Tag: ED

  • ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    – ಮರೀಗೌಡ, ನಟೇಶ್ ಸೇರಿ ನಾಲ್ವರಿಗೆ ವಿಚಾರಣೆ

    ಬೆಂಗಳೂರು: ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸ್ತಿರುವ ತನಿಖೆ ಸಿಎಂ ಆಪ್ತೇಷ್ಠರ ಬುಡಕ್ಕೆ ಬಂದು ನಿಂತಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಶೀಲ್ದಾರ್ ಆಗಿದ್ದ ಮಾಳಿಗೆ ಶಂಕರ್‌ರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.

    ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಶಿವಣ್ಣ ಸಂಜೆ ಹೊತ್ತಿಗೆ ಅಸ್ವಸ್ಥಗೊಂಡ್ರು. ಕೂಡ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇನ್ನು, ಈ ಕ್ಷಣದವರೆಗೂ ಮರೀಗೌಡ, ಮಾಳಿಗೆ ಶಂಕರ್ ವಿಚಾರಣೆಯನ್ನು ಇಡಿ ಮುಂದುವರೆಸಿದೆ. ಇನ್ನು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಇಡಿ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

    ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್‌ಗಳಿಗೆ 2 ಸಾವಿರ ಬಾಂಡ್ ಪೇಪರ್‌ಗಳೇ ಇಲ್ಲ ಎನ್ನಲಾಗಿದೆ. ಇನ್ನು, ನನ್ನ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇಲ್ಲ… ದಾಖಲೆ ನಕಲಿ ಆಗಿದ್ರೆ ಕಾನೂನು ಹೋರಾಟ ಮಾಡಲಿ ಎಂದು ಸಿಎಂಗೆ ದೂರುದಾರ ಸ್ನೇಹಮಯಿ ಕೃಷ್ಣ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ:  ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಈ ಮಧ್ಯೆ, ಮುಡಾ ಕೇಸಲ್ಲಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 23ಕ್ಕೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. ಇದೇ ಶುಕ್ರವಾರ ಅಥ್ವಾ ಶನಿವಾರ ವಿಚಾರಣೆ ನಡೆಸಿ ಎಂಬ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ಕೆವಿ ಅರವಿಂದ್ ಅವರಿದ್ದ ಪೀಠ ತಿರಸ್ಕರಿಸಿದೆ.

    ಮುಡಾ ಕೇಸಲ್ಲಿ ಇಡಿ ವಿಚಾರಣೆಯ ಹಾದಿ…

    ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
    ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
    ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
    ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜುಗೆ ಡ್ರಿಲ್
    ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
    ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
    ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
    ಅಕ್ಟೋಬರ್ 30 ದಿನೇಶ್ ಕುಮಾರ್ – ಮುಡಾ ಮಾಜಿ ಆಯುಕ್ತ
    ನವೆಂಬರಗ 11 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ಗ್ರಿಲ್, ಪಾಲಯ್ಯ
    ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ಗೆ ಗ್ರಿಲ್
    ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
    ನವೆಂಬರ್ 14 ರಂದು ನಿವೃತ್ತ ತಹಶೀಲ್ದಾರ್ ಮಾಳಿಗೆ ಶಂಕರ್ ವಿಚಾರಣೆ
    ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮರೀಗೌಡ ಆಪ್ತ ಶಿವಣ್ಣ ವಿಚಾರಣೆ

  • ಮುಡಾದಲ್ಲಿ ಭಾರೀ ಅಕ್ರಮ – ಹಂಚಿಕೆಯಾದ 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲ

    ಮುಡಾದಲ್ಲಿ ಭಾರೀ ಅಕ್ರಮ – ಹಂಚಿಕೆಯಾದ 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲ

     ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಂಚಿಕೆ ಮಾಡಿದ ಸುಮಾರು 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿದೆ.

    ಹೌದು. ಮುಡಾ ಹಂಚಿಕೆ ಮಾಡಿದ 5 ಸಾವಿರ ಸೈಟ್‌ಗಳಲ್ಲಿ ಸುಮಾರು 2 ಸಾವಿರ ಸೈಟ್‌ಗಳಿಗೆ ಯಾವುದೇ ಬಾಂಡ್ ಪೇಪರ್‌ಗಳೇ ಇಲ್ಲದಿರುವ ವಿಚಾರ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಮುಡಾದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.

    50:50 ಅನುಪಾತವನ್ನೇ ವರದಾನ ಮಾಡಿಕೊಂಡ ಖದೀಮರು 1950 ಸೈಟ್‌ಗಳನ್ನು ಪಡೆದಿದ್ದಾರೆ. 1950 ಸೈಟ್‌ಗಳ ಪೈಕಿ ಒಬ್ಬೊಬ್ಬರು 30, 40, 50 ಸೈಟ್ ಪಡೆದುಕೊಂಡಿದ್ದಾರೆ.  ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್‌ ಬಂದಿತ್ತು: ಸಿಎಂ ಬಾಂಬ್‌

     

    60:40, 50:50ರ ಅನುಪಾತದಲ್ಲಿ ಒಟ್ಟು ಮುಡಾ 5 ಸಾವಿರ ಸೈಟ್‌ಗಳನ್ನು ಹಂಚಿಕೆ ಮಾಡಿದೆ. ಈ ಪ್ರಕರಣದ ತನಿಖೆಗೆ ಇಳಿದ ಇಡಿ ಮೂಲ ದಾಖಲೆಯನ್ನು ಹುಡುಕಿದೆ. ಈ ವೇಳೆ ಮುಡಾದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಬಾಂಡ್ ಪೇಪರ್‌ಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಮುಡಾ ಯಾವ ಮಾನದಂಡದ ಅಡಿಯಲ್ಲಿ ಈ ಸೈಟ್‌ ಹಂಚಿಕೆ ಮಾಡಲಾಗಿದೆ? ಈ ಸೈಟ್‌ಗಳನ್ನು ಪಡೆದವರ ಹಿನ್ನೆಲೆ ಏನು? ಈ ಸೈಟ್‌ ಪಡೆಯಲು ಇವರು ನೀಡಿದ ದಾಖಲೆ ಏನು ಇತ್ಯಾದಿಗಳ ವಿವರವನ್ನು ಈಗ ಇಡಿ ಕಲೆ ಹಾಕಲು ಮುಂದಾಗಿದೆ.

     

  • ಇಡಿ ನೋಟಿಸ್‌ ನೀಡಿದೆ ಎಂದು ನಿಮ್ಗೆ ಹೇಳಿದ್ದು ಯಾರು? – ಸಿಎಂ

    ಇಡಿ ನೋಟಿಸ್‌ ನೀಡಿದೆ ಎಂದು ನಿಮ್ಗೆ ಹೇಳಿದ್ದು ಯಾರು? – ಸಿಎಂ

    ಬಳ್ಳಾರಿ: ನಿಮಗೆ ಗೊತ್ತಿದೆಯಾ? ಜಾರಿ ನಿರ್ದೇಶನಾಲಯ (ED) ಇಡಿ ನೋಟಿಸ್‌ ನೀಡಿದೆ ಎಂದು ಹೇಳಿದವರು ಯಾರು ಎಂದು ಸಿಎಂ ಸಿದ್ದರಾಮ್ಯಯ (CM Siddaramaiah) ಪ್ರಶ್ನಿಸಿದ್ದಾರೆ.

    ಮಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಇಡಿ ನೋಟಿಸ್‌ ನೀಡಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಸಂಡೂರಿನಲ್ಲಿ (Sanduru) ಪ್ರತಿಕ್ರಿಯಿಸಿದ ಅವರು, ನಿಮಗೆ ಹೇಳಿದವರು ಯಾರು ಎಂದು ಪ್ರಶ್ನಿ ಗರಂ ಆದರು. ಇದನ್ನೂ ಓದಿ: ವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ!

     

    ಸಂಡೂರು ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿದೆ. ನೂರಕ್ಕೆ ಇನ್ನೂರುಷ್ಟು ಸಂಡೂರು ಗೆಲ್ಲುತ್ತೇವೆ. ಚನ್ನಪಟ್ಟಣ , ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ದಾಖಲೆ ತಿದ್ದುಪಡಿಯನ್ನು ಸರಿಪಡಿಸಲು ಹೇಳಿರುವೆ. ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ವಕ್ಫ್‌ ಮಸೂದೆಗೆ ಸಂಬಂಧಿಸಿದಂತೆ ರಚನೆಯಾದ ಜಂಟಿ ಸಂಸದೀಯ ಸಮಿತಿ ಬಂದಿದ್ದು ರಾಜಕೀಯಕ್ಕೆ ಎಂದು ವಾಗ್ದಾಳಿ ನಡೆಸಿದರು.

     

  • ಮುಡಾ ಕೇಸಲ್ಲಿ ಸಿಎಂಗೆ ಮತ್ತೆ ಸಂಕಷ್ಟ; ಲೋಕಾಯುಕ್ತ ಬಳಿಕ ಇ.ಡಿ ವಿಚಾರಣೆ ಭೀತಿ ಶುರು

    ಮುಡಾ ಕೇಸಲ್ಲಿ ಸಿಎಂಗೆ ಮತ್ತೆ ಸಂಕಷ್ಟ; ಲೋಕಾಯುಕ್ತ ಬಳಿಕ ಇ.ಡಿ ವಿಚಾರಣೆ ಭೀತಿ ಶುರು

    ಬೆಂಗಳೂರು: ಮುಡಾ ನಿವೇಶನಗಳನ್ನು (MUDA Case) ಅಕ್ರಮವಾಗಿ ಪಡೆದ ಆರೋಪದಲ್ಲಿ ಬುಧವಾರವಷ್ಟೇ ಲೋಕಾಯುಕ್ತದಿಂದ ವಿಚಾರಣೆ ಎದುರಿಸಿದ ಸಿಎಂ ಸಿದ್ದರಾಮಯ್ಯಗೆ (Siddaramaiah) ಮತ್ತೊಂದು ಸಂಕಷ್ಟ ಎದುರಾಗಿದೆ.

    ಲೋಕಾಯುಕ್ತ ಬಳಿಕ ಈಗ ಇ.ಡಿ ವಿಚಾರಣೆಯ ಭೀತಿ ಸಿದ್ದರಾಮಯ್ಯಗೆ ಶುರುವಾಗಿದೆ. ಸಿದ್ದರಾಮಯ್ಯ ಇಬ್ಬರು ಅತ್ಯಾಪ್ತರಿಗೆ ಇ.ಡಿಯಿಂದ ಸಮನ್ಸ್ ನೀಡಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಸೇರಿ 7 ಮಂದಿಗೆ ಇ.ಡಿ ಸಮನ್ಸ್ ಕೊಟ್ಟಿದೆ. ಇದನ್ನೂ ಓದಿ: ಅಳೋ ಗಂಡಸರನ್ನ ನಂಬಬಾರದಂತೆ – ಹೆಚ್‌ಡಿಕೆ, ನಿಖಿಲ್‌ಗೆ ಸಿದ್ದರಾಮಯ್ಯ ಟಾಂಗ್‌

    ತುರ್ತು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಮುಡಾ ಮಾಜಿ ಆಯುಕ್ತ ದಿನೇಶ್, ನಟೇಶ್‌ಗೂ ಮತ್ತೆ ಸಮನ್ಸ್ ನೀಡಿದೆ. ಇವರೆಲ್ಲರ ವಿಚಾರಣೆ ಬಳಿಕ ಸಿಎಂಗೆ ಇ.ಡಿ ನೋಟಿಸ್ ನೀಡುವ ಸಾಧ್ಯತೆ ಇದೆ. ಲೋಕಾಯುಕ್ತ ಬಳಿಕ ಸಿಎಂಗೆ ಇ.ಡಿ ವಿಚಾರಣೆ ಭೀತಿ ಶುರುವಾಗಿದೆ.

    ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ಗೂ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಎಸ್ಪಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿಚಾರಣೆಯಲ್ಲಿ ಹಲವು ಲೋಪ ಆಗಿದೆ. ಲೋಕಾಯುಕ್ತ ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಉದೇಶ್ ಅವರಿಗೆ ಎಚ್ಚರಿಕೆ ನೀಡಬೇಕೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪುಸ್ತಕ ತೆರೆದ್ರೆ ಬರೀ ಕಪ್ಪು ಕಾಣಿಸ್ತದೆ, ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ: ಅಶೋಕ್

    ಮುಡಾ ಕೇಸ್‌ನ ಆರೋಪಿಗಳಾದ ಪಾರ್ವತಿ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯ ಬಾಮೈದ, ಜಮೀನು ಮಾರಿದ್ದ ದೇವರಾಜ್‌ ಅವರ ವಿಚಾರಣೆಯನ್ನು ಲೋಕಾಯುಕ್ತ ಈಗಾಗಲೇ ನಡೆಸಿತ್ತು. ಪ್ರಕರಣದ ಎ1 ಆರೋಪಿಯಾದ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಮೈಸೂರಿನ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿಎಂಗೆ ಕೇಳಲಾಯಿತು.

  • MUDA Case; ಮುಡಾ ಮಾಜಿ ಆಯುಕ್ತ ನಟೇಶ್‌ ED ವಶಕ್ಕೆ

    MUDA Case; ಮುಡಾ ಮಾಜಿ ಆಯುಕ್ತ ನಟೇಶ್‌ ED ವಶಕ್ಕೆ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA Scam Case) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್‌ ಅವರನ್ನು ಇ.ಡಿ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ನಟೇಶ್‌ (Natesh) ಅವರನ್ನು ವಶಕ್ಕೆ ಪಡೆದು ಶಾಂತಿನಗರದ ಇ.ಡಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಕಚೇರಿಗೆ ಕರೆದೊಯ್ದಿದ್ದಾರೆ. ನಟೇಶ್‌ರನ್ನು ಬಂಧಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!

    ಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್‌ ಕಾರಣ ಎಂದು ಆರೋಪಿಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ನಟೇಶ್‌ ಮನೆ ಮೇಲೆ ಸೋಮವಾರ ದಾಳಿ ಮಾಡಿ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ, ತನಿಖೆಗೆ ನಟೇಶ್‌ ಅವರು ಸಹಕರಿಸಿಲ್ಲ ಎನ್ನಲಾಗಿದೆ. ನಾನು ಪ್ರಕರಣದಲ್ಲಿ ತಪ್ಪೆ ಮಾಡಿಲ್ಲ. ಸರ್ಕಾರದ ಆದೇಶ ಚಾಚು ತಪ್ಪದೇ ಪರಿಪಾಲನೆ ಮಾಡಿದ್ದೀನಿ. ಕಾರ್ತಿಕ್ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಆದ ಬೆಳವಣಿಗೆ ಗೊತ್ತಿಲ್ಲ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರವನ್ನೂ ಮಾಡಿಲ್ಲ. ಸರ್ಕಾರದ ನಡಾವಳಿಯಲ್ಲಿಯೇ ಇದೆ ಶೇ. 50:50 ಅನುಪಾತದಲ್ಲಿ ನೀಡಲಾಗಿದೆ. 2022 ಮತ್ತು 2023 ರಲ್ಲಿ ನಡಾವಳಿ ಬದಲಾವಣೆ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಇಂದು ಬೆಳಗ್ಗೆ ಎಂಟು ಗಂಟೆಯಿಂದ ಮತ್ತೆ ದಾಳಿ ಮುಂದುವರಿಸಲಾಗಿತ್ತು. ನಾಲ್ಕು ಜನ ಇಡಿ ಅಧಿಕಾರಿಗಳಿಂದ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ನಿನ್ನೆ ಮಾಜಿ ಆಯುಕ್ತ ನಟೇಶ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ್ದರು. ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿತ್ತು.

  • ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!

    ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕುಟುಂಬದ ವಿರುದ್ಧದ ಮುಡಾ ಸೈಟ್ ಹಂಚಿಕೆ ಹಗರಣದ ತನಿಖೆ ಮತ್ತಷ್ಟು ಚುರುಕಾಗಿದೆ. ಮೊನ್ನೆ ಮೊನ್ನೆಯಷ್ಟೇ ಮುಡಾ ಅಧಿಕಾರಿಗಳನ್ನು (MUDA Officers) ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿಲ್ಡರ್‌ಗೆ ಶಾಕ್ ಕೊಟ್ಟಿದ್ದಾರೆ.

    ಮೈಸೂರು, ಬೆಂಗಳೂರು ಸೇರಿದಂತೆ 9 ಕಡೆ ರೇಡ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ರೇಡ್‌ನಲ್ಲಿ ಸಚಿವ ಮಹದೇವಪ್ಪ ಅಣ್ಣನ ಮಗ, ಆಪ್ತ ಶಿವಣ್ಣ, ಮುಡಾ ಮಾಜಿ ಆಯುಕ್ತರಾದ ದಿನೇಶ್ ಕುಮಾರ್, ನಟೇಶ್ ಅಷ್ಟೇ ಅಲ್ಲ, ಸಿಎಂ ಆಪ್ತ ರಾಕೇಶ್ ಪಾಪಣ್ಣ ಹೆಸರು ಕೇಳಿ ಬಂದಿದೆ. ಹಾಗಾದರೆ, ಎಲ್ಲೆಲ್ಲಿ ಇವತ್ತು ರೇಡ್ ಆಯ್ತು? ಯರ‍್ಯಾರಿಗೆ ಇಡಿ ಬಿಸಿ ಮುಟ್ಟಿದೆ? ಸೆಟ್ಲ್‌ಮೆಂಟ್‌ ಡೀಡ್ ಹೆಸರಲ್ಲಿ ಏನೇನ್ ಡೀಲಾಗಿದೆ ಅನ್ನೋದನ್ನು ನೋಡೋಣ.

    ದಾಳಿ 1- ಮಂಜುನಾಥ್, ಬಿಲ್ಡರ್
    * ಬೆಂಗಳೂರಿನ ಜೆ.ಪಿ.ನಗರ ನಿವಾಸ, ಕಚೇರಿ
    * ಮುಡಾದಿಂದ 50:50 ನಿವೇಶನ ಪಡೆದು ಹಂಚಿಕೆ
    * ಎಚ್‌ಸಿ ಮಹದೇವಪ್ಪ ಅಣ್ಣನ ಮಗ ನವೀನ್ ಬೋಸ್‌ಗೆ 50*80 ಸೈಟ್
    * ಆಪ್ತ ಶಿವಣ್ಣಗೆ 60*40 ಸೈಟ್ ವರ್ಗಾವಣೆ

    ದಾಳಿ 2 – ದಿನೇಶ್‌ಕುಮಾರ್, ಮಾಜಿ ಆಯುಕ್ತ
    * ಬೆಂಗಳೂರಿನ ಹೆಬ್ಬಾಳ, ಬಾಣಸವಾಡಿಯಲ್ಲಿ ದಾಳಿ
    * 2022ರಿಂದ 2024ವರೆಗೆ ಮುಡಾ ಆಯುಕ್ತ
    * 50:50 ಅನುಪಾತದಲ್ಲಿ 1000ಕ್ಕೂ ಹೆಚ್ಚು ಸೈಟ್ ಹಂಚಿಕೆ
    * ಇವರ ಕಾಲದಲ್ಲೇ ಸಿಎಂ ಪತ್ನಿ ದಾಖಲೆ ಮೇಲೆ ವೈಟ್‌ನರ್ ಆರೋಪ
    * ಇ.ಡಿ ದಾಳಿ ಸುದ್ದಿ ತಿಳಿದು ವಾಕಿಂಗ್‌ಗೆ ಹೋಗಿ ಎಸ್ಕೇಪ್, ಮೊಬೈಲ್ ಸ್ವಿಚ್ ಆಫ್

    ದಾಳಿ 3- ನಟೇಶ್, ಮಾಜಿ ಆಯುಕ್ತ
    * ಬೆಂಗಳೂರಿನ ಮಲ್ಲೇಶ್ವರಂ ನಿವಾಸ
    * 2020ರಿಂದ 2022ವರೆಗೆ ಮೂಡಾ ಆಯುಕ್ತ
    * ಸಿಎಂ ಪತ್ನಿಗೆ 50:50 ಅನುಪಾತದಲ್ಲಿ 14 ಸೈಟ್ ಹಂಚಿಕೆ
    * ನಟೇಶ್ ಅವಧಿಯಲ್ಲಿ 500ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆ
    * ಬದಲಿ ನಿವೇಶನಗಳೂ ಕೂಡ ಹಂಚಿಕೆ

    ಮುಡಾ ಕೇಸಲ್ಲಿ ಇಡಿ ಶಾಕ್
    * ದಾಳಿ 4- ರಾಕೇಶ್ ಪಾಪಣ್ಣ, ಸಿಎಂ ಆಪ್ತ
    * ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ
    * 50:50 ಅನುಪಾತದಲ್ಲಿ 98,850 ಚದರ ಅಡಿ ಜಾಗ ಪರಿಹಾರ
    * ಇದೇ ವರ್ಷದ ಜೂನ್‌ನಲ್ಲಿ ರಾಕೇಶ್‌ಗೆ ಕೊಟ್ಟಿರುವ ದಿನೇಶ್ ಕುಮಾರ್
    * 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಮಧ್ಯಸ್ಥಿಕೆ?
    (ರಾಕೇಶ್ ಪಾಪಣ್ಣ ಮನೆಗೆ ಪ್ರಿಂಟರ್ ತರಿಸಿಕೊಂಡು ಇ.ಡಿ ಕಾರ್ಯಾಚರಣೆ ನಡೆಸಿದೆ)

    * ಮೈಸೂರಿನಲ್ಲಿ ಕಾರ್ತಿಕ್ ಲೇಔಟ್ ಮಾಡಿರುವ ಬಿಲ್ಡರ್ ಮಂಜುನಾಥ್
    * ಬಡಾವಣೆ ರಚನೆ ವೇಳೆ ತಮಗೆ ನ್ಯಾಯ ಸಮ್ಮತವಾಗಿ ಬೇಕಾದಷ್ಟು ಸಂಖ್ಯೆ ನಿವೇಶನ ರಚನೆ ಆಗಿಲ್ಲ
    * ಮುಡಾ ನಕ್ಷೆ ಮಂಜೂರಿನಲ್ಲಿ ನನಗೆ ಅನ್ಯಾಯ ಆಗಿದೆ ಅಂತ ಮುಡಾಗೆ ಅರ್ಜಿ
    * ಈ ಅರ್ಜಿಯಂತೆ ಬಿಲ್ಡರ್ ಮಂಜುನಾಥ್‌ಗೆ ಪರ್ಯಾಯ ನಿವೇಶನ ಹಂಚಿಕೆ
    * ಈ ವಿಚಾರದಲ್ಲಿ ಕೆಲವು ಜನಪ್ರತಿನಿಧಿಗಳ ಕಣ್ಣು ಕೆಂಪಾಗಾಗಿತ್ತು
    * ಅವರನ್ನು ಸಮಾಧಾನ ಪಡಿಸಲು ಜನಪ್ರತಿನಿಧಿಗಳ ಸಂಬಂಧಿಕರಿಗೆ ನಿವೇಶನ
    * ಸೆಟಲ್‌ಮೆಂಟ್ ಡೀಡ್ ಹೆಸರಿನಲ್ಲಿ ಬೇರೆ ಬೇರೆ ಕಡೆ ನಿವೇಶನ ಹಂಚಿಕೆ

  • ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಮೈಸೂರು: ಮುಡಾ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡ್ಡಾ ಬೆಂಬಲಿಗ ರಾಕೇಶ್ ಪಾಪಣ್ಣ (Rakesh Papanna) ಅವರ ಮೈಸೂರಿನ ನಿವಾಸ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.

    ಸಿಎಂ ಆಪ್ತನ ಮನೆ ಮೇಲೂ ಇ.ಡಿ ತಲಾಶ್:
    ಸಿಎಂ ಆಪ್ತ ರಾಕೇಶ್ ಪಾಪಣ್ಣಗೂ ಶಾಕ್ ನೀಡಿರುವ ಜಾರಿ ನಿರ್ದೇಶನಾಲಯ (ED) ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದೆ. ಅಲ್ಲದೇ ರಾಕೇಶ್ ಪಾಪಣ್ಣ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಳು ತೀವ್ರ ಶೋಧ ನಡೆಸುತ್ತಿದ್ದಾರೆ. ವಿವಿಧ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಕೇಶ್ ಪಾಪಣ್ಣಗೆ ಯಾಕೆ ಇಡಿ ಬಿಸಿ?
    ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗನಾದ ರಾಕೇಶ್ ಪಾಪಣ್ಣಗೆ ಇದೇ ವರ್ಷದ ಜೂನ್ ನಲ್ಲಿ ಅಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ 50:50 ಅನುಪಾತದಲ್ಲಿ ಒಟ್ಟು 98,850 ಚದರ ಅಡಿ ಜಾಗವನ್ನು ಪರಿಹಾರ ರೂಪದಲ್ಲಿ ನೀಡಿದ್ದರು. ಅಲ್ಲದೇ ಕೆಲವು 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಪಾಪಣ್ಣ ಮಧ್ಯಸ್ಥಿಕೆ ಇದೆ ಎಂಬ ಆರೋಪ ಕೇಳಿಬಂದಿದೆ.

    ಡಿ.ಬಿ ನಟೇಶ್‌ ಮೇಲಿನ ಆರೋಪಗಳೇನು?
    ಡಿ.ಬಿ ನಟೇಶ್, 2020 ರಿಂದ 2022ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ವಿಜಯನಗರದಲ್ಲಿ 14 ಸೈಟ್ ಮಂಜೂರು ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ನಟೇಶ್ ಅವಧಿಯಲ್ಲೇ 50:50 ಅನುಪಾತದ ಅಡಿ 500ಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ಬದಲಿ ನಿವೇಶನಗಳು ಕೂಡ ಇದೇ ವೇಳೆಯ ಹಂಚಿಕೆ ಆಗಿದೆ ಎಂಬ ಆರೋಪ ಇವರ ಮೇಲೆ ಇರುವುದಾಗಿ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಮೇಲಿನ ಆರೋಪ ಏನು?
    ನಟೇಶ್ ಅವರ ನಂತರ 2022ರ ಮೇ ನಿಂದ 2024ರ ಜುಲೈ ವರೆಗೆ ದಿನೇಶ್ ಕುಮಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ ಅತ್ಯಧಿಕ ಅಂದರೆ 1 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಲಾಗಿತ್ತು. ಅಲ್ಲದೇ ನೂರಾರು ಸೈಟ್‌ಗಳ ಮೂಲ ವಾರುಸದಾರರಿಗೆ ಪರಿಹಾರ ಹೋಗಿದ್ದರೂ ಮತ್ತೆ ಪರಿಹಾರ ರೂಪದಲ್ಲಿ ನಿವೇಶನ ನೀಡಲಾಗಿದೆ. ಬಹಳಷ್ಟು ನಿವೇಶನಗಳ ವಾರಸುದಾರರನ್ನ ಸೃಷ್ಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

    ಅಲ್ಲದೇ ಸಿಎಂ ಪತ್ನಿಯ ದಾಖಲೆ ಮೇಲೆ ವೈಟ್ನರ್ ಹಾಕಿರುವ ಪ್ರಕರಣದಲ್ಲೂ ಇವರ ಹೆಸರು ಕೇಳಿ ಬಂದಿದೆ.

  • ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿ ವಿಚಾರಣೆ; ಈಗ ಎ1 ಸಿದ್ದರಾಮಯ್ಯ ಸರದಿ – ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ

    ಮೈಸೂರು: ಮುಡಾ ನಿವೇಶನ (MUDA Scam Case) ಹಂಚಿಕೆ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೂ (Siddaramaiah) ನೋಟಿಸ್ ನೀಡುವ ಸಾಧ್ಯತೆ ಇದೆ.

    ಇ.ಡಿ ಮತ್ತು ಲೋಕಾಯುಕ್ತ ತನಿಖೆ ಚುರುಕುಗೊಳಿಸಿದ್ದು, ಮುಡಾ ಕೇಸ್‌ನಲ್ಲಿ ಈಗಾಗಲೇ ಎ2, 23 ಮತ್ತು ಎ4 ವಿಚಾರಣೆ ನಡೆಸಲಾಗಿದೆ. ಈಗ ಬಾಕಿ ಇರುವುದು ಎ1 ಆರೋಪಿ ವಿಚಾರಣೆ ಮಾತ್ರ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಪತ್ನಿ ಗೌಪ್ಯ ವಿಚಾರಣೆ; ಪ್ರಭಾವ ಬಳಸಿಲ್ಲ.. ವೈಟ್ನರ್ ಹಚ್ಚಿದ್ದು ನಾನೆ – ಲೋಕಾಯುಕ್ತ ಪ್ರಶ್ನೆಗಳಿಗೆ ಉತ್ತರ

    ಸಿಎಂಗೆ ನೋಟಿಸ್ ನೀಡಲು ಲೋಕಾಯುಕ್ತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಪಾರ್ವತಮ್ಮ ವಿಚಾರಣೆಯ ಟಿಪ್ಪಣಿ ಬರೆಯುತ್ತಿದ್ದಾರೆ. ಟಿಪ್ಪಣಿ ಕಾರ್ಯ ಮುಗಿದ ಮೇಲೆ ಸಿಎಂಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

    ಮುಡಾ ಹಗರಣ ಆರೋಪ ಸಂಬಂಧ ಲೋಕಾಯುಕ್ತ ದಾಖಲಿಸಿರುವ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಇದನ್ನೂ ಓದಿ: MUDA Scam | ಸಿಎಂ ಪತ್ನಿ ಪಾರ್ವತಿ ಲೋಕಾಯುಕ್ತ ವಿಚಾರಣೆಗೆ ಹಾಜರು – ಗೌಪ್ಯ ಸ್ಥಳದಲ್ಲಿ ವಿಚಾರಣೆ

    ಮುಡಾ ಪ್ರಕರಣದಲ್ಲಿ ಸುಮಾರು 3 ಗಂಟೆಗಳ ಕಾಲ ಸಿಎಂ ಪತ್ನಿಯನ್ನು ಲೋಕಾಯುಕ್ತ ವಿಚಾರಣೆ ನಡೆಸಿತು. ಈ ವೇಳೆ ಹಲವಾರು ಪ್ರಶ್ನೆಗಳನ್ನು ಸಿಎಂ ಪತ್ನಿ ಮುಂದಿಟ್ಟು ಉತ್ತರ ಪಡೆಯಲಾಯಿತು.

  • ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್‌

    ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್‌

    ಮೈಸೂರು: ಮುಡಾ ಹಗರಣ (MUDA Scam Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಸತತ 17 ಗಂಟೆಗಳ ವಿಚಾರಣೆ ಅಂತ್ಯಗೊಳಿಸಿದ್ದಾರೆ.

    ನಿನ್ನೆ ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆ ವರೆಗೆ ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಿಎಂ‌ ಸಿದ್ದರಾಮಯ್ಯ (Siddaramaiah) ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಟಿಕೆಟ್ ಆಯ್ಕೆ ಕಗ್ಗಂಟು – ದೋಸ್ತಿ ನಾಯಕರಲ್ಲಿ ಮೂಡದ ಒಮ್ಮತದ ನಿರ್ಧಾರ

    ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅ.18 ರಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯ ವರೆಗೆ ಇ.ಡಿ ಸತತ ವಿಚಾರಣೆ ನಡೆಸಿದೆ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರದ ಇಂಚಿಂಚು ಮಾಹಿತಿ ಸಂಗ್ರಹಿಸಲಾಗಿದೆ.

    ಸತತ 29 ತಾಸಿನ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ 12 ತಾಸು, ಎರಡನೇ ದಿನ 17 ತಾಸು ವಿಚಾರಣೆ ನಡೆಸಿದೆ. ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇ.ಡಿ ವಶಕ್ಕೆ ಪಡೆದಿದೆ. ಎಲ್ಲಾ ಹಂತದ ಅಧಿಕಾರಿಗಳ ಡ್ರಿಲ್ ನಡೆಸಿದೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ ಅಕ್ರಮ – ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿ

  • ಅಕ್ರಮ ಹಣ ವರ್ಗಾವಣೆ ಕೇಸ್‌ – ಹಿರಿಯ ಐಎಎಸ್‌ ಅಧಿಕಾರಿ, ಆರ್‌ಜೆಡಿ ಮಾಜಿ ಶಾಸಕ ಅರೆಸ್ಟ್‌

    ಅಕ್ರಮ ಹಣ ವರ್ಗಾವಣೆ ಕೇಸ್‌ – ಹಿರಿಯ ಐಎಎಸ್‌ ಅಧಿಕಾರಿ, ಆರ್‌ಜೆಡಿ ಮಾಜಿ ಶಾಸಕ ಅರೆಸ್ಟ್‌

    ಪಾಟ್ನಾ: ಬಿಹಾರ ವಿದ್ಯುತ್ ಸಚಿವಾಲಯದಲ್ಲಿ (Bihar Power Ministry) ನಡೆದಿದೆ ಎನ್ನಲಾದ ಟೆಂಡರ್ ಹಗರಣ ಪ್ರಕರಣಕ್ಕೆ ಸಬಂಧಿಸಿದಂತೆ ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಮತ್ತು ಆರ್‌ಜೆಡಿ ಮಾಜಿ ಶಾಸಕರೊಬ್ಬರನ್ನ ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಂಜೀವ್‌ ಹನ್ಸ್‌ ಅವರನ್ನ ಪಾಟ್ನಾದಲ್ಲಿ ಮತ್ತು ಗುಲಾಬ್‌ ಯಾದವ್‌ ಅವರನ್ನ ದೆಹಲಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬಿಹಾರದ ವಿದ್ಯುತ್ ಸಚಿವಾಲಯದ ಟೆಂಡರ್ ಹಗರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇವರ ಮೇಲಿದೆ. ಇದನ್ನೂ ಓದಿ: ತಲೆ ಸೀಳಿದ ಬುಲೆಟ್‌, ಬೆರಳು ಕಟ್‌; ಭೀಕರ ಹತ್ಯೆಯಾದ ಹಮಾಸ್‌ ಮುಖ್ಯಸ್ಥನ ದೇಹ ಸ್ಥಿತಿ ಹೇಗಿತ್ತು?

    ಬಿಹಾರ ಕೇಡರ್ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ರಾಜ್ಯ ವಿದ್ಯುತ್ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಜಾರಿ ನಿರ್ದೇಶನಾಲಯ ಅವರ ನಿವಾಸದ ಮೇಲೆ ಮೊದಲು ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆ ಬಳಿಕ ಅವರನ್ನು ಸಾಮಾನ್ಯ ಆಡಳಿತ ವಿಭಾಗಕ್ಕೆ ಆಗಸ್ಟ್‌ನಲ್ಲಿ ವರ್ಗಾಯಿಸಲಾಗಿತ್ತು. ಝಂಜಾರ್ಪುರ ಮಾಜಿ ಶಾಸಕ ಗುಲಾಬ್ ಯಾದವ್, ಹನ್ಸ್ ಅವರ ನಿಕಟವರ್ತಿ ಎಂದು ಮೂಲಗಳು ತಿಳಿಸಿವೆ.

    ಹನ್ಸ್ ಹಾಗೂ ಯಾದವ್ ಅವರಿಗೆ ಸೇರಿದ ಹಲವು ಆಸ್ತಿಗಳ ಮೇಲೆ ಗುರುವಾರ ಕೊನೆಯ ಸುತ್ತಿನ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಬಳಿಕ ಶುಕ್ರವಾರ ಪಾಟ್ನಾದಲ್ಲಿ ಹನ್ಸ್ ಅವರನ್ನು ಬಂಧಿಸಿದ್ದರೆ, ಯಾದವ್ ಅವರನ್ನು ಹಣ ದುರ್ಬಳಕೆ ಕಾಯ್ದೆಯಡಿ ದೆಹಲಿಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: Chattisgarh | ಅಬುಜ್ಮಾರ್ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳ ಹತ್ಯೆ

    ಬಿಹಾರ ಪೊಲೀಸರು ದಾಖಲಿಸಿದ ಎಫ್ಐಆರ್‌ನಲ್ಲಿ ಹಣ ದುರುಪಯೋಗ ಆರೋಪ ಹೊರಿಸಲಾಗಿದೆ. ಸರ್ಕಾರಿ ಉದ್ಯೋಗ ಕೊಡಿಸಲು ನೆರವಾಗುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಹನ್ಸ್ ಮೇಲಿತ್ತು. ಆದರೆ ಪಾಟ್ನಾ ಹೈಕೋರ್ಟ್ ಈ ಪ್ರಕರಣವನ್ನು ಕಳೆದ ಆಗಸ್ಟ್‌ನಲ್ಲಿ ವಜಾಗೊಳಿಸಿತ್ತು. ಇದನ್ನೂ ಓದಿ: ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?