Tag: editor

  • 19 ವರ್ಷದ ಹುಡುಗ ಕೆಜಿಎಫ್- 2 ಎಡಿಟರ್: ಯಶ್ ಫ್ಯಾನ್ ಆಗಿ ಥಿಯೇಟರ್ ಮುಂದೆ ಕುಣೀತಿದ್ದ ಹುಡುಗನಿಗೆ ಸಿಕ್ತು ಭರ್ಜರಿ ಚಾನ್ಸ್

    19 ವರ್ಷದ ಹುಡುಗ ಕೆಜಿಎಫ್- 2 ಎಡಿಟರ್: ಯಶ್ ಫ್ಯಾನ್ ಆಗಿ ಥಿಯೇಟರ್ ಮುಂದೆ ಕುಣೀತಿದ್ದ ಹುಡುಗನಿಗೆ ಸಿಕ್ತು ಭರ್ಜರಿ ಚಾನ್ಸ್

    ಗ ವಿಶ್ವವೇ ಒಂದು ರೀತಿಯಲ್ಲಿ ಕನ್ನಡ ಸಿನಿಮಾ ರಂಗದತ್ತ ತಿರುಗುವಂತೆ ಮಾಡಿದ ಹೆಗ್ಗಳಿಗೆ ಕೆಜಿಎಫ್ 2 ಚಿತ್ರತಂಡದ್ದು. ಬಾಲಿವುಡ್ ಚಿತ್ರರಂಗವು ಒಂದು ರೀತಿಯಲ್ಲಿ ದಕ್ಷಿಣದವರನ್ನು, ಅದರಲ್ಲೂ ಕನ್ನಡ ಸಿನಿಮಾ ರಂಗದವರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಸ್ಯಾಟ್ ಲೈಟ್ ಹಕ್ಕುಗಳು ಸೇರಿದಂತೆ ಕನ್ನಡ ಸಿನಿಮಾಗಳಿಗೆ ಬೆಲೆಯೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಇದೀಗ ಕೆಜಿಎಫ್ ಸಿನಿಮಾ ನಂತರ ಕನ್ನಡ ಸಿನಿಮಾ ರಂಗವನ್ನು ವಿಶ್ಲೇಷಿಸುವುದೇ ರೀತಿಯೇ ಬೇರೆಯಾಗಿದೆ. ಅಷ್ಟರ ಮಟ್ಟಿಗೆ ಕನ್ನಡದ ಚಿತ್ರಗಳು ಪೈಪೋಟಿ ಮಾಡುತ್ತಿವೆ.

    ಕನ್ನಡ ಸಿನಿಮಾವೆಂದರೆ ಕೆಜಿಎಫ್ ಚಿತ್ರ ಎನ್ನುವಂತಹ ವಾತಾವರಣ ಸದ್ಯ ಸೃಷ್ಟಿಯಾಗಿದೆ. ಈ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಡಿಮಾಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಈ ಸಿನಿಮಾದ ಎಡಿಟರ್ (ಸಂಕಲನಕಾರ) ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ 19ರ ವಯಸ್ಸಿನ ಈ ಹುಡುಗ ಟೀಸರ್ ಮೂಲಕ ಈಗಾಗಲೇ ಮೋಡಿ ಮಾಡಿದ್ದಾರೆ. ಸಿನಿಮಾವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದ್ದಾರೆ ಎನ್ನುವ ಮಾತು ಸ್ವತಃ ಚಿತ್ರತಂಡದಿಂದಲೇ ಬಂದಿದೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಅಷ್ಟಕ್ಕೂ ಈ ಹುಡುಗ ಯಾರು? ಏನು ಮಾಡುತ್ತಿದ್ದ? ಮತ್ತು ಕೆಜಿಎಫ್ ತಂಡಕ್ಕೆ ಸೇರ್ಪಡೆಗೊಂಡಿದ್ದು ಹೇಗೆ ಎನ್ನುವುದೇ ಇಂಟ್ರಸ್ಟಿಂಗ್ ಸಂಗತಿ. ಕೆಜಿಎಫ್ 2 ಎಡಿಟ್ ಮಾಡಿದ್ದು ಉಜ್ವಲ್ ಕುಲಕರ್ಣಿ ಎಂಬ ಹತ್ತೊಂಬತ್ತರ ಹರೆಯದ ಹುಡುಗ. ಮೂಲತಃ ಉತ್ತರ ಕರ್ನಾಟಕದವನು. ಯಶ್ ಅವರ ಬಹುದೊಡ್ಡ ಅಭಿಮಾನಿ. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ, ಥಿಯೇಟರ್ ಮುಂದೆ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ ಆ ಸಿನಿಮಾವನ್ನು ಸಂಭ್ರಮಿಸಿದವನು. ಇದೀಗ ಅದೇ ಸಿನಿಮಾದ ಮುಂದುವರೆದ ಭಾಗದಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಕೆಜಿಎಫ್ ಚಾಪ್ಟರ್ ಒಂದು ಬಿಡುಗಡೆಯಾದಾಗ, ಈ ಸಿನಿಮಾದ ಹಾಡೊಂದಕ್ಕೆ ಕೆಜಿಎಫ್ ಚಿತ್ರದ ಕೆಲ ದೃಶ್ಯಗಳನ್ನು ಕತ್ತರಿಸಿ ‘ಫ್ಯಾನ್ ಮೇಡ್ ಸಾಂಗ್’ ಮಾಡಿದ್ದರು ಉಜ್ವಲ್ ಕುಲಕರ್ಣಿ. ಅದನ್ನು ಯೂಟ್ಯೂಬ್ ನಲ್ಲಿ ಹಾಕಿದ್ದ. ಈ ಫ್ಯಾನ್ ಮೇಡ್ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿಗೂ ತಲುಪಿತ್ತು. ತುಂಬಾ ಕ್ರಿಯೇಟಿವ್ ಆಗಿ ಎಡಿಟ್ ಮಾಡಿದ್ದನ್ನು ಗಮನಿಸಿದ ಪ್ರಶಾಂತ್ ಪತ್ನಿ, ಈ ಹುಡುಗನನ್ನು ಹುಡುಕಿಸಿ ಪ್ರಶಾಂತ್ ನೀಲ್ ಗೆ ಪರಿಚಯ ಮಾಡಿಸುತ್ತಾರೆ. ಆ ಹುಡುಗನೊಳಗಿನ ಪ್ರತಿಭೆಯನ್ನು ಕಂಡು ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಸಿಕ್ಕಿರುವ ಈ ದೊಡ್ಡ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಉಜ್ವಲ್, ಅಚ್ಚರಿ ಮೂಡಿಸುವಂತಹ ಟೀಸರ್ ಅನ್ನು ಈಗಾಗಲೇ ಕೊಟ್ಟಿದ್ದಾರೆ. ಸಿನಿಮಾವಂತೂ ಇನ್ನೂ ಬೊಂಬಾಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

  • ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

    ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

    ಬೆಂಗಳೂರು: ತಿಗಳರಪಾಳ್ಯದಲ್ಲಿ ನಡೆದಿರುವ ಐವರು ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಡೀ ಕುಟುಂಬ ಸರ್ವನಾಶಕ್ಕೆ ಮನೆಯಲ್ಲಿ ಆಗಿದ್ದಾದ್ರು ಏನು..?, ಶಂಕರ್ ಮನೆಯಲ್ಲಿ ಕಳೆದ ಭಾನುವಾರ ಐವರ ಮಧ್ಯೆ ಆಗಿದ್ದೇನು…?, 3 ಕೋಟಿ ಮನೆ, ಲಕ್ಷಾಂತರ ರೂ. ದುಡ್ಡಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಇದೀಗ ಸಾವಿನ ಕೊನೆ ಕ್ಷಣಗಳ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಭಾನುವಾರ ನಡೆದಿದ್ದೇನು..?
    ಶಂಕರ್ ಮನೆಯಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಿತ್ಯ ಗಲಾಟೆಗಳು ನಡೆಯುತ್ತಿದ್ದವು. ಶಂಕರ್-ಹೆಂಡತಿ, ಮೂವರು ಮಕ್ಕಳ ಮಧ್ಯೆ ನಿತ್ಯ ಕಲಹಗಳಾಗುತ್ತಿದ್ದವು. ಪತ್ನಿ, ಮಕ್ಕಳ ನಡುವಳಿಕೆ ಬಗ್ಗೆ ಶಂಕರ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 10 ಲಕ್ಷ ಚೀಟಿ ಹಣ ನೀಡುವಂತೆ ಮಗ ಮಧುಸಾಗರ್‍ಗೆ ಶಂಕರ್ ಕೇಳಿದ್ದರು. ಹಣದ ವಿಚಾರವಾಗಿ ಅಪ್ಪ-ಮಗನ ಮಧ್ಯೆ ದೊಡ್ಡದಾಗಿ ವಾಗ್ವಾದ ನಡೆದಿತ್ತು. ಇದನ್ನೂ ಓದಿ: ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್

    ಹಣ ಕೊಡುವುದಾಗಿ ಕರೆಸಿಕೊಂಡು ಮತ್ತೆ ಮಗ ತಗಾದೆ ತೆಗೆದಿದ್ದ. ಸಾಮೂಹಿಕ ಆತ್ಮಹತ್ಯೆಗೆ ಮುನ್ನ ಮನೆಯಲ್ಲಿ ರಣರಂಗವೇ ನಡೆದು ಹೋಗಿತ್ತು. ತಂದೆ- ಮಗನ ನಡುವೆ ಆರಂಭದ ಜಗಳ ಇಡೀ ಮನೆಗೆ ಅಂಟಿಕೊಂಡಿತ್ತು. ಕೊನೆಗೆ ಶಂಕರ್ ಒಬ್ಬರನ್ನ ಒಂದು ಕಡೆ ಮಾಡಿ ಎಲ್ಲರೂ ಶಂಕರ್ ಮೇಲೆ ಮುಗಿಬಿದ್ದಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಶಂಕರ್ ‘ಹಾಳಾಗ್ ಹೋಗ್ರಿ’ ಎಂದು ಮನೆಯಲ್ಲಿದ್ದ ಬಟ್ಟೆಗಳನ್ನ ತುಂಬಿಕೊಂಡು ಶಂಕರ್ ಮನೆಯಿಂದ ಹೊರ ಬಂದಿದ್ದರು. ಇದನ್ನೂ ಓದಿ: ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್, ಕುಡುಕ – ಡೆತ್‍ನೋಟ್‍ನಲ್ಲಿ ಮಧುಸಾಗರ್ ಗಂಭೀರ ಆರೋಪ

    ಬಟ್ಟೆ ಬರೆಯೊಂದಿಗೆ ಶಂಕರ್ ಮೈಸೂರು ಕಡೆ ಹೊರಟು ಹೋಗಿದ್ದರು. ಶಂಕರ್ ಮನೆ ಬಿಟ್ಟು ಹೋಗಿ ಮೂರ್ನಾಲ್ಕು ದಿನದಲ್ಲಿ ಇಡೀ ಮನೆ ಮಂದಿಯೆಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನಡೆದ ವೇಳೆ ಶಂಕರ್ ಹೇಳಿದು ಅದೊಂದು ಮಾತು ಎಲ್ಲರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತಾ? ‘ಹಾಳಾಗಿ ಹೋಗಿ ನೀವೆಲ್ಲಾ’ ಎಂದು ಶಾಪ ಹಾಕಿದ್ದರಿಂದ ರೋಸಿ ಹೋಗಿ ಆತ್ಮಹತ್ಯೆ ಅಂತ ನಿರ್ಧಾರ ಮಾಡಿಕೊಂಟ್ರಾ ಅನ್ನೋದು ಸದ್ಯ ದೊಡ್ಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು

  • ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆಗೆ ಕೋರ್ಟ್ ನಿಂದ ಮಧ್ಯಂತರ ರಿಲೀಫ್

    ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆಗೆ ಕೋರ್ಟ್ ನಿಂದ ಮಧ್ಯಂತರ ರಿಲೀಫ್

    ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರ ಜಾಮೀನು ಅರ್ಜಿ ವಿಚಾರಣೆ 65ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಿತು.

    ಡಿಸೆಂಬರ್ 16 ರ ವರೆಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇಂದಿಗೆ ಮಧ್ಯಂತರ ಜಾಮೀನು ಅರ್ಜಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಮಧ್ಯಂತರ ಜಾಮೀನು ವಿಸ್ತರಿಸದಂತೆ ಸಿಸಿಬಿ ವಕೀಲರು ಮನವಿ ಮಾಡಿದ್ದರು.

    ಇನ್ನು ತಮ್ಮ ವಕೀಲರ ಜೊತೆ ಕೋರ್ಟ್ ಗೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೂಡ ಹಾಜರಾಗಿದ್ದರು. ಇನ್ನು ಸರ್ಕಾರಿ ವಕೀಲರು ಮುಖ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಸಮಯಾವಕಾಶ ಕೇಳಿದ್ದಾರೆ.

    ರವಿ ಬೆಳಗೆರೆಗೆ ಆರೋಗ್ಯ ಚೆನ್ನಾಗಿದೆ. ಹಾಗಾಗಿ ಅವರಿಗೆ ಮಧ್ಯಂತರ ಜಾಮಿನು ವಿಸ್ತರಿಸಬೇಡಿ ಅಂತ ಕೋರ್ಟ್ ನಲ್ಲಿ ಸಿಸಿಬಿ ವಕೀಲರು ವಾದ ಮಂಡಿಸಿದ್ರು. ರವಿಬೆಳಗೆರೆ ಅವರ ಆರೊಗ್ಯದ ಬಗ್ಗೆ ರಿಪೋರ್ಟ್ ಗಳು ಇದ್ದಾವೆ ಹೊರತು, ಆರೋಗ್ಯ ಸರಿಯಿಲ್ಲ ಅಂತ ಇತ್ತೀಚಿನ ಯಾವುದೇ ರಿಪೋರ್ಟ್ ಅವರ ಬಳಿ ಇಲ್ಲ. ಮಧ್ಯಂತರ ಜಾಮೀನಿಗಾಗಿ ಸುಳ್ಳು ಅನಾರೋಗ್ಯದ ಸರ್ಟಿಫಿಕೇಟ್ ಗಳನ್ನು ನೀಡುತ್ತಿದ್ದಾರೆ ಅಂತ ವಕೀಲರು ವಾದಿಸಿದ್ರು.

    ರವಿಬೆಳಗೆರೆ ಮಧ್ಯಂತರ ಜಾಮೀನು ಅವಧಿಯನ್ನು ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಮಧುಸೂದನ್ ಅವರು ಡಿ. 18ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

  • Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ರವಿ ಬೆಳಗೆರೆ ಬಂಧನವಾಗಿದೆ. ಆದರೆ ರವಿ ಬೆಳಗೆರೆ ಬಂಧನಕ್ಕೆ ಏನೆಲ್ಲ ಕಸರತ್ತು ನಡೆದಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಹೌದು, ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

    ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು.

    ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಗೌರಿ ಹತ್ಯೆಯ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಗೌರಿ ಹತ್ಯೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಆದರೆ ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾನೆ. ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಗಳನ್ನು ಕೆದಕಿದಾಗ ಆತ ನಾನು ಪಿಸ್ತೂಲ್ ಮಾರಾಟ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿಗೆ ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ನೀಡಿದ್ದೆ ಎಂದು ತಿಳಿಸಿದ್ದಾನೆ.

    ಈ ಮಾಹಿತಿ ಆಧಾರದಲ್ಲಿ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇವರಿಬ್ಬರು ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ. 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಸುನೀಲ್ ಮನೆಯಲ್ಲಿ ಇಲ್ಲದ ಕಾರಣ ಹತ್ಯೆ ನಡೆಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ ಸುನೀಲ್ ಮನೆ ಮುಂದೆ ಸಿಸಿಟಿವಿ ಇದೆ ಎಂದು ಬೆಳಗೆರೆಗೆ ತಿಳಿಸಿದ್ದೆವು. ಈ ವಿಚಾರ ತಿಳಿದು ರವಿ ಬೆಳಗೆರೆ ಕೆಂಡಾಮಂಡಲಗೊಂಡು ಇನ್ನು ಒಂದು ತಿಂಗಳು ಈ ಕಡೆ ಬರುವುದೇ ಬೇಡ, ಒಂದು ತಿಂಗಳ ಕಾಲ ಡಿವಿಆರ್ ನಲ್ಲಿ ಡೇಟಾ ಸೇವ್ ಆಗಿರುತ್ತದೆ. ಹೀಗಾಗಿ ಈ ಕಡೆ ತಲೆಹಾಕಬೇಡಿ. ಒಂದು ತಿಂಗಳು ಬಿಟ್ಟು ಆತನನ್ನು ಮುಗಿಸಿ ಎಂದಿದ್ದರು ಎಂದು ಇವರಿಬ್ಬರು ತಿಳಿಸಿದ್ದಾರೆ.

    ರವಿ ಬೆಳಗೆರೆ ಸಾರಥ್ಯದಲ್ಲಿ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ತಿಳಿಯುತ್ತಿದ್ದಂತೆ ಖಾಕಿಗಳು ಒಮ್ಮೆ ಶಾಕ್ ಆಗಿದ್ದಾರೆ. ಪ್ರಭಾವಿ ಪತ್ರಕರ್ತನಾಗಿರುವ ಬೆಳಗೆರೆಯನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗಿ ಡಿಜಿಪಿ ನೀಲಮಣಿ ರಾಜು ಅವರನ್ನು ಭೇಟಿ ಮಾಡಿ ಸ್ಫೋಟಕ ಸುದ್ದಿಯನ್ನು ತನಿಖಾ ಅಧಿಕಾರಿಗಳು ನೀಡಿದ್ದಾರೆ. ಬೆಳಗೆರೆ ಹೆಸರನ್ನು ಕೇಳಿ ನೀಲಮಣಿ ರಾಜು ಅವರು ಕ್ಷಣ ಬೆಚ್ಚಿ ಬಿದ್ದು ಬಂಧನ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಮಾಹಿತಿಯನ್ನು ರವಾನಿಸುತ್ತಾರೆ. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಕೆಂಪಯ್ಯ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿಸಲು ಮುಂದಾಗುತ್ತಾರೆ. ಈ ವೇಳೆ ಸಿಎಂ ತಮ್ಮನ ಮಗನ ಮದುವೆಗಾಗಿ ಮೈಸೂರಿಗೆ ತೆರಳಿದ್ದರು. ಪ್ರಕರಣ ಗಂಭೀರವಾಗಿರುವ ಇರುವ ಕಾರಣ ಕೆಂಪಯ್ಯ ಈ ವಿಚಾರವನ್ನು ಫೋನಿನಲ್ಲಿ ಹೇಳಲು ಇಚ್ಚಿಸದೇ ನೇರವಾಗಿ ಸಿಎಂ ಭೇಟಿಯಾಗಲು ನವೆಂಬರ್ 28 ರಂದು ಮೈಸೂರಿಗೆ ತೆರಳುತ್ತಾರೆ.

    ಕೆಂಪಯ್ಯ ಮೈಸೂರಿಗೆ ಭೇಟಿ ನೀಡಿದಾಗ ಸಹೋದರನ ಮದುವೆಯಲ್ಲಿ ಊಟ ಮಾಡುತ್ತಾ ಸಿಎಂ ಕುಳಿದ್ದರು. ಊಟದ ಬಳಿಕ ಕೆಂಪಯ್ಯ ಬೆಳಗೆರೆ ಸುಪಾರಿ ನೀಡಿರುವ ವಿಚಾರವನ್ನು ತಿಳಿಸುತ್ತಾರೆ. “ಹೌದಾ. ಇದು ನಿಜವೇ ಏನು ಹೇಳುತ್ತಿದ್ದೀರಿ?” ಎಂದು ಸಿಎಂ ಕೆಂಪಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮುಂದೆ ಏನು ಮಾಡುವುದು ಎಂದು ಕೆಂಪಯ್ಯ ಸಿಎಂ ಅವರಲ್ಲಿ ಕೇಳಿದ್ದಾರೆ. ಕೆಲ ನಿಮಿಷ ಯೋಚಿಸಿ ಸಿಎಂ, ಮುಂದೆ ಹೋಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನಂತರ ಬಂಧಿಸಿ ಎಂದು ಸೂಚನೆ ಕೊಟ್ಟಿದ್ದಾರೆ.

    ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಚುರುಕೊಂಡ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಗುರುವಾರ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಬಂಧಿಸಿ ಶುಕ್ರವಾರ ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ

    ಒಟ್ಟಿನಲ್ಲಿ ಗೌರಿ ಹತ್ಯೆಯ ತನಿಖೆಯ ವೇಳೆ ಮತ್ತೊಂದು ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ರವಿ ಬೆಳಗೆರೆ ಕ್ರೈಂ ಪತ್ರಕರ್ತರಾಗಿರುವ ಕಾರಣ ಅವರಿಗೆ ಮತ್ತಷ್ಟು ಸುಪಾರಿ ಕಿಲ್ಲರ್ಸ್ ಗಳ ಬಗ್ಗೆ ಮಾಹಿತಿ ಇರಬಹುದು ಎನ್ನುವ ಅನುಮಾನ ಈಗ ಪೊಲೀಸರದ್ದು. ಹೀಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

     

  • ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಬೆಂಗಳೂರು: ಗೌರಿ ಹತ್ಯೆಯ ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ರಕರ್ತರೊಬ್ಬರ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮುಖ್ಯಸ್ಥ ಸತೀಶ್ ಕುಮಾರ್ ತಿಳಿಸಿದ್ದಾರೆ. ಶಶಿಧರ್ಮುಂಡೇವಾಡಗಿ  ಸ್ನೇಹಿತರಿಗೆ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಬಂಧಿಸಿತ್ತು. ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎನ್ನಲಾಗಿದೆ.

    ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ಬಂಧಿಸಿದ್ದ ಪೊಲೀಸರು, ಯಲಹಂಕ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದರು. ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದರೂ ಎಸ್‍ಐಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿದೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿತ್ತು.

    ಸದ್ಯ ಸುಪಾರಿ ಕಿಲ್ಲರ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜೊತೆಗೆ ಆತನಿಂದ ವಶಕ್ಕೆ ಪಡೆದ ರಿವಾಲ್ವರ್ ತಪಾಸಣೆ ಮಾಡ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಂಟ್ರಿ ಮೇಡ್ ರಿವಾಲ್ವರ್ ರವಾನೆ ಮಾಡಲಾಗಿದೆ. ಸುಪಾರಿ ಕಿಲ್ಲರ್ ವಶಕ್ಕೆ ಪಡೆದು ಪೊಲೀಸರು ನಡೆಸಿದ ವಿಚಾರಣೆ ಇನ್ನಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿಯನ್ನೂ ಈತ ನೀಡಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ.

    ಸುಪಾರಿ ಕಿಲ್ಲರ್ ವಶಕ್ಕೆ ಪಡೆದ ಸುದ್ದಿಯನ್ನು ಪಬ್ಲಿಕ್ ಟಿವಿ ಶನಿವಾರ ಮೊದಲು ಬ್ರೇಕ್ ಮಾಡಿತ್ತು. ಆದರೆ ಕೆಲ ಮಾಧ್ಯಮಗಳು ಈ ವರದಿಯನ್ನು ಅಲ್ಲಗೆಳೆದಿತ್ತು.