Tag: eddelu Manjunatha

  • ಅರೆಸ್ಟ್‌ ಆದ ಮೂರೇ ಗಂಟೆಯಲ್ಲಿ ಗುರುಪ್ರಸಾದ್‌ಗೆ ಬೇಲ್

    ಅರೆಸ್ಟ್‌ ಆದ ಮೂರೇ ಗಂಟೆಯಲ್ಲಿ ಗುರುಪ್ರಸಾದ್‌ಗೆ ಬೇಲ್

    ನ್ನಡದ ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಗುರುಪ್ರಸಾದ್  ಅವರಿಗೆ 21ನೇ ಎಸಿಎಂಎಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು  ಗುರುಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಗುರುಪ್ರಸಾದ್‌ ಅವರ ಜೊತ ಕೆಲಸ ಮಾಡಿದ್ದ ಶ್ರೀನಿವಾಸ್ ಅವರ ದೂರಿನ ಹಿನ್ನೆಲೆಯಲ್ಲಿ ಗುರುಪ್ರಸಾದ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಗುರುಪ್ರಸಾದ್ 2015-16 ರಲ್ಲಿ ಶ್ರೀನಿವಾಸ್ ಬಳಿ 30 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಗುರುಪ್ರಸಾದ್ ಪಡೆದಿದ್ದ ಸಾಲವನ್ನು ಮರು ಪಾವತಿಸಿರಲಿಲ್ಲ. ಗುರುಪ್ರಸಾದ್ ಶ್ರೀನಿವಾಸ್ ಗೆ ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಹಾಗಾಗಿ ಶ್ರೀನಿವಾಸ್ ನ್ಯಾಯಾಲದ ಮೊರೆ ಹೋಗಿದ್ದರು.

    ಕೋರ್ಟ್ ಗುರುಪ್ರಸಾದ್ ಗೆ ವಾರಂಟ್ ಜಾರಿ ಮಾಡಿತ್ತು. ಆದರೂ ಕೂಡ ಗುರುಪ್ರಸಾದ್ ಕೋರ್ಟ್ ಹಾಜರಾಗದ ಕಾರಣ ಇಂದು ಗುರುಪ್ರಸಾದ್ ಇದ್ದ ಕಡೆ ಗಿರಿನಗರ ಪೊಲೀಸರು ಹುಡುಕಿಕೊಂಡು ಹೋಗಿ ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಮತ್ತು ನಿರ್ದೇಶಕ ಮಠದ ಗುರುಪ್ರಸಾದ್ ಕಾಂಬಿನೇಷನ್ ನ ಎರಡೂ ಚಿತ್ರಗಳು ಸೂಪರ್ ಹಿಟ್. ಇದೀಗ ಮೂರನೇ ಸಿನಿಮಾದಲ್ಲೂ ಈ ಜೋಡಿ ಒಂದಾಗಿದೆ. ಈ ನಡುವೆ ಗುರು ಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಎದ್ದೇಳು ಮಂಜುನಾಥ 2’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ

    ಹಲವು ವರ್ಷಗಳ ಹಿಂದೆ ತೆರೆ ಕಂಡ ‘ಎದ್ದೇಳು ಮಂಜುನಾಥ’ ಸಿನಿಮಾ ನಕ್ಕು ನಗಿಸಿ, ಒಂದೊಳ್ಳೆ ಸಂದೇಶವನ್ನು ನೀಡಿತ್ತು. ಈ ಸಿನಿಮಾದಲ್ಲಿ ಮಂಜುನಾಥ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಮಂಜುನಾಥನಾಗಿ ಸಾಕಷ್ಟು ಮನರಂಜನೆ ನೀಡಿದ್ದರು. ಈಗ ಮಂಜುನಾಥ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾನೆ. ಆದರೆ, ಆ ಪಾತ್ರವನ್ನು ಜಗ್ಗೇಶ್ ಮಾಡುತ್ತಿಲ್ಲ. ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ರಾಘವೇಂದ್ರ ಸ್ಟೋರ್ಸ್ : ಹೋಟೆಲ್ ಮಾಲಿಕನಾದ ಜಗ್ಗೇಶ್

    ಮಂಜುನಾಥ ಅಂದರೆ ಜಗ್ಗೇಶ್, ಜಗ್ಗೇಶ್ ಅಂದರೆ ಮಂಜುನಾಥ ಎನ್ನುವಷ್ಟರ ಮಟ್ಟಿಗೆ ಆ ಪಾತ್ರವನ್ನು ಜಗ್ಗೇಶ್ ಪೋಷಿಸಿದ್ದರು. ಇದೀಗ ಬರುತ್ತಿರುವ ಎದ್ದೇಳು ಮಂಜುನಾಥ 2 ಸಿನಿಮಾದಲ್ಲಿ ಆ ಪಾತ್ರವನ್ನು ಸ್ವತಃ ನಿರ್ದೇಶಕ ಗುರು ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಹಾಗಂತ ಎದ್ದೇಳು ಮಂಜುನಾಥ ಸಿನಿಮಾದ ಮುಂದುವರೆಕೆಯ ಸಿನಿಮಾ ಇದಲ್ಲ ಎಂದಿದ್ದಾರೆ ನಿರ್ದೇಶಕ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಗುರುಪ್ರಸಾದ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಸಂದರ್ಭದಲ್ಲಿ ಥಿಯೇಟರ್ ಮುಂದೆ ತಮ್ಮದೇ ಕಟೌಟ್ ಹಾಕಿ, ಸಿನಿಮಾದ ನಿಜವಾದ ಹೀರೋ ನಿರ್ದೇಶಕ ಎಂದೇ ಎದೆಯುಬ್ಬಿಸಿ ಹೇಳಿದ್ದರು. ಆದರೆ, ಈ ಬಾರಿ ನಿರ್ದೇಶನದ ಜತೆಗೆ ನಾಯಕನಾಗಿಯೂ ಅವರು ಪ್ರೇಕ್ಷಕರ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಈ ಸಿನಿಮಾ ಕೂಡ ಸೋಂಬೇರಿಯೊಬ್ಬನ ಆತ್ಮಕಥೆಯನ್ನು ಬಿಚ್ಚಿಡಲಿದೆಯಂತೆ. ಜತೆಗೆ ಗುರು ಪ್ರಸಾದ್ ಜೀವನದಲ್ಲಿ ಕಂಡುಂಡ ಅನುಭವವನ್ನು ಸಿನಿಮಾಗಾಗಿ ಅಳವಡಿಸಿದ್ದಾರಂತೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ. ತೆರೆಗೆ ಯಾವಾಗ ಬರತ್ತೋ ಕಾದು ನೋಡಬೇಕು.