ನವದೆಹಲಿ: NEET UG ಕೌನ್ಸೆಲಿಂಗ್ ಆರಂಭಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಇಂದಿನಿಂದ ಪ್ರಾರಂಭವಾಗಬೇಕಿದ್ದ ನೀಟ್-ಯುಜಿ ಕೌನ್ಸೆಲಿಂಗ್ ಅನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ.
ತೀವ್ರ ಒತ್ತಡ ವ್ಯಕ್ತವಾದ ಬೆನ್ನಲ್ಲೇ ಕೌನ್ಸಿಲಿಂಗ್ ಮುಂದೂಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಆದರೆ ಕೌನ್ಸೆಲಿಂಗ್‌ನ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.
ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಚಾರಣೆ ವೇಳೆ ನೀಟ್ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 6 ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಉಲ್ಲೇಖಿಸಿತ್ತು. ಸದ್ಯ ಜುಲೈ 8ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯ ಮೇಲೂ ಸಂಬಂಧಪಟ್ಟ ಇಲಾಖೆಗಳು ಮತ್ತು ಸಚಿವಾಲಯಗಳು ಕಣ್ಣಿಟ್ಟಿವೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು: ಬೋಲೇನಾಥ ಬಾಬಾ
ಇಂದು ಆರಂಭವಾಗಬೇಕಿದ್ದ NEET-UG ಕೌನ್ಸೆಲಿಂಗ್ ಅನ್ನು ವಿಳಂಬಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ. ಜುಲೈ 8 ರಂದು NEET-UG 2024 ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಈ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೊಂದಿಗೆ ಸಿಜೆಐ ಡಿವೈ ಚಂದ್ರಚೂಡ್ ಅವರ ಪೀಠವು ವಿಚಾರಣೆ ನಡೆಸಲಿದೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು (Revised Time Table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟ ಮಾಡಿದೆ.
ಶುಕ್ರವಾರವಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಬದಲಾವಣೆ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದರ ಜೊತೆಗೆ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ತರಗತಿಗಳನ್ನು ಸರ್ಕಾರ ರದ್ದು ಮಾಡಿತ್ತು. ವಿಶೇಷ ಬೋಧನಾ ತರಗತಿಗೆ ಬದಲಿ ವೇಳಾಪಟ್ಟಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಬದಲಾವಣೆ ಮಾಡಲು ಸರ್ಕಾರ ಆದೇಶ ಮಾಡಿತ್ತು. ಇದನ್ನೂ ಓದಿ: ಶಕ್ತಿ ಯೋಜನೆ ಪ್ರಸ್ತಾಪ ಜಟಾಪಟಿ – ಪ್ರಧಾನಿ ಮೋದಿಗೆ ಡಿಕೆಶಿ ತಿರುಗೇಟು
ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
ಜೂನ್ 14- ಪ್ರಥಮ ಭಾಷೆ ವಿಷಯ
ಜೂನ್ 15- ತೃತೀಯ ಭಾಷೆ ವಿಷಯ
ಜೂನ್ 18- ಗಣಿತ
ಜೂನ್ 20- ವಿಜ್ಞಾನ
ಜೂನ್ 21- ದ್ವೀತಿಯ ಭಾಷೆ
ಜೂನ್ 22- ಸಮಾಜ ವಿಜ್ಞಾನ
– 67 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ
– ಶಾಲೆಗೆ ಬಂದು ವಾಪಸ್ ಹೋಗ್ತಿರೋ ಶಿಕ್ಷಕರು
ಯಾದಗಿರಿ: ಇಲ್ಲಿನ ವಾಲ್ಮೀಕಿ ನಗರದಲ್ಲಿ ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆಯೊಂದು ಸಮುದಾಯ ಭವನದಲ್ಲಿ ನಡೆಯುತ್ತಿದೆ. ಸಾವಿರಾರು ಮಕ್ಕಳು ಸಮುದಾಯ ಭವನದಲ್ಲಿ (Community Bhawan) ನಡೆಯುತ್ತಿದ್ದ ಶಾಲೆಯಲ್ಲೇ ವಿದ್ಯೆ ಕಲಿತ್ತಿದ್ದಾರೆ. ಆದರೀಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದಲ್ಲಿದ್ದ ಶಾಲೆಯನ್ನ ಉರ್ದು ಸರ್ಕಾರಿ ಶಾಲೆಯ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಹತ್ತಾರು ಮಕ್ಕಳು ಶಾಲೆಗೆ ಹೋಗೋದನ್ನೇ ನಿಲ್ಲಿಸಿದ್ದಾರೆ. ಉರ್ದು ಶಾಲೆಗೆ (Urdu school) ಶಿಫ್ಟ್ ಮಾಡಿದ್ರೆ ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.
ಕಳೆದ 17 ವರ್ಷಗಳ ಹಿಂದೆ ಅಂದ್ರೆ 2006-07ನೇ ಸಾಲಿನಲ್ಲಿ ಈ ಬಡಾವಣೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ಶಿಕ್ಷಣ ಇಲಾಖೆ (Education Department) ಮಂಜೂರು ಮಾಡಿತ್ತು. ಆರಂಭದಲ್ಲಿ ಜಾಗ ಮತ್ತು ಶಾಲೆಗೆ ಕಟ್ಟಡ ಇಲ್ಲದ ಕಾರಣಕ್ಕೆ ಬಡಾವಣೆಯ ಮಶಮ್ಮ ದೇವಸ್ಥಾನದ ಆವರಣದಲ್ಲಿ ಶೆಡ್ ಹಾಕಿಕೊಂಡು ಶಾಲೆಯನ್ನ ನಡೆಸಲಾಗುತ್ತಿತ್ತು. ಆದ್ರೆ ಕೆಲ ವರ್ಷಗಳ ನಂತರ ಇದೇ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣವಾಗಿದೆ. ಹೀಗಾಗಿ ಶಾಲೆಯನ್ನ ಶೆಡ್‌ನಿಂದ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ 17 ವರ್ಷಗಳಿಂದಲೂ ಕಿರಿಯ ಪ್ರಾಥಮಿಕ ಶಾಲೆಯನ್ನ ಇದೇ ಸಮುದಾಯ ಭವನದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಇದನ್ನೂ ಓದಿ: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಹಲವು ವರ್ಗಕ್ಕೆ ಶಕ್ತಿ ತುಂಬುವ ಕೆಲಸ: ಹೆಚ್‌ಡಿಕೆ ಬಣ್ಣನೆ
ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದ ಪಕ್ಕದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಶಾಲೆಯನ್ನ ಸ್ಥಳಾಂತರಗೊಳಿಸಿದ ಬಳಿಕ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯನ್ನ ಸ್ಥಳಾಂತರ ಮಾಡುವ ನೆಪದಲ್ಲಿ ಬೇರೆ ಶಾಲೆಯೊಟ್ಟಿಗೆ ವಿಲೀನ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಅಂತ ಪೋಷಕರು ಆರೋಪಿಸಿದ್ದಾರೆ. ಈಗಿರುವ ಶಾಲೆಗೆ ಮಕ್ಕಳು ಮುಖ್ಯ ರಸ್ತೆಯನ್ನ ದಾಟಿ ಹೋಗಬೇಕು. ಮುಖ್ಯ ರಸ್ತೆ ಮೇಲೆ ಭಾರೀ ವಾಹನಗಳು ಓಡಾಡುತ್ತವೆ. ರಸ್ತೆ ದಾಟುವಾಗ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಯಾರು ಜವಾಬ್ದಾರಿ? ನಾವು ಕೂಲಿ ಮಾಡುವ ಜನ ಮಕ್ಕಳನ್ನ ಶಾಲೆಗೆ ಬಿಡೋದಕ್ಕೆ ಆಗಲ್ಲ. ಹೀಗಾಗಿ ಸಮುದಾಯ ಭವನದಲ್ಲೇ ಶಾಲೆ ನಡೆಸಿ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ
ಶಾಲೆ ಸ್ಥಳಾಂತರಗೊಳಿಸಿದ ಬಳಿಕ ಪೋಷಕರ ಒತ್ತಾಯಕ್ಕೆ ಅಧಿಕಾರಿಗಳು ಕಿವಿಗೊಡದಿದ್ದರಿಂದ ಪೋಷಕರು ಮಕ್ಕಳನ್ನ ಶಾಲೆಗ ಕಳುಹಿಸೋದಕ್ಕೆ ಹಿಂದೇಟು ಹಾಕಿದ್ದಾರೆ. ಕಳೆದ 1 ತಿಂಗಳಿನಿಂದ 1 ರಿಂದ 5ನೇ ತರಗತಿವರೆಗೆ ಇರುವ ಈ ಶಾಲೆಯ ಸುಮಾರು 60ಕ್ಕೂ ಅಧಿಕ ಮಕ್ಕಳು ಶಾಲೆ ಮುಖ ನೋಡದೇ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಬಾರದ ಕಾರಣಕ್ಕೆ ಶಾಲೆಯ ಮೂರು ಜನ ಶಿಕ್ಷಕಿಯರು ಕಳೆದ 1 ತಿಂಗಳಿನಿಂದ ಶಾಲೆಗೆ ಬಂದು ಕುಳಿತುಕೊಂಡು ವಾಪಸ್ ಹೋಗುತ್ತಿದ್ದಾರೆ. ಅಧಿಕಾರಿಗಳು ಮುಂದೇನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮೋದಿ ಹೊಡೆತಕ್ಕೆ ಎಲ್ಲಿ ಸಿಲುಕಿ ಸಾಯೋಣ ಎಂದು ಮಂತ್ರಿಯೊಬ್ಬರು ಹೇಳ್ತಿದ್ರು: ಬೊಮ್ಮಾಯಿ
ಚಿಕ್ಕಮಗಳೂರು: ಬಿಇಓ ಕಚೇರಿಯ (BEO Office) ವ್ಯವಸ್ಥಾಪಕ ಅಧಿಕಾರಿ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಶಿಕ್ಷಣ ಇಲಾಖೆಯಲ್ಲಿ (Education Department) ಕೆಲಸದ ಒತ್ತಡ ಅಧಿಕವಾಗಿತ್ತು. ಡಿ-ಗ್ರೂಪ್ ನೌಕರರು ಕಡಿಮೆ ಇದ್ದರು. ಇದರಿಂದ ಕೆಲಸಗಳು ಆಗದೇ ಭಾನುವಾರವೂ ಕೆಲಸ ಮಾಡುವ ಪರಿಸ್ಥಿತಿ ಇತ್ತು. ಭಾನುವಾರ (ಡಿ.31) ಸಹ ಕಚೇರಿಗೆ ಹೋಗಿ ಕೆಲಸ ಮಾಡಿದ್ದರು. ಆದರೂ ಎಲ್ಲಾ ಕೆಲಸ ಸಮಯಕ್ಕೆ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮನೆಯಲ್ಲಿ ನಿದ್ರೆ ಬರುತ್ತಿರಲಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯು (Second PUC) ಪರೀಕ್ಷೆ ವ್ಯವಸ್ಥೆಯಲ್ಲಿ ಹೊಸ ವಿಧಾನ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ಮುಂದೆ ಒಂದು ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.
ದ್ವೀತಿಯ ಪಿಯುಸಿ ಮತ್ತು SSLC ಪರೀಕ್ಷೆಗಳನ್ನ ವರ್ಷದಲ್ಲಿ 3 ಬಾರಿ ಮಾಡಲು ನಿರ್ಧರಿಸಲಾಗಿದೆ. ವಾರ್ಷಿಕ ಪರೀಕ್ಷೆ, ಪೂರಕ ಪರೀಕ್ಷೆ ವ್ಯವಸ್ಥೆ ಕೈಬಿಡಲಾಗುವುದು. ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಹೆಸರಿನಲ್ಲಿ ಪರೀಕ್ಷೆ ನಡೆಸಲಾಗುವುದು. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಪ್ರಥಮ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ ಲೋಕಾರ್ಪಣೆ
ಹೊಸ ವ್ಯವಸ್ಥೆ ಹೇಗೆ?
* ವಿದ್ಯಾರ್ಥಿಗಳು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಇನ್ನೊಂದು ಪರೀಕ್ಷೆ ಬರೆಯಬಹುದು. ಅದರಲ್ಲಿ ಕಡಿಮೆ ಬಂದರೆ 3 ನೇ ಪರೀಕ್ಷೆ ಬರೆಯಬಹುದು.
* 2 ಮತ್ತು 3 ನೇ ಪರೀಕ್ಷೆಯಲ್ಲಿ ಮೊದಲ ಪರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರೆ, ಎರಡು ಪರೀಕ್ಷೆ ಬರೆದರೂ ಮೊದಲ ಪರೀಕ್ಷೆಯ ಅಂಕಗಳನ್ನೆ ಉಳಿಸಿಕೊಳ್ಳಬಹುದು.
* ಯಾವುದಾದರೂ ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದಿದೆ ಅಂತ ಅನ್ನಿಸಿದರೆ ಅ ವಿದ್ಯಾರ್ಥಿಯೂ 2 ಮತ್ತು ಮೂರನೇ ಪರೀಕ್ಷೆಯಲ್ಲಿ ಆ ಒಂದು ವಿಷಯವನ್ನು ಪ್ರತ್ಯೇಕವಾಗಿ ಬರೆದು ಹೆಚ್ಚು ಅಂಕ ಪಡೆದುಕೊಳ್ಳಬಹುದು.
* ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೂ ಅ ವಿದ್ಯಾರ್ಥಿಯನ್ನ ಫೇಲ್ ಅಂತ ಕರೆಯುವುದಿಲ್ಲ. ಆತ 2, 3 ನೇ ಪರೀಕ್ಷೆ ಬರೆದು ಪಾಸ್ ಆಗಬಹುದು.
* ವಿದ್ಯಾರ್ಥಿ 1, 2, 3 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾನೋ ಅ ಪರೀಕ್ಷೆಯಲ್ಲಿ ಪಾಸ್ ಅಂತ ಅಂಕಪಟ್ಟಿ ನೀಡಲಾಗುತ್ತದೆ.
* 2023-24ನೇ ಸಾಲಿನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಇದನ್ನೂ ಓದಿ: ಕೇವಲ 5 ತಿಂಗಳಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಟ್ರಾನ್ಸ್‌ಫರ್
ಹೊಸ ಪರೀಕ್ಷೆ ವ್ಯವಸ್ಥೆ ವೇಳಾಪಟ್ಟಿ
SSLC ಪರೀಕ್ಷೆಗಳು
ಪರೀಕ್ಷೆ 1
ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ
ಫಲಿತಾಂಶ ಮೇ 8
ಪರೀಕ್ಷೆ 2
ಜೂನ್ 12 ರಿಂದ ಜೂನ್ 19
ಜೂನ್ 29 ಫಲಿತಾಂಶ
ಪರೀಕ್ಷೆ 3
ಜುಲೈ 29 ರಿಂದ ಆಗಸ್ಟ್ 5
ಆಗಸ್ಟ್ 19 ಫಲಿತಾಂಶ
ದ್ವೀತಿಯ ಪಿಯುಸಿ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 1 ರಿಂದ ಮಾರ್ಚ್ 25
ಫಲಿತಾಂಶ ಏಪ್ರಿಲ್ 22
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ (School Bag Weight) ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ (Education Department) ಮಹತ್ವದ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ತರಗತಿ ಮತ್ತು ತೂಕದ ವಿವರ:
1-2ನೇ ತರಗತಿ – 1.5 ರಿಂದ 2 ಕೆಜಿ
3-5ನೇ ತರಗತಿ – 2-3 ಕೆಜಿ
6-8ನೇ ತರಗತಿ – 3-4 ಕೆಜಿ
9-10ನೇ ತರಗತಿ – 4-5 ಕೆಜಿ
ಹೊರೆ ಇಳಿಸಲು ಅಧ್ಯಯನ ನಡೆಸಿದ ಡಿಎಸ್‌ಇಆರ್‌ಟಿ:
ಎನ್‌ಎಲ್‌ಎಸ್‌ಯುಐ, ಸೆಂಟರ್ ಫಾರ್ ಚೈಲ್ಡ್ ಲಾ ಇವರ ಸಹಯೋಗದೊಂದಿಗೆ ಅಧ್ಯಯನ ಮಾಡಿದ ಡಿಎಸ್‌ಇಆರ್‌ಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ವಿದ್ಯಾರ್ಥಿಗಳ ದೇಹದ ತೂಕದ 10-15% ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಲು ಶಿಫಾರಸ್ಸು ಮಾಡಿದೆ. ಮೂಳೆ ತಜ್ಞರ ಶಿಫಾರಸ್ಸಿನ ಮೇರೆಗೆ ಡಿಎಸ್‌ಇಆರ್‌ಟಿ ಬ್ಯಾಗ್ ತೂಕದ ವರದಿ ನೀಡಿದ್ದು, ಇದನ್ನು ಅನ್ವಯಿಸಿ ಶಿಕ್ಷಣ ಇಲಾಖೆ ಶಾಲಾ ಬ್ಯಾಗ್‌ನ ತೂಕವನ್ನು ಕಡಿಮೆ ಮಾಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ‘ಯೋಗ’ – ಗಿನ್ನಿಸ್ ದಾಖಲೆ ಬರೆದ ವಿಶ್ವಸಂಸ್ಥೆ ಕೇಂದ್ರ ಕಚೇರಿ
ಕಡಿಮೆ ತೂಕದ ಬ್ಯಾಗ್ ನಿಯಮ ಜಾರಿ ಹೇಗೆ?
* ಶಾಲಾ ಎಸ್‌ಎಂಸಿ, ಎಸ್‌ಡಿಎಂಸಿ ಹಾಗೂ ಶಾಲ ಮುಖ್ಯಸ್ಥರು ಇಲಾಖೆ ಆದೇಶ ಪಾಲನೆಗೆ ಕ್ರಮವಹಿಸಬೇಕು.
* 1ರಿಂದ 5ನೇ ತರಗತಿಯವರೆಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರೋ ಪಠ್ಯಕ್ರಮವನ್ನು ಮಾತ್ರ ಶಾಲೆಗಳು ಬೋಧನೆ ಮಾಡಬೇಕು.
* ಬೇರೆ ಯಾವುದೇ ಪಠ್ಯ ಕ್ರಮ ಬೋಧನೆ ಮಾಡುವಂತೆ ಇಲ್ಲ.
* ಒಂದು ವೇಳೆ ನಿಯಮ ಮೀರಿ ಬೇರೆ ಪಠ್ಯ ಕ್ರಮ ಬೋಧನೆ ಮಾಡಿದರೆ ಶಾಲೆ ಮಾನ್ಯತೆ ರದ್ದು ಮಾಡಲಾಗುತ್ತದೆ.
* ಶಿಕ್ಷಣ ಇಲಾಖೆ ನಿಯಮ ಪಾಲನೆ ಮಾನಿಟರ್ ಮಾಡಲು ವಿಶೇಷ ತಂಡ ರಚನೆ ಮಾಡಿ ತಪಾಸಣೆ ಮಾಡಿಸುವುದು.
* ಕ್ಲಸ್ಟರ್ ಹಂತದಲ್ಲಿ ಸಿಆರ್‌ಪಿ ಮತ್ತು ಇಸಿಒಗಳು, ಬ್ಲಾಕ್ ಹಂತದಲ್ಲಿ ಬಿಆರ್‌ಸಿ ಮತ್ತು ಬಿಇಒಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.
* ಜಿಲ್ಲಾ ಹಂತದಲ್ಲಿ ಡಿಡಿಪಿಐಗಳು, ಡಯಟ್ ಪ್ರಾಂಶುಪಾಲರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆ ಕೈಬಿಡಲು ಕಾಂಗ್ರೆಸ್ ಸಚಿವ ಸಂಪುಟ (Congress Cabinet) ಒಪ್ಪಿಗೆ ನೀಡಿದೆ. ಈ ಮೂಲಕ RSS ಸ್ಥಾಪಕ ಹೆಡ್ಗೆವಾರ್, ವೀರ ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ಪಾಠಗಳಿಗೆ ಕೊಕ್ ಕೊಡಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಪಠ್ಯ ಪರಿಷ್ಕರಣೆ (TextBook Revision) ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), 6 ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ: ಸಿಂಹ ಆರೋಪಕ್ಕೆ ಬೊಮ್ಮಾಯಿ ತಿರುಗೇಟು
ಪಠ್ಯ ಪರಿಷ್ಕರಣೆಗೆ ಸಿಎಂ ಮಾರ್ಗದರ್ಶನ ಪಡೆಯಲಾಗಿದೆ. ಪ್ರಣಾಳಿಕೆಯಲ್ಲಿ ಪರಿಷ್ಕರಣೆ ಮಾಡೋದಾಗಿ ಹೇಳಿದ್ದೆವು. ಅದರಂತೆ ರಾಜಪ್ಪ ದಳವಾಯಿ, ರವೀಶ್ ಕುಮಾರ್, ಚಂದ್ರಶೇಖರ, ಅಶ್ವಥ್ ನಾರಾಯಣ, ರಾಜೇಶ್ ಅವರನ್ನೊಳಗೊಂಡ ಸಮಿತಿ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಆಗಿದೆ. ಪಠ್ಯ ಈಗಾಗಲೇ ಮಕ್ಕಳ ಕೈಗೆ ತಲುಪಿರೋದ್ರಿಂದ ವಾಪಸ್ ತರಿಸಿದ್ರೆ, ಹೊಸ ಪುಸ್ತಕಗಳನ್ನ ಪ್ರಿಂಟ್ ಮಾಡಿಸಿದ್ರೆ ಹೆಚ್ಚಿನ ಹಣ ಖರ್ಚಾಗುತ್ತೆ. ಆದ್ದರಿಂದ ಪೂರಕ ಪಠ್ಯ ಕೊಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
6ನೇ ತರಗತಿಯಿಂದ 10ನೇ ತರಗತಿ ವರೆಗೆ ಕೆಲವು ಪಾಠಗಳನ್ನ ಈ ಸಾಲಿನಿಂದಲೇ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಠ್ಯ ಪುಸ್ತಕ ಈಗಾಗಲೇ ಹಂಚಿಕೆ ಆಗಿದೆ. ಆದ್ದರಿಂದ ಹೆಚ್ಚುವರಿ ಪುಸ್ತಕಗಳನ್ನ ಶಾಲೆಗಳಿಗೆ ತಲುಪಿಸುತ್ತೇವೆ. ಅದರಲ್ಲಿ ಕೆಲವು ಶಿಷ್ಟಾಚಾರ ಇರುತ್ತವೆ. ಜ್ಯೋತಿ ಬಾಫುಲೆ, ಅಂಬೇಡ್ಕರ್ ಹಾಗೂ ನೆಹರೂ ಪಾಠಗಳು ಸೇರ್ಪಡೆ ಆಗಿರುತ್ತೆ. ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನ ಕೈಬಿಟ್ಟಿದ್ದೇವೆ. ಇದು ತಾತ್ಕಾಲಿಕ ಬದಲಾವಣೆ. ಮುಂದೆ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಜು.1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ: ಸರ್ಕಾರದ ವಿರುದ್ಧ ಬೊಮ್ಮಾಯಿ ಗುಡುಗು
ಕನ್ನಡದಲ್ಲಿ 6 ರಿಂದ 10ನೇ ತರಗತಿ ಪಠ್ಯ ಪರಿಷ್ಕರಣೆ, ಸಮಾಜ ವಿಜ್ಞಾನದಲ್ಲಿ 6 ರಿಂದ 10ನೇ ತರಗತಿ ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. ಸಾವಿತ್ರ ಫುಲೆ ಪಠ್ಯ ಸೇರ್ಪಡೆ ಮಾಡಿದ್ದೇವೆ. `ಮಗಳಿಗೆ ಬರೆದ ಪತ್ರ’ ಪುನರ್ ಸೇರ್ಪಡೆ ಮಾಡಿದ್ದೇವೆ. ಸೇತುಬಂಧ ಅಂತಾ ಸಪ್ಲಿಮೆಂಟರಿ ಕೊಡ್ತೀವಿ. 10 ಸಭೆ ಮಾಡಿ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಶಿಕ್ಷಕರಿಗೂ ಏನು ಪಾಠ ಮಾಡಬೇಕು ಅಂತಾ ಹೇಳ್ತಿದ್ದೀವಿ. ಬಿಜೆಪಿ ಸರ್ಕಾರ ಮಾಡಿದ 75% ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. 75 ಸಾವಿರ ಶಾಲೆಗಳಿಗೆ ಪೂರಕ ಪಠ್ಯಗಳನ್ನ ಕಳುಹಿಸುತ್ತೇವೆ. ಇದರ ಮುದ್ರಣಕ್ಕೆ 10 ರಿಂದ 12 ಲಕ್ಷ ರೂ. ಆಗಬಹುದು. ಮುಂದಿನ ವರ್ಷ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡ್ತೀವಿ ಎಂದಿದ್ದಾರೆ.
ಯಾವ ತರಗತಿಯ ಯಾವ ಪಠ್ಯಕ್ಕೆ ಬ್ರೇಕ್?
* ಆರ್‌ಎಸ್‌ಎಸ್ ಸ್ಥಾಪಕ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಾಗಬೇಕು- 10 ನೇ ತರಗತಿ.
* ಎಸ್.ಎಲ್. ಭೈರಪ್ಪ ಅವರು ಬರೆದಿರೋ `ನಾನು ಕಂಡಂತೆ ಬಿಜಿಎಲ್ ಸ್ವಾಮಿ’ ಪಾಠ – 9 ನೇ ತರಗತಿ.
* ಚಕ್ರವರ್ತಿ ಸೂಲಿಬೆಲೆ ರಚಿತ ತಾಯಿ ಭಾರತೀಯ ಅಮರಪುತ್ರರು ಪಾಠ- 10ನೇ ತರಗತಿ.
* ವೀರ ಸಾವರ್ಕರ್ ಕುರಿತ ಕಾಲವನ್ನು ಗೆದ್ದವರು ಪಾಠ- 8ನೇ ತರಗತಿ.
* ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪಾಠ
* `ಬಹುಮಾನ’ ಪದ್ಯ ಮತ್ತು `ಬೊಮ್ಮನಹಳ್ಳಿ ಕಿಂದರ ಜೋಗಿ’ ಪದ್ಯ-9 ನೇ ತರಗತಿ.
* ಸ್ವದೇಶಿ ಸೂತ್ರದ ಸರಳ ಹಬ್ಬ ಪಾಠ-10 ನೇ ತರಗತಿ.
* ಮಂಜೇಶ್ವರ ಗೋವಿಂದ್ ಪೈ ರಚಿತ `ನಾನು ಪ್ರಾಸ ಬಿಟ್ಟ ಕಥೆ’ ಪಾಠ- 10 ನೇ ತರಗತಿ.
* `ಸೀಗಡಿ ಯಾಕೆ ಒಣಗಲಿಲ್ಲ’ ಮಕ್ಕಳ ಕಥೆ- ಪಂಜೆ ಮಂಗೇಶರಾಯರು ರಚಿತ ಪಠ್
* ಜಮ್ಮು ಕಾಶ್ಮೀರದ ರಾಜ ವಂಶ ಕಾರ್ಕೋಟ ರಾಜಮನೆ ತನ ಪಾಠ, ಅಹೋಮ್ ರಾಜವಂಶ ಪಾಠ ಕೈ ಬಿಟ್ಟಿರೋ ಸರ್ಕಾರ
ಯಾವುದು ಸೇರ್ಪಡೆ?
* ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪರಿಷ್ಕರಣೆಯಲ್ಲಿ ಇದ್ದ ನೆಹರೂ ತಮ್ಮ ಮಗಳಿಗೆ ಬರೆದಿದ್ದ ಪತ್ರದ ಕುರಿತ `ಮಗಳಿಗೆ ಬರೆದ ಪತ್ರ’ ಪಠ್ಯ ಸೇರ್ಪಡೆ.
* ಸಾವಿತ್ರಿಬಾ ಫುಲೆ ಅವರ ಪಠ್ಯ ಮರು ಸೇರ್ಪಡೆ.
ಬೆಂಗಳೂರು: ಜೂನ್ 12ರಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು (SSLC Supplementary Exams) ಪ್ರಾರಂಭವಾಗುತ್ತಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದಿನಿಂದ ಜೂನ್ 19ರ ವರೆಗೆ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯಾದ್ಯಂತ 458 ಕೇಂದ್ರಗಳಲ್ಲಿ ಪರೀಕ್ಷೆ (Exam Center) ನಡೆಯಲಿವೆ. 1,11,689 ವಿದ್ಯಾರ್ಥಿಗಳು (Students) ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಇದನ್ನೂ ಓದಿ: `ಶಕ್ತಿ’ಗೆ ನಮನ – ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ ಏರಿದ ಅಜ್ಜಿ
ಬೆಂಗಳೂರು: ವಿವಾದಿತ ಪಠ್ಯಗಳ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಪೂರ್ಣ ಪಠ್ಯ ಪರಿಷ್ಕರಣೆ ಇಲ್ಲ ಎಂದು ಶಿಕ್ಷಣ ಇಲಾಖೆ (Education Department) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮೌಖಿಕ ಸೂಚನೆ ನೀಡಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಜೊತೆ ಸಿಎಂ ಮಂಗಳವಾರ ಈ ಬಗ್ಗೆ ಕೆಲಕಾಲ ಚರ್ಚೆ ನಡೆಸಿದ್ದಾರೆ. ಹೀಗಾಗಿ ಕೆಲವು ವಿವಾದಿತ ಪಠ್ಯಗಳನ್ನು ಈ ಸಾಲಿನಲ್ಲಿ ಬೋಧನೆಯಿಂದ ಕೈಬಿಡುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಕೆಲ ವಿವಾದಿತ ಪಠ್ಯಗಳನ್ನು ಪಟ್ಟಿ ಮಾಡಿ ಸಲ್ಲಿಸಿ. ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯ ಆಕ್ಷೇಪಿಸಿರುವ ಕೆಲ ಪಠ್ಯಗಳ ಪಟ್ಟಿ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಅಂತಹ ಕೆಲ ಪಠ್ಯಗಳನ್ನು ಮಕ್ಕಳಿಗೆ ಬೋಧನೆ ಮಾಡದಿರಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.