Tag: education

  • ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಹೈದರಾಬಾದ್‌: ಪರೀಕ್ಷೆಯಲ್ಲಿ (Exam) ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಮಕ್ಕಳನ್ನು ಒಎನ್‌ಜಿಸಿ ಉದ್ಯೋಗಿಯೊಬ್ಬ ಹತ್ಯೆಗೈದ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡದಲ್ಲಿ ನಡೆದಿದೆ.

    37 ವರ್ಷದ ಒಎನ್‌ಜಿಸಿ ಉದ್ಯೋಗಿ ಚಂದ್ರಶೇಖರ್‌ ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಂದು ನಂತರ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಂದೆ ವಿ. ಚಂದ್ರ ಕಿಶೋರ್ ಇಬ್ಬರು ಬಾಲಕರನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

     

    ಪುತ್ರರ ಶೈಕ್ಷಣಿಕ ಸಾಧನೆಯಿಂದ ಚಂದ್ರಶೇಖರ್‌ ನಿರಾಶೆಗೊಂಡಿದ್ದರು. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಕಷ್ಟವಾಗಲಿದೆ ಎಂದು ಭಾವಿಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡ ಮನೆಗೆ ಆಗಮಿಸಿ ಪರಿಶೀಲಿಸಿದೆ. ಈ ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು  ತನಿಖೆ ಆರಂಭವಾಗಿದೆ.

    ಕಿಶೋರ್ ಅವರ ಪತ್ನಿಯ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪತಿ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮಕ್ಕಳು ಬಕೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

  • ಪಿಇಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ನಿಧನ

    ಪಿಇಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ನಿಧನ

    ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ (PES University) ಸಂಸ್ಥಾಪಕ ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್. ದೊರೆಸ್ವಾಮಿ (M.R Doreswamy) ಗುರುವಾರ ಸಂಜೆ ನಿಧನರಾಗಿದ್ದಾರೆ.

    ಐದು ದಶಕಗಳ ಹಿಂದೆ ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೂರದೃಷ್ಟಿಯ ದೊರೆಸ್ವಾಮಿಯವರು ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎಂಬ ಬ್ರ್ಯಾಂಡ್ ಕಟ್ಟಿ, ಇಂಜಿನಿಯರಿಂಗ್, ಮೆಡಿಕಲ್, ಹೊಸ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

    ಮೂಲತಃ ಆಂಧ್ರಪ್ರದೇಶದ ಚಿತ್ತೂರಿನ ಕೃಷಿ ಕುಟುಂಬದಲ್ಲಿ 1937ರಲ್ಲಿ ಮೇದರಪಟ್ಲ ರಾಮನಾಯ್ಡು ದೊರೆಸ್ವಾಮಿ ಜನಿಸಿದ್ದರು. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆದು, ಇಲ್ಲಿಯೇ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು. ನಂತರ ಖಾಸಗಿ ಕಾಲೇಜು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ, ಅಲ್ಲಿಂದ ಹೊರಬಂದು ಪಿಇಎಸ್ ಶಿಕ್ಷಣ ಸಂಸ್ಥೆ ಆರಂಭಿಸಿದರು.

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 2013ರಲ್ಲಿ ದೊರೆಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕವಾದರು. ನಂತರ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣಗಳ ಸುಧಾರಣಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

  • ಮುಖ್ಯ ಶಿಕ್ಷಕರಿಗೆ ಬಿಸಿ ಮುಟ್ಟಿಸಿದ ಇಲಾಖೆ – ಬೇಕಾಬಿಟ್ಟಿ ಸಭೆ, ಸಮಾರಂಭಗಳಿಗೆ ಹೋಗುವುದಕ್ಕೆ ಬ್ರೇಕ್‌

    ಮುಖ್ಯ ಶಿಕ್ಷಕರಿಗೆ ಬಿಸಿ ಮುಟ್ಟಿಸಿದ ಇಲಾಖೆ – ಬೇಕಾಬಿಟ್ಟಿ ಸಭೆ, ಸಮಾರಂಭಗಳಿಗೆ ಹೋಗುವುದಕ್ಕೆ ಬ್ರೇಕ್‌

    ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government School) ಮಾಹಿತಿ ನೀಡದೇ ಮುಖ್ಯ ಶಿಕ್ಷಕರು ಬೇಕಾಬಿಟ್ಟಿ ಸಭೆ-ಸಮಾರಂಭಗಳಿಗೆ ಹೋಗುವುದಕ್ಕೆ ಶಿಕ್ಷಣ ‌ಇಲಾಖೆ (Education Department) ಬ್ರೇಕ್ ಹಾಕಿದೆ.

    ಶಾಲಾ ಸಮಯದಲ್ಲಿ ಇನ್ನು ಮುಂದೆ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುವಂತಿಲ್ಲ ಎಂದು ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಹೋಗುವ ಮುನ್ನ ಮುಖ್ಯ ಶಿಕ್ಷಕರು ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಮಾಹಿತಿ, ಆಹ್ವಾನ ಪತ್ರಿಕೆ, ಸಭಾ ಸೂಚನೆ ಪತ್ರವನ್ನು ಕಡ್ಡಾಯವಾಗಿ ನಮೂದಿಸಿ ಹೋಗಬೇಕು ಎಂದು ರಾಜ್ಯದ ‌ಎಲ್ಲಾ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್‌ ಸುಳಿವು

    ಶಿಕ್ಷಣ ಇಲಾಖೆ ಆದೇಶ ಯಾಕೆ?
    ಶಾಲಾ ಸಮಯದಲ್ಲಿ ಬಹುತೇಕ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರು. ಯಾವುದೇ ಮಾಹಿತಿ ಇಲ್ಲದೇ ನುಮತಿ ‌ಪಡೆಯದೇ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರಿಂದ ಶಾಲಾ ದಿನಚರಿ ಮೇಲೆ ಪರಿಣಾಮ ಬೀರುತ್ತಿತ್ತು.

    ಮುಖ್ಯ ಶಿಕ್ಷಕರು ಇಲ್ಲದೇ ಇರುವುದರಿಂದ ಬೋಧನೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಹೋಗುವಾಗ ಮಾಹಿತಿ ನೀಡುವುದು ಕಡ್ಡಾಯ. ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.

     

  • ಬಿಜೆಪಿ ಅವಧಿಯ ವಿವಿಗಳಿಗೆ ಕೊಕ್; ಸರ್ಕಾರದ ನಡೆ ಅವಿವೇಕದ ಪರಮಾವಧಿ: ವಿಜಯೇಂದ್ರ

    ಬಿಜೆಪಿ ಅವಧಿಯ ವಿವಿಗಳಿಗೆ ಕೊಕ್; ಸರ್ಕಾರದ ನಡೆ ಅವಿವೇಕದ ಪರಮಾವಧಿ: ವಿಜಯೇಂದ್ರ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ. ಇದು ಅವಿವೇಕದ ಪರಮಾವಧಿ ಎಂದು ಬಿಜೆಪಿ ( BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಟೀಕಿಸಿದರು.

    9 ವಿಶ್ವವಿದ್ಯಾನಿಲಯಗಳಿಗೆ(Universities) ಬೀಗ ಜಡಿಯಲು ಹೊರಟಿರುವ ಸರ್ಕಾರದ ನಡೆಯನ್ನು ಖಂಡಿಸಿ ಎಕ್ಸ್ನಲ್ಲಿ ವಿಜಯೇಂದ್ರ ಪೋಸ್ಟ್ ಹಂಚಿಕೊಂಡಿದ್ದಾರೆ. ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅವಿವೇಕತನದ ಪರಮಾವಧಿಯಾಗಿದೆ. ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳವಾಗಿ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾನಿಲಯಗಳನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿತ್ತು. ಇವುಗಳ ಅಭಿವೃದ್ಧಿಗಾಗಿ ಮೀಸಲಿರಿಸಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿವಿಗಳನ್ನು ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಶಿಕ್ಷಣ ಹಾಗೂ ಅಭಿವೃದ್ಧಿ ವಿರೋಧಿಯ ಧೋರಣೆಯನ್ನು ಸಾಕ್ಷಿಕರಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಇದನ್ನೂ ಓದಿ : ದರ ಏರಿಕೆ ಎಫೆಕ್ಟ್ – ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ ಖಾಲಿ

    ಇತಿಹಾಸದಿಂದಲೂ ದಕ್ಷಿಣ ಭಾರತದಲ್ಲಿ `ಕರ್ನಾಟಕ ರಾಜ್ಯ ಶಿಕ್ಷಣದ ಕಾಶಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೆ ಹಿನ್ನಡೆಯುಂಟು ಮಾಡುವ ನಿರ್ಧಾರಗಳನ್ನು ಈ ಹಿಂದಿನ ಯಾವ ಸರ್ಕಾರಗಳೂ ಕೈಗೊಂಡಿರಲಿಲ್ಲ. ಆದರೆ ಈ ಕಾಂಗ್ರೆಸ್ ಸರ್ಕಾರ ಇಂಥಾ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಖಂಡನೀಯ ಕ್ರಮವಾಗಿದೆ ಎಂದು ಗುಡುಗಿದರು. ಇದನ್ನೂ ಓದಿ : ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆರೆಯಲಾಗಿದ್ದ ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹಾರಾಣಿ ಕ್ಲಸ್ಟರ್, ನೃಪತುಂಗ ಸೇರಿದಂತೆ ಇತರ ಹಿಂದುಳಿದ ಪ್ರದೇಶಗಳ ವಿಶ್ವವಿದ್ಯಾನಿಲಯಗಳನ್ನು ಮುಚ್ಚಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಹಿಂದಿನ ಯೋಚನೆ ಶಿಕ್ಷಣ ವಿರೋಧಿ ನೀತಿಯ ವಿಕೃತ ನಡೆಯಾಗಿದೆ. ಈ ಕೂಡಲೇ ಸರ್ಕಾರ ತನ್ನ ಈ ನಿರ್ಧಾರವನ್ನು ಕೈ ಬಿಟ್ಟು ಈ 9 ವಿಶ್ವವಿದ್ಯಾನಿಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

  • ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾಯ್ತಾ ರಾಜ್ಯ ಸರ್ಕಾರ?

    ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾಯ್ತಾ ರಾಜ್ಯ ಸರ್ಕಾರ?

    ಬೆಂಗಳೂರು: ಕಡಿಮೆ ಮಕ್ಕಳು ದಾಖಲಾಗಿರುವ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾದಂತೆ ಕಾಣುತ್ತಿದೆ. ಕಡಿಮೆ ಮಕ್ಕಳು ಇರುವ ಶಾಲೆಯನ್ನ ಮತ್ತೊಂದು ಶಾಲೆ ಜೊತೆ ಸಂಯೋಜಿಸಿ ನಡೆಸಲು ಸಿದ್ಧತೆ ಶುರು ಮಾಡಿದೆ. ಅದಕ್ಕಾಗಿ ಸಮಿತಿಯೊಂದನ್ನ ರಚನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಭಾರೀ ಕಳವಳಕ್ಕೆ ಕಾರಣವಾಗಿದೆ.

    ಈ ಹಿಂದೆ ಬಿಜೆಪಿ ಸರ್ಕಾರ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸಲು ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಭಾರೀ ವಿರೂಧ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಮತ್ತೆ ಅದೇ ನಿರ್ಧಾರ ತೆಗೆದುಕೊಂಡಿದೆ.

    ತಾಲೂಕು ಮಟ್ಟದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಣ ಗುಣಮಟ್ಟದ ಸುಧಾರಿಸಲು ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯನ್ನ ರಚನೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 14 ಜನರನ್ನೊಳಗೊಂಡ ಸಮಿತಿ ಇದಾಗಿದೆ. ಪ್ರತಿ ತಾಲೂಕಿನ ಶಾಸಕರು ಸಮಿತಿಯ ಅಧ್ಯಕ್ಷರಾಗಿ ಇರುತ್ತಾರೆ. ತಹಶೀಲ್ದಾರರು, ಬಿಇಓ, ಸರ್ಕಾರದಿಂದ ನಾಮ ನಿರ್ದೇಶನಗೊಂಡ 5 ಜನ ಸದಸ್ಯರು, SDMC ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.

    ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಿದ್ದು, ಶಾಲಾ ದಾಖಲಾತಿ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ, ಶಾಲೆ ಬಿಟ್ಟ ಮಕ್ಕಳನ್ನ ಶಾಲೆಗೆ ಕರೆತರಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಸಮಿತಿಯ ಕಾರ್ಯಗಳೇನು?
    1. ತಾಲೂಕಿನಲ್ಲಿನ ಎಲ್ಲಾ ಅರ್ಹ ಮಕ್ಕಳ ಶಾಲಾ ದಾಖಲಾತಿ, ದಾಖಲಾದ ಮಕ್ಕಳ ನಿರಂತರ ಹಾಜರಾತಿ ಹಾಗೂ ಹಾಜರಾಗುವ ಎಲ್ಲಾ ಮಕ್ಕಳ ಕಲಿಕೆಯನ್ನು ವೃದ್ಧಿಸುವ ಮೂಲಕ ಶಿಕ್ಷಣ ಗುಣಮಟ್ಟ ಸುಧಾರಿಸುವುದು.

    2. ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೆ ಶಾಲೆ ಬಿಟ್ಟುಹೋಗುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ ಪ್ರಕ್ರಿಯೆಗಳ ಕುರಿತು ಚರ್ಚಿಸಿ ಸುಧಾರಣಾ ಕ್ರಮ ವಹಿಸುವುದು.

    3. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಸಿಎಸ್‌ಆರ್‌ ಕಾರ್ಯಕ್ರಮದ ಮೂಲಕ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ನೆರವು ಪಡೆಯಲು ಕ್ರಮ ವಹಿಸುವುದು.

    4. ಅತೀ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನ ಗುರುತಿಸಿ, ಮಕ್ಕಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಯ ಹಾಗೂ ಸಾಮಾಜೀಕರಣ ಹಿತದೃಷ್ಟಿಯಿಂದ ʻಸದರಿ ಶಾಲೆಗಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸಂಯೋಜಿಸಿʼ ಸಂಯೋಜಿತ ಶಾಲೆಯನ್ನು ʻHub And Spoke Model’ ರೀತಿಯಲ್ಲಿ ಕೇಂದ್ರ ಶಾಲೆಯಾಗಿ ಅಭಿವೃದ್ಧಿಪಡಿಸುವ ಮೂಲಕ ಶಾಲೆಯ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಕ್ರಮವಹಿಸುವುದು.

  • 25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    ಬಾಗಲಕೋಟೆ: ಒಂದು ಕಡೆ 25 ವರ್ಷಗಳ ಬಳಿಕ ಪ್ರೌಢಶಾಲೆಯಲ್ಲಿ (High School) ಹಳೆ ವಿದ್ಯಾರ್ಥಿಗಳು (Old Students) ಸಮಾಗಮ. ಇನ್ನೊಂದೆಡೆ ಶಿಕ್ಷಕರು (Teacher) ಪಾಠ ಬೋಧನೆ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬಾದಾಮಿ ತಾಲೂಕಿನ ಕೆರೂರು (Kerur) ಪಟ್ಟಣದ ಅ.ರಾ ಹಿರೇಮಠ ಹಾಗೂ ಅ.ಚ ಘಟ್ಟದ ಪ್ರೌಢಶಾಲೆಯಲ್ಲಿ.

    2000-2001ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು (SSLC Students) ವಿಶಿಷ್ಟ ರೀತಿಯಲ್ಲಿ ಗುರುವಂದನಾ (Guru Vadndana) ಕಾರ್ಯಕ್ರಮ ಆಯೋಜಿಸಿದ್ದರು. ಇದೇ ವೇಳೆ 1997-98 ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆದಿದ್ದು ಮತ್ತೊಂದು ವಿಶೇಷ.

    25ನೇ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸೇರಿ ಅಕ್ಷರ ಕಲಿಸಿದ ಗುರುಗಳಿಗೆ ಗೌರವಿಸುವ ಮೂಲಕ ಸಾರ್ಥಕ ಕ್ಷಣವನ್ನು ಸಂಭ್ರಮಿಸಿದರು. ಬೆಳಗ್ಗೆ ಪ್ರೌಢ ಶಾಲಾ ಆವರಣದಲ್ಲಿ ಪ್ರಾರ್ಥನೆ ಬಳಿಕ ಕೊಠಡಿಗೆ ತೆರಳಿ ಪಾಠ ಕೇಳುವ ದೃಶ್ಯ ಮರುಸೃಷ್ಟಿ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವಕ್ಕೆ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ – ವಿಶೇಷತೆ ಏನು?

    ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ಸಿ ಎಸ್ ನಾಗನೂರು ಅವರು ವಿದ್ಯಾರ್ಥಿಗಳು ಹಾಜರಾತಿ ತೆಗೆದುಕೊಂಡು ಎಂದಿನಂತೆ ಪಾಠ ಬೋಧನೆ ಮಾಡಿದರು. ಹಳೆ ವಿದ್ಯಾರ್ಥಿಗಳು ಬಿಳಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್, ಹಳೆ ವಿದ್ಯಾರ್ಥಿನಿಯರು ಕೆಂಪು ಬಣ್ಣದ ಸೀರೆ ಧರಿಸಿ ತರಗತಿಗೆ ಹಾಜರಾಗಿದ್ದರು. ಅದೇ ಪಾಠ, ಅದೇ ಹಳೆಯ ನೆನಪಿನಲ್ಲಿ ಸ್ನೇಹಿತರು ತಮ್ಮ ಶೈಕ್ಷಣಿಕ ಜೀವನ ಸದ್ಯ ವೃತ್ತಿ ಜೀವನದ ಬಗ್ಗೆ ಪರಸ್ಪರ ವಿಚಾರವನ್ನು ಹಂಚಿಕೊಂಡರು.

    ಬಿಬಿ ನಿಲುಗಲ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಲಿಸಿದ ಗುರುಗಳನ್ನು ಪುಷ್ಪ ವೃಷ್ಟಿಯ ಮೂಲಕ ಬರಮಾಡಿಕೊಂಡರು. ವೇದಿಕೆ ಮೇಲೆ ಗುರುಗಳಿಗೆ ಶಿಷ್ಯರು ಸನ್ಮಾನಿಸಿ ಸಾರ್ಥಕತೆ ಮೆರೆದರು. 25 ವರ್ಷಗಳ ಬಳಿಕ ಶಿಕ್ಷಕರು ವಿದ್ಯಾರ್ಥಿಗಳು ಸಮಾಗಮದಲ್ಲಿ ಅಗಲಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ಈ ವೇಳೆ ಹಲವು ಹಳೆ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲೆಯಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ನಿವೃತ್ತಿಯಾದ ಶಿಕ್ಷಕರಾದ ಡಿಪಿ ಅಮಲಝರಿ, ಆರ್ ಆರ್ ಶೆಟ್ಟರ್, ವೈ ಡಿ ರಡ್ಡೇರ್, ಸಿ ಎಸ್ ನಾಗನೂರು ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

     

  • ಚಿಕ್ಕ ವಯಸ್ಸಿನಲ್ಲೇ ತಾಯಿ ನಿಧನ – ಪ್ರಾಧ್ಯಾಪಕರಾಗಿ ಪಾಠ

    ಚಿಕ್ಕ ವಯಸ್ಸಿನಲ್ಲೇ ತಾಯಿ ನಿಧನ – ಪ್ರಾಧ್ಯಾಪಕರಾಗಿ ಪಾಠ

    ಭಾರತದ ಆರ್ಥಿಕ ಕ್ರಾಂತಿಯ ಹರಿಕಾರ, ವಿಶ್ವ ಕಂಡ ಮಹಾನ್ ಆರ್ಥಿಕ ತಜ್ಞ, ಭಾರತದ 13ನೇ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ (Manmohan Singh) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 19 ವರ್ಷದ ಸಿಂಗ್, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಹಲೋಹ ತ್ಯಜಿಸಿದ್ದಾರೆ. ಶುಕ್ರವಾರ ರಾತ್ರಿ 8:06ರ ಸುಮಾರಿಗೆ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ 9:51ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

    1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ (Punjab) ಪ್ರಾಂತ್ಯ ಗಹ್‌ನಲ್ಲಿ ಮನಮೋಹನ್ ಸಿಂಗ್ ಅವರು ನಿಖ್ ಕುಟುಂಬದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಸಿಂಗ್, ತಂದೆ ಹಾಗೂ ಅಜ್ಜಿಯ ಆರೈಕೆಯಲ್ಲಿ ಬೆಳೆದರು.

    ಅವರ ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ ಅವರಿದ್ದ ಹಳ್ಳಿಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಅವರು ದೀಪದ ಬೆಳಕಿನಲ್ಲಿ ಅಧ್ಯಯನ ಮಾಡಿದ್ದರು. 14 ನೇ ವಯಸ್ಸಿನಲ್ಲಿ, ಸಿಂಗ್ ಅವರ ಕುಟುಂಬವು ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದು ಅಮೃತಸರದಲ್ಲಿ ವಾಸಿಸುತ್ತಿತ್ತು.  ಇದನ್ನೂ ಓದಿ: ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

    ಉರ್ದು (Urdu) ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ 1952ರಲ್ಲಿ ಪದವಿ ಹಾಗೂ 1954 ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1957ರಲ್ಲಿ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ 1962ರಲ್ಲಿ ಆಕ್ಸ್‌ಫರ್ಡ್‌ ವಿವಿಯಲ್ಲಿ ಡಾಕ್ಟರೇಟ್ ಪಡೆದರು. 1958ರಲ್ಲಿ ಇತಿಹಾಸ ಪ್ರಾಧ್ಯಾಪಕಿ ಹಾಗೂ ಲೇಖಕಿ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

     

    ವಿನಮ್ರತೆಯ ಸಾಕಾರಮೂರ್ತಿಯಾಗಿದ್ದ ಮನಮೋಹನ್ ಸಿಂಗ್ ಅವರು, ಡಾಕ್ಟರೇಟ್ ಮುಗಿಸಿದ ನಂತರ ಪಂಜಾಬ್ ವಿವಿ ಹಾಗೂ ದೆಹಲಿಯ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು. ಯುಎನ್‌ಸಿಟಿಎಡಿ ಸಚಿವಾಲಯದಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.

  • ಇನ್ನು ಮುಂದೆ 5, 8ನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿಯನ್ನು ಫೇಲ್‌ ಮಾಡಬಹುದು

    ಇನ್ನು ಮುಂದೆ 5, 8ನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿಯನ್ನು ಫೇಲ್‌ ಮಾಡಬಹುದು

    – ಆರ್‌ಟಿಇ ಕಾಯ್ದೆಗೆ ಕೇಂದ್ರದಿಂದ ತಿದ್ದುಪಡಿ
    – ಫಲಿತಾಂಶ ಪ್ರಕಟವಾದ 2 ತಿಂಗಳ ಒಳಗಡೆ ಪರೀಕ್ಷೆ
    – ಸಪ್ಲಿಮೆಂಟರಿ ಪರೀಕ್ಷೆಯಲ್ಲೂ ಫೇಲ್‌ ಆದರೆ ಅದೇ ಕ್ಲಾಸ್‌ನಲ್ಲಿ ಓದಬೇಕು

    ನವದೆಹಲಿ: 5 ಮತ್ತು 8ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (Union Government) ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್‌ ಆದರೆ ಅದೇ ತರಗತಿಯಲ್ಲೇ ಓದಬೇಕಾಗುತ್ತದೆ.

    ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯ್ದೆ ನಿಯಮಗಳು – 2010 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮಗಳ ಪ್ರಕಾರ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆದರೆ ಅವರು ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುತ್ತದೆ.

     

    ವಿದ್ಯಾರ್ಥಿ 5 ಮತ್ತು 8 ನೇ ತರಗತಿಯಲ್ಲಿ ಫೇಲ್‌ (Fail) ಆದರೆ ಫಲಿತಾಂಶ ಪ್ರಕಟವಾದ 2 ತಿಂಗಳ ಒಳಗಡೆ ಮತ್ತೊಮ್ಮೆ ಪರೀಕ್ಷೆ (Exam) ಬರೆಯಬೇಕಾಗುತ್ತದೆ. ಈ ಪರೀಕ್ಷೆಯಲ್ಲೂ ಫೇಲ್‌ ಆದರೆ ಆ ವಿದ್ಯಾರ್ಥಿ ಅದೇ ತರಗತಿಯಲ್ಲೇ ಓದಬೇಕಾಗುತ್ತದೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿಯನ್ನು ಶಾಲೆಗಳು ಹೊರ ಹಾಕುವಂತಿಲ್ಲ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 5 ರೂ. ಕುರ್ ಕುರೆಗಾಗಿ ಮಾರಾಮಾರಿ – 10ಕ್ಕೂ ಹೆಚ್ಚು ಜನ ಆಸ್ಪತ್ರೆ ಪಾಲು

    ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರವು ನಡೆಸುತ್ತಿರುವ 3,000 ಕ್ಕೂ ಹೆಚ್ಚು ಶಾಲೆಗಳಿಗೆ ಅಧಿಸೂಚನೆಯು ಅನ್ವಯವಾಗುತ್ತದೆ.

    ಶಾಲಾ ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವ ಕಾರಣ ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈಗಾಗಲೇ ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈ ನಿಯಮವನ್ನು ಜಾರಿ ಮಾಡಿದೆ. ಹರಿಯಾಣ ಮತ್ತು ಪುದುಚೇರಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ಉಳಿದ ರಾಜ್ಯಗಳು ಮತ್ತು ಕೆಂದ್ರಾಡಳಿತ ಪ್ರದೇಶಗಳ ಈ ನೀತಿಯನ್ನು ಮುಂದುವರಿಸಲು ನಿರ್ಧರಿಸಿವೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     

  • ಪಿಜಿ ಆಯುಷ್: ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ -ಕೆಇಎ

    ಪಿಜಿ ಆಯುಷ್: ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ -ಕೆಇಎ

    ಬೆಂಗಳೂರು:ಸ್ನಾತಕೋತ್ತರ (ಪಿಜಿ) ಆಯುಷ್ (PG AYUSH) ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುವ ಕಾರಣ ಆನ್‌ಲೈನ್‌ನಲ್ಲಿ ನೋಂದಣಿ, ಅರ್ಜಿ ಸಲ್ಲಿಕೆಗೆ ಡಿ.1ರವರೆಗೆ ಪೋರ್ಟಲ್ ತೆರೆಯಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

    ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಪ್ರಸಕ್ತ ಸಾಲಿಗೆ ಪಿಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ 15 ಪರ್ಸೆಂಟೈಲ್ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅರ್ಹರಾಗುವ ಎಲ್ಲರಿಗೂ ಅನುಕೂಲ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಎಂಎಸ್ಸಿ ನರ್ಸಿಂಗ್, ಎಂಪಿಟಿ ಕೋರ್ಸ್ ಅರ್ಜಿ ಸಲ್ಲಿಸಲು ಡಿ.2 ಕೊನೆ ದಿನ: ಕೆಇಎ

     

    ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆಗಳ ಪರಿಶೀಲನೆ ಡಿ. 2ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಕೆಇಎ ಕಚೇರಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಬರಬೇಕು ಎಂದು ಅವರು ಸಲಹೆ ನೀಡಿದ್ದಾರೆ.  ಇದನ್ನೂ ಓದಿ: 2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

    ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ದಾಖಲಿಸಲು ಡಿ.3ರವರೆಗೆ ಅವಕಾಶ ನೀಡಲಾಗಿದೆ. ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಡಿ.4ರಂದು ಬೆಳಿಗ್ಗೆ 11ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಚಲನ್ ಡೌನ್‌ಲೋಡ್ ಮಾಡಿಕೊಂಡು ಡಿ.6ರೊಳಗೆ ಶುಲ್ಕ ಪಾವತಿಸಬೇಕು. ಕಾಲೇಜುಗಳಿಗೆ ವರದಿ ಮಾಡಿಕೊಳ್ಳಲು ಡಿ.7 ಕೊನೆ ದಿನ ಎಂದು ಅವರು ಹೇಳಿದರು.

    ದಿನಾಂಕ ವಿಸ್ತರಣೆ:
    ಎಂಬಿಎ, ಎಂಸಿಎ, ಎಂ.ಟೆಕ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ನ.30ರ ಮಧ್ಯಾಹ್ನ 12 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

  • ಬಾಗಲಕೋಟೆ ವಿವಿಯಿಂದ ಅನ್ಯಾಯ – ವಾಣಿಜ್ಯ ವಿಭಾಗದ ಉಪನ್ಯಾಸಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ

    ಬಾಗಲಕೋಟೆ ವಿವಿಯಿಂದ ಅನ್ಯಾಯ – ವಾಣಿಜ್ಯ ವಿಭಾಗದ ಉಪನ್ಯಾಸಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ

    ಬಾಗಲಕೋಟೆ: ವಿಶ್ವವಿದ್ಯಾಲಯದಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯಾದ್ಯಂತ ವಾಣಿಜ್ಯ ವಿಭಾಗದ (Commerce Lecturer) ಡಿಗ್ರಿ ಕಾಲೇಜುಗಳ ಉಪನ್ಯಾಸಕರು ಕಪ್ಪು ಪಟ್ಟಿಯನ್ನು ಧರಿಸಿ ವಿದ್ಯಾರ್ಥಿಗಳಿಗೆ (Student) ಪಾಠ ಮಾಡಿದ್ದಾರೆ.

    ವಾಣಿಜ್ಯ ವಿಭಾಗಕ್ಕೆ ಇರುವ ಫೈನಾನ್ಸಿಯಲ್‌ ಮ್ಯಾನೇಜಮೆಂಟ್ (Financial Management) ವಿಷಯವನ್ನು ಅರ್ಥಶಾಸ್ತ್ರ (Economics) ವಿಭಾಗದ ಉಪನ್ಯಾಸಕರು ಬೋಧನೆ ಮಾಡುವಂತೆ ಬಾಗಲಕೋಟೆ ವಿಶ್ವವಿದ್ಯಾಲಯ (Bagalkot University) ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯನ್ನು ಖಂಡಿಸಿ ಇಳಕಲ್, ಮುಧೋಳ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ಜಿಲ್ಲೆಯ ವಾಣಿಜ್ಯ ವಿಭಾಗದ ಉಪನ್ಯಾಸಕರು ಪ್ರತಿಭಟಿಸಿದ್ದಾರೆ.  ಇದನ್ನೂ ಓದಿ: ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಿಗೆ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ವಿಷಯದ ಬಗ್ಗೆ ಸಂಪೂರ್ಣ ಹಿಡಿತ ಇರುವುದಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಲ್ಲದೇ ವಾಣಿಜ್ಯ ವಿಭಾಗದ ಉಪನ್ಯಾಸಕರ ಹುದ್ದೆಗಳಿಗೂ ಕುತ್ತುಬರುವ ಸಾಧ್ಯತೆ ಇದೆ ಎಂದು ಹೇಳಿ ಕಪ್ಪು ಪಟ್ಟಿಧರಿಸಿ ಸಾಂಕೇತಿಕ ಪ್ರತಿಭಟನೆಗೆ (Protest) ಇಳಿದಿದ್ದಾರೆ.

    ಕೂಡಲೇ ವಿಶ್ವವಿದ್ಯಾಲಯ ಈ ಆದೇಶವನ್ನು ಹಿಂಪಡೆಯದಿದ್ದರೆ ಮೌಲ್ಯಮಾಪನ ಸೇರಿದಂತೆ ಬೋಧನೆ (ಕ್ಲಾಸ್‌ಗಳನ್ನು) ಬಹಿಷ್ಕರಿಸಿ ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ಮಾಡುವುದಾಗಿ ಬಾಗಲಕೋಟೆ ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ವ್ಯವಸ್ಥಾಪನಾ ಪ್ರಾಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಕುರನಾಳ ಎಚ್ಚರಿಕೆ ನೀಡಿದ್ದಾರೆ.