Tag: Edit

  • ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು – ವಾಟ್ಸಪ್‌ನಲ್ಲಿ ಹೊಸ ಆಯ್ಕೆ

    ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು – ವಾಟ್ಸಪ್‌ನಲ್ಲಿ ಹೊಸ ಆಯ್ಕೆ

    ವಾಷಿಂಗ್ಟನ್: ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ (Whatsapp) ಇದೀಗ ಅತ್ಯಂತ ನಿರೀಕ್ಷಿತ ಫೀಚರ್ (Feature) ಒಂದನ್ನು ಹೊರ ತಂದಿದೆ. ಇದೀಗ ಬಳಕೆದಾರರು ತಮ್ಮ ಸ್ನೇಹಿತರಿಗೆ ತಪ್ಪಾಗಿ ಕಳುಹಿಸಿದ ಸಂದೇಶವನ್ನು (Message)  ಎಡಿಟ್ (Edit) ಮಾಡಲು ಹೊಸ ಆಯ್ಕೆಯನ್ನು ವಾಟ್ಸಪ್ ಪರಿಚಯಿಸಿದೆ.

    ಈ ಹಿಂದೆ ವಾಟ್ಸಪ್‌ನಲ್ಲಿ ಬಳಕೆದಾರರು ತಪ್ಪಾಗಿ ಸಂದೇಶವನ್ನು ಕಳುಹಿಸಿದ್ದಲ್ಲಿ ಅದನ್ನು ನೇರವಾಗಿ ಡಿಲೀಟ್ ಮಾಡಲು ಆಯ್ಕೆ ನೀಡಲಾಗಿತ್ತು. ಇದೀಗ ಬಳಕೆದಾರರು ಆ ಸಂದೇಶವನ್ನು ಅಳಿಸುವ ಅಗತ್ಯವಿಲ್ಲ. ಸಂದೇಶವನ್ನು ಎಡಿಟ್ ಮಾಡುವ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಬಹುದಾಗಿದೆ.

    ವಾಟ್ಸಪ್ ಕಳುಹಿಸಿದ ಸಂದೇಶಗಳಲ್ಲಿ ಅಕ್ಷರ ತಪ್ಪುಗಳಿಂದ ಹಿಡಿದು ಹೆಚ್ಚಿನ ಪದಗಳನ್ನು ಸೇರಿಸುವವರೆಗೂ ಎಡಿಟ್ ಮಾಡಲು ಅವಕಾಶ ನೀಡುತ್ತಿದೆ. ಸಂದೇಶಗಳನ್ನು ಎಡಿಟ್ ಮಾಡಲು ಸರಳವಾಗಿ ಕಳುಹಿಸಿದ ಸಂದೇಶದ ಮೇಲೆ ದೀರ್ಘವಾಗಿ ಒತ್ತಿ. ನಂತರ ಮೆನುವಿನಲ್ಲಿ ಕಾಣಿಸುವ ಎಡಿಟ್ ಆಯ್ಕೆಯನ್ನು ಬಳಸಿದರೆ ಸುಲಭವಾಗಿ ಸಂದೇಶವನ್ನು ಸರಿಪಡಿಸಬಹುದು. ಇದನ್ನೂ ಓದಿ: ಕೆಲ Gmail ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ Google!

    ಒಂದು ಸಂದೇಶವನ್ನು ಕಳುಹಿಸಿದ 15 ನಿಮಿಷಗಳ ವರೆಗೆ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ಸಂದೇಶವನ್ನು ಎಡಿಟ್ ಮಾಡಿದ್ದಲ್ಲಿ, ಅದರ ಪಕ್ಕದಲ್ಲಿ ‘Edited’ (ಎಡಿಟ್ ಮಾಡಲಾಗಿದೆ) ಎಂಬುದನ್ನು ಸೂಚಿಸುತ್ತದೆ. ಇದು ಸಂದೇಶವನ್ನು ಎಡಿಟ್ ಮಾಡಲಾಗಿದೆಯೇ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ.

    ಈಗಾಗಲೇ ವಾಟ್ಸಪ್ ಜಾಗತಿಕವಾಗಿ ಬಳಕೆದಾರರಿಗೆ ಈ ಫೀಚರ್ ಅನ್ನು ಹೊರ ತರಲು ಪ್ರಾರಂಭಿಸಿದೆ. ಮುಂದಿನ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್

  • ಪತ್ನಿಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಜಿ. ಮಿ ಇಂಡಿಯಾ

    ಪತ್ನಿಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಜಿ. ಮಿ ಇಂಡಿಯಾ

    ಮುಂಬೈ: ಮಾಜಿ ಮಿ. ಇಂಡಿಯಾ ಹಾಗೂ ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಅಶ್ಲೀಲವಾಗಿ ಎಡಿಟ್ ಮಾಡಿರುವ ತನ್ನ ಪತ್ನಿಯ ಫೋಟೋವನ್ನು ಸಲ್ಲಿಸಿ ಸ್ವತಃ ತೊಂದರೆಗೆ ಸಿಲುಕಿಕೊಂಡಿದ್ದಾನೆ.

    ಫಿಟ್ನೆಸ್ ಟ್ರೈನರ್ ಹಾಗೂ ಮಹಿಳೆ 2013ರಲ್ಲಿ ಜನವರಿ ತಿಂಗಳಿನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಈಗ ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಇಬ್ಬರು ವಿಚ್ಛೇದನ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ವಿಚ್ಛೇದನ ಅರ್ಜಿ ವಿಚಾರಣೆಗೆ ಹಾಜರಾಗುವಂತೆ ಪತಿ, ಪತ್ನಿಗೆ ಕೊರ್ಟ್ ಸೂಚಿಸಿತ್ತು. ಈ ವೇಳೆ ಪತಿ ಅಶ್ಲೀಲವಾಗಿ ಎಡಿಟ್ ಮಾಡಿರುವ ತನ್ನ ಪತ್ನಿಯ ಫೋಟೋವನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದನು.

    ನನ್ನ ಪತಿ ಅಶ್ಲೀಲ ಫೋಟೋ ನ್ಯಾಯಾಲಯಕ್ಕೆ ಸಲ್ಲಿಸಿರುವುದು ನನಗೆ ಆಘಾತವಾಗಿದೆ. ಬೇರೆ ಮಹಿಳೆ ನಗ್ನವಾಗಿರುವ ಫೋಟೋಗೆ ನನ್ನ ಮುಖ ಹಾಕಿ ಎಡಿಟ್ ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಳು. ಆಗ ಪತಿ ಈ ಫೋಟೋವನ್ನು ಎಡಿಟ್ ಮಾಡಿಲ್ಲ. ನಾನು ನನ್ನ ಇನ್‍ಸ್ಟಾಗ್ರಾಂ ಖಾತೆ ನೋಡುತ್ತಿದ್ದಾಗ ನನಗೆ ಈ ಫೋಟೋ ದೊರೆತಿದೆ ಎಂದು ವಾದ ಮಾಡಿದ್ದಾನೆ. ಸದ್ಯ ಆ ಫೋಟೋದ ಸತ್ಯಾಸತ್ಯತೆಗಾಗಿ ನ್ಯಾಯಾಲಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ.

    ಈ ಪ್ರಕರಣದ ಬಗ್ಗೆ ಪೊಲೀಸರು ಫಿಟ್ನೆಸ್ ಟ್ರೈನರ್ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv