Tag: education

  • MBA, MCA ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಣೆ – ಕೆಇಎ

    MBA, MCA ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಣೆ – ಕೆಇಎ

    ಬೆಂಗಳೂರು: ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ 22ರಂದು ಪಿಜಿಸಿಇಟಿ ನಡೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಈ ದಿನಾಂಕ ವಿಸ್ತರಣೆ ಕೇವಲ ಎಂಬಿಎ, ಎಂಸಿಎ ಕೋರ್ಸ್‌ಗೆ ಮಾತ್ರ ಅನ್ವಯವಾಗುತ್ತದೆ. ಎಂ.ಟೆಕ್, ಎಂಇ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮುಗಿದಿದೆ. ಮೇ 31ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

  • ಪಬ್ಲಿಕ್‌ ಟಿವಿ ವಿದ್ಯಾಪೀಠ: ಇಂದು ಕೊನೆಯ ದಿನ ತಪ್ಪದೇ ಬನ್ನಿ, ಮಿಸ್‌ ಮಾಡಿದ್ರೆ ಮುಂದಿನ ವರ್ಷ ಕಾಯಬೇಕು

    ಪಬ್ಲಿಕ್‌ ಟಿವಿ ವಿದ್ಯಾಪೀಠ: ಇಂದು ಕೊನೆಯ ದಿನ ತಪ್ಪದೇ ಬನ್ನಿ, ಮಿಸ್‌ ಮಾಡಿದ್ರೆ ಮುಂದಿನ ವರ್ಷ ಕಾಯಬೇಕು

    ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ವಿದ್ಯಾಪೀಠ (Vidyapeeta) 8ನೇ ಆವೃತ್ತಿಯ ಎಜುಕೇಶನ್ ಎಕ್ಸ್‌ಪೋ (Education Expo) ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    ಮೊದಲ ದಿನವೇ ಸುಮಾರು 4.5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಉಚಿತ ಪ್ರವೇಶ ಇರುವ ಕಾರಣ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಎಕ್ಸ್‌ಪೋಗೆ ಆಗಮಿಸಿ ಕಾಲೇಜುಗಳ ಮಾಹಿತಿಯನ್ನು ಪಡೆದುಕೊಂಡರು.

    ಮೊದಲ ದಿನದ ಎಕ್ಸ್‌ಪೋನಲ್ಲಿ ಸಿಇಟಿ, ಕಾಮೆಡ್-ಕೆ ಕುರಿತು ಉಪನ್ಯಾಸ ನಡೆಯಿತು. ಸಿಇಟಿ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಹೆಚ್ ಪ್ರಸನ್ನ ಮತ್ತು ಕಾಮೆಡ್-ಕೆ ಪ್ರಕ್ರಿಯೆ ಬಗ್ಗೆ ಡಾ.ಕುಮಾರ್ ಅವರು ಮಾಹಿತಿ ನೀಡಿದರು. ಡಾ.ಯುವರಾಜು ಬಿ.ಎನ್ ಸೈಬರ್ ಸೆಕ್ಯೂರಿಟಿ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..

    ವಿದ್ಯಾಪೀಠ ಕಾರ್ಯಕ್ರಮದಲ್ಲಿ ಕಾಲೇಜುಗಳ ಮಾಹಿತಿ ಜೊತೆ ಬಂಪರ್ ಗಿಫ್ಟ್ ಕೂಡಾ ವಿದ್ಯಾರ್ಥಿಗಳ ಪಾಲಾಯಿತು. ಜೀನಿ ಪ್ರಾಯೋಜಕತ್ವದಲ್ಲಿ ಪ್ರತಿ ಒಂದು ಗಂಟೆಗೆ ಒಂದು ಬೈಸಿಕಲ್ ಮತ್ತು ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಕಡೆಯಿಂದ ಎರಡು ದಿನಗಳಲ್ಲಿ 3 ಲ್ಯಾಪ್‌ಟಾಪ್ ಬಂಪರ್ ಗಿಫ್ಟ್ ಕೊಡಲಾಗುತ್ತಿದೆ. ಇಂದೂ ಸಹ ವಿದ್ಯಾರ್ಥಿಗಳು ಮಾಹಿತಿ ಪಡೆಯುವ ಜೊತೆಗೆ ಬಂಪರ್‌ ಬಹುಮಾನ ಗೆಲ್ಲುವ ಸದವಕಾಶವನ್ನು ಶೈಕ್ಷಣಿಕ ಮೇಳ ಕಲ್ಪಿಸಿಕೊಟ್ಟಿದೆ.

    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.  ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ: ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

    ಪಾನೀಯ ಪ್ರಾಯೋಜಕರು
    ಸ್ಪ್ರಿಂಗ್ಸ್‌

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

  • ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ನಾಳೆ ಚಾಲನೆ – ವಿದ್ಯಾರ್ಥಿಗಳೇ ಸೆಮಿನಾರ್‌ನಲ್ಲಿ ಭಾಗವಹಿಸಿ ಅನುಮಾನ ಬಗೆಹರಿಸಿಕೊಳ್ಳಿ

    ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ನಾಳೆ ಚಾಲನೆ – ವಿದ್ಯಾರ್ಥಿಗಳೇ ಸೆಮಿನಾರ್‌ನಲ್ಲಿ ಭಾಗವಹಿಸಿ ಅನುಮಾನ ಬಗೆಹರಿಸಿಕೊಳ್ಳಿ

    ಬೆಂಗಳೂರು: ಶನಿವಾರ, ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಬ್ಲಿಕ್‌ ಟಿವಿ (PUBLiC TV) ವಿದ್ಯಾಪೀಠ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸೆಮಿನಾರ್‌ಗಳು (Seminar) ನಡೆಯಲಿದ್ದು ವಿದ್ಯಾರ್ಥಿಗಳು (Students) ಮತ್ತು ಪೋಷಕರು (Parennts) ಭಾಗವಹಿಸಿ ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಳ್ಳಬಹುದು.

    ಯಾರು ಭಾಗವಹಿಸುತ್ತಾರೆ?
    ಸಿಇಟಿ (CET) ಕುರಿತು ಸಮಗ್ರ ಮಾಹಿತಿ ಹಾಗೂ ಉಪನ್ಯಾಸ – ಹೆಚ್‌ ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

    ಕಾಮೆಡ್‌ ಕೆ (Comed K) ಕುರಿತು ಸಮಗ್ರ ಮಾಹಿತಿ ಹಾಗೂ ಉಪನ್ಯಾಸ: ಡಾ.ಎಸ್‌.ಕುಮಾರ್‌, ಕಾಮೆಡ್‌ ಕೆ ಕಾರ್ಯನಿರ್ವಹಕ ಕಾರ್ಯದರ್ಶಿ

    ಸ್ಮಾರ್ಟ್‌ ಸ್ಟಡೀಸ್‌, ಇನ್‌ಫಾರ್ಮ್ಡ್‌ ಪೇರೆಂಟ್ಸ್‌, ಸೇಫ್‌ ಸಿಸ್ಟಂ ಸೈಬರ್‌ ಸೆಕ್ಯೂರಿಟಿ ಅವಾರ್ನೆಸ್‌ ಇನ್‌ ಎಜುಕೇಶನ್‌ – ಡಾ. ಯುವರಾಜು ಬಿಎನ್‌. ಪ್ರಾಂಶುಪಾಲರು, ಎಎಂಸಿ ಎಂಜಿನಿಯರಿಂಗ್‌ ಕಾಲೇಜು.

    ಲ್ಯಾಪ್‌ಟಾಪ್‌ ಗೆಲ್ಲಿ
    ಮೊದಲ ದಿನ ಬೆಳಗ್ಗೆ 9 ರಿಂದ 10:30 ರವರೆಗೆ ನೋಂದಣಿ ಮಾಡಿಸಿಕೊಂಡ ಒಬ್ಬ ವಿದ್ಯಾರ್ಥಿಗೆ ಲಕ್ಕಿ ಡಿಪ್ ಮೂಲಕ ಸಮಾರಂಭದ ನಂತರ ಸ್ಪಾಟ್‍ನಲ್ಲೇ ಲ್ಯಾಪ್ ಟಾಪ್ ಗೆಲ್ಲುವ ಅವಕಾಶವಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇರಲಿದೆ. ಈ ಶೈಕ್ಷಣಿಕ ಮೇಳದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಸೆಟ್, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ.

    ಜೊತೆಗೆ 2 ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ 1 ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬೈಸಿಕಲ್ ಗಿಫ್ಟ್ ಸಿಗಲಿದೆ. ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ನೋಂದಣಿ ಮಾಡಿದರೆ ಸಪ್ರೈಸ್ ಗಿಫ್ಟ್ ಸಹ ಸಿಗಲಿದೆ.

  • PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್‌ನಲ್ಲೇ ಸಿಗಲಿದೆ ಸರ್ಪ್ರೈಸ್‌ ಗಿಫ್ಟ್‌ – ತಪ್ಪದೇ ಬನ್ನಿ…

    PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್‌ನಲ್ಲೇ ಸಿಗಲಿದೆ ಸರ್ಪ್ರೈಸ್‌ ಗಿಫ್ಟ್‌ – ತಪ್ಪದೇ ಬನ್ನಿ…

    ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಸಂಪತ್ತು, ಆದ್ರೆ ಯಾರಿಂದಲೂ ಕದಿಯಲಾಗದ ಸಂಪತ್ತು ವಿದ್ಯೆ. ಅದಕ್ಕಾಗಿಯೇ ʻಶಿಕ್ಷಣ ಜ್ಞಾನದ ಲಕ್ಷಣʼ ಅಂತ ಹೇಳ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ರೆ ಭವಿಷ್ಯದಲ್ಲಿ ಕುಟುಂಬಕ್ಕೆ ಒಳ್ಳೆದಾಗುತ್ತೆ ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹಿಂದೆಂದಿಗಿಂತಲೂ ಒತ್ತು ಕೊಡ್ತಿದ್ದಾರೆ. ಹಣ ತುಸು ಜಾಸ್ತಿ ಖರ್ಚಾದ್ರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕರೆ ಸಾಕೆಂದು ಬಯಸುತ್ತಾರೆ. ಅದಕ್ಕಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ಒಳ್ಳೆಯ ಸಂಸ್ಥೆಗಳಿಗಾಗಿ ಹುಡುಕಾಡುತ್ತಾರೆ. ಆದ್ರೆ ಪೋಷಕರು ಇನ್ಮುಂದೆ ಹುಡುಕಾಡಬೇಕಿಲ್ಲ. ಈ ಕಷ್ಟವನ್ನು ನಿವಾರಿಸಲು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿಮ್ಮ ʻಪಬ್ಲಿಕ್‌ ಟಿವಿʼ ವಿದ್ಯಾಪೀಠ (Public TV Vidhyapeeta) ಶೈಕ್ಷಣಿಕ ಮೇಳವನ್ನು (Education Expo) ಆಯೋಜಿಸಿದೆ.

    public tv vidhyapeeta gift

    ಬೆಂಗಳೂರಿನ (Bengaluru) ಅರಮನೆ ಮೈದಾನದ ಗೇಟ್‌ ನಂ.4ರಲ್ಲಿ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗಿದೆ. ವಿದ್ಯಾಪೀಠ ಅಂದ್ರೇ ಶೈಕ್ಷಣಿಕ ಮೇಳವೊಂದೇ ಅಲ್ಲ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೊತೆಗೆ ಬುದ್ಧಿಶಕ್ತಿ ಹೆಚ್ಚಿಸುವ ರಸಪ್ರಶ್ನೆ ಕಾರ್ಯಕ್ರಮ, ಗೇಮ್ಸ್‌, ಸ್ಲೋ ಸೈಕಲ್‌ ರೇಸ್‌, ಪಿಕ್‌ & ಸ್ಪೀಚ್‌ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.

    ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಬೈಸಿಕಲ್‌ ಸೇರಿದಂತೆ ಬಂಪರ್‌ ಗಿಫ್ಟ್‌ಗಳು ಇಲ್ಲಿ ಸಿಗಲಿದೆ. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಗಿಫ್ಟ್‌ ಸಹ ಸಿಗುತ್ತೆ. ಅಷ್ಟೇ ಅಲ್ಲ.. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೆ ಅವಕಾಶವಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ (ಜೆರಾಕ್ಸ್‌ ಪ್ರತಿ) ತೋರಿಸಿದ್ರೆ ಅವರಿಗೂ ವಿಶೇಷ ಉಡುಗೊರೆ ಸಿಗಲಿದೆ. ಇಂತಹ ಅವಕಾಶವನ್ನ ನೀವು ಮಿಸ್‌ ಮಾಡಿಕೊಳ್ಳಲೇಬೇಡಿ…

    ಉಚಿತ ಕಾರ್ಯಕ್ರಮ:
    120 ಕಾಲೇಜುಗಳು, ಸೆಮಿನಾರ್‌ ನಡೆಯುವ ಈ ಕಾರ್ಯಕ್ರಮದ ಪ್ರವೇಶಕ್ಕೆ ಯಾವುದೇ ಶುಲ್ಕ ಇಲ್ಲ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್‌ಪೋ ನಡೆಯಲಿದೆ. ವಿದ್ಯಾರ್ಥಿಗಳು ದಿನಪೂರ್ತಿ ಇದ್ದು ಕಾರ್ಯಕ್ರಮವನ್ನು ವೀಕ್ಷಿಸಬಹುದು.

    Vidhyapeeta Karnatakas biggest education expo hosted by Public TV to be held on April 27 28 1

    ವಿದ್ಯಾಪೀಠದಿಂದ ಏನು ಲಾಭ?
    ಡಿಗ್ರಿ ಸೇರುವ ಮುನ್ನ ಕಾಲೇಜುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾಲೇಜಿಗೆ ತೆರಳಿ ಅಲ್ಲಿ ವಿಚಾರಿಸಬೇಕಾದರೆ ಬಹಳಷ್ಟು ಸಮಯ ಬೇಕಾಗುತ್ತದೆ ಮತ್ತು ಇದು ತ್ರಾಸದಾಯಕ ಕೆಲಸ. ಆದರೆ ನೀವು ಪಬ್ಲಿಕ್‌ ಟಿವಿಯ (PUBLiC TV) ವಿದ್ಯಾಪೀಠಕ್ಕೆ (Vidhyapeeta) ಆಗಮಿಸಿದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುತ್ತದೆ. 120ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿವೆ.

    ಪಾರ್ಕಿಂಗ್‌ ಜಾಗ ಇದೆ:
    ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಆಗಿರುವ ಕಾರಣ ಪಾರ್ಕಿಂಗ್‌ಗೆ ಜಾಗ ಇದ್ಯಾ ಇಲ್ವೋ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ ಈ ಕಾರ್ಯಕ್ರಮದಲ್ಲಿ ಪಾರ್ಕಿಂಗ್‌ ಸಮಸ್ಯೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಅರಮನೆ ಮೈದಾನದಲ್ಲಿ ವಿದ್ಯಾಪೀಠವನ್ನು ಆಯೋಜಿಸಲಾಗಿದ್ದು ದ್ವಿಚಕ್ರ ವಾಹನ, ಕಾರಿನಲ್ಲಿ ಬರಬಹುದು.

    ಎಷ್ಟು ಕಾಲೇಜುಗಳು ಭಾಗಿಯಾಗುತ್ತವೆ?
    ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    Vidhyamandira Education Expo 5

    ವೀಕೆಂಡ್‌ನಲ್ಲಿ ಕಾರ್ಯಕ್ರಮ:
    ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯವಾಗಲೆಂದು ಏ.26(ಶನಿವಾರ), ಏ.27(ಭಾನುವಾರ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಈ ಎಕ್ಸ್‌ಪೋ ನಡೆಯಲಿದೆ.

    8ನೇ ವರ್ಷದ ಕಾರ್ಯಕ್ರಮ:
    ವಿದ್ಯಾಪೀಠ ಈ ವರ್ಷ ಆರಂಭಗೊಂಡ ಎಕ್ಸ್‌ಪೋ ಅಲ್ಲ. ಸತತ 7 ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿ ಲಾಭವನ್ನು ಪಡೆದಿದ್ದಾರೆ. ಲಾಭ ಪಡೆದ ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾಪೀಠಕ್ಕೆ ವಿದ್ಯಾರ್ಥಿಗಳ ಜೊತೆಗೆ ಆಗಮಿಸುವ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

    ಪಾರ್ಕಿಂಗ್‌ ವ್ಯವಸ್ಥೆಯೂ ಉಂಟು:
    ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಆಗಿರುವ ಕಾರಣ ಪಾರ್ಕಿಂಗ್‌ಗೆ ಜಾಗ ಇದ್ಯಾ ಇಲ್ವೋ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ ಈ ಕಾರ್ಯಕ್ರಮದಲ್ಲಿ ಪಾರ್ಕಿಂಗ್‌ ಸಮಸ್ಯೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಅರಮನೆ ಮೈದಾನದಲ್ಲಿ ವಿದ್ಯಾಪೀಠವನ್ನು ಆಯೋಜಿಸಲಾಗಿದ್ದು ದ್ವಿಚಕ್ರ ವಾಹನ, ಕಾರಿನಲ್ಲಿ ಬರಬಹುದು.

    ಯಾವೆಲ್ಲಾ ಕೋರ್ಸ್‌ಗಳು ಇದೆ? ಹಾಸ್ಟೆಲ್‌ ಇದ್ಯಾ? ಶುಲ್ಕ ಎಷ್ಟಾಗುತ್ತೆ? ಇತ್ಯಾದಿ ವಿಚಾರಗಳನ್ನು ಪ್ರಶ್ನಿಸಬಹುದು. ಹಲವು ಕಾಲೇಜುಗಳ ಜೊತೆ ಮಾತನಾಡಿದ ಬಳಿಕ ಅಂತಿಮವಾಗಿ ನೀವು ಒಂದು ನಿರ್ಧಾರಕ್ಕೆ ಬರಬಹುದು.

    Vidhyapeeta Karnatakas biggest education expo hosted by Public TV to be held on April 27 28 1

    ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891 

  • ಜನಿವಾರ ವಾರ್‌ – ಬೀದರ್‌ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ

    ಜನಿವಾರ ವಾರ್‌ – ಬೀದರ್‌ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ

    ಬೀದರ್‌ : ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮತ್ತು ಎಸ್‌ಡಿಎ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ.

    ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲಾಧಿಕಾರಿ ಪ್ರಾಂಶುಪಾಲ ಚಂದ್ರಶೇಖರ್ ಬಿರಾದರ್‌ ಮತ್ತು ಎಸ್‌ಡಿಎ ಸತೀಶ ಪವಾರ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಡಿಸಿಯಿಂದ ಆದೇಶ ಬಂದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನು ಕೆಲಸದಿಂದ ವಜಾ ಮಾಡಿದೆ.

    ಖಾಸಗಿ ಕಾಲೇಜು ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ‌ಇಲಾಖೆ ಸೂಚಿಸಿತ್ತು. ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜ್‌ ಇಬ್ಬರನ್ನು ತಕ್ಷಣದಿಂದಲೇ ವಜಾ ಮಾಡಿದೆ.

  • Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಇಂದಿನ ಕಲಿಕೆ, ನಾಳಿನ ದಾರಿ ದೀಪ. ಹೌದು, ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯವಾಗುವ ಸಾಲುಗಳು. ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಗೆ ಈ ವೇದಿಕೆ ಉತ್ತರ ನೀಡಲಿದೆ.

    ಏನಿದು ವಿದ್ಯಾಪೀಠ?
    ದ್ವಿತೀಯ ಪಿಯುಸಿ (Second PUC), ಪದವಿ (Degree) ಮುಗಿದ ನಂತರ ಮಕ್ಕಳನ್ನು ಎಲ್ಲಿ ಯಾವ ಕಾಲೇಜಿಗೆ ಸೇರಿಸಬೇಕು ಎಂಬ ಪ್ರಶ್ನೆ ಪೋಷಕರಲ್ಲಿ ಮೂಡುವುದು ಸಹಜ. ಯಾಕೆಂದರೆ ಕರ್ನಾಟಕದಲ್ಲಿ ಸಾಕಷ್ಟು ಕಾಲೇಜುಗಳಿವೆ.‌ ಈ ಕಾಲೇಜುಗಳಲ್ಲಿ ನಮಗೆ ಬೇಕಾದ ಕೋರ್ಸ್‌ ಸಿಗುತ್ತಾ ಇಲ್ವೋ ಅನುಮಾನ ಇರುತ್ತದೆ. ಈ ಕಾರಣಕ್ಕೆ ರಾಜ್ಯದ ಪ್ರತಿಷ್ಠಿತ ಕಾಲೇಜುಗಳನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯಕ್ರಮವೇ ವಿದ್ಯಾಪೀಠ.

    ವಿದ್ಯಾಪೀಠದಿಂದ ಏನು ಲಾಭ?
    ಡಿಗ್ರಿ ಸೇರುವ ಮುನ್ನ ಕಾಲೇಜುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾಲೇಜಿಗೆ ತೆರಳಿ ಅಲ್ಲಿ ವಿಚಾರಿಸಬೇಕಾದರೆ ಬಹಳಷ್ಟು ಸಮಯ ಬೇಕಾಗುತ್ತದೆ ಮತ್ತು ಇದು ತ್ರಾಸದಾಯಕ ಕೆಲಸ. ಆದರೆ ನೀವು ಪಬ್ಲಿಕ್‌ ಟಿವಿಯ (PUBLiC TV) ವಿದ್ಯಾಪೀಠಕ್ಕೆ (Vidhyapeeta) ಆಗಮಿಸಿದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುತ್ತದೆ. 120ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸುವ ಕಾರಣ ಸ್ಥಳದಲ್ಲೇ ಯಾವೆಲ್ಲಾ ಕೋರ್ಸ್‌ಗಳು ಇದೆ? ಹಾಸ್ಟೆಲ್‌ ಇದ್ಯಾ? ಶುಲ್ಕ ಎಷ್ಟಾಗುತ್ತೆ? ಇತ್ಯಾದಿ ವಿಚಾರಗಳನ್ನು ಪ್ರಶ್ನಿಸಬಹುದು. ಹಲವು ಕಾಲೇಜುಗಳ ಜೊತೆ ಮಾತನಾಡಿದ ಬಳಿಕ ಅಂತಿಮವಾಗಿ ನೀವು ಒಂದು ನಿರ್ಧಾರಕ್ಕೆ ಬರಬಹುದು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ಎಷ್ಟು ಕಾಲೇಜುಗಳು ಭಾಗಿಯಾಗುತ್ತವೆ?
    ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ವೀಕೆಂಡ್‌ನಲ್ಲಿ ಕಾರ್ಯಕ್ರಮ:
    ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯವಾಗಲೆಂದು ಏ.26(ಶನಿವಾರ), ಏ.27(ಭಾನುವಾರ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಈ ಎಕ್ಸ್‌ಪೋ ನಡೆಯಲಿದೆ.

    8ನೇ ವರ್ಷದ ಕಾರ್ಯಕ್ರಮ:
    ವಿದ್ಯಾಪೀಠ ಈ ವರ್ಷ ಆರಂಭಗೊಂಡ ಎಕ್ಸ್‌ಪೋ ಅಲ್ಲ. ಸತತ 7 ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿ ಲಾಭವನ್ನು ಪಡೆದಿದ್ದಾರೆ. ಲಾಭ ಪಡೆದ ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾಪೀಠಕ್ಕೆ ವಿದ್ಯಾರ್ಥಿಗಳ ಜೊತೆಗೆ ಆಗಮಿಸುವ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

    ಸ್ಟಾಲ್‌ ಅಲ್ಲದೇ ಬೇರೆ ಏನಿದೆ?
    ಕಾಲೇಜುಗಳ ಸ್ಟಾಲ್‌ಗಳ ಜೊತೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗುವ ವಿಷಯಗಳ ಬಗ್ಗೆ ಸೆಮಿನರ್‌ ಆಯೋಜಿಸಲಾಗಿದೆ. ವಿಷಯ ತಜ್ಞರ ಜೊತೆ ವಿದ್ಯಾರ್ಥಿಗಳು, ಪೋಷಕರು ತಮ್ಮಲ್ಲಿರುವ ಗೊಂದಲವನ್ನು ಪರಿಹರಿಸಿಕೊಳ್ಳಬಹುದು. ಗೇಮ್ಸ್‌, ಸ್ಲೋ ಸೈಕಲ್‌ ರೇಸ್‌, ಪಿಕ್‌ & ಸ್ಪೀಚ್‌ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆ ಪ್ರದರ್ಶನಕ್ಕೆ ಶೈಕ್ಷಣಿಕ ಮೇಳ ವೇದಿಕೆ ಕಲ್ಪಿಸಿದೆ.

    ಲ್ಯಾಪ್‌ಟಾಪ್‌, ಬೈಸಿಕಲ್‌ ಉಡುಗೊರೆ:
    ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಲ್ಯಾಪ್‌ಟಾಪ್ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಉಡುಗೊರೆಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಬಂಪರ್‌ ಬಹುಮಾನಗಳಿವೆ. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೂ ಅವಕಾಶ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.

    ಉಚಿತ ಕಾರ್ಯಕ್ರಮ:
    120 ಕಾಲೇಜುಗಳು, ಸೆಮಿನಾರ್‌ ನಡೆಯುವ ಈ ಕಾರ್ಯಕ್ರಮದ ಪ್ರವೇಶಕ್ಕೆ ಯಾವುದೇ ಶುಲ್ಕ ಇಲ್ಲ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್‌ಪೋ ನಡೆಯಲಿದೆ. ವಿದ್ಯಾರ್ಥಿಗಳು ದಿನಪೂರ್ತಿ ಇದ್ದು ಕಾರ್ಯಕ್ರಮವನ್ನು ವೀಕ್ಷಿಸಬಹುದು.

    ಪಾರ್ಕಿಂಗ್‌ ಜಾಗ ಇದೆ:
    ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಆಗಿರುವ ಕಾರಣ ಪಾರ್ಕಿಂಗ್‌ಗೆ ಜಾಗ ಇದ್ಯಾ ಇಲ್ವೋ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ ಈ ಕಾರ್ಯಕ್ರಮದಲ್ಲಿ ಪಾರ್ಕಿಂಗ್‌ ಸಮಸ್ಯೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಅರಮನೆ ಮೈದಾನದಲ್ಲಿ ವಿದ್ಯಾಪೀಠವನ್ನು ಆಯೋಜಿಸಲಾಗಿದ್ದು ದ್ವಿಚಕ್ರ ವಾಹನ, ಕಾರಿನಲ್ಲಿ ಬರಬಹುದು.

    ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

  • ಏ. 26, 27ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

    ಏ. 26, 27ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

    ಗಿನ ಸ್ಪರ್ಧಾ ಜಗತ್ತಿನಲ್ಲಿ ಶೈಕ್ಷಣಿಕ ವಿಷಯಗಳ ವಿಸ್ತಾರ ಹೆಚ್ಚುತ್ತಲೇ ಇದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಶಯವಾಗಿರುತ್ತದೆ. ಆದರೆ ನಿರ್ಧಾರಗಳು ಸ್ಪಷ್ಟವಾಗುತ್ತಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮುಂದಿನ ಆಯ್ಕೆಯ ಸವಾಲುಗಳು ಹೆಚ್ಚಾಗಿವೆ. ಈ ಗೊಂದಲ ನಿವಾರಿಸಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿಮ್ಮ ಪಬ್ಲಿಕ್‌ ಟಿವಿ (PUBLiC TV) ವಿದ್ಯಾಪೀಠ (Vidhyapeeta) ಶೈಕ್ಷಣಿಕ ಮೇಳವನ್ನು ಆಯೋಜಿಸಿದೆ.

    ದ್ವಿತೀಯ ಪಿಯುಸಿ, ಪದವಿ ಫಲಿತಾಂಶ ಬಂದ ಮೇಲೆ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಉತ್ತಮ ಕಾಲೇಜು ಆಯ್ಕೆ ಹೇಗೆ? ಯಾವ ಕೋರ್ಸ್‌ಗೆ ಸೇರಿಸಿದರೆ ಸೂಕ್ತ? ಪ್ರವೇಶ ಶುಲ್ಕ, ಕೋರ್ಸ್‌ಗಳ ಆಯ್ಕೆ, ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೇಗೆ ಎಂಬ ಗೊಂದಲ ಪೋಷಕರಲ್ಲಿ ಇರುವುದು ಸಹಜ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಒಂದೇ ಸೂರಿನಡಿ ಸೂಕ್ತ ವೇದಿಕೆ ಕಲ್ಪಿಸಿ ಗೊಂದಲ ನಿವಾರಿಸಲು ಪಬ್ಲಿಕ್‌ ಟಿವಿಯ 8ನೇ ಆವೃತ್ತಿಯ ವಿದ್ಯಾಪೀಠ ಶೈಕ್ಷಣಿಕ ಮೇಳ ಆಯೋಜಿಸಿದೆ. ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳವು ಇದೇ ಏಪ್ರಿಲ್‌ 26 (ಶನಿವಾರ), ಏಪ್ರಿಲ್‌ 27 (ಭಾನುವಾರ) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (ಗೇಟ್‌ ನಂಬರ್‌ 4) ನಡೆಯಲಿದೆ.

    ‘ಇಂದಿನ ಕಲಿಕೆ, ನಾಳಿನ ದಾರಿ ದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ AD6 Advertising ಸಹಯೋಗದಲ್ಲಿ ಆಯೋಜನೆಗೊಂಡಿರುವ ವಿದ್ಯಾಪೀಠ ಶೈಕ್ಷಣಿಕ ಮೇಳ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ

    120 ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿ: ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ (Education Expo) ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

    ಲ್ಯಾಪ್‌ಟಾಪ್‌, ಬೈಸಿಕಲ್‌ ಉಡುಗೊರೆ
    ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಲ್ಯಾಪ್‌ಟಾಪ್ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಉಡುಗೊರೆಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಬಂಪರ್‌ ಬಹುಮಾನಗಳಿವೆ. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೂ ಅವಕಾಶ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ. ಇದನ್ನೂ ಓದಿ: ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    ಗೇಮ್ಸ್‌, ಸ್ಲೋ ಸೈಕಲ್‌ ರೇಸ್‌, ಪಿಕ್‌ & ಸ್ಪೀಚ್‌ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆ ಪ್ರದರ್ಶನಕ್ಕೆ ಶೈಕ್ಷಣಿಕ ಮೇಳ ವೇದಿಕೆ ಕಲ್ಪಿಸಿದೆ.

    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ದಿನಾಂಕ: ಏಪ್ರಿಲ್‌ 26 ಮತ್ತು 27
    ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

  • ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌,  ದಕ್ಷಿಣ ಕನ್ನಡ ಸೆಕೆಂಡ್‌

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌

    ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Second PUC) ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 73.45%  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 93.90% ಸಾಧನೆ ಮಾಡುವ ಮೂಲಕ  ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.  ಎರಡನೇ ಸ್ಥಾನ ದಕ್ಷಿಣ ಕನ್ನಡ (93.57%),  ಮೂರನೇ ಸ್ಥಾನವನ್ನು ಬೆಂಗಳೂರು ದಕ್ಷಿಣ(85.36%) ಪಡೆದುಕೊಂಡಿದೆ. ಕೊನೆ ಸ್ಥಾನ ಯಾದಗಿರಿ (73.45%)  ಪಡೆದುಕೊಂಡಿದೆ.

    ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅಮೂಲ್ಯ ಕಾಮತ್‌ 599 ಅಂಕ ಪಡೆದು ಮೊದಲ ಸ್ಥಾನ ಪಡೆದರೆ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಸಂಜನಾ ಬಾಯಿ 597 ಮೊದಲ ಸ್ಥಾನ ಪಡೆದಿದ್ದಾರೆ.  ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ದೀಪಾಶ್ರೀ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

    ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ ಪಾಸ್‌?
    ಉನ್ನತ ಶ್ರೇಣಿ- 1,00,571
    ಪ್ರಥಮ ದರ್ಜೆ- 2,78,054
    ದ್ವೀತಿಯ ದರ್ಜೆ-70969
    ತೃತೀಯ ದರ್ಜೆ-18845

    ವಿಭಾಗವರು ಸಾಧನೆ
    ಕಲಾ
    ಹಾಜರಾದವರು :1,53,043
    ಉತ್ತೀರ್ಣ- 81,533 (53.79%)

    ವಾಣಿಜ್ಯ
    ಹಾಜರಾದವರು -2,04,329
    ಉತ್ತೀರ್ಣ -1,55,425 (76.07%)

    ವಿಜ್ಞಾನ
    ಹಾಜರಾದವರು – 2,80,433
    ಉತ್ತೀರ್ಣ – 2,31,461 (82.54%)

    ಮಾಧ್ಯಮವಾರು ಫಲಿತಾಂಶ
    ಕನ್ನಡ
    ಹಾಜರಾದವರು -2,08,794
    ತೇರ್ಗಡೆಯಾದವರು – 1,17,703 (56.37%)

    ಇಂಗ್ಲೀಷ್‌
    ಹಾಜರಾದವರು -4,29,011
    ತೇರ್ಗಡೆಯಾದವರು -3,50,736(81.75%)

    ಇಂದು ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಇಂದು ಫಲಿತಾಂಶ ಘೋಷಣೆ ಮಾಡಲಾಯಿತು.

    ಪಿಯು ಫಲಿತಾಂಶ ಲಭ್ಯವಾಗುವ ವೆಬ್‌ಸೈಟ್‌ : www.karresultsnic.in

  • ಇದು ಒಂದಲ್ಲ ಎರಡಲ್ಲ 6 ಲಕ್ಷ ವಿದ್ಯಾರ್ಥಿಗಳ ಸಮಸ್ಯೆ!

    ಇದು ಒಂದಲ್ಲ ಎರಡಲ್ಲ 6 ಲಕ್ಷ ವಿದ್ಯಾರ್ಥಿಗಳ ಸಮಸ್ಯೆ!

    ಬೆಂಗಳೂರು: ಇದು ಒಂದಲ್ಲ ಎರಡಲ್ಲ 6 ಲಕ್ಷ ವಿದ್ಯಾರ್ಥಿಗಳ (Students) ಸಮಸ್ಯೆ, ರಾಜ್ಯದ ಮೂಲೆ ಮೂಲೆಯ ಪೋಷಕರಿಗೂ ಗೊಂದಲದ ಪರಿಸ್ಥಿತಿ. ಹೌದು 2022ರ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (National Education Policy 2022)  6 ಲಕ್ಷ ಮಕ್ಕಳ ದಾಖಲಾತಿಗೆ ಗೊಂದಲ ಉಂಟಾಗಿದೆ.

    2022ರ ನವೆಂಬರ್ ತಿಂಗಳಲ್ಲಿ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ 2025/26ನೇ ಸಾಲಿಗೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 6 ವರ್ಷ ತುಂಬಿರಬೇಕು. ಜೂ.1ನೇ ತಾರೀಖಿಗೆ ಯಾವ ಮಗುವಿಗೆ 6 ವರ್ಷ ತುಂಬಿರುತ್ತೋ ಅಂತಹ ಮಕ್ಕಳಿಗೆ ಮಾತ್ರ ಒಂದನೇ ತರಗತಿ ದಾಖಲಾತಿ ಕೊಡಬೇಕು ಅನ್ನೋ ನಿಯಮ ಜಾರಿಗೆ ತಂದಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ಈಗ ಹೊಸದಾಗಿ ದಾಖಲಾಗೋ ಮಕ್ಕಳಿಗೆ ಇದರಿಂದ ಸಮಸ್ಯೆ ಆಗುವುದಿಲ್ಲ. ಅದ್ರೇ ಈಗಾಗಲೇ ಪ್ರೀಕೆಜಿ, ಎಲ್‍ಕೆಜಿಗೆ ಸೇರಿ 3 ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರೋ ಮಕ್ಕಳಿಗೆ ಸಮಸ್ಯೆ ಆಗ್ತಿದೆ. ಆಗಿನ ನಿಯಮದಂತೆ ಮಕ್ಕಳನ್ನ ಪ್ರೀ ಕೆಜಿಗೆ ದಾಖಲು ಮಾಡಿದ್ವಿ, ಈಗ ನಮ್ಮ ಮಕ್ಕಳು 6 ವರ್ಷಕ್ಕಿಂತ ಕಡಿಮೆ ಇದ್ದಾರೆ, ಈಗ ಮತ್ತೇ ಅದೇ ತರಗತಿಗೆ ಸೇರಿಸಿದ್ರೇ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ರಾಜ್ಯದಲ್ಲಿ ಈ ರೀತಿ 6 ಲಕ್ಷ ಮಕ್ಕಳಿದ್ದಾರೆ ಅಂತಿದ್ದಾರೆ ಪೋಷಕರು.

    ಒಂದು ವರ್ಷ ಮತ್ತೆ ಅದೇ ತರಗತಿಯಲ್ಲಿ ಓದಿಸಬೇಕಾ? ಇಲ್ಲವೇ ಮಕ್ಕಳನ್ನ ಮನೆಯಲ್ಲಿಟ್ಟು ಕೊಳ್ಳಬೇಕಾ? ಯಾವ ನಿರ್ಧಾರಕ್ಕೂ ಬರದಂತಹ ವಾತಾವರಣದಲ್ಲಿ ಪೋಷಕರಿದ್ದಾರೆ. ಇತರೆ ರಾಜ್ಯಗಳಲ್ಲಿ ನೀಡಿರುವಂತೆ ಇಲ್ಲೂ ಸಡಿಲಿಕೆ ನೀಡಿ ಅಂತಾ ಸರ್ಕಾರದ ಮುಂದೆ ಮನವಿ ಮಾಡಿ ಮಾಡಿ ಕಾಯ್ತಿದ್ದಾರೆ.

    ಒಂದನೇ ತರಗತಿಗೆ ಮಕ್ಕಳಿಗೆ ನಿಗದಿ ಮಾಡಿರುವ ವಯೋಮಿತಿ ವಿಚಾರದಲ್ಲಿಯೂ ಇದೇ ಗೊಂದಲ ಶುರು ಆಗಿದೆ. ಒಂದನೇ ತರಗತಿಗೆ ಮಗುವಿಗೆ ಅಡ್ಮಿಷನ್ ಕೊಡ್ತಿಲ್ಲ ಅನ್ನೋದು ರಾಜ್ಯದ ಲಕ್ಷಾಂತರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ – ಶೇ.2 ರಷ್ಟು ಡಿಎ ಏರಿಕೆ

  • ಅಮೆರಿಕದ ಶಿಕ್ಷಣ ಇಲಾಖೆಯೇ ಬಂದ್‌ – ಮಕ್ಕಳ ಮುಂದೆಯೇ ಆದೇಶಕ್ಕೆ ಟ್ರಂಪ್‌ ಸಹಿ

    ಅಮೆರಿಕದ ಶಿಕ್ಷಣ ಇಲಾಖೆಯೇ ಬಂದ್‌ – ಮಕ್ಕಳ ಮುಂದೆಯೇ ಆದೇಶಕ್ಕೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಸರ್ಕಾರದ ಶಿಕ್ಷಣ ಇಲಾಖೆಯನ್ನು (Department of Education) ಬಂದ್‌ ಮಾಡಿದ್ದಾರೆ.

    ಅಮೆರಿಕ ಚುನಾವಣೆಯ (USA Election) ಸಮಯದಲ್ಲಿ ಟ್ರಂಪ್‌ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಈಗ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಟ್ರಂಪ್‌ ಅವರು ಪುಟಾಣಿ ಮಕ್ಕಳನ್ನು ಕುಳ್ಳಿರಿಸಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಶಿಕ್ಷಣ ಇಲಾಖೆ ಬಂದ್‌ ಮಾಡಿ ಶಾಲಾ ನೀತಿಯನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ನೀಡುತ್ತೇನೆ ಎಂದು ಟ್ರಂಪ್‌ ಈ ಹಿಂದೆ ಹೇಳಿದ್ದರು. ಈ ಭರವಸೆಯಂತೆ ಶಿಕ್ಷಣ ಇಲಾಖೆಯ ಟ್ರಂಪ್‌ ಮುಚ್ಚಿದ್ದರಿಂದ ಇನ್ನು ಮುಂದೆ ಶಿಕ್ಷಣದಲ್ಲಿ ಅಮೆರಿಕ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಸಂಪೂರ್ಣವಾಗಿ ರಾಜ್ಯಗಳಿಗೆ ಅಧಿಕಾರ ಇರಲಿದೆ.

    ಶಿಕ್ಷಣ ರಾಜ್ಯಗಳಿಗೆ ಸೇರಬೇಕಿತ್ತು. ನಾವು ಮರಳಿ ಶಿಕ್ಷಣವನ್ನು ರಾಜ್ಯಗಳಿಗೆ ನೀಡಿದ್ದೇವೆ ಎಂದು ಪ್ರಕಟಿಸಿದರು. ಕಳೆದ ವಾರ ಇಲಾಖೆಯು ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಟ್ರಂಪ್‌ ಘೋಷಣೆ ಮಾಡಿದ್ದರು.

    ಶಿಕ್ಷಣ ಇಲಾಖೆಯು ಅಮೇರಿಕನ್ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ವಿಫಲವಾಗಿದೆ. 1979 ರಲ್ಲಿ ಇಲಾಖೆಯ ರಚನೆಗೆ ರಿಪಬ್ಲಿಕನ್ನರಿಂದ ಮಾತ್ರವಲ್ಲದೇ ಆಗಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಸ್ವಂತ ಸಂಪುಟದ ಸದಸ್ಯರಿಂದ ಕೂಡ ಪ್ರತಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

    ಇಲಾಖೆಯನ್ನು ಮುಚ್ಚಿದ್ದು ಯಾಕೆ?
    ಟ್ರಂಪ್‌ ಆಗಾಗ ಶಿಕ್ಷಣ ಇಲಾಖೆಯ ವಿರುದ್ಧ ಕಿಡಿಕಾರುತ್ತಿದ್ದರು. ಎಡಪಂಥಿಯವಾದಿಗಳು ತಮಗೆ ಬೇಕಾದಂತೆ ಶಿಕ್ಷಣವನ್ನು ರೂಪಿಸಿದ್ದಾರೆ. ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗುತ್ತಿದೆ. ಶಿಕ್ಷಣಕ್ಕಿಂತ ಮುಖ್ಯವಾಗಿ ತಮ್ಮ ಸಿದ್ಧಾಂತವನ್ನು ಪ್ರಚಾರ ಪಡಿಸಲು ಈ ಸಂಸ್ಥೆಯನ್ನು ಬಳಕೆ ಮಾಡಲಾಗುತ್ತಿದೆ. ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳನ್ನು ಬೆಂಬಲಿಸುವ ನೀತಿಗಳನ್ನು ಸೇರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಧರ್ಮಬೋಧನೆ ಮಾಡುವ ದೊಡ್ಡ ಮಾರ್ಕ್ಸ್‌ವಾದಿ ಪಿತೂರಿಯ ಭಾಗವಾಗಿದೆ. ವಿದೇಶಗಳಲ್ಲೂ ಎಡ ಚಿಂತನೆಯ ಅಧ್ಯಯನಕ್ಕೆ ಅಮೆರಿಕ ಜನರ ತೆರಿಗೆ ದುಡ್ಡನ್ನು ಅನುದಾನವಾಗಿ ನೀಡಲಾಗುತ್ತದೆ ಎಂದು ದೂರಿದ್ದರು.

    ಶ್ವೇತಭವನದ (White House) ದಾಖಲೆಯ ಪ್ರಕಾರ 1979 ರಿಂದ ಶಿಕ್ಷಣ ಇಲಾಖೆ 3 ಲಕ್ಷ ಕೋಟಿ ಡಾಲರ್‌ ಹಣವನ್ನು ಖರ್ಚು ಮಾಡಿದೆ. ಪ್ರತಿ ವಿದ್ಯಾರ್ಥಿಯ ಮೇಲೆ 245% ಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಈ ಖರ್ಚುಗಳನ್ನು ತೋರಿಸಲು ಯಾವುದೇ ದಾಖಲೆಗಳಿಲ್ಲ.

    13 ವರ್ಷ ವಯಸ್ಸಿನ ಮಕ್ಕಳ ಗಣಿತ ಮತ್ತು ಕಲಿಕಾ ಗುಣಮಟ್ಟ ದಶಕಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿವೆ ಎಂದು ಶ್ವೇತಭವನದ ದತ್ತಾಂಶವು ತೋರಿಸುತ್ತದೆ. ನಾಲ್ಕನೇ ತರಗತಿಯ ಹತ್ತರಲ್ಲಿ ಆರು ಮತ್ತು ಎಂಟನೇ ತರಗತಿಯ ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ಹಿಂದಿದ್ದಾರೆ. ನಾಲ್ಕನೇ ಮತ್ತು ಎಂಟನೇ ತರಗತಿಯ ಹತ್ತರಲ್ಲಿ ಏಳು ವಿದ್ಯಾರ್ಥಿಗಳು ಓದುವಲ್ಲಿ ಪ್ರವೀಣರಾಗಿಲ್ಲ. ನಾಲ್ಕನೇ ತರಗತಿಯ 40% ರಷ್ಟು ವಿದ್ಯಾರ್ಥಿಗಳು ಓದುವುದರಲ್ಲಿ  ಹಿಂದಿದ್ದಾರೆ ಎಂದು ತಿಳಿಸಿದೆ.