Tag: Eden Gardens

  • ‌IPL 2025 | ಆರ್‌ಸಿಬಿ vs ಕೆಕೆಆರ್‌ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ

    ‌IPL 2025 | ಆರ್‌ಸಿಬಿ vs ಕೆಕೆಆರ್‌ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ

    ಕೋಲ್ಕತ್ತಾ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಶನಿವಾರ 7:30ಕ್ಕೆ ಆರ್‌ಸಿಬಿ ಮತ್ತು ಕೆಕೆಆರ್‌ ನಡುವೆ ಮೊದಲ ಪಂದ್ಯ ನಡೆಯಲಿದೆ. ಆದ್ರೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಈಡನ್‌ಗಾರ್ಡನ್‌ನಲ್ಲಿ ನಿಗದಿಯಾಗಿರುವ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

    18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಪ್ರತಿಷ್ಠಿತ ಮೈದಾನದಲ್ಲಿ ಚಾಲನೆ ನೀಡಲು ಐಪಿಎಲ್‌ ಮಂಡಳಿ ಹಾಗೂ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದ್ರೆ ಹವಾಮಾನ ಇಲಾಖೆಯ ಮುನ್ಸೂಚನೆ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಬಹುದು. ಇದನ್ನೂ ಓದಿ: ಟಿಬಿ ಜಾಗೃತಿ ಕ್ರಿಕೆಟ್ ಆಡಲಿದ್ದಾರೆ ಬಿಗ್ ಬಿ, ಎಸ್‌ಆರ್‌ಕೆ, ಸಲ್ಮಾನ್ ಖಾನ್

    ಈ ಬಾರಿಯು ಐಪಿಎಲ್ ಟೂರ್ನಿಯು ಮಾ.22ರಿಂದ ಕೋಲ್ಕತಾದಲ್ಲಿ ಆರಂಭವಾಗಿ ಮೇ 25ರಂದು ಕೋಲ್ಕತ್ತಾದಲ್ಲಿಯೇ ಕೊನೆಯಾಗಲಿದೆ. ಮೇ 18ರ ತನಕ ಲೀಗ್ ಹಂತದ ಪಂದ್ಯ ನಡೆಯಲಿದ್ದು, ಮೇ 20ರಂದು ಮೊದಲ ಕ್ವಾಲಿಫೈಯರ್, ಮೇ 21ರಂದು ಎಲಿಮಿನೇಟರ್ ಸುತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಮೇ 23ರಂದು ಕ್ವಾಲಿಫೈಯರ್-2 ಕೋಲ್ಕತಾದಲ್ಲಿ ನಿಗದಿಯಾಗಿದೆ. ಒಟ್ಟು 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, 13 ನಗರಗಳಲ್ಲಿ 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಡಬಲ್‌ ಹೆಡರ್‌ ಪಂದ್ಯಗಳು ಇರುವಾಗ ಮಧ್ಯಾಹ್ನದ ಪಂದ್ಯ 3:30 ಹಾಗೂ ರಾತ್ರಿ ಪಂದ್ಯ 7:30ಕ್ಕೆ ಆರಂಭವಾಗಲಿದೆ.

    ಈಡನ್ ಗಾರ್ಡನ್ಸ್ ಸ್ಟೇಡಿಯಂ ಸುತ್ತಮುತ್ತ ಭಾರೀ ಮೋಡ ಕವಿದಿದ್ದು, ಗುರುವಾರ ಮುನ್ನಚ್ಚರಿಕೆಯ ಕ್ರಮವಾಗಿ ಮೈದಾನದ ಸಿಬ್ಬಂದಿ ಆಡುವ ಪ್ರದೇಶದಲ್ಲಿ ಹೊದಿಕೆಗಳನ್ನು ಹಾಸಿದ್ದಾರೆ. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಪ್ರದೇಶದಲ್ಲಿ ‘ಆರೆಂಜ್ ಅಲರ್ಟ್‌‘ಘೋಷಿಸಿದೆ. ಶನಿವಾರದ ತನಕ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಹಗುರ ಹಾಗೂ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಮುನ್ಸೂಚನೆ ನೀಡಿದೆ. ಇಂದು ಸಹ ಕೋಲ್ಕತ್ತಾದಲ್ಲಿ ಮಳೆಯಾಗಿದ್ದರಿಂದ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಐಪಿಎಲ್‌ನ ಉದ್ಘಾಟನಾ ದಿನವಾದ ಮಾರ್ಚ್ 22ರಂದು ಗರಿಷ್ಠ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಂದ್ಯ ರದ್ದಾದ್ರೆ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

  • ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ಭಾನುವಾರ ನಡೆಯತ್ತಿರುವ ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯದ ಟಿಕೆಟ್‌ಗಳನ್ನು‌ ಬ್ಲ್ಯಾಕ್ ಮಾರ್ಕೆಟಿಂಗ್ ಮಾಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಈವೆಂಟ್‌ನ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ನೀಡುವಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರಿಗೆ ನೋಟಿಸ್ (Notice) ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶನಿವಾರ ಸಂಜೆ ತಡವಾಗಿ ಹೊರಡಿಸಲಾದ ನೋಟಿಸ್‌ನಲ್ಲಿ, ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್ (Black Marketing) ಕುರಿತು ದೂರುಗಳ ತನಿಖೆ ನಡೆಸುತ್ತಿರುವ ಮೈದಾನ ಪೊಲೀಸ್ ಠಾಣೆಯ ಅಧಿಕಾರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಾನು, ಧೋನಿ ಆತ್ಮೀಯ ಸ್ನೇಹಿತರಲ್ಲ: ಯುವರಾಜ್‌ ಸಿಂಗ್‌

    ಮಂಗಳವಾರದ ಕೆಲಸದ ಸಮಯದಲ್ಲಿ ಮೈದಾನ ಪಿಎಸ್‌ನ ತನಿಖಾಧಿಕಾರಿಗೆ ವೈಯಕ್ತಿಕವಾಗಿ ಅಥವಾ ಅವರ ಸಂಸ್ಥೆಯ ಯಾವುದೇ ಸಮರ್ಥ ವ್ಯಕ್ತಿಯ ಮೂಲಕ ಟಿಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ಬ್ಲ್ಯಾಕ್ ಮಾರ್ಕೆಟಿಂಗ್ ಕುರಿತು ಕೋಲ್ಕತ್ತಾ ಪೊಲೀಸರು ಇದುವರೆಗೆ 19 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 108 ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

  • ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್‌ (ICC World Cup 2023) ಟೂರ್ನಿಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ನಡೆಯುವ ಲೀಗ್‌ ಹಾಗೂ ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌ ದರವನ್ನು ಬಹಿರಂಗಪಡಿಸಲಾಗಿದೆ.

    ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು 1 ಸೆಮಿಫೈನಲ್‌ ಸೇರಿದಂತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್​ (CAB) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ (Snehashis Ganguly) ವಿಶ್ವಕಪ್ ಪಂದ್ಯಗಳ ಟಿಕೆಟ್​ಗಳ ಬೆಲೆಯನ್ನ ಘೋಷಿಸಿದ್ದಾರೆ. ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲ ಪಂದ್ಯಗಳಿಗೆ 650 ರೂ.ಗಳಿಂದ 3,000 ರೂ.ಗಳವರೆಗೆ ಬೆಲೆಗಳು ಇರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಐತಿಹಾಸಿಕ ಮೈದಾನವು ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಭಾರತ-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು 2ನೇ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಯಾವ ಪಂದ್ಯಕ್ಕೆ ಎಷ್ಟು ಶುಲ್ಕ?
    ಮೊದಲ ಪಂದ್ಯಕ್ಕೆ (ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ) 650 ರೂ., 4ನೇ ಪಂದ್ಯಕ್ಕೆ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ಮತ್ತು 2ನೇ ಪಂದ್ಯಕ್ಕೆ (ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ) 800 ರೂ.ಗಳಿಂದ ಪ್ರಾರಂಭವಾಗಿ 2,200 ರೂ.ಗಳವರೆಗೆ ಟಿಕೆಟ್ ದರ ನಿಗದಿಮಾಡಲಾಗಿದೆ. ಮತ್ತೊಂದೆಡೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯದ ಟಿಕೆಟ್ ದರ 900-3,000 ರೂ.ವರೆಗೆ ಇರಲಿದೆ.

    ಅಕ್ಟೋಬರ್ 28 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮೇಲಿನ ಹಂತದ ಸೀಟುಗಳಿಗೆ ಕನಿಷ್ಠ ಟಿಕೆಟ್ ದರ 650 ರೂ. ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳ ಬೆಲೆ 1,000 ರೂ ಆಗಿದ್ದರೆ, ಬಿ, ಸಿ, ಕೆ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳ ಬೆಲೆ 1500 ರೂ. ನಿಗದಿಯಾಗಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ, ಹಾಗೆಯೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್ ದರವು ಮೇಲಿನ ಹಂತಗಳಿಗೆ 800 ರೂ. ಡಿ ಮತ್ತು ಎಚ್ ಬ್ಲಾಕ್ ಟಿಕೆಟ್‌ಗಳು ರೂ 1200, ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳು ರೂ 2,000 ಮತ್ತು ಬಿ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳು ಗರಿಷ್ಠ ರೂ 2,200ಗೆ ಲಭ್ಯವಿರುತ್ತವೆ.

    2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ, ಕೋಲ್ಕತಾದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಗಳಿಂದಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಳ ಮುಖಾಮುಖಿ ಪಂದ್ಯಕ್ಕೆ ಆತಿಥ್ಯ ವಹಿಸಲು ವಿಫಲಗೊಂಡಿತ್ತು. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಇಂಡೋ-ಪಾಕ್ ಕದನ ಕೂಡ ನಡೆಯಬಹುದು:
    ಈಡನ್‌ ಗಾರ್ಡನ್ಸ್‌ನ 5 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವೂ ಸೇರಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆದರೆ ನವೆಂಬರ್ 16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಿಗದಿಯಾಗಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆಯುವ ಪಾಕಿಸ್ತಾನ (Pakistan) ಪಂದ್ಯಗಳಿಗೆ ಭಾರೀ ಬಿಗಿ ಭದ್ರತೆ ಒದಗಿಸುವುದಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ (Snehasish Ganguly) ತಿಳಿಸಿದ್ದಾರೆ.

    ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿ ಒಟ್ಟು 5 ಮಹಾನಗರಗಳಲ್ಲಿ ಪಾಕ್‌ನ 9 ಪಂದ್ಯಗಳು ನಡೆಯಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ (Eden Gardens) ಪಾಕ್ ತಂಡವು ಅಕ್ಟೋಬರ್ 31ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 12 ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಇದರೊಂದಿಗೆ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ (Team India), ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಕಣಕ್ಕಿಳಿಯಲಿದೆ.

    ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ, ಈಡನ್ ಗಾರ್ಡನ್‌ನಲ್ಲಿ ನಡೆಯುವ ಪಾಕ್ ಪಂದ್ಯಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ: ವಾಸಿಂ ಅಕ್ರಂ

    BCCI ಮತ್ತು ICC ತೆಗೆದುಕೊಂಡ ನಿರ್ಧಾರದಿಂದ ಸಂತೋಷವಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಐಸಿಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ನಾಲ್ಕು ತಿಂಗಳಿಂದ ನಾನು ಉತ್ತಮ ಪಂದ್ಯಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಜಯ್ ಶಾ ಅವರು ಈಡನ್ ಗಾರ್ಡನ್ ಬಗ್ಗೆ ಉತ್ತಮ ದೃಷ್ಟಿಕೋನ ಹೊದಿದ್ದು, ಅದರಂತೆ ಉತ್ತಮ ಪಂದ್ಯಗಳನ್ನೇ ಇಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ಈ ಹಿಂದೆಯೂ ನಾವು ಭಾರತ ಮತ್ತು ಪಾಕ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದೇವೆ. ಈ ಬಾರಿ ಪಾಕಿಸ್ತಾನ ತನ್ನ ಎರಡು ಪಂದ್ಯಗಳನ್ನ ಈಡನ್ ಗಾರ್ಡನ್‌ನಲ್ಲಿ ಆಡಲಿದೆ. ಈ ಪಂದ್ಯಗಳು ಅತ್ಯಂತ ಕಠಿಣವಾಗಿರಲಿವೆ. ಈಗಾಗಲೇ ಐಪಿಎಲ್‌ನಲ್ಲಿ ಅತಿಹೆಚ್ಚು ಪ್ರೇಕ್ಷಕರನ್ನ ಈ ಅಂಗಳದಲ್ಲಿ ಕಂಡಿರುವುದರಿಂದ ಯಾವುದೇ ರೀತಿಯ ಸವಾಲುಗಳನ್ನು ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಈ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ಪಾಕಿಸ್ತಾನ ತಂಡಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಹಿಂದೆಯೂ ಪಾಕ್ ತಂಡ ಕೋಲ್ಕತ್ತಾದಲ್ಲಿ ಆಡಿದೆ. ಮೊದಲ ಆದ್ಯತೆ ಕೋಲ್ಕತ್ತಾಗೆ ನೀಡಲಿದ್ದು, ನಂತರದಲ್ಲಿ ಚೆನ್ನೈ ಹಾಗೂ ಬೆಂಗಳೂರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಭದ್ರತೆ ಒದಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ICC ODI World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

    ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೋಲ್ಕತ್ತಾ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಸಾಮಾನ್ಯ ಪಂದ್ಯಗಳಿಗಿಂತ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಈ ಪಂದ್ಯಗಳಿಗೆ ಒದಗಿಸಲಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಐತಿಹಾಸಿಕ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮದುಮಗಳಂತೆ ಸಿಂಗಾರಗೊಂಡಿದೆ.

    ಸೌರವ್ ಗಂಗೂಲಿ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಅನುಮತಿ ನೀಡಿದ್ದಾರೆ. ನವೆಂಬರ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳೆರಡು ಮೊದಲ ಬಾರಿಗೆ ಪಿಂಕ್ ಬಾಲ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧವಾಗಿವೆ.

    ಈ ಐತಿಹಾಸಿಕ ಪಂದ್ಯಕ್ಕೆ ಮೈದಾನವನ್ನು ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಸಂಪೂರ್ಣ ಸಿದ್ಧಗೊಳಿಸಿದ್ದು, ಬಣ್ಣ ಬಣ್ಣದ ಲೈಟುಗಳಿಂದ ಅಲಂಕಾರ ಮಾಡಲಾಗಿದೆ. ಪಿಂಕ್ ಬಾಲ್ ಪಂದ್ಯಕ್ಕೆ ಮದುಮಗಳಂತೆ ಸಿಂಗಾರಗೊಂಡಿರುವ ಈಡನ್ ಗಾರ್ಡನ್ಸ್ ಮೈದಾನದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಪಿಂಕ್ ಬಾಲ್ ಪಂದ್ಯಕ್ಕೆ ನಾವು ಸಿದ್ಧ ಎಂದು ಬರೆದುಕೊಂಡಿದೆ.

    ಕೋಲ್ಕತಾದಲ್ಲಿ ನಡೆಯುವ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯವನ್ನು ನೋಡಲು ಮುಂಗಡವಾಗಿಯೇ ಟೆಕೆಟ್ ಬುಕ್ ಮಾಡಿದ್ದಾರೆ. ಈ ಪಂದ್ಯದ ನಾಲ್ಕು ದಿನದ ಟೆಕೆಟ್ ಆಗಾಲೇ ಸೋಲ್ಡ್ ಔಟ್ ಆಗಿವೆ ಎಂದು ಬಿಸಿಸಿಐ ಅಧಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    ಶುಕ್ರವಾರ ನಡೆಯುವ ಪಂದ್ಯವನ್ನು ಟಾಸ್‍ಗೂ ಮುನ್ನ ಭಾರತೀಯ ಸೇನೆಯ ಪ್ಯಾರಾಟ್ರೂಪರ್ ಗಳು ಮೈದಾನದ ಮೇಲೆ ಹಾರಿ ನಂತರ ಎರಡು ತಂಡದ ನಾಯಕರಿಗೆ ಪಿಂಕ್ ಬಾಲ್‍ನ್ನು ಹಸ್ತಾಂತರ ಮಾಡುವ ಮೂಲಕ ಆರಂಭ ಮಾಡಲು ಯೋಚನೆ ಮಾಡಲಾಗಿದೆ. ಇದಾದ ನಂತರದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಡನ್ ಮೈದಾನದ ಬೆಲ್ ಹೊಡೆಯುವ ಪಂದ್ಯಕ್ಕೆ ಅಧಿಕೃತ ಆರಂಭ ನೀಡಲಿದ್ದಾರೆ.

    ಪಂದ್ಯದ ಚಹಾ ವಿರಾಮದ ವೇಳೆ ಮಾಜಿ ನಾಯಕರನ್ನು ಓಪನ್ ವಾಹನದಲ್ಲಿ ಕುರಿಸಿ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ 40 ನಿಮಿಷಗಳ ವಿರಾಮದ ಸಮಯದಲ್ಲಿ, ‘ಫ್ಯಾಬುಲಸ್ ಫೈವ್’ ಎಂಬ ಹೆಸರಿನಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಒಳಗೊಂಡ ಟಾಕ್ ಶೋ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಗೆಲುವಿನ ಬಗ್ಗೆ ಮಾತನಾಡಲಿದ್ದಾರೆ.

    ಇದಾದ ನಂತರ ಸಚಿನ್. 2008ರ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಭಿನವ್ ಬಿಂದ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಮತ್ತು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಗೆದ್ದ ಎಂಸಿ ಮೇರಿ ಕೋಮ್ ಸೇರಿದಂತೆ ಭಾರತೀಯ ಕ್ರೀಡಾ ತಾರೆಗಳನ್ನು ಸಿಎಬಿ ಸನ್ಮಾನಿಸಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಮೆಂಟೋಗಳನ್ನು ಗಣ್ಯರಿಗೆ ನೀಡಲಾಗುವುದು ಮತ್ತು ಅವರನ್ನು ಕ್ರೀಡಾಂಗಣದ ಸುತ್ತ ಗಾಲ್ಫ್ ಗಾಡಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಸಿಎಬಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.

    ಈ ಕಾರ್ಯಕ್ರಮಗಳ ಜೊತೆಗೆ 2000 ದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ ಬಾಂಗ್ಲಾ ಆಟಗಾರರನ್ನು ಸನ್ಮಾನಿಸಲು ಸಿಎಬಿ ತೀರ್ಮಾನ ಮಾಡಿದೆ. ಈ ಪಂದ್ಯದಲ್ಲಿ ಸೌರವ್ ಗಂಗೂಲಿಯವರು ಟೆಸ್ಟ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು.

  • ಕೊಹ್ಲಿ, ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಂ ಇಂಡಿಯಾ

    ಕೊಹ್ಲಿ, ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಂ ಇಂಡಿಯಾ

    ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಟೂರ್ನಿಯನ್ನು ಗೆದ್ದು ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಭಾನುವಾರ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಮಾಜಿ ನಾಯಕ ಧೋನಿ, ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಇತ್ತ ವಿಂಡೀಸ್ ತಂಡ ಕೂಡ ಡರೆನ್ ಬ್ರಾವೊ, ಕೀರನ್ ಪೊರ್ಲಾಡ್, ಆ್ಯಂಡ್ರೆ ರಸೆಲ್, ಹೆಟ್ಮೆಯರ್ ರಂತಹ ಟಿ20 ಭರವಸೆ ಆಟಗಾರರ ಹುಮ್ಮಸ್ಸಿನಿಂದ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಇತ್ತ 2014 ರಲ್ಲಿ ಇದೇ ಮೈದಾನದಲ್ಲಿ 264 ರನ್ ಸಿಡಿಸಿ ದಾಖಲೆ ಬರೆದಿದ್ದರು. ಸಾಮಾನ್ಯವಾಗಿ ಈಡನ್ ಗಾರ್ಡನ್ ಫಿಚ್ ಬ್ಯಾಟಿಂಗ್ ಅನುಕೂಲಕಾರವಾಗಿರಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

    ಮೊದಲ ಟಿ20 ಪಂದ್ಯಕ್ಕೆ ಬಿಸಿಸಿಐ 12 ಆಟಗಾರರ ತಂಡದ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಕರ್ನಾಟಕದ ಕೆಎಲ್ ರಾಹುಲ್, ಮನೀಷ್ ಪಾಂಡೆ ಸೇರಿದಂತೆ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ರಾಹುಲ್ ಮಿಂಚಲು ವಿಫಲರಾಗಿದ್ದರು. ಬಳಿಕ ನಡೆದ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಭಾನುವಾರ ಪಂದ್ಯದಲ್ಲಿ ಇಬ್ಬರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.

    ಟೀಂ ಇಂಡಿಯಾ:
    ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್,ರಿಷಬ್ ಪಂತ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ,  ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್,  ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬೂಮ್ರಾ, ಖಲೀಲ್ ಅಹಮದ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯರಿಗೆ  ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷರಾದ ಅಶ್ರಫ್ ಘನಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶುಕ್ರವಾರ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ರಶೀದ್ ಖಾನ್ ಕ್ರೀಡಾಂಗಣದಲ್ಲಿ ಮಿಂಚಿದ್ರು.

    ತನ್ನ ಮಾತೃ ತಂಡ ಸನ್‍ರೈಸರ್ಸ್ ಹೈದರಾಬಾದ್ ಗೆಲುವುಗಾಗಿ ರಶೀದ್ ಖಾನ್‍ಗೆ ಆಲ್‍ರೌಂಡರ್ ಪ್ರರ್ದಶನ ತೋರಿದ್ದಾರೆ. ಮೂಲತಃ ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರ. ಹೀಗಾಗಿ ಅಲ್ಲಿನ ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ ಅವರು ತಮ್ಮ ದೇಶದ ಪ್ರತಿಭೆಗೆ ಅವಕಾಶ ನೀಡಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು 14 ರನ್ ಅಂತರದಲ್ಲಿ ಗೆಲವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ತಂಡದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತ್ತು. ರಶೀದ್ ಖಾನ್ ಅವರು ಔಟ್ ಆಗದೆ 10 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ಮೂಲಕ 34 ರನ್ ಕಲೆ ಹಾಕುವ ಮೂಲಕ ತಂಡದ ಬೃಹತ್ ಮೊತ್ತಗೆ ಸಹಾಯವಾದರು. ಅವರ ಅಮೋಘ ಬ್ಯಾಟಿಂಗ್ ಶೈಲಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಬೃಹತ್ ಮೊತ್ತವನ್ನು ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವನ್ನು 20 ಓವರ್‍ಗಳಲ್ಲಿ 160 ರನ್‍ಗೆ ಕಟ್ಟಿ ಹಾಕಲು ಹೈದರಾಬಾದ್ ತಂಡದ ಬೌಲರ್‍ಗಳು ಯಶಸ್ವಿಯಾದರು. ರಶೀದ್ ಖಾನ್ ಬೌಲಿಂಗ್‍ನಲ್ಲಿಯೂ ಮಿಂಚಿದ್ದಾರೆ. ಒಟ್ಟು 4 ಓವರ್ ಬೌಲ್ ಮಾಡಿದ ಅವರು ಕೇವಲ 19 ರನ್ ನೀಡಿ 4 ವಿಕೆಟ್ ಪಡೆದಿದ್ರು ತಂಡದ ಗೆಲುವಿಗೆ ಕಾರಣರಾದ್ರು.

    ಅಫ್ಘಾನಿಸ್ತಾನ ಜಲಾಲಾಬಾದ್‍ನ 19 ವರ್ಷದ ಆಟಗಾಗರಾಗಿರುವ ರಶೀದ್ ಖಾನ್ ಬಗ್ಗೆ ಅಲ್ಲಿನ ರಾಷ್ಟ್ರಾಧ್ಯಕ್ಷರು ಆಶ್ರಫ್ ಘನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರೋ ರಶೀದ್ ಖಾನ್ ಕುರಿತು ಅಫ್ಘಾನಿಸ್ತಾನ ಹೆಮ್ಮೆ ಪಡುತ್ತದೆ. ಅಲ್ಲದೇ ನಮ್ಮ ನೆಲದ ಪ್ರತಿಭೆಗೆ ವೇದಿಕೆ ಒದಗಿಸಿಕೊಟ್ಟ ನನ್ನ ಭಾರತೀಯ ಸಹೋದರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.