Tag: ED

  • ಕೈ ನಾಯಕರಿಗೆ ನೀಡಿದ್ರೆ ಮಾತ್ರ ರಾಜಕೀಯ ಪ್ರೇರಿತ: ಬಿಎಸ್‌ವೈಗೆ ನೀಡಿದ ನೋಟಿಸ್‌ ಏನು ಎಂದ ಅಶೋಕ್‌

    ಕೈ ನಾಯಕರಿಗೆ ನೀಡಿದ್ರೆ ಮಾತ್ರ ರಾಜಕೀಯ ಪ್ರೇರಿತ: ಬಿಎಸ್‌ವೈಗೆ ನೀಡಿದ ನೋಟಿಸ್‌ ಏನು ಎಂದ ಅಶೋಕ್‌

    ಬೆಂಗಳೂರು : ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ (Byrathi Suresh) ಅವರಿಗೆ ಜಾರಿ ನಿರ್ದೇಶನಾಲಯ (ED) ನೀಡಿರುವ ನೋಟಿಸ್‌ನಲ್ಲಿ ವಿಶೇಷತೆಯೂ ಇಲ್ಲ. ರಾಜಕೀಯ ಪ್ರೇರಿತವೂ ಅಲ್ಲ ಎಂದು ವಿಪಕ್ಷ ನಾಯಕ ಅಶೋಕ್ (Ashok) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ (Yediyurappa) ಸಿಎಂ ಆಗಿದ್ದಾಗ ಸಿಬಿಐ, ಲೋಕಾಯುಕ್ತ, ಇಡಿ ನೋಟಿಸ್‌ ಕೊಟ್ಟಿತ್ತು.ಆಗ ಯಾಕೆ ಸುದ್ದಿ ಆಗಲಿಲ್ಲ. ಈಗ ಯಾಕೆ ಸುದ್ದಿ ಆಗ್ತಿದೆ ಅಂತ ಪ್ರಶ್ನೆ ಮಾಡಿದರು.

    ಇಡಿ ನೋಟಿಸ್‌ ರಾಜಕೀಯ ಪ್ರೇರಿತ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಅವರೇನು ಸತ್ಯ ಹರಿಶ್ಚಂದ್ರರಾ? ಯಡಿಯೂರಪ್ಪ, ಜನಾರ್ದನ ರೆಡ್ಡಿಗೆ ಹಿಂದೆ  ನೋಟಿಸ್‌ ಕೊಟ್ಟಾಗ ರಾಜಕೀಯ ಪ್ರೇರಿತ ಅಲ್ಲವಾ? ಸಿಎಂ, ಡಿಕೆ ಶಿವಕುಮಾರ್‌,  ಕಾಂಗ್ರೆಸ್ ಮೇಲೆ ಕೊಟ್ಟರೆ ಮಾತ್ರ ರಾಜಕೀಯ ಪ್ರೇರಿತನಾ ಅಂತ ಪ್ರಶ್ನೆ ಮಾಡಿದರು.

     

    ಕಾಂಗ್ರೆಸ್‌ನವರಿಗೆ ನೋಟಿಸ್‌ ಕೊಟ್ಟರೆ ಅದು ರಾಜಕೀಯ ಪ್ರೇರಿತ ಅಂತ ಪುಸ್ತಕ ತಂದು ಬಿಡಿ ಅಂತ ಲೇವಡಿ ಮಾಡಿದರು. ಸಿಬಿಐ ಮತ್ತು ಇಡಿ ಅವತ್ತು ಇತ್ತು. ಇವತ್ತು ಇದೆ. ಏನು ಬದಲಾವಣೆ ಆಗಿಲ್ಲ ಅಂತ ಡಿಕೆಶಿಗೆ ಅಶೋಕ್ ತಿರುಗೇಟು ಕೊಟ್ಟರು.  ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    ಇಡಿ ಕಾನೂನಾತ್ಮಕ ಸಂಸ್ಥೆಯಾಗಿದೆ. ಲ್ಯಾಂಡ್ ಕನ್ವರ್ಷನ್, 50:50 ಅನುಪಾತದಲ್ಲಿ ಸೈಟ್ ನೀಡಿದ್ದು ಅಧಿಕಾರಿಗಳು. ಲೋಕಾಯುಕ್ತ ರಿಪೋರ್ಟ್ ಕೂಡಾ ಅಧಿಕಾರಿಗಳು ಅಂತಾನೇ ರಿಪೋರ್ಟ್ ಕೊಡೋದು‌. ಈ ಸರ್ಕಾರದಲ್ಲಿ ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ ಏನು ಮಾಡಿತ್ತು? ತನಿಖೆ ನಡೆಸಿ ಕ್ಲೀನ್ ಚಿಟ್ ಕೊಟ್ಟರು‌. ಮುಡಾ ಪ್ರಕರಣಕ್ಕೂ ಕ್ಲೀನ್ ಚಿಟ್ ಕೊಡ್ತಾರೆ ಅಂತ ಭವಿಷ್ಯ ನುಡಿದರು.

    ಲೋಕಾಯುಕ್ತ ಪೊಲೀಸರು ಸಿಎಂ ಅಡಿಯಲ್ಲಿ ಬರುತ್ತಾರೆ. ಪಾಪ ಅವರಿಗೆ ಪ್ರಮೋಷನ್ ಬೇಕು. ಪ್ರಮೋಷನ್ ಬೇಕಾಗಿರುವವರು ಹೇಗೆ ಅವರ ವಿರುದ್ದ ತನಿಖೆ ಮಾಡುತ್ತಾರೆ? ನಾನು ಅವರ ಮೇಲೆ ಆರೋಪ ಮಾಡುವದಿಲ್ಲ.  ವರದಿಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಕೊಡ್ತಾರೆ ಅಂತ ಲೋಕಾಯುಕ್ತ ತನಿಖೆಗೆ ವಿರೋಧ ಮಾಡಿದರು.

     

  • ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್‌ ಚಿಟ್ ಯತ್ನ: ವಿಜಯೇಂದ್ರ ಆರೋಪ

    ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್‌ ಚಿಟ್ ಯತ್ನ: ವಿಜಯೇಂದ್ರ ಆರೋಪ

    ಬೆಂಗಳೂರು: ಮುಡಾ ವಿಚಾರದಲ್ಲಿ (MUDA Case) ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದವರು (Lokayukta) ಕ್ಲೀನ್‌ ಚಿಟ್ ಕೊಟ್ಟಿರುವ ಸಾಧ್ಯತೆ ಇದೆ. ಕ್ಲೀನ್‌ ಚಿಟ್ ಕೊಟ್ಟಿದ್ದರೆ, ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ ಲೋಕಾಯುಕ್ತ ತನಿಖಾ ಸಂಸ್ಥೆ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್‌ ಚಿಟ್ ಕೊಟ್ಟಿದ್ದೇ ಆದರೆ, ಲೋಕಾಯುಕ್ತ ತನಿಖೆ ಸರಿಯಾಗಿ ಆಗುತ್ತಿಲ್ಲ. ಸಿಎಂ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬಿಜೆಪಿ ಹಲವು ದಿನಗಳಿಂದ ವ್ಯಕ್ತಪಡಿಸಿದ ಅನುಮಾನಗಳು ಸತ್ಯವಾದಂತೆ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದ್ರು ಸ್ವಾಗತ: ಚೆಲುವರಾಯಸ್ವಾಮಿ

    ಮೊನ್ನೆ ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ಮುಡಾದಲ್ಲಿ ಎಷ್ಟು ಕೋಟಿ ಹಗರಣ ನಡೆದಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತೊಂದು ಕಡೆ ರಾಜ್ಯ ಹೈಕೋರ್ಟ್ ಕೂಡ ಮೈಸೂರಿನ ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಇದರ ನಡುವೆ ಮುಖ್ಯಮಂತ್ರಿಗಳೂ ಸೇರಿ ರಾಜ್ಯ ಸರ್ಕಾರವು ಮಾನ್ಯ ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

    ಹೈಕೋರ್ಟ್ ತೀರ್ಪು ಬರುವ ಸಂದರ್ಭದಲ್ಲೇ ಲೋಕಾಯುಕ್ತ ವರದಿ ನೀಡಿದ್ದು ಸತ್ಯವಾದರೆ, ಇದು ಖಂಡಿತ ಸರಿಯಲ್ಲ. ಇದಕ್ಕೆ ಯಾವುದೇ ರೀತಿಯ ಪಾವಿತ್ರ‍್ಯತೆ ಇರುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ದೆಹಲಿ ಮುಕ್ತ – ಜೈಶಂಕರ್‌

    ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಕ್ಲೀನ್‌ಚಿಟ್ ಕೊಡಲಾಗಿದೆ ಎಂಬುದು ನಮ್ಮೆಲ್ಲರ ಸ್ಪಷ್ಟ ಅಭಿಪ್ರಾಯ. ಪ್ರಶ್ನೆಗೆ ಉತ್ತರಿಸಿದ ಅವರು, ಇ.ಡಿ. ಆಧಾರರಹಿತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಮುಡಾ ಹಗರಣ ಆಗಿದೆ ಎಂದಿದ್ದರೆ ಅದಕ್ಕೆ ಆಧಾರಗಳಿರುತ್ತವೆ. ಇ.ಡಿ. ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆತುರಾತುರವಾಗಿ ಕ್ಲೀನ್‌ಚಿಟ್ ಪಡೆಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆ ಕೇಸ್‌ನಲ್ಲಿ ಎಲ್ಲಾ ಹಣ, ಚಿನ್ನಾಭರಣ ರಿಕವರಿ: ಪರಮೇಶ್ವರ್

  • ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    – ಬೇನಾಮಿ ವಹಿವಾಟು ನೋಡಿ ಬೆಚ್ಚಿಬಿದ್ದ ಇಡಿ

    ಮೈಸೂರು: ಈಗಾಗಲೇ 300 ಕೋಟಿ ರೂ. ಮೌಲ್ಯದ 143 ಸೈಟ್‌ಗಳನ್ನು ಜಪ್ತಿ ಮಾಡಿರೋ ಇಡಿ, ಸದ್ಯದಲ್ಲೇ ಮುಡಾ ಸ್ಥಿರಾಸ್ತಿ (Immovable Properties) ಜಪ್ತಿಯ ಭಾಗ-2 ಕಾರ್ಯಾಚರಣೆ ಶುರು ಮಾಡುವ ಸಾಧ್ಯತೆ ಇದೆ. 631 ಮುಡಾ ನಿವೇಶನಗಳ ಬಗ್ಗೆ ಮಾಹಿತಿ ನೀಡುವಂತೆ ಇಡಿ (ED) ಕೇಳಿದೆ.

    ಕಳೆದ ಡಿಸೆಂಬರ್ 16ರಂದೇ ಮುಡಾಗೆ ಇಡಿ ಅಧಿಕಾರಿಗಳು ಬರೆದಿರುವ ಪತ್ರ ʻಪಬ್ಲಿಕ್ ಟಿವಿʼಗೆ (PUBLiC TV) ಲಭ್ಯವಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನಿವೇಶನಗಳ ವಿವರ ಕೇಳಿದ್ದು, ಮುಡಾ ಅಧಿಕಾರಿಗಳನ್ನ ಸಂಪರ್ಕ ಮಾಡಿ ಮತ್ತೊಂದು ಲಿಸ್ಟ್ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಅಕ್ರಮ ಹಣ ವ್ಯವಹಾರ ಸಂಬಂಧ ಸಿಕ್ಕ ದಾಖಲೆಗಳ ಆಧಾರದಲ್ಲಿ ಲಿಸ್ಟ್ ಕೇಳಿದ್ದು, ಜಾರಿ ನಿರ್ದೇಶನಾಲಯ ಮುಡಾ ಕಚೇರಿಯಲ್ಲಿ ಭ್ರಷ್ಟರ ಬೇಟೆ ಮುಂದುವರಿಸಿದೆ. ಇದನ್ನೂ ಓದಿ: ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ – ವಿಜಯೇಂದ್ರ ಆಗ್ರಹ

    ಎಂಎಲ್‌ಸಿ ಹೆಸ್ರಲ್ಲಿ 128 ಸೈಟು:
    ಮುಡಾ ಸೈಟು ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕಪ್ಪು ಹಣದ ವಹಿವಾಟು ಹೆಚ್ಚಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. 631 ಸೈಟುಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಕಪ್ಪು ಹಣದ ವಹಿವಾಟು ನಡೆದಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಅಲ್ಲದೇ ಮುಡಾ ಮಾಜಿ ಆಯುಕ್ತನ ಹೆಸರಲ್ಲಿ 198, ಮೈಸೂರಿನ ಎಂಎಲ್‌ಸಿ ಒಬ್ಬರಿಗೆ ಸೇರಿದೆ ಎನ್ನಲಾದ 128 ಸೈಟುಗಳ ದಾಖಲೆಗಳು ಪತ್ತೆಯಾಗಿವೆ. ಮೂಡಾ ನಗರ ಯೋಜನೆ ಅಧಿಕಾರಿ ಒಬ್ಬರಿಗೆ ಸೇರಿದ 92 ಬೇನಾಮಿ ಸೈಟಿನ ದಾಖಲೆಗಳೂ ಪತ್ತೆಯಾಗಿವೆ. ಮುಡಾದಲ್ಲಿ ಬೇನಾಮಿ ಆಸ್ತಿ ವಹಿವಾಟು ಕಂಡು ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ – ಅಶೋಕ್

    ಮಾಜಿ ಆಯುಕ್ತರ ಕುಟುಂಬಸ್ಥರ ಹೆಸರಲ್ಲಿ ಆಸ್ತಿಗಳು ಪತ್ತೆ:
    ಮೈಸೂರಿನ ರಿಯಲ್ ಎಸ್ಟೇಟ್ ಏಜೆಂಟ್ ಹೆಬ್ಬೆಟ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿ ಆಗಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ. ಜಯರಾಮ್ ಮನೆ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ನಿರಂತರ 70 ಗಂಟೆ ರೇಡ್ ಮಾಡಿದ್ದರು. ಆಗ ಜಯರಾಮ್ ಮನೆಯಲ್ಲಿ ಬಹುತೇಕ ಬೇನಾಮಿ ದಾಖಲೆಗಳು ಸಿಕ್ಕಿವೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿಲ್ಲಿ ಬೇನಾಮಿ ನಡೆದಿದೆ ಎನ್ನಲಾಗುತ್ತಿದ್ದು, ಮುಡಾ ಮಾಜಿ ಆಯುಕ್ತ ದಿನೇಶ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿಗಳು ಇವೆ ಎನ್ನಲಾಗಿದೆ.

    ರಿಯಲ್ ಎಸ್ಟೇಟ್ ಏಜೆಂಟ್ ಹೆಬ್ಬೆಟ್ ಜಯರಾಮ್ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವರ ಹೆಸರು ಬಾಯಿಬಿಟ್ಟಿದ್ದಾನೆ. ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಸಂಬಂಧಿ ತೇಜಸ್ ಗೌಡ ಹೆಸರನ್ನು ಜಯರಾಮ್ ತಿಳಿಸಿದ್ದಾನೆ. ಹೀಗಾಗಿಯೆ ಹೆಬ್ಬೆಟ್ ಜಯರಾಮ್ ಮನೆ ಕಚೇರಿ ಮೇಲೆ ರೇಡ್ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಎಸ್ಕೇಪ್ ಆಗಿದ್ದರು. ಹೆಬ್ಬೆಟ್ ಜಯರಾಮ್ ನಡೆಸುತ್ತಿದ್ದ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದಲ್ಲಿ ದಿನೇಶ್ ಕುಟುಂಬಸ್ಥರೆ ನಿರ್ದೇಶಕರಾಗಿದ್ದಾರೆ ಎನ್ನಲಾಗಿದೆ.

    ಮುಡಾ ಅಕ್ರಮಕ್ಕೆ `ಕೋಕನಟ್’ ಕೋಡ್‌ವರ್ಡ್:
    ಬೇನಾಮಿ ಡೀಲ್ ವಹಿವಾಟಿಗೆ ಹೆಬ್ಬೆಟ್ ಜಯರಾಮ್ ಇಟ್ಟಿದ್ದ ಹೆಸರು ಕೋಕನಟ್. ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲೆ ಜಯರಾಮ್ ದುಡ್ಡು ಕಳುಹಿಸುತ್ತಿದ್ದನಂತೆ. ಜಯರಾಮ್ ವಾಟ್ಸಪ್‌ ಚಾಟ್‌ನಲ್ಲಿ ಮಹತ್ತರ ವಿಚಾರ ಇಡಿಗೆ ಸಿಕ್ಕಿದೆ. ಒಂದು ಕೋಕನಟ್ ಎಂದರೆ ಒಂದು ಲಕ್ಷ. 50 ಕೋಕನಟ್ ಎಂದರೆ 50 ಲಕ್ಷ. 100 ಕೋಕನಟ್ ಎಂದರೆ 1 ಕೋಟಿ. ಹೀಗೆ ಹಲವು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಹೆಬ್ಬೆಟ್ ಜಯರಾಮ್ ಹಣ ಕಳುಹಿಸಿದ್ದ ಎನ್ನಲಾಗುತ್ತಿದ್ದು, ಎಲ್ಲಾ ದಾಖಲೆಗಳನ್ನು ಇಡಿ ಸೀಜ್ ಮಾಡಿದೆ.

    ಸಿಎಂ ರಾಜೀನಾಮೆಗೆ ಬಿಗಿಪಟ್ಟು ಹಿಡಿದ ಬಿಜೆಪಿ
    ಜಾರಿ ನಿರ್ದೇಶನಾಲಯ 143 ಮುಡಾ ಬೇನಾಮಿ ಸೈಟ್‌ಗಳು ಸೀಜ್ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು ಹಿಡಿದಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಂತ ಆಗ್ರಹಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.. ಆದ್ರೆ, ಇದು ಸಿಎಂ ಮೇಲೆ ರಾಜಕೀಯವಾಗಿ ನಡೆದ ಪಿತೂರಿ ಅಂತ ಆರೋಪಿಸಿರೋ ಡಿಸಿಎಂ ಡಿಕೆ ಶಿವಕುಮಾರ್, ಇನ್ವೆಸ್ಟಿಗೇಷನ್ ಲಾಂಗ್ ಪ್ರೊಸೆಸ್ ಆಗಿದೆ.. ಅದು ಕೋರ್ಟ್ ಟ್ರಯಲ್ ಮಾಡೋದು.. ಅದನ್ನ ನಾನು ನೀವು ಟ್ರಯಲ್ ಮಾಡೋದಲ್ಲ.. ಸಿಎಂ ಪತ್ನಿ ಆಗಲಿ.. ಸಿಎಂ ಆಗಲಿ ಯಾವುದೇ ತಪ್ಪು ಮಾಡಿಲ್ಲ ಅಂತ ಹೇಳಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ..

    ಒಟ್ನಲ್ಲಿ ಮುಡಾ ಹಗರಣ ವಿಚಾರದಲ್ಲಿ ಒಂದು ಹಂತದ ವಿಚಾರಣೆ ಮುಗಿದಿದ್ದು, ಬೇನಾಮಿ ಆಸ್ತಿ ಮಾಡಿದವರಿಗೆ ಮಾರಿ ಹಬ್ಬ ಶುರುವಾಗಿದೆ. ಮತ್ತೊಂದೆಡೆ ರಾಜಕೀಯ ವಾಕ್ಸಮರವೂ ಜೋರಾಗಿದ್ದು, ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.. ಆದ್ರೆ, ಪವರ್ ಫೈಟ್ ನಡುವೆಯೂ ಸಿಎಂ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟ್ ಬೀಸಿದ್ದು, ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ

    `ಪಬ್ಲಿಕ್ ಟಿವಿ’ಯಲ್ಲಿ ಬಿಗ್ ಎಕ್ಸ್‌ಕ್ಲೂಸಿವ್‌
    ಮುಡಾದ 143 ಬೇನಾಮಿ ಸೈಟ್‌ಗಳನ್ನು ಇಡಿ ಮುಟ್ಟುಗೋಲು ಹಾಕಿದ್ದು, ಇವು ಪ್ರಭಾವಿಗಳಿಗೆ ಸೇರಿದ್ದ ನಿವೇಶನಗಳಾಗಿವೆ. ಮುಟ್ಟುಗೋಲು ಹಾಕಿಕೊಂಡ 143 ಸೈಟ್‌ಗಳು ಯಾರಿಗೆ ಸೇರಿದ್ದು? ಯರ‍್ಯಾರ ಎಷ್ಟೆಷ್ಟು ಸೈಟ್‌ಗಳು ಮುಟ್ಟುಗೋಲಾಗಿವೆ ಅನ್ನೋ ಎಕ್ಸ್‌ಕ್ಲೂಸಿವ್‌ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.

    ಮುಡಾ ಮುಟ್ಟುಗೋಲು ಸೈಟ್ ಲಿಸ್ಟ್:
    * ಅಬ್ದುಲ್ ವಾಜಿದ್- 42 ಸೈಟ್
    * ಮಂಜುನಾಥ್- 33 ಸೈಟ್
    * ರವಿಕುಮಾರ್- 35 ಸೈಟ್
    * ಚಾಮುಂಡೇಶ್ವರಿ ಲೇಔಟ್- 21 ಸೈಟ್
    * ಜಯರಾಮ್- 9 ಸೈಟ್

    ಸೈಟ್ ಮುಟ್ಟುಗೋಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಹಿ ಕೃಷ್ಣ, ಮೂಡಾ ಹಗರಣದಲ್ಲಿ ಇಡಿ ಜಪ್ತಿ ಮಾಡಿರುವ ಇವರೆಗಿನ ಆಸ್ತಿ ಕೇವಲ ಸ್ಯಾಂಪಲ್ ಅಷ್ಟೆ. ಮುಂದಿನ ದಿನಗಳಲ್ಲಿ 50:50 ಅನುಪಾತದಲ್ಲಿ ಪಡೆದ ಎಲ್ಲಾ ಸೈಟ್ ಗಳನ್ನು ಇಡಿ ಜಪ್ತಿ ಮಾಡುತ್ತದೆ ಅಂತ ತಿಳಿಸಿದ್ದಾರೆ. ಅಲ್ಲದೇ ಇಡಿ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಪಡೆದ 14 ಸೈಟ್ ಅಕ್ರಮ ಅನ್ನೋದು ಸ್ಪಷ್ಟವಾಗಿದೆ. ಲೋಕಾಯುಕ್ತ ತನಿಖೆಯಲ್ಲೂ ಸಿಎಂ ಕುಟುಂಬ ಪಡೆದ 14 ಸೈಟ್ ಅಕ್ರಮ ಎಂದೇ ವರದಿ ಬರಬೇಕು. ಲೋಕಾಯುಕ್ತ ತನಿಖೆ ಇದಕ್ಕೆ ವ್ಯತಿರಿಕ್ತವಾದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

  • MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    ಮೈಸೂರು: ಜಾರಿ ನಿರ್ದೇಶನಾಲಯ (ED) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಕ್ರಮಕ್ಕೆ ಸಂಬಂಧಿಸಿದಂತೆ 300 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದ ಬೆನ್ನಲ್ಲೇ ʼಕೋಕನಟ್ʼ ಕೋಡ್‌ವರ್ಡ್‌ ಬಳಸಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಇಡಿ ಅಧಿಕಾರಿಗಳು ಬಿಲ್ಡರ್‌ ಜಯರಾಮ್ (Jayaram) ಮನೆ ಮೇಲೆ ದಾಳಿ ನಡೆಸಿದ್ದರು. ಸತತ ಮೂರು ದಿನ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ ಈತನ ಮನೆಯಲ್ಲಿ ಏನಿತ್ತು ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಮುಡಾ ಅಕ್ರಮದ ಕಿಂಗ್‌ಪಿನ್‌ ಜಯರಾಮ್‌ ಆಗಿದ್ದಾನೆ ಎನ್ನಲಾಗುತ್ತಿದೆ.

    ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಯರಾಮ್ ಮನೆ ಹಾಗೂ ಕಚೇರಿಯಲ್ಲಿ ಇಡಿ ಅಧಿಕಾರಿಗಳು ನಿರಂತರ 70 ಗಂಟೆಗಳ ಕಾಲ ರೇಡ್‌ ಮಾಡಿದ್ದರು. ಜಯರಾಮ್ ಮನೆಯಲ್ಲೆ ಬಹುತೇಕ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದೆ. ಈ ಜಯರಾಮ್ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘ ಸ್ಥಾಪನೆ ಮಾಡಿದ್ದ. ಈ ಸಂಘದಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಟುಂಬಸ್ಥರು ನಿರ್ದೇಶಕರಾಗಿದ್ದರು. ಬಹುತೇಕ ಬೇನಾಮಿ ವ್ಯವಹಾರಗಳನ್ನು ಈ ಸಹಕಾರ ಸಂಘದ ಹೆಸರಿನಲ್ಲಿ ಮಾಡಲಾಗಿದೆ.  ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

    ಜಯರಾಮ್‌ ಮನೆಯಲ್ಲಿ ದಾಖಲೆಗಳನ್ನು ಶೋಧಿಸುತ್ತಿದ್ದ ಇಡಿಗೆ ವಾಟ್ಸಪ್‌ ಚಾಟ್‌ ಪರಿಶೀಲಿಸಿದ್ದಾರೆ. ಈ ವೇಳೆ 1 ಕೋಕನಟ್‌ ಕಳುಹಿಸಿದ್ದೇನೆ. 50 ಕೋಕನಟ್‌ ಕಳುಹಿಸಿದ್ದ ಮೆಸೇಜ್‌ಗಳು ಅಧಿಕಾರಿಗಳ ಗಮನ ಸೆಳೆದಿದೆ. ರಿಯಲ್‌ ಎಸ್ಟೇಟ್‌ ಕೆಲಸ ಮಾಡುವ ಈತ ಕೋಕನಟ್‌ ಯಾಕೆ ಕಳುಹಿಸುತ್ತಾನೆ ಎಂದು ಅನುಮಾನ ಬಂದು ಜಯರಾಮ್‌ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೋಕನಟ್‌ ಸತ್ಯ ಪ್ರಕಟವಾಗಿದೆ.

    ಮುಡಾ ಹಣಕಾಸಿನ ಅಕ್ರಮಕ್ಕೆ ಕೋಕನಟ್‌ ಎಂಬ ಕೋಡ್‌ವರ್ಡ್‌ (Coconut Codeword) ಇಡಲಾಗಿತ್ತು. 1 ಕೋಕನಟ್‌ ಅಂದರೆ 1 ಲಕ್ಷ ರೂ., 50 ಕೋಕನಟ್‌ ಅಂದರೆ 50 ಲಕ್ಷ ರೂ., 100 ಕೋಕನಟ್‌ ಅಂದರೆ 1 ಕೋಟಿ ರೂ. ಕಳುಹಿಸಲಾಗಿದೆ ಎಂದು ಜಯರಾಮ್‌ ಮೆಸೇಜ್‌ ಮಾಡುತ್ತಿದ್ದ.

    ಜಯರಾಮ್‌ ತನ್ನ ಡೈರಿಯಲ್ಲಿ ಮುಡಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಬರೆದುಕೊಂಡಿದ್ದ. ಇಡಿಯ ಪ್ರಾಥಮಿಕ ವಿಚಾರಣೆಯಲ್ಲೇ ಹಲವರ ಹೆಸರನ್ನು ಜಯರಾಮ್ ಬಾಯಿಬಿಟ್ಟಿದ್ದಾನೆ. ಜಯರಾಮ್‌ ಮನೆ ಮೇಲೆ ದಾಳಿ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್‌ (Dinesh Kumar) ಪರಾರಿಯಾಗಿದ್ದರು.

    ಹಲವು ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಜಯರಾಮ್ ಹಣ ಕಳುಹಿಸಿದ್ದ. 15 ವರ್ಷದ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದ ಜಯರಾಮ್ ಬೇನಾಮಿಯಿಂದಲೇ ಕೋಟ್ಯಾಧೀಶ್ವರನಾಗಿದ್ದಾನೆ ಎನ್ನಲಾಗುತ್ತಿದೆ. ದಿನೇಶ್ ಕುಮಾರ್ ಗೆ ಬಹಳ ಪರಮಾಪ್ತನಾಗಿದ್ದ ಜಯರಾಮ್ 50-50 ಅನುಪಾತದ ಸೈಟ್‌ ಹಂಚಿಕೆಯಲ್ಲಿ ನಂ 1 ಫಲಾನುಭವಿಯಾಗಿದ್ದಾನೆ. ಕೇವಲ 50-50 ಸೈಟ್‌ನಿಂದ ಮಾತ್ರವಲ್ಲದೇ ಬೇನಾಮಿ ಹಣದಿಂದಲೂ ಜಯರಾಮ್ ಈಗ ಶ್ರೀಮಂತನಾಗಿದ್ದಾನೆ.

     

  • MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

    MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

    – ಬೇನಾಮಿ ವ್ಯಕ್ತಿಗಳಿಗೆ ಸೈಟ್‌ ಹಂಚಿಕೆ
    – ಡಿ.ಬಿ.ನಟೇಶ್‌ರಿಂದ ಭಾರೀ ಅಕ್ರಮ

    ಬೆಂಗಳೂರು: 14 ಸೈಟ್‌ ಅಲ್ಲದೇ ಹಲವು ಸೈಟ್‌ಗಳನ್ನು ಅಕ್ರಮ ಮಾರಾಟ ಮಾಡಲಾಗಿದೆ. ಸಹಕಾರ ಸಂಘಗಳನ್ನು ಬಳಸಿ ದುರ್ಬಳಕೆ ಮಾಡಲಾಗಿದೆ. ಬೇನಾಮಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂ. ಹಣವನ್ನು ವಂಚಿಸಲಾಗಿದೆ.

    ಇದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಕಂಡು ಬಂದ ಅಂಶಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 142 ಸೈಟ್ ಗಳು ಸೇರಿದಂತೆ 300 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

    ಮೈಸೂರಿನ ಗಂಗರಾಜು ಹಾಗೂ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಆಧಾರದ ಮೇಲೆ ಮೈಸೂರು ಮುಡಾ ಕಚೇರಿ ಸೇರಿ, ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆಸಿತ್ತು.

    ಇಡಿ ಹೇಳಿದ್ದೇನು?
    ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.

    ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸಿತ್ತು. ಇದನ್ನೂ ಓದಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು: ಕಾಂಗ್ರೆಸ್ ನಾಯಕರಿಗೆ ಖರ್ಗೆ ಖಡಕ್ ಸಂದೇಶ

    ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳ ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂಡಾ 3,24,700 ರೂ.ಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ದುಬಾರಿ ಬೆಲೆ ಇರುವ ಜಾಗದಲ್ಲಿ ಅಂದಾಜು 60 ಕೋಟಿ ರೂ. 14 ನಿವೇಶನಗಳನ್ನು ಪರಿಹಾರವಾಗಿ ನೀಡಲಾಗಿದೆ. ಪಾರ್ವತಿ ಅವರಿಗೆ ಅಕ್ರಮ ಪರಿಹಾರ ನಿವೇಶನ ಹಂಚಿಕೆಯಲ್ಲಿ ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಪಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ.

    ತನಿಖೆಯ ವೇಳೆ ಪಾರ್ವತಿ ಅವರಿಗೆ ಹಂಚಿಕೆಯಾದ 14 ನಿವೇಶನಗಳನ್ನು ಹೊರತುಪಡಿಸಿ, ಹೆಚ್ಚಿನ ಸಂಖ್ಯೆಯ ನಿವೇಶನಗಳನ್ನು ಮುಡಾ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪರಿಹಾರವಾಗಿ ಅಕ್ರಮವಾಗಿ ಹಂಚಿಕೆ ಮಾಡಿರುವುದು ದೃಢಪಟ್ಟಿದೆ. ಪಡೆದುಕೊಂಡ ನಿವೇಶನಗಳನ್ನು ಭಾರೀ ಲಾಭಕ್ಕೆ ಮಾರಾಟ ಮಾಡಲಾಗಿದೆ. ಹೀಗೆ ಅಕ್ರಮವಾಗಿ ಗಳಿಸಿದ ಲಾಭವನ್ನು ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಲಾಗಿದೆ.

    ದಾಳಿಯ ವೇಳೆ ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಬೇನಾಮಿಗಳು/ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮಾಜಿ ಮುಡಾ ಅಧ್ಯಕ್ಷ ಹಾಗೂ ಮುಡಾ ಆಯುಕ್ತರಿಗೆ ಸೇರಿದ ಸ್ಥಿರಾ ಆಸ್ತಿ ,ಮುಡಾ ನಿವೇಶನಗಳು ,ನಗದು ಇತ್ಯಾದಿಗಳ ಬಗ್ಗೆ ದಾಖಲೆ ಲಭ್ಯವಾಗಿದೆ. ಹೀಗೆ ಪಡೆದ ಅಕ್ರಮ ಹಣವನ್ನು ಮತ್ತಷ್ಟು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದ್ದರೂ ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಿದ್ದಾರೆ

    ಮುಡಾದ ಮಾಜಿ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿನಲ್ಲಿ ಆಸ್ತಿ, ಐಷಾರಾಮಿ ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಹಕಾರಿ ಸಂಘದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ.

     

  • ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ

    ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ.

    ಮೈಸೂರಿನ ಸಾಮಾಜಿಕ ಕಾರ್ಯಕರ್ತರಾದ ಗಂಗರಾಜು, ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಕುರಿತು ತನಿಖೆ ನಡೆಸಿದ ಇಡಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟರ ಹೆಸರಿನಲ್ಲಿದ್ದ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಏಜೆಂಟ್‌ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲಿ ಸೈಟ್‌ಗಳು ನೋಂದಣಿಯಾಗಿತ್ತು ಎಂದು ಸಹ ಇಡಿ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್‌ ಸಿಲಿಂಡರ್‌ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ

    ಮೈಸೂರು ಮುಡಾ ಕಚೇರಿ ಸೇರಿ ಹಲವಡೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇದನ್ನೂ ಓದಿ: ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

  • ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ – 30 ಲಕ್ಷದೊಂದಿಗೆ ಪರಾರಿ

    ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ – 30 ಲಕ್ಷದೊಂದಿಗೆ ಪರಾರಿ

    ಮಂಗಳೂರು: ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳೆಂದು ಮನೆಗೆ ದಾಳಿ ಮಾಡಿ 30 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ (Vittla) ಬೋಳಂತೂರುನಲ್ಲಿ ನಡೆದಿದೆ.

    ಸಿಂಗಾರಿ ಬೀಡಿ (Singari Beedi) ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ಶುಕ್ರವಾರ ತಡ ರಾತ್ರಿ ತಮಿಳುನಾಡು ಮೂಲದ ಕಾರಿನಲ್ಲಿ ನಾಲ್ಕು ಜನರ ತಂಡ ಆಗಮಿಸಿದೆ.  ಇದನ್ನೂ ಓದಿ: ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಬೆಳಗ್ಗಿನ ಜಾವದವರೆಗೂ ತನಿಖೆ ನಡೆಸುವ ನಾಟಕವಾಡಿದ್ದರು. ಬಳಿಕ ಮನೆಯಲ್ಲಿ ಸಿಕ್ಕಿದ್ದ 30 ಲಕ್ಷ ನಗದು ಹಿಡಿದುಕೊಂಡು ಪರಾರಿಯಾಗಿದ್ದರು.

    ಅನುಮಾನಗೊಂಡ ಸುಲೈಮಾನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 15 ಗಂಟೆಗಳ ಕಾಲ ತನಿಖೆ ಅಮಾನವೀಯ ನಡವಳಿಕೆ ಎಂದ ಸುಪ್ರೀಂ – ಇಡಿ ಕಾರ್ಯವೈಖರಿಗೆ ತರಾಟೆ

    15 ಗಂಟೆಗಳ ಕಾಲ ತನಿಖೆ ಅಮಾನವೀಯ ನಡವಳಿಕೆ ಎಂದ ಸುಪ್ರೀಂ – ಇಡಿ ಕಾರ್ಯವೈಖರಿಗೆ ತರಾಟೆ

    ಚಂಡೀಗಢ: ಕಳೆದ ವರ್ಷ ಹರಿಯಾಣದ ಕಾಂಗ್ರೆಸ್‌ ಮಾಜಿ ಶಾಸಕ ಸುರೇಂದರ್‌ ಪನ್ವಾರ್‌ (Surender Panwar) ಅವರನ್ನು ಸುಮಾರು 15 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ ವರ್ತನೆಯನ್ನು ಅಮಾನವೀಯ ನಡವಳಿಕೆ ಎಂದು ಸುಪ್ರೀಂ ಕೋರ್ಟ್‌ (Supreme Court) ಟೀಕಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ದ್ವಿಸದಸ್ಯ ಪೀಠವು, ಜಾರಿ ನಿರ್ದೇಶನಾಲಯವನ್ನು (Enforcement Directorate) ತೀವ್ರ ತರಾಟೆಗೆ ತೆಗೆದುಕೊಂಡಿತು. ಮಾಜಿ ಶಾಸಕರ ಬಂಧನವನ್ನು ʻಕಾನೂನು ಬಾಹಿರʼಎಂದಿದ್ದ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿಯಿತು. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ – ಎಎಪಿ ದೆಹಲಿ ನಗರಕ್ಕೆ ಆಪತ್ತು ಎಂದ ಪ್ರಧಾನಿ

    ಪ್ರಕರಣವು ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಾಗಿ ಮರಳು ಗಣಿಗಾರಿಕೆಗೆ ಸಂಬಂಧಿಸಿದ್ದು, ಇಂತಹ ಪ್ರಕರಣದಲ್ಲಿ ಜನರನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ವ್ಯಕ್ತಿಯೊಬ್ಬರಿಗೆ ಹೇಳಿಕೆ ನೀಡುವಂತೆ ಬಲವಂತ ಮಾಡಿರುವುದು ಆಘಾತಕಾರಿಯಾಗಿದೆ ಎಂದು ಕೋರ್ಟ್‌ ಕಳವಳವ್ಯಕ್ತಪಡಿಸಿದೆ.

    ಇ.ಡಿ ಜುಲೈನಲ್ಲಿ ಸುಮಾರು 15 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯರಾತ್ರಿ 1.40ಕ್ಕೆ ಪನ್ವಾರ್‌ರನ್ನು ಬಂಧಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಹರಿಯಾಣ ಹೈಕೋರ್ಟ್ ಪನ್ವಾರ್ ಅವರ ಬಂಧನವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: 10 ಲಕ್ಷದ ಸೂಟ್‌ ಧರಿಸುವವರಿಂದ ʻಶೀಷ ಮಹಲ್‌ʼ ಪ್ರಸ್ತಾಪ ಸೂಕ್ತವಲ್ಲ – ಮೋದಿಗೆ ಕೇಜ್ರಿವಾಲ್‌ ತಿರುಗೇಟು

    ಇಡಿ ಪರ ವಕೀಲ ರೆಹೆಬ್ ಹುಸೇನ್ ಅವರು, ಹೈಕೋರ್ಟ್ ಪನ್ವಾರ್‌ರನ್ನು 14 ಗಂಟೆ 40 ನಿಮಿಷಗಳ ಕಾಲ ನಿರಂತರವಾಗಿ ಪ್ರಶ್ನಿಸಲಾಗಿತ್ತು ಎಂದು ತನ್ನ ಆದೇಶದಲ್ಲಿ ತಪ್ಪಾಗಿ ದಾಖಲಿಸಿದೆ. ವಿಚಾರಣೆ ಸಂದರ್ಭದಲ್ಲಿ ಅವರಿಗೆ ಭೋಜನ ವಿರಾಮ ನೀಡಲಾಗಿತ್ತು ಎಂದು ವಾದಿಸಿದರು. ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಜನರನ್ನು ನಸುಕಿನ ವೇಳೆಯಲ್ಲಿ ವಿಚಾರಣೆಗೆ ಒಳಪಡಿಸದಿರಲು ಇ.ಡಿ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿದರು.

    ಇಡಿ ಪರ ವಕೀಲರ ವಾದ ತಿರಸ್ಕರಿಸಿದ ಪೀಠವು, ವ್ಯಕ್ತಿಗೆ ವಿರಾಮವನ್ನು ನೀಡದೇ ಇಷ್ಟೊಂದು ದೀರ್ಘ ಅವಧಿಗೆ ವಿಚಾರಣೆ ನಡೆಸುವ ಮೂಲಕ ಚಿತ್ರಹಿಂಸೆ ನೀಡಲು ನಿಮ್ಮಿಂದ ಹೇಗೆ ಸಾಧ್ಯವಾಯಿತು? ಎಂದು ತನಿಖಾ ಸಂಸ್ಥೆಯನ್ನು ಪ್ರಶ್ನಿಸಿತು. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ಜು.19ರಂದು ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಯಲ್ಲಿ ಹಾಜರಾಗಿದ್ದ ಪನ್ವಾರ್‌ರನ್ನು ಜು.21ರ ಮಧ್ಯರಾತ್ರಿ 1.40 ಗಂಟೆಯವರಗೆ ನಿರಂತರವಾಗಿ ವಿಚಾರಣೆ ನಡೆಸಿದ್ದು ತನಿಖಾ ಸಂಸ್ಥೆಯ ಅಮಾನವೀಯ ನಡೆಯಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಹಾಗೆಯೇ ಇಡಿ ತನ್ನ ತನಿಖಾ ವಿಧಾನವನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ನಿರ್ದೇಶನ ನೀಡಿತ್ತು.

  • ಡಿಕೆಶಿ ಕೇಸ್‌ನಲ್ಲಿ ಹಿನ್ನಡೆ| ಕ್ರಿಮಿನಲ್ ಪಿತೂರಿ ಒಂದನ್ನೇ ಗಮನಿಸಿ PMLA ಅಡಿ ಕೇಸ್‌ ದಾಖಲಿಸಬೇಡಿ: ಸಿಬ್ಬಂದಿಗೆ ಇಡಿ ಬಾಸ್‌ ಸೂಚನೆ

    ಡಿಕೆಶಿ ಕೇಸ್‌ನಲ್ಲಿ ಹಿನ್ನಡೆ| ಕ್ರಿಮಿನಲ್ ಪಿತೂರಿ ಒಂದನ್ನೇ ಗಮನಿಸಿ PMLA ಅಡಿ ಕೇಸ್‌ ದಾಖಲಿಸಬೇಡಿ: ಸಿಬ್ಬಂದಿಗೆ ಇಡಿ ಬಾಸ್‌ ಸೂಚನೆ

    ನವದೆಹಲಿ: ಕ್ರಿಮಿನಲ್ ಪಿತೂರಿ (Criminal Conspiracy) ಅಥವಾ ಐಪಿಸಿ 120 ಬಿ ಒಂದನ್ನೇ ಪರಿಗಣಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿ ಪ್ರಕರಣ ದಾಖಲಿಸಬೇಡಿ ಎಂದು ಜಾರಿ ನಿರ್ದೇಶನಾಲಯದ (ED) ಮುಖ್ಯಸ್ಥ ರಾಹುಲ್ ನವೀನ್ ಅವರು ತಮ್ಮ ಸಿಬ್ಬಂದಿಗೆ ಆಂತರಿಕ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಐಪಿಸಿ 120 ಬಿ ಅಡಿ ದಾಖಲಾದ ಪ್ರಕರಣವನ್ನು ಆಧಾರವಾಗಿಟ್ಟು PMLA ಅಡಿ ನಾವು ಕೇಸ್‌ ದಾಖಲಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹಿನ್ನಡೆಯಾಗುತ್ತಿದೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ 5, 8ನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿಯನ್ನು ಫೇಲ್‌ ಮಾಡಬಹುದು

    ಇಡಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪ್ರಕರಣಗಳಲ್ಲಿ ಕಠಿಣ ಕೆಲಸ ಮಾಡಿದ ನಂತರವೂ ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಎದುರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಐಪಿಸಿ ಸೆಕ್ಷನ್ 120 ಅನ್ನು PMLA ಅಡಿಯಲ್ಲಿ ಸ್ವತಂತ್ರ ಪೂರ್ವಾಪೇಕ್ಷಿತ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್‌ ಏನು ಹೇಳಿದೆಯೋ ಅದು ಕಾನೂನು ಎಂದು ತಿಳಿಸಿದ್ದಾರೆ.

    ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್‌, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣಗಳನ್ನು ಇದೇ ಕಾರಣ ನೀಡಿ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. 120 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾತ್ರಕ್ಕೆ ಊಹಿಸಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು,

    ಈಗ ಸಿಬಿಐ, ಪೊಲೀಸ್, ಐಟಿ ಇಲಾಖೆಯಲ್ಲಿ ದಾಖಲಾದ ಎಫ್‌ಐಆರ್‌ ಅನ್ನು ಆಧಾರವಾಗಿಟ್ಟುಕೊಂಡು ಇಡಿ ಪಿಎಂಎಲ್‌ಎ ಅಡಿ ಕೇಸ್‌ ದಾಖಲಿಸುತ್ತದೆ.

    ಭ್ರಷ್ಟಾಚಾರ, ತೆರಿಗೆ ವಂಚನೆ ಮತ್ತು ವನ್ಯಜೀವಿ ಕಾಯ್ದೆಯ ಉಲ್ಲಂಘನೆಯವರೆಗಿನ ಸುಮಾರು 150 ಪ್ರಾಥಮಿಕ ಅಪರಾಧಗಳು ಪಿಎಂಎಲ್‌ಎ ಅಡಿ ಬರುತ್ತದೆ. ಐಪಿಸಿ ಸೆಕ್ಷನ್ 120B ಅನ್ನು ಭಾರತೀಯ ನ್ಯಾಯ ಸಂಹಿತಾದಲ್ಲಿ (BNS) ಸೆಕ್ಷನ್ 61 ಕ್ಕೆ ಬದಲಾಯಿಸಲಾಗಿದೆ.

    2017ರಲ್ಲಿ ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ನಡೆಸಿತ್ತು.  ಈ  ವೇಳೆ ದೆಹಲಿಯ ವಿವಿಧ ಸ್ಥಳಗಳಲ್ಲಿ  8.59 ಕೋಟಿ ರೂ. ನಗದು  ಹಣ ಸಿಕ್ಕಿತ್ತು.   ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್‌ ವಿರುದ್ಧ ಐಪಿಸಿ ಸೆಕ್ಷನ್‌ 120 B ಅಡಿಯಲ್ಲಿ 2018ರಲ್ಲಿ ಪ್ರಕರಣವನ್ನು ದಾಖಲಿಸಿತ್ತು.

  • ದೆಹಲಿ ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ದೊಡ್ಡ ಸಂಕಷ್ಟ – ಇಡಿ ತನಿಖೆಗೆ ರಾಜ್ಯಪಾಲರು ಅಸ್ತು

    ದೆಹಲಿ ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ದೊಡ್ಡ ಸಂಕಷ್ಟ – ಇಡಿ ತನಿಖೆಗೆ ರಾಜ್ಯಪಾಲರು ಅಸ್ತು

    ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರಾದ ವಿ.ಕೆ ಸಕ್ಸೆನಾ (VK Saxena), ಜಾರಿ ನಿರ್ದೇಶನಾಲಯಕ್ಕೆ (ED) ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭೆ ಚುನಾವಣೆ ಸೋಲಿನ ಬಳಿಕ ಅಗ್ನಿಪರೀಕ್ಷೆಯಾಗಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi elections) ಇನ್ನೆರಡು ತಿಂಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ಕೇಜ್ರಿವಾಲ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಆರೋಪದಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು, ಆದರೆ ವಿಚಾರಣೆ ಆರಂಭವಾಗಿರಲಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರ ಅನುಮೋದನೆಯನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದ ನಂತರ, ಇಡಿ ಅನುಮತಿ ಕೋರಿ ಪತ್ರ ಬರೆದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣನಾ? ನನಗೂ ಸಿ.ಟಿ ರವಿ ಬಗ್ಗೆ ಸಿಂಪತಿ ಇದೆ – ಡಿಕೆಶಿ

    ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾಡಿದ ಬಹುದೊಡ್ಡ ಆರೋಪಗಳಲ್ಲಿ ಮದ್ಯ ನೀತಿ ಹಗರಣವೂ ಒಂದಾಗಿದೆ. ಹಗರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಇಡಿ, ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನ ಬಂಧಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಎಪಿ ಮುಖ್ಯಸ್ಥರು ಸೆಪ್ಟೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2025ರ ಚುನಾವಣೆಯಲ್ಲಿ ಜನರು ತಮ್ಮ ಪಕ್ಷವನ್ನು ಮರು ಆಯ್ಕೆ ಮಾಡಿದ ಬಳಿಕವೇ ಉನ್ನತ ಹುದ್ದೆಗಳಿಗೆ ಮರಳುವುದಾಗಿ ಪ್ರತಿಜ್ಞೆ ಮಾಡಿದ್ದರು.

    ಇನ್ನೂ ಕೇಜ್ರಿವಾಲ್‌ ಮತ್ತು ಆಪ್‌ ಪಕ್ಷದ ವಿರುದ್ಧ ಇಡಿ ಸಲ್ಲಿಸಿದ ಕೊನೆಯ ಚಾರ್ಜ್‌ಶೀಟ್‌ನಲ್ಲಿ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಹಗರಣದ ಕಿಂಗ್‌ಪಿನ್‌ ಎಂದು ಹೆಸರಿಸಿತ್ತು. ಸಿಸೋಡಿಯಾ ಸಹ ಮದ್ಯನೀತಿ ಹಗರಣದಲ್ಲಿ 18 ತಿಂಗಳು ಜೈಲು ವಾಸ ಅನುಭವಿಸಿ, ಕಳೆದ ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

    https://youtu.be/YlG_OlaLqTs?si=3RuOGm_tcymnxqzA

    ಇ.ಡಿ ಆರೋಪ ಏನು?
    ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಅವರು 100 ಕೋಟಿ ಲಂಚ ಪಡೆಯುವ ಸಲುವಾಗಿ 2021-22ನೇ ಸಾಲಿನ ಅಬಕಾರಿ ನೀತಿಯಲ್ಲಿ ಬದಲಾವಣೆ ತಂದಿದ್ದರು. ಇದರಲ್ಲಿ 45 ಕೋಟಿ ರೂ.ಗಳನ್ನ ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು ಎಂಬುದು ಇ.ಡಿ ಆರೋಪ. ಈಗಾಗಲೇ ಚಾರ್ಜ್‌ಶೀಟ್ ರದ್ದುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ (ಡಿ.20) ದೆಹಲಿ ಹೈಕೋರ್ಟ್‌ ಇ.ಡಿಗೆ ನೋಟಿಸ್‌ ನೀಡಿದೆ.