಗಾರಪ್ಪ, ಹೇ ಯಾರೋ ಅವನು ಹಾಗೆ ಮಾತನಾಡೋದು? ಯಾರು ಹಾಗೇ ಅಂದವರು ಡೀಟೇಲ್ಸ್ ತೆಗೆದುಕೊಳ್ಳಿ ಎಂದು ಗರಂ  ಆಗಿ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

    ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಸದ್ಯಕ್ಕೆ ಈ ರೀತಿ ಹೇಳಿದ ವಿದ್ಯಾರ್ಥಿ ಯಾರು ಎನ್ನುವುದು ತಿಳಿದುಬಂದಿಲ್ಲ.

  • Dasara Special | ಸರಸ್ವತಿ ಪೂಜೆಯ ಮಹತ್ವ ಏನು?

    Dasara Special | ಸರಸ್ವತಿ ಪೂಜೆಯ ಮಹತ್ವ ಏನು?

    ಮಗೆ ಬೇಕಾದ ಎಲ್ಲ ವಿದ್ಯೆಗಳನ್ನೂ ದಯಪಾಲಿಸುವವ ದೇವತೆ ಸರಸ್ವತಿ. ಈ ಕಾರಣಕ್ಕೆ ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆ ಅಥವಾ ಸರಸ್ವತಿ ಪೂಜೆಗೆ (Saraswathi Pooja) ವಿಶೇಷ ಮಹತ್ವ. ನವರಾತ್ರಿ (Navaratri) ಹಬ್ಬದ ಸಪ್ತಮಿಯಿಂದ ಸರಸ್ವತಿ ದೇವಿಯ ಆರಾಧನೆಯು ಆರಂಭವಾಗುತ್ತದೆ.

    ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ
    ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ ।
    ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
    ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ

    ಸರಸ್ವತಿ ಜ್ಞಾನವನ್ನು (Knowledge) ಕೊಡುವವಳು, ನಮಗೆ ಬುದ್ಧಿವಂತಿಕೆ, ಕಲಿಕೆ ಮತ್ತು ಬುದ್ಧಿಶಕ್ತಿಯನ್ನು ಅನುಗ್ರಹಿಸುತ್ತಾಳೆ. ಅಷ್ಟೇ ಅಲ್ಲದೇ ಆಕೆ ʼಕಾಮರೂಪಿಣಿ’ಯೂ ಹೌದು, ತನಗೆ ಬೇಕಾದ ರೂಪವನ್ನು ಧರಿಸಬಲ್ಲವಳು ಎಂದರ್ಥ. ಬರಿ ವಿದ್ಯೆ ಸಿಕ್ಕಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವ ದೇವತೆ ಸರಸ್ವತಿ. ಇದನ್ನೂ ಓದಿ: Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್‌ ಅಭಿಮನ್ಯು & ಟೀಂ

    ಹಿಂದೂ ಧರ್ಮದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಿದರೆ ಜ್ಞಾನ ಸಿಗುತ್ತದೆ ಎಂಬ ನಂಬಿಕೆ. ಈ ಕಾರಣಕ್ಕೆ ಮನೆಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಸರಸ್ವತಿ ಪೂಜೆ ಮಾಡಲಾಗುತ್ತದೆ. ಈ ಶುಭ ದಿನ ಅಕ್ಷರ ಅಭ್ಯಾಸ ಮಾಡಿದ ಮಗು ಮುಂದೆ ವಿದ್ಯಾವಂತನಾಗಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತದೆ ಎಂಬ ನಂಬಿಕೆಯಿದೆ.

    ಸಾಧಾರಣವಾಗಿ ಮಕ್ಕಳ ಬೆಳವಣಿಗೆ ಅವರು ಆಲೋಚನಾ ಶೈಲಿಯನ್ನು ಗಮನದಲ್ಲಿಟ್ಟುಕೊಂಡು 2 ವರ್ಷದ ನಂತರ 4 ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ಈ ವಿದ್ಯಾರಂಭವನ್ನು ಮನೆ, ಶಾಲೆ ಅಥವಾ ದೇವಸ್ಥಾನದಲ್ಲಾದರೂ ಮಾಡಬಹುದು.

    ಜ್ಞಾನ, ಬುದ್ಧಿವಂತಿಕೆ ಮತ್ತು ಕಲೆಗಳ ದೇವತೆಯಾಗಿರುವ ಸರಸ್ವತಿ ವಾಹನ ಹಂಸ. ಶಿಸ್ತು ಮತ್ತು ಶುದ್ಧತೆಯ ಪ್ರತೀಕ ಹಂಸ ಎನ್ನಲಾಗುತ್ತದೆ. ಸರಸ್ವತಿ ಹರಿಯುವ ನೀರಿನೊಂದಿಗೆ ಹಂಸದಲ್ಲಿ ಕುಳಿತುಕೊಂಡಿದ್ದಾಳೆ. ನೀರು ಶುದ್ಧತೆಯ ಸಂಕೇತ. ಎಷ್ಟೇ ಮಲೀನವಾದರೂ ನೀರು ಹರಿಯುತ್ತಲೇ ಅದನ್ನು ಶುದ್ಧ ಮಾಡುತ್ತದೆ. ಹೀಗಾಗಿ ಇಲ್ಲಿ ನೀರನ್ನು ಆಲೋಚನೆ ಮತ್ತು ಜ್ಞಾನದ ಶುದ್ಧತೆಯನ್ನು ಸಾಧಿಸುವ ಸಾಧನವಾಗಿ ಅರ್ಥೈಸಿಕೊಳ್ಳಬಹುದು.

  • PUBLiC TV Impact | ಅರೆಹೊಟ್ಟೆಯಲ್ಲಿ ಪರದಾಡಿದ್ದ ವಿದ್ಯಾರ್ಥಿನಿಯರ ಶಾಲೆಗೆ ತಲುಪಿದ ಆಹಾರ ಸಾಮಗ್ರಿ

    PUBLiC TV Impact | ಅರೆಹೊಟ್ಟೆಯಲ್ಲಿ ಪರದಾಡಿದ್ದ ವಿದ್ಯಾರ್ಥಿನಿಯರ ಶಾಲೆಗೆ ತಲುಪಿದ ಆಹಾರ ಸಾಮಗ್ರಿ

    – ವಿದ್ಯಾರ್ಥಿನಿಯರೊಂದಿಗೆ ಬಿಇಓ ಮಾತುಕತೆ

    ಮೈಸೂರು: ಹೆಚ್.ಡಿ ಕೋಟೆ (HD Kote) ಪಟ್ಟಣದಲ್ಲಿರುವ ಕಸ್ತೂರ ಬಾ ವಸತಿ ಶಾಲೆಯಲ್ಲಿ (Kasturba Gandhi hostel) 15 ದಿನಗಳಿಂದ ಸರಿಯಾದ ಊಟ ಸಿಗದೆ ಪರದಾಡಿದ್ದ ವಿದ್ಯಾರ್ಥಿನಿಯರ (Students) ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.

    ಶಾಲೆಗೆ ಬಿಇಓ ಕೆ.ಕಾಂತರಾಜು ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದ್ದಾರೆ. ತಕ್ಷಣದಿಂದಲೇ ದಿನಸಿ ಪದಾರ್ಥ ಸರಬರಾಜು ಮಾಡುವಂತೆ ಕ್ರಮಕೈಗೊಂಡಿದ್ದಾರೆ. ಮಧಾಹ್ನದಿಂದಲೇ ಪೂರ್ಣಪ್ರಮಾಣದ ಊಟದ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದ್ದು, ಶಾಲೆಗೆ ಅಗತ್ಯ ಅಡುಗೆ ಪದಾರ್ಥಗಳು ಬಂದು ತಲುಪಿವೆ.

    ವಸತಿ ನಿಲಯದಲ್ಲಿ ಸರಿಯಾಗಿ ಊಟ ನಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಳೆದ 15 ದಿನಗಳಿಂದ ವಸತಿ ನಿಲಯದಲ್ಲಿ ಸರಿಯಾದ ಊಟ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಕೂಡ ಸರಿಯಾಗಿ ಸಿಗುತ್ತಿಲ್ಲ. 65 ವಿದ್ಯಾರ್ಥಿನಿಯರಿಗೆ 1 ಲೀಟರ್ ಹಾಲು ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿನಿಯರ ಊಟಕ್ಕೆ ಕೇವಲ 5.5 ಕೆಜಿ ಸೊಸೈಟಿ ಅಕ್ಕಿ ಕೊಡಲಾಗುತ್ತದೆ ಎಂದು ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೇಲ್ವಿಚಾರಕಿ, ಆಹಾರ ಪದಾರ್ಥ ಪೂರೈಸುವ ಗುತ್ತಿಗೆದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಸುದ್ದಿ `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿದ್ದಾರೆ.

  • ಹೊಟ್ಟೆ ತುಂಬ ಊಟ ಕೊಡಿ ಪ್ಲೀಸ್ – ಅರೆಹೊಟ್ಟೆಯಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರ ಪರದಾಟ

    ಹೊಟ್ಟೆ ತುಂಬ ಊಟ ಕೊಡಿ ಪ್ಲೀಸ್ – ಅರೆಹೊಟ್ಟೆಯಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರ ಪರದಾಟ

    – ಸರ್ಕಾರಿ ಹಾಸ್ಟೆಲ್‍ನಲ್ಲಿ ಅವ್ಯವಸ್ಥೆ
    – ಟೀ ಮಾಡಲು 65 ವಿದ್ಯಾರ್ಥಿಗಳಿಗೆ 1.ಲೀ ಹಾಲು

    ಮೈಸೂರು: ಹೆಚ್.ಡಿ.ಕೋಟೆ (H.D Kote) ಪಟ್ಟಣದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ (Kasturba Gandhi hostel) ಸರಿಯಾಗಿ ಊಟ ನಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು (Students)  `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕಳೆದ 15 ದಿನಗಳಿಂದ ವಸತಿ ನಿಲಯದಲ್ಲಿ ಸರಿಯಾದ ಊಟ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಕೂಡ ಸರಿಯಾಗಿ ಸಿಗುತ್ತಿಲ್ಲ. 65 ವಿದ್ಯಾರ್ಥಿನಿಯರಿಗೆ 1 ಲೀಟರ್ ಹಾಲು ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿನಿಯರ ಊಟಕ್ಕೆ ಕೇವಲ 5.5 ಕೆಜಿ ಸೊಸೈಟಿ ಅಕ್ಕಿ ಕೊಡಲಾಗುತ್ತದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಲ್ವಿಚಾರಕಿ, ಆಹಾರ ಪದಾರ್ಥ ಪೂರೈಸುವ ಗುತ್ತಿಗೆದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸಾಮಾಗ್ರಿಗಳನ್ನು ಪೂರೈಸುತ್ತಿದ್ದ ಗುತ್ತಿಗೆದಾರ, ಕಡಿಮೆ ದರಕ್ಕೆ ಟೆಂಡರ್ ಪಡೆದುಕೊಂಡಿದ್ದು ಆ ದರದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನು ಪಡೆದುಕೊಂಡಿದ್ದ ಟೆಂಡರ್ ಅವಧಿ ಪೂರ್ಣಗೊಂಡಿದೆ. ನನ್ನ ಟೆಂಡರ್ ರದ್ದುಗೊಳಿಸಲು ಪತ್ರ ಬರೆದಿದ್ದೇನೆ. ನನಗೂ ಹಾಸ್ಟೆಲ್‍ಗೂ ಯಾವ ಸಂಬಂಧ ಇಲ್ಲ ಎಂದಿದ್ದಾರೆ.

    ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಇದಾಗಿದೆ.

  • ದೇವರೆಂದು ನಮ್ಮನ್ನು ನಾವೇ ಸ್ವಯಂ ಘೋಷಿಸಬಾರದು: ಮೋಹನ್‌ ಭಾಗವತ್‌

    ದೇವರೆಂದು ನಮ್ಮನ್ನು ನಾವೇ ಸ್ವಯಂ ಘೋಷಿಸಬಾರದು: ಮೋಹನ್‌ ಭಾಗವತ್‌

    ಪುಣೆ: ದೇವರೆಂದು ನಮ್ಮನ್ನು ನಾವೇ ಸ್ವಯಂಘೋಷಣೆ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

    ಮಣಿಪುರದಲ್ಲಿ (Manipura) ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಮತ್ತು ಭಯ್ಯಾಜಿ ಎಂದು ಜನಪ್ರಿಯರಾಗಿದ್ದ ಶಂಕರ್ ದಿನಕರ್ ಕೇನ್ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಾವು ದೇವರಾಗುತ್ತೇವೋ ಇಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾವು ದೇವರಾಗಿದ್ದೇವೆ ಎಂದು ಸ್ವಯಂ ಘೋಷಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

    ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಮೊದಲಿಗಿಂತ ಹೆಚ್ಚು ಕತ್ತಲೆಯಾಗುತ್ತದೆ. ಆದ್ದರಿಂದ ಕೆಲಸಗಾರರು ದೀಪಗಳಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಹೊಳೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ: ಮೋದಿ

    ಮಣಿಪುರದಲ್ಲಿ ಪರಿಸ್ಥಿತಿ ಕಷ್ಟಕರವಾಗಿದೆ. ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ವ್ಯಾಪಾರ ಅಥವಾ ಸಾಮಾಜಿಕ ಕೆಲಸಕ್ಕಾಗಿ ಅಲ್ಲಿಗೆ ಹೋದವರಿಗೆ ಪರಿಸ್ಥಿತಿ ಇನ್ನಷ್ಟು ಸವಾಲಿನದ್ದಾಗಿದೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಂಘದ ಸ್ವಯಂಸೇವಕರು ದೃಢವಾಗಿ ನಿಂತು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋಹನ್‌ ಭಾಗವತ್‌ ಆರ್‌ಎಸ್‌ಎಸ್‌ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

     

  • ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್‌

    ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್‌

    ಬೆಂಗಳೂರು: ಸರ್ಕಾರಗಳು ತರ್ಲೆ ಮಾಡುವುದು ಕಡಿಮೆ ಮಾಡಿದರೆ ನಮ್ಮ ಶಿಕ್ಷಣ ವ್ಯವಸ್ಥೆ (Education System) ಇನ್ನೂ ಚೆನ್ನಾಗಿರುತ್ತದೆ ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ’ (PUBLiC TV) ಪ್ರಸ್ತುತ ಪಡಿಸುತ್ತಿರುವ AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ ನಡೆಯುತ್ತಿರುವ ವಿದ್ಯಾಮಂದಿರ (Vidhya Mandira) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ನಾತಕೋತ್ತರ ಪದವಿ ವಿಚಾರ ಬಂದಾಗ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವುದು ಕಠಿಣವಾಗುತ್ತಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಆ ವ್ಯವಸ್ಥೆ ಭಾರತಕ್ಕೆ ಮರಳಬೇಕಿದೆ. ಅದಕ್ಕೆ ಬೇಕಾದ ತಯಾರಿಗಳನ್ನ ನಮ್ಮಲ್ಲಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.   ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

    ರೇವಾ ಯೂನಿವರ್ಸಿಟಿಯ ಚಾನ್ಸಲರ್ ಡಾ. ಪಿ ಶ್ಯಾಮರಾಜು (Dr. P. Shyama Raju) ಮಾತನಾಡಿ, ಡಿಗ್ರಿ ಮಾಡಿದ ನಂತರ ಮುಂದೇನು ಮಾಡಬೇಕು ಅನ್ನೋ ಗೊಂದಲಕ್ಕೆ ಈ ಶೈಕ್ಷಣಿಕ ಮೇಳದಲ್ಲಿ ಪರಿಹಾರ ಸಿಗಲಿದೆ. ಐಟಿ ರಿಲೆಟೆಡ್ ಕೋರ್ಸ್ ಗಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ಪಿಜಿ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮಾಡಲೇಬೇಕು. ಪೈಪೋಟಿ ಇದ್ದಾಗ ಗುಣಮಟ್ಟ ಬೆಳೆಯುತ್ತದೆ ಎಂದರು.

    ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ (Ashwath Narayan) ಮಾತನಾಡಿ, ಒಂದೇ ಸೂರಿನಡಿ ಈ ರೀತಿಯ ಶೈಕ್ಷಣಿಕ ಮೇಳಾ ತುಂಬಾ ಸಹಾಯಕಾರಿಯಾಗಲಿದೆ. ಉದ್ಯೋಗ, ವಿದ್ಯಾರ್ಥಿ ವೇತನ ಸೇರಿ ಇತರೆ ವಿಷ್ಯಗಳನ್ನ ತಿಳಿಸಲು ಈ ಮೇಳಾ ಸಹಾಯವಾಗಲಿದೆ. ಶಿಕ್ಷಣವೇ ನಮ್ಮ ಐಡೆಂಟಿಟಿ ಎಂದು ಹೇಳಿದರು. ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್‌ ಫ್ಯಾನ್ಸ್‌ಗೆ ಕಿಚ್ಚನ ಖಡಕ್‌ ರಿಪ್ಲೈ

    ವಿದ್ಯಾಮಂದಿರ ಕಾರ್ಯಕ್ರಮ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜನೆಗೊಂಡಿದೆ.  ಇಂದು ನಾಳೆ ಬೆಳಗ್ಗೆ  9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಜುಕೇಷನ್‌ ಎಕ್ಸ್‌ಪೋ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬಹುದು. ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ಪಬ್ಲಿಕ್ ಟಿವಿ ವಿದ್ಯಾಮಂದಿರ ಎಜುಕೇಶನ್ ಎಕ್ಸ್‌ಪೋ ಪರಿಹಾರ ನೀಡಲಿದೆ.

    ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಂಡಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

     

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಬೆಂಗಳೂರು: ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ಪಬ್ಲಿಕ್ ಟಿವಿ (PUBLiC TV) ವಿದ್ಯಾಮಂದಿರ (Vidhya Mandira) ಎಜುಕೇಶನ್ ಎಕ್ಸ್‌ಪೋ ಪರಿಹಾರ ನೀಡಲಿದೆ.

    ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ  3ನೇ ಆವೃತ್ತಿಯ ವಿದ್ಯಾಮಂದಿರ ಎಜುಕೇಶನ್‌ ಎಕ್ಸ್‌ಪೋ ನಾಳೆ ಮತ್ತು ನಾಡಿದ್ದು ಬೆಂಗಳೂರಿನ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಯಾವ ಕೋರ್ಸ್ ಬೆಸ್ಟ್, ಯಾವ ಕಾಲೇಜ್ ಬೆಟರ್ ಎಂಬ ಗೊಂದಲಗಳಿಗೆ ಇಲ್ಲಿ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಉಚಿತವಾಗಿ ಸ್ಟಾಲ್‌ಗಳಿಗೆ ಭೇಟಿ ನೀಡಿ 50ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    42ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಉಡುಗೊರೆ ಪಡೆಯಿರಿ
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ಪ್ರತಿ ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

    ಪ್ಲಾಟಿನಂ ಪ್ರಾಯೋಜಕರು:
    ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ.

    ಗೋಲ್ಡ್‌ ಪ್ರಾಯೋಜಕರು
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌, CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಸಪ್ತಗಿರಿ NPS ವಿಶ್ವವಿದ್ಯಾಲಯ.

     

    ಸಿಲ್ವರ್‌ ಪ್ರಾಯೋಜಕರು:
    AIMS ಇನ್‌ಸ್ಟಿಟ್ಯೂಟ್ಸ್‌, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು,
    ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ಬೆಂಗಳೂರು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪೂರ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪ್ರೆಸಿಡೆನ್ಸಿ ಯೂನಿವರ್ಸಿಟಿ,

    ಸ್ಪೆಷಲ್‌ ಪೆವಿಲಿಯನ್‌
    ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್.

    ಸ್ಟಾಲ್‌ ಪಾರ್ಟ್‌ನರ್‌:
    ಆಚಾರ್ಯ ಬೆಂಗಳೂರು ಬಿ ಶಾಲೆ – ಸ್ವಾಯತ್ತ, BMS ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್, ಸಿಟಿ ಕಾಲೇಜು, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ – ತುಮಕೂರು, ಪ್ರೆಸಿಡೆನ್ಸಿ ಕಾಲೇಜು, ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆರ್ ವಿ ವಿಶ್ವವಿದ್ಯಾಲಯ, www.bangalorestudy.com, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್, ಎಸ್ – ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯ – ಬೆಂಗಳೂರು, ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಹರ್ಷ ಇನ್ಸ್ಟಿಟ್ಯೂಷನ್ಸ್, ಸುರಾನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್)

    ಕ್ರಿಯೆಟಿವ್‌ ಸ್ಪಾನರ್ಸ್‌:
    RR ಸಂಸ್ಥೆಗಳು

    ಇವೆಂಟ್‌ ಪಾರ್ಟ್‌ನರ್‌ :
    AD 6 ಜಾಹೀರಾತು

    ಗಿಫ್ಟ್‌ ಸ್ಪಾನ್ಸರ್ಸ್‌:
    ಜೀನಿ ಮಿಲೆಟ್‌ ಮಿಕ್ಸ್

    ದಿನಾಂಕ: ಆಗಸ್ಟ್‌ 31, ಸೆಪ್ಟೆಂಬರ್‌ 1
    ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

  • ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾಮಂದಿರಕ್ಕೆ ಬನ್ನಿ

    ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾಮಂದಿರಕ್ಕೆ ಬನ್ನಿ

    ಆ.31, ಸೆ.1 ರಂದು ಕಾರ್ಯಕ್ರಮ
    – ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಚಿತ ಪ್ರವೇಶ

    ಬೆಂಗಳೂರು: ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ (College) ಯಾವ ಕೋರ್ಸ್ ಇದೆ? ಈ ಕೋರ್ಸ್‍ಗಳಿಗೆ ಎಷ್ಟು ಶುಲ್ಕ ಇರುತ್ತದೆ? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ (Student) ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ (PUBLiC TV) ‘ವಿದ್ಯಾಮಂದಿರ’ ದಲ್ಲಿ (Vidya Mandira) ಸುಲಭವಾಗಿ ಉತ್ತರ ಸಿಗಲಿದೆ.

    ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ ಮೂರನೇ ಆವೃತ್ತಿಯ ʼವಿದ್ಯಾ ಮಂದಿರʼ 2 ದಿನಗಳ ಮೆಗಾ PG ಶೈಕ್ಷಣಿಕ ಮೇಳ ಆಗಸ್ಟ್‌ 31 ಶನಿವಾರ ಮತ್ತು ಸೆಪ್ಟೆಂಬರ್‌ 1ರ ಭಾನುವಾರ ಮಲ್ಲೇಶ್ವರಂನಲ್ಲಿ ನಡೆಯಲಿದೆ. ಕೆಸಿ ಜನರಲ್‌ ಆಸ್ಪತ್ರೆಯ ಮುಂಭಾಗಲ್ಲಿರುವ ಸರ್ಕಾರಿ ಶಾಲಾ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರು ಉಚಿತವಾಗಿ ಸ್ಟಾಲ್‌ಗಳಿಗೆ ಭೇಟಿ ನೀಡಿ 50ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

    ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ವಿದ್ಯಾ ಮಂದಿರವನ್ನು ಆಯೋಜಿಸಲಾಗುತ್ತಿದೆ.

    42ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ. ಇದನ್ನೂ ಓದಿ: ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಉಡುಗೊರೆ ಪಡೆಯಿರಿ
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ಪ್ರತಿ ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು

    ಪ್ಲಾಟಿನಂ ಪ್ರಾಯೋಜಕರು:
    ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ

    ಗೋಲ್ಡ್‌ ಪ್ರಾಯೋಜಕರು
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌, CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಸಪ್ತಗಿರಿ NPS ವಿಶ್ವವಿದ್ಯಾಲಯ

    ಸಿಲ್ವರ್‌ ಪ್ರಾಯೋಜಕರು:
    AIMS ಇನ್‌ಸ್ಟಿಟ್ಯೂಟ್ಸ್‌, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು,
    ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ಬೆಂಗಳೂರು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪೂರ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪ್ರೆಸಿಡೆನ್ಸಿ ಯೂನಿವರ್ಸಿಟಿ,

    ಸ್ಪೆಷಲ್‌ ಪೆವಿಲಿಯನ್‌
    ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್

    ಸ್ಟಾಲ್‌ ಪಾರ್ಟ್‌ನರ್‌:
    ಆಚಾರ್ಯ ಬೆಂಗಳೂರು ಬಿ ಶಾಲೆ – ಸ್ವಾಯತ್ತ, BMS ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್, ಸಿಟಿ ಕಾಲೇಜು, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ – ತುಮಕೂರು, ಪ್ರೆಸಿಡೆನ್ಸಿ ಕಾಲೇಜು, ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆರ್ ವಿ ವಿಶ್ವವಿದ್ಯಾಲಯ, www.bangalorestudy.com, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್, ಎಸ್ – ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯ – ಬೆಂಗಳೂರು, ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಹರ್ಷ ಇನ್ಸ್ಟಿಟ್ಯೂಷನ್ಸ್, ಸುರಾನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್)

    ಕ್ರಿಯೆಟಿವ್‌ ಸ್ಪಾನರ್ಸ್‌:
    RR ಸಂಸ್ಥೆಗಳು

    ಇವೆಂಟ್‌ ಪಾರ್ಟ್‌ನರ್‌ :
    AD 6 ಜಾಹೀರಾತು

    ಗಿಫ್ಟ್‌ ಸ್ಪಾನ್ಸರ್ಸ್‌:
    ಜೀನಿ ಮಿಲೆಟ್‌ ಮಿಕ್ಸ್

    ದಿನಾಂಕ: ಆಗಸ್ಟ್‌ 31, ಸೆಪ್ಟೆಂಬರ್‌ 1
    ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

     

  • ಪಬ್ಲಿಕ್‌ ಟಿವಿ ಮೆಗಾ PG ಶೈಕ್ಷಣಿಕ ಮೇಳ – 50ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ತಿಳಿಯಿರಿ

    ಪಬ್ಲಿಕ್‌ ಟಿವಿ ಮೆಗಾ PG ಶೈಕ್ಷಣಿಕ ಮೇಳ – 50ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ತಿಳಿಯಿರಿ

    – ಆ.31, ಸೆ.1 ರಂದು ಕಾರ್ಯಕ್ರಮ
    – ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಚಿತ ಪ್ರವೇಶ

    ಬೆಂಗಳೂರು: ನೀವು ಪದವಿ ಮುಗಿಸಿದ್ದೀರಾ? ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದೀರಾ? ಯಾವ ಕಾಲೇಜಿನಲ್ಲಿ ಯಾವ ಕೋರ್ಸ್‌ ಸೇರಬೇಕು ಎಂಬ ಗೊಂದಲದಲ್ಲಿದ್ದೀರಾ? .. ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಪಬ್ಲಿಕ್‌ ಟಿವಿ ʼವಿದ್ಯಾ ಮಂದಿರʼ ಪರಿಹಾರ ನೀಡಲಿದೆ.

    ಹೌದು. ಒಂದೇ ಸೂರಿನಡಿ ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮವನ್ನು ಪಬ್ಲಿಕ್‌ ಟಿವಿ ನಗರದಲ್ಲಿ ಆಯೋಜಿಸಿದೆ. 

    ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ  AD6 ಸಹಯೋಗದಲ್ಲಿ ಮೂರನೇ ಆವೃತ್ತಿಯ  ʼವಿದ್ಯಾ ಮಂದಿರʼ 2 ದಿನಗಳ ಮೆಗಾ PG ಶೈಕ್ಷಣಿಕ ಮೇಳ  ಆಗಸ್ಟ್‌ 31 ಶನಿವಾರ ಮತ್ತು ಸೆಪ್ಟೆಂಬರ್‌ 1ರ ಭಾನುವಾರ ಮಲ್ಲೇಶ್ವರಂನಲ್ಲಿ ನಡೆಯಲಿದೆ.  ಕೆಸಿ ಜನರಲ್‌ ಆಸ್ಪತ್ರೆಯ ಮುಂಭಾಗಲ್ಲಿರುವ ಸರ್ಕಾರಿ ಶಾಲಾ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರು ಉಚಿತವಾಗಿ ಸ್ಟಾಲ್‌ಗಳಿಗೆ ಭೇಟಿ ನೀಡಿ 50ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಇದನ್ನೂ ಓದಿ: ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಅವಿರೋಧ ಆಯ್ಕೆ

    42ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ:  ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ  ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.  

    ಉಡುಗೊರೆ ಪಡೆಯಿರಿ:
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ಪ್ರತಿ  ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು

    ಪ್ಲಾಟಿನಂ ಪ್ರಾಯೋಜಕರು: 
    ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌,  CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಸಪ್ತಗಿರಿ NPS ವಿಶ್ವವಿದ್ಯಾಲಯ ಇದನ್ನೂ ಓದಿ: ಲಕ್ನೋದಲ್ಲೇ ರಾಹುಲ್‌ ಉಳಿಸಿಕೊಳ್ಳಲು ಗೋಯೆಂಕಾ ಪ್ರಯತ್ನ

    ಸಿಲ್ವರ್‌ ಪ್ರಾಯೋಜಕರು:
    AIMS  ಇನ್‌ಸ್ಟಿಟ್ಯೂಟ್ಸ್‌,  ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ಬೆಂಗಳೂರು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪೂರ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್,  ಪ್ರೆಸಿಡೆನ್ಸಿ ಯೂನಿವರ್ಸಿಟಿ,

    ಸ್ಪೆಷಲ್‌ ಪೆವಿಲಿಯನ್‌:
    ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್

    ಸ್ಟಾಲ್‌ ಪಾರ್ಟ್‌ನರ್‌:
    ಆಚಾರ್ಯ ಬೆಂಗಳೂರು ಬಿ ಶಾಲೆ – ಸ್ವಾಯತ್ತ,  BMS ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್, ಸಿಟಿ ಕಾಲೇಜು,  ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ – ತುಮಕೂರು, ಪ್ರೆಸಿಡೆನ್ಸಿ ಕಾಲೇಜು, ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆರ್ ವಿ ವಿಶ್ವವಿದ್ಯಾಲಯ, www.bangalorestudy.com, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್, ಎಸ್ – ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯ – ಬೆಂಗಳೂರು, ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಹರ್ಷ ಇನ್ಸ್ಟಿಟ್ಯೂಷನ್ಸ್, ಸುರಾನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,  ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್)

    ಕ್ರಿಯೆಟಿವ್‌ ಸ್ಪಾನರ್ಸ್‌:
    RR ಸಂಸ್ಥೆಗಳು

    ಇವೆಂಟ್‌ ಪಾರ್ಟ್‌ನರ್‌ :
    AD 6 ಜಾಹೀರಾತು

    ಗಿಫ್ಟ್‌ ಸ್ಪಾನ್ಸರ್ಸ್‌:
    ಜೀನಿ ಮಿಲೆಟ್‌ ಮಿಕ್ಸ್

    ದಿನಾಂಕ:  ಆಗಸ್ಟ್‌ 31, ಸೆಪ್ಟೆಂಬರ್‌ 1

    ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು

    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ