Tag: education department

  • ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿಗೆ ವಯೋಮಿತಿ ನಿಗದಿ – 4 ವರ್ಷ ಕಡ್ಡಾಯ

    ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿಗೆ ವಯೋಮಿತಿ ನಿಗದಿ – 4 ವರ್ಷ ಕಡ್ಡಾಯ

    ಬೆಂಗಳೂರು: ಎಲ್‍ಕೆಜಿ (LKG) ಮಕ್ಕಳ ಶಾಲಾ ದಾಖಲಾತಿಗೆ ನಾಲ್ಕು ವರ್ಷ ವಯೋಮಿತಿ ನಿಗದಿಪಡಿಸಿ ಶಿಕ್ಷಣ ಇಲಾಖೆ (Education Department) ಆದೇಶ ಹೊರಡಿಸಿದೆ.

    ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಎಲ್‍ಕೆಜಿಗೆ ಸೇರಿಸಲು ಮಗುವಿಗೆ 4 ವರ್ಷ ತುಂಬಿರಬೇಕು. 2025 ಹಾಗೂ 26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರುವುದು ಕಡ್ಡಾಯ ಎಂಬ ನಿಯಮ ಜಾರಿ ಮಾಡಲಾದ ಹಿನ್ನಲೆಯಲ್ಲಿ ಎಲ್‍ಕೆಜಿಗೆ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ. ಮುಂದಿನ ಸಾಲಿನಿಂದ ಒಂದನೇ ತರಗತಿಗೆ ದಾಖಲಾಗಲು 6 ವರ್ಷ ಕಡ್ಡಾಯ ಎಂದು ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

    ಒಂದನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ಕಡ್ಡಾಯ ನಿಯಮದ ಹಿನ್ನಲೆಯ ಪೂರ್ವ ತಯಾರಿಯಾಗಿ ಈ ವರ್ಷದಿಂದ ಎಲ್‍ಕೆಜಿ ದಾಖಲಾತಿಗೆ 4 ವರ್ಷ ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ. ಕಡ್ಡಾಯ ಶಿಕ್ಷಣ ನೀತಿ  (Right to Education) 2009 ಹಾಗೂ 2012ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

  • Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ

    Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ

    ಬೆಂಗಳೂರು: 2022ರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teachers Recruitment 2022) ಸಂಧಿಸಿದಂತೆ ಶಿಕ್ಷಣ ಇಲಾಖೆಯು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, 13,352 ಮಂದಿ ಆಯ್ಕೆಯಾಗಿದ್ದಾರೆ.

    1:1 ಅನುಪಾತದಲ್ಲಿ ಶಿಕ್ಷಕರನ್ನ ಆಯ್ಕೆ ಮಾಡಿದ್ದು, ವೆಬ್‌ಸೈಟ್‌ನಲ್ಲಿ (https://schooleducation.kar.nic.in) ಆಯ್ಕೆಪಟ್ಟಿ ಪ್ರಕಟಿಸಿದೆ. ಇಂಗ್ಲಿಷ್ ಭಾಷೆಗೆ 1,772 ಶಿಕ್ಷಕರು, ಗಣಿತ ಮತ್ತು ವಿಜ್ಞಾನಕ್ಕೆ 5,498, ಸಮಾಜ ಪಾಠಗಳಿಗೆ 4,524, ಜೀವ ವಿಜ್ಞಾನಕ್ಕೆ 1,558 ಶಿಕ್ಷಕರು ಸೇರಿ ಸೇರಿ ಒಟ್ಟು 13,352 ಶಿಕ್ಷಕರನ್ನ ನೇಮಕ ಮಾಡಿದೆ.

    ಶಿಕ್ಷಣ ಇಲಾಖೆ (Education Department) ವೆಬ್‌ಸೈಟ್‌ನಲ್ಲಿ ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಿರುವ ವಿಷಯವನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಬುಧವಾರ ತಿಳಿಸಿದ್ದಾರೆ.

    ಫೆಬ್ರವರಿ 27 ರಂದು 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಮಾ.1 ರಿಂದ ಮಾ.4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 15 ಆಕ್ಷೇಪಣೆಗಳು ಮಾತ್ರ ಪರಿಗಣನೆಗೆ ಅರ್ಹವಾಗಿದ್ದವು. ಇವುಗಳನ್ನ ಪರಿಶೀಲಿಸಿ ಮಾರ್ಚ್ 8 ರಂದು ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?

    ಮುಖ್ಯ ಆಯ್ಕೆಪಟ್ಟಿಯಲ್ಲಿ ಒಟ್ಟು 8,376 ಮಹಿಳೆಯರು, 4,973 ಪುರುಷರು ಹಾಗೂ ಮೂವರು ತೃತೀಯ ಲಿಂಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಿಂದ 2,413 ಮಹಿಳೆಯರು, 1779 ಪುರುಷರು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಿಂದ 5,963 ಮಹಿಳೆಯರು, 3,194 ಪುರುಷರು ಹಾಗೂ ಇಬ್ಬರು ತೃತೀಯ ಲಿಂಗಿ ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಯುಗಾದಿಗೆ ಮುನ್ನವೇ ಟಿಕೆಟ್ ಘೋಷಣೆಗೆ ಒತ್ತಡ – ಕೈ ನಾಯಕರಿಗೆ ಧರ್ಮ ಸಂಕಟ

    ಈ ಪೈಕಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 5 ಹಾಗೂ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ 16 ಸೇರಿ ಒಟ್ಟು 21 ಇಂಜಿನಿಯರಿಂಗ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

  • ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

    ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

    ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ (Second PUC Exam) ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (North Western Karnataka Road Transport Corporation) ಸಂಸ್ಥೆ ತಿಳಿಸಿದೆ.

    ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುವುದರಿಂದ ಶಿಕ್ಷಣ ಇಲಾಖೆಯ (Education Department) ಕೋರಿಕೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Breaking- ‘ಕಬ್ಜ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್

    ಮಾರ್ಚ್ 9ರಿಂದ 29ರವರೆಗೆ ನಡೆಯಲಿರುವ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳು ನಿರ್ವಾಹಕರಿಗೆ (Conductor) ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಉಚಿತ ಪ್ರಯಾಣದ ಸೌಲಭ್ಯ ಪಡೆಯಬಹುದಾಗಿದೆ. ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

  • SSLC ಪೂರ್ವಸಿದ್ಧತಾ ಪರೀಕ್ಷೆಗೂ ವಿದ್ಯಾರ್ಥಿಗಳು ಶುಲ್ಕ ಕಟ್ಟಬೇಕು – ಶಿಕ್ಷಣ ಇಲಾಖೆಯಿಂದ ಹೊಸ ನಿಯಮ

    SSLC ಪೂರ್ವಸಿದ್ಧತಾ ಪರೀಕ್ಷೆಗೂ ವಿದ್ಯಾರ್ಥಿಗಳು ಶುಲ್ಕ ಕಟ್ಟಬೇಕು – ಶಿಕ್ಷಣ ಇಲಾಖೆಯಿಂದ ಹೊಸ ನಿಯಮ

    ರಾಯಚೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಆರ್ಥಿಕ ಸಂಕಷ್ಟವನ್ನ ಎದುರಿಸುತ್ತಿದೆಯಾ ಅನ್ನೋ ಅನುಮಾನಗಳು ಮತ್ತೆ ಮೂಡಿವೆ.‌ ಈ ಹಿಂದೆ ಶಿಕ್ಷಣ ಸಚಿವರು ಸರ್ಕಾರಿ ಶಾಲೆ ಮಕ್ಕಳ ಪೋಷಕರಿಂದ 100 ರೂ. ಪಡೆದು ರಶೀದಿ ಕೊಡಬೇಕು ಅನ್ನೋ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈಗ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ನಿಗದಿ ಮಾಡಿ, ಹಣ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನ ಫೆಬ್ರವರಿ 23 ರಿಂದ ಮಾರ್ಚ್ 1 ರ ವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಆದರೆ ವೇಳಾಪಟ್ಟಿಯ ಜೊತೆ ಸುತ್ತೋಲೆಯಲ್ಲಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಿ ಮುಖ್ಯೋಪಾಧ್ಯಾಯರ ಮೂಲಕ ಬಿಇಓ ಬ್ಯಾಂಕ್ ಖಾತೆಗೆ ಪಡೆಯುವಂತೆ ಸೂಚಿಸಿದೆ. ಪ್ರತಿ ವಿದ್ಯಾರ್ಥಿಯಿಂದ ಪ್ರಶ್ನೆ ಪತ್ರಿಕೆಗಾಗಿ 60 ರೂಪಾಯಿ ಶುಲ್ಕವನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗ್ತಾರೆ: ಸಿದ್ದರಾಮಯ್ಯ

    ಉತ್ತರ ಪತ್ರಿಕೆಗೂ ವಿದ್ಯಾರ್ಥಿಗಳು ಹಣ ಖರ್ಚು ಮಾಡಬೇಕಿದೆ. ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವ ಸರ್ಕಾರ ಕೇವಲ ಪ್ರಶ್ನೆ ಪತ್ರಿಕೆ ಮಾತ್ರ ನೀಡುತ್ತದೆ.‌ ಇದೇ ಬಾರಿಗೆ ಈ ನಿಯಮವನ್ನ ಜಾರಿಗೆ ತಂದಿದ್ದು, ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ನಡೆಸಿದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಈ ಮೊದಲು ಶುಲ್ಕವನ್ನು ಸರ್ಕಾರ ಪಡೆದಿಲ್ಲ. ಈಗ ಶುಲ್ಕ ಪಡೆಯುತ್ತಿರುವುದು ಸರಿಯಲ್ಲ ಎಂದು ಪೋಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಂದಲೂ ಪರೀಕ್ಷಾ ಶುಲ್ಕ ಪಡೆಯುತ್ತಿರುವುದು ನೋಡಿದರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.

    ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನ ಕಠಿಣ ರೀತಿಯಲ್ಲಿ ನಡೆಸಲು ಮುಂದಾಗಿರುವ ಸರ್ಕಾರ, ತನ್ನ ಸಿದ್ಧತೆಗಾಗಿ ಬಡ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಅನ್ನೋದು ಪೋಷಕರ ಪ್ರಶ್ನೆ. ವಾರ್ಷಿಕ ಶುಲ್ಕದಲ್ಲಿ ಪರೀಕ್ಷಾ ಶುಲ್ಕ ಕಟ್ಟಿದವರು ಸಹ ಪುನಃ ಶುಲ್ಕ ಕಟ್ಟಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲೂ ಸಹ ಶಿಕ್ಷಣವನ್ನ ವ್ಯಾಪಾರೀಕರಣ ಮಾಡಲು ಶಿಕ್ಷಣ ಇಲಾಖೆ ಹೊರಟಂತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 30 ವರ್ಷವಾದ್ರೂ ವಧು ಸಿಕ್ಕಿಲ್ಲ ಅಂತಾ `ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ’

    ಈ ಮೊದಲು ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ಪಡೆಯದ ಶಿಕ್ಷಣ ಇಲಾಖೆ ಈ‌ ಬಾರಿ ಶುಲ್ಕ ಪಡೆಯುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪತ್ರಿಕೆಯ ಖರ್ಚನ್ನೂ ವಿದ್ಯಾರ್ಥಿಗಳೇ ಭರಿಸಬೇಕಾಗಿರುವುದರಿಂದ ಶಿಕ್ಷಣ ಇಲಾಖೆ ನಡೆ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.‌ ಕೂಡಲೇ ಶುಲ್ಕ ಪಡೆಯುವುದನ್ನ ನಿಲ್ಲಿಸಬೇಕು. ಪಡೆದಿರುವ ಶುಲ್ಕವನ್ನು ಮರಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ

    5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಳೆಯಲು ಇನ್ಮುಂದೆ 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ (Annual Examination) ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಅಧಿಕೃತ ಆದೇಶ ಹೊರಡಿಸಿದೆ.

    ಮೌಲ್ಯಾಂಕನ ಪರೀಕ್ಷೆ ಹೆಸರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕೆಯಲ್ಲಿ ಚೇತರಿಕೆ ಮೂಡಿಸಲು ಇಲಾಖೆ ಈ ನಿರ್ಧಾರ ಮಾಡಿದೆ. ಕ್ಲಸ್ಟರ್ ಹಂತದಲ್ಲಿ ಪರೀಕ್ಷಾ ವ್ಯವಸ್ಥೆಗಳು ನಡೆಯಲಿದೆ.

    ಕರ್ನಾಟಕ ಶಾಲಾ ಪರೀಕ್ಷಾ (School Exams) ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವ ರೀತಿ ಇದೆ ಎಂಬುದನ್ನು ಅಳೆಯಲು ಈ ವಾರ್ಷಿಕ ಪರೀಕ್ಷೆ ಮಾಡಲಾಗ್ತಿದೆ. ಇದನ್ನೂ ಓದಿ: ಅಕ್ರಮವಾಗಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಯಾವುದೇ ವಿದ್ಯಾರ್ಥಿಗಳನ್ನ ಈ ಪರೀಕ್ಷೆಯಲ್ಲಿ ಫೇಲ್ ಮಾಡೋದಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯೋ ವಿದ್ಯಾರ್ಥಿಗಳಿಗೆ (Students) ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇಲಾಖೆ ಮಾಡಿಕೊಳ್ಳಲಿದೆ. ಮಕ್ಕಳ ಕಲಿಕೆ ಗುಣಮಟ್ಟ ಏನು? ಕೊರತೆಗಳೇನು? ಯಾವ ವಿಷಯಗಳಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯಿಂದ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಪರೀಕ್ಷಾ ವ್ಯವಸ್ಥೆ ಹೇಗೆ?
    ರೂಪಣಾತ್ಮಕ ಪರೀಕ್ಷೆ ಮತ್ತು ಸಂಕಲನಾತ್ಮಕ ಪರೀಕ್ಷೆ ವಿಧಾನದಲ್ಲಿ ಪರೀಕ್ಷೆ ನಡೆಯಲಿದೆ. ಕ್ಲಸ್ಟರ್ ಹಂತದಲ್ಲಿ ಈ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಪರೀಕ್ಷಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    8ನೇ ತರಗತಿಗೆ ಒಂದು ಪರೀಕ್ಷಾ ಕೇಂದ್ರಕ್ಕೆ 50 ಮಕ್ಕಳು ಇರುವಂತೆ, 5ನೇ ತರಗತಿಗೆ 25 ಮಕ್ಕಳು ಒಂದು ಕೇಂದ್ರಕ್ಕೆ ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಬೇಕು. ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ 2 ಕಿಮೀ ವ್ಯಾಪ್ತಿಯ ಶಾಲೆಗಳನ್ನ ಒಳಪಡಿಸಿಕೊಳ್ಳುವುದು. ಪರೀಕ್ಷಾ ಕೇಂದ್ರ ಸ್ಥಾಪನೆಗೆ ಡಯಟ್ ಪ್ರಾಂಶುಪಾಲರು, ಬಿಇಓಗಳು ಚರ್ಚಿಸಿ ನಿರ್ಧಾರ ಮಾಡಬೇಕು. ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಿಕ್ಷಕರನ್ನ ಅದಲು ಬದಲು ಮಾಡಬೇಕು. ಶಾಲಾ ಹಂತದಲ್ಲಿ ಪರೀಕ್ಷೆ ಪ್ರವೇಶ ಪತ್ರಗಳನ್ನ ಮುಖ್ಯಶಿಕ್ಷಕರು ವಿತರಿಸಬೇಕು.

    50 ಅಂಕಗಳ ಪರೀಕ್ಷೆ. 2 ಗಂಟೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. 50 ಅಂಕದಲ್ಲಿ 40 ಅಂಕ ಲಿಖಿತ ಪರೀಕ್ಷೆ, 10 ಅಂಕ ಮೌಖಿಕ ಪರೀಕ್ಷೆ ನಡೆಸುವುದು. ಪ್ರಶ್ನೆ ಪತ್ರಿಕೆ ಮುದ್ರಣವನ್ನ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುದ್ರಿಸುತ್ತದೆ. ಜಿಲ್ಲಾ ಡಯಟ್ ಗಳಿಗೆ ಇದು ಹಂಚಿಕೆಯಾಗಲಿದೆ. ಇದರ ಉಸ್ತುವಾರಿ ಬಿಇಓ ಆಗಿರುತ್ತಾರೆ. ಸಂಕಲನಾತ್ಮಕ ಮತ್ತು ರೂಪಣಾತ್ಮಕ ಸೇರಿ 100 ಅಂಕಗಳಿಗೆ ಪರೀಕ್ಷೆ ಇರಲಿದೆ. 35 ಅಂಕ ಪಡೆದ ವಿದ್ಯಾರ್ಥಿ ಪ್ರಗತಿ ಸಾಧಿಸಿರುವ ವಿದ್ಯಾರ್ಥಿ ಅಂತ ಘೋಷಣೆ ಮಾಡಲಾಗುತ್ತದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಫೇಲ್ ಮಾಡದೇ ಪ್ರಗತಿ ಸಾಧಿಸಬೇಕಾದ ವಿದ್ಯಾರ್ಥಿ ಅಂತ ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ – ಬಿ.ಸಿ ನಾಗೇಶ್

    ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ – ಬಿ.ಸಿ ನಾಗೇಶ್

    ಬೆಂಗಳೂರು: ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜುಗಳನ್ನು (Muslims College) ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಚಿವ ಬಿ.ಸಿ ನಾಗೇಶ್ (BC Nagesh) ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ (Public TV) ಮಾತನಾಡಿರುವ ಅವರು, ಸರ್ಕಾರದಿಂದಲೇ ಮುಸ್ಲಿಂ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ ಅನ್ನೋ ವಿಚಾರ ಕೇಳಿಬರುತ್ತಿದೆ. ಇಂತಹ ಯಾವುದೇ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ (Education Department) ಸಲ್ಲಿಸಿಲ್ಲ. ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಮಾಡುವ ಉದ್ದೇಶ ಸರ್ಕಾರಕ್ಕೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಬಲಿದಾನವಾದ್ರೂ ಸರಿ ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಬಿಡೋದಿಲ್ಲ: ಮುತಾಲಿಕ್

    ಏನಿದು ಪ್ರತ್ಯೇಕ ಮುಸ್ಲಿಂ ಕಾಲೇಜು ವಿವಾದ?
    ಉಡುಪಿಯಲ್ಲಿ ಹಿಜಬ್ (Hijab) ವಿವಾದ ಉದ್ಭವಿಸಿದ ನಂತರ ತರಗತಿಗಳಲ್ಲಿ ಹಿಜಬ್ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರಿಂದಾಗಿ ಬಹುತೇಕ ಮುಸ್ಲಿಂ ಸಂಘ ಸಂಸ್ಥೆಗಳು, ಸರ್ಕಾರದ ವಿರುದ್ಧ ತಿರುಗಿಬಿದ್ದು ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದರು. ಹೀಗಾಗಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ (Muslim Students) ಸರ್ಕಾರವೇ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡಲು ಮುಂದಾಗಿದೆ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ಕಾಂಗ್ರೆಸ್ ನಾಯಕನನ್ನು ಸೋಲಿಸಲು ಹರಕೆ- ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ BJP ಮುಖಂಡ

    ರಾಜ್ಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿಯೇ ಸರ್ಕಾರ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ಮುಂದಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮುಂದಿನ ತಿಂಗಳು ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ. 3 ತಿಂಗಳ ಹಿಂದೆಯೇ ವಕ್ಫ್ ಬೋರ್ಡ್‌ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆಯೇ ಅನುಮೋದನೆ ದೊರೆತು ಪ್ರತಿ ಕಾಲೇಜಿಗೆ 2.50 ಕೋಟಿ ರೂ. ಅನುದಾನವನ್ನೂ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ವಕ್ಫ್ ಬೋರ್ಡ್‌ಗೆ ನೀಡುವ ಅನುದಾನದಲ್ಲೇ ಈ ವೆಚ್ಚವನ್ನು ಭರಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದ್ದವು. ಇದಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆ – ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರ ಚಿಂತನೆ

    ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆ – ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರ ಚಿಂತನೆ

    ಬೆಂಗಳೂರು: ಶಾಲಾ (School) ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆಗೆ ಸಿದ್ಧತೆ ಪ್ರಾರಂಭವಾಗಿದ್ದು, ಅದಕ್ಕಾಗಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆಗೆ ಸರ್ಕಾರ (Government Of Karnataka) ಮುಂದಾಗಿದೆ. ನಾಡಿನ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ನೈತಿಕ ಶಿಕ್ಷಣದ ಪಠ್ಯ ಹೇಗೆ ಇರಬೇಕು? ಅಂತ ಶ್ರೀಗಳು ಪಠ್ಯ ಸಿದ್ಧ ಮಾಡಲಿದ್ದಾರೆ.

    ನೈತಿಕ ಶಿಕ್ಷಣದ ಪಠ್ಯ ಸಿದ್ಧತೆಗೆ ನಾಡಿನ ಶ್ರೇಷ್ಠ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರದ ಚಿಂತನೆ ನಡೆಸಿದೆ. ಸುತ್ತೂರು (Shivaratri Deshikendra Swamiji), ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳು ಸಮಿತಿಯಲ್ಲಿ ಇರಲಿದ್ದಾರೆ. ಸಮಿತಿ ರಚನೆ ಬಗ್ಗೆ ಶಿಕ್ಷಣ ಇಲಾಖೆ ಧರ್ಮಗುರುಗಳು, ಶ್ರೀಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಶ್ರೀಗಳ ನೇತೃತ್ವದಲ್ಲಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆ ಆಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ವಿಸರ್ಜಿಸುವ ಬಾಪು ಕನಸು ನನಸಾಗುವ ಸಮಯ ಬಂದಿದೆ: ಯೋಗಿ ಆದಿತ್ಯನಾಥ್

    ನೈತಿಕ ಶಿಕ್ಷಣ ಪಠ್ಯದ ಸಮಿತಿಯ ಕೆಲಸ ಏನು?
    ಈ ಸಮಿತಿ ನೈತಿಕ ಶಿಕ್ಷಣ ಪಠ್ಯ ಹೇಗಿರಬೇಕು ಅಂತಾ ನಿರ್ಧಾರ ಮಾಡಲಿದೆ. ಯಾವ ಪಠ್ಯ ಸೇರ್ಪಡೆ ಮಾಡಬೇಕು? ಯಾರ ಪಠ್ಯ ಸೇರ್ಪಡೆ ಮಾಡಬೇಕು? ಎಂಬುದನ್ನ ನಿರ್ಧರಿಸಲಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಯಾವ-ಯಾವ ಮಹಾ ದಾರ್ಶನಿಕ ಗ್ರಂಥಗಳು ಪಠ್ಯದಲ್ಲಿ ಸೇರ್ಪಡೆ ಮಾಡಬೇಕು ಅಂತಾ ಸಮಿತಿ ನಿರ್ಧಾರ ಮಾಡಲಿದೆ. ಪಂಚತಂತ್ರ ಕಥೆಗಳು, ದಾರ್ಶನಿಕರ ಜೀವನ ಚರಿತ್ರೆ, ಅವರು ಆಚರಿಸಿಕೊಂಡು ಬಂದ ನೈತಿಕ ಮೌಲ್ಯಗಳ ಕುರಿತು ಪಠ್ಯ ರಚನೆಯಾಗಲಿದೆ. ಇದನ್ನೂ ಓದಿ: ಪ್ರಧಾನಿ ಪಕ್ಕ ಕುಳಿತು ಬಿಜೆಪಿಯನ್ನು ಹಾಡಿ ಹೊಗಳಿದ ಬಾಲಕಿ – ಶಭಾಶ್ ಅಂದ ಮೋದಿ

    ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಮೌಲ್ಯಾಧಾರಿತ ನೀತಿಕಥೆಗಳನ್ನ ಪಠ್ಯದಲ್ಲಿ ಸೇರ್ಪಡೆ ಮಾಡುವುದು. ಗುರು-ಹಿರಿಯ ಭಕ್ತಿ, ಸಂಸ್ಕಾರ, ಆಚಾರ-ವಿಚಾರಗಳು, ಸತ್ಯ, ಶಾಂತಿ, ಪ್ರೀತಿ ವಿಶ್ವಾಸಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳುವ ಕಥೆಗಳು, ವ್ಯಕ್ತಿಗಳ ಜೀವನಾಧಾರಿತ ಪಠ್ಯಗಳ ಸೇರ್ಪಡೆಗೆ ಸಮಿತಿ ಅಗತ್ಯವಾದ ಕ್ರಮ ಕೈಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ (Saffron) ಬಣ್ಣ ಹೊಡೆಯುವ ವಿವಾದ ಬೆನ್ನಲ್ಲೇ ರಾಜ್ಯ ಸರ್ಕಾರ (Government Of Karnataka) ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಸೋಮವಾರ ವಿವೇಕ ಯೋಜನೆ ಅಡಿ ಶಂಕು ಸ್ಥಾಪನೆ ಮಾಡಿರುವ 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ (Swamy Vivekananda) ಫೋಟೋ ಮುದ್ರಣ ಮಾಡಲು ಶಿಕ್ಷಣ ಇಲಾಖೆ (Education Department) ತೀರ್ಮಾನ ಮಾಡಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh), ವಿವೇಕಾನಂದರು ಜ್ಞಾನದ ಸಂಕೇತ. ಅವರ ಹೆಸರಿನಲ್ಲಿ ನಾವು ವಿವೇಕ ಯೋಜನೆ ಪ್ರಾರಂಭ ಮಾಡಿದ್ದೇವೆ. ಅವರ ಚಿಂತನೆಗಳು ಮಕ್ಕಳಲ್ಲಿ ಬರಬೇಕು. ಅದಕ್ಕಾಗಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕೊಠಡಿಗಳ ಮುಂದೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡುವ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ

    ಸಾಂದರ್ಭಿಕ ಚಿತ್ರ

    ವಿವೇಕಾನಂದರ ಫೋಟೋ ಮುದ್ರಿಸುವ ಬಗ್ಗೆ ಚರ್ಚೆಯಾಗಿದೆ. ಮಕ್ಕಳಿಗೆ ವಿವೇಕಾನಂದ ಅದರ್ಶಗಳು ತಿಳಿಯುವುದು ಮುಖ್ಯ. ಮಕ್ಕಳಿಗೆ ನೀವು ಏನು ಆಗಬೇಕು ಎಂದರೆ ವಿವೇಕಾನಂದ ಆಗಬೇಕು ಎನ್ನಬೇಕು. ಹೀಗಾಗಿ ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ ಚಿತ್ರ ಮುದ್ರಣ ಮಾಡ್ತೀವಿ ಅಂತ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಶಾಲಾ-ಕಾಲೇಜುಗಳಲ್ಲಿ ಇನ್ಮುಂದೆ 10 ನಿಮಿಷ ಧ್ಯಾನ: ಬಿ.ಸಿ. ನಾಗೇಶ್ ಪತ್ರ

    ಶಾಲಾ-ಕಾಲೇಜುಗಳಲ್ಲಿ ಇನ್ಮುಂದೆ 10 ನಿಮಿಷ ಧ್ಯಾನ: ಬಿ.ಸಿ. ನಾಗೇಶ್ ಪತ್ರ

    ಬೆಂಗಳೂರು: ಶಾಲಾ-ಕಾಲೇಜು (School-College) ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ, ಒತ್ತಡ ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ (Meditation) ಮೊರೆ ಹೋಗಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

    ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B.C. Nagesh), ಧ್ಯಾನ ಮಾಡುವ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ನಿತ್ಯ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕು. ಇದಕ್ಕಾಗಿ ಸಮಯ ನಿಗದಿ ಮಾಡುವಂತೆ ಸೂಚನೆ ನೀಡಿದ್ದಾರೆ.

    ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದವರು ಶಾಲಾ-ಕಾಲೇಜುಗಳಲ್ಲಿ ಧ್ಯಾನ ಮಾಡಿಸುವಂತೆ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದರು. ಮಕ್ಕಳ ಏಕಾಗ್ರತೆ, ಆರೋಗ್ಯ ವೃದ್ಧಿ, ಒತ್ತಡ ನಿವಾರಣೆ ದೃಷ್ಟಿಯಿಂದ ಸಚಿವರು ಧ್ಯಾನ ಮಾಡಿಸುವ ಮನವಿಗೆ ಸ್ಪಂದನೆ ನೀಡಿದ್ದಾರೆ.  ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬಿ.ಸಿ. ನಾಗೇಶ್ ಅವರು ಪತ್ರದ ಮೇಲೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದು, ಶೀಘ್ರವೇ ಶಾಲಾ-ಕಾಲೇಜುಗಳಲ್ಲಿ ಧ್ಯಾನದ ಮಾಡುವ ಆದೇಶ ಅಧಿಕೃತವಾಗಲಿದೆ. ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

    Live Tv
    [brid partner=56869869 player=32851 video=960834 autoplay=true]

  • 29 ಹೊಸ PU ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು

    29 ಹೊಸ PU ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು

    ಬೆಂಗಳೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ 29 ಹೊಸ ಪಿಯು ಕಾಲೇಜುಗಳ (PU College) ಸ್ಥಾಪನೆಗೆ ರಾಜ್ಯ ಸರ್ಕಾರ (Government Of Karnataka) ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ರಾಜ್ಯದಲ್ಲಿ ಕೆಲವು ಪ್ರೌಢ ಶಾಲೆಗಳನ್ನು (HighSchools) ಉನ್ನತೀಕರಿಸಿ, ಶಿಕ್ಷಣ ಇಲಾಖೆಯಿಂದ ಹೊಸದಾಗಿ 29 ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸಿದೆ. ಇದನ್ನೂ ಓದಿ: ಮೋರ್ಬಿ ದುರಂತ ರಾಜಕೀಯಗೊಳಿಸೋದು ಅಗೌರವ – ಮೃದು ಸ್ವಭಾವ ತೋರಿದ ರಾಹುಲ್

    ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳ ವಿವರಗಳೊಂದಿಗೆ ತಗಲುವ ವೆಚ್ಚದ ಕ್ರೋಢೀಕೃತ ವಿವರಗಳನ್ನು ಕೂಡಲೇ ಸರ್ಕಾರಕ್ಕೆ (Government) ಸಲ್ಲಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದೆ. ಇದನ್ನೂ ಓದಿ: ಬೈ ಎಲೆಕ್ಷನ್ ರಿಸಲ್ಟ್ – ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ಗೆ ತೃಪ್ತಿ, ಖಾತೆ ತೆರೆಯದ ಆಪ್‌

    ಪಿಯು ಕಾಲೇಜುಗಳು:
    1.ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವತ್ಕಲ್, ಸುರಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ.
    2. ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ, ಸುರಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ.
    3.ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಸಲಾಪುರ, ಕನಕಗಿರಿ ತಾಲ್ಲೂಕು, ಕೊಪ್ಪಳ ಜಿಲ್ಲೆ,
    4. ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಕ್ಕಡಂಕನಕಲ್ಲು, ಕನಕಗಿರಿ ತಾಲ್ಲೂಕು, ಕೊಪ್ಪಳ ಜಿಲ್ಲೆ.
    5. ಸರ್ಕಾರಿ ಪದವಿ ಪೂರ್ವ ಕಾಲೇಜು, ಕವಲೂರು, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ,
    6.ಸರ್ಕಾರಿ ಪದವಿ ಪೂರ್ವ ಕಾಲೇಜು, ಪಗಡದಿನ್ನಿ, ಸಿಂದನೂರು ತಾಲ್ಲೂಕು, ರಾಯಚೂರು ಜಿಲ್ಲೆ

    7. ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾನವಾಸಪುರ, ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ.
    8.ಸರ್ಕಾರಿ ಪದವಿ ಪೂರ್ವ ಕಾಲೇಜು, ಪೀರಾಪುರ, ದೇವರಹಿಪ್ಪರಗಿ-ಮುದ್ದೇಬಿಹಾಳ ತಾಲ್ಲೂಕು,
    9.ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವರಹಿಪ್ಪರಗಿ, ದೇವರಹಿಪ್ಪರಗಿ ತಾಲ್ಲೂಕು, ವಿಜಯಪುರ ಜಿಲ್ಲೆ
    10.ಸರ್ಕಾರಿ ಪದವಿ ಪೂರ್ವ ಕಾಲೇಜು, ಇಲಕಲ್, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
    11.ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಗಳಖೋಡ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
    12.ಸರ್ಕಾರಿ ಪದವಿ ಪೂರ್ವ ಕಾಲೇಜು, ಮಿರ್ಜಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.

    ಸಾಂದರ್ಭಿಕ ಚಿತ್ರ

    13. ಸರ್ಕಾರಿ ಪದವಿ ಪೂರ್ವ ಕಾಲೇಜು, ಢವಳೇಶ್ವರ, ರಬಕವಿ-ಬನಹಟ್ಟಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ
    14.ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಲ್ಲಹಳ್ಳಿ, ರಬಕವಿ-ಬನಹಟ್ಟಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ,
    15.ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿರಗೂರ, ರಾಯಭಾಗ-ಕುಡಚಿ ತಾಲ್ಲೂಕು, ಬೆಳಗಾವಿ ಜಿಲ್ಲೆ
    16.ಸರ್ಕಾರಿ ಪದವಿ ಪೂರ್ವ ಕಾಲೇಜು, ಅಳಗವಾಡಿ, ರಾಯಭಾಗ- ಕುಡಚಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
    17. ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂವಸುದ್ದಿ, ರಾಯಭಾಗ- ಕುಡಚಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
    18.ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾರೋಗೇರಿ ಪಟ್ಟಣ, ರಾಯಭಾಗ- ಕುಡಚಿ ತಾಲ್ಲೂಕು ಬೆಳಗಾವಿ ಜಿಲ್ಲೆ.

    19. ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಗಳಖೋಡ ಪಟ್ಟಣ, ರಾಯಭಾಗ- ಕುಡಚಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
    20.ಸರ್ಕಾರಿ ಪದವಿ ಪೂರ್ವ ಕಾಲೇಜು, ಚುಂಚನೂರು, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ.
    21.ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಚಂದರಗಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ,
    22.ಸರ್ಕಾರಿ ಪದವಿ ಪೂರ್ವ ಕಾಲೇಜು, ತುರಕರ ಶೀಗಿಹಳ್ಳಿ, ಕಿತ್ತೂರು ತಾಲ್ಲೂಕು, ಬೆಳಗಾವಿ ಜಿಲ್ಲೆ.
    23.ಸರ್ಕಾರಿ ಪದವಿ ಪೂರ್ವ ಕಾಲೇಜು, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂ. ಕಿತ್ತೂರು ತಾಲ್ಲೂಕು, ಬೆಳಗಾವಿ
    24.ಸರ್ಕಾರಿ ಪದವಿ ಪೂರ್ವ ಕಾಲೇಜು, ಮರಕಟ್ಟೆ, ಕಿತ್ತೂರು ತಾಲ್ಲೂಕು, ಬೆಳಗಾವಿ ಜಿಲ್ಲೆ.

    25. ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದಾಪುರ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ.
    26.ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಟ್ಲ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.
    27.ಸರ್ಕಾರಿ ಪದವಿ ಪೂರ್ವ ಕಾಲೇಜು, ಹರೆಕಳ (ಹಾಜಬ್ಬ), ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ
    28.ಸರ್ಕಾರಿ ಪದವಿ ಪೂರ್ವ ಕಾಲೇಜು, ಕುರ್ಕಿ, ದಾವಣಗೆರೆ ಉತ್ತರ (ಮಾಯಕೊಂಡ) ತಾಲ್ಲೂಕು,ದಾವಣಗೆರೆ ಜಿಲ್ಲೆ.
    29.ಸರ್ಕಾರಿ ಪದವಿ ಪೂರ್ವ ಕಾಲೇಜು, ದುಂಡತಿ ಗ್ರಾಮ, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜಿಲ್ಲೆ

    Live Tv
    [brid partner=56869869 player=32851 video=960834 autoplay=true]