Tag: ED

  • ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ನವದೆಹಲಿ: ಭಾರತದಲ್ಲಿನ ಕೆಲ ಎನ್‌ಜಿಒ ಸಂಸ್ಥೆಗಳಿಗೆ ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್‌ (George Soros) ನೇತೃತ್ವದ ಆರ್ಥಿಕ ಅಭಿವೃದ್ಧಿ ನಿಧಿಯಿಂದ ಹಣಕಾಸಿನ ನೆರವು ನೀಡಿರುವುದು ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಬಹಿರಂಗವಾಗಿದೆ.

    ಹೌದು. ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿ (SEDF) ಭಾರತದಲ್ಲಿ ಎನ್‌ಜಿಒ ವಲಯಕ್ಕೆ ಹಣಕಾಸಿನ ನೆರವು ನೀಡಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಇಡಿ ತನಿಖೆಯ ಪ್ರಕಾರ, ಸೊರೊಸ್‌ ಆರ್ಥಿಕ ಅಭಿ‌ವೃದ್ಧಿ ನಿಧಿಯು ರೂಟ್‌ಬ್ರಿಡ್ಜ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (RSPL), ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್ (RAPL) ಮತ್ತು ಅಸರ್ ಸೋಶಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ASAR) ಎಂಬ ಮೂರು ಭಾರತೀಯ ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆ (FDI) ಮತ್ತು ಸಲಹಾ/ಸೇವಾ ಶುಲ್ಕದ ಹೆಸರಿನಲ್ಲಿ ಹಣದ ನೆರವು ನೀಡಿದೆ. ಈ ಕಂಪನಿಗಳು 2020-21 ರಿಂದ 2023-24ರ ನಡುವೆ ಸುಮಾರು 25 ಕೋಟಿ ರೂ.ಗಳ ನೆರವನ್ನು ಪಡೆದಿವೆ. ಆದ್ರೆ ಸೊರೊಸ್‌ನ ಓಪನ್ ಸೊಸೈಟಿ ಇನ್‌ಸ್ಟಿಟ್ಯೂಟ್ (OSI) ಅನ್ನು ಮೇ 2016 ರಿಂದ ಅನಪೇಕ್ಷಿತ ಚಟುವಟಿಕೆಗಳಿಗಾಗಿ ಗೃಹ ಸಚಿವಾಲಯವು ಕಣ್ಗಾವಲಿನಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.

    ಇಡಿ ಪ್ರಕಾರ, ಎಸ್‌ಇಡಿಎಫ್‌ನಿಂದ ಆರ್‌ಎಸ್‌ಪಿಎಲ್ 18.64 ಕೋಟಿ ರೂ.ಗಳನ್ನು ಪರಿವರ್ತಿಸಬಹುದಾದ ಆದ್ಯತೆಯ ಷೇರುಗಳ (CCPS) ರೂಪದಲ್ಲಿ ಪಡೆದುಕೊಂಡಿದೆ. ಇದರ ಮೌಲ್ಯವು ಪ್ರತಿ ಷೇರಿಗೆ 2.5 ರಿಂದ 2.6 ಲಕ್ಷ ರೂ.ಗಳಷ್ಟಿದೆ. ಎಫ್‌ಸಿಆರ್‌ಎ ನಿಬಂಧನೆಗಳನ್ನು ತಪ್ಪಿಸಲು ಇದು ಅಡ್ಡಮಾರ್ಗ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಏಕೆಂದರೆ ಸರ್ಕಾರದ ಪೂರ್ವಾನುಮತಿಯಿಲ್ಲದೇ ಭಾರತೀಯ ಎನ್‌ಜಿಒಗಳಿಗೆ ನೇರವಾಗಿ ದೇಣಿಗೆ ನೀಡಲು SEDFಗೆ ಯಾವುದೇ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಇನ್ನೂ ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್‌ಗೆ (RAPL) 2.70 ಕೋಟಿ ರೂ.ಗಳ ನೆರವನ್ನು ಪಡೆದುಕೊಂಡಿದೆ.  ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಮಾರಿಷಸ್ ಸಂಪರ್ಕ
    ಮಾರಿಷಸ್ ಮೂಲದ ಆಸ್ಪಾದ ಇನ್ವೆಸ್ಟ್‌ಮೆಂಟ್ ಕಂಪನಿ (ಎಐಸಿ) ಮೂಲಕ ಒಎಸ್‌ಐಗೆ ಸಂಬಂಧಿಸಿದ ಹಣವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. 2013 ರಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಲಾದ Aspada Investment Advisors Pvt Ltd (AIAPL), SEDFನ ಭಾರತೀಯ ಹೂಡಿಕೆಗಳನ್ನು ನಿರ್ವಹಿಸಿತು ಮತ್ತು ಸಲಹೆ ನೀಡಿತು ಎಂಬುದನ್ನು ಇಡಿ ತನಿಖೆ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ಬಂದ್‌! ಪರಿಣಾಮವೇನು?

    ಯಾರು ಈ ಸೊರಸ್?
    94 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.

    ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.  ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸದ್ಯ ಸೊರಸ್ 720 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ.

  • ಲೋಕಾಯುಕ್ತ ಕ್ಲೀನ್‌ ಚಿಟ್‌ ವರದಿ ತಿರಸ್ಕರಿಸುವಂತೆ ಇಡಿ ತಕರಾರು ಅರ್ಜಿ

    ಲೋಕಾಯುಕ್ತ ಕ್ಲೀನ್‌ ಚಿಟ್‌ ವರದಿ ತಿರಸ್ಕರಿಸುವಂತೆ ಇಡಿ ತಕರಾರು ಅರ್ಜಿ

    ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಲೋಕಾಯುಕ್ತ (Lokayukta) ನೀಡಿರುವ ಕ್ಲೀನ್ ಚಿಟ್‌ ರೀಪೋರ್ಟ್ ಅನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ (ED) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ.

    ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿಗಳಿವೆ. ಆದರೂ ಲೋಕಾಯುಕ್ತದವರು ಕ್ಲೀನ್ ಚೀಟ್ ಕೊಟ್ಟಿದ್ದಾರೆ. ಇದು ಸರಿ ಇಲ್ಲ. ಹೀಗಾಗಿ ಲೋಕಾಯುಕ್ತ ವರದಿ ತಿರಸ್ಕರಿಸಿ ಎಂದು ತಕರಾರು ಅರ್ಜಿ ಹಾಕಿದೆ.

    ಮುಡಾ ಅಧಿಕಾರಿಗಳಿಂದಲೇ ಕಾನೂನು ದುರ್ಬಳಕೆ ಆರೋಪ:
    ಮುಡಾ ಹಗರಣ‌ ಪ್ರಕರಣದಲ್ಲಿ ಲೋಕಾಯುಕ್ತ ವರದಿಯಿಂದ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬ ಪಾರಾಗಿದ್ದಾರೆ. ಆದ್ರೆ, ಕಾನೂನಿನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಈಗ ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. 2003-04 ರಿಂದಲೂ ಕೂಡ ಮುಡಾದ ಆಡಳಿತ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ (Lokayukta) ತೀರ್ಮಾನಕ್ಕೆ ಬಂದಿತ್ತು. 2016 ರಿಂದ 2024ರ ವರೆಗೂ ಮುಡಾದಲ್ಲಿ ಆಯುಕ್ತರಾಗಿದ್ದ ಅಧಿಕಾರಿಗಳು 1,098 ಸೈಟ್‌ಗಳು ದುರ್ಬಳಕೆ ಆಗಿದೆ ಎಂದು ತನಿಖೆ ಮುಂದುವರೆಸಿದೆ.

  • ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ

    ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ

    ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ (Mehul Choksi) ತನ್ನ ದೇಶದಲ್ಲಿರುವುದಾಗಿ ಯೂರೋಪಿಯನ್‌ ದೇಶವಾದ ಬೆಲ್ಜಿಯಂ (Belgium) ಖಚಿತಪಡಿಸಿದೆ ಎಂದು ವರದಿಯಾಗಿದೆ.

    ಸಂದರ್ಶನವೊಂದರಲ್ಲಿ ಮಾತನಾಡುವಾಗ ಬೆಲ್ಜಿಯಂ ವಿದೇಶಾಂಗ ಸಚಿವಾಲಯವು ಅವರ ಉಪಸ್ಥಿತಿಯನ್ನು ಖಚಿತಪಡಿಸಿದೆ. ಆದಾಗ್ಯೂ ಅವರ ವೈಯಕ್ತಿಕ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದ್ರೆ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಾರಂಭಿಸಲು ಭಾರತೀಯ ಅಧಿಕಾರಿಗಳು ತಮ್ಮ ಸಹವರ್ತಿಗಳನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿಕೊಂಡಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 13,850 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಪ್ರಮುಖವಾಗಿ ಬೇಕಾಗಿರುವ ಚೋಕ್ಸಿ ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದಾರೆ.

    ವೈದ್ಯಕೀಯ ಚಿಕಿಯತ್ಸೆಗಾಗಿ ತೆರಳಿದ್ದ ಚೋಕ್ಸಿ ದ್ವೀಪರಾಷ್ಟ್ರದ ಪ್ರಜೆಯಾಗಿ ಉಳಿದಿದ್ದಾರೆ ಎಂದು ಅಲ್ಲಿನ ಸಚಿವ ಇಪಿ ಚೆಟ್ ಗ್ರೀನ್ ಇತ್ತೀಚೆಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    65 ವರ್ಷದ ಚೋಕ್ಸಿ 2023ರ ನವೆಂಬರ್ 15ರಿಂದ ʻಎಫ್- ರೆಸಿಡೆನ್ಸಿʼ ಪೌರತ್ವ ಕಾರ್ಡ್ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಬೆಲ್ಜಿಯಂ ನವರೇ ಆದ್ದರಿಂದ ಪೌರತ್ವ ಕಾರ್ಡ್ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಚೋಕ್ಸಿ ಭಾರತದ ಪೌರತ್ವವನ್ನೂ ತ್ಯಜಿಸಿಲ್ಲ. ಒಂದು ವೇಳೆ ತಾತ್ಕಾಲಿಕವಾಗಿ ಪಡೆದಿರುವ ಬೆಲ್ಜಿಯಂ ಪೌರತ್ವವನ್ನು ಶಾಶ್ವತವಾಗಿ ಪರಿವರ್ತಿಸಿದ್ರೆ, ಮುಂದೆ ಆತ ಯುರೋಪಿಯನ್ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಳಿಕ ಆತನನ್ನು ಕರೆತರಲು ಭಾರತಕ್ಕೆ ಕಷ್ಟವಾಗಬಹುದು ಎನ್ನಲಾಗಿದೆ. ಈ ನಡುವೆ ಚೋಕ್ಸಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳುವ ಪ್ಲ್ಯಾನ್‌ನಲ್ಲಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾದ ಚೋಕ್ಸಿ 2018ರಲ್ಲಿ ಭಾರತದಿಂದ ಫಲಾಯನ ಮಾಡಿದರು. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?

  • ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ (PNB Scam) ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ (Mehul Choksi) ಬೆಲ್ಜಿಯಂನ್‌ ಆಂಟ್ವೆರ್ಪ್‌ನಲ್ಲಿ ಪತ್ನಿ ಪ್ರೀತಿ ಚೋಕ್ಸಿಯೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತೀಯ ಅಧಿಕಾರಿಗಳು ಬೆಲ್ಜಿಯಂ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (PNB) 13,850 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (CBI) ಮತ್ತು ಜಾರಿ ನಿರ್ದೇಶನಾಲಯ (ED)ಕ್ಕೆ ಪ್ರಮುಖವಾಗಿ ಬೇಕಾಗಿರುವ ಚೋಕ್ಸಿ ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ – 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು!

    ವೈದ್ಯಕೀಯ ಚಿಕಿಯತ್ಸೆಗಾಗಿ ತೆರಳಿದ್ದ ಚೋಕ್ಸಿ ದ್ವೀಪರಾಷ್ಟ್ರದ ಪ್ರಜೆಯಾಗಿ ಉಳಿದಿದ್ದಾರೆ ಎಂದು ಅಲ್ಲಿನ ಸಚಿವ ಇಪಿ ಚೆಟ್ ಗ್ರೀನ್ ಇತ್ತೀಚೆಗೆ ತಿಳಿಸಿದ್ದಾರೆ ಎಂದು ಸುದ್ದಿಷಂಸ್ಥೆಯೊಂದು ವರದಿ ಮಾಡಿದೆ.

    65 ವರ್ಷದ ಚೋಕ್ಸಿ 2023ರ ನವೆಂಬರ್‌ 15ರಿಂದ ʻಎಫ್‌- ರೆಸಿಡೆನ್ಸಿʼ ಪೌರತ್ವ ಕಾರ್ಡ್‌ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಬೆಲ್ಜಿಯಂ ನವರೇ ಆದ್ದರಿಂದ ಪೌರತ್ವ ಕಾರ್ಡ್‌ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಸಿಲಿನಿಂದ ಬರಿದಾದ ವೇದಾವತಿ ನದಿ ಒಡಲು – ತೀರದಲ್ಲೇ ಬೋರ್ ಕೊರೆಸಲು ರೈತರ ಸಾಹಸ

    ಸದ್ಯ ಚೋಕ್ಸಿ ಭಾರತದ ಪೌರತ್ವವನ್ನೂ ತ್ಯಜಿಸಿಲ್ಲ. ಒಂದು ವೇಳೆ ತಾತ್ಕಾಲಿಕವಾಗಿ ಪಡೆದಿರುವ ಬೆಲ್ಜಿಯಂ ಪೌರತ್ವವನ್ನು ಶಾಶ್ವತವಾಗಿ ಪರಿವರ್ತಿಸಿದ್ರೆ, ಮುಂದೆ ಆತ ಯುರೋಪಿಯನ್‌ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಳಿಕ ಆತನನ್ನು ಕರೆತರಲು ಭಾರತಕ್ಕೆ ಕಷ್ಟವಾಗಬಹುದು ಎನ್ನಲಾಗಿದೆ. ಈ ನಡುವೆ ಚೋಕ್ಸಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳುವ ಪ್ಲ್ಯಾನ್‌ನಲ್ಲಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.

    ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿಯಾದ ಚೋಕ್ಸಿ 2018ರಲ್ಲಿ ಭಾರತದಿಂದ ಫಲಾಯನ ಮಾಡಿದರು. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

  • ರಾಜಕಾರಣಿಗಳ ವಿರುದ್ಧ 193 ಪ್ರಕರಣ, ಎರಡರಲ್ಲಿ ಶಿಕ್ಷೆ – ಇಡಿ ತನಿಖೆಯ ವೈಫಲ್ಯ ಎಂದ ವಿರೋಧ ಪಕ್ಷಗಳು

    ರಾಜಕಾರಣಿಗಳ ವಿರುದ್ಧ 193 ಪ್ರಕರಣ, ಎರಡರಲ್ಲಿ ಶಿಕ್ಷೆ – ಇಡಿ ತನಿಖೆಯ ವೈಫಲ್ಯ ಎಂದ ವಿರೋಧ ಪಕ್ಷಗಳು

    ನವದೆಹಲಿ: ಕಳೆದ 10 ವರ್ಷಗಳಲ್ಲಿ (2015-2025) ಜಾರಿ ನಿರ್ದೇಶನಾಲಯ (ED) ಸಂಸದರು, ಶಾಸಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಒಟ್ಟು 193 ಪ್ರಕರಣಗಳನ್ನು ದಾಖಲಿಸಿದ್ದು ಈ ಪ್ರಕರಣಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

    ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, 2015ರಿಂದ 2025ರವರೆಗೆ ದಾಖಲಾದ 193 ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ 2016-17ರಲ್ಲಿ ಮತ್ತು ಮತ್ತೊಂದರಲ್ಲಿ 2019-20ರಲ್ಲಿ ಶಿಕ್ಷೆ ದೊರೆತಿದೆ. ಉಳಿದಂತೆ ಬಹುತೇಕ ಪ್ರಕರಣಗಳಲ್ಲಿ ತನಿಖೆ ಮುಗಿದಿಲ್ಲ ಅಥವಾ ಅಪರಾಧ ಸಾಬೀತಾಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

    ಇಡಿ ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಶಿಕ್ಷೆಯ ಪ್ರಮಾಣ ಕೇವಲ 1%ಕ್ಕಿಂತ ಕಡಿಮೆ ಇರುವುದು ಗಮನಾರ್ಹ. ಈ ಅಂಕಿಅಂಶಗಳು ಇಡಿಯ ಕಾರ್ಯವೈಖರಿಯ ಬಗ್ಗೆ ಚರ್ಚೆಗೆ ಕಾರಣವಾಗಿವೆ. ಕೇಂದ್ರ ಸರ್ಕಾರವು ಇಡಿ ತನಿಖೆಗಳು ವಿಶ್ವಾಸಾರ್ಹ ಸಾಕ್ಷ್ಯಗಳ ಆಧಾರದ ಮೇಲೆ ನಡೆಯುತ್ತವೆ ಮತ್ತು ರಾಜಕೀಯ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ : ಕುಣಿಗಲ್ ರಂಗನಾಥ್

    ವಿರೋಧ ಪಕ್ಷಗಳು ಈ ಮಾಹಿತಿಯನ್ನು ಆಧರಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇಡಿ ಎಂಬುದು ಬಿಜೆಪಿ ಸರ್ಕಾರದ ಅಸ್ತ್ರವಾಗಿದ್ದು, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಮಟ್ಟ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇರುವುದು ಈ ಆರೋಪಕ್ಕೆ ಬಲ ನೀಡಿದೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ ಕೇಸ್‌ | ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ – ಮಂಡ್ಯ ಡಿಸಿ

  • ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್ (George Soros) ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್‌ (Open Society Foundation) ಫಲಾನುಭವಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದು ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಸಿದೆ.

    ಒಟ್ಟು ಮೂರು ಕಂಪನಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಪರಿಶೀಲನೆ ನಡೆಸುತ್ತಿದೆ.

    ಭಾರತದಲ್ಲಿ ಓಎಸ್‌ಎಫ್‌ 1999 ರಿಂದ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಓಎಸ್‌ಎಫ್‌ ವಿದ್ಯಾರ್ಥಿವೇತನಗಳನ್ನು ನೀಡುತ್ತಿತ್ತು. ನಂತರ ಅನುದಾನ ನೀಡಿಕೆ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.

    ಓಪನ್ ಸೊಸೈಟಿ ಫೌಂಡೇಶನ್‌ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಹಾಗೂ ಸ್ವತಂತ್ರ ಮಾಧ್ಯಮಗಳನ್ನು ಮುನ್ನಡೆಸುವ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಭಾರತದಲ್ಲಿ 4,06,000 ಡಾಲರ್‌ ಖರ್ಚು ಮಾಡಿದೆ ಎಂದು ಓಎಸ್‌ಎಫ್‌ ಹೇಳಿತ್ತು. ಇದನ್ನೂ ಓದಿ: ಭೂಮಿಗೆ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ – ಎಲ್ಲಿ ಇಳಿಯುತ್ತಾರೆ? ಇಳಿಯುವ ಪ್ರಕ್ರಿಯೆ ಹೇಗೆ? ಇಳಿದ ನಂತರ ಮುಂದೇನು?

    ಈ ಹಿಂದೆ ಅದಾನಿ ಕಂಪನಿ ಮತ್ತು ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರ್‌ ಬುಚ್‌ ವಿರುದ್ಧ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿದಾಗ ಬಿಜೆಪಿ ಜಾರ್ಜ್‌ ಸೊರೊಸ್‌ ಹೆಸರನ್ನು ಎಳೆದು ತಂದಿತ್ತು. ಹಿಂಡನ್‌ ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರ ಜಾರ್ಜ್‌ ಸೊರೊಸ್‌. ಈ ವ್ಯಕ್ತಿ ಹಲವು ದೇಶಗಳ ಆರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಭಾರತದ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಸಂಚು ಎಂದು ಆರೋಪಿಸಿತ್ತು.

    ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಮಾತನಾಡಿ, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ. ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್‌ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್‌ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದ್ದರು.

     

  • ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    – ರನ್ಯಾ ಪತಿ ಜತಿನ್‌, ಗೆಳೆಯನ ಮನೆ ಸೇರಿ 9 ಕಡೆ ಡಿಆರ್‌ಐನಿಂದಲೂ ರೇಡ್‌

    ಬೆಂಗಳೂರು: ಚಿನ್ನ ಕಳ್ಳಸಾಗಣೆ (Gold Smuggling Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ (Ranya Rao) ಮನೆ ಮೇಲೆ ಇ.ಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ.

    ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?

    ಇದಕ್ಕೂ ಮುನ್ನ ನಟಿ ರನ್ಯಾ, ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು.

    ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

    ಆಡುಗೋಡಿ ಬಳಿ ರನ್ಯಾ ರಾವ್ ಅವರ ಪತಿ ನಿವಾಸದ ಮೇಲೆ ಡಿಆರ್‌ಐ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದರು. ಇದನ್ನೂ ಓದಿ: ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ನಾಲ್ವರಿಗೆ ಸಿಬಿಐ ನೋಟಿಸ್‌

  • MUDA Case | ಸಿಎಂ ಸೇಫ್, ಸೈಟ್ ಮಾಡಿಕೊಟ್ಟ ಅಧಿಕಾರಿಗಳು ಲಾಕ್ – ಇನ್ವೆಸ್ಟಿಗೇಷನ್ ಚಾಪ್ಟರ್-2

    MUDA Case | ಸಿಎಂ ಸೇಫ್, ಸೈಟ್ ಮಾಡಿಕೊಟ್ಟ ಅಧಿಕಾರಿಗಳು ಲಾಕ್ – ಇನ್ವೆಸ್ಟಿಗೇಷನ್ ಚಾಪ್ಟರ್-2

    ಬೆಂಗಳೂರು: ಮುಡಾ ಹಗರಣ‌ (MUDA Scam) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕುಟುಂಬ ಪಾರಾಗಿದ್ದಾರೆ. ಆದ್ರೆ, ಕಾನೂನಿನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಈಗ ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

    ಹೌದು. 2003-04 ರಿಂದಲೂ ಕೂಡ ಮುಡಾದ ಅಧಿಕಾರಿಗಳು, ಮುಡಾದ ಆಡಳಿತ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ (Lokayukta) ತೀರ್ಮಾನಕ್ಕೆ ಬಂದಿದೆ. 2016 ರಿಂದ 2024ರ ವರೆಗೂ ಮುಡಾದಲ್ಲಿ ಆಯುಕ್ತರಾಗಿದ್ದ ಅಧಿಕಾರಿಗಳು 1,098 ಸೈಟ್‌ಗಳು ದುರ್ಬಳಕೆ ಆಗಿದೆ ಎಂದು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ – ಮೈಸೂರು KSRTC ಸೂಚನೆ

    ಲೋಕಾಯುಕ್ತ ಬಿಟ್ಟರೂ ಇಡಿ ಬಿಡಲ್ಲ
    ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ನಿರಾಳ ನೀಡಿದೆ. ನಾಲ್ಕು ತಿಂಗಳ ಕಾಲ‌ ಸುಧೀರ್ಘವಾದ ತನಿಖೆ ನಡೆಸಿದ ನ್ಯಾಯಾಲಯ ಈಗ ಸಿಎಂ ಮತ್ತು ಕುಟುಂಬದ ವಿರುದ್ಧದ ಆರೋಪಿಗಳಿಗೆ ಸಾಕ್ಷ್ಯಾಧಾರಗಳು ಇಲ್ಲ ಅಂತ ಅಂತಿಮ ವರದಿ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ದೃಶ್ಯಂ 3 ಸಿನಿಮಾ ಕನ್ಫರ್ಮ್​ – ಕ್ಲೈಮ್ಯಾಕ್ಸ್‌ ಬಗ್ಗೆ ಹೆಚ್ಚಾಯ್ತು ಕುತೂಹಲ

    ಈ ಮೂಲಕ ಸಿಎಂ ಕುಟುಂಬ ನಿರಾಳ ಆಗಿಲ್ಲ, ಇನ್ನೂ ಕೂಡ ಇಡಿ ಕಂಟಕ ಎದುರಿಸಬೇಕಾದ ಅನಿವಾರ್ಯತೆ ಇದೆ. ಕಾನೂನಿನಲ್ಲಿ ಇಡಿ ತನಿಖಾ ಸಂಸ್ಥೆಗೆ ಲೋಕಾಯುಕ್ತ ಸಲ್ಲಿಕೆ ಮಾಡಿರುವ ಬಿ ರಿಪೋರ್ಟ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅಧಿಕಾರ ಹೊಂದಿದೆ. ಇದನ್ನೇ ದಾಳ ಮಾಡಿಕೊಂಡಿರೋ ಇಡಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರೊಟೆಸ್ಟ್ ಅಪ್ಲಿಕೇಷನ್ ಅಂದ್ರೆ ಬಿ ರಿಪೋರ್ಟ್ ಸ್ವೀಕೃತಿ ಮಾಡಬಾರದು ಅಂತ ಅರ್ಜಿ ಹಾಕಿದ್ರೆ, ಇಡಿ ಕೂಡ ಪ್ರತ್ಯೇಕವಾದ ಅರ್ಜಿ ಹಾಕಲು ತಯಾರಿ ನಡೆಸಿದೆ.

    ಜೊತೆಗೆ ಬಿ ರಿಪೋರ್ಟ್ ಸಲ್ಲಿಕೆ ಇಂದ ನಮ್ಮ ತನಿಖೆಗೆ ಯಾವುದೇ ತೊಂದರೆ ಇಲ್ಲ ಅಂತ ತನಿಖೆ ಮುಂದುವರೆಸಿದ್ದು, ಅತೀ ದೊಡ್ಡ ಸಂಕಷ್ಟ ಸಿಎಂ ಮತ್ತು ಕುಟುಂಬ ಎದುರಿಸುತ್ತಾ ಬೇಕಾಗಿದೆ. ಇದನ್ನೂ ಓದಿ: ಮಾನವೀಯತೆ ಮರೆತ ಶೇಷಾದ್ರಿಪುರಂ ಪೊಲೀಸರು – ತಡರಾತ್ರಿವರೆಗೆ ಠಾಣೆಯಲ್ಲಿ ಗರ್ಭಿಣಿ ಪರದಾಟ

  • ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

    ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಅಕ್ರಮ ಆರೋಪ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ED) ಮನಿ ಲಾಂಡ್ರಿಂಗ್ ಆಗಿರೋ ಬಗ್ಗೆ ವರದಿ ತಯಾರಿಸಿದೆ. ಇದನ್ನೂ ಓದಿ:  ವಕ್ಪ್ ತಿದ್ದುಪಡಿ ಮಸೂದೆ ಪರಿಶೀಲನೆ ಅಂತ್ಯ – ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ

    ಈ ವರದಿ ಕುರಿತು ಮುಡಾ ಆಯುಕ್ತರು, ಮುಡಾದಲ್ಲಿನ ಸಬ್ ರಿಜಿಸ್ಟ್ರಾರ್ (MUDA Subrijistrar) ಹಾಗೂ ಮೈಸೂರಿನ 14 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 104 ಪುಟಗಳ ಪತ್ರ ಬರೆದಿದೆ. ಪತ್ರದಲ್ಲಿ ಯಾರ‍್ಯಾರ ಪಾತ್ರ ಏನು..? ಹೇಗೆಲ್ಲಾ ಅಕ್ರಮ ನಡೆದಿದೆ ಅಂತ ಉಲ್ಲೇಖಿಸಿದ್ದು, 160 ಸೈಟುಗಳನ್ನ ಯಾವುದೇ ಪರಭಾರೆ ಮಾಡದಂತೆ ಸೂಚಿಸಿದೆ. ಇದನ್ನೂ ಓದಿ: ರಾಜ್ಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ಮಂಜೂರು ಮಾಡಿ: ಸಚಿವ ಬೋಸರಾಜು ಆಗ್ರಹ

    ಇಡಿ ಪತ್ರದಲ್ಲಿನ ಪ್ರಮುಖ ಅಂಶಗಳೇನು?

    * ಕೆಸರೆ ಗ್ರಾಮದ 3 ಎಕರೆ 26 ಗುಂಟೆ ಜಮೀನನ್ನ 3.24 ಲಕ್ಷ ರೂ.ಗೆ ವಶಪಡಿಸಿಕೊಳ್ಳಲಾಗಿದೆ

    * ತಪ್ಪು‌ ಮಾಹಿತಿ ಹಾಗೂ ಪ್ರಭಾವದಿಂದಾಗಿ ಡಿನೋಟಿಫಿಕೇಷನ್ ಕೈಬಿಡಲಾಗಿತ್ತು

    * ಮುಡಾ ಸೈಟ್ ಮಾಡಿ ಮಾರಾಟ ಮಾಡಿದ್ದ ಜಾಗವನ್ನ ಮಲ್ಲಿಕಾರ್ಜುನ ಸ್ವಾಮಿಯಿಂದ ಖರೀದಿ ಮಾಡಲಾಗಿದೆ

    * ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದಾಗ ಮುಡಾ ಯಾವುದೇ ಆಕ್ಷೇಪ ಮಾಡಿಲ್ಲ

    * ಮುಡಾದಿಂದ ತಪ್ಪು ವರದಿ ಆಧರಿಸಿ ಮಲ್ಲಿಕಾರ್ಜುನ ಸ್ವಾಮಿ ಭಾಗವನ್ನು ರೆಸಿಡೆನ್ಶಿಯಲ್‌ ಜಾಗವಾಗಿ ಮಾರ್ಪಾಡು ಮಾಡಲಾಗಿದೆ

    * ರಾಜಕೀಯ ಪ್ರಭಾವದಿಂದಾಗಿ ಐಷಾರಾಮಿ ಬಡಾವಣೆಯಲ್ಲಿ ಬದಲಿ ಸೈಟ್ ಗಳನ್ನ ಬಿ.ಎಂ ಪಾರ್ವತಿ ಪಡೆದಿದ್ದಾರೆ

    * ಮುಡಾದಿಂದ ಕಾನೂನು ಬಾಹಿರವಾಗಿ ಪರಿಹಾರ ಸೈಟ್ ಪಡೆಯಲಾಗಿದೆ

    * ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸೈಟ್ ಪಡೆಯಲಾಗಿದೆ

    * ಡಿ.ಬಿ.ನಟೇಶ್ ಮುಡಾ ಆಯುಕ್ತರಾಗಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ

    * ಇಡಿ ತನಿಖೆಯಲ್ಲಿ ಪಿಎಂಎಲ್ಎ ಕಾಯಿದೆ ಸೆ.3ರ ಅಡಿ ಮನಿಲ್ಯಾಂಡ್ರಿಂಗ್ ನಡೆದಿರುವುದು ಸ್ಪಷ್ಟವಾಗಿದೆ

    * ಇಡಿ ತನಿಖೆಯಲ್ಲಿ ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜೆ.ದೇವರಾಜು ಆರೋಪಿಗಳಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

    MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

    – 50:50 ಸೈಟು ಪಡೆದ ಫಲಾನುಭವಿಗಳಿಗೆ ಬಿಗ್ ಶಾಕ್

    ಮೈಸೂರು: ಜಾರಿ ನಿರ್ದೇಶನಾಲಯ(ED) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ MUDA) 50:50 ಅನುಪಾದಲ್ಲಿ ಸೈಟು ಪಡೆದಿದ್ದ ಫಲಾನುಭವಿಗಳಿಗೆ‌ ಬಿಗ್‌ ಶಾಕ್‌ ಕೊಟ್ಟಿದೆ. ಬರೋಬ್ಬರಿ 160 ಸೈಟುಗಳ ಜಪ್ತಿ ಮಾಡಿ ಇಡಿ ಆದೇಶ ಪ್ರಕಟಿಸಿದೆ.

    ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಎಲ್ಲಾ ಸೈಟುಗಳ ಜಪ್ತಿಗೆ ಇಡಿ ಅಧಿಕೃತ ಆದೇಶ ಪ್ರಕಟಿಸಿದ್ದು, ಈ ಆದೇಶ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣದ ವ್ಯವಹಾರ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಇಡಿ ಎಲ್ಲಾ ಸೈಟುಗಳ ಜಪ್ತಿಗೆ ಆದೇಶ ಹೊರಡಿಸಿದೆ. ಆದೇಶ ಪತ್ರವನ್ನು ಸಬ್ ರಿಜಿಸ್ಟ್ರಾರ್‌ಗೆ ಕಳುಹಿಸಿದೆ. ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

    ಸರ್ಕಾರದ ಮಾರ್ಗಸೂಚಿ ಪ್ರಕಾರ ಆ ಸೈಟುಗಳ ಮೌಲ್ಯ 81 ಕೋಟಿ ರೂ. ಆಗಿದೆ. ಆದರೆ ಮಾರುಕಟ್ಟೆ ಮೌಲ್ಯ 300 ಕೋಟಿ ರೂ.ಗಿಂತಲೂ ಅಧಿಕ ಇದೆ ಎನ್ನಲಾಗಿದೆ.

    ಯಾರ‍್ಯಾರ ಸೈಟುಗಳು ಜಪ್ತಿ?
    – ರವಿ ಅವರ 31 ಸೈಟ್, ಅಬ್ದುಲ್ ವಾಹಿದ್ ಹೆಸರಿನಲ್ಲಿದ್ದ 41 ಸೈಟ್, ಕ್ಯಾಥಡ್ರಾಲ್ ಸೊಸೈಟಿಯ 40 ಸೈಟ್, ಇತರರಿಗೆ ಸೇರಿದ 48 ಸೈಟ್ ಗಳನ್ನು ಜಪ್ತಿ ಮಾಡಿದೆ. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    ಒಂದೇ ದಿನದಲ್ಲಿ 31 ಸೈಟ್:
    ಮುಡಾ ಬ್ರಹ್ಮಾಂಡ್‌ ಭ್ರಷ್ಟಾಚಾರ ಕೇಸ್‌ ಬೆನ್ನು ಹತ್ತಿರುವ ಇಡಿ ಇಂಚಿಂಚೂ ಮಾಹಿತಿಯನ್ನು ಬಟಾಬಯಲು ಮಾಡುತ್ತಿದೆ. ಮುಡಾದಲ್ಲಿ ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 31 ಸೈಟು ರಿಜಿಸ್ಟರ್ ಮಾಡಿರುವುದು ಬೆಳಕಿಗೆ ಬಂದಿದೆ.

    2023ರ ಅಕ್ಟೋಬರ್‌ 11ರಂದು ರವಿ ಎಂಬುವವರ ಹೆಸರಿಗೆ 31 ಸೈಟುಗಳು ನೋಂದಣಿ ಆಗಿರುವುದು ಇಡಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮೈಸೂರು ನಗರದ ಹೃದಯ ಭಾಗ ಕುವೆಂಪುನಗರದಲ್ಲಿ 12 ಸೈಟ್, ದಟ್ಟಗಳ್ಳಿ ಮತ್ತು ವಿಜಯನಗರದಲ್ಲಿ 19 ಸೈಟುಗಳು ನೋಂದಣಿ ಆಗಿವೆ. ಇದಲ್ಲದೇ ಅಬ್ದುಲ್ ವಾಹಿದ್ ಹೆಸರಿನಲ್ಲಿ 2023ರ ಮಾರ್ಚ್‌ 8 ರಂದು 25 ಸೈಟ್‌ ನೋಂದಣಿಯಾಗಿದ್ದರೆ 2023ರ ಅ.1ರಂದು 3 ಸೈಟ್‌ ನೋಂದಣಿ ಆಗಿದೆ.