Tag: eddyurappa

  • ಬಿಜೆಪಿಯಲ್ಲಿ ಚದುರಂಗದಾಟ, ಯಡಿಯೂರಪ್ಪ `ತ್ಯಾಗ’ಸೂತ್ರ

    ಬಿಜೆಪಿಯಲ್ಲಿ ಚದುರಂಗದಾಟ, ಯಡಿಯೂರಪ್ಪ `ತ್ಯಾಗ’ಸೂತ್ರ

    ಬೆಂಗಳೂರು: ಸಂಕ್ರಾಂತಿ ಹೊತ್ತಲ್ಲೇ ಮೂಲ ಬಿಜೆಪಿಗರಿಗೆ ಸಿಎಂ ಶಾಕ್ ಕೊಟ್ಟಿದ್ದಾರೆ. ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲು ನೂರೆಂಟು ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಚದುರಂಗದಾಟ ಶುರು ಮಾಡಿದ್ದಾರೆ. ಮೂಲ ಬಿಜೆಪಿಗರಿಗೆ ತಿರುಗೇಟು ನೀಡಲು ಸಿಎಂ ಪ್ಲ್ಯಾನ್ ಮಾಡಿದ್ದು, ಸಂಪುಟ ವಿಸ್ತರಣೆ ಗೊಂದಲ ಬಗೆಹರಿಕೆಗೆ ಸಿಎಂ `ತ್ಯಾಗ’ಸೂತ್ರ ದಾಳ ಬಿಟ್ಟಿದ್ದಾರೆ.

    ಕಾಂಗ್ರೆಸ್, ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರನ್ನ ಕೈಬಿಡಲು ಯಡಿಯೂರಪ್ಪ ನೋ ಅಂದಿದ್ದಾರೆ. ಕೊಟ್ಟ ಮಾತನ್ನ ತಪ್ಪಲ್ಲ, ಎಲ್ಲರಿಗೂ ಸಚಿವ ಸ್ಥಾನ ಕೊಡೋಣ ಅಂತಾ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದ್ರೆ ಬಿಜೆಪಿ ಒಂದು ವರ್ಗ ಹೈಕಮಾಂಡ್ ಮುಂದೆ ಒಪ್ಪಂದ ಆಗಿದ್ದೇ 12, ಆ ಪ್ರಕಾರ 12 ಮಂದಿಗೆ ಮಾತ್ರ ಸಚಿವ ಸ್ಥಾನ ಅಂತಾ ವಾದಿಸುತ್ತಿದೆ. ಇದಕ್ಕೆ ಪ್ರತ್ಯಾಸ್ತ್ರವಾಗಿ ಸಿಎಂ ಯಡಿಯೂರಪ್ಪ ತ್ಯಾಗಸೂತ್ರ ಪ್ಲ್ಯಾನ್ ಮಾಡಿದ್ದಾರೆ.

    ಅಮಿತ್ ಶಾ ಭೇಟಿ ವೇಳೆ ತ್ಯಾಗಸೂತ್ರವನ್ನ ಮುಂದಿಟ್ಟು ರಾಜಕೀಯ ಜಾಣ ಹೆಜ್ಜೆ ಇಡುವುದು ಯಡಿಯೂರಪ್ಪ ತಂತ್ರ. ವಲಸಿಗರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು, ನನ್ನ ಕ್ಯಾಬಿನೆಟ್‍ನಲ್ಲಿ ಇರುವ ಕೆಲ ಹಿರಿಯರನ್ನ ತ್ಯಾಗ ಮಾಡಲು ಹೇಳಿಬಿಡಬೇಕು ಅನ್ನೋದು ಯಡಿಯೂರಪ್ಪ ತ್ಯಾಗಸೂತ್ರದ ಲೆಕ್ಕಚಾರ.

    ಅನುಭವಿ ರಾಜಕಾರಣಿ ಯಡಿಯೂರಪ್ಪ ತ್ಯಾಗಸೂತ್ರದ ವಾಸನೆ ಬಿಜೆಪಿಯಲ್ಲಿ ಜೋರಾಗಿದೆ. ಬಿಜೆಪಿ ಒಂದು ವರ್ಗಕ್ಕೆ ತ್ಯಾಗಸೂತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಮಿತ್ ಶಾ ತ್ಯಾಗಸೂತ್ರವನ್ನ ಒಪ್ಪಿಬಿಟ್ಟರೆ ಅನ್ನೋ ಆತಂಕವೂ ಇದೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ತ್ಯಾಗಸೂತ್ರದ ಅಸ್ತ್ರಕ್ಕೆ ಏನಾದ್ರೂ ಗೂಗ್ಲಿ ಹಾಕುತ್ತಾ..? ಇಲ್ಲ ಒಪ್ಪುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

    ಬಿಎಸ್‍ವೈ `ತ್ಯಾಗ’ಸೂತ್ರ 1
    * ವಲಸಿಗರಿಗೆ 16 ಸಚಿವ ಸ್ಥಾನ ಕೊಡಬೇಕು
    > ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ
    > ಸರ್ಕಾರ ರಚನೆಗೆ ಕಾರಣರಾದವರ ಋಣ ಸಂದಾಯ
    > ಮುನಿರತ್ನ, ಪ್ರತಾಪ್‍ಗೌಡಗೆ 2 ಸ್ಥಾನ ಮೀಸಲು
    > ಸೋತ ವಿಶ್ವನಾಥ್, ಎಂಟಿಬಿಗೂ ಸಚಿವ ಸ್ಥಾನ
    > ಶಂಕರ್‌ಗೆ ಮೇಲ್ಮನೆ ಸ್ಥಾನ ಜೊತೆಗೆ ಸ್ಥಾನ

    * ಬಿಎಸ್‍ವೈ `ತ್ಯಾಗ’ಸೂತ್ರ 2
    * ಹಿರಿಯ ನಾಯಕರ ಪದತ್ಯಾಗ
    > ಬಿಜೆಪಿ ಹಿರಿಯ ನಾಯಕರು ಮಂತ್ರಿಗಿರಿಗೆ ರಾಜೀನಾಮೆ
    > ಮಂತ್ರಿಗಿರಿಗೆ ಕಿರಿಯರಿಗೆ ಅವಕಾಶ ಮಾಡಿಕೊಡಬೇಕು
    > ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಟ್ಟು ಕೊಡಬೇಕು
    > ಹಿರಿಯರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು