ಬೆಂಗಳೂರು: ಐಶ್ವರ್ಯ ಗೌಡ ವಂಚನೆ (Aishwarya Gowda Case) ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಡೀ ದಿನ ಮಾಜಿ ಸಂಸದ ಡಿಕೆ ಸುರೇಶ್ (DK Suresh) ವಿಚಾರಣೆ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆಯಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯಗೌಡ ವಿಚಾರಣೆಯಲ್ಲಿ ಡಿಕೆ ಸುರೇಶ್ ಜೊತೆಗಿನ ವ್ಯವಹಾರದ ಬಗ್ಗೆ ಬಾಯ್ಬಿಟ್ಟಿದ್ದರು. ಇದೇ ಪ್ರಕರಣದಲ್ಲಿ ಇಂದು ಡಿಕೆ ಸುರೇಶ್ ಇ.ಡಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 6:30 ಗಂಟೆ ಇ.ಡಿ ವಿಚಾರಣೆ ಬಳಿಕ ಮಾತನಾಡಿದ ಡಿಕೆ ಸುರೇಶ್, ಇ.ಡಿಯವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಜೂನ್ 8ರಂದು ಹಾಜರಾಗಲು ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು
ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಐಶ್ವರ್ಯ ಪರಿಚಯ ಇದೆ ಅಂತ ಹೇಳಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರು ಕೂಡ ವಿಚಾರಣೆ ವೇಳೆ ನನ್ನ ಹೆಸರು ಹೇಳಿ ಹಣ ಪಡೆದ ಬಗ್ಗೆ ದಾಖಲೆ ಕೊಟ್ಟಿದ್ದರು. ಈ ಬಗ್ಗೆ ಎಲ್ಲಾ ಪ್ರಶ್ನೆಗಳು ಕೇಳಿದರು. ಅದಕ್ಕೆ ತಡ ಆಗಿದೆ. ಆಕೆಗೂ ನನಗೂ ಪರಿಚಯ ಇರಲಿಲ್ಲ. ಕನ್ನಡ ರಾಜ್ಯೋತ್ಸವ ಸೇರಿದಂತೆ ಕಾರ್ಯಕ್ರಮಕ್ಕೆ ಕರೆದಿದ್ದರು, ಹೋಗಿದ್ದೆ. ಯಾವುದೇ ವ್ಯವಹಾರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ
ಬೆಂಗಳೂರು: ಇ.ಡಿ (ED) ವಿಚಾರಣೆ ಎದುರಿಸಲು ನಮ್ಮ ಕುಟುಂಬ ರೆಡಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಡಿಕೆ ಸುರೇಶ್ (DK Suresh) ಇ.ಡಿ ತನಿಖೆಗೆ ಹೋಗಿರುವ ವಿಚಾರದ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು, ನಮ್ಮ ಕುಟುಂಬ ಇ.ಡಿ ಫೇಸ್ ಮಾಡೋಕೆ ರೆಡಿ ಇದ್ದೇವೆ. ಇಡಿ ಕೇಸ್ ಆಯ್ತು, ಯಾರೂ ನಮ್ಮ ರಕ್ಷಣೆಗೆ ಬಂದಿಲ್ಲ. ಕೊನೆಗೆ ನ್ಯಾಯಾಲಯ ರಕ್ಷಣೆಗೆ ಬಂದಿದ್ದು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಜನಪ್ರತಿನಿಧಿಗಳನ್ನ ಯಾರು ಬೇಕಿದ್ರು ಭೇಟಿ ಮಾಡಬಹುದು. ಅದನ್ನ ಯಾಕೆ ನೀವು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದರು. ಇದನ್ನೂ ಓದಿ: `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು
ಗ್ರಾಮ ಸಭೆಯಲ್ಲಿ ಕಮಿಷನ್ ಕೊಟ್ಟು ಮನೆ ಪಡೆಯುವ ಬಿಆರ್ ಪಾಟೀಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನಾನು ಏನು ಹೇಳಬೇಕೋ ಹೇಳಿದ್ದೀನಿ. ಸಿಎಂ ಮತ್ತು ವಸತಿ ಸಚಿವರು ಅದಕ್ಕೆ ಉತ್ತರ ಕೊಡುತ್ತಾರೆ. ಶಾಸಕರ ಗಮನಕ್ಕೆ ಬರದೇ ಅನುದಾನ ತೆಗೆದುಕೊಂಡು ಹೋಗುವ, ರಾಜೀನಾಮೆ ಕೊಡುವ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು
ಬೆಂಗಳೂರು: ನನಗೆ ಇಡಿ (ED) ಯಾಕೆ ನೋಟಿಸ್ ಕೊಟ್ಟಿದೆ ಎನ್ನುವುದೇ ಪ್ರಶ್ನೆಯಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ.
ಇಡಿ ವಿಚಾರಣೆಗೆ ತೆರಳುವ ಮುನ್ನ ಸದಾಶಿವಗರ ನಿವಾಸದಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್ ಜಾರಿ ಮಾಡಿದ್ದರು. ಕೆಲ ಮಾಹಿತಿಗಳನ್ನು ಕೇಳಿದ್ದರು. ನಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ವಿಷಯಕ್ಕೆ ಸಂಬಂಧ ಇಲ್ಲದ್ದು ನನಗೆ ಕನೆಕ್ಟೆಡ್ ಇಲ್ಲದೇ ಇರೋ ವಿಚಾರಗಳು ಇದ್ದವು. ಯಾಕೆ ನೋಟಿಸ್ ಕೊಟ್ಟರು ಅನ್ನೋದು ಗೊತ್ತಿಲ್ಲ. ನನ್ನ ಸಹೋದರಿ ಅಂತ ಮೌಖಿಕವಾಗಿ ಹೇಳಿ ಮೋಸ ಮಾಡಿದ್ದಾರೆ ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ ಎಂದರು. ಇದನ್ನೂ ಓದಿ: ಆನೇಕಲ್ | ಹಾಡಹಗಲೇ ಮೈಕೈ ಮುಟ್ಟಿ ಯುವತಿಗೆ ಲೈಂಗಿಕ ಕಿರುಕುಳ – ಐವರ ವಿರುದ್ಧ ದೂರು
ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಇಡಿ ನೋಟಿಸ್ ರಾಜಕೀಯ ಪ್ರೇರಿತ ಹೌದ ಇಲ್ವಾ ಅನ್ನೋದು ಅಲ್ಲಿ ಹೋದ ಮೇಲೆ ಗೊತ್ತಾಗುತ್ತದೆ. ಅವರು ಕೇಳುವ ಪ್ರಶ್ನೆಗಳ ಮೇಲೆ ಇದಕ್ಕೆ ಸಂಬಂಧ ಇದೆಯಾ ಇಲ್ವಾ ಅನ್ನೋದು ಗೊತ್ತಾಗುತ್ತದೆ. ಯಾವುದಕ್ಕೆ ಸಂಬಧ ಇದೆ ಯಾವುದು ಅಸಂಬದ್ಧ ಇದೆ ಅಂತ ವಿಚಾರಣೆ ಮುಗಿದಮೇಲೆ ಚರ್ಚೆ ಮಾಡಬೇಕಾಗುತ್ತದೆ. ನನಗಾಗಲಿ ಆಯಮ್ಮನಿಗಾಗಲಿ ಯಾವುದೇ ಹಣಕಾಸಿನ ವ್ಯವಹಾರ ಏನು ಇಲ್ಲ. ಈ ಹಿಂದೆ ಕೂಡ ನಾನು ಅದನ್ನ ತಿಳಿಸಿದ್ದೇನೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಇದನ್ನ ಹೊರತುಪಡಿಸಿದರೆ ಬೇರೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕದನ ಭೂಮಿಯಿಂದ ಓಡಿಹೋಗಲ್ಲ, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ: ಬಿಆರ್ ಪಾಟೀಲ್
ಅವರು ನನ್ನ ಗೃಹ ಕಚೇರಿಯಲ್ಲಿ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದರು. ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ಇದ್ದರು ಎನ್ನುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲ ವಿಚಾರಗಳನ್ನು ಅಧಿಕಾರಿಗಳು ಕೇಳುತ್ತಾರೆ, ಅವರಿಗೆ ಹೇಳುತ್ತೇನೆ. ನನ್ನ ಧ್ವನಿಯನ್ನ ಮಿಮಿಕ್ರಿ ಮಾಡಿ ಬೇರೆಯವರಿಗೆಲ್ಲ ಮೋಸ ಮಾಡಿದ್ದಾರೆ. ಅದು ಪೊಲೀಸ್ ತನಿಖೆ ಕೂಡ ಮಾಡಿದ್ದಾರೆ. ಸುಮಾರು ಪ್ರಕರಣಗಳು ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದೆ. ಆ ವಿಚಾರ ಏನಾಯಿತು ಅಂತ ನನಗೆ ಗೊತ್ತಿಲ್ಲ. ಇ.ಡಿ ಎಂಟ್ರಿ ಆಗಿದೆ, ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸ್ ನನಗೆ ಪ್ರಶ್ನೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ
ಸುಪ್ರೀಂಕೋರ್ಟ್, ಹೈಕೋರ್ಟ್ ಅನೇಕ ಬಾರಿ ಇಡಿ ಬಗ್ಗೆ ಹೇಳಿದೆ. ವ್ಯಾಪ್ತಿ ಮೀರಿ ಇ.ಡಿ ನಡಿತಾ ಇದೆ ಅಂತ ಹೇಳಿದೆ. ಅದಾಗ್ಯೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಅರ್ಥ. ಅವರ ವ್ಯಾಪ್ತಿಯನ್ನು ಹೊರತುಪಡಿಸಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ. ಏನು ಮಾಡುತ್ತಾರೆ ನೋಡೋಣ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ – ಸಿಎಂ, ಜಮೀರ್ ರಾಜೀನಾಮೆಗೆ ರವಿಕುಮಾರ್ ಆಗ್ರಹ
ಬೆಂಗಳೂರು: ಐಶ್ವರ್ಯಗೌಡ (Aishwarya Gowda) ಬಹುಕೋಟಿ ವಂಚನೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.
ಎರಡು ದಿನಗಳ ಹಿಂದಷ್ಟೇ ಮಾಜಿ ಸಂಸದ ಡಿ.ಕೆ ಸುರೇಶ್‌ಗೆ (DK Suresh) ಇಡಿ ಸಮನ್ಸ್ ನೀಡಿದ್ದು, ಗುರುವಾರ (ಇಂದು) ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈಗ ತನಿಖೆ ಮತ್ತೊಂದು ಮಜಲಿಗೆ ಹೋಗಿದೆ. ಇಡಿ (ED) ಅಧಿಕಾರಿಗಳು ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಶುರು ಮಾಡಿದೆ.
ಐಶ್ವರ್ಯಗೌಡ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು, ಅಕ್ರಮ ಹಣ ವರ್ಗಾವಣೆಯಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾಳೆ? ಎಲ್ಲೆಲ್ಲಿಗೆ ಹಣ ವರ್ಗಾವಣೆ ಮಾಡಲಾಗಿದೆ? ಯಾರ‍್ಯಾರ ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನ ಬಯಲಿಗೆಳೆಯಲು ಇಡಿ ತನಿಖೆ ಮುಂದುವರಿಸಿದೆ. ಡಿ.ಕೆ ಸುರೇಶ್ ಅವರಿಗೂ ಆಸ್ತಿ ಮುಟ್ಟುಗೋಲು ಬಿಸಿ ತಟ್ಟುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಈಗ ಡಿಕೆಸು ಸರದಿ
ಐಶ್ವರ್ಯಗೌಡ ಬಹುಕೋಟಿ ಹಗರಣದಲ್ಲಿ ಈಗ ಮಾಜಿ ಸಂಸದ ಡಿಕೆ ಸುರೇಶ್ ಸರದಿ. ಐಶ್ವರ್ಯಗೌಡ ಪ್ರತಿ ಕಾರ್ಯಕ್ರಮದಲ್ಲಿ ನಾನು ಡಿಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು ಓಡಾಡ್ತಾ ಇದ್ರು. ಇಡಿ ಐಶ್ವರ್ಯಳನ್ನ ಬಂಧಿಸಿದ ಬಳಿಕ ದಾಖಲಾತಿ, ಹಣದ ವರ್ಗಾವಣೆ ಎಲ್ಲವನ್ನೂ ಪರಿಶೀಲಿಸಿ ಒಂದಷ್ಟು ಬಲವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು ಡಿಕೆಸುಗೆ ಸಮನ್ಸ್ ನೀಡಿದೆ.
ಮೂಲಗಳ ಪ್ರಕಾರ, ಒಂದೆರಡು ವರ್ಷದಲ್ಲಿ ಐಶ್ವರ್ಯ ಮತ್ತು ಡಿಕೆ ಸುರೇಶ್ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಅನ್ನೋದು ಇಡಿ ವಾದ. ಹೀಗಾಗಿಯೇ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
ಕಳೆದ 40 ದಿನದ ಹಿಂದೆ ಇಡಿ (Directorate of Enforcement) ಅಧಿಕಾರಿಗಳು ಐಶ್ವರ್ಯ ಮನೆಯ ಮೇಲೆ ದಾಳಿ ಮಾಡಿ, ಐಶ್ವರ್ಯಗೌಡಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸರಿ ಸುಮಾರು 70 ಕೋಟಿ ರೂ. ಹಣದ ವಹಿವಾಟು ಮಾಡಿದ್ದಾರೆ ಎಂದು ಇಡಿ ಆರೋಪಿಸಿತ್ತು. CCH 1 ಇಡಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದ ಐಶ್ವರ್ಯಗೆ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ
ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯ ಕೆಲವೊಂದು ಷರತ್ತು ವಿಧಿಸಿದೆ. 5 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಮತ್ತು ಮನೆಯ ವಿಳಾಸ ಬದಲು ಮಾಡದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಐಶ್ವರ್ಯ ಗೌಡ (Aishwarya Gowda) ಪ್ರಕರಣದಲ್ಲಿ ಇಡಿ ಸಮನ್ಸ್ ಬಂದಿದ್ದು, ಗುರುವಾರ ವಿಚಾರಣೆಗೆ ಬರಲು ಹೇಳಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (DK Suresh) ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮಧ್ಯಾಹ್ನ 12:30ಕ್ಕೆ ಇಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ. ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ ಅವರು ಸಮನ್ಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್ – ಡಿ.ಕೆ.ಸುರೇಶ್‌ಗೆ ED ಸಮನ್ಸ್
ಸಮನ್ಸ್‌ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು. ಗುರುವಾರ ವಿಚಾರಣೆಗೆ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಖಿಕವಾಗಿ ತಿಳಿಸಿದ್ದೇನೆ. ಈಗ ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದ್ವೇಷ ಭಾಷಣದ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಖಾದರ್ ಅಸಮಾಧಾನ – ಗೃಹ ಸಚಿವರಿಗೆ ಪತ್ರ
ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಅವರು ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅನ್ನೋ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆ ಎಂದು ಗೊತ್ತಾದಾಗ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7 ರಿಂದ 8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಮಧ್ಯಾಹ್ನ 12-30 ಗಂಟೆಗೆ ಇ.ಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ. ಅವರು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ, ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು ಎಂದು ತಿಳಿಸಿದ್ದಾರೆ.
ನಾನು ಯಾವುದೇ ವ್ಯವಹಾರ ನಡೆಸಿಲ್ಲ. ಅವರು (ಐಶ್ವರ್ಯಗೌಡ) ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅಂತಾ ಹೇಳಿಕೊಂಡು ಒಡಾಡುವುದರ ಬಗ್ಗೆ ನಾನೇ ದೂರು ಕೊಟ್ಟಿದ್ದೇನೆ. ಇ.ಡಿಯವರು 7-8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಇ.ಡಿ ವಿಚಾರಣೆಗೆ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣ (Valmiki Scam Case) ಮುಗಿದೇ ಹೋಯ್ತು ಅನ್ನೋ ಕಥೆ ಮತ್ತೆ ಚಿಗುರಿಕೊಂಡಿದೆ. ಮಾಜಿ ಸಚಿವ ಬಂಧನ ಆಯ್ತು, ಬಿಡುಗಡೆಯೂ ಆಯ್ತು. ಆದ್ರೆ, ಬಳ್ಳಾರಿ ಚುನಾವಣೆಗೆ 21 ಕೋಟಿ ರೂ. ದುರ್ಬಳಕೆಯಾಗಿದ್ದು ಹೇಗೆ…? 87 ಕೋಟಿ ಹಣದ ವಹಿವಾಟು ಎಲ್ಲೆಲ್ಲಿ ಆಯ್ತು…? ಇಡೀ ಹಗರಣದ ಎಕ್ಸಕ್ಲೂಸಿವ್ ಚಾರ್ಜ್‌ಶೀಟ್ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ರೂವಾರಿಯೇ ನಾಗೇಂದ್ರ (BN Nagendra) ಎಂದು ಇಡಿ (ED) ಗಂಭೀರ ಆರೋಪ ಮಾಡಿದೆ. ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಆದ್ರೆ ನಾನು ಯಾವುದೇ ಅಪರಾಧ ಎಸಗಿಲ್ಲ. ನನಗೂ ಈ ಅವ್ಯವಹಾರಕ್ಕೂ ಸಂಬಂಧವೇ ಇಲ್ಲ ಎಂದು ವಿಚಾರಣೆ ವೇಳೆ ನಾಗೇಂದ್ರ ಹೇಳಿದ್ದಾರೆ. ಅದರ ಎಕ್ಸ್‌ಕ್ಲೂಸಿವ್ ಡಿಟೇಲ್ಸ್ ಇಲ್ಲಿದೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ – ED ಚಾರ್ಜ್‌ಶೀಟ್‌ನಲ್ಲಿ ಏನಿದೆ?
A1 – ಮಾಜಿ ಸಚಿವ ನಾಗೇಂದ್ರ
1. ನಾಗೇಂದ್ರ ಇಡೀ ಹಗರಣದ ಮಾಸ್ಟರ್ ಮೈಂಡ್. ಬಹುಕೋಟಿ ಅಕ್ರಮದ ರೂವಾರಿ. ಅಕ್ರಮ ಹಣ ವರ್ಗಾವಣೆಯ ಸೂತ್ರಧಾರ. ನಿಕಟವರ್ತಿ ನೆಂಕ್ಕಟ್ಟಿ ನಾಗರಾಜ್ ಜೊತೆ ಶಾಮೀಲಾಗಿದ್ದಾರೆ. ವಾಲ್ಮೀಕಿ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೋಟಿ ಕೋಟಿ ಹಣ ವರ್ಗಾವಣೆ. ನಾಗೇಂದ್ರ ಕೈವಾಡದ ಬಗ್ಗೆ ನಿಗಮದ ಮಾಜಿ ಎಂಡಿ ಪದ್ಮನಾಭ ಹಾಗೂ ಅಕೌಂಟ್ ಮ್ಯಾನೇಜರ್ ಪರಶುರಾಂ ದುರ್ಗಣ್ಣನವರ್ ಹೇಳಿಕೆ ನೀಡಿದ್ದಾರೆ.
2. ವಾಲ್ಮೀಕಿ ನಿಗಮದ ಬಹುಕೋಟಿ ಹಣ ವೈಯಕ್ತಿಕ ಹಾಗೂ ಚುನಾವಣಾ ವೆಚ್ಚಕ್ಕೆ ದುರ್ಬಳಕೆ ಆಗಿದೆ. ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೂಲಕ ಬಳ್ಳಾರಿ ಲೋಕಸಭೆ ಚುನಾವಣೆಗೆ ದುರ್ಬಳಕೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ವಿಜಯ ಕುಮಾರ್ ಗೌಡ ಮೊಬೈಲ್‌ನಲ್ಲಿ ಕ್ಯಾಶ್ ಬಂಡಲ್‌ಗಳು ಪತ್ತೆಯಾಗಿದ್ದವು.
3. ಬಹುಕೋಟಿ ಅಕ್ರಮ ಬಯಲಾಗಿ ತನಿಖೆ ಆರಂಭಗೊಂಡ ನಂತರ ಆರೋಪಿ ನಾಗೇಂದ್ರ ಮೂರು ಐ-ಫೋನ್ ಬದಲಾಯಿಸಿದ್ದಾರೆ. ತಾಂತ್ರಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೂರು ಫೋನ್ ಚೇಂಜ್ ಮಾಡಿದ್ದಾರೆ. ಎಫ್‌ಎಸ್‌ಎಲ್ ವರದಿಯಲ್ಲಿ ಇದೆಲ್ಲವೂ ಬಹಿರಂಗಗೊಂಡಿದೆ.
4. ಹಣ ಲಪಟಾಯಿಸುವ ಸಂಚು ಕಳೆದ ವರ್ಷವೇ ಸಿದ್ಧವಾಗಿತ್ತು. ಇದೇ ದುರುದ್ದೇಶದಿಂದ ಪರಿಚಯಸ್ಥ ಪದ್ಮನಾಭನನ್ನು ಎಂಡಿ ಆಗಿ ನೇಮಕ ಮಾಡಲಾಯ್ತು. ಹೊಸ ಬ್ಯಾಂಕ್ ಖಾತೆ ತೆರೆದು.. ಅಲ್ಲಿಗೆ ಹಣ ವರ್ಗಾಯಿಸಲು ಸೂಚಿಸಿದ್ದೇ ನಾಗೇಂದ್ರ. ನಾಗೇಂದ್ರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದು ಮಾಜಿ ಎಂಡಿ ಪದ್ಮನಾಭ.
5. ನಾಗೇಂದ್ರ ಆಪ್ತರ ಅಕೌಂಟ್‌ಗೆ ಲಕ್ಷ ಲಕ್ಷ ಹಣ ಜಮೆಯಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಮರ್ಪಕ ಉತ್ತರ ಕೊಡುವಲ್ಲಿ ನಾಗೇಂದ್ರ ವಿಫಲರಾಗಿದ್ದಾರೆ.
6. ನಿಗಮದ 187 ಕೋಟಿ ರೂ. ಹಣವನ್ನು ಯೂನಿಯನ್ ಬ್ಯಾಂಕ್‌ನ ಎಂಜಿ ರೋಡ್ ಶಾಖೆಯಲ್ಲಿ ತೆರೆಯಲಾಗಿದ್ದ ಅಕೌಂಟ್ ವರ್ಗಾಯಿಸಲಾಯಿತು. ಅಲ್ಲಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅನಧಿಕೃತ ಖಾತೆಗೆಗಳಿಗೆ ವರ್ಗಾಯಿಸಲಾಗಿದೆ. ನಕಲಿ ಕಂಪನಿಗಳ ಹೆಸರಲ್ಲಿ ಅಕೌಂಟ್ ತೆರೆಯಲಾಗಿತ್ತು. ಆ ನಕಲಿ ಅಕೌಂಟ್‌ಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ.
7. ಹೀಗೆ ನಗದು ರೂಪದಲ್ಲಿ ಪಡೆದ ಕೋಟ್ಯಂತರ ರೂ. ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆ ಹಾಗೂ ವೈಯಕ್ತಿಕ ವೆಚ್ಚಗಳಿಗೆ ದುರ್ಬಳಿಕೆ ಮಾಡಿಕೊಳ್ಳಲಾಗಿದೆ ಎಂದು ED ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.
ಬಳ್ಳಾರಿ ಲೋಕಸಭೆ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ:
ಅಕ್ರಮವಾಗಿ ವರ್ಗಾಯಿಸಿಕೊಂಡ ಹಣದಲ್ಲಿ 15 ಕೋಟಿ ರೂ.ಗಳಷ್ಟು ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ವ್ಯಯಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಆರೋಪಿ ಸತ್ಯನಾರಾಯಣ ವರ್ಮಾ ಮೂರು ಕಂತುಗಳಲ್ಲಿ ಮಾಜಿ ಎಂಡಿ ಪದ್ಮನಾಭನಿಗೆ ಕೊಟ್ಟಿದ್ದಾನೆ.
* ಮೊದಲ ಕಂತು: ಮಾರ್ಚ್ 7 – ಆನಂದರಾವ್ ಸರ್ಕಲ್ ಹೊಟೇಲ್ ವೊಂದರಲ್ಲಿ 90 ಲಕ್ಷ ರೂ. ಕ್ಯಾಶ್ ಹಸ್ತಾಂತರ * ಎರಡನೇ ಕಂತು: ಮಾರ್ಚ್ 7 – ನಾಗೇಂದ್ರ ರವಿ ನೆಕ್ಕಂಟಿಗೆ 1.2 ಕೋಟಿ ಕ್ಯಾಶ್ ಹಸ್ತಾಂತರ * ಮೂರನೇ ಕಂತು: ಉಳಿದ 5.25 ಕೋಟಿ ಯಶವಂತಪುರದ ಮಾಲ್ ವೊಂದರ ಬಳಿ ಮಾಜಿ ಎಂಡಿ ಪದ್ಮನಾಭನಿಗೆ ಹಸ್ತಾಂತರ ಆಗಿದೆ.
ಸತ್ಯನಾರಾಯಣ ವರ್ಮಾ ಬಳಿಯಿಂದ 4.2 ಕೋಟಿ ಕ್ಯಾಶ್ ವೈಯಕ್ತಿಕ ಕಾರಣಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. 4.2 ಕೋಟಿ ಹಣದಲ್ಲಿ 1.5 ಕೋಟಿ ರೂ.ಗಳಷ್ಟು ಸಾಲ ತೀರಿಸಿದ್ದಾನೆ. 1.2 ಕೋಟಿ ಕೊಟ್ಟು ಬೆಂಝ್ ಕಾರ್ ತೆಗೆದುಕೊಂಡಿದ್ದಾನೆ. ಉಳಿದ ಹಣ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿದ್ದಾನೆ ಎಂಬ ಸತ್ಯ ಇಡಿ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.
ಎಲೆಕ್ಷನ್ ಖರ್ಚಿಗೆ ಹವಾಲಾ ಗೇಮ್!
ಆರೋಪಿ ನೆಕ್ಕಂಟಿ ನಾಗರಾಜ್ ಐ ಫೋನ್ ನಲ್ಲಿ 20 ರೂ. ನೋಟ್ ಫೋಟೋ ಪತ್ತೆಯಾಗಿದ್ದು, ಇದನ್ನು ಹವಾಲಾ ವ್ಯವಹಾರಕ್ಕೆ ಬಳಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ತನ್ನ ಸಹೋದರ ನೆಕ್ಕಂಟಿ ರಮೇಶ್‌ಗೆ 20 ರೂ. ನೋಟ್ ಕೊಟ್ಟಿದ್ದ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ ವರ್ಮಾಗೆ ಈ ನೋಟ್ ಕೊಟ್ಟರೆ 1.5 ಕೋಟಿ ಕ್ಯಾಶ್ ಕೊಡುತ್ತಾನೆ ಅಂತ ಹೇಳಿದ್ದನಂತೆ. ಅದರಂತೆ ನೆಕ್ಕಂಟಿ ರಮೇಶ್ 20 ರೂ. ಕೊಟ್ಟು 1.5 ಕೋಟಿ ಕ್ಯಾಶ್ ಪಡೆದಿದ್ದ. 300 – 042317 ನಂಬರ್ ನ ನೋಟ್‌ನಲ್ಲಿ ಹವಾಲ ವಹಿವಾಟು ನಡೆಸಲಾಗಿತ್ತು. ಇದೇ ರೀತಿ ಬಹುಕೋಟಿ ಹಣವನ್ನ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದೆಲ್ಲದರ ಅರಿವು ನಾಗೇಂದ್ರಗೆ ಇತ್ತು. ನಾಗೇಂದ್ರ ಸೂಚನೆ ಮೇರೆಗೆ ಇದೆಲ್ಲವೂ ನಡೆದಿತ್ತು ಎಂದು ನಡೆದಿತ್ತು ಎಂದು ಇಡಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.
ಕಂತೆ ಕಂತೆ ಹಣದ ಫೋಟೋ
ಇನ್ನೂ ನಾಗೇಂದ್ರ ಪಿಎ ವಿಜಯ್ ಕುಮಾರ್ ಗೌಡಗೆ ಎಲೆಕ್ಷನ್ ಹಣ ಹಂಚುವ ಹೊಣೆ ವಹಿಸಲಾಗಿತ್ತು ಅನ್ನೋದು ಇಡಿ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ವಿಜಯ್ ಕುಮಾರ್ ಗೌಡ ಕೂಡ ಇಡಿಗೆ ಹೇಳಿಕೆ ಕೊಟ್ಟಿದ್ದಾರೆ. ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಂಚಿರುವುದಾಗಿ ಹೇಳಿಕೆ ನೀಡಿದ್ದಾರೆ. ಜಯಕುಮಾರ್ ಮೊಬೈಲ್ ಫೋನ್‌ನಲ್ಲಿ ಕಂತೆ ಕಂತೆ ಹಣದ ಫೋಟೋ ಸಹ ಪತ್ತೆಯಾಗಿದೆ. ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂಬ ಪಟ್ಟಿಯೂ ಮೊಬೈಲ್ ನಲ್ಲಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಪರ ಮತದಾರರಿಗೆ ಹಣ ಹಂಚಲಾಗಿದೆ ಎಂಬ ಗಂಭೀರ ಆರೋಪವನ್ನು ಇಡಿ ಮಾಡಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಷ್ಟೇ ಅಲ್ಲ…
ಬಳ್ಳಾರಿ ಗ್ರಾಮಾಂತರಕ್ಕೆ 5,23,72,400 ರೂ.
ಬಳ್ಳಾರಿ ನಗರಕ್ಕೆ – 3,75,00,000 ರೂ.
ಕಂಪ್ಲಿ – 3,38,00,000 ರೂ.
ಕೂಡ್ಲಿಗಿ – 3,16,00,000 ರೂ. ಸೇರಿ ಬಳ್ಳಾರಿ ಲೋಕಸಭೆ ಚುನಾವಣೆಗೆ ವಾಲ್ಮೀಕಿ ನಿಗಮಕ್ಕೆ ಸೇರಿದ ಸುಮಾರು 15 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.
ನಾಗೇಂದ್ರ ವೈಯಕ್ತಿಕ ಖರ್ಚಿಗೂ ವಾಲ್ಮೀಕಿ ನಿಮಗದ ಹಣ?
ವಾಲ್ಮೀಕಿ ನಿಗಮದ ಹಣದಲ್ಲಿ ನಾಗೇಂದ್ರ ವೈಯಕ್ತಿಕ ವೆಚ್ಚಕ್ಕೆ 16 ಲಕ್ಷ ಹಣ ಬಳಕೆ ಮಾಡಿದ್ದಾರೆ. ಫ್ಲೈಟ್ ಟಿಕೆಟ್ ಬುಕ್ಕಿಂಗ್, ಕಾರ್ ಮೇಂಟೇನೆನ್ಸ್, ವಿದ್ಯುತ್ ಬಿಲ್, ನಾಗೇಂದ್ರ ಮನೆ ನಿರ್ವಹಣೆ ಹಾಗೂ ಮನೆಗೆಲಸದ ಸಿಬ್ಬಂದಿ ಸಂಬಳಕ್ಕೆ ಉಪಯೋಗಿಸಲಾಗಿದೆ ಎಂದು ಆರೋಪಿಸಲಾಗಿದೆ.
-ಬಿಜೆಪಿಯೇತರ ನಾಯಕರ ಮೇಲೆ ದಾಳಿ ಮಾಡುವುದು ಇಡಿ ವೈಶಿಷ್ಟ್ಯ
ಬೆಂಗಳೂರು: ಕಾಂಗ್ರೆಸ್ ನಾಯಕರನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುವ ‘ಜಾರಿ ನಿರ್ದೇಶನಾಲಯ’ ತನ್ನ ಹೆಸರನ್ನು ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಜಾರಿ ನಿರ್ದೇಶನಾಲಯದ ಪ್ರೈಮ್ ಟಾರ್ಗೆಟ್ ಕಾಂಗ್ರೆಸ್ ನಾಯಕರೇ ಹೊರತು ಬಿಜೆಪಿಯವರಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಇಡಿ ವಿರುದ್ಧ ಕಿಡಿಕಾರಿದ್ದಾರೆ.
ಎಕ್ಸ್‌ನಲ್ಲಿ ಏನಿದೆ?
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಜಾರಿ ನಿರ್ದೇಶನಾಲಯದ ವೈಶಿಷ್ಟ್ಯವೇನೆಂದರೆ ಅದು ದಾಳಿ ಮಾಡುವುದು ಬಿಜೆಪಿಯೇತರ ನಾಯಕರ ಮೇಲೆ ಮಾತ್ರ. ಇಲ್ಲಿಯವರೆಗೂ ಇಡಿ ಬಿಜೆಪಿ ನಾಯಕರ ತಂಟೆಗೆ ಹೋಗಿಲ್ಲ, ಹೋಗುವುದು ಇಲ್ಲ. ಇದೊಂದು ವಿಸ್ಮಯ. ಇದನ್ನೂ ಓದಿ: `ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನೀರಿನ ಟ್ಯಾಂಕರ್ ಸ್ಫೋಟ – ಹಲವರಿಗೆ ಗಾಯ
ಇತ್ತೀಚೆಗಷ್ಟೆ ತಮಿಳುನಾಡಿನ ಟಿಎಎಸ್‌ಎಂಎಸಿ ಹಗರಣದಲ್ಲಿ ಇಡಿ ನಡೆಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳಲ್ಲಿ ಟೀಕಿಸಿದೆ. ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ. ಆದರೂ ಇಡಿ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ – ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ (Bellary) ಬುಧವಾರ ಬೆಳ್ಳಂಬೆಳಗ್ಗೆ ಇಡಿ (ED) ಅಧಿಕಾರಿಗಳು ಕೈ ಶಾಸಕರು ಹಾಗೂ ಸಂಸದರಿಗೆ ಶಾಕ್ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Scam) ನೂರಾರು ಕೋಟಿ ಹಣ ಹೊಡೆದು, ಆ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸುವಲ್ಲಿ ಕೈ ಜನಪ್ರತಿನಿಧಿಗಳ ಕೈವಾಡ ಇದೆ ಎಂದು ನಾಲ್ವರು ಶಾಸಕರು ಹಾಗೂ ಓರ್ವ ಸಂಸದರಿಗೆ ಇಡಿ ಅಧಿಕಾರಗಳು ಬುಧವಾರ ಇಡೀ ದಿನ ಡ್ರಿಲ್ ಮಾಡಿದ್ದಾರೆ. ಸತತ 15 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಹಿಂದೆ ಇಡಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಒಂದಷ್ಟು ದಿನ ಮಾಜಿ ಸಚಿವ ನಾಗೇಂದ್ರ, ಅವರ ಆಪ್ತರು ಜೈಲಿನಲ್ಲಿದ್ದು ಬೇಲ್ ಪಡೆದಿದ್ದರು. ಇನ್ನೇನು ಇಡಿ ತನಿಖೆ ಮುಗೀತು ಎಂದು ನಿರಾಳರಾಗಿ ಮೈಮರೆತಿದ್ದವರಿಗೆ ಇಡಿ ಮತ್ತೆ ಶಾಕ್ ಕೊಟ್ಟಿದೆ. ಇಡಿ ಅಧಿಕಾರಿಗಳ ದೊಡ್ಡ ಪಡೆ ಬಳ್ಳಾರಿ ಲೋಕಸಭಾ ವ್ಯಾಪ್ತಿಯ ಐವರು ಶಾಸಕರು, ಓರ್ವ ಸಂಸದರಿಗೆ ಮೈಚಳಿ ಬಿಡಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.
ಬಳ್ಳಾರಿ ಸಂಸದ ಇ.ತುಕಾರಾಂ ಸಂಡೂರು ನಿವಾಸ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಬೆಂಗಳೂರು ನಿವಾಸ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ನಿವಾಸ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ನಿವಾಸ ಹಾಗೂ ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ನಡೆಸಿ ಸುಧೀರ್ಘ 15 ಗಂಟೆಗಳ ವಿಚಾರಣೆ ನಡೆಸಿದರು. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ
ಕಳೆದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಕೆಯಾಗಿದೆ ಎನ್ನುವ ಆರೋಪ ಇತ್ತು. ಅಷ್ಟೇ ಅಲ್ಲದೇ ಕಳೆದ ಬಾರಿ ನಾಗೇಂದ್ರ ಆಪ್ತ ಸಹಾಯಕ ಮನೆ ಮೇಲೆ ದಾಳಿ ಮಾಡಿದಾಗ, ಗಣೇಶ್, ತುಕಾರಾಂ, ಭರತ್ ರೆಡ್ಡಿ, ನಾಗೇಂದ್ರ, ಎನ್.ಟಿ ಶ್ರೀನಿವಾಸ್‌ಗೆ ಹಣ ಸಂದಾಯ ಆಗಿರುವ ಬಗ್ಗೆ ಬರೆದಿಟ್ಟ ಡೈರಿ ಸಿಕ್ಕಿತ್ತು. ಅದೇ ಆಧಾರದ ಮೇಲೆ ಇಡಿ ದಾಳಿ ನಡೆಸಿ ಇಡೀ ದಿನ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ
ಎಲ್ಲರಿಗೂ ಒಂದೇ ಮಾದರಿಯ 28 ಪ್ರಶ್ನೆ:
ಎಲ್ಲರನ್ನೂ ಅವರ ಮನೆಗಳಲ್ಲೇ ಲಾಕ್ ಮಾಡಿದ್ದ ಇಡಿ ಅಧಿಕಾರಿಗಳು 15 ತಾಸಿಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದರು. ಎಲ್ಲರನ್ನೂ ಪ್ರತ್ಯೇಕವಾಗಿ ಕೂರಿಸಿ ಒಂದೇ ಮಾದರಿಯ 28 ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರಗಳನ್ನ ನಮೂದಿಸಲಾಗಿದೆ. ಅಲ್ಲದೇ ಕಳೆದ ಎರಡು ವರ್ಷಗಳ ಬ್ಯಾಂಕ್ ಖಾತೆಗಳ ವ್ಯವಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ನಾಗೇಂದ್ರ ಆಪ್ತ ಡೈರಿಯಲ್ಲಿ ಬರೆದಿದ್ದ ಹೆಸರು ಹಾಗೂ ಹಣದ ವಿವರದ ಕಾಪಿ ತೋರಿಸಿ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಎಲ್ಲರ ಮೊಬೈಲ್ ವಶಕ್ಕೆ ಪಡೆದು ಡಿಲೀಟೆಡ್ ಮೆಸೇಜ್‌ಗಳನ್ನು ರಿಟ್ರೀವ್ ಮಾಡಲಾಗಿದೆ. ದಾಳಿಗೆ ಒಳಗಾಗದ ಎಲ್ಲಾ ಶಾಸಕರು ಹಾಗೂ ಸಂಸದರ ಮನೆಯಿಂದ ಒಂದಷ್ಟು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ದಾಳಿಗೊಳಗಾದ ಶಾಸಕರು ಸಂಸದರಿಗೆ ಹೆಚ್ಚಿನ ವಿಚಾರಣೆ ಎದುರಿಸಲು ತಿಳಿಸಲಾಗಿದೆ. ಬೆಂಗಳೂರಿನ ಇಡಿ ಕಚೇರಿಗೆ ಬರುವಂತೆ ಸೂಚನೆ ನೀಡಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಧಾರಾಕಾರ ಮಳೆಗೆ 101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ
ಇಡಿ ದಾಳಿಗೆ ಒಳಗಾಗಿ, ವಿಚಾರಣೆ ಎದುರಿಸಿದ ಬಳಿಕ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್ ಮಾಡಿಲ್ಲ. ಏನೇ ದಾಖಲಾತಿ ಕೇಳಿದ್ರೂ ಕೊಡುತ್ತೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ