Tag: ED

  • ಇಡಿ ಅಕೌಂಟ್ಸ್‌ ಮಾಹಿತಿ ಕೇಳಿದೆ, ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ: ಪರಮೇಶ್ವರ್‌

    ಇಡಿ ಅಕೌಂಟ್ಸ್‌ ಮಾಹಿತಿ ಕೇಳಿದೆ, ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ: ಪರಮೇಶ್ವರ್‌

    ಬೆಂಗಳೂರು: ನಮ್ಮ ಕಾಲೇಜಿಗೆ ಬಂದು ಅಕೌಂಟ್ಸ್‌ ಮಾಹಿತಿ ಕೇಳಿದ್ದಾರೆ. ಆ ಮಾಹಿತಿಯನ್ನು ನಾವು ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಹೇಳಿದ್ದಾರೆ.

    ಜಾರಿ ನಿರ್ದೇಶನಾಲಯದ ದಾಳಿಯ (ED) ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ಕೇಳಿದರೂ ನೀಡಿ ಎಂದು ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

     

    ನಿನ್ನೆ ಇಡಿ ದೆಹಲಿಯ ಅಧಿಕಾರಿಗಳು ನಮ್ಮ ಮೂರು ಕಾಲೇಜುಗಳಿಗೆ ಭೇಟಿ ಕೊಟ್ಟಿದ್ದಾರೆ. ಅವರಿಗೆ ಏನು ಸೂಚನೆ ಬಂದಿದೆಯೋ ಗೊತ್ತಿಲ್ಲ. ಅವರು ಕೇಳಿದ ದಾಖಲೆಗಳನ್ನು ನಾವು ಕೊಡುತ್ತೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

    ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಅವರಿಗೆ ಸಹಕಾರ ನೀಡುತ್ತೇನೆ. ನಾನು ಯಾವುದನ್ನು ಮುಚ್ಚಿಟ್ಟಿಲ್ಲ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ ಎಂದು ಹೇಳಿದರು.

  • ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

    ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

    ತುಮಕೂರು: ಬುಧವಾರ ಬೆಳ್ಳಂಬೆಳಗ್ಗೆ ಸಚಿವ ಜಿ.ಪರಮೇಶ್ವರ್ (G Parameshwar) ಶಿಕ್ಷಣ ಸಂಸ್ಥೆ ಮೇಲೆ ಇಡಿ (ED)ದಾಳಿ ನಡೆಸಿದೆ. ಈ ನಡುವೆ ಪರಮೇಶ್ವರ್ ಕ್ರಯ ಮಾಡಿದ್ದ ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.

    ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

    ತುಮಕೂರಿನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಆಸ್ತಿಯ ಕ್ರಯಪತ್ರವೊಂದು ಸಿಕ್ಕಿದೆ ಎನ್ನಲಾಗಿದೆ. ಜಿ ಪರಮೇಶ್ವರ್ ಮಾಜಿ ಶಾಸಕ ಶಫಿ ಅಹ್ಮದ್‌ರಿಂದ ಎಚ್.ಎಮ್.ಎಸ್ ಕಾಲೇಜು ಖರೀದಿಸಿದ್ದರು. ಸುಮಾರು 95 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎಂದು ಕ್ರಯಪತ್ರದಲ್ಲಿ ನಮೂದಿಸಿದ್ದರೂ ಅಸಲಿಗೆ 140 ಕೋಟಿ ರೂ.ಗೆ ವ್ಯವಹಾರ ನಡೆದಿದೆ ಎನ್ನಲಾಗಿದೆ. ಪರಮೇಶ್ವರ್ ಸಂದಾಯ ಮಾಡಿದ್ದ ಹಣವನ್ನು ದುಬೈನಲ್ಲಿ ಇದ್ದ ಶಫಿ ಅಹ್ಮದ್ ಅವರ ಸಂಬಂಧಿ ಚಿನ್ನದ ವ್ಯಾಪಾರಿಗೆ ತಲುಪಿದೆ ಎನ್ನಲಾಗಿದೆ. ಇದು ರನ್ಯಾ ರಾವ್‌ಗೂ (Ranya Rao) ನಂಟಿದೆಯಾ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ. ಇದನ್ನೂ ಓದಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

    ಕೇವಲ ಎಚ್.ಎಮ್.ಎಸ್ ಕಾಲೇಜು ಒಂದೇ ಅಲ್ಲ, ನಗರದ ಪ್ರತಿಷ್ಠಿತ ಬಂಡಿಮನೆ ಕಲ್ಯಾಣಮಂಟಪವನ್ನೂ ಪರಮೇಶ್ವರ್ ಖರೀಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಎಸ್ ಮಾಲನ್ನೂ ಖರೀದಿ ಮಾಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದ ಆಯಾಮದಲ್ಲೂ ಶೋಧ ನಡೆದಿದೆ. ಇದನ್ನೂ ಓದಿ: ಆಂಧ್ರಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಕರ್ನಾಟಕ

    ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಜೊತೆ ನೆಲಮಂಗಲ ತಾಲೂಕಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 14 ಗಂಟೆಗಳ ಕಾಲ 7 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ರಾತ್ರಿ ಕೂಡ ಎರಡೂ ಕಡೆಗಳಲ್ಲಿ ಶೋಧ ನಡೆದಿದೆ. ಇಂದು ಮುಂಜಾನೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.. ಇದನ್ನೂ ಓದಿ: ರಾಜ್ಯದ ಪ್ರಭಾರ ಡಿಜಿ & ಐಜಿಪಿಯಾಗಿ ಎಂ.ಎ.ಸಲೀಂ ನೇಮಕ

  • ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ (G. Parameshwara) ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ED) ದಾಳಿ ಹಿಂದೆ ರನ್ಯಾ ರಾವ್‌ ಕೇಸ್‌ (Ranya Rao Case) ಲಿಂಕ್‌ ಇದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ (R Ashok) ಮಾಡಿದ ಗಂಭೀರ ಆರೋಪದಿಂದ ಈ ಪ್ರಶ್ನೆ ಈಗ ಎದ್ದಿದೆ.  ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್‌, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂಬ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಕನ್ನಡ ಮಾತನಾಡಲ್ಲ ಎಂದು ಉದ್ದಟತನ ಪ್ರದರ್ಶಿಸಿದ್ದ ಎಸ್‌ಬಿಐ ಮ್ಯಾನೇಜರ್ ದಿಢೀರ್ ವರ್ಗಾವಣೆ

    ತನಿಖೆ ನಡೆದ ಬಳಿಕ ಮತ್ತಷ್ಟು ವಿಷಯಗಳು ಹೊರಬರಬಹುದು. ಈ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆ. ಆದರೆ ದಾಳಿಯಿಂದ ಇವರು ಹೆದರುತ್ತಾರೆ ಎಂದು ಅನಿಸುವುದಿಲ್ಲ. ಯಾಕೆಂದರೆ ಇವರು ಲೂಟಿ ಮಾಡಲೆಂದೇ ಬಂದಿದ್ದಾರೆ ಎಂದರು.

     

    ಮೊದಲು ಇಡಿ ದಾಳಿ ಮುಗಿದು ತನಿಖೆ ನಡೆಯಲಿದೆ. ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತೇವೆ. ಮುಂದಿನ ಹೋರಾಟ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದಿರುವ ರನ್ಯಾ ನಿವಾಸ ಮೇಲೆ ಇಡಿ ದಾಳಿ ನಡೆಸಿತ್ತು. ಇಡಿ ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದವು. ಈ ದಾಖಲೆಗಳ ಆಧಾರದ ಮೇಲೆ ಪರಮೇಶ್ವರ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.

  • ಅಪರಾಧದ ಆದಾಯದಿಂದ ಸೋನಿಯಾ, ರಾಹುಲ್‌ 142 ಕೋಟಿ ಲಾಭ ಪಡೆದಿದ್ದಾರೆ: ಇಡಿ

    ಅಪರಾಧದ ಆದಾಯದಿಂದ ಸೋನಿಯಾ, ರಾಹುಲ್‌ 142 ಕೋಟಿ ಲಾಭ ಪಡೆದಿದ್ದಾರೆ: ಇಡಿ

    ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 142 ಕೋಟಿ ರೂ. ಅಪರಾಧದ ಆದಾಯವನ್ನು ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದೆ.

    ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಹೈಕೋರ್ಟ್‌ಗೆ ಇಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು ಇಂದು ವಿಚಾರಣೆ ನಡೆಯಿತು.

    ಇಡಿಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, 2023 ರ ನವೆಂಬರ್‌ನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ 751.9 ಕೋಟಿ ರೂ. ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಳ್ಳುವವರೆಗೆ ಆರೋಪಿಗಳು ಅಪರಾಧದ ಆದಾಯದಿಂದ ಲಾಭ ಪಡೆಯುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಅಪರಾಧದ ಆದಾಯವನ್ನು ಪಡೆದಾಗ ಗಾಂಧಿ ಕುಟುಂಬ ಹಣ ವರ್ಗಾವಣೆ ಮಾಡಿದ್ದು ಮಾತ್ರವಲ್ಲದೆ, ಆದಾಯವನ್ನು ಹಿಡಿದಿಟ್ಟುಕೊಳ್ಳುವ ಮೂಲಕವೂ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌

    ವಿಚಾರಣೆ ವೇಳೆ ಪ್ರಕರಣದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರತಿಯನ್ನು ಸುಬ್ರಮಣಿಯನ್ ಸ್ವಾಮಿಗೆ ನೀಡಬೇಕೆಂದು ನ್ಯಾಯಾಧೀಶರು ಇಡಿಗೆ ತಿಳಿಸಿದರು. ಸುಬ್ರಮಣಿಯನ್‌ ಸ್ವಾಮಿ ಅವರು 2014 ರ ಜೂನ್‌ 26 ರಂದು ದೂರು ನೀಡಿದ್ದರು. ಇಡಿ 2021 ರಿಂದ ತನಿಖೆ ನಡೆಸಿ ಈ ವರ್ಷ ಆರೋಪ ಪಟ್ಟಿ ಸಲ್ಲಿಸಿತ್ತು.

    ಏನಿದು ಪ್ರಕರಣ?
    ಕ್ರಿಮಿನಲ್ ಪಿತೂರಿ ನಡೆಸಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್‌ ಪಿತ್ರೊಡಾ, ಸುಮನ್‌ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಪಡೆದಿದ್ದಾರೆ.

    ಯಂಗ್ ಇಂಡಿಯನ್‌ ಲಿಮಿಟೆಡ್‌ ಮೂಲಕ 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್‌ ಅವರು ಕೇವಲ 50 ಲಕ್ಷ ರೂ.ಗೆ ಖರೀದಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ 90.2 ಕೋಟಿ ರೂ. ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್‌ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

  • ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್‌

    ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್‌

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ಗೆ ಜಾರಿ ನಿರ್ದೇಶನಾಲಯ (ED) ಶಾಕ್‌ ನೀಡಿದೆ. ಪರಮೇಶ್ವರ್‌ (Parameshwara) ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ.

    ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್, ಎಂಜಿನಿಯರಿಂಗ್‌ ಕಾಲೇಜು ಅಲ್ಲದೇ ನೆಲಮಂಗಲದ ಟಿ ಬೇಗೂರು ಬಳಿ ಇರುವ ಕಾಲೇಜು ಮೇಲೂ ಇಡಿ ದಾಳಿ ನಡೆದಿದೆ.  ಇದನ್ನೂ ಓದಿ: ಹೈವೇಯಲ್ಲಿ ನಿಂತ ಬಸ್ಸನ್ನು ತಳ್ಳಿದ ಮಹಿಳೆಯರು

     

    9 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ನಾಲ್ಕು ವರ್ಷದ ಹಿಂದೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಆಗ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು.

  • ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

    ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರಿಗೆ ಏ.28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

    ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ (Real Estate) ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಮೇಲೆ ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ದಾಳಿ ನಡೆಸಿತ್ತು. ಈ ಕಂಪನಿಗಳ ಜಾಹೀರಾತಿನಲ್ಲಿ (Advertisement) ಮಹೇಶ್‌ ಬಾಬು ನಟಿಸಿದ್ದರು.

    ನಟಿಸಿದ್ದಕ್ಕೆ ಮಹೇಶ್‌ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ಪೈಕಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಗದು ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ  ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಸಾಯಿ ಸೂರ್ಯ ರಿಯಲ್‌ ಎಸ್ಟೇಟ್‌ ಕಂಪನಿಯ ಪ್ರಚಾರದ ಜಾಹೀರಾತಿನಲ್ಲಿ ಮಹೇಶ್‌ ಬಾಬು

    ತೆಲಂಗಾಣ ಪೊಲೀಸರು ಹೈದರಾಬಾದ್ ಪ್ರಾಪರ್ಟೀಸ್ ಲಿಮಿಟೆಡ್‌ನ ನರೇಂದ್ರ ಸುರಾನಾ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅನಧಿಕೃತ ಲೇಔಟ್‌ಗಳಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ. ಒಂದೇ ಪ್ಲಾಟ್ ಅನ್ನು ಹಲವು ಬಾರಿ ಮಾರಾಟ ಮಾಡಿದ ಮತ್ತು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಿದ ಆರೋಪ ಕಂಪನಿಯ ಮೇಲಿದೆ. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

    ನಿಯಮ ಏನು ಹೇಳುತ್ತೆ?
    ಯಾವುದೇ ವ್ಯಕ್ತಿಯು ಒಂದೇ ವಹಿವಾಟಿಗೆ ಅಥವಾ ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ದಿನದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಈ ನಿಯಮವು ಶುಲ್ಕಗಳು, ದೇಣಿಗೆ, ಸಂಭಾವನೆ ಎಲ್ಲದ್ದಕ್ಕೂ ಅನ್ವಯವಾಗುತ್ತದೆ. ಈ ಮಿತಿಯನ್ನು ಉಲ್ಲಂಘಿಸಿದರೆ ಆದಾಯ ತೆರಿಗೆ ಕಾಯ್ದೆ 271DA ಅಡಿಯಲ್ಲಿ ಸ್ವೀಕರಿಸಿದ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು UPI, NEFT ಮತ್ತು RTGS ಮೂಲಕ ಪಾವತಿಸಬೇಕಾಗುತ್ತದೆ.

  • National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (Sam Pitroda) ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದೆ.

    ಈ ಚಾರ್ಜ್‌ಶೀಟ್‌ನಲ್ಲಿ ಸೋನಿಯಾಗಾಂಧಿ ಎ-1 ಹಾಗೂ ರಾಹುಲ್ ಗಾಂಧಿ ಎ-2 ಆಗಿದ್ದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಈ ಮೂಲಕ ಮೊದಲ ಬಾರಿಗೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾದಂತಾಗಿದೆ. ಇದನ್ನೂ ಓದಿ: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

     

    ಕೋರ್ಟ್‌ ಏ.25ಕ್ಕೆ ಮುಂದಿನ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಒಟ್ಟು 700 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಮುಂದಾಗಿದ್ದು ದೆಹಲಿ, ಮುಂಬೈನ ಬಾಂದ್ರಾ ಪ್ರದೇಶ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡದಲ್ಲಿರುವ ಆಸ್ತಿಗಳ ಮೇಲೆ ನೋಟಿಸ್‌ಗಳನ್ನು ಅಂಟಿಸಲಾಗಿದೆ. ಇವುಗಳಲ್ಲಿ ದೆಹಲಿಯ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಹೆರಾಲ್ಡ್ ಹೌಸ್ ಕೂಡ ಸೇರಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ಇಡಿ 2021 ರಲ್ಲಿ ತನಿಖೆ ಆರಂಭಿಸಿತ್ತು. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಜೂನ್ 2014 ರಲ್ಲಿ ನೀಡಿದ ಆದೇಶದ ಆಧಾರದ ಮೇಲೆ ತನಿಖೆ ನಡೆಸಿತ್ತು.

  • ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    – ಬಿ ರಿಪೋರ್ಟ್ ವಿರೋಧಿಸಿ ಇ.ಡಿ ವಾದ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaih) ಅವರಿಗೆ ಇಂದು ಮಹತ್ವದ ದಿನ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಲಿದೆ.

    ಸುಮಾರು ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದ ಲೋಕಾಯುಕ್ತ ಸಿಎಂ ಮತ್ತು ಸಿಎಂ ಪತ್ನಿ ಸೇರಿದಂತೆ ನಾಲ್ವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಅಂತಿಮ ವರದಿ ಸಲ್ಲಿಸಿತ್ತು. ಆದರೆ ಅಂತಿಮ ವರದಿ ಪ್ರಶ್ನಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅಂತಿಮ ವರದಿಯಲ್ಲಿ ಇರುವ ಲೋಪದೋಷಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ಆದೇಶ ನೀಡಲಿದೆ. ಇದನ್ನೂ ಓದಿ: ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

    ಆದರೆ ಸ್ನೇಹಮಯಿ ಕೃಷ್ಣ ಅವರ ಜೊತೆಗೆ ಇ.ಡಿ ಅಧಿಕಾರಿಗಳು ಬಿ ರಿಪೋರ್ಟ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇ.ಡಿಯ ತಕರಾರು ಅರ್ಜಿ ಮಾನ್ಯತೆಯ ವಾದ-ಪ್ರತಿವಾದ ನಡೆಯಲಿದೆ. ಈ ನಡುವೆ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪುತ್ತಾ ಅಥವಾ ಮರು ತನಿಖೆಗೆ ಆದೇಶ ನೀಡುತ್ತಾ ಎಂದು ಕಾದುನೋಡಬೇಕಿದೆ.  ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

  • ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ಬೆಂಗಳೂರು: ಭೋವಿ ನಿಗಮದ (Karnataka Bhovi Development Corporation) ಮೇಲೆ ಇಡಿ ದಾಳಿ ಪ್ರಕರಣ ಸಂಬಂಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 97 ಕೋಟಿ ರೂ. ಹಣ ದುರುಪಯೋಗವಾಗಿರುವುದಾಗಿ ಜಾರಿ ನಿರ್ದೇಶನಾಲಯ (ED) ಅಧಿಕೃತ ಮಾಹಿತಿ ನೀಡಿದೆ.

    ಭೋವಿ ಸಮುದಾಯದ ಏಜೆಂಟರ ಮೂಲಕ ನಕಲಿ ಫಲಾನುಭವಿಗಳ ಬ್ಯಾಂಕ್ ಖಾತೆ ಬಳಸಿಕೊಂಡು ಹಣ ವರ್ಗಾವಣೆ ಮಾಡಲಾಗಿದೆ. ಕೆಬಿಡಿಸಿಯಿಂದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ದಾಳಿ ವೇಳೆ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಮಾಜಿ ಎಂಡಿ ನಾಗರಾಜಪ್ಪನನ್ನು ವಶಕ್ಕೆ ಪಡೆಯಾಲಾಗಿದ್ದು, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ನಕಲಿ ಖಾತೆಗಳನ್ನು ಬಳಸಿಕೊಂಡು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ

    ಸದ್ಯ ನಾಗರಾಜಪ್ಪನನ್ನು ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇ.ಡಿ ಹೆಚ್ಚಿನ ತನಿಖೆಗಾಗಿ ನಾಗರಾಜಪ್ಪನನ್ನು 14 ದಿನ ವಶಕ್ಕೆ ಪಡೆದಿದೆ. ಇಡಿ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ ಎಂದು ಇ.ಡಿ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: UGCET ಪ್ರವೇಶ ಪತ್ರ ಬಿಡುಗಡೆ – ಮೊದಲ ಬಾರಿಗೆ ಕ್ಯೂಆರ್ ಕೋಡ್ ಮಾದರಿ OMR Sheet

  • ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಇಡಿ ಆಕ್ಷೇಪ – ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿಕೆ

    ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಇಡಿ ಆಕ್ಷೇಪ – ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿಕೆ

    ಮೈಸೂರು/ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯಗೆ (Siddaramaiah) ಮತ್ತೆ ಇಡಿ ಟೆನ್ಷನ್ ಶುರುವಾಗಿದೆ.

    ಲೋಕಾಯುಕ್ತ ಬಿ-ರಿಪೋರ್ಟ್ (Lokayukta B Report) ಪ್ರಶ್ನಿಸಿ ಇಡಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿಂದು ನಡೆಯಿತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಏಪ್ರಿಲ್ 8ಕ್ಕೆ ಕಾಯ್ದಿರಿಸಿತು. ಇದನ್ನೂ ಓದಿ: ಗೃಹಪ್ರವೇಶ ಮುಗಿಸಿದ್ದ ಹೊಸ ಮನೆಗೆ ಕನ್ನ; ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಹೋಗಿದ್ದಾಗ ಮನೆಗಳವು

    ಇಡಿ ಪರ ಹಿರಿಯ ವಕೀಲ ಮಧುಕರ್‌ ದೇಶಪಾಂಡೆ ವಾದ ಮಂಡನೆ ಮಾಡಿದರು. ಲೋಕಾಯುಕ್ತ ತನಿಖೆಯ ಬಗ್ಗೆ ಆಕ್ಷೇಪ ಎತ್ತಿ ವಾದ ಮಂಡಿಸಿದರು. ʻಬಿ ರಿಪೋರ್ಟ್ʼ ಚಾಲೆಂಜ್ ಮಾಡಲು ಇಡಿಗೆ ಅಧಿಕಾರ ಇದೆ ಎಂದು ಹೇಳಿದರು. ಇದನ್ನೂ ಓದಿ: ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ – ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೊಡುಗೆ

    ಈ ವೇಳೆ ಜಡ್ಜ್ ಸಂತೋಷ್ ಗಜಾನನ ಭಟ್‌, ಕೋರ್ಟ್‌ ʻಬಿ ರಿಪೋರ್ಟ್ʼ ಒಪ್ಪಿಕೊಂಡರೆ ನಿಮ್ಮ ನಿಲುವೇನು? ಅಂತ ಪ್ರಶ್ನೆ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಇಡಿ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಹಂಚಿಕೊಂಡಿದೆ. ಲೋಕಾಯುಕ್ತ ಪೊಲೀಸರಿಗೆ ವಿವರ ಹಂಚಿಕೊಂಡರೂ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹೀಗಾಗಿ ಇಡಿ ಬಿ ರಿಪೋರ್ಟ್ ಪ್ರಶ್ನಿಸಿದೆ. ಒಂದು ವೇಳೆ ಕೋರ್ಟ್‌ ಬಿ ರಿಪೋರ್ಟ್ ಒಪ್ಪಿಕೊಂಡರೆ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ಬಿ ರಿಪೋರ್ಟ್ ಪ್ರಶ್ನಿಸಲು ಇಡಿಗೆ ಅಧಿಕಾರವಿದೆ ಎಂದು ವಾದಿಸಿದರು.

    ಇದಕ್ಕೆ ನಿಮಗೆ ಅವಕಾಶ ಕೊಟ್ಟರೆ ದೂರುದಾರ ಸ್ಥಾನಮಾನ ಕೊಟ್ಟಂತೆ ಆಗುವುದಿಲ್ಲವೇ? ಅನುಸೂಚಿತ ಅಪರಾಧ ಇಲ್ಲದಿರುವಾಗ ಇಡಿಗೆ ಹೇಗೆ ಅಧಿಕಾರ ಬರಲಿದೆ..? ಎಂದು ವಿಜಯ್ ಮದನ್ ಲಾಲ್ ಕೇಸ್ ಉಲ್ಲೇಖಿಸಿ ಜಡ್ಜ್‌ ಇಡಿ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಏಪ್ರಿಲ್‌ 8ಕ್ಕೆ ವಿಚಾರಣೆ ಮುಂದೂಡಿತು. ಅಲ್ಲದೇ ಏಪ್ರಿಲ್‌ 8ಕ್ಕೆ ಲೋಕಾಯುಕ್ತ ಎಸ್‌ಪಿಪಿಗೂ ವಾದ ಮಂಡನೆ ಅವಕಾಶ ಕಲ್ಪಿಸಲು ಕೋರ್ಟ್‌ ನಿರ್ಧರಿಸಿತು. ಇದನ್ನೂ ಓದಿ: ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ – ಯತ್ನಾಳ್ ಶಪಥ