Tag: ED

  • 2014 ರಿಂದ 2022ರವರೆಗೂ ಆಪ್‌ಗೆ ವಿದೇಶದಿಂದ ಫಂಡಿಂಗ್‌ – ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    2014 ರಿಂದ 2022ರವರೆಗೂ ಆಪ್‌ಗೆ ವಿದೇಶದಿಂದ ಫಂಡಿಂಗ್‌ – ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    – ದೇಣಿಗೆಗೆ ಒಂದೇ ಪಾಸ್‌ಪೋರ್ಟ್‌, ಮೊಬೈಲ್‌ ಸಂಖ್ಯೆ ಬಳಕೆ
    – ಪಂಜಾಬ್‌ನಲ್ಲಿ ದಾಖಲಾದ ಸ್ಮಗ್ಲಿಂಗ್ ಕೇಸ್ ಮೂಲಕ ಫಂಡಿಂಗ್‌ ಬೆಳಕಿಗೆ

    ನವದೆಹಲಿ: ಭ್ರಷ್ಟಾಚಾರ (Corruption) ವಿರೋಧಿ ಹೋರಾಟದಿಂದ ಮೇಲೆ ಬಂದ ಆಮ್ ಆದ್ಮಿ ಪಕ್ಷ (Aam Aadmi Party) ಇದೀಗ ಸ್ವತಃ ಭ್ರಷ್ಟಾಚಾರ (Corruption) ಆರೋಪದ ಸುಳಿಯಲ್ಲಿ ಸಿಲುಕಿದೆ. ಮದ್ಯ ಹಗರಣ (Delhi Liquor Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಜಾರ್ಜ್‌ಶೀಟ್‌ನಲ್ಲಿ ಆಪ್‌ಗೆ 2014 ರಿಂದ 2022ರವರೆಗೂ ವಿದೇಶದಿಂದ ಫಂಡಿಂಗ್ (Foreign Funds) ಆಗಿತ್ತು ಎಂದು ತಿಳಿಸಿದೆ.

    ವಾಸ್ತವದಲ್ಲಿ ಭಾರತಲ್ಲಿರುವ ರಾಜಕೀಯ ಪಕ್ಷಗಳು (Political Parties) ವಿದೇಶಗಳಿಂದ ದೇಣಿಗೆ ಪಡೆಯುವಂತಿಲ್ಲ. ಆದರೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಎಎಪಿ ವಿದೇಶಿ ದೇಣಿಗೆ ಪಡೆದಿದೆ. ಆಮ್ ಆದ್ಮಿ ಪಕ್ಷಕ್ಕೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್, ಓಮನ್ ಸೇರಿ ಹಲವು ದೇಶಗಳಿಂದ ಒಟ್ಟು 7.8 ಕೋಟಿ ರೂ. ದೇಣಿಗೆ ಹರಿದುಬಂದಿದೆ.

    ಆಪ್‌ನ ಐಡಿಬಿಐ ಬ್ಯಾಂಕ್ ಖಾತೆಗೆ ಈ ವಿದೇಶಿ ಹಣ ಜಮೆಯಾಗಿದೆ. ಒಟ್ಟು 155 ಮಂದಿ 55 ಪಾಸ್‌ಪೋರ್ಟ್ ನಂಬರ್ ಬಳಸಿ 404 ಬಾರಿ 1.02 ಕೋಟಿ ರೂ. ದೇಣಿಗೆ ನೀಡಿದ್ದಾರೆ. 71 ದಾನಿಗಳು 21 ಮೊಬೈಲ್ ನಂಬರ್ ಬಳಸಿ 256 ಬಾರಿ ಒಟ್ಟು 99,90,870 ರೂ. ದೇಣಿಗೆ ನೀಡಿದ್ದಾರೆ. 75 ದಾನಿಗಳು 15 ಕ್ರೆಡಿಟ್ ಕಾರ್ಡ್‌ ಮೂಲಕ 148 ಬಾರಿ 19,92,123 ರೂ. ಜಮೆ ಮಾಡಿದ್ದಾರೆ.

    ಕೆಲವರು ಆಪ್ ಖಾತೆಗೆ ಹಣ ಜಮೆ ಮಾಡಲು ಒಂದೇ ಪಾಸ್‌ಪೋರ್ಟ್ ಸಂಖ್ಯೆ, ಕ್ರೆಡಿಟ್ ಕಾರ್ಡ್, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಬಳಸಿರುವುದನ್ನು ಇಡಿ ಪತ್ತೆ ಹಚ್ಚಿದೆ. ದೇಣಿಗೆ ನೀಡಿದವರ ಗುರುತು ಮತ್ತು ರಾಷ್ಟ್ರೀಯತೆಯ ವಿವರಗಳು ಬಹಿರಂಗಗೊಂಡಿಲ್ಲ.  ಇದನ್ನೂ ಓದಿ: 4ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    ಬೆಳಕಿಗೆ ಬಂದಿದ್ದು ಹೇಗೆ?
    ವಿದೇಶದಿಂದ ಆಪ್‌ ಪಕ್ಷಕ್ಕೆ ಫಂಡಿಂಗ್‌ ಆಗುತ್ತಿರುವ ವಿಚಾರ ಪಂಜಾಬ್‌ನ ಫಾಜಿಲ್ಕಾದಲ್ಲಿ ದಾಖಲಾಗಿದ್ದ ಸ್ಮಗ್ಲಿಂಗ್ ಕೇಸ್ ಮೂಲಕ ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಎಎಪಿ ಮಾಜಿ ,  ಹಾಲಿ ಕಾಂಗ್ರೆಸ್‌ ಶಾಸಕ ಸುಖಪಾಲ್ ಸಿಂಗ್ ಖೈರಾ ಆರೋಪಿಯಾಗಿದ್ದರು. ಈ ಪ್ರಕರಣದ ತನಿಖೆ ವೇಳೆ ಹಲವು ದಾಖಲೆಗಳು ಪತ್ತೆ ಆಗಿದ್ದವು. ಅದರಲ್ಲಿ ಫಾರಿನ್ ಫಂಡಿಂಗ್‌ ದಾಖಲೆ, ಡೈರಿ ಕೂಡ ಸಿಕ್ಕಿತ್ತು. ಈಗ ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ವಿಚಾರ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ.

     

  • ಹೇಮಂತ್‌ ಸೊರೆನ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ

    – ಕೇಜ್ರಿವಾಲ್‌ ರೀತಿ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿ

    ನವದೆಹಲಿ: ಮಧ್ಯಂತರ ಜಾಮೀನು (Interim Bail) ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾದ ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ (Hemant Soren) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು.

    ಅರವಿಂದ್‌ ಕೇಜ್ರಿವಾಲ್‌ಗೆ (Arvind Kejriwal) ಚುನಾವಣಾ ಪ್ರಚಾರಕ್ಕೆ ಹೇಗೆ ಮಧ್ಯಂತರ ಜಾಮೀನು ನೀಡಲಾಗಿದೆಯೋ ಅದೇ ರೀತಿಯಾಗಿ ನನಗೂ ಜಾಮೀನು (Bail) ನೀಡಬೇಕೆಂದು ಕೋರಿ ಹೇಮಂತ್‌ ಸೊರೇನ್‌ ಅರ್ಜಿ ಸಲ್ಲಿಸಿದ್ದರು.

    ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದ ನ್ಯಾ. ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರಿದ್ದ ದ್ವಿಸದಸ್ಯ ಪೀಠದ ಬಳಿ ತನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕು. ಅವರಿಗೂ ಚುನಾವಣಾ ಪ್ರಚಾರ ನಡೆಸಲು ಅನುಮತಿ ನೀಡಬೇಕು. ಹೀಗಾಗಿ ಮೇ 17 ರಂದು ತುರ್ತು ಅರ್ಜಿ ವಿಚಾರಣೆ ನಡೆಸಿ ಎಂದು ವಕೀಲ ಕಪಿಲ್‌ ಸಿಬಲ್‌ (Kapil Sibal) ಮನವಿ ಮಾಡಿದರು.

    ಈ ವೇಳೆ ಕೋರ್ಟ್‌ ಈ ಅರ್ಜಿಯ ವಿಚಾರಣೆಯನ್ನು ಮೇ 20 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು. ಯಾಕೆಂದರೆ ಈ ಅರ್ಜಿಯ ವಿಚಾರಣೆಗೆ ಇಡಿ ಪ್ರತಿಕ್ರಿಯೆ ನೀಡಲು 7 ದಿನ ಸಮಯ ನೀಡಬೇಕು ಎಂದು ಪೀಠ ಹೇಳಿತು. ಇದಕ್ಕೆ ಸಿಬಲ್‌, ಚುನಾವಣೆ ಮೇ 20 ರಂದು ಮುಕ್ತಾಯವಾಗುತ್ತದೆ. ಇಲ್ಲಿಯವರೆಗೆ ನಾನು ಈ ರೀತಿಯ ಮನವಿ ಸಲ್ಲಿಸಿಲ್ಲ. ಒಂದು ವೇಳೆ ಮೇ 17 ರಂದು ಅರ್ಜಿ ವಿಚಾರಣೆ ನಡೆಸದೇ ಇದ್ದರೆ ನಮಗೆ ದೊಡ್ಡ ಅನ್ಯಾಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು

     
    ಮೇ 20 ರಂದು ಚುನಾವಣೆ ನಡೆಯಲಿರುವ ಕಾರಣ 48 ಗಂಟೆಯ ಮೊದಲು ಬಹಿರಂಗ ಪ್ರಚಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಿದರೆ ನಿಮ್ಮ ಕಕ್ಷಿದಾರರಿಗೆ ಹೇಗೆ ಲಾಭವಾಗುತ್ತದೆ ಎಂದು ಕೋರ್ಟ್‌ ಪ್ರಶ್ನೆ ಮಾಡಿತು.

    ಈ ವೇಳೆ ಚುನಾವಣೆಯಲ್ಲಿ ಭಾಗವಹಿಸಲು ಈ ಅರ್ಜಿ ಸಲ್ಲಿಸಿದ್ದೇವೆ. ಮೇ 20ಕ್ಕೆ ಚುನಾವಣೆ ನಡೆಯಲಿದೆ. ಒಂದು ವೇಳೆ ಅನುಮತಿ ಸಿಗದೇ ಇದ್ದರೆ ಅರ್ಜಿಯನ್ನು ವಜಾಗೊಳಿಸಿ ಎಂದು ಮನವಿ ಮಾಡಿದರು.

    ಈ ವೇಳೆ ಸೊರೆನ್‌ ಮೇಲೆ 8.8 ಎಕ್ರೆ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಇಡಿ ಆರೋಪಿಸಿದೆ ಎಂದು ನ್ಯಾ. ಖನ್ನಾ ಹೇಳಿದ್ದಕ್ಕೆ, ಸಿಬಲ್‌ ಸೊರೆನ್‌ ವಶಪಡಿಸಿಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಇಡಿ ಆರೋಪಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಿಲ್ಲ ಎಂದು ವಾದಿಸಿದರು. ಅಂತಿಮವಾಗಿ ಕೋರ್ಟ್‌ ಪಿಎಂಎಲ್‌ಎ ಅಡಿಯಲ್ಲಿ ಸೊರೆನ್‌ ಬಂಧನ ಮಾಡಿದ್ದು ಸರಿ ಎಂಬುದರ ಬಗ್ಗೆ ಮೇ 17 ರಂದು ವಿಚಾರಣೆ ನಡೆಸುವುದಾಗಿ ಹೇಳಿತು. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಗೆದ್ದರೇ ಮರುದಿನವೇ ಜೈಲಿನಿಂದ ಹೊರಬರುವೆ: ಕೇಜ್ರಿವಾಲ್

     

  • ಶುಕ್ರವಾರ ಕೇಜ್ರಿವಾಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಶುಕ್ರವಾರ ಕೇಜ್ರಿವಾಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ವಿರುದ್ಧ ಜಾರಿ ನಿರ್ದೇಶನಾಲಯ ಶುಕ್ರವಾರ ಮೊದಲ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಿದೆ. ಇದಕ್ಕೂ ಮುನ್ನ ಇಡಿ ಕೇಜ್ರಿವಾಲ್ ಇಡೀ ಪ್ರಕರಣದ ಕಿಂಗ್ ಪಿನ್ ಎಂದು ಆರೋಪಿಸಿತ್ತು.

    ಸುಪ್ರೀಂಕೋರ್ಟ್ ನಲ್ಲಿ (Supreme Court) ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಯುತ್ತಿದ್ದು ಈ ಸಂಬಂಧ ಮಧ್ಯಂತರ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ. ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿರುವ ಇಡಿ ಅಧಿಕಾರಿಗಳು ಪ್ರಕರಣದಲ್ಲಿ ಕೇಜ್ರಿವಾಲ್ ಪಾತ್ರಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಫೈಲ್ ಮಾಡಲಿದೆ. ಇದನ್ನೂ ಓದಿ: ದೇಶದಲ್ಲಿ ಆಡಳಿತ ನಡೆಸಿದವರ ಕುಟುಂಬದಿಂದ ಇಂಥ ಕೃತ್ಯ ಆಯ್ತಲ್ಲಾ ಎಂಬ ನೋವಿದೆ: ಶಿವಲಿಂಗೇಗೌಡ

    ಕಳೆದ ವಿಚಾರಣೆಯಲ್ಲಿ ಲೋಕಸಭಾ ಚುನಾವಣೆ (Loksabha Elections 2024) ಹಿನ್ನೆಲೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಸಕರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ ಅವರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಬಯಸುವುದಿಲ್ಲ ಎಂದು ಪೀಠವು ಹೇಳಿತು, ಏಕೆಂದರೆ ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿತ್ತು.

    ಈ ಹಂತದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಕೇಜ್ರಿವಾಲ್ ಪ್ರಕರಣದಲ್ಲಿ ಹೇಗೆ ಸಂಬಂಧ ಹೊಂದಿದ್ದಾರೆ? ಅವರಿಗೆ ಜಾಮೀನು ನೀಡಿದರೆ ತನಿಖೆಯ ಮೇಲೆ ಆಗಬಹುದಾದ ಪರಿಣಾಯಗಳ ಬಗ್ಗೆ ಕೋರ್ಟ್ ಗಮನ ಸೆಳೆಯುವ ಪ್ರಯತ್ನ ಮಾಡಲಿದೆ ಎಂದು ಮೂಲಗಳು ಹೇಳಿವೆ.

  • ಕೋಮುಲ್‌ನಲ್ಲಿ ನೇಮಕಾತಿ ಹಗರಣ – ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ

    ಕೋಮುಲ್‌ನಲ್ಲಿ ನೇಮಕಾತಿ ಹಗರಣ – ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ (KOMUL) ನೇಮಕಾತಿ ಹಗರಣ (Recruitment Scam) ನಡೆದಿದ್ದು, 75ಕ್ಕೆ 75 ನೇಮಕಾತಿಯಲ್ಲೂ ಮೋಸ ಮಾಡಿರುವುದು ಸಾಬೀತಾಗಿದೆ.

    ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ ಆರೋಪ ಇದ್ದ ಹಿನ್ನೆಲೆ ತನಿಖೆ ಮಾಡಿದ ಇ.ಡಿ (ED) ಅಧಿಕಾರಿಗಳು ಲೋಕಾಯುಕ್ತಕ್ಕೆ (Lokayukta) ವರದಿ ರವಾನಿಸಿದ್ದಾರೆ. ಇ.ಡಿ ಅಧಿಕಾರಿಗಳು 75 ಅಭ್ಯರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದು, ನೇಮಕಾತಿಗಾಗಿ ಹಣ ನೀಡಿರುವ ಬಗ್ಗೆ ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಇ.ಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಇದನ್ನೂಓದಿ: ಇಂದು ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ – ಮಾಜಿ ಮಂತ್ರಿಗೆ ಜೈಲಾ.. ಬೇಲಾ?

    ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ ಬರೆಯಲಾಗಿದೆ. ನೇಮಕಾತಿ ಪರೀಕ್ಷೆಯನ್ನು ಮಂಗಳೂರು ವಿವಿಯ ಅಧಿಕಾರಿಗಳು ನಡೆಸಿದ್ದರು. ಶಿಫಾರಾಸು ಪತ್ರ ಬರೆದಿದ್ದ ಪ್ರಭಾವಿ ನಾಯಕರ ವಿರುದ್ಧ ತನಿಖೆ ಮಾಡಲು ಇ.ಡಿ ಪತ್ರ ಬರೆದ ಆಧಾರದ ಮೇಲೆ ಲೋಕಾಯುಕ್ತ ಸರ್ಕಾರಕ್ಕೆ ಪತ್ರ ಬರೆದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಡಿಜಿ ಪ್ರಶಾಂತ್ ಠಾಕೂರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೂಓದಿ: ಕರ್ನಾಟಕದಲ್ಲಿ 70.03% ಮತದಾನ – ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿದೆ?

  • ಚುನಾವಣೆ ಸಮಯದಲ್ಲೇ ಇಡಿಯಿಂದ ದೊಡ್ಡ ಬೇಟೆ – ಕಂತೆ ಕಂತೆ ನೋಟು ಪತ್ತೆ

    ಚುನಾವಣೆ ಸಮಯದಲ್ಲೇ ಇಡಿಯಿಂದ ದೊಡ್ಡ ಬೇಟೆ – ಕಂತೆ ಕಂತೆ ನೋಟು ಪತ್ತೆ

    ರಾಂಚಿ: ಲೋಕಸಭಾ ಚುನಾವಣೆಯ ಸಮಯದಲ್ಲೇ ಜಾರಿ ನಿರ್ದೇಶನಾಲಯ (ED) ದೊಡ್ಡ ಬೇಟೆಯಾಡಿದೆ. ರಾಂಚಿಯ (Ranchi) ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ಪತ್ತೆ ಮಾಡಿದೆ.

    ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ,(Jharkhand Rural Development Minister) ಕಾಂಗ್ರೆಸ್‌ ನಾಯಕ  ಆಲಂಗೀರ್ ಆಲಂ  ಆಪ್ತ  ಕಾರ್ಯದರ್ಶಿ ಸಂಜೀವ್ ಲಾಲ್  ಅವರ ಮನೆ ಕೆಲಸಗಾರನ ಮನೆಯಲ್ಲಿದ್ದ ಸುಮಾರು 20 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

    ಬ್ಯಾಗ್‌, ಕಮೋಡ್‌ಗಳಲ್ಲಿ ಹಣವನ್ನು ಸಂಗ್ರಹಿಸಲಾಗಿತ್ತು.  ಹಣ ಎಣಿಕೆ ಕಾರ್ಯ ನಡೆಯುತ್ತಿದೆ.  ಸದ್ಯ  ಇಡಿ ತನಿಖೆ ನಡೆಸುತ್ತಿರುವ ವೀರೇಂದ್ರ ಕೆ ರಾಮ್ ಪ್ರಕರಣದ ಹಣ ಇದಾಗಿದೆ ಎಂದು ಇಡಿ ಹೇಳಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಬಂದ್‌ – ಕಚೇರಿ ಮೇಲೆ ದಾಳಿ

    ಜಾರ್ಖಂಡ್‌ನಲ್ಲಿ ಮುಖ್ಯ ಎಂಜಿನಿಯರ್‌ ಆಗಿದ್ದ ವೀರೇಂದ್ರ ಕೆ ರಾಮ್‌ ಅವರು 100 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಆರೋಪ ಬಂದಿದೆ.

    ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರನ್ನು ಫೆಬ್ರವರಿ 2023 ರಲ್ಲಿ ಇಡಿ ಬಂಧಿಸಿತ್ತು. ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಎಸಗಲು ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಇಡಿ ಬಂಧಿಸಿತ್ತು. ಇದನ್ನೂ ಓದಿ: ಗುಂಡಿಕ್ಕಿ ಈಕ್ವೆಡಾರ್‌ ಬ್ಯೂಟಿ ಹತ್ಯೆ – ಇನ್‌ಸ್ಟಾಗ್ರಾಮ್‌ ಫಾಲೋ ಮಾಡಿ ಸ್ಕೆಚ್‌ ಹಾಕಿದ್ದ ಹಂತಕರು!

    ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿದ್ದ ಪೆನ್‌ಡ್ರೈವ್‌ ಅನ್ನು ವೀರೇಂದ್ರ ಕೆ ರಾಮ್‌ನಿಂದ ಬಳಿಯಿಂದ ಇಡಿ ಪಡೆದುಕೊಂಡಿದೆ.

  • ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಕ್ರಮವಾಗಿ ಹಣ ಸಾಗಾಣಿಕೆ ವಿಚಾರವಾಗಿ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯವು (ED) ಕೇಸ್ ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕುರಿತಂತೆ ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ (FIR) ಮತ್ತು ಜಾರ್ಜ್ ಶೀಟ್ ಗಳ ಆಧಾರದಲ್ಲಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಈ ಹಿಂದೆ ಎಲ್ವಿಶ್ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು. ಕೋರ್ಟ್‌ಗೆ ಹಾಜರು ಪಡಿಸಿದ್ದರು. ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.

    ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಅಕ್ರಮ ಹಣದ ಕುರಿತಂತೆ ಉಲ್ಲೇಖವಾಗಿತ್ತು. ಹಾಗಾಗಿ ಈ ಪ್ರಕರಣಕ್ಕೆ ಇಡಿ ಎಂಟ್ರಿ ಕೊಟ್ಟಿದೆ.

  • ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮನೀಶ್ ಸಿಸೋಡಿಯಾ

    ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮನೀಶ್ ಸಿಸೋಡಿಯಾ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (New Excise Policy) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು (Bail) ನೀಡುವಂತೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ದೆಹಲಿ ಹೈಕೋರ್ಟ್‌ಗೆ (Delhi Highcourt) ಅರ್ಜಿ ಸಲ್ಲಿಸಿದ್ದಾರೆ.

    ಪಿಎಂಎಲ್‌ಎ ವಿಶೇಷ ನ್ಯಾಯಾಲಯ ರೋಸ್ ಅವೆನ್ಯೂ ಕೋರ್ಟ್ ಎರಡನೇ ಸಾಮಾನ್ಯ ಜಾಮೀನು ಅರ್ಜಿ ವಜಾ ಮಾಡಿದ ಹಿನ್ನೆಲೆ ಮೇಲ್ಮನವಿ ಸಲ್ಲಿಸಿರುವ ಅವರು ವಿಧಾನಸಭೆ ಸದಸ್ಯನಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆ ತುರ್ತು ವಿಚಾರಣೆ ನಡೆಸುವಂತೆ ಇಂದು ಮನವಿ ಮಾಡಿದರು. ಆದರೆ ತುರ್ತು ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ಡಿವೈಎಸ್‍ಪಿ ವಿರುದ್ಧದ ಘೋಷಿತ ಆರೋಪಿ ಆದೇಶ ಕೈಬಿಟ್ಟ ಹೈಕೋರ್ಟ್

    Delhi High Court

    ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ್ದ ಸಿಬಿಐ ಪ್ರಾಸಿಕ್ಯೂಟರ್ ಪಂಕಜ್ ಗುಪ್ತಾ, ಜಾಮೀನು ಅರ್ಜಿಯನ್ನು ವಿರೋಧಿಸಿದರು. ಸಿಸೋಡಿಯಾ ಅವರು ರಾಜಕೀಯ ಪ್ರಭಾವ ಹೊಂದಿರುವ ಪ್ರಬಲ ವ್ಯಕ್ತಿ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಸೋಡಿಯಾ ಇತರೇ ಆರೋಪಿಗಳ ಸಮಾನತೆಗೆ ಅರ್ಹರಲ್ಲ ಎಂದು ವಾದಿಸಿದರು. ಸಿಸೋಡಿಯಾ ಅವರು ಸಾಕ್ಷ್ಯ ನಾಶ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಳ್ಳಬಹುದು. ಇದು ತನಿಖೆಗೆ ಅಡ್ಡಿಯಾಗಬಹುದು ಎಂದು ಗುಪ್ತಾ ಹೇಳಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ

    ಇ.ಡಿ ಪರ ವಾದಿಸಿದ್ದ ಜೋಹೆಬ್ ಹೊಸೈನ್, ತನಿಖೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ತನಿಖೆ ವಿಳಂಬ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ. ಪ್ರಕರಣದ ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಹಲವು ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಈ ಹಂತದಲ್ಲಿ ಸಿಸೋಡಿಯಾ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖಾ ಸಂಸ್ಥೆಗಳ ವಾದ ಪುರಸ್ಕರಿಸಿದ ಕೋರ್ಟ್, ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಎರಡನೇ ಸಾಮಾನ್ಯ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ಇಲ್ಲಿ ಸಾಯ್ತಿದ್ರೆ ಪಾಕ್ ಅಲ್ಲಿ ಅಳುತ್ತಿದೆ: ಮೋದಿ

    ಕಳೆದ ವರ್ಷ ಫೆಬ್ರವರಿ 26 ಮತ್ತು ಮಾರ್ಚ್ 9 ರಂದು ಮನೀಷ್ ಸಿಸೋಡಿಯಾ ಅವರನ್ನು ಕ್ರಮವಾಗಿ ಸಿಬಿಐ ಮತ್ತು ಇಡಿ ಮೊದಲ ಬಾರಿಗೆ ಬಂಧಿಸಿತ್ತು. ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ, ಸಿಸೋಡಿಯಾ ಮತ್ತು ಇತರರು 2021-22ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ‘ಶಿಫಾರಸು’ ಮತ್ತು ‘ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ’ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ: ಖರ್ಗೆ

  • ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹಿನ್ನಡೆ – ಎರಡನೇ ಬಾರಿಗೆ ಜಾಮೀನು ಅರ್ಜಿ ವಜಾ

    ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹಿನ್ನಡೆ – ಎರಡನೇ ಬಾರಿಗೆ ಜಾಮೀನು ಅರ್ಜಿ ವಜಾ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿಯನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ (Delhi Court) ವಜಾ ಮಾಡಿದೆ. ಏ.20 ರಂದು ಕಾಯ್ದಿರಿಸಿದ ತೀರ್ಪನ್ನು ನ್ಯಾ.ಕಾವೇರಿ ಬವೇಜಾ ಪ್ರಕಟಿಸಿದರು.

    ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ್ದ ಸಿಬಿಐ ಪ್ರಾಸಿಕ್ಯೂಟರ್ ಪಂಕಜ್ ಗುಪ್ತಾ, ಜಾಮೀನು ಅರ್ಜಿಯನ್ನು ವಿರೋಧಿಸಿದರು. ಸಿಸೋಡಿಯಾ ಅವರು ರಾಜಕೀಯ ಪ್ರಭಾವ ಹೊಂದಿರುವ ಪ್ರಬಲ ವ್ಯಕ್ತಿ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಸೋಡಿಯಾ, ಇತರೆ ಆರೋಪಿಗಳ ಸಮಾನತೆಗೆ ಅರ್ಹರಲ್ಲ ಎಂದು ವಾದಿಸಿದರು. ಸಿಸೋಡಿಯಾ ಅವರು ಸಾಕ್ಷ್ಯ ನಾಶ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಳ್ಳಬಹುದು. ಇದು ತನಿಖೆಗೆ ಅಡ್ಡಿಯಾಗಬಹುದು ಎಂದು ಗುಪ್ತಾ ಹೇಳಿದರು. ಇದನ್ನೂ ಓದಿ: ವಿದೇಶದ ಮತದಾರರಿಗೆ ಭಟ್ಕಳ ಜಮಾತ್‍ಗಳಿಂದ ಗಾಳ- ವಿಮಾನ ಟಿಕೆಟ್ ಆಫರ್

    ಇಡಿ ಪರ ವಾದಿಸಿದ್ದ ಜೋಹೆಬ್ ಹೊಸೈನ್, ತನಿಖೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ತನಿಖಾ ವಿಳಂಬ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ. ಪ್ರಕರಣದ ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಹಲವು ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಈ ಹಂತದಲ್ಲಿ ಸಿಸೋಡಿಯಾ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪತಂಜಲಿ ಆಯುರ್ವೇದದ ವಿರುದ್ಧ ಕ್ರಮ ಕೈಗೊಳ್ಳದ ಉತ್ತರಾಖಂಡ್ ಸರ್ಕಾರಕ್ಕೆ ಸುಪ್ರೀಂ ಚಾಟಿ

    ತನಿಖಾ ಸಂಸ್ಥೆಗಳ ವಾದ ಪುರಸ್ಕರಿಸಿದ ಕೋರ್ಟ್, ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಎರಡನೇ ಸಾಮಾನ್ಯ ಅರ್ಜಿಯನ್ನು ವಜಾ ಮಾಡಿದೆ. ಸಿಸೋಡಿಯಾ ಅವರು ಈಗ ದೆಹಲಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿದೆ. ಇದಕ್ಕೂ ಮುನ್ನ ಅವರು ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೂಡಾ ವಜಾ ಮಾಡಿತ್ತು. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 9 ಮಂದಿ ನಕ್ಸಲರ ಹತ್ಯೆ

  • ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣಿತ್ತು – ಇಡಿ ಆರೋಪಕ್ಕೆ ಕೇಜ್ರಿವಾಲ್‌ ತಿರುಗೇಟು

    ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣಿತ್ತು – ಇಡಿ ಆರೋಪಕ್ಕೆ ಕೇಜ್ರಿವಾಲ್‌ ತಿರುಗೇಟು

    ನವದೆಹಲಿ: ಜಾಮೀನು (Bail) ಪಡೆಯಲು ಉದ್ದೇಶಪೂರ್ವಕವಾಗಿ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳುತ್ತಿದ್ದಾರೆ ಎನ್ನುವ ಇಡಿ (ED) ಆರೋಪಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಪರ ವಕೀಲರು ತಿರುಗೇಟು ನೀಡಿದ್ದಾರೆ. ಮಾಧ್ಯಮಗಳಿಗೆ ಸುದ್ದಿಯಾಗಲು ಇಡಿ ಕೇಜ್ರಿವಾಲ್ ಮೇಲೆ ಈ ರೀತಿಯ ಕ್ಷುಲ್ಲಕ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ‌.

    ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಸುಲಿನ್ ಪಡೆಯಲು ಅನುಮತಿ ನೀಡುವಂತೆ ಕೋರಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಆರೋಪಗಳಗೆ ಕೇಜ್ರಿವಾಲ್ ಪರ ವಕೀಲರು ಉತ್ತರಿಸಿದರು. ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ (Sugar) ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ‌. ಇದನ್ನೂ ಓದಿ: ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು – ಹಲವು ರಾಷ್ಟ್ರಗಳಿಂದ ಬೇಡಿಕೆ

     

    ಸಕ್ಕರೆ ರಹಿತ ಚಹಾ ಸೇವಿಸುತ್ತೇನೆ ಮತ್ತು ಬಿಳಿ ಅನ್ನದ ಬದಲು ಕಂದು ಬಣ್ಣದ ಅನ್ನವನ್ನು ಸೇವಿಸುತ್ತಿದ್ದಾರೆ ಈ ಎಲ್ಲವನ್ನು ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾಡುತ್ತಿದ್ದಾರೆ. ಅದಾಗ್ಯೂ ಮಾಧ್ಯಮಗಳ ಗಮನ ಸೆಳೆಯಲು ಕ್ಷುಲ್ಲಕ ಆರೋಪ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದಿಸಿದರು. ಇದನ್ನೂ ಓದಿ: ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್‌ ಮನವಿ

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲರು ವೈದ್ಯರು ಸೂಚಿಸುವ ಡಯೆಟ್‌ಗೂ ಕೇಜ್ರಿವಾಲ್ ಅವರು ಸೇವಿಸುವ ಆಹಾರಕ್ಕೂ ಹೊಂದಿಕೆಯಾಗುತ್ತಿಲ್ಲ, ವೈದ್ಯರ ಡಯೆಟ್ ಸಾಕಷ್ಟು ನಿಯಂತ್ರಿತ ಮತ್ತು ಕಟ್ಟುನಿಟ್ಟಾಗಿದೆ ಅಲ್ಲಿ ಎಲ್ಲೂ ಸಿಹಿ ತಿನಿಸು ಸೇವಿಸಲು ಸೂಚಿಸಿಲ್ಲ ಆದರೆ ಅವರು ಸೇವಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಕೇಜ್ರಿವಾಲ್ ಪರ ವಾದಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಕೇಜ್ರಿವಾಲ್ ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 12 ವರ್ಷಗಳಿಂದ ಅವರು ಪ್ರತಿದಿನ ಇನ್ಸುಲಿನ್ ಪಡೆಯುತ್ತಿದ್ದಾರೆ. ಅವರಿಗೆ ಪ್ರತಿದಿನ ಇನ್ಸುಲಿನ್ ನೀಡಲಾಗುತ್ತಿದೆ. ಜೈಲಿನಲ್ಲಿ ಇನ್ಸುಲಿನ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ವೈದ್ಯರ ನೆರವು ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

    ವಿಚಾರಣೆಯಲ್ಲಿ ಭಾಗಿಯಾದ ತಿಹಾರ್ ಜೈಲು ಅಧಿಕಾರಿಗಳ ಪರವಾಗಿ ವಕೀಲ ಯೋಗಿಂದರ್ ಹಾಂಡೂ ಹಾಜರಾಗಿ ಅವರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ, ನಾವು ಏಮ್ಸ್‌ನಿಂದ ಅಭಿಪ್ರಾಯವನ್ನು ಪಡೆದುಕೊಂಡಿದ್ದೇವೆ. ಅವರು ಮಾವಿನಹಣ್ಣುಗಳನ್ನು ತಪ್ಪಿಸಬೇಕು. ಅವರು ಹೆಚ್ಚು ಇನ್ಸುಲಿನ್ ತೆಗೆದುಕೊಂಡರೆ, ಸಕ್ಕರೆಯ ಮಟ್ಟವು ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ವಾದಿಸಿದರು.

  • ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ

    ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ

    ನವದೆಹಲಿ: ಮಾವಿನಹಣ್ಣು, ಸಿಹಿತಿಂಡಿ ಮತ್ತು ಚಹಾ ಸೇವಿಸುವ ಮೂಲಕ ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಸಕ್ಕರೆ ಪ್ರಮಾಣ (Sugar Level) ಹೆಚ್ಚುತ್ತಿದ್ದು ಆರೋಗ್ಯ ಕಾರಣಗಳಿಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಕೇಜ್ರಿವಾಲ್ (Arvind Kejriwal) ವಿರುದ್ಧ ಆರೋಪಿಸಿದೆ.

    ಕೇಜ್ರಿವಾಲ್ ಜಾಮೀನು ಪಡೆಯಲೆಂದೇ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮಧುಮೇಹವಿದೆ ಎಂದು ಹೇಳಿಕೊಂಡ ಕಾರಣ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಅನುಮತಿಸಲಾಗಿದೆ. ಆದರೆ ಅವರು ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆಯನ್ನು ಸೇವಿಸುತ್ತಿದ್ದಾರೆ ಎಂದು ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಜಾರಿ ನಿರ್ದೇಶನಾಲಯ (ED) ವಕೀಲ ಜೊಹೆಬ್ ಹೊಸೈನ್ ಆರೋಪಿಸಿದರು.

    ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಇಡಿ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು‌. ತನಿಖಾ ಸಂಸ್ಥೆ ಈ ಆರೋಪಗಳನ್ನು ಕೇವಲ ಮಾಧ್ಯಮಗಳಿಗಾಗಿ ಮಾಡುತ್ತಿದೆ ಎಂದರು. ಪ್ರಸ್ತುತ ಅರ್ಜಿಯನ್ನು ಹಿಂಪಡೆಯುತ್ತಿದ್ದು, ಉತ್ತಮವಾದ ಅರ್ಜಿಯನ್ನು ಸಲ್ಲಿಸುವುದಾಗಿ ಜೈನ್ ಹೇಳಿದರು. ಇದನ್ನೂಓದಿ: ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕಣದ ತನಿಖೆ ಭಾಗವಾಗಿ ಕೇಜ್ರಿವಾಲ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಈ ಮೊದಲು ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿತ್ತು. ಬಂಧನ ಕಾನೂನು ಬದ್ಧವಾಗಿದೆ ಇದನ್ನು ರಾಜಕೀಯ ಆಯಾಮದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಮಧ್ಯಂತರ ಜಾಮೀನು ನೀಡಲು ನೀರಾಕರಿಸಿದ್ದು ವಿಚಾರಣೆ ಬಾಕಿ ಇದೆ.