Tag: Edappadi K Palaniswami

  • ಸ್ಟಾಲಿನ್ ಸಿಎಂ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ: ಎಡಪಾಡಿ ಕೆ.ಪಳನಿಸ್ವಾಮಿ

    ಸ್ಟಾಲಿನ್ ಸಿಎಂ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ: ಎಡಪಾಡಿ ಕೆ.ಪಳನಿಸ್ವಾಮಿ

    ಚೆನ್ನೈ: ವಿರುದುನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದುಷ್ಕರ್ಮಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪಾಡಿ ಕೆ.ಪಳನಿಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ

    ಸ್ಟಾಲಿನ್ ಅವರು ಅಧಿಕಾರಕ್ಕೆ ಬಂದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೊಲೆ ಮತ್ತು ದರೋಡೆ ಜೊತೆಗೆ ಲೈಂಗಿಕ ದೌರ್ಜನ್ಯ ಅಪರಾಧಗಳು ಬೇರೆ ಸರ್ಕಾರಗಳು ಇದ್ದಾಗ ಹೆಚ್ಚಾಗಿ ಇರಲಿಲ್ಲ. ಆದರೆ ಸ್ಟಾಲಿನ್ ಅವರು ತಮ್ಮನ್ನು ತಾವೇ ತಮಿಳುನಾಡಿನ ಪ್ರಧಾನಿ ಎಂದು ಹೇಳಿಕೊಂಡಿದ್ದಾರೆ. ಅವರು ತಮಿಳುನಾಡು ಸಿಎಂ ಆದ ನಂತರ ತಮಿಳುನಾಡಿಗೆ ಏನು ನೀಡಿದ್ದಾರೆ. ಬದಲಿಗೆ ಅವರು ಸಿಎಂ ಆದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಮತ್ತು ಜನರು ಭಯದಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.

    ಈ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್ ಅವರು ವಿರುದುನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರಿಯಾಗಿ ನಿಭಾಯಿಸಿ ಶೀಘ್ರದಲ್ಲಿಯೇ ನ್ಯಾಯ ಒದಗಿಸಲಾಗುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  ಹಿಂದುತ್ವದ ವಿರೋಧಿ ಆಗ್ಬೇಡಿ: ಕೇಜ್ರಿವಾಲ್‍ಗೆ ಅಸ್ಸಾಂ ಸಿಎಂ ತಿರುಗೇಟು

     

  • ತಮಿಳುನಾಡು ಸಿಎಂಗೆ ಬೌಲಿಂಗ್ ಮಾಡಿದ ರಾಹುಲ್ ದ್ರಾವಿಡ್

    ತಮಿಳುನಾಡು ಸಿಎಂಗೆ ಬೌಲಿಂಗ್ ಮಾಡಿದ ರಾಹುಲ್ ದ್ರಾವಿಡ್

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಾಲ್ ಮಾಡಿದ್ದಾರೆ.

    ವಾಲ್ಪಾಡಿಯಲ್ಲಿ ಭಾನುವಾರ ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರಿಕೆಟ್ ಮೈದಾನ ಉದ್ಘಾಟನೆಗೊಂಡಿತು. ಉದ್ಘಾಟನೆಯ ಬಳಿಕ ರಾಹುಲ್ ದ್ರಾವಿಡ್ ಅವರು ಸಿಎಂ ಪಳನಿಸ್ವಾಮಿ ಅವರಿಗೆ ಬೌಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ಟಿಎನ್‍ಸಿಎ ಅಧ್ಯಕ್ಷ ರೂಪಾ ಗುರುನಾಥ್ ಕೂಡ ಉಪಸ್ಥಿತರಿದ್ದರು.

    ಉದ್ಘಾಟನೆ ಬಳಿಕ ಮಾತನಾಡಿದ ದ್ರಾವಿಡ್, ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರೀಡಾಂಗಣದಲ್ಲಿನ ವಿವಿಧ ಸೌಲಭ್ಯ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ತಮಿಳುನಾಡು ಕ್ರಿಕೆಟ್ ಸಂಘವನ್ನು (ಟಿಎನ್‍ಸಿಎ) ಶ್ಲಾಘಿಸಿದರು.

    ಮುಂದಿನ ಪೀಳಿಗೆಯ ಕ್ರಿಕೆಟಿಗರು, ಪ್ರತಿಭೆಗಳು ಸಣ್ಣ ಪಟ್ಟಣ ಮತ್ತು ನಗರಗಳಿಂದ ಬರಲಿದ್ದಾರೆ. ಅವರಿಗೆ ಇಂತಹ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದರು. ಇದೇ ವೇಳೆ ಸೇಲಂ ಮೂಲದ ತಮಿಳುನಾಡಿನ ಎಡಗೈ ವೇಗಿ ಟಿ.ನಟರಾಜನ್ ಅವರನ್ನು ದ್ರಾವಿಡ್ ಹೊಗಳಿದರು. ಟಿ.ನಟರಾಜನ್ ಅವರು ಮುಂದಿನ ತಲೆಮಾರಿನ ಆಟಗಾರರಿಗೆ ಆದರ್ಶಪ್ರಾಯರಾಗಲಿದ್ದಾರೆ ಎಂದು ಹೇಳಿದರು.

    ಶ್ರೀನಿವಾಸನ್ ಮಾತನಾಡಿ, ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರಿಕೆಟ್ ಮೈದಾನವನಲ್ಲಿ ಐಪಿಎಲ್ ಪಂದ್ಯವನ್ನು ತರುವ ಭರವಸೆ ನೀಡಿದರು. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಈ ಮೈದಾನದಲ್ಲಿ ಮೂರು ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.