Tag: ED

  • ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ರಾಯ್ಪುರ: ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ (Bhupesh Baghel) ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chaitanya Baghel) ಅವರ ಪುತ್ರನನ್ನು ಇ.ಡಿ ಬಂಧಿಸಿದೆ.

    ಶುಕ್ರವಾರ ಬೆಳಗ್ಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ವರ್ಷ ಎರಡನೇ ಬಾರಿಗೆ ಭಿಲಾಯಿಯಲ್ಲಿರುವ ಬಘೇಲ್ ಕುಟುಂಬದ ನಿವಾಸದ ಮೇಲೆ ದಾಳಿ ನಡೆಸಿದರು. ಬಳಿಕ ಬಘೇಲ್ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

    ರಾಜ್ಯದ ರಾಯ್‌ಗಢ ಜಿಲ್ಲೆಯ ತಮ್ನಾರ್ ತಹಸಿಲ್‌ನಲ್ಲಿ ಅದಾನಿ ಗ್ರೂಪ್‌ನಿಂದ ಕಲ್ಲಿದ್ದಲು ಗಣಿ ಯೋಜನೆಗಾಗಿ ಮರಗಳನ್ನು ಕಡಿಯುತ್ತಿರುವ ವಿಷಯವನ್ನು ಡೈವರ್ಟ್‌ ಮಾಡಲು ಹೀಗೆ ಮಾಡಲಾಗಿದೆ ಎಂದು ಭೂಪೇಶ್ ಬಘೇಲ್ ಟೀಕಿಸಿದ್ದಾರೆ.

    ಚೈತನ್ಯ ಬಂಧನದ ಹಿನ್ನೆಲೆಯಲ್ಲಿ ಬಘೇಲ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆ ವಿಧಾನಸಭಾ ಕಲಾಪಗಳನ್ನು ಬಹಿಷ್ಕರಿಸಿದರು. ‘ಬಘೇಲ್ ಮತ್ತು ನಮ್ಮ ಮೇಲೆ ಕಿರುಕುಳ ನೀಡಲು ಇಡಿ ಮುಂದಾಗಿದೆ. ಅದರ ಬಗ್ಗೆ ಮಾತನಾಡುವುದು ಮುಖ್ಯ. ಚೈತನ್ಯರ ಬಂಧನವನ್ನು ನಾವು ವಿರೋಧಿಸುತ್ತೇವೆ. ನಾವು ಕಲಾಪವನ್ನು ಬಹಿಷ್ಕರಿಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

    ಕಾಂಗ್ರೆಸ್ ನಾಯಕ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಮದ್ಯ ಹಗರಣದ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಅವರ ನಿವಾಸದಲ್ಲಿ ಮತ್ತೆ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  • ಶಿಕೋಹ್‌ಪುರ ಭೂ ವ್ಯವಹಾರ ಕೇಸ್‌ – ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್

    ಶಿಕೋಹ್‌ಪುರ ಭೂ ವ್ಯವಹಾರ ಕೇಸ್‌ – ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್

    ನವದೆಹಲಿ: ಹರಿಯಾಣದ ಶಿಕೋಹ್‌ಪುರದಲ್ಲಿ ನಡೆದ ಭೂ ವ್ಯವಹಾರದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ (Robert Vadra) ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಚಾರ್ಜ್‌ ಶೀಟ್‌ ಸಲ್ಲಿಸಿದೆ.

    56 ವರ್ಷದ ವಾದ್ರಾ ಅವರನ್ನ ಕ್ರಿಮಿನಲ್ ಪ್ರಕರಣದಲ್ಲಿ ಹೆಸರಿಸಿ ತನಿಖಾ ಸಂಸ್ಥೆಯೊಂದು ಪ್ರಾಸಿಕ್ಯೂಷನ್ ದೂರು ದಾಖಲಿಸಿರುವುದು ಇದೇ ಮೊದಲ ಬಾರಿಯಾಗಿದೆ. ವಾದ್ರಾ ಮತ್ತು ಅವರ ಸಂಬಂಧಿತ ಸಂಸ್ಥೆಗಳಾದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ 37.64 ಕೋಟಿ ರೂ. ಮೌಲ್ಯದ 43 ಸ್ಥಿರಾಸ್ತಿಗಳನ್ನು ಇ ಡಿ. ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ದನ್ನೂ ಓದಿ: ಪ್ರಿಯಾಂಕ್‌ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಸಂತೋಷ್ ಲಾಡ್‌ಗೆ ಬಡ್ಡಿ ಸಮೇತ ಚುಕ್ತಾ ಮಾಡ್ತಿನಿ: ಪ್ರತಾಪ್‌ ಸಿಂಹ

    ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ನಿಬಂಧನೆಗಳ ಅಡಿಯಲ್ಲಿ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮುಂದೆ ಆರೋಪಪಟ್ಟಿ ಇದೆ ಎಂದು ಮೂಲಗಳು ತಿಳಿಸಿವೆ. ದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪಭು ಚೌಹಾಣ್ ಪುತ್ರನ ವಿರುದ್ಧ ದೂರು

    ವಾದ್ರಾ, ಅವರೊಂದಿಗೆ ಸಂಬಂಧ ಹೊಂದಿರುವ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್‌ ಲಿಮಿಟೆಡ್ ಸಂಸ್ಥೆ, ಸತ್ಯಾನಂದ್ ಯಾಜಿ ಮತ್ತು ಕೇವಲ್ ಸಿಂಗ್ ವಿರ್ಕ್, ಅವರ ಕಂಪನಿ ಓಂಕಾರೇಶ್ವರ ಪ್ರಾಪರ್ಟೀಸ್ ಪ್ರೈವೆಟ್‌ ಲಿಮಿಟೆಡ್ ಮತ್ತು ಇತರ ಕೆಲವು ಸಂಸ್ಥೆಗಳು ಸೇರಿದಂತೆ ಒಟ್ಟು 11 ಸಂಸ್ಥೆಗಳನ್ನ ಆರೋಪಿಗಳೆಂದು ಹೆಸರಿಸಲಾಗಿದೆ. ದನ್ನೂ ಓದಿ: ಸಂಘದ ಶಾಖೆಗೆ ಕರೆದೊಯ್ದು ಸಂಸ್ಕಾರ ಕಲಿಸಿದ್ರು ನನ್ನಪ್ಪ: ಅಗಲಿದ ತಂದೆ ನೆನೆದು ಶಾಸಕ ಸುನಿಲ್‌ ಕುಮಾರ್‌ ಭಾವುಕ ಪತ್ರ

  • ʻಕೈʼ ಶಾಸಕ ನಂಜೇಗೌಡಗೆ ಬಿಗ್ ಶಾಕ್ – ಇ.ಡಿಯಿಂದ ಆಸ್ತಿ ಮುಟ್ಟುಗೋಲು

    ʻಕೈʼ ಶಾಸಕ ನಂಜೇಗೌಡಗೆ ಬಿಗ್ ಶಾಕ್ – ಇ.ಡಿಯಿಂದ ಆಸ್ತಿ ಮುಟ್ಟುಗೋಲು

    ಬೆಂಗಳೂರು: ಮಾಲೂರು ಶಾಸಕ ಹಾಗೂ ನಂಜೇಗೌಡ (K.Y Nanjegowda) ಅವರ ಆಸ್ತಿಯನ್ನು ಇ.ಡಿ (E.D) ಮುಟ್ಟುಗೋಲು ಹಾಕಿಕೊಂಡಿದೆ.

    ಕೋಮುಲ್‌ ನಿರ್ದೇಶಕ ನಂಜೇಗೌಡರು ನೇಮಕಾತಿಯಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಸುಮಾರು 75 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಮಂಗಳೂರು ಯೂನಿವರ್ಸಿಟಿಯ ಸಿಬ್ಬಂದಿ ಜೊತೆಗೆ ಅವ್ಯಹಾರ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ

    ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ರಾಜಕಾರಣಿಗಳ ಶಿಫಾರಸು ಪತ್ರ ನೀಡಲಾಗಿತ್ತು. ಇ.ಡಿ ದಾಳಿ ವೇಳೆ ಶಿಫಾರಸು ಪತ್ರ ಸಮೇತ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು.

    ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಿ ನಂಜೇಗೌಡರ ಮನೆ ಮೇಲೆ ಇಡಿ ದಾಳಿ ಮಾಡಿತ್ತು. ಇದನ್ನೂ ಓದಿ: ನನಗೆ ಸಿಎಂ, ಡಿಸಿಎಂ ವಿರುದ್ಧ ಅಸಮಾಧಾನ ಇಲ್ಲ: ಕೆವೈ ನಂಜೇಗೌಡ

  • ಧಾರವಾಡ ಕೆಐಎಡಿಬಿ ಹಗರಣ – ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿ ಇಡಿ ವಶಕ್ಕೆ

    ಧಾರವಾಡ ಕೆಐಎಡಿಬಿ ಹಗರಣ – ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿ ಇಡಿ ವಶಕ್ಕೆ

    ಧಾರವಾಡ: ಧಾರವಾಡ (Dharwad) ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಲ್ಲಿ (KIADB) ಎರಡು ಬಾರಿ ಪರಿಹಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪಿ ರವಿ ಕುರುಬೆಟ್‌ನನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ನೀಡಿದ್ದರು. ಆದರೆ 2021-22ರಲ್ಲಿ ಮತ್ತೆ ಹಲವು ಜಮೀನುಗಳಿಗೆ ಎರಡನೇ ಬಾರಿ 19.99 ಕೋಟಿ ರೂ. ಪರಿಹಾರ ನೀಡಿದ್ದರು. ಈ ಹಿನ್ನೆಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ವಿದೇಶದಲ್ಲಿ ಹೂಡಿಕೆ – ಕೈ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ


    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೂಡಾ ದೂರು ದಾಖಲಿಸಿಕೊಂಡಿತ್ತು. ಒಟ್ಟು 72 ಕೋಟಿ ರೂ. ಅಕ್ರಮ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪದಡಿ ರವಿ ಕುರುಬೆಟ್‌ನನ್ನು ಇಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಕಲಹ – ಮಗನಿಂದಲೇ ತಂದೆ, ಸಹೋದರನ ಬರ್ಬರ ಹತ್ಯೆ

    ಈ ಪ್ರಕರಣದಲ್ಲಿ ಹಿಂದೆ ಕೆಐಎಡಿಬಿ ನಿವೃತ್ತ ಅಧಿಕಾರಿ ವಸಂತಕುಮಾರ್ ಸಜ್ಜನ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಅಲ್ಲಾಬಕ್ಷ ದುಂಡಸಿರನ್ನು ಬಂಧಿಸಲಾಗಿತ್ತು.

  • ಇಡಿಯಿಂದ ಎರಡನೇ ಬಾರಿ ವಿಚಾರಣೆ – ಆಸ್ತಿಯ ಲೆಕ್ಕ ಕೊಟ್ಟ ಡಿ.ಕೆ ಸುರೇಶ್

    ಇಡಿಯಿಂದ ಎರಡನೇ ಬಾರಿ ವಿಚಾರಣೆ – ಆಸ್ತಿಯ ಲೆಕ್ಕ ಕೊಟ್ಟ ಡಿ.ಕೆ ಸುರೇಶ್

    ಬೆಂಗಳೂರು: ಐಶ್ವರ್ಯ ಗೌಡಳಿಂದ (Aishwarya Gowda) ವಂಚನೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ ಸುರೇಶ್‌ರನ್ನ (D K Suresh) ಎರಡನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ.

    10 ದಿನಗಳ ಹಿಂದೆ ವಿಚಾರಣೆ ಎದರುಸಿದ ಬಳಿಕ ಜುಲೈ 8ಕ್ಕೆ ಹೆಚ್ಚುವರಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಮಂಗಳವಾರ 11 ಗಂಟೆ ವೇಳೆಗೆ ವಿಚಾರಣೆಗೆ ಹಾಜರಾಗಿ ಮಧ್ಯಾಹ್ನ 2 ಗಂಟೆವರೆಗೂ ವಿಚಾರಣೆ ಎದುರಿಸಿದರು. ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

    ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿದ್ದವರು ಏನು ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ. ನನ್ನನ್ನು ಕರೆದಿದ್ದಾರೆ ಅದಕ್ಕೆ ಬಂದು ಹೇಳಿಕೆ ಕೊಟ್ಟಿದ್ದೇನೆ. ಅವರು ಕೇಳಿದ ದಾಖಲೆ ನೀಡಿದ್ದೇನೆ. ವೈಯಕ್ತಿಕ ಆಸ್ತಿ ಹಾಗೂ ಅದರ ದಾಖಲೆಗಳನ್ನು ಕೇಳಿದರು ಅದನ್ನೂ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಶೂ ಒಳಗೆ, ಮನೆ ಎದುರು ಕೀ ಮುಚ್ಚಿಡುವವರೇ ಹುಷಾರ್ – 65 ಲಕ್ಷ ರೂ. ಕನ್ನ ಹಾಕಿದ್ದವ ಅರೆಸ್ಟ್

    ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಅದು ಹೇಗೆ ಈ ಕೇಸ್‌ಗೆ ಲಿಂಕ್ ಮಾಡಿದ್ರೋ ಗೊತ್ತಿಲ್ಲ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಅವರು ಪರಿಶೀಲನೆ ನಡೆಸಲಿ. ಮತ್ತೆ ವಿಚಾರಣೆಗೆ ಬನ್ನಿ ಎಂದು ಕರೆದಿಲ್ಲ. ಐಟಿಗೂ, ಲೋಕಾಯುಕ್ತಕ್ಕೂ ಸಹ ಮಾಹಿತಿ ಮತ್ತು ದಾಖಲಾತಿ ಕೊಟ್ಟಿದ್ದೇವೆ. ಅದೇ ರೀತಿ ಇಲ್ಲಿಯೂ ಕೊಟ್ಟಿದ್ದು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಹೇಳಿದರು.

  • 101.4 ಕೋಟಿ ಸಾಲ ಪಡೆದು ವಂಚನೆ ಕೇಸ್‌ – ಅಲ್ಲು ಅರ್ಜುನ್‌ ತಂದೆಗೆ 3 ಗಂಟೆ ಇಡಿ ಡ್ರಿಲ್‌

    101.4 ಕೋಟಿ ಸಾಲ ಪಡೆದು ವಂಚನೆ ಕೇಸ್‌ – ಅಲ್ಲು ಅರ್ಜುನ್‌ ತಂದೆಗೆ 3 ಗಂಟೆ ಇಡಿ ಡ್ರಿಲ್‌

    ತೆಲುಗು ನಟ ಅಲ್ಲು ಅರ್ಜುನ್ (Allu Arjun) ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್‌ಗೆ (Allu Aravind) ಜಾರಿ ನಿರ್ದೇಶನಾಲಯ ಗ್ರಿಲ್ ಮಾಡಿದೆ. ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್‌ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ 3 ಗಂಟೆಗಳ ವಿಚಾರಣೆ ನಡೆಸಿದ್ದಾರೆ.

    ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದಾಗ ಪ್ರಮುಖ ಹಣಕಾಸಿನ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದರು. ಇದೀಗ ಅದರ ಮುಂದುವರಿದ ಭಾಗದ ವಿಚಾರಣೆಯಲ್ಲಿ ಅಲ್ಲು ಅರವಿಂದ್ ಹಾಜರಾಗಿದ್ದರು. ಮುಂದಿನವಾರ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

    ವಿಚಾರಣೆ ಬಳಿಕ ಮಾತಾಡಿದ ಅಲ್ಲು ಅರವಿಂದ್, 2017ರಲ್ಲಿ ಒಂದು ಮೈನರ್ ಷೇರುದಾರನಾಗಿದ್ದ ಒಂದು ಆಸ್ತಿ ಖರೀದಿಸಿದ್ದೆ. ಆಸ್ತಿ ವಿಚಾರವಾಗಿ ತನಿಖೆ ಇದೆ ಎಂದು ತಿಳಿದಿರಲಿಲ್ಲ. ಬ್ಯಾಂಕ್ ಸಾಲವನ್ನು ಪಾವತಿಸಲಿಲ್ಲ. ಅಕೌಂಟ್ಸ್ ಬುಕ್‌ನಲ್ಲಿ ನನ್ನ ಹೆಸರು ಇರುವುದರಿಂದ ಇಡಿ ವಿಚಾರಣೆಗೆ ಕರೆದಿತ್ತು. ಜವಾಬ್ದಾರಿಯಿರುವ ನಾಗರಿಕರಿಗೆ ಹಾಜರಾಗಿ ವಿವರಣೆಯನ್ನು ನೀಡಿದ್ದೇನೆ ಅಂದಿದ್ದಾರೆ.

    ಇನ್ನೂ ಓಪನ್ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು ದುರ್ಬಳಕೆ ಮಾಡಿ, 101 ಕೋಟಿ ರೂ.ವರೆಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಬದಲಾಸಿಕೊಂಡಿದ್ದಾರೆ ಎಂಬ ಆರೋಪ ಇದೆ. 2018-19ರಲ್ಲಿ ಈ ಬ್ಯಾಂಕ್ ವಂಚನೆ ನಡೆದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿತ್ತು.

  • ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

    ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

    – ಇಡಿ, ಸಿಬಿಐ ನೀಡಿದ ದೂರಿನ್ವಯ ಅಮೆರಿಕದಲ್ಲಿ ಅರೆಸ್ಟ್

    ನವದೆಹಲಿ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ (Neerav Modi) ಸಹೋದರ ನೇಹಲ್ ಮೋದಿಯನ್ನು (Nehal Modi) ಅಮೆರಿಕದಲ್ಲಿ ಬಂಧಿಸಲಾಗಿದೆ. ಸಿಬಿಐ ಮತ್ತು ಇಡಿ ನೀಡಿದ ದೂರಿನ್ವಯ ಬಂಧಿಸಲಾಗಿದೆ.

    ನೀರವ್ ಮೋದಿಯ ಸಹೋದರ ನೇಹಲ್ ಮೋದಿಯನ್ನು ಜುಲೈ 4ರಂದು ಅಮೆರಿಕದ (America) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಾಹಿತಿ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ಸೆಕ್ಷನ್ 3ರ ಅಡಿಯಲ್ಲಿ ಹಣ ವರ್ಗಾವಣೆ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 120-ಬಿ ಮತ್ತು 201ರಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹಕರಿಸಿದ್ದ ಆರೋಪ ಪ್ರಕರಣದಲ್ಲಿ ನೇಹಲ್ ಮೋದಿ ಅವರನ್ನು ಹಸ್ತಾಂತರ ಮಾಡುವಂತೆ ಅಮೆರಿಕದ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿತ್ತು. ಇದನ್ನೂ ಓದಿ: ಬಹುಭಾಷಾ ನಟ ಪ್ರಕಾಶ್ ರಾಜ್ ಗುಜರಾತ್‌ನಲ್ಲೂ ಹೋರಾಟ ಮಾಡಲಿ – ಎಂಬಿಪಿ ತಿರುಗೇಟು

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯಲ್ಲಿ, ನೇಹಲ್ ಮೋದಿಯು ನೀರವ್ ಮೋದಿಯ ಅಕ್ರಮ ಆದಾಯವನ್ನು ಕಾನೂನುಬದ್ಧಗೊಳಿಸಲು ಕೆಲಸ ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

    ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿ ಶೆಲ್ ಕಂಪನಿ ಮತ್ತು ವಿದೇಶಿ ವಹಿವಾಟುಗಳ ಜಾಲದ ಮೂಲಕ ಅಪಾರ ಪ್ರಮಾಣದ ಅಕ್ರಮ ಹಣವನ್ನು ಮರೆಮಾಡಲು ಮತ್ತು ವರ್ಗಾಯಿಸಲು ಸಹಾಯ ಮಾಡಿದ ಆರೋಪ ನೇಹಲ್ ಮೇಲಿದೆ. ಹಸ್ತಾಂತರ ಪ್ರಕ್ರಿಯೆಗಳ ಮುಂದಿನ ವಿಚಾರಣೆಯ ದಿನಾಂಕವನ್ನು ಜುಲೈ 17ಕ್ಕೆ ನಿಗದಿಪಡಿಸಲಾಗಿದೆ. ಈ ಸಂದರ್ಭ ನೇಹಲ್ ಮೋದಿ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

  • ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

    ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

    ನವದೆಹಲಿ: ಬ್ರಿಟನ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿಯನ್ನು (Sanjay Bhandari) ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಜಾರಿ ನಿರ್ದೇಶನಾಲಯದ (ED) ಮನವಿಯ ಮೇರೆಗೆ ದೆಹಲಿ ವಿಶೇಷ ನ್ಯಾಯಾಲಯ (Delhi Special Court) ಇಂದು ಆದೇಶ ಹೊರಡಿಸಿದೆ.

    ಸಂಜಯ್ ಭಂಡಾರಿ, ಬ್ರಿಟನ್‌ನಲ್ಲಿ ನೆಲೆಸಿರುವ ಶಸ್ತ್ರಾಸ್ತ್ರ ಸಲಹೆಗಾರ (Arms Consultant), 2016ರಲ್ಲಿ ಭಾರತದಿಂದ ಬ್ರಿಟನ್‌ಗೆ ಪರಾರಿಯಾದವರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 2015ರ ಕಪ್ಪುಹಣ ತಡೆ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆ ದಾಖಲಿಸಿದ ಆರೋಪಪಟ್ಟಿಯನ್ನು ಆಧರಿಸಿ, ಇಡಿಯು 2017ರ ಫೆಬ್ರವರಿಯಲ್ಲಿ ಭಂಡಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತು. 2020ರಲ್ಲಿ ಇಡಿ ಆರೋಪಪಟ್ಟಿಯನ್ನು ಸಹ ಸಲ್ಲಿಸಿತು. ಇದನ್ನೂ ಓದಿ: ರಶ್ಮಿಕಾ ಬೈ ಮಿಸ್‌ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ

    ಇಡಿಯ ಪ್ರಕಾರ, ಭಂಡಾರಿಯು 100 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿದ್ದಾನೆ. ಇವುಗಳನ್ನು ಆದಾಯ ತೆರಿಗೆ ಇಲಾಖೆಗೆ ಬಹಿರಂಗಪಡಿಸದೇ ಅಕ್ರಮವಾಗಿ ಸಂಪಾದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಭಂಡಾರಿಯು ಭಾರತದ ಕಾನೂನು ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದಾನೆ ಎಂದು ಇಡಿ ವಾದಿಸಿತ್ತು. ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

    ಭಾರತ ಸರ್ಕಾರವು ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಬ್ರಿಟನ್‌ಗೆ ಮನವಿ ಸಲ್ಲಿಸಿತ್ತು. ಆದರೆ, ಅಲ್ಲಿಯ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಇದರ ಬೆನ್ನಲೆ ದೆಹಲಿ ವಿಶೇಷ ನ್ಯಾಯಲಯ ಪರಾರಿಯಾದ ಆರ್ಥಿಕ ಅಪರಾಧಿ (Economic Offender) ಎಂದು ಘೋಷಿಸಿದ್ದು, ಭಂಡಾರಿಯ ಆಸ್ತಿಗಳನ್ನು ಮುಟ್ಟುಗೋಲಿಗೆ ಒಳಪಡಿಸಲು ಮತ್ತು ಕಾನೂನು ಕ್ರಮಕ್ಕೆ ಒಳಪಡಿಸಲು ಭಾರತ ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ

  • ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ನವದೆಹಲಿ/ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ (Gold Smuggling Case) ಸಂಬಂಧಿಸಿದಂತೆ ರನ್ಯಾ ರಾವ್‌ಗೆ (Ranya Rao) ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ.

    ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯನ್ನು ಹಿಂದಿಕ್ಕಿದ ಉಡುಪಿ

     

    ಇಡಿ ಹೇಳಿದ್ದೇನು?
    ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಮತ್ತು ಇತರರು ದುಬೈ, ಉಗಾಂಡಾ ಮತ್ತು ಬೇರೆ ದೇಶಗಳಲ್ಲಿರುವ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮಾರ್ಗದ ಮೂಲಕ ನಗದು ಹಣವನ್ನು ಪಾವತಿಸುತ್ತಿದ್ದರು. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ ಭಾರತೀಯರಿಗೂ ಕಾದಿದೆ ಆಘಾತ

    ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಗದು ರೂಪದಲ್ಲಿ ಮಾರಾಟ ಮಾಡಲಾಗಿತ್ತು. ಈ ಹಣ ಮತ್ತೆ ಚಿನ್ನ ತರಲು ಬಳಕೆಯಾಗುತ್ತಿತ್ತು.

    ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಮೂಲಕ ವಿದೇಶದಲ್ಲಿರುವ ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ನಿರ್ವಾಹಕರು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗೆ ಆರೋಪಿಗಳು ಸಂವಹನ ನಡೆಸಿರುವುದು ದೃಢಪಟ್ಟಿದೆ ಎಂದು ಇಡಿ ಹೇಳಿದೆ.

  • 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    ಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ (Fraud Case) ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ (DK Suresh) ಇಂದು ಇಡಿ ತನಿಖೆ ಎದುರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸುದೀರ್ಘ 7 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ. ಜುಲೈ 8ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

    ಈ ನಡುವೆ ಐಶ್ವರ್ಯಗೌಡಗೆ (Aishwarya Gowda) ಸೇರಿದ್ದ 3.98 ಕೋಟಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಇದರಲ್ಲಿ 2.01 ಕೋಟಿ ಮೌಲ್ಯದ ಫ್ಲ್ಯಾಟ್, 1.97 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಸೇರಿದೆ. ಆಸ್ತಿ ಸೀಜ್ ಆಗಿರೊ ಬಗ್ಗೆ ಇಡಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

    ಐಶ್ವರ್ಯಗೌಡಳ ಮೇಲೆ ರಾಜ್ಯದಲ್ಲಿ ವಂಚನೆ ಸಂಬಂಧ ಹಲವು ಎಫ್‌ಐಆರ್‌ಗಳಾಗಿದ್ವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇದೀಗ ಇಡಿ ಐಶ್ವರ್ಯಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

    ಇನ್ನೂ ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಸುರೇಶ್, ಇಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಜುಲೈ 8ಕ್ಕೆ ವಿಚಾರಣೆಗೆ ಕರೆದಿದ್ದಾರೆ. ಸಹಕಾರ ಕೊಡ್ತೇನೆ ಅಂದಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು