Tag: ED

  • ಕೇಜ್ರಿವಾಲ್ ಜೈಲಿಗೆ ಹೋದರೂ ಅವರೇ ಸಿಎಂ ಆಗಿ ಮುಂದುವರಿಯಬೇಕು: ದೆಹಲಿ ಸಚಿವೆ

    ಕೇಜ್ರಿವಾಲ್ ಜೈಲಿಗೆ ಹೋದರೂ ಅವರೇ ಸಿಎಂ ಆಗಿ ಮುಂದುವರಿಯಬೇಕು: ದೆಹಲಿ ಸಚಿವೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದರೆ ಜೈಲಿನಿಂದಲೇ ಕೆಲಸ ಮಾಡಲು ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಆಮ್ ಆದ್ಮಿ ಪಕ್ಷ (AAP) ಹೇಳಿದೆ.

    ಪಕ್ಷದ ಶಾಸಕರು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದರೂ ಜೈಲಿನಿಂದಲೇ ಅವರು ಸರ್ಕಾರವನ್ನು ನಡೆಸಬೇಕು ಎಂದು ಹೇಳಿದ್ದಾರೆ. ನಾವು ಜನರ ಪರವಾಗಿ ಹೋಗುತ್ತಿದ್ದೇವೆ. ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇದಕ್ಕಾಗಿಯೇ ಕೇಜ್ರಿವಾಲ್ ಜೈಲಿಗೆ ಹೋದರೂ ಅವರು ಸಿಎಂ ಆಗಿಯೇ ಉಳಿಯಬೇಕು ಎಂದು ದೆಹಲಿ ಸಚಿವೆ ಅತಿಶಿ (Atishi) ಹೇಳಿದ್ದಾರೆ.

    ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅವರು ಸಿಎಂ ಆಗಿಯೇ ಉಳಿಯಬೇಕು. ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಮತ್ತು ಕ್ಯಾಬಿನೆಟ್ ಸಭೆಯನ್ನು ಜೈಲಿನಲ್ಲಿಯೇ ನಡೆಸಲು ಅನುಮತಿ ಕೇಳುತ್ತೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೊದಲ ಬಾರಿಗೆ ವಿವಿ ಚುನಾವಣೆಯಲ್ಲಿ ಎಬಿವಿಪಿಯಿಂದ ಮುಸ್ಲಿಂ ವಿದ್ಯಾರ್ಥಿನಿ ಕಣಕ್ಕೆ

    ದೆಹಲಿಯ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ನವೆಂಬರ್ 2 ರಂದು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿತ್ತು. ಆದರೆ ಸಿಎಂ ಇಡಿ ಕಚೇರಿಗೆ ಹಾಜರಾಗದೇ ಸಮನ್ಸ್ ಅನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ಅವರನ್ನು ಶೀಘ್ರದಲ್ಲಿಯೇ ಬಂಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಈ ಹಿಂದೆ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ವಿಚಾರಣೆ ನಡೆಸಿತ್ತು.

    ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇದೇ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕ ಅವರು ಕ್ಯಾಬಿನೆಟ್ ಹುದ್ದೆಯಿಂದ ಕೆಳಗಿಳಿದಿದ್ದರು. ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ. ಕಳೆದ ವಾರ ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇದನ್ನೂ ಓದಿ: ಕೈಕೊಟ್ಟ EVM; ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

  • ಜಲ್‍ಜೀವನ್ ಮಿಷನ್ ಹಗರಣ- ರಾಜಸ್ಥಾನದ 25 ಕಡೆಗಳಲ್ಲಿ ಇಡಿ ದಾಳಿ

    ಜಲ್‍ಜೀವನ್ ಮಿಷನ್ ಹಗರಣ- ರಾಜಸ್ಥಾನದ 25 ಕಡೆಗಳಲ್ಲಿ ಇಡಿ ದಾಳಿ

    ಜೈಪುರ: ಇಂದು ಬೆಳ್ಳಂಬೆಳಗ್ಗೆ ರಾಜಸ್ಥಾನದ (Rajasthan) 25 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಲ್ ಜೀವನ್ ಮಿಷನ್ ಹಗರಣಕ್ಕೆ (Jal Jeevan Mission Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಚುನಾವಣೆಗೆ ಒಳಪಟ್ಟಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿವೆ.

    ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ನಿಬಂಧನೆಗಳ ಅಡಿಯಲ್ಲಿ ಇತರ ಕೆಲವು ಸಂಪರ್ಕಿತ ವ್ಯಕ್ತಿಗಳನ್ನು ಒಳಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಸೆಪ್ಟೆಂಬರ್‍ನಲ್ಲಿ ಇದೇ ರೀತಿಯ ದಾಳಿ ನಡೆಸಿತ್ತು. ಇದನ್ನೂ ಓದಿ: ನಿತ್ಯ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ದೀಪಾವಳಿಗೆ ಟಫ್‌ ರೂಲ್ಸ್‌

    ಶ್ಯಾಮ್ ಟ್ಯೂಬ್‍ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್, ಗಣಪತಿ ಟ್ಯೂಬ್‍ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್ ಮತ್ತು ಇತರರು ಸಾರ್ವಜನಿಕ ಸೇವಕರಿಗೆ ಲಂಚ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‍ಐಆರ್ ನಿಂದ ಹಣ ವರ್ಗಾವಣೆ ಪ್ರಕರಣ ಹುಟ್ಟಿಕೊಂಡಿದೆ. ಕಾನೂನುಬಾಹಿರ ರಕ್ಷಣೆ ಪಡೆಯಲು, ಟೆಂಡರ್ ಗಳನ್ನು ಪಡೆಯುವುದು, ಬಿಲ್‍ಗಳನ್ನು ಮಂಜೂರು ಮಾಡುವುದು ಮತ್ತು ಪಿಎಚ್‍ಇಡಿಯಿಂದ ಪಡೆದ ವಿವಿಧ ಟೆಂಡರ್‍ಗಳಿಗೆ ಸಂಬಂಧಿಸಿದಂತೆ ಅವರು ಕಾರ್ಯಗತಗೊಳಿಸಿದ ಕೆಲಸಕ್ಕೆ ಸಂಬಂಧಿಸಿದಂತೆ ಅಕ್ರಮಗಳನ್ನು ಮುಚ್ಚಿಡುವುದು.

    ಶಂಕಿತರು ತಮ್ಮ ಟೆಂಡರ್/ ಗುತ್ತಿಗೆಗಳಲ್ಲಿ ಬಳಸುವುದಕ್ಕಾಗಿ ಹರಿಯಾಣದಿಂದ ಕದ್ದ ಮಾಲುಗಳ ಖರೀದಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಪಿಎಚ್‍ಇಡಿ ಗುತ್ತಿಗೆಗಳನ್ನು ಪಡೆಯಲು ಐಆರ್‍ಸಿಒಎನ್ ನಿಂದ ನಕಲಿ ಕೆಲಸ ಪೂರ್ಣಗೊಳಿಸುವ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಇಡಿ ಈ ಹಿಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌

    Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌

     – ರಾಜಸ್ಥಾನ ACB ಟೀಂ ಭರ್ಜರಿ ಕಾರ್ಯಾಚರಣೆ

    ಜೈಪುರ: ರಾಜಸ್ಥಾನದಲ್ಲಿ ಲಂಚ ಕೇಳಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಚಿಟ್ ಫಂಡ್ ವಿಚಾರದಲ್ಲಿ ಪ್ರಕರಣ ದಾಖಲಿಸುವುದನ್ನು ತಡೆಯಲು ಇಬ್ಬರು ಅಧಿಕಾರಿಗಳು 17 ಲಕ್ಷ ರೂ. ಲಂಚ ಕೇಳಿದ್ದ ಆರೋಪ ದಾಖಲಾಗಿದೆ ಎಂದು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (Rajasthan ACB) ತಿಳಿಸಿದೆ.

    ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೇಳಿಕೆಯಲ್ಲಿ, ಇಬ್ಬರು ಇಡಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್‌ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ

    ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ನೇವಲ್ ಕಿಶೋರ್ ಮೀನಾ, ಸಹವರ್ತಿಯನ್ನು ಬಾಬುಲಾಲ್ ಮೀನಾ ಎಂದು ಗುರುತಿಸಲಾಗಿದೆ. ಎಸಿಬಿ ತಂಡವು (ACB Team) ರಾಜಸ್ಥಾನದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಅಧಿಕಾರಿಯನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    ಆದಾಯ ಮೂಲಕ್ಕೆ ವಿರುದ್ಧವಾಗಿ ಲಂಚ ಪಡೆದಿರುವುದು ಕಂಡುಬಂದ ನಂತರ ನವಲ್ ಕಿಶೋರ್ ಮೀನಾ ಅವರನ್ನು ರಾಜಸ್ಥಾನ ಎಸಿಬಿ ಬಂಧಿಸಿದೆ. ಇದನ್ನೂ ಓದಿ: ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಗೆ ಕೇಜ್ರಿವಾಲ್‌ ಕಂಡರೆ ಭಯ, ಶ್ರೀಘ್ರವೇ ಬಂಧನ ಸಾಧ್ಯತೆ –  ಸಚಿವೆ ಅತಿಶಿ

    ಮೋದಿಗೆ ಕೇಜ್ರಿವಾಲ್‌ ಕಂಡರೆ ಭಯ, ಶ್ರೀಘ್ರವೇ ಬಂಧನ ಸಾಧ್ಯತೆ – ಸಚಿವೆ ಅತಿಶಿ

    ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ (Excise Policy Case) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಎಎಪಿ ನಾಯಕಿ, ಸಚಿವೆ ಅತಿಶಿ ಮರ್ಲೆನಾ (Atishi Marlena) ಆತಂಕಪಟ್ಟಿದ್ದಾರೆ.

    ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರಿಗೆ ಸಮನ್ಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಉನ್ನತ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನೇ ಮುಗಿಸಲು ಪ್ರಯತ್ನಿಸುತ್ತಿದೆ. ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನ ಸೋಲಿಸಲು ಸಾಧ್ಯವಾಗದ ಕಾರಣ ಬಿಜೆಪಿ ಎಎಪಿ ವಿರುದ್ಧ ಇಂತಹ ತಂತ್ರಗಳನ್ನು ಬಳಸುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ:  ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ನವೆಂಬರ್ 2 ರಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎನ್ನುವ ಮಾಹಿತಿ ಬಂದಿದೆ. ಅವರನ್ನು ಬಂಧಿಸಿದರೆ ಅದು ಭ್ರಷ್ಟಾಚಾರದ ಆರೋಪ ಕಾರಣವಲ್ಲ, ಅವರು ಬಿಜೆಪಿ (BJJP) ವಿರುದ್ಧ ಮಾತನಾಡಿದ್ದಕ್ಕೆ ಪ್ರತಿಕಾರ ಎನ್ನಬಹುದು. ಈಗಾಗಲೇ ಎಎಪಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿಯನ್ನ ಸೋಲಿಸಿದೆ, ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲೂ ಸೋಲಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕೇಜ್ರಿವಾಲ್‌ ಅವರನ್ನ ಕಂಡರೆ ಭಯವಿದೆ. ಹಾಗಾಗಿ ಅಬರನ್ನು ಬಂಧಿಸುವ ತಂತ್ರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ಳಂಬೆಳಗ್ಗೆ ಆಪ್‌ ಶಾಸಕ ಅಮಾನತುಲ್ಲಾ ಖಾನ್ ಮನೆ ಮೇಲೆ ED ದಾಳಿ

    ಬೆಳ್ಳಂಬೆಳಗ್ಗೆ ಆಪ್‌ ಶಾಸಕ ಅಮಾನತುಲ್ಲಾ ಖಾನ್ ಮನೆ ಮೇಲೆ ED ದಾಳಿ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಬೆಳ್ಳಂ ಬೆಳಗ್ಗೆ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ (Amanatullah Khan) ಮನೆ ಮೇಲೆ ದಾಳಿ ನಡೆಸಿದೆ.

    ದೆಹಲಿಯ ಭ್ರಷ್ಟಾಚಾರ ವಿರೋಧಿ ಸಂಸ್ಥೆ (ದೆಹಲಿ ಆ್ಯಂಟಿ ಕರಪ್ಷನ್‌ ಬ್ಯೂರೋ) ಸಲ್ಲಿಸಿದ ಎಫ್‌ಐಆರ್ ಮತ್ತು ಸಿಬಿಐ ದಾಖಲಿಸಿದ್ದ ಮತ್ತೊಂದು ಎಫ್‌ಐಆರ್‌ ಆಧರಿಸಿ ಇಡಿ ಕ್ರಮ ಕೈಗೊಂಡಿದೆ. ಅಮಾನತುಲ್ಲಾ ಖಾನ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ವಕ್ಫ್‌ ಮಂಡಳಿಯಲ್ಲಿ (Delhi Waqf Board) ಅಕ್ರಮ ನೇಮಕಾತಿ ನಡೆದಿದ್ದು, ಭ್ರಷ್ಟಾಚಾರದಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌-ಬಿಜೆಪಿ ನಡುವೆ ಶುರುವಾಯ್ತು ಪೋಸ್ಟರ್ ವಾರ್

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ವಕ್ಫ್‌ ಮಂಡಳಿಗೆ ಸಂಬಂಧಿಸಿದ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿಂತೆ ವರ್ಷ ಎಸಿಬಿ ಅಮನತುಲ್ಲಾರನ್ನ ಬಂಧಿಸಿತ್ತು. ನಂತರ ಸೆಪ್ಟೆಂಬರ್ 2022ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ವೀಲಿಂಗ್‌ ಮಾಡಿದ ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ಈಗಾಗಲೇ ದೆಹಲಿಯ ಹೊಸ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಡಿಸಿಎಂ ಮನೀಶ್ ಸಿಸೊಡಿಯಾ ಸೇರಿ‌ ಹಲವು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ. ಇದನ್ನೂ ಓದಿ: ಹೊಸ ಮದ್ಯ ನೀತಿ ಪ್ರಕರಣದ ಕಿಂಗ್‌ಪಿನ್ ಸರದಿಯೂ ಬರಲಿದೆ; ದೆಹಲಿ ಸಿಎಂಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಅನುರಾಗ್ ಠಾಕೂರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರಗ್ಸ್ ಪ್ರಕರಣ: ಅ.10ಕ್ಕೆ ವಿಚಾರಣೆಗೆ ಬರುವಂತೆ ನಟ ನವದೀಪ್ ಗೆ ನೋಟಿಸ್

    ಡ್ರಗ್ಸ್ ಪ್ರಕರಣ: ಅ.10ಕ್ಕೆ ವಿಚಾರಣೆಗೆ ಬರುವಂತೆ ನಟ ನವದೀಪ್ ಗೆ ನೋಟಿಸ್

    ಹೈದರಾಬಾದ್ ನ ಮಾದಾಪುರ ಪೊಲೀಸರು ನಡೆಸಿದ್ದ ಡ್ರಗ್ಸ್ ಕಾರ್ಯಾಚರಣೆಯಲ್ಲಿ ಹಲವರ ಬಂಧನವಾಗಿತ್ತು. ಇದರಲ್ಲಿ ಬೆಂಗಳೂರಿನ ಮೂವರು ವ್ಯಕ್ತಿಗಳೂ ಇದ್ದರು. ಈ ಪ್ರಕರಣದಲ್ಲಿ ನಟ ನವದೀಪ್ ಅವರ ಹೆಸರು ಕೂಡ ಕೇಳಿ ಬಂದಿತ್ತು. ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ನವದೀಪ್ ಗೆ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಆಧರಿಸಿದ ಇದೀಗ ಜಾರಿ ನಿರ್ದೇಶನಾಲಯ (ED) ಕೂಡ  ಅಕ್ಟೋಬರ್ 10ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ.

    ಈ ಹಿಂದೆ ನವದೀಪ್ ಅವರನ್ನು ಬಂಧಿಸಲು ತೆಲಂಗಾಣ ಪೊಲೀಸರು ಸಿದ್ಧತೆ ನಡೆಸಿದ್ದರು. ಮಾದಾಪುರ (Madapur) ಡ್ರಗ್ಸ್ ಕೇಸ್ ನ 37ನೇ ಆರೋಪಿ ಆಗಿದ್ದ ಇವರ ಬಂಧನಕ್ಕೆ (Arrest) ಅಧಿಕಾರಿಗಳು ಬಲೆ ಬೀಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಈಗಾಗಲೇ ವಿಚಾರಣೆಗೂ ಒಳಗಾಗಿರುವ ನವದೀಪ್‍ ತಲೆಮರೆಸಿಕೊಂಡಿದ್ದರು. ಜೊತೆಗೆ ತೆಲಂಗಾಣ ಹೈಕೋರ್ಟಿಗೆ (High Court) ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿದ್ದರು.

    ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮಾನ್ಯ ತೆಲಂಗಾಣ ಉಚ್ಛ ನ್ಯಾಯಾಲಯವು ಬಲವಂತವಾಗಿ ನವದೀಪ್ ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಜೊತೆಗೆ ಅವರನ್ನು ವಿಚಾರಣೆಗೆ ಕರೆಯಬಹುದು ಮತ್ತು ಪರೀಕ್ಷೆಗೂ ಒಳಪಡಿಸಬಹುದು. ಆದರೆ, ಈ ನೆಪದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ.

    ಮೊನ್ನೆಯಷ್ಟೇ ನವದೀಪ್ (Navdeep) ಮನೆಯ ಮೇಲೆ ಡ್ರಗ್ಸ್ (Drugs) ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಹಿಂದೆ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಈ ವೇಳೆ ನವದೀಪ್ ಕೂಡ ಇದ್ದಾರೆ ಎಂದು ಹೇಳಲಾಗಿತ್ತು.

    ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ವಿಷಗಾಳಿ ಬೀಸಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಇಡಿ’ ಅಧಿಕಾರಿಗಳ ಮುಂದೆ ಇಂದು ನಟ ರಣಬೀರ್ ಕಪೂರ್ ಹಾಜರಿ ಸಾಧ್ಯತೆ

    ‘ಇಡಿ’ ಅಧಿಕಾರಿಗಳ ಮುಂದೆ ಇಂದು ನಟ ರಣಬೀರ್ ಕಪೂರ್ ಹಾಜರಿ ಸಾಧ್ಯತೆ

    ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಸೇರಿದಂತೆ ಹಲವರಿಗೆ ಇಡಿ (ಜಾರಿ ನಿರ್ದೇಶನಾಲಯ) (Enforcement Directorate) ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಣಬೀರ್ ಕಪೂರ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಉದ್ಯಮಿ ಸೌರಬ್ ಚಂದ್ರಶೇಖರ್ ಅವರ ದುಬಾರಿ ಮದುವೆ ಪಾರ್ಟಿಯಲ್ಲಿ ಹಲವು ಸಿಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಮದುವೆಯ ಪಾರ್ಟಿಯಲ್ಲಿ ಭಾಗಿಯಾಗುವುದಕ್ಕಾಗಿಯೇ ಹಣ ಪಡೆದಿದ್ದರು. ಇವರಿಗೆಲ್ಲ ನೀಡಿದ ಹಣವು ಮಹದೇವ ಬೆಟ್ಟಿಂಗ್ ಆಪ್ ನಿಂದ ಬಂದಿದ್ದಾಗಿದೆ. ಈ ಆಪ್ ನಲ್ಲಿ ಹವಾಲ ಹಣ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಹಾಗಾಗಿ ಹಣ ಪಡೆದವರಿಗೆ ನೋಟಿಸ್ ನೀಡಿ ವಿಚಾರಣೆ ಕರೆಯಲಾಗುತ್ತಿದೆ.

    ಬಾಲಿವುಡ್ ನ ಅನೇಕ ನಟ ನಟಿಯರು ಈ ಆಪ್ ನಲ್ಲಿ ಪರೋಕ್ಷವಾಗಿ ಹಣ ಹೂಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕೆಲವರು ಇದರ ಜಾಹೀರಾತಿನಲ್ಲೂ ಭಾಗಿಯಾಗಿದ್ದಾರೆ. ಅಲ್ಲದೇ, ಆಪ್ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ. ಈ ಆಪ್ ಜೊತೆ ಗುರುತಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ರಣಬೀರ್ ಕಪೂರ್ ಜೊತೆ ಇನ್ನೂ ಒಂಬತ್ತು ಜನ ಸಿಲಿಬ್ರಿಟಿಗಳಿಗೂ ನೋಟಿಸ್ ನೀಡಲಾಗಿದೆ.

    ಏನಿದು ಪ್ರಕರಣ?

    ಮಹದೇವ್ ಬೆಟ್ಟಿಂಗ್ ಆಪ್‍ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಸಿಲಿಬ್ರಿಟಿಗಳಿಗೂ ಈ ಹಣ ಪಾವತಿ ಆಗಿರುವುದರಿಂದ ಹಣ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ. ಇದಷ್ಟೇ ಅಲ್ಲ, ಈ ಆಪ್ ಅನ್ನು ಪ್ರಮೋಟ್ ಮಾಡಿದ 100ಕ್ಕೂ ಹೆಚ್ಚು ಜನರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರದ್ಧಾ ಕಪೂರ್, ಕಪಿಲ್ ಶರ್ಮಾಗೆ ಇಡಿ ಸಮನ್ಸ್: ಹವಾಲ ಹಣ ಪಡೆದ ಪ್ರಕರಣ

    ಶ್ರದ್ಧಾ ಕಪೂರ್, ಕಪಿಲ್ ಶರ್ಮಾಗೆ ಇಡಿ ಸಮನ್ಸ್: ಹವಾಲ ಹಣ ಪಡೆದ ಪ್ರಕರಣ

    ಬಾಲಿವುಡ್ ನ ಖ್ಯಾತ ನಟ, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಅವರಿಗೂ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ಇಂದು ಜಾರಿ ನಿರ್ದೇಶನಾಲಯದ ಎದುರು ಕಪಿಲ್ ಹಾಜರಾಗುವ ಸಾಧ್ಯತೆ ಇದೆ.

    ಕೇವಲ ಕಪಿಲ್ ಶರ್ಮಾಗೆ ಮಾತ್ರವಲ್ಲ, ರಣಬೀರ್ ಕಪೂರ್, ಶ್ರದ್ಧಾ ಕಪೂರ್ (Shraddha Kapoor), ಹುಮಾ ಖುರೇಷಿ ಹಾಗೂ ಹೀನಾ ಖಾನ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 17 ಬಾಲಿವುಡ್ ಸಿಲಿಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಂತ ಹಂತವಾಗಿ ಇವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.

    ಏನಿದು ಪ್ರಕರಣ?

    ಮಹದೇವ್ ಬೆಟ್ಟಿಂಗ್ (Mahadev Betting) ಆಪ್‍ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಸಿಲಿಬ್ರಿಟಿಗಳಿಗೂ ಈ ಹಣ ಪಾವತಿ ಆಗಿರುವುದರಿಂದ ಹಣ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ. ಇದಷ್ಟೇ ಅಲ್ಲ, ಈ ಆಪ್ ಅನ್ನು ಪ್ರಮೋಟ್ ಮಾಡಿದ 100ಕ್ಕೂ ಹೆಚ್ಚು ಜನರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

    ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

    ಶಿವಮೊಗ್ಗ: ನಗರದಲ್ಲಿ ಏಕಕಾಲಕ್ಕೆ 3 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ದಾಳಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ (DCC Bank) ಅಧ್ಯಕ್ಷರಿಗೆ ಸೇರಿದ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ.

    ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಜಾನೆಯೇ 2 ಕಾರಿನಲ್ಲಿ ಆಗಮಿಸಿದ ಅಧಿಕಾರಿಗಳು ಮನೆಗೆ ಬೀಗ ಹಾಕಿದ್ದ ಹಿನ್ನೆಲೆ ಹೊರಗಡೆ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕೈಕೊಟ್ಟ ಮಳೆ – ಕೆಆರ್‌ಎಸ್ ಒಳಹರಿವಿನಲ್ಲಿ ಕುಸಿತ

    ಮಂಜುನಾಥ್ ಅವರಿಗೆ ಸೇರಿದ ಒಟ್ಟು 3 ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಟ್ಟಮಕ್ಕಿಯಲ್ಲಿರುವ ನಿವಾಸ, ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸ ಹಾಗೂ ಕರಿಕುಚ್ಚಿ ಗ್ರಾಮದ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪ್ ಸಂಸದ ಸಂಜಯ್ ಸಿಂಗ್ ಅರೆಸ್ಟ್

    ಆಪ್ ಸಂಸದ ಸಂಜಯ್ ಸಿಂಗ್ ಅರೆಸ್ಟ್

    ನವದೆಹಲಿ: ಆಪ್ ಸಂಸದ ಸಂಜಯ್ ಸಿಂಗ್ (Sanjay Singh) ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸುದೀರ್ಘ ಶೋಧದ ಬಳಿಕ ಇದೀಗ ಅಧಿಕಾರಿಗಳು ಸಂಸದರನ್ನು ಅರೆಸ್ಟ್ ಮಾಡಿದ್ದಾರೆ.

    ಹೊಸ ಮದ್ಯನೀತಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಜಯ್ ಸಿಂಗ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಅವರ ನಿವಾಸದಲ್ಲಿ 10 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಈ ಹಿಂದೆ ಪ್ರಕರಣದಲ್ಲಿ ಎಎಪಿ ಸಂಸದರಿಗೆ ನಿಕಟವಾಗಿರುವ ಹಲವರ ನಿವೇಶನಗಳನ್ನು ಶೋಧ ನಡೆಸಲಾಗಿತ್ತು.