Tag: education fest

  • ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

    ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

    ಬೆಂಗಳೂರು: ನಮ್ಮ ಕಾಲದಲ್ಲಿ ಈ ರೀತಿಯ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಎಲ್ಲವೂ ಬದಲಾಗಿದೆ. ಹೀಗಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿ ಎಂದು ಪೋಷಕರಿಗೆ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌. ಆರ್‌ ರಂಗನಾಥ್‌ (H R Ranganath) ಹೇಳಿದರು.

    ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ  (PUBLiC TV Vidhyapeeta) ಚಾಲನೆ ಕೊಟ್ಟು ಬಳಿಕ ಮಾತನಾಡಿದ ಅವರು, ನಿನ್ನೆಯಷ್ಟೇ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಮತ ಹಾಕಲು ಬನ್ನಿ ಎಂದು ಎಷ್ಟು ಗಂಭೀರವಾಗಿ ಕರೆಯುತ್ತಿವೆಯೋ ಅದಕ್ಕಿಂತ ಹೆಚ್ಚು ಗಂಭೀರವಾಗಿ ಮಕ್ಕಳ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

    ಪಿಯುಸಿ, ಪದವಿ ನಂತರ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಈ ಬಾರಿ ಕೂಡ ಮಕ್ಕಳ ಪೋಷಕರು ತಮ್ಮ ಮಕ್ಕಳು ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಮಾಡಬೇಕು ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದು ಹೆಚ್‌ಆರ್‌ಆರ್‌ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

    ಈ ಬಾರಿಯ ಶೈಕ್ಷಣಿಕ ಮೇಳದಲ್ಲಿ 110 ಸಂಸ್ಥೆಗಳು ಇವೆ. ಈ 110 ಸಂಸ್ಥೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದರಲ್ಲಿ ಯಾವುದು ಬೇಕು ಎಂಬುದನ್ನು ಆರಿಸಿಕೊಳ್ಳುವುದಕ್ಕೆ ಇದೊಂದು ವೇದಿಕೆ. ನಮಗೆಲ್ಲ ಈ ಸೌಲಭ್ಯಗಳು ಇರಲಿಲ್ಲ. ನಾವು SSLC, PUC ಪಾಸ್‌ ಆದರೆ 10 ಕಾಲೇಜಿಗೆ ಅರ್ಜಿ ಹಾಕಬೇಕಿತ್ತು. ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತೆ ಅಂತಾನೂ ಗೊತ್ತಿರಲಿಲ್ಲ. ಹೀಗಾಗಿ ನಾವು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಅಲೆದಾಡಬೇಕಾಗಿತ್ತು. ಅಪ್ಲಿಕೇಷನ್‌ ತೆಗೆದುಕೊಳ್ಳೋಕೆ ಹಾಗೂ ಕೊಡುವುದಕ್ಕೆ ಮೂರು ಮೂರು ದಿನ ಓಡಾಡುತ್ತಿದ್ದೆವು. ಇಷ್ಟು ಮಾತ್ರವಲ್ಲದೇ ಅದರಲ್ಲಿ ಜಾತಿ ಪ್ರಮಾಣ ಪತ್ರ ಅಂಥದ್ದೇನಾದರೂ ಮಿಸ್ಸಿಂಗ್ ಆದ್ರೆ ಅದಕ್ಕೂ ಎರಡೆರಡು ದಿನ ಓಡಾಡುತ್ತಿದ್ವಿ.‌ ಇನ್ನು ತಹಶೀಲ್ದಾರ್‌ ಕಚೇರಿಗೆ ಹೋದ್ರಂತೂ 4 ದಿನ ಬೇಕೇ ಬೇಕು ಎಂಬುದಾಗಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು.

    ಸದ್ಯ ಇವತ್ತು ಎಲ್ಲವೂ ಬದಲಾಗಿದೆ. ಅದಕ್ಕೆ ಒಂದು ಒಳ್ಳೆಯ ಅವಕಾಶ ಇಲ್ಲಿದೆ. ದೇವರು ಒಳ್ಳೆಯ ಅವಕಾಶ ಗಳನ್ನು ನೀಡುತ್ತಿದ್ದಾನೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದವರು ನಾವಾಗಿರುತ್ತೇವೆ. ಹೀಗಾಗಿ ಒಳ್ಳೊಳ್ಳೆಯ ಸಂಸ್ಥೆಗಳಿವೆ. ನಿಮ್ಮ ಮಗುವಿಗೆ ಒಳ್ಳೆಯ ಕಾಲೇಜು ಹಾಗೂ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವಂತೆ ಹಚ್‌ಆರ್‌ ಆರ್‌ ಪೋಷಕರಿಗೆ ಕಿವಿಮಾತು ಹೇಳಿದರು.

    110ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ಕರ್ನಾಟಕದ (Karnataka) ಅತಿ ದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 110ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ ಆರ್ಕಿಟೆಕ್ಚರ್, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ವಾಣಿಜ್ಯ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು, ಸಮೂಹ ಸಂವಹನ, ಎಂಬಿಎ ಸಂಸ್ಥೆಗಳು ವಿದ್ಯಾಪೀಠದಲ್ಲಿ ಭಾಗಿಯಾಗಿವೆ.

    ಮತದಾನ ಮಾಡಿ, ಉಡುಗೊರೆ ಪಡೆಯಿರಿ: ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾವಣೆ ಮಾಡಿದ ವಿದ್ಯಾರ್ಥಿಗಳಿಗೆ ಆಕರ್ಷಕ ಉಡುಗೊರೆ ಸಿಗಲಿದೆ.

    ಚಿನ್ನದ ನಾಣ್ಯ, ಸೈಕಲ್‌ ಉಡುಗೊರೆ: ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ನಾಣ್ಯ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.

  • ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಬೆಂಗಳೂರು: ನೀವು ಈ ವರ್ಷ ಸೆಕೆಂಡ್ ಪಿಯುಸಿ (Second PUC) ಪಾಸ್ ಆಗಿದ್ದೀರಾ..? ಮುಂದೇನು ಮಾಡೋದು ಅನ್ನೋ ಗೊಂದಲದಲ್ಲಿದ್ದೀರಾ..? ನಿಮ್ಮ ಮುಂದಿನ ಕಲಿಕೆ ಹೇಗೆ..? ಯಾವ ಕಾಲೇಜಿಗೆ ಸೇರಿದರೆ ಒಳ್ಳೆಯದು ಅನ್ನೋ ಯೋಚನೆ ಮಾಡ್ತಿದ್ದರೆ ನಿಮ್ಮ ಪೋಷಕರು, ಫ್ರೆಂಡ್ಸ್ ಅಥವಾ ಆಪ್ತರ ಜೊತೆ ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ (Vidyapeeta)  ಶೈಕ್ಷಣಿಕ ಮೇಳಕ್ಕೆ ಬನ್ನಿ. ಹಾಗೆ ಬರುವಾಗ ನಿಮ್ಮ ಪಿಯುಸಿ ಅಂಕ ಪಟ್ಟಿಯನ್ನೂ ತೆಗೆದುಕೊಂಡು ಬನ್ನಿ.

    Ad6 ಸಹಯೋಗದಲ್ಲಿ ಪಬ್ಲಿಕ್ ಟಿವಿ (PUBLiC TV) ಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‘ವಿದ್ಯಾಪೀಠ’ವನ್ನು ಆಯೋಜಿಸಿದೆ. ಜೂನ್ 3 ಮತ್ತು 4ರಂದು ಬೆಂಗಳೂರು ಅರಮನೆ ಮೈದಾನ (Palace Ground) ದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ಇದು ವಿದ್ಯಾ ಪೀಠದ 6ನೇ ಆವೃತ್ತಿ ಎನ್ನುವುದೂ ವಿಶೇಷ.

    ಗಿಫ್ಟ್ ತಗೊಳ್ಳಿ ಗಿಫ್ಟ್..!: 2023ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ನಿಮ್ಮ ಅಂಕಪಟ್ಟಿ ಅಥವಾ ನಕಲು ಪ್ರತಿ (Xerox) ತೋರಿಸಿ ನೀವು ಗಿಫ್ಟ್ ಪಡೆದುಕೊಳ್ಳಬಹುದು. ಆದರೆ ನೀವು ಪಡೆದ ಅಂಕ 60% ಅಥವಾ ಅದಕ್ಕಿಂತ ಮೇಲಿರಬೇಕು.

    ಮಾನದಂಡವೇನು?: ಸೆಕೆಂಡ್ ಪಿಯುಸಿಯಲ್ಲಿ 60-80% ಪಡೆದವರು, 80-95%, 95-100% ಪಡೆದವರು ಎಂದು ಗುರುತಿಸಿ ನಿಮ್ಮ ಅಂಕಗಳ ಆಧಾರದಲ್ಲಿ On Spot ಗಿಫ್ಟ್ ನೀಡಲಾಗುವುದು. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ – ಜೂನ್‌ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಶೈಕ್ಷಣಿಕ ಮೇಳಕ್ಕೆ ಬರುವ ಪ್ರತಿಯೊಬ್ಬರೂ ನಗರದ ಅರಮನೆ ಮೈದಾನದ ಗೇಟ್ ಬಳಿ ನೋಂದಣಿ ಕೇಂದ್ರ (Registration Counter) ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಗಂಟೆಗೊಮ್ಮೆ ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುವುದು.

    ಶಿಕ್ಷಣದ ಜೊತೆ ಆಟವೂ ಇದೆ..!: ಶೈಕ್ಷಣಿಕ ಮೇಳ ನಡೆಯುವ ಅರಮನೆ ಮೈದಾನ ಗಾಯತ್ರಿ ವಿಹಾರದ ಆವರಣದಲ್ಲಿಯೇ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಿಧಾನಗತಿಯ ಸೈಕಲ್ ಪಂದ್ಯ (Slow Cycle Race), ವಿಷಯ ಆರಿಸಿಕೊಳ್ಳಿ, ಮಾತನಾಡಿ (Pick & Speak) ಮೊದಲಾದ ಆಕರ್ಷಕ ಸ್ಪರ್ಧೆಗಳು ವಿದ್ಯಾಪೀಠದಲ್ಲಿ ನಡೆಯಲಿದೆ.

    15 ಸೈಕಲ್, 4 ಲ್ಯಾಪ್‍ಟಾಪ್ ಬಹುಮಾನ!: ಸ್ಲೋ ಸೈಕಲ್ ರೇಸ್‍ನಲ್ಲಿ ಭಾಗಿಯಾಗಿ ಗೆದ್ದವರು ಸೈಕಲ್‍ಗಳನ್ನು ಬಹುಮಾನವಾಗಿ ಪಡೆಯಬಹುದು. ಪಿಕ್ & ಸ್ಪೀಕ್‍ನಲ್ಲಿ ವಿಜೇತರಾದವರಿಗೆ ಲ್ಯಾಪ್‍ಟಾಪ್‍ಗಳು ಬಹುಮಾನವಾಗಿ ಸಿಗಲಿದೆ. 2 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ 15 ಸೈಕಲ್‍ಗಳು ಹಾಗೂ 4 ಲ್ಯಾಪ್‍ಟಾಪ್‍ಗಳನ್ನು ಪ್ರಶಸ್ತಿ ರೂಪದಲ್ಲಿ ವಿಜೇತರಿಗೆ ನೀಡಲಾಗುವುದು.

    ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠಕ್ಕೆ ನೀವೆಲ್ಲರೂ ಆಗಮಿಸಿ, ಮುಂದಿನ ಶೈಕ್ಷಣಿಕ ಜೀವನದ ಹಾದಿಯ ಬಗ್ಗೆ ತಜ್ಞರಿಂದ ಅಪಾರ ಅನುಭವ ಪಡೆಯಿರಿ. ನಿಮಗಾಗಿ ಆಯೋಜಿಸುತ್ತಿರುವ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ಎಲ್ಲರ ಮುಂದಿರಿಸಿ ಎಂದು ಪಬ್ಲಿಕ್ ಟಿವಿಯು ನಿಮ್ಮನ್ನು ಈ ಶೈಕ್ಷಣಿಕ ಮೇಳಕ್ಕೆ ಆಹ್ವಾನಿಸುತ್ತಿದೆ. ಮರೆಯಬೇಡಿ, ಇದೇ ಜೂನ್ 3 ಮತ್ತು 4ರಂದು ಬೆಳಗ್ಗೆ 10.00ರಿಂದ ಸಂಜೆ 7.00 ಗಂಟೆಯವರೆಗೆ, ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಭೇಟಿಯಾಗೋಣ.

  • ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

    ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

    ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್‍ಗೆ ಇಂದು ಚಾಲನೆ ಸಿಕ್ಕಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಭವಿಷ್ಯದ ಕನಸು ಹೊತ್ತ ವಿದ್ಯಾರ್ಥಿಗಳು ವಿದ್ಯಾಪೀಠದಲ್ಲಿ ಬಂದು ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ನಲವತ್ತಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು, ವಿವಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಗೈಡ್ ಮಾಡಿದ್ರು.

    ಇದೇ ವೇಳೆ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‍ಆರ್ ರಂಗನಾಥ್, ನಮ್ಮ ಕಾಲದಲ್ಲಿ ಒಳ್ಳೆಯ ಮಾರ್ಗದಶನ ನೀಡಿರೋ ಇರಲಿಲ್ಲ. ಹಾಗಂತ ನಂಗೆ ಇಂದು ನಾನು ಕಲಿತ ವಿದ್ಯೆ, ಕೋರ್ಸ್ ಕೆಟ್ಟದಾಗಿದೆ ಅಂತಾ ಅರ್ಥವಲ್ಲ. ನನಗೆ ಒಳ್ಳೆಯದೇ ಆಗಿದೆ. ನಿಮಗೆ ಇವತ್ತು ಬೇಕಾದಷ್ಟು ಅವಕಾಶಗಳೂ ಇವೆ. ಮಾರ್ಗದರ್ಶಕರೂ ಇದ್ದಾರೆ. ಮೆಡಿಕಲ್, ಇಂಜಿನಿಯರಿಂಗ್ ಮಾತ್ರವಲ್ಲದೇ 100 ಕ್ಕೂ ಅಧಿಕ ಕೋರ್ಸ್‍ಗಳಿವೆ. ಕಂನ್ಸಿಲಿಂಗ್‍ಗಾಗಿ ಕಾಲೇಜಿನಿಂದ ಹಲವಾರು ಮಂದಿ ಬಂದಿದ್ದಾರೆ. ಅವರ ಜೊತೆ ಮತಾಡಿ ನಿಮ್ಮ ಗೊಂದಲಗಳನ್ನ ಬಗೆಹರಿಸಿಕೊಳ್ಳಿ ಅಂದ್ರು.

    ಇದೇ ವೇಳೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಮಾತನಾಡಿ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಉತ್ತಮ ನಾಗರಿಕರಾಗಿ ದೇಶ ಕಟ್ಟೋ ಕೆಲಸದಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋ ಕನಸು ಎಲ್ಲಾ ತಂದೆ ತಾಯಂದಿರದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. 21 ನೇ ಈ ಶತಮಾನದಲ್ಲಿ ವಿಶ್ವ ನಡೆಯತ್ತಿರೋದು ಪ್ರತಿಭೆಯ ಆಧಾರದ ಮೇಲೆ. ಇದರ ಜೊತೆಗೆ ಕೌಶಲ್ಯತೆ, ತಿಳುವಳಿಕೆ ಬೆಳೆಸಿಕೊಂದ್ರೆ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದ್ರು.

    ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ಈ ಮೆಗಾ ಎಜುಕೇಶನ್ ಈವೆಂಟ್ ನಡೆಯಲಿದೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದೆ.

    ಕಾರ್ಯಕ್ರಮದ ಪಟ್ಟಿ ಇಂತಿದೆ:
    * 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
    * 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
    * 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
    * ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
    * ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.

    ಕಾರ್ಯಕ್ರಮ ನಡೆಯುವ ವಿಳಾಸ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.

    ವೀದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.

  • ಶಿಕ್ಷಣದ ಸಮಗ್ರ ಮಾಹಿತಿ – ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ ಎಜುಫೆಸ್ಟ್ ಗೆ ಕ್ಷಣಗಣನೆ

    ಶಿಕ್ಷಣದ ಸಮಗ್ರ ಮಾಹಿತಿ – ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ ಎಜುಫೆಸ್ಟ್ ಗೆ ಕ್ಷಣಗಣನೆ

    ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್ ಗೆ ಇಂದು ಚಾಲನೆ ದೊರಕಲಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ.

    ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ವಿದ್ಯಾದೇಗುಲಗಳೆಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿರೋ ಈ ಮೆಗಾ ಎಜುಕೇಶನ್ ಈವೆಂಟ್‍ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪಟ್ಟಿ ಇಂತಿದೆ.

    * 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
    * 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
    * 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
    * ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
    * ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.

    ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸುವ ನುರಿತ ಶಿಕ್ಷಣ ತಜ್ಞರು:

    1. ಶ್ರೀ ಗಂಗಾಧರಯ್ಯ: ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
    ವಿಷಯ : ಸಿಇಟಿ ಬಗ್ಗೆ ಮಾಹಿತಿ
    ಸಮಯ : ಬೆಳಗ್ಗೆ 11.30 – 12.15 ಗಂಟೆ

    2. ಶ್ರೀ ಡಾ.ಎಸ್.ಕುಮಾರ್: ಕಾರ್ಯನಿರ್ವಾಹಕ ಕಾರ್ಯದರ್ಶಿ, ಕಾಮೆಡ್-ಕೆ
    ವಿಷಯ : ಕಾಮೆಡ್-ಕೆ ಬಗ್ಗೆ ಮಾಹಿತಿ
    ಸಮಯ : ಮಧ್ಯಾಹ್ನ 12.15 – 1.00 ಗಂಟೆ

    3. ಡಾ.ಎಚ್.ಎಸ್ ನಾಗರಾಜ: ಶಿಕ್ಷಣ ತಜ್ಞರು
    ವಿಷಯ : ಕೆರಿಯರ್ ಆಪರ್ಚುನಿಟಿ ಆಫ್ಟರ್ +2
    ಸಮಯ : ಮಧ್ಯಾಹ್ನ 3 – 4 ಗಂಟೆ

    4. ಡಾ.ಗುರುರಾಜ್ ಕರ್ಜಗಿ: ಅಧ್ಯಕ್ಷರು, ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್
    ವಿಷಯ : ಆಪೊರ್ಚುನಿಟಿಸ್ ಬಿಹೈಂಡ್ ಟ್ರೆಡಿಷನಲ್ ಕೆರಿಯರ್
    ಸಮಯ : ಮಧ್ಯಾಹ್ನ 4 – 5 ಗಂಟೆ

    ಕಾರ್ಯಕ್ರಮ ನಡೆಯುವ ಸ್ಥಳ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.

    ಲಕ್ಕಿ ಡಿಪ್: ವಿದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.