Tag: ED

  • ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ಬಳ್ಳಾರಿ: ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್‌ ಮಾಡಿಲ್ಲ ಎಂದು ಕಾಂಗ್ರೆಸ್‌ (Congress)  ಶಾಸಕ ನಾರಾ ಭರತ್‌ ರೆಡ್ಡಿ (Nara Bharat Reddy) ಹೇಳಿದ್ದಾರೆ.

    ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ (ED) ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಎರಡು ಬ್ಯಾಗ್‌ನಲ್ಲಿ ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದಾರೆ.

    ಇಡಿ ವಿಚಾರಣೆ ಅಂತ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಾರಾ ಭರತ್‌ ರೆಡ್ಡಿ, ಇಡಿ ಅಧಿಕಾರಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮ ವ್ಯವಹಾರ, ವಾಲ್ಮೀಕಿ ನಿಗಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ದಿನೇಶ್ ಗುಂಡೂರಾವ್

     

    ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೇನೆ. ಪಂಚನಾಮೆ ಮಾಡಿದ್ದು ಅದರಲ್ಲಿ ಸ್ಪಷ್ಟವಾಗಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. 40 ಕೋಟಿ ರೂ., 50 ಕೋಟಿ ರೂ. ಜಪ್ತಿಯಾಗಿದೆ ಎಂದು ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಮಾಹಿತಿ ಎಂದು ಹೇಳಿದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ರಾಜಕೀಯ ಅಂದರೆ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಆದರೆ ಯಾರು ಏನೇ ಮಾಡಿದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಜನರ ಪ್ರೀತಿಯಿಂದ ಗೆದ್ದಿದ್ದೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ತಿಳಿಸಿದರು.

    ಮುಂದೆ ಅಧಿಕಾರಿಗಳು ಏನೇ ದಾಖಲಾತಿ ಕೊಟ್ಟರೆ ಅವರಿಗೆ ಕೊಡುವೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿಲ್ಲ ಎಂದು ಈ ವೇಳೆ ಹೇಳಿದರು.

  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

    ಬೆಂಗಳೂರು: ರನ್ಯಾ ರಾವ್ (Ranya Rao) ಚಿನ್ನ ಕಳ್ಳ ಸಾಗಾಣಿಕೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಜಾರಿ ನಿರ್ದೇಶನಾಲಯದ (ED) ಬಳಿಕ ಈಗ ಆದಾಯ ತೆರಿಗೆ (Income Tax) ಇಲಾಖೆ ಎಂಟ್ರಿಯಾಗಿದೆ.

    ರನ್ಯಾ ರಾವ್ ಮತ್ತು ಮೂವರು ಆರೋಪಿಗಳ ವಿರುದ್ಧ ಐಟಿ ಪ್ರಕರಣ ದಾಖಲಿಸಿದೆ ಅಷ್ಟೇ ಅಲ್ಲದೇ 3 ದಿನಗಳ ಕಾಲ ಹೇಳಿಕೆ ದಾಖಲು ಮಾಡಲು ಕೋರ್ಟ್‌ನಿಂದ (Court) ಅನುಮತಿ ಪಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಸನ ಮೂಲದ ಯುವಕ ಹೃದಯಾಘಾತಕ್ಕೆ ಬಲಿ

     

    ಜೂನ್‌ 11 ರಿಂದ 13 ರವರೆಗೆ ಪರಪ್ಪನ ಅಗ್ರಹಾರದಲ್ಲಿ (Parappana Agrahara) ಹೇಳಿಕೆ ದಾಖಲಿಸಲು ಕೋರ್ಟ್‌ ಅನುಮತಿ ನೀಡಿದೆ. ಕೋರ್ಟ್‌ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಪಿಗಳ ಹೇಳಿಕೆಯನ್ನು ಐಟಿ ದಾಖಲು ಮಾಡಿದೆ.

    ಮಾರ್ಚ್​ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.

  • ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ

    ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ

    ನವದೆಹಲಿ: ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಭ್ರಷ್ಟಚಾರ ನಡೆದಿದ್ದರೆ (Valmiki Scam) ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿ ಆದರೆ ಅದು ರಾಜಕೀಯ ಪ್ರೇರಿತ ದಾಳಿಯಾಗಬಾರದು ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು ವಾಲ್ಮಿಕಿ ಹಗರಣದಲ್ಲಿ ತಪ್ಪಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸಚಿವರ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಇಡಿ (ED) ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಪೊನ್ನಣ್ಣ

    ಜಾತಿ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದ ಬಗ್ಗೆ ಮಾತನಾಡಿದ ಅವರು, ಈಗ ಮಾಡಿರುವ ವರದಿ ಹಳೆಯದಾಗಿದೆ. ಜಯ ಪ್ರಕಾಶ್ ಹೆಗಡೆ ವರದಿ ಅವೈಜ್ಞಾನಿಕ ಎಂದರು. ಆದರೆ ಹೇಗೆ ಎಂದು ಯಾರು ಹೇಳಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಸಮೀಕ್ಷೆ ಬರುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ. ಇಂತಹದೇ ಆರೋಪಗಳು ಮುಂದೆಯೂ ಬರಬಹುದು. ಅವೈಜ್ಞಾನಿಕ ಏನು ಎಂಬುದು ಸ್ಪಷ್ಟಪಡಿಸಬೇಕು, ಅದನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ತೆಲಂಗಾಣದಲ್ಲಿ ಸಮೀಕ್ಷೆ ಮಾಡಿ ತೋರಿಸಿದೆ, ಇಲ್ಲೂ ಮಾಡುತ್ತೇವೆ. ಈಗಾಗಲೇ ಸಮೀಕ್ಷೆಯಿಂದ 187 ಕೊಟಿ ನಷ್ಟವಾಗಬಹುದು, ಮುಂದೆ ಹೀಗೆ ಆಗಬಾರದು. ಬಲಾಢ್ಯರಿಗೆ ಮಾತ್ರ ಅನುಕೂಲವಾಗಬಾರದು. ಹಿಂದುಳಿದ ಜನರಿಗೂ ಸಂವಿಧಾನದ ಆಶಯ ತಲುಪಬೇಕು ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣದ 187 ಕೋಟಿ ಹಣ ಒಡವೆ ಅಂಗಡಿ, ಕಾರ್ ಶೋರೂಂ, ಬಾರ್‌ಗೆ ಹೋಗಿದೆ: ಸಿ.ಟಿ.ರವಿ ಆರೋಪ

    ಸಚಿವ ಸಂಪುಟ ಪುನಾರಚನೆ ಸುದ್ದಿ ಎರಡು ದಿನದಿಂದ ಓಡಾಡುತ್ತಿದೆ. ಇದು ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಲಿದೆ. ಏನು ಆಗಲ್ಲ, ಸರ್ಕಾರ ಆರಾಮವಾಗಿ ನಡೆದುಕೊಂಡು ಹೋಗುತ್ತದೆ. ಸಚಿವ ಸಂಪುಟ ಪುನಾರಚನೆ ಆಗಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ: ಅಶೋಕ್ ಪಟ್ಟಣ

  • ವಾಲ್ಮೀಕಿ ಹಗರಣದ 187 ಕೋಟಿ ಹಣ ಒಡವೆ ಅಂಗಡಿ, ಕಾರ್ ಶೋರೂಂ, ಬಾರ್‌ಗೆ ಹೋಗಿದೆ: ಸಿ.ಟಿ.ರವಿ ಆರೋಪ

    ವಾಲ್ಮೀಕಿ ಹಗರಣದ 187 ಕೋಟಿ ಹಣ ಒಡವೆ ಅಂಗಡಿ, ಕಾರ್ ಶೋರೂಂ, ಬಾರ್‌ಗೆ ಹೋಗಿದೆ: ಸಿ.ಟಿ.ರವಿ ಆರೋಪ

    ಚಿಕ್ಕಮಗಳೂರು: ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣ ಒಡವೆ ಅಂಗಡಿ, ಪೋರ್ಶೆ ಕಾರು ಶೋರೂಂ, ಬಾರ್‌ಗೆ ಹೋಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

    ಇಡಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆಗೆ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ವಿ. ನಾವು ಮಾಹಿತಿ ಕೊಟ್ಟರೂ ಸಿಐಡಿ ಸರಿಯಾಗಿ ತನಿಖೆ ಮಾಡಲಿಲ್ಲ. ಈಗ ಇಡಿ ರೇಡ್ ಮಾಡಿರೋದನ್ನ ನಾನು ಸ್ವಾಗತಿಸುತ್ತೇನೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಪರಿಶಿಷ್ಟ ಪಂಗಡದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆ, ವಾಹನ-ಭೂ ಖರೀದಿಗೆ ಬಳಕೆ ಆಗಬೇಕಾದ ಹಣ ಚುನಾವಣೆ ಅಕ್ರಮ, ಬಾರ್, ಕಾರು ಶೋ ರೂಂಗೆ ಬಳಕೆಯಾಗೋದು ದರೋಡೆಗಿಂತ ಕ್ರೂರವಾಗಿರೋದು. ವ್ಯವಸ್ಥೆಯೊಳಗೆ ಇರೋರೆ ಮಾಡಿದ ದರೋಡೆ, ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ವೈಜ್ಞಾನಿಕ ವರದಿ ಎಂದು ಸಮರ್ಥನೆ ಮಾಡಿತ್ತು. ಸಿಎಂ ಅದನ್ನ ತಮ್ಮ ಮಹತ್ವಾಕಾಂಕ್ಷೆ ಎಂದು ಹೇಳುತ್ತಿದ್ದರು. ಕಾಂತರಾಜ್ ವರದಿ ಬಳಿಕ ಜಯಪ್ರಕಾಶ್ ಹೆಗ್ಡೆ ಸ್ಕೂಟ್ನಿ ಮಾಡಿದ್ದೇನೆ ಎಂದಿದ್ರು. ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಈಗ ಮತ್ತೆ ಜಾತಿ ಗಣತಿ ಅಂತಿದ್ದಾರೆ. ಹಾಗಾದ್ರೆ ಮೊದಲಿನ ವರದಿ ಅವೈಜ್ಞಾನಿಕ ಅಂತ ಒಪ್ಕೊಳ್ತೀರಾ? ವೈಜ್ಞಾನಿಕ ಎಂದು ಒಪ್ಪಿಕೊಳ್ಳುವುದಾದರೆ ಸರ್ಕಾರದ ಹಣವನ್ನು ವಸೂಲಿ ಮಾಡಿ ಎಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿಯನ್ನು ಪ್ರಕಟ ಮಾಡಿದೆ. ಜನಗಣತಿ ಹಾಗೂ ಜಾತಿ ಗಣತಿ ಮಾಡುವ ಸಂವಿಧಾನದತ್ತ ಅಧಿಕಾರವಿರುವುದು ಕೇಂದ್ರಕ್ಕೆ, ರಾಜ್ಯಕ್ಕಲ್ಲ. ರಾಜಕೀಯ ಕಾರಣಕ್ಕೆ ವಿಷಯಾಂತರ ಮಾಡಲು ಈಗ ಮತ್ತೆ ಜಾತಿಗಣತಿ ಎನ್ನುತ್ತಿದ್ದಾರೆ. ನಿಮ್ಮ ಇಚ್ಛಾಶಕ್ತಿ ಇಲ್ಲದ ರಾಜಕೀಯ ತೆವಲಿಗೆ ಮತ್ತೆ, ಜಾತಿ ದುರ್ಬಳಕೆಗೆ ಮತ್ತೆ ನೂರಾರು ಕೋಟಿ ಖರ್ಚು ಮಾಡಬೇಕಾ? ಜಾತಿ ಎತ್ತು ಕಟ್ಟಲು ಸರ್ಕಾರದ ಹಣ ಬೇಕಾ? ಇದು ಕಾಂಗ್ರೆಸ್ ಹಣ ಅಲ್ಲ, ಜನರ ತೆರಿಗೆ ಹಣ. ಕಾಂತರಾಜ್ ವರದಿ ವೈಜ್ಞಾನಿಕ ಎಂದು ಜನರಿಗೆ ಮಂಕು ಬೂದಿ ಎರಚಲು ಸುಳ್ಳು ಹೇಳಿದ್ರಾ? ನಿಮ್ಮ ‘ಕೈ’ ಕಮಾಂಡ್ ಒತ್ತಡಕ್ಕೆ ವರದಿ ಬಲಿಯಾಯ್ತಾ? ನ್ಯಾಯ ಕುಡಿಸುತ್ತೇನೆ ಎಂದು ಹೇಳುತ್ತಿದ್ರಲ್ಲ, ತಿheಡಿe is ಥಿouಡಿ ಇಚ್ಛಾಶಕ್ತಿ. ಕಾಂತರಾಜ್, ಜಯಪ್ರಕಾಶ್ ವರದಿ, ದಲಿತರು, ಹಿಂದುಳಿದವರು ಯಾರಿಗೂ ನ್ಯಾಯ ಇಲ್ಲ… ಎಲ್ಲಿದೆ ನ್ಯಾಯ, ನಿಮ್ಮ ನಂಬಿದವರಿಗೆ ಯಾರಿಗೂ ನ್ಯಾಯ ಇಲ್ಲ ಎಂದು ಕಿಡಿಕಾರಿದರು.

    ತುಮಕೂರು ಜಿಲ್ಲೆಯನ್ನ ಬೆಂಗಳೂರು ಉತ್ತರ ಮಾಡುವ ವಿಚಾರ ಬಗ್ಗೆ ಮಾತನಾಡಿ, ಕೆಂಪೇಗೌಡರು ಬೆಂದಕಾಳೂರು ಎಂಬ ಹಳ್ಳಿಯನ್ನೇ ಬ್ರಾಂಡ್ ಮಾಡಿದ್ರು. ಸಿಂಗಾಪುರ ಒಂದು ಕಾಲದಲ್ಲಿ ರೋಗಗ್ರಸ್ಥವಾಗಿದ್ದ ಸಣ್ಣ ಹಳ್ಳಿ. ಸಿಂಗಾಪುರವನ್ನು ಅಲ್ಲಿಯವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು. ಇವರಿಗೆ ಭವಿಷ್ಯದಲ್ಲಿ ತನ್ನ ಊರನ್ನೇ ಬ್ರಾಂಡ್ ಮಾಡುವ ತಾಕತ್ತು ಇಲ್ವಾ. ಬೆಂಗಳೂರು ಹೆಸರಿನಲ್ಲೇ ಇವರು ತಮ್ಮ ಬೇಳೆ ಬೇಯಿಸಿಕೊಳ್ಳಬೇಕಾ? ತುಮಕೂರಿಗೂ ಒಂದು ಐಡೆಂಟಿಟಿ ಕೊಡುವ ತಾಕತ್ತು ಇವರಿಗಿಲ್ವಾ? ಹಳ್ಳಿಯನ್ನೇ ಬ್ರಾಂಡ್ ಮಾಡುವ ದಾರ್ಶನಿಕರು ಇರುವ ಕಡೆ ಇವರು ಬೆಂಗಳೂರು ಹೆಸರಲ್ಲೇ ಬೇಳೆ ಬೇಯಿಸಿಕೊಳ್ಳಬೇಕಾ? ತುಮಕೂರಿನ್ನೇ ಜಾಗತೀಕ ಮಟ್ಟದಲ್ಲಿ ಬೆಳೆಸೋಕೆ ಇವರಿಗೆ ಬರೋದಿಲ್ವಾ? ಇವರು ಕೆಂಪೇಗೌಡರ ಹೆಸರಲ್ಲೇ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

  • ವಾಲ್ಮೀಕಿ ಹಗರಣ ತನಿಖೆಗೂ ಇ.ಡಿಗೂ ಏನ್ ಸಂಬಂಧ? – ಬಸವರಾಜ ರಾಯರೆಡ್ಡಿ

    ವಾಲ್ಮೀಕಿ ಹಗರಣ ತನಿಖೆಗೂ ಇ.ಡಿಗೂ ಏನ್ ಸಂಬಂಧ? – ಬಸವರಾಜ ರಾಯರೆಡ್ಡಿ

    – ಬಳ್ಳಾರಿಯಲ್ಲಿ ಇಡಿ ದಾಳಿಗೆ ರಾಯರೆಡ್ಡಿ ಖಂಡನೆ
    – ಕಾಂಗ್ರೆಸ್ ನಾಯಕರನ್ನ ಕುಗ್ಗಿಸಲು ದಾಳಿ

    ನವದೆಹಲಿ: ವಾಲ್ಮೀಕಿ ಹಗರಣ (Valmiki Scam) ತನಿಖೆಗೂ ಇಡಿಗೂ (ED) ಏನು ಸಂಬಂಧ ಎಂದು ಬಳ್ಳಾರಿಯಲ್ಲಿ ಸಂಸದ ಹಾಗೂ ಮೂವರು ಶಾಸಕರ ಮನೆ ಮೇಲೆ ಇಡಿ ದಾಳಿಯನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಖಂಡಿಸಿದ್ದಾರೆ.

    ಈ ಕುರಿತು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ಹಾಗೂ ಇಡಿ ಇತ್ತಿಚಿನ ವರ್ಷಗಳಲ್ಲಿ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡೋದು ಸರಿಯಲ್ಲ. ಇದು ಪೂರ್ವ ನಿಯೋಜಿತ, ಇದು ಸರಿಯಿಲ್ಲ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿ ಮಾಡಲಾಗುತ್ತಿದೆ. ವಾಲ್ಮೀಕಿ ಹಗರಣ ಆಗಿಲ್ಲ ಎಂದು ಹೇಳುತ್ತಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರ ಬರಲಿದೆ. ತನಿಖೆ ಆಗಲಿ ಎಂದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಜಾತಿ ಗಣತಿ ಸರ್ವೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲ. ವರದಿ ಪ್ರಕಟಿಸಿ ಎಂದು ನಾನೇ ಮೊದಲು ಹೇಳಿದ್ದು. ಸತ್ಯ ಹೊರಬರಲಿ ಎಂದು ಸಿಎಂಗೆ ನಾನು ಮೊದಲೇ ಹೇಳಿದ್ದೆ. ಸಮೀಕ್ಷೆ ತಿದ್ದುಪಡಿ ಮಾಡಿ ಅಂತಾ ಹೇಳಿದ್ದೆ. ಹತ್ತು ವರ್ಷಗಳ ಹಿಂದೆ ಮಾಡಿದ್ದ ಸರ್ವೆ ಸರಿಯಿಲ್ಲ ಎಂದು ಹಲವರು ಹೇಳಿದ್ದರು. ಸದ್ಯ ಹೈಕಮಾಂಡ್ ಕೂಡ ಮರುಸರ್ವೆ ಮಾಡಲು ಹೇಳಿದೆ. ಪ್ರಬಲ ಸಮುದಾಯದ ಒತ್ತಾಯ ಅಂತಾ ಅಲ್ಲ, ಜಾತಿ ಸಮೀಕ್ಷೆ ಮಾಡುವಾಗ ಬರೆಸುವಾಗ ಸರಿಯಾಗಿ ಬರೆಸಿದ್ದರೆ ಹಾಗೆ ಆಗುತ್ತಿರಲಿಲ್ಲ. ಸರಿಯಾಗಿ ಬರೆಸಿ ಎಂದು ಆಯಾ ಮುಖಂಡರು ಹೇಳಿದ್ದಾರೆ. ಹೀಗಾಗಿ ಆಯಾ ಮುಖಂಡರು ಸರಿಯಾಗಿ ಹೇಳಿ ಬರೆಸಲಿ. ಈ ಬಾರಿ ಸರಿಯಾಗಿ ಬರೆಸಿದರೆ ಯಾವುದೇ ತೊಂದರೆ ಆಗಲ್ಲ. ಆಧಾರ್ ಪಡೆದು ಅದರ ಮೇಲೆ ಸಹಿ ಹಾಕಿ ಈ ಬಾರಿ ಜಾತಿ ಸಮೀಕ್ಷೆ ನಡೆಸಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು, ಇದೆಲ್ಲಾ ಊಹಾಪೋಹ. ಪುನರ್ ರಚನೆ ವಿಚಾರ ಸಿಎಂಗೆ ಬಿಟ್ಟದ್ದು. ನಾನು 8 ಬಾರಿ ಶಾಸಕನಾದವನು, ನನ್ನ ಸಚಿವರಾಗಿ ಮಾಡಬೇಕು ಅಂದರೆ ಮಾಡಲಿ. ಸಚಿವರಾಗಿ ಮಾಡಿದರೆ ಸೇವೆ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

  • ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು (Valmiki Scam) ಬಳ್ಳಾರಿ ಚುನಾವಣೆಗೆ (Bellary Election) ಬಳಸಿಕೊಂಡಿರುವ ಆರೋಪದಡಿ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ (ED) ದಾಳಿ ನಡೆಸಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದಿದೆ.

    ನಾಗೇಂದ್ರ ಪಿಎ ವಿಜಯ್ ಕುಮಾರ್ ಗೌಡಗೆ ಎಲೆಕ್ಷನ್ ಹಣ ಹಂಚುವ ಹೊಣೆ ವಹಿಸಲಾಗಿತ್ತು ಅನ್ನೋದು ಇಡಿ ತನಿಖೆಯಲ್ಲಿ ಗೊತ್ತಾಗಿತ್ತು. ಈ ಬಗ್ಗೆ ವಿಜಯ್ ಕುಮಾರ್ ಗೌಡ ಕೂಡ ಇಡಿಗೆ ಹೇಳಿಕೆ ಕೊಟ್ಟಿದ್ದಾರೆ. ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಂಚಿರುವುದಾಗಿ ವಿಜಯ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ವಿಜಯ್ ಕುಮಾರ್ ಮೊಬೈಲ್ ಫೋನ್‌ನಲ್ಲಿ ಕಂತೆ ಕಂತೆ ಹಣದ ಫೋಟೋ ಕೂಡ ಪತ್ತೆಯಾಗಿದೆ. ಇದನ್ನೂ ಓದಿ:  ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಯಾವಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂಬ ಪಟ್ಟಿಯೂ ಮೊಬೈಲ್‌ನಲ್ಲಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಪರ ಮತದಾರರಿಗೆ ಹಣ ಹಂಚಲಾಗಿದೆ ಎಂಬ ಗಂಭೀರ ಆರೋಪವನ್ನು ಇಡಿ ಮಾಡಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?
    ಬಳ್ಳಾರಿ ಗ್ರಾಮಾಂತರ – 5,23,72,400 ರೂ.
    ಬಳ್ಳಾರಿ ನಗರ – 3,75,00,000 ರೂ.
    ಕಂಪ್ಲಿ – 3,38,00,000 ರೂ.
    ಕೂಡ್ಲಿಗಿ – 3,16,00,00 ರೂ.

  • ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA) ಸೇರಿದ 100 ಕೋಟಿ ರೂ. ಮೌಲ್ಯದ 92 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿ (PMLA) ಪ್ರಕರಣ ದಾಖಲಿಸಿ ತನಿಖೆ ನಡೆಸಿ ಮಾರುಕಟ್ಟೆ ಮೌಲ್ಯದ ಅಂದಾಜು 100 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಇಡಿ ಹೇಳಿಕೆಯಲ್ಲಿ ಏನಿದೆ?
    ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಇದನ್ನೂ ಓದಿ: ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

     

    ವಿವಿಧ ಕಾನೂನುಗಳು ಮತ್ತು ಸರ್ಕಾರಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಡಾ ಸೈಟ್‌ಗಳ ಹಂಚಿಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. .ಇದನ್ನೂ ಓದಿ: ಆನೇಕಲ್‌ | ಆಟವಾಡ್ತಿದ್ದಾಗ ಕರೆಂಟ್ ಶಾಕ್‌ ತಗುಲಿ 11 ವರ್ಷದ ಬಾಲಕಿ ಸಾವು

    ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮತ್ತು ಇತರರು ಸೇರಿಕೊಂಡು ಅರ್ನಹ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಅಕ್ರಮವಾಗಿ ಹಂಚಿಕೆ ಮಾಡಲು ನಗದು, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ.

    ಅಕ್ರಮ ಹಂಚಿಕೆಗಳನ್ನು ಮಾಡಲು ಮುಡಾ ಸಹಕಾರಿ ಸಂಘದ ಅಧಿಕಾರಿಗಳ ಸಂಬಂಧಿಕರು ಸಹವರ್ತಿಗಳ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ರವಾನೆ ಮಾಡಲಾಗಿದೆ

    ಈ ಹಿಂದೆ 300 ಕೋಟಿ ರೂ. ಮೌಲ್ಯ 160 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಇಲ್ಲಿಯವರೆಗೆ ಒಟ್ಟು 400 ಕೋಟಿ ರೂ. ಮೌಲ್ಯದ ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಲಾಗಿದೆ.

  • ಕೈ ನಾಯಕ ಮಂಜುನಾಥ ಗೌಡಗೆ ಇಡಿ ಶಾಕ್‌ – 13.91 ಕೋಟಿ ಆಸ್ತಿ ಮುಟ್ಟುಗೋಲು

    ಕೈ ನಾಯಕ ಮಂಜುನಾಥ ಗೌಡಗೆ ಇಡಿ ಶಾಕ್‌ – 13.91 ಕೋಟಿ ಆಸ್ತಿ ಮುಟ್ಟುಗೋಲು

    ಬೆಂಗಳೂರು: ಕಾಂಗ್ರೆಸ್ (Congress) ಮುಖಂಡ ಮಂಜುನಾಥ ಗೌಡ (Manjunath Gowda) ಜಾರಿ ನಿರ್ದೇಶನಾಲಯ (ED) ಬಿಗ್‌ ಶಾಕ್‌ ನೀಡಿದ್ದು 13.91 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ತಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

    ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (Shivamogga DCC Bank Scam) ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ರೂ. ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಳೆದ ಏಪ್ರಿಲ್ ನಲ್ಲಿ ಶಿವಮೊಗ್ಗದಲ್ಲಿ ಮಂಜುನಾಥ ಗೌಡ ಅವರ ಮನೆ, ಕಚೇರಿ ಸೇರಿದಂತೆ 8 ಕಡೆ ದಾಳಿ ನಡೆಸಿತ್ತು.  ಇದನ್ನೂ ಓದಿ: ಪತ್ನಿ ಮನೆಬಿಟ್ಟು ಹೋಗಿದ್ದಕ್ಕೆ ಬೇಸತ್ತು ಪತಿ ಆತ್ಮಹತ್ಯೆ

     

    ಸ್ಥಿರ ಮತ್ತು ಚರ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

    ಶಿವಮೊಗ್ಗದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಂಜುನಾಥ್ ಗೌಡ ಪರಪ್ಪನ ಅಗ್ರಹಾರದಲ್ಲಿ (Parappana Agrahara) ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಡಿಕೆ ಬ್ರದರ್ಸ್‌ ಬುಡಕ್ಕೆ ಬಂತು ನ್ಯಾಷನಲ್‌ ಹೆರಾಲ್ಡ್‌ ಕೇಸ್‌

    ಡಿಕೆ ಬ್ರದರ್ಸ್‌ ಬುಡಕ್ಕೆ ಬಂತು ನ್ಯಾಷನಲ್‌ ಹೆರಾಲ್ಡ್‌ ಕೇಸ್‌

    ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ (National Herald) ಈಗ ಡಿಕೆ ಬ್ರದರ್ಸ್‌ ಬುಡಕ್ಕೆ ಬಂದಿದೆ. ಯಂಗ್‌ ಇಂಡಿಯಾಗೆ ಡಿಕೆ ಶಿವಕುಮಾರ್‌ (DK Shivakumar) ಮತ್ತು ಡಿಕೆ ಸುರೇಶ್‌ (DK Suresh) 2.5 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.

    ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೋರ್ಟ್‌ಗೆ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಹೆಚ್ಚುವರಿ ಜಾರ್ಜ್‌ಶೀಟ್‌ನಲ್ಲಿ ಡಿಕೆ ಬ್ರದರ್ಸ್‌ ಹೆಸರು ಉಲ್ಲೇಖವಾಗಿದೆ.

    ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ದೇಣಿಗೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ದೇಣಿಗೆ ನೀಡಲಾಗಿದೆ ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ರಶ್ಮಿಕಾ, ಶ್ರೀಲೀಲಾ ಎಲ್ಲಾ ಬ್ಯುಸಿ ಇದ್ರೂ, ಅದಕ್ಕೇ ತಮನ್ನಾನ ಆಯ್ಕೆ ಮಾಡಿದ್ವಿ: ಎಂ.ಬಿ ಪಾಟೀಲ್

    ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) 142 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಇಡಿ ಈ ಮೊದಲು ಆರೋಪಿಸಿತ್ತು.

     

    ಏನಿದು ಪ್ರಕರಣ?
    ಕ್ರಿಮಿನಲ್ ಪಿತೂರಿ ನಡೆಸಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್‌ ಪಿತ್ರೊಡಾ, ಸುಮನ್‌ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಪಡೆದಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

    ಯಂಗ್ ಇಂಡಿಯನ್‌ ಲಿಮಿಟೆಡ್‌ ಮೂಲಕ 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್‌ ಅವರು ಕೇವಲ 50 ಲಕ್ಷ ರೂ.ಗೆ ಖರೀದಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ 90.2 ಕೋಟಿ ರೂ. ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್‌ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

  • ರನ್ಯಾ ಮದುವೆಗೆ ಪರಮೇಶ್ವರ್‌ 20 ಲಕ್ಷ ಗಿಫ್ಟ್‌ ಕೊಟ್ಟಿರಬಹುದು: ಡಿಕೆಶಿ

    ಬೆಂಗಳೂರು: ರನ್ಯಾ (Parameshwara) ಮದುವೆಗೆ ಪರಮೇಶ್ವರ್‌ (Parameshwara) 15- 20 ಲಕ್ಷ ರೂ. ಗಿಫ್ಟ್‌ ಕೊಟ್ಟಿರಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ED) ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು, ರನ್ಯಾಗೆ 15 ರಿಂದ 25 ಲಕ್ಷ ರೂ. ನೀಡಿದ್ದಾರಂತೆ. ಆಕೆಯ ಮದುವೆಗೆ ಗಿಫ್ಟ್‌ ಮಾಡಿರಬಹುದು. ನಾನು ಅವರ ಬಳಿ ಮಾತಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಪರಮೇಶ್ವರ್‌ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಗೌರವಾನ್ವಿತ ವ್ಯಕ್ತಿ, ನಾನು ಅವರ ಜೊತೆ ಇರುತ್ತೇನೆ. ಇನ್ನೂ, ರನ್ಯಾ ತಪ್ಪು ಮಾಡಿದ್ರೆ ಕ್ರಮ ಆಗಲಿ ಎಂದಿದ್ದಾರೆ.

    ಇಡಿ ದಾಳಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಬುಧವಾರ ಸುದ್ದಿಗೋಷ್ಠಿ ನಡೆಸಿ, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂದು ಆರೋಪಿಸಿದ್ದರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?