Tag: ED

  • NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

    NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

    ಉಡುಪಿ: ಹೊರಜಿಲ್ಲೆಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ನಾಯಕನಿಗೆ ಉಡುಪಿಯಲ್ಲಿ(Udupi) ಹುಡುಕಾಟ ಆರಂಭವಾಗಿದೆ.

    ಇಂದು ಕರ್ನಾಟಕದ ಹಲವು ಭಾಗದಲ್ಲಿ ಪಿಎಫ್‌ಐ ಕಚೇರಿ, ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿದೆ. ಈ ದಾಳಿಯ ಸಂದರ್ಭದಲ್ಲಿ ಓರ್ವ ನಾಯಕ ಮನೆಯಲ್ಲಿ ಇರಲಿಲ್ಲ. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ದಾಳಿ ವಿಚಾರ ತಿಳಿದು ಆತ ಈಗ ತನ್ನ ಜಿಲ್ಲೆಯಿಂದ ಪರಾರಿಯಾಗಿದ್ದಾನೆ. ಎನ್ಐಎ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಪಿಎಫ್ಐ ಮುಖಂಡ ಉಡುಪಿಗೆ ಬಂದಿದ್ದಾನೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ಕಾಪು, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್‌ ನಂಬರ್ ಲೊಕೇಶನ್‌ ಪತ್ತೆಯಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಮುಖಂಡನಿಗೆ ಈಗ ಹುಡುಕಾಟ ಆರಂಭವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ನವದೆಹಲಿ: ಕಳೆದ ಮೂರು ದಿನಗಳಿಂದ ಗೃಹ ಸಚಿವಾಲಯದ (MHA) ಅಧಿಕಾರಿಗಳು ಸಭೆ ನಡೆಸಿ ಪ್ರತ್ಯೇಕ ಕಂಟ್ರೋಲ್‌ ರೂಮ್‌ (Control Room) ತೆರೆದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಪಿಎಫ್‌ಐ ಮೇಲೆ ದಾಳಿ ನಡೆಸಿದೆ. ಇಲ್ಲಿಯವರೆಗೆ ಕೆಲ ಜಾಗಗಳಲ್ಲಿ ಎನ್‌ಐಎ (NIA) ದಾಳಿ ನಡೆಸಿದ್ದರೆ, ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಇಡಿ ಜೊತೆ ಸೇರಿ ದೇಶದ 11 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.

    ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಿಎಫ್‌ಐ (PFI) ಭಾಗಿಯಾಗಿದೆ ಎಂಬ ಆರೋಪ ಈ ಕೇಳಿ ಬಂದಿತ್ತು. ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ಪಕ್ಷಗಳು ಎಸ್‌ಡಿಪಿಐ (SDPI), ಪಿಎಫ್‌ಐ ನಿಷೇಧಿಸುವಂತೆ ಆಗ್ರಹಿಸಿದ್ದವು. ಇಲ್ಲಿಯವರೆಗೆ ಕೇಂದ್ರ ಸರ್ಕಾರ (Central Government) ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿರಲಿಲ್ಲ. ಹತ್ಯೆಯಾದ ಸಂದರ್ಭದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಿಯಾದ ಪ್ಲ್ಯಾನ್‌ ಮಾಡಿಕೊಂಡೇ ದೇಶಾದ್ಯಂತ ಪಿಎಫ್‌ಐ ನಾಯಕರ ಮೇಲೆ ದಾಳಿ ನಡೆಸಿ ಶಾಕ್‌ ಕೊಟ್ಟಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ಏನಿದು ಸಭೆಯ ರಹಸ್ಯ?
    ಮೂರು ದಿನಗಳ ಹಿಂದೆಯಷ್ಟೇ ಇಡಿ, ಎನ್‌ಐಎ ಹಾಗೂ ಗುಪ್ತಚರ ಇಲಾಖೆ (Intelligence Bureau) ಅಧಿಕಾರಿಗಳೊಂದಿಗೆ ಗೃಹ ಸಚಿವಾಲಯವು ಸಭೆ ನಡೆಸಿದೆ. ಇಲ್ಲಿಯವರೆಗೆ ಯಾವೆಲ್ಲ ಪ್ರಕರಣ ದಾಖಲಾಗಿದೆ? ಈ ಸಂಘಟನೆಗೆ ಹಣ ಎಲ್ಲಿಂದ ಬರುತ್ತಿದೆ ಈ ಎಲ್ಲಾ ವಿಚಾರಗಳನ್ನು ಮಾಹಿತಿ ಕಲೆ ಹಾಕಿ ಚರ್ಚೆ ನಡೆಸಲಾಗಿತ್ತು. ಅದಕ್ಕಾಗಿ 6 ಕಂಟ್ರೋಲ್‌ ರೂಂಗಳನ್ನು ತೆರಲಾಗಿತ್ತು. ಪ್ರತಿ ರಾಜ್ಯದಲ್ಲಿರುವ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಸಭೆ ನಡೆದ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿತ್ತು. ಪಿಎಫ್‌ಐ ಕಾರ್ಯಕರ್ತರು (PFI Workers) ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕ ಕಡೆ ರಾತ್ರಿಯೇ ಕಾರ್ಯಚರಣೆ ನಡೆಸಿ ನಾಯಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ಆರೋಪ ಏನು?
    ಪಶ್ಚಿಮ ಏಷ್ಯಾದ ದೇಶಗಳಾದ ಕತಾರ್‌, ಕುವೈತ್‌, ಸೌದಿ ಅರೇಬಿಯಾ, ಟರ್ಕಿಯಿಂದ ಈ ಸಂಘಟನೆಗಳಿಗೆ ಅಕ್ರಮವಾಗಿ ಹಣ ಬರುತ್ತಿದೆ ಎನ್ನವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತದಲ್ಲಿ ಯುವಕರ ತಲೆ ಕೆಡಿಸಿ ಭಯೋತ್ಪಾದಕ ಕೃತ್ಯ ಎಸಗಲು ಈ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿವೆ. ವಿದೇಶದಿಂದ ಬಂದ ನಿಧಿಯನ್ನು ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಯುವಕರಲ್ಲಿ ಮತಾಂಧತೆಯನ್ನು ಬೆಳೆಸಲು ಬಳಸಲಾಗುತ್ತಿದೆ. ಈ ಸಂಘಟನೆಯು ಮುಸ್ಲಿಂ ಸಹೋದರತ್ವ ಹೊಂದಿರುವಂತಹ ಪ್ಯಾನ್-ಇಸ್ಲಾಮಿಸ್ಟ್ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದೆ.

    ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮಾಜಿ ಡಿಜಿಪಿ (DGP) ಬ್ರಿಜ್‌ಲಾಲ್, ಪಿಎಫ್‌ಐ ಅಪಾಯಕಾರಿ ಸಂಘಟನೆಯಾಗಿದ್ದು, ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಜೊತೆಗೆ ನೇರವಾಗಿ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ. ಈ ಸಂಘಟನೆಯ ಸದಸ್ಯರು ಭಾರತೀಯ ಮುಜಾಹಿದ್ದೀನ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಅನೇಕ ದೊಡ್ಡ ಸ್ಫೋಟಗಳನ್ನು ನಡೆಸಲು ಇವರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ(SIMI) ನಾಯಕರೇ ಪಿಎಫ್‌ಐ- ಎಸ್‌ಡಿಪಿಐ ಸಂಘಟನೆಯ ಪ್ರಮುಖ ನಾಯಕರಾಗಿದ್ದಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದೇ ಇವರ ಮುಖ್ಯ ಉದ್ದೇಶ.

    ಸದ್ಯ ಭಾರತದಲ್ಲಿರುವ ಶಿಯಾ, ಸುನ್ನಿ, ಸೂಫಿ, ದಿಯೋಬಂದ್‌ ಪಂಗಡದ ನಾಯಕರು ಪಿಎಫ್‌ಐ ಹಾಗೂ ಎಸ್‌ಡಿಪಿಐನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ನವದೆಹಲಿ: ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ಯಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಮತ್ತು ಸೋಷಿಯಲ್‌ ಡೆಮೆಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ(SDPI) ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ.

    ದೇಶಾದ್ಯಂತ ಒಟ್ಟು 11 ರಾಜ್ಯಗಳಲ್ಲಿ ಎನ್‌ಐಎ(NIA), ಇಡಿ(ED), ರಾಜ್ಯಗಳ ಪೊಲೀಸ್‌ ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

    ಕರ್ನಾಟಕದಿಂದ(Karnataka) 20 ಮಂದಿ ಮತ್ತು ದೇಶಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಕಾರವಾರ, ಕಲಬುರಗಿಯಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಯಾವ ರಾಜ್ಯದಿಂದ ಎಷ್ಟು?
    ಆಂಧ್ರಪ್ರದೇಶ 5, ಅಸ್ಸಾಂ 9, ದೆಹಲಿ, 3, ಕರ್ನಾಟಕ 20, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚ್ಚೇರಿ 3, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದ 8 ಸೇರಿ ಒಟ್ಟು 106 ಮಂದಿಯನ್ನು ಬಂಧಿಸಲಾಗಿದೆ.

    ದಾಳಿ ಯಾಕೆ?
    ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದೇಶಾದ್ಯಂತ ದಾಳಿ ನಡೆಸಿದೆ.

    Live Tv
    [brid partner=56869869 player=32851 video=960834 autoplay=true]

  • ಉಗ್ರ ಸಂಘಟನೆಯೊಂದಿಗೆ ಸಂಪರ್ಕ – ಕಾರವಾರದ SDPI ಮುಖಂಡ ವಶಕ್ಕೆ

    ಉಗ್ರ ಸಂಘಟನೆಯೊಂದಿಗೆ ಸಂಪರ್ಕ – ಕಾರವಾರದ SDPI ಮುಖಂಡ ವಶಕ್ಕೆ

    ಕಾರವಾರ: ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಉಗ್ರರ (Terrorist) ಕಾರ್ಯ ಬಯಲಾಗುತಿದ್ದಂತೆ  ಇದರ ಬೇರು ಶಿರಸಿಗೂ ತಾಕಿದೆ. ಇಂದು ಮುಂಜಾನೆ ಶಿರಸಿಯ ಟಿಪ್ಪು ನಗರದಲ್ಲಿರುವ ಎಸ್‌ಡಿಪಿಐ (SDPI) ಮುಖಂಡನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್‌ಡಿಪಿಐ ಮುಖಂಡ ಅಜೂಜ್ ಅಬ್ದುಲ್ ಶುಕುರ್ ಹೊನ್ನಾವರ್‌ನನ್ನು(45) ವಶಕ್ಕೆ ಪಡೆದಿದ್ದಾರೆ.

    ಈತನ ಸಹೋದರ ಪಿಎಫ್‌ಐ (PFI) ನಲ್ಲಿ ಪ್ರಾಂತೀಯ ಅಧ್ಯಕ್ಷನಾಗಿದ್ದು ಮೌಸಿನ್ ಅಬ್ದುಲ್ ಶಕೂರ್ ಎಂಬಾತನ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈತ ಮನೆಯಲ್ಲಿ ಇರದ ಕಾರಣ ಅಧಿಕಾರಿಗಳು ಮರಳಿದ್ದಾರೆ. ಬಂಧಿತ ಅಜೂಜ್ ಅಬ್ದುಲ್ ಶುಕುರ್ ನಿಂದ ಒಂದು ಲ್ಯಾಪ್ ಟಾಪ್ (Laptop), ಎರಡು ಮೊಬೈಲ್ (Mobile), ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಿಕೊಳ್ಳಲಾಗಿದ್ದು ಬಿಗಿ ಪೊಲೀಸ್ (Police) ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಬಂಧಿತ ಪಿಐಫ್‌ಐ (PFI) ಸದಸ್ಯರು ಹಾಗೂ ಉಗ್ರನ ಬಂಧಿಸಿದ ವೇಳೆ ಶಿರಸಿಯ ಪಿಎಫ್‌ಐ ಮುಖಂಡರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರ ಸಹಾಯದಿಂದ ಕೇಂದ್ರ ಗುಪ್ತದಳ ವಿಭಾಗದ ಅಧಿಕಾರಿಗಳು, ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    ಬೆಂಗಳೂರು: ದೇಶದಲ್ಲಿ ಟೆರರಿಸ್ಟ್‌ಗಳನ್ನ (Terrorist) ಹುಟ್ಟುಹಾಕಿದ್ದೇ ಕಾಂಗ್ರೆಸ್ (Congress), ಟೆರಸ್ಸ್‌ಗಳು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra)  ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ಕರ್ನಾಟಕದ (Karnataka) ವಿವಿಧ ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ (NIA) ತನ್ನ ದಾಳಿ ಮುಂದುವರಿಸಿವೆ. ದೇಶಾದ್ಯಂತ ಇಂದು ಬೆಳ್ಳಂಬೆಳಿಗ್ಗೆಯಿಂದಲೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‌ಐಎ, ಇಡಿ (ED) ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ (Police) ನೆರವಿನೊಂದಿಗೆ ಪಿಎಫ್‌ಐ (PFI) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್- ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ

    ಈ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra), ಖಚಿತ ಮಾಹಿತಿ ಮೇರೆಗೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಮೇಲೆ ಎನ್‌ಐಎ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ಏಕತೆ, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇವೆ. ಆದ್ದರಿಂದ ಮಾಹಿತಿಯ ಮೇರೆಗೆ ರೇಡ್ ಆಗಿದೆ. ಸಂಘಟನೆಯ ಕೆಲ ಮುಖಂಡರನ್ನು ಈಗ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ನಾನು ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ. ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ (Bomb) ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ. ಇದನ್ನೂ ಓದಿ: ಮೊಸಳೆಯನ್ನು ಹಿಡಿದು ಕ್ಲಾಸ್‌ ರೂಮಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

    ಪಿಎಫ್‌ಐ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು. ತಪ್ಪಿತಸ್ಥರು ಅಲ್ಪಸಂಖ್ಯಾತರೋ ಇಲ್ವೋ ಅಂತ ಪೊಲೀಸರು ಕೆಲಸ ಮಾಡೋಕೆ ಆಗಲ್ಲ. ಟೆರರಿಸ್ಟ್ಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್, ಟೆರರಿಸ್ಟ್ಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದು ಕಿಡಿ ಕಾರಿದ್ದಾರೆ.

    ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ. ಶಿವಮೊಗ್ಗದ ಶಾರಿಕ್ ಸ್ಯಾಟಲೈಟ್ ಫೋನ್‌ (Satellite Phone) ನಲ್ಲಿ ಮಾತನಾಡಿದ್ದಾನೆ. ತಲೆಮರೆಸಿಕೊಂಡಿರೋ ಆತನನ್ನು ಪತ್ತೆಮಾಡಲಾಗುತ್ತಿದೆ. ಶಿವಮೊಗ್ಗ ಪೊಲೀಸರಿಗೆ ಹೇಗೆ ಹ್ಯಾಟ್ಸ್ ಆಫ್ ಸಲ್ಲಿಸಬೇಕೋ ಗೊತ್ತಾಗ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ

    ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ದೆಹಲಿಯ (Delhi) ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಡಿ.ಕೆ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆಯೂ ಜಾರಿ ನಿರ್ದೇಶನಾಲಯಕ್ಕೆ(ED) ಕೆಮ್ಮುತ್ತಲೇ ವಿಚಾರಣೆಗೆ ಹಾಜರಾಗಿದ್ದರು. ಆದಾಯ ತೆರಿಗೆ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಎಪಿಜೆ ಅಬ್ದುಲ್ ಕಲಂ ಮಾರ್ಗ್‍ನಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜೀವ್ ಕುಮಾರ್ ನೇತೃತ್ವದ ಅಧಿಕಾರಗಳ ತಂಡದಿಂದ ಸೋಮವಾರ ಡಿಕೆಶಿ ವಿಚಾರಣೆ ನಡೆಯಿತು. ಇದನ್ನೂ ಓದಿ: ಕೆಮ್ಮುತ್ತಲೇ ವಿಚಾರಣೆಗೆ ಹಾಜರಾದ ಡಿ.ಕೆ ಶಿವಕುಮಾರ್

    ಒಟ್ಟಿನಲ್ಲಿ ಇದೀಗ ಡಿಕೆಶಿಯವರು ಸತ್ಯೇಂದ್ರ ಜೈನ್ (Sathyendra Jain) ಮಾದರಿಯಲ್ಲಿ ಜೈಲು ಸೇರುತ್ತಾರಾ ಅನ್ನೋ ಅನುಮಾನವೊಂದು ಎದ್ದಿದೆ. ಎರಡು ವರ್ಷಗಳ ಹಿಂದೆ 2020ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸಿಬಿಐ (CBI) ದಾಖಲಿಸಿರುವ ಪ್ರಕರಣದಲ್ಲಿ ಡಿಕೆಶಿ ವಿಚಾರಣೆ ನಡೆಸಿದೆ. ಸಿಬಿಐ ಎಫ್‍ಐಆರ್ (FIR) ಮೇಲೆ ಇಸಿಐಆರ್ ದಾಖಲಿಸಿರುವ ಇಡಿ, ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಅಂಶಗಳು ಹುಡುಕಿ ತನಿಖೆ ಮಾಡುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದನ್ನೂ ಓದಿ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್

    Live Tv
    [brid partner=56869869 player=32851 video=960834 autoplay=true]

  • ಮೋದಿ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸ ಮಾಡಲ್ಲ: ಮಮತಾ ಮೃದು ಮಾತು

    ಮೋದಿ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸ ಮಾಡಲ್ಲ: ಮಮತಾ ಮೃದು ಮಾತು

    ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಸತತವಾಗಿ ದಾಳಿ ನಡೆಸುತ್ತಿದ್ದ ಪಶ್ಚಿಮ ಬಂಗಾಳದ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata BanerJee) ಇಂದು ಮೃದು ಮಾತುಗಳನ್ನಾಡಿದ್ದು, ಅಚ್ಚರಿ ಮೂಡಿಸಿದ್ದಾರೆ.

    MAMATHA BANERJEE

    ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ (CBI) ಹಾಗೂ ಇ.ಡಿ ಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸುವ ಕುರಿತಾದ ನಿರ್ಣಯವನ್ನು ಇಂದು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi), ಅರವಿಂದ್ ಕೇಜ್ರಿವಾಲ್ ಮುಂತಾದ ಅನೇಕ ವಿಪಕ್ಷಗಳ ನೇತಾರರು ಪ್ರಧಾನಿಯವರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಬಳಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ:  ರಾಹುಲ್ ಗಾಂಧಿಯೇ ಮುಂದಿನ ಕಾಂಗ್ರೆಸ್ ಅಧ್ಯಕ್ಷ – TNCC ಸಭೆ ನಿರ್ಣಯ

    ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಛೂ ಬಿಡುತ್ತಿರುವ ಹಿಂದೆ, ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲ ಎಂದೆನಿಸುತ್ತದೆ. ಈ ಷಡ್ಯಂತ್ರದ ಹಿಂದೆ, ಬಿಜೆಪಿಯ ಪ್ರತ್ಯೇಕ ತಂಡವೊಂದಿದೆ ಎಂದೆನಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಬಗ್ಗೆ ಮೃದುವಾಗಿಯೇ ಮಾತನಾಡಿದ ಮಮತಾ ಬ್ಯಾನರ್ಜಿ, ಜಾರಿ ನಿರ್ದೇಶನಾಲಯ (ED), ಸಿಬಿಐ (ಕೇಂದ್ರೀಯ ತನಿಖಾ ದಳ) ಹಾಗೂ ಇನ್ನಿತರ ತನಿಖಾ ಸಂಸ್ಥೆಗಳನ್ನು ಪ್ರಧಾನಿ ಮೋದಿಯವರು, ತಮ್ಮ ವಿರೋಧಿಗಳನ್ನು ನಿಯಂತ್ರಣದಲ್ಲಿ ಇಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತಿಲ್ಲ ಎಂದು ಹೇಳಿದರು.

    ಇಡಿ, ಸಿಬಿಐ (CBI) ತನಿಖಾ ಸಂಸ್ಥೆಗಳ ದುರುಪಯೋಗದಿಂದ ಅನೇಕ ಉದ್ಯಮಿಗಳು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಆದರೆ ಇದನ್ನು ಮೋದಿ ಮಾಡಿಲ್ಲ ಎಂದು ನಾನು ನಂಬುತ್ತೇನೆ. ಆಗಾಗ್ಗೆ ನಿಜಾಮ್ ಅರಮನೆಗೆ ಹೋಗುವ ಕೆಲವು ಬಿಜೆಪಿ ನಾಯಕರು (BJP Leader) ಹೀಗೆ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಕೇಂದ್ರ ಸಚಿವ ಅಮಿತ್ ಶಾ (Amit Shah) ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

    ಅಂದಹಾಗೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ನಿರ್ಬಂಧಿಸುವ ಕುರಿತಾಗಿ ಮಮತಾ ಬ್ಯಾನರ್ಜಿಯವರ ಸರ್ಕಾರ ಮಂಡಿಸಿದ್ದ ಠರಾವಿಗೆ, ವಿಧಾನಸಭೆಯಲ್ಲಿ ಮತದಾನ ನಡೆಸಲಾಗಿದ್ದು, ಅದರಲ್ಲಿ ಠರಾವು ಪರವಾಗಿ 189 ಮತಗಳು ಹಾಗೂ ವಿರುದ್ಧವಾಗಿ 69 ಮತಗಳು ಬಂದಿವೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ: ಡಿಕೆ ಶಿವಕುಮಾರ್

    ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ: ಡಿಕೆ ಶಿವಕುಮಾರ್

    ಬೆಂಗಳೂರು: ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಹೈಕೋರ್ಟ್ (HighCourt) ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಡಿಕೆಶಿ, ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಒಂದಲ್ಲಾ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ. ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ. ಕರ್ನಾಟಕದ ಜನರ ಪರವಾಗಿ ಮಾತನಾಡಿದ್ದಕ್ಕೆ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಈ ಬೆಲೆ ತೆರಬೇಕಾಗಿದೆ ಎಂದು ತಿಳಿಸಿದ್ದಾರೆ.

    2018 ರಲ್ಲಿ ಬಿಡದಿಯ ಈಗಲ್ಟನ್‌ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ  ಐಟಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್‌(High Court) ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಐಟಿ ಸುಪ್ರೀಂನಲ್ಲಿ(Supreme Court) ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್

    ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ. ಅಷ್ಟೇ ಅಲ್ಲದೇ 4 ವಾರದ ಒಳಗಡೆ ಹೊಸ ಅರ್ಜಿ ಸಲ್ಲಿಕೆ ಮಾಡುವಂತೆ ಐಟಿಗೆ ಸೂಚಿಸಿದೆ. ಇದನ್ನೂ ಓದಿ: ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ

    Live Tv
    [brid partner=56869869 player=32851 video=960834 autoplay=true]

  • ಕೆಮ್ಮುತ್ತಲೇ ವಿಚಾರಣೆಗೆ ಹಾಜರಾದ ಡಿ.ಕೆ ಶಿವಕುಮಾರ್

    ಕೆಮ್ಮುತ್ತಲೇ ವಿಚಾರಣೆಗೆ ಹಾಜರಾದ ಡಿ.ಕೆ ಶಿವಕುಮಾರ್

    ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ (ED) ಸಂಕಷ್ಟ ಮತ್ತೆ ಎದುರಾಗಿದ್ದು, ಇಂದು ಕೆಮ್ಮುತ್ತಲೇ ವಿಚಾರಣೆಗೆ ಹಾಜರಾಗಿದ್ದಾರೆ.

    ಭೋಜನಾ ವಿರಾಮದ ಬಳಿಕ ಇಂದು ಮಧ್ಯಾಹ್ನ ಮೂರು ಗಂಟೆಯಿಂದ ಮತ್ತೆ ವಿಚಾರಣೆ ಪ್ರಕ್ರಿಯೆ ನಡೆದಿದೆ. ಹೊಸ ಪ್ರಕರಣ ದಾಖಲಾಗಿದೆ. ಏನ್ ಪ್ರಕರಣ ಗೊತ್ತಿಲ್ಲ. ವಿಚಾರಣೆ ಬಳಿಕ ಮಾತನಾಡುವುದಾಗಿ ಡಿಕೆಶಿ (D K Shivakumar) ಹೇಳಿದರು. ಡಿಕೆಶಿಗೆ ಈಗಾಗಲೇ ಅನಾರೋಗ್ಯ ಕಾಡಿದ್ದು, ಜ್ವರ (Fever) ಹೆಚ್ಚಾಗಿದೆ. ಹೀಗಾಗಿ ಕೆಮ್ಮುತ್ತಲೆ ವಿಚಾರಣೆಗೆ ತೆರಳಿದ್ದಾರೆ. ಸದ್ಯ ದೆಹಲಿಯ ಎಪಿಜೆ ಅಬ್ದುಲ್ ಕಲಂ ಮಾರ್ಗ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜೀವ್ ಕುಮಾರ್ ನೇತೃತ್ವದ ಅಧಿಕಾರಗಳ ತಂಡದಿಂದ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಆರ್ಥಿಕ ಇಲಾಖೆಯೇ ಎಲ್ಲಾ ಮಾಡಬೇಕಾದ್ರೆ ಸಚಿವರು ಯಾಕೆ ಬೇಕು? ಆಯನೂರು ಮಂಜುನಾಥ್ ಆಕ್ರೋಶ

    ಒಟ್ಟಿನಲ್ಲಿ ಇದೀಗ ಡಿಕೆಶಿಯವರು ಸತ್ಯೇಂದ್ರ ಜೈನ್ (Sathyendra Jain) ಮಾದರಿಯಲ್ಲಿ ಜೈಲು ಸೇರುತ್ತಾರಾ ಅನ್ನೋ ಅನುಮಾನವೊಂದು ಎದ್ದಿದೆ. ಎರಡು ವರ್ಷಗಳ ಹಿಂದೆ 2020 ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸಿಬಿಐ (CBI) ದಾಖಲಿಸಿರುವ ಪ್ರಕರಣದಲ್ಲಿ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಸಿಬಿಐ ಎಫ್‍ಐಆರ್ (FIR) ಮೇಲೆ ಇಸಿಐಆರ್ ದಾಖಲಿಸಿರುವ ಇಡಿ, ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಅಂಶಗಳು ಹುಡುಕಿ ತನಿಖೆ ಮಾಡುವಂತೆ ಹೇಳಿತ್ತು. ಈ ಹಿನ್ನೆಲೆ ಇಂದು ವಿಚಾರಣೆಗಾಗಿ ಡಿಕೆಶಿಗೆ ಬುಲಾವ್ ನೀಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ನಟಿ ಜಾಕ್ವೆಲಿನ್‌ಗೆ ED ಗ್ರಿಲ್ – ವಂಚಕನನ್ನೇ ಮದುವೆ ಆಗಲು ತಯಾರಾಗಿದ್ದರಂತೆ ‘ರಾ ರಾ ರಕ್ಕಮ್ಮ’

    ನಟಿ ಜಾಕ್ವೆಲಿನ್‌ಗೆ ED ಗ್ರಿಲ್ – ವಂಚಕನನ್ನೇ ಮದುವೆ ಆಗಲು ತಯಾರಾಗಿದ್ದರಂತೆ ‘ರಾ ರಾ ರಕ್ಕಮ್ಮ’

    ಹುಕೋಟಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಕೊಡುವ ಗಿಫ್ಟ್ ಆಸೆಗೆ ಆತನನ್ನೇ ಮದುವೆ ಆಗಲು ಒಪ್ಪಿದ್ದರಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಹಾಗಂತ ದೆಹಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ಬಾಲಿವುಡ್ ವೆಬ್‌ಸೈಟ್‌ಗಳು ವರದಿ ಮಾಡಿವೆ. ಸುಕೇಶ್ ನೀಡುತ್ತಿದ್ದ ಕೋಟಿ ಕೋಟಿ ಮೌಲ್ಯದ ಉಡುಗೊರೆಗೆ ಜಾಕ್ವೆಲಿನ್ ಮಾರು ಹೋಗಿದ್ದರಿಂದ, ಆತನನ್ನೇ ಮದುವೆ ಆಗುವ ಕನಸು ಕಂಡಿದ್ದರಂತೆ.

    ಸೆ.14ರಂದು ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದಾಗ ಈ ವಿಷಯ ಬೆಳಕಿಗೆ ಬಂದಿದೆ. ಸುಕೇಶ್ (Sukesh Chandrasekhar) ಕೊಡುತ್ತಿದ್ದ ದುಬಾರಿ ಉಡುಗೊರೆಗೆ ನಟಿ ನೋರಾ ಫತೇಹಿ (Nora Fatehi) ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಇಬ್ಬರೂ ಮಾರು ಹೋಗಿದ್ದರಂತೆ. ಆಗಾಗ್ಗೆ ಒಟ್ಟಿಗೆ ಸೇರುತ್ತಿದ್ದರಂತೆ. ಸುಕೇಶ್ ಮೇಲೆ ಅನುಮಾನ ಬಂದ ಕಾರಣಕ್ಕಾಗಿ ನೋರಾ ಅಂತರವನ್ನು ಕಾಪಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ, ಜಾಕ್ವೆಲಿನ್ ಮಾತ್ರ ಗೆಳೆತನವನ್ನು ಮುಂದುವರೆಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಸುಕೇಶ್ ತಾನು ವಂಚಿಸಿದ್ದ ಹಣದಲ್ಲೇ ಹಲವಾರು ನಟಿಯರಿಗೆ ಮತ್ತು ಮಾಡೆಲ್ ಗಳಿಗೆ ಹಣ ಮತ್ತು ಗಿಫ್ಟ್ ಗಳನ್ನು ನೀಡಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅದರಲ್ಲೂ ಜಾಕ್ವೆಲಿನ್ ಗೆ ದುಬಾರಿ ಉಡುಗೊರೆಗಳನ್ನೇ ಸುಕೇಶ್ ನೀಡಿದ್ದಾನೆ. ಅದರಲ್ಲಿ ಕುದುರೆ, ದುಬಾರಿ ವಾಚು, ಡೈಮೆಂಟ್ ನೆಕ್ಲೆಸ್, ಬ್ಯಾಗ್ ಸೇರಿದಂತೆ ಹಲವು ಉಡುಗೊರೆಗಳು ಇವೆ ಎಂದು ಹೇಳಿದ್ದಾರೆ. ಆದರೆ ಇದನ್ನು ಜಾಕ್ವೆಲಿನ್ ನಿರಾಕರಿಸಿದ್ದರು. ನಾನು ಗಳಿಸಿದ ಹಣದಲ್ಲಿ ಇವುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]