Tag: ED

  • MUDA Scam | ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ

    MUDA Scam | ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ

    ಬೆಳಗಾವಿ: ಮುಡಾ ಅಕ್ರಮದ (MUDA Scam) ಬಗ್ಗೆ ಜಾರಿ ನಿರ್ದೇಶನಾಲಯ (ED) ಲೋಕಾಯುಕ್ತಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಗರಂ ಆಗಿದ್ದಾರೆ.

    ಇಡಿ ಪತ್ರದ ಬಳಿಕ ಮಾಧ್ಯಮಗಳ ಕೈಗೆ ಸಿಗದೇ ನಾಪತ್ತೆಯಾಗಿದ್ದ ಬೈರತಿ ಸುರೇಶ್‌ ಇಂದು ಬೆಳಗಾವಿ ಅಧಿವೇಶನದಲ್ಲಿ ಪಬ್ಲಿಕ್‌ ಟಿವಿಗೆ ಸಿಕ್ಕಿದರು.

    ಈ ವೇಳೆ, ಪ್ರಕರಣ ನ್ಯಾಯಾಲಯದಲ್ಲಿದೆ. ನಾನೇನು ನೇಣು ಹಾಕೊಳ್ಳೊಕ್ಕೆ ಆಗುತ್ತಾ? ನಾನು ಯಾರ ಕೈಗೂ ಸಿಗದೇ ಹೋಗಿಲ್ಲ. ನಾನು ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ನಾನು ಎಲ್ಲರಿಗೂ ಸಿಗುತ್ತಿದ್ದೇನೆ ಎಂದು ಬೈರತಿ ಸಮರ್ಥನೆ ನೀಡಿದರು. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ. ಇಡಿ ಪತ್ರದಲ್ಲಿ ಏನಿದೆ?

     

    ಇಡಿ ಪತ್ರದ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಸುಳ್ಳು. ನನ್ನ ವಿರುದ್ಧ ವರದಿ ಕೊಟ್ಟಿಲ್ಲ. ಯಾವ ಅಧಿಕಾರಿ 144 ಫೈಲ್ ತಗೆದುಕೊಂಡು ಹೋಗಿದ್ದಾರೆ? ನಾನು ಅಲ್ಲಿಗೆ ಹೋಗಿದ್ದೆ ಅಂತ ಯಾರು ಹೇಳಿದ್ದಾರೆ? ಮುಡಾ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಕೆಂಡಾಮಂಡಲವಾದರು.

    ಇದೇ ವೇಳೆ ಯಾರು ಯಾವುದೇ ಪತ್ರ ಬರೆದಿಲ್ಲ. ಅಧಿಕೃತವಾಗಿ ಇಡಿ ಪತ್ರ ಬರೆದಿದ್ಯಾ? ಪತ್ರ ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಹೇಳಿ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು.

     

  • EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ

    EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ

    – ಇದು 700 ಕೋಟಿಯಲ್ಲ, ಬರೋಬ್ಬರಿ 2800 ಕೋಟಿ ಅಕ್ರಮ?

    ಬೆಂಗಳೂರು: ಸಿಎಂ ವಿರುದ್ಧದ ಮುಡಾ (MUDA Case) ತನಿಖೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಈ ಹಿಂದೆ 1,095 ಸೈಟ್‌ಗಳು ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ, ತನಿಖೆಯ ಮುಂದುವರಿದ ಭಾಗದಲ್ಲಿ ಬರೋಬ್ಬರಿ 4,921 ಸೈಟ್‌ಗಳೇ ಅಕ್ರಮ ಎನ್ನೋದು ಬಯಲಾಗಿದೆ.

    50:50 ಅನುಪಾತ ಅಷ್ಟೇ ಅಲ್ಲ, 60:40 ಅನುಪಾತದಲ್ಲಿ ಲೇಔಟ್‌ಗೆ ಲೇಔಟ್‌ಗಳನ್ನೇ ಅಕ್ರಮ ಮಾಡಿದ್ದಾರೆ. ಅದಕ್ಕೆ ಪೂರಕ ದಾಖಲೆ ತಿದ್ದಿದ್ದಾರೆ ಎನ್ನುವುದು ಇ.ಡಿ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: 19ನೇ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು – ಮಾಲೂರು ಪುರಸಭೆ ಸದಸ್ಯೆ ಆಯ್ಕೆ ಅಸಿಂಧು

    ಇ.ಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸತ್ಯ ಬಯಲಾಗಿದೆ. ಇದು 700 ಕೋಟಿಯ ಅಕ್ರಮ ಅಲ್ಲ 2,800 ಕೋಟಿ ಅಕ್ರಮ. 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ ಆಗಿದೆ ಎನ್ನಲಾಗಿದೆ.

    ಕೇವಲ 50:50 ಅನುಪಾತದಲ್ಲಷ್ಟೇ ಅಲ್ಲ, 60:40 ಅನುಪಾತದಲ್ಲೂ ಮೋಸ ಆಗಿದೆ. ಲೇಔಟ್‌ಗೆ ಲೇಔಟ್‌ಗಳೇ ಅಕ್ರಮ ಮಾಡಿರೋದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮುಡಾದ ಇಬ್ಬರು ಮಾಜಿ ಆಯುಕ್ತರಿಂದ ಅಕ್ರಮದ ಸರಮಾಲೆ ನಡೆದಿದೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಅಕ್ರಮ ಲೇಔಟ್‌ಗಳ ನಿರ್ಮಾಣ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಟಕ್ಕರ್‌ ಕೊಡಲು ಮಂಡ್ಯದಲ್ಲಿ ಹೆಚ್‌ಡಿಕೆಗೆ ಬೃಹತ್ ಅಭಿನಂದನಾ ಸಮಾವೇಶ

    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್‌ಗಳನ್ನೇ ಮುಡಾ ಕಬ್ಜಾ ಮಾಡಿತ್ತು. ಕನ್ವರ್ಷನ್ ಲೇಔಟ್‌ಗಳಲ್ಲೂ ಅಕ್ರಮ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

  • MUDA Case | ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ – ಹೆಚ್‌ಡಿಕೆ

    MUDA Case | ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ – ಹೆಚ್‌ಡಿಕೆ

    – ಇಡಿ ಸೀಳುನಾಯಿ ಆದ್ರೆ ನಿಮ್ಮ ಎಸ್‌ಐಟಿ ಏನು? ಅಂತ ಪ್ರಶ್ನೆ

    ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Case) ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಡಾ ಅಕ್ರಮದ ಬಗ್ಗೆ ಇಡಿ ಲೋಕಾಯುಕ್ತಗೆ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಸರ್ಕಾರ ಮತ್ತು ಸಚಿವರು ಆಲಿಬಾಬಾ 40 ಕಳ್ಳರಿ ರೀತಿ. ಇಡಿ ಪತ್ರಕ್ಕೂ ಕೇಂದ್ರ ಸರ್ಕಾರಕ್ಕೂ ಏನ್ ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್‌ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯಿತ್ತಿದೆ. ಇಡಿಯವರಿಗೆ ಕೇಂದ್ರ ಸರ್ಕಾರ (Central Government) ಸೂಚನೆ ಕೊಟ್ಟಿಲ್ಲ. ಮುಡಾ ಕೇಸ್‌ನಲ್ಲಿ ರಾಜ್ಯಪಾಲರಿಗೆ ದೂರು ನೀಡಿರೋರೆ ಇಡಿಗೂ (ED) ದೂರು ಕೊಟ್ಟಿದ್ದಾರೆ. ಮುಡಾದಲ್ಲಿ ಹಣಕಾಸು ವ್ಯವಹಾರ ನಡೆದಿರೋ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. ಅದರ ಮೇಲೆ ಇಡಿ ತನಿಖೆ ನಡೆಸಿದೆ, ಮಾಹಿತಿ ಕೊಟ್ಟಿದೆ ಎಂದು ಹೇಳಿದ್ದಾರೆ.

    ಲೋಕಾಯುಕ್ತ ಅಧಿಕಾರಿಗಳು (Lokayukta Officers) ಸರ್ಕಾರದ ಅಧೀನದಲ್ಲಿ ಬರೋರು. ಇವತ್ತು ಎಷ್ಟು ಜನ ಮಂತ್ರಿಗಳು ಸಮಜಾಯಿಷಿ ಕೊಡ್ತಿದ್ದಾರೆ. ಇಡಿಯನ್ನ ಕೃಷ್ಣಭೈರೇಗೌಡರು ಸೀಳು ನಾಯಿ ಅಂದಿದ್ದಾರೆ. ಅವರಿಗೆ ಹ್ಯಾಟ್ಸ್ ಆಫ್ ಮಾಡೋಣ. ಇಡಿ ಸೀಳು ನಾಯಿ ಆದರೆ ನಿಮ್ಮ ಎಸ್‌ಐಟಿ ಏನು? ಎಸ್‌ಐಟಿ ಅವರು ಏನು ಮಾಡಿದ್ರು. ನಿಮ್ಮ ಸರ್ಕಾರದಲ್ಲಿ ಎಷ್ಟು ಎಸ್‌ಐಟಿ (SIT) ಮಾಡಿದ್ದೀರಾ? 17-18 ಎಸ್‌ಐಟಿ ಮಾಡಿದ್ದೀರಾ. ಸಹೋದರ ರೇವಣ್ಣನ ಕೇಸ್ ನಲ್ಲಿ ಯಾವ ರೀತಿ ನಡೆದುಕೊಂಡ್ರಿ. ಮಾಜಿ ಪ್ರಧಾನಿಗಳ ಮನೆಗೆ ಪೊಲೀಸರನ್ನ ನುಗ್ಗಿಸಿ ರೇವಣ್ಣನನ್ನ ಅರೆಸ್ಟ್ ಮಾಡಿಸಿದ್ರಿ. ನಿಮಗೆ ಯಾವ ನೈತಿಕತೆ ಇದೆ? ರೇವಣ್ಣ ನಿಮಗೆ ಏನ್ ಮಾಡಿದ್ದ? 5 ವರ್ಷ ಕೇಸನ್ನ ಯಾರಿಂದಲೋ ದೂರು ಪಡೆದು ಏನೇನು ನಡೆಸಿದ್ದೀರಾ ನೀವು, ಎಲ್ಲವೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನೂ ಹಾಸನ ಜನಕಲ್ಯಾಣ ಸಮಾವೇಶ ಕುರಿತು ಮಾತನಾಡಿ, ಹಾಸನದಲ್ಲಿ ಅದೇನೋ ಸಮಾವೇಶ ಮಾಡ್ತಿದ್ದಾರಂತೆ, ಸಾಂತ್ವನ ಹೇಳೋಕೆ ಹೋಗ್ತಾರಂತೆ. ಯಾರಿಗೆ ಸಾಂತ್ವನ ಹೇಳ್ತೀಯಪ್ಪ? ಅ ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿದ್ರಿ. ಯಾರನ್ನಾದ್ರು ಒಬ್ಬರನ್ನ ಅರೆಸ್ಟ್ ಮಾಡಿದ್ರಾ? ಆ ವಿಡಿಯೋ ಬಿಟ್ಟೋರನ್ನ ಅರೆಸ್ಟ್ ಮಾಡಿದ್ರಾ? ಇದು ನಿಮ್ಮ ಎಸ್‌ಐಟಿ ತನಿಖೆನಾ? ಇದೆಲ್ಲದ್ದಕ್ಕೂ ಕಾಲ ಒಂದು ದಿನ ಉತ್ತರ ಕೊಡುತ್ತೆ. ಸತ್ಯಗಳು ಹೊರಗೆ ಬರುತ್ತೆ. ಕೃಷ್ಣಭೈರೇಗೌಡರೇ ನೀವು ಹೇಗೆ ನಡೆದುಕೊಳ್ತೀರಾ, ನಿಮ್ ಸರ್ಕಾರ ಹೇಗೆ ನಡೆದುಕೊಳ್ತಿದೆ, ಪರಮೇಶ್ವರ್ ಹೇಳಿಕೆ ನೋಡಿದೆ. ಇವರನ್ನು ದೇವರೇ ಕಾಪಾಡಬೇಕು. ಆಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತಾಗಿದೆ ಇವರದ್ದು. ಹೇಳಿಕೆ ಕೊಡೋಕೆ ಸಚಿವರು ಕ್ಯೂ ನಿಂತಿದ್ದಾರೆ. ಈ ರಾಜ್ಯ ಸರ್ಕಾರ ಆಲಿಬಾಬಾ ಮತ್ತು 40 ಮಂದಿ ಕಳ್ಳರ ಸಂತೆ ಎಂದು ಲೇವಡಿ ಮಾಡಿದ್ದಾರೆ.

  • ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ – ಕೃಷ್ಣಭೈರೇಗೌಡ ಲೇವಡಿ

    ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ – ಕೃಷ್ಣಭೈರೇಗೌಡ ಲೇವಡಿ

    ಗದಗ: ಮುಡಾ ಹಗರಣ (MUDA Scam) ವಿಚಾರದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ. ಇದು ಪೊಲಿಟಿಕಲ್ ಅಟ್ಯಾಕ್ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದರು.

    ಬುಧವಾರ ನಗರದ ತೋಂಟದಾರ್ಯ ಶಿವಾನುಭವ ಮಂಟಪದಲ್ಲಿ ನಡೆದ ರಾಜಕೀಯ ಸಂತ ಡಿ.ಆರ್ ಪಾಟೀಲ ಗ್ರಂಥ ಬಿಡುಕಡೆ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಡಿ ಎಂಬುದು ಜಾರಿ ನಿರ್ದೇಶನಾಲಯ (ED) ಅಲ್ಲ, ಅದು ರಾಜಕೀಯವಾಗಿ ವಿಚಂಟಿಂಗ್ ಏಜೆನ್ಸಿ ಅದು. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋಕೆ. ವಿರೋಧ ಪಕ್ಷದ ನಾಯಕರನ್ನು ಬಲಿಯಾಕಲಿಕ್ಕೆ ಅಷ್ಟೇ ಇಡಿ ಇರುವ ಉದ್ಯೋಗ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಅವರು ಇಲ್ಲಿಯವರಗೆ ಯಾರ ಮೇಲೆ ಕೇಸ್ ಹಾಕಿದ್ದಾರೆ? ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಕಪ್ಪುಹಣ ಇದ್ದವರ ಮೇಲೆ ಕೇಸ್ ಹಾಕಿದ್ದಾರಾ? ಸ್ವಿಸ್ ಬ್ಯಾಂಕ್‌ನಲ್ಲಿ ದುಡ್ಡು ಇಟ್ಟವರ ಮೇಲೆ ಕೇಸ್ ಹಾಕಿದ್ದಾರಾ? ಇಂತಹ ಒಬ್ಬರ ಮೇಲೆ ಇಡಿ ಕೇಸ್ ಹಾಕಿರುವುದನ್ನು ತೋರಿಸಿ ಅಂತ ಪ್ರಶ್ನೆ ಮಾಡಿದರು. ಇಡಿ ಎಂಬುದು ಬಿಜೆಪಿಯ ಒಂದು ಅಂಗ ಸಂಸ್ಥೆ. ಈ ಅಂಗ ಸಂಸ್ಥೆ ಕೆಲಸ, ರಾಜಕೀಯ ವಿರೋಧಿಗಳನ್ನು ಬಲಿಯಾಗುವುದು. ಇಡೀ ದೇಶದಲ್ಲಿ ಬಿಜೆಪಿವರು ಅದನ್ನೆ ಮಾಡಿದ್ದಾರೆ. ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೋದು ಇವರ ಕೆಲಸವಾಗಿದೆ ಎಂದು ಆರೋಪಿಸಿದರು.

    ಕರ್ನಾಟಕ ಉಪಚುನಾವಣೆಯಲ್ಲಿ 3 ಸ್ಥಾನ ಕಾಂಗ್ರೆಸ್ ಗೆದ್ದ ಮೇಲೆ, ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕಳೆದ ವಿಧಾನ ಸಭೆ ಹಾಗೂ ಉಪ ಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ ಮೇಲೆ ಬಿಟ್ಟಿದಾರೆ. ಇದು ಪೊಲಿಟಿಕಲ್ ಅಟ್ಯಾಕ್. ಬಿಜೆಪಿನವರು ಜನಗಳ ಬಳಿ ಮತ ಪಡೆದು ಗೆಲ್ಲಲಾಗದೇ ನಿರಾಸೆಯಲ್ಲಿ ಇಡಿಯನ್ನ ಛೂ ಬಿಟ್ಟಿದಾರೆ. ಅವರನ್ನು ನಾವು ಲೀಗಲ್ ಆಗಿ ಎದುರಿಸುತ್ತೆವೆ, ಜನತಾ ನ್ಯಾಯಾಲಯದಲ್ಲಿ ಪ್ರಜಾಪ್ರಭುತ್ವ ಮುಖಾಂತರ ಎದುರಿಸುತ್ತೆವೆ. ಅವರದ್ದು ಬರೀ ಬೋಗಸ್ಸು, ಸುಳ್ಳು, ಜನರನ್ನು ಬೇರೆಕಡೆ ಸೆಳೆಯಲು 6 ತಿಂಗಳಿಂದ ಪ್ರಯತ್ನ ಮಾಡ್ತಿದ್ದಾರೆ. ಫೇಲ್ ಆದ್ರೂ ಬಿಡ್ತಿಲ್ಲ. ಇದೊಂದು ರಾಜಕೀಯ ಪಿತೂರಿ ಅದು ಅಂದ್ರು.

    ಇನ್ನು ವಕ್ಫ್ ಬೋರ್ಡ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಮ್ ಪ್ರತ್ಯೇಕ ಹೋರಾಟ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಯಾವುದೋ ವಿಷಯ ತೆಗೆದುಕೊಂಡು. ಒಬ್ಬರ ಮೇಲೆ ಒಬ್ಬರು ಕೈ ಸಾಧಿಸಲು ಅವರ ಆಂತರಿಕ ರಾಜಕೀಯ ಕಚ್ಚಾಟವದು. ಬಿಜೆಪಿನವರ ಅವಧಿಯಲ್ಲಿ ಸುಮಾರು 4 ಸಾವಿರ ಆಸ್ತಿ ವಕ್ಫ್ ಖಾತೆಗೆ ಮಾಡಿಕೊಟ್ಟಿದ್ದಾರೆ. ಆಗ ಇವರೆಲ್ಲಾ ಎಲ್ಲಿ ಹೋಗಿದ್ರು? ಬಿಜೆಪಿನವರು ಹೋರಾಟ ಮಾಡ್ತಿರುವುದು ಜನ್ರನ್ನು ಯಾಮಾರಿಸಲು. ಕಾಂಗ್ರೆಸ್ ಸರ್ಕಾರದ ಮೇಲೆ ಇರುವ ಜನ್ರ ಅಭಿಮಾನ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಜನರ ಮನಸ್ಸು ಬೇರೆಕಡೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ ಎಂಧು ಕಿಡಿ ಕಾರಿದರು.

  • ಮುಡಾ ಕೇಸ್‌ – ಇ.ಡಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ: ಸಿದ್ದರಾಮಯ್ಯ

    ಮುಡಾ ಕೇಸ್‌ – ಇ.ಡಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ: ಸಿದ್ದರಾಮಯ್ಯ

    – ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟನೆ

    ಮಂಡ್ಯ: ಇ.ಡಿಗೆ (ED) ತನಿಖೆ ಮಾಡಲು ಅಧಿಕಾರವೇ ಇಲ್ಲ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಟೀಕಿಸಿದರು.

    ಮಂಡ್ಯದ ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಇಡಿ ಬಂದಿರೋದು ರಾಜಕೀಯ ಪ್ರೇರಿತವಾಗಿದೆ. ನಾಳೆ ನ್ಯಾಯಾಲಯದಲ್ಲಿ ಕೇಸ್ ಬರ್ತಾ ಇದೆ. ಸಿಂಗಲ್ ಜಡ್ಜ್ ಬೆಂಚ್‌ನಲ್ಲಿ ಬರುತ್ತೆ. ನಾವು ಹಾಕಿರೋ ಅಪೀಲು ಅದು. ಈಗ ಇ.ಡಿ ಅವರು ಮಾಡ್ತಾ ಇದಾರೆ ಅಂದ್ರೆ ಏನು ಅರ್ಥ? ಇ.ಡಿ ಅವರಿಗೆ ಯಾವುದೇ ಅಧಿಕಾರವೂ ಇಲ್ಲ. ಕೋರ್ಟ್ ಮೇಲೆ ಒತ್ತಡ ಹಾಕಲು ಹೀಗೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಮಾಡ್ತಾ ಇದ್ದಾರೆ. ತನಿಖೆ ಮಾಡಿ ಅವರು ವರದಿ ನೀಡ್ತಾರೆ. ಲೋಕಾಯುಕ್ತ ಮೇಲೆ ಒತ್ತಡ ಹಾಕಲು ಮಾಡ್ತಾ ಇದ್ದಾರೆ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಮುಡಾದಲ್ಲಿ 700 ಕೋಟಿ ಅವ್ಯವಹಾರ – ಬಡವರ ಸೈಟು ಶ್ರೀಮಂತರ ಪಾಲು: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ

    ಇಡಿಗೆ ತನಿಖೆ ಮಾಡಲು ಅಧಿಕಾರ ಇಲ್ಲ. ರಾಜ್ಯಾಪಾಲರು ತನಿಖೆ ಮಾಡಿ ಅಂತಾ ಲೋಕಾಯುಕ್ತಾಗೆ ಹೇಳಿರೋದು. ಕೋರ್ಟ್ ಸಹ ಡಿ.24ಕ್ಕೆ ತನಿಖೆ ವರದಿ ನೀಡಿ ಅಂತಾ ಹೇಳಿದ್ದಾರೆ. ಈಗ ಇಡಿ ಯಾಕೆ ಲೆಟರ್ ಬರೆಯುತ್ತಾರೆ? ರಾಜಕೀಯವಾಗಿ ಇಡಿ ಈ ಕೇಸ್ ಮಾಡ್ತಾ ಇದೆ. ತನಿಖೆ ಮಾಡಿ ಈಗ ಯಾಕೆ ಮಾಹಿತಿಯನ್ನು ಸೋರಿಕೆ ಮಾಡ್ತಾ ಇದ್ದಾರೆ. ಪಿಟಿಐ ಹಾಗೂ ಮಾಧ್ಯಮಗಳಿಗೆ ರಿಲೀಜ್ ಮಾಡಿರೋದು ಕಾನೂನು ಬಾಹಿರ ಎಂದು ವಿರೋಧ ವ್ಯಕ್ತಪಡಿಸಿದರು.

    ಡಿಕೆಶಿಯಿಂದ ಒಪ್ಪಂದ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋದು ಎಂದು ಸ್ಪಷ್ಟಪಡಿಸಿದರು.

    ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಆಗಲ್ಲ. ನಾನು ಇದುವರೆಗೆ ಹೇಳಿಲ್ಲ. ಯಾರು ಹೇಳ್ತಾರೆ ಅನ್ನೋದು ಮುಖ್ಯವಲ್ಲ. ಹೈಕಮಾಂಡ್ ಸೂಚನೆ ನೀಡಬೇಕು. ಆ ಬಳಿಕ ನಾನು ನಿರ್ಧಾರ ಮಾಡಬೇಕು. ಹೈಕಮಾಂಡ್ ಹೇಳಿಯೂ ಇಲ್ಲ, ನಾನು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

    ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದಲ್ಲಿ ಸಮಾವೇಶ ನಡೆಯುತ್ತಿದೆ. ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಾಗಿ ಜನರು ಕರೆದುಕೊಂಡು ಬರ್ತಾರೆ. ಹೆಸರು ಯಾವುದು ಬದಲಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷವೂ ಸೇರಿಕೊಂಡು ಮಾಡ್ತಾ ಇದೆ ಎಂದರು.

  • MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ

    MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ

    – ತನಿಖೆ ಪ್ರಗತಿ ಬಗ್ಗೆ ಲೋಕಾಯುಕ್ತಕ್ಕೆ ಇಡಿ ಪತ್ರ
    – ಮಾಲೀಕ ದೇವರಾಜು ನಡೆಯೇ ಅನುಮಾನಾಸ್ಪದ
    – ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್‌ ಹಂಚಿಕೆ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) ಭೂ ಸ್ವಾಧೀನ ಪ್ರಕ್ರಿಯೆಯೇ ಅಕ್ರಮ ಎಂದು ಹೇಳಿದೆ.

    ಮುಡಾ ಅಕ್ರಮದ ತನಿಖೆ ನಡೆಸುತ್ತಿರುವ ಇಡಿ ಲೋಕಾಯುಕ್ತ ಎಡಿಜಿಪಿಗೆ (Lokayukta ADGP)  ತನಿಖೆಯ ಪ್ರಗತಿಯ ಬಗ್ಗೆ ಪತ್ರ  ಬರೆದು ಬ್ರಹ್ಮಾಂಡ ಭ್ರಷ್ಟಾಚಾರವನ್ನು (Corruption) ಎಳೆಎಳೆಯಾಗಿ ಬಿಡಿಸಿದೆ. ಸಿಎಂ ಪತ್ನಿಗೆ ಕೊಟ್ಟಿರುವ 14 ಸೈಟ್‌ಗಳು ಸಹ ಅಕ್ರಮ ಎಂದು ಇಡಿ ಉಲ್ಲೇಖಿಸಿದೆ.

    ಜಮೀನಿನ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ವರ್ಕ್ ಆರ್ಡರ್‌ ಆದ ಜಾಗದಲ್ಲಿ ಬಡಾವಣೆ ನಿರ್ಮಿಸಿ ಫಲಾನುಭವಿಗಳಿಗೆ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲಿ 60:40 ಅನುಪಾತದಲ್ಲಿ ಸೈಟ್ ಮಂಜೂರು ಮಾಡದೇ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 14 ಸೈಟ್‌ಗಳನ್ನು ಹಂಚಿಕೆ ಮಾಡಿದ್ದನ್ನು ನೋಡಿದಾಗ ಭಾರೀ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ದೃಢವಾಗುತ್ತದೆ ಎಂದು ಇಡಿ ಹೇಳಿದೆ.

    ಇಡಿ ತನ್ನ ತನಿಖಾ ವರದಿಯ ಸಾರಾಂಶ ಪಬ್ಲಿಕ್‌ ಟಿವಿಗೆ ಲಭ್ಯವಾಗಿದ್ದು ಅದನ್ನು ಇಲ್ಲಿ ನೀಡಲಾಗಿದೆ.

    ಇಡಿ ಪತ್ರದಲ್ಲಿ ಏನಿದೆ?
    ತನಿಖೆ ಅಂಶ -1
    ಜೆ.ದೇವರಾಜು ನಡೆಯೇ ಅನುಮಾನಾಸ್ಪದ
    ಕೆಸರೆ ಗ್ರಾಮದ ವಿವಾದಿತ ಜಮೀನು ಭೂಸ್ವಾಧೀನದಿಂದ ಕೈಬಿಡುವ ಪ್ರಕ್ರಿಯೆಯೇ ಅಕ್ರಮವಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಮೀನಿನ ಮೂಲ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ.

    3 ಎಕರೆ 16 ಗುಂಟೆ ಜಮೀನು ಭೂಸ್ವಾಧೀನದಿಂದ ಕೈ ಬಿಡುವಂತೆ ಮುಡಾಗೆ ಅವರು ಪತ್ರ ಬರೆದಿಲ್ಲ. ಬದಲಾಗಿ 1997ರ ನಗರಾಭಿವೃದ್ಧಿ ಸಚಿವರಾಗಿದ್ದ ಬಚ್ಚೇಗೌಡರಿಗೆ ನೇರ ಮನವಿ ಸಲ್ಲಿಸಿದ್ದರು. ಜುಲೈ 24, 1997 ರಂದು ಮುಡಾ ಸಾಮಾನ್ಯ ಸಭೆಯಲ್ಲಿ ಡಿನೋಟಿಫಿಕೇಷನ್ ಬಗ್ಗೆ ಚರ್ಚೆ ನಡೆದಿದೆ. ದೇವರಾಜು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು.

    ದೇವರಾಜು ಜಮೀನು ಬಡಾವಣೆ ಮುಖ್ಯದ್ವಾರದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಉಪಗ್ರಹ ಆಧಾರಿತ ದೃಶ್ಯವನ್ನು ಪರಿಶೀಲಿಸಿದಾಗ ಆ ಜಮೀನು ಬಡಾವಣೆಯ ಮಧ್ಯ ಭಾಗದಲ್ಲಿರುತ್ತದೆ. ಡಿನೋಟಿಫಿಕೇಷನ್ ಪ್ರಕ್ರಿಯೆ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಡಿನೋಟಿಫಿಕೇಷನ್ ನಿರ್ಧಾರ ಕೈಗೊಂಡ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ.

    3 ಎಕರೆ ಭೂಮಿಯೇ ಜೀವನಾಧಾರ, ಬೇರೆ ಆದಾಯ ನನಗೆ ಇಲ್ಲ. ಸರ್ಕಾರಿ ನೌಕರ, ಜಮೀನಿನ ಮೇಲೆ ಅವಲಂಬಿತರಾಗಿರುವುದಿಲ್ಲ ಎಂದಿದ್ದ ದೇವರಾಜು ವಿವಾದಿತ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಲ್ಲ ಎಂದು ಇಡಿಗೆ ತಿಳಿಸಿದ್ದಾರೆ. 2003ರಲ್ಲಿ ಎ3 ಆರೋಪಿ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಜೊತೆ ಒಮ್ಮೆ ಮಾತ್ರ ಜಮೀನಿಗೆ ಭೇಟಿ ನೀಡಿದ್ದರು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದಾಗ ಅದು ಕೃಷಿ ಭೂಮಿ ಎಂದಿದ್ದರು. ಆದರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ ಬಗ್ಗೆ ದೇವರಾಜು ಸರಿಯಾದ ವಿವರಣೆ ನೀಡಿಲ್ಲ.

    ತನಿಖೆ ಅಂಶ – 2
    ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು
    ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ದೇವರಾಜುರಿಂದ 5,95,000 ರೂ.ಗಳಿಗೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. 2004ರಲ್ಲಿ ಜಮೀನು ಖರೀದಿ ಮಾಡಿದಾಗ ಅದು ಕೃಷಿ ಭೂಮಿಯೇ ಆಗಿತ್ತು. ಆದರೆ ಮುಡಾದಿಂದ ಬಡಾವಣೆ ಅಭಿವೃದ್ಧಿ ಕಾರ್ಯ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಆದರೆ ಅದಾಗಲೇ ಬಡಾವಣೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ರಸ್ತೆಗಳು ನಿರ್ಮಾಣವಾಗಿದ್ದವು ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.

    2001ರಲ್ಲೇ ಎಲ್& ಟಿ ಕಂಪನಿಗೆ ಬಡಾವಣೆ ನಿರ್ಮಾಣಕ್ಕೆಂದು ವರ್ಕ್ ಆರ್ಡರ್ ಆಗಿತ್ತು. 2003ರಲ್ಲೇ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಸಹ ಆಗಿತ್ತು.

    ಡಿಸೆಂಬರ್‌ 1, 20024 ರಂದು ರಂದು ಮೈಸೂರು ತಹಶೀಲ್ದಾರ್‌ಗೆ ಕೃಷಿಯೇತರ ಭೂಮಿ ಎಂದು ಪರಿವರ್ತಿಸುವಂತೆ ಮನವಿ ಮಾಡಲಾಗುತ್ತದೆ. ತಹಶೀಲ್ದಾರ್, ಡಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆದಿಲ್ಲವೆಂದು ನಮೂದು ಮಾಡುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಕಾನೂನು ಉಲ್ಲಂಘಿಸಿ ಭೂ ಪರಿವರ್ತನೆ ಮಾಡಲಾಗಿದೆ. ಈ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ಧರಂ ಸಿಂಗ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.

    ತನಿಖೆಯ ಅಂಶ- 3
    ಸಿದ್ದರಾಮಯ್ಯ ಪತ್ನಿಗೆ ದಾನಪತ್ರ
    2010ರಲ್ಲಿ ಪಾರ್ವತಿಗೆ ದಾನದ ರೂಪದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಜಾಗವನ್ನು ನೀಡಿದ್ದರು. 6 ವರ್ಷಗಳ ಕಾಲ ಆ ಭೂಮಿ ಸ್ಥಿತಿಗತಿ ಮಲ್ಲಿಕಾರ್ಜುನ ಸ್ವಾಮಿಗೆ ಮಾಹಿತಿಯೇ ಇರಲಿಲ್ಲವೇ? ಒಂದು ವೇಳೆ ಗೊತ್ತಿದ್ದರೆ ಯಾಕೆ ಆಕ್ಷೇಪ ಸಲ್ಲಿಸಲಿಲ್ಲ? ಈ ಎಲ್ಲಾ ಪ್ರಕ್ರಿಯೆಗಳನ್ನು ಹಗರಣದ ಭಾಗವಾಗಿಯೇ ಮಾಡಿದ್ದರಿಂದ ಆಕ್ಷೇಪ ಸಲ್ಲಿಸಿಲ್ಲ ಎನ್ನುವುದು ತಿಳಿಯುತ್ತಿದೆ. ಕೆಸರೆ ಜಾಗದ ಬದಲಾಗಿ ಪ್ರಮುಖ ಸ್ಥಳದಲ್ಲಿ ಬೆಲೆಬಾಳುವ ಸೈಟ್ ಪಡೆಯುವ ದುರುದ್ದೇಶದಿಂದಲೇ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗಿದೆ ಎನ್ನುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.

    ತನಿಖೆಯ ಅಂಶ- 4
    ಸಿದ್ದರಾಮಯ್ಯ ಪತ್ನಿ ಪಾತ್ರ ಏನು?
    2014ರಲ್ಲಿ ಪಾರ್ವತಿ ಅವರು ಪರಿಹಾರ ಕೋರಿ ಮುಡಾಗೆ ಅರ್ಜಿ ಸಲ್ಲಿಸುತ್ತಾರೆ. ಕೆಸರೆ ಗ್ರಾಮದ ತಮ್ಮ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಮುಡಾ ಬಳಸಿಕೊಂಡಿದೆ. ಸೂಕ್ತ ಪರಿಹಾರ ಕೊಡುವಂತೆ ಕೋರುತ್ತಾರೆ. ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿ ಆದ ಬಳಿಕ 2014ರಲ್ಲಿ ಪರಿಹಾರ ಕೋರಿ ಅರ್ಜಿ ಹಾಕುತ್ತಾರೆ.

    ಪಾರ್ವತಿ ಅವರ ಅರ್ಜಿ ಪರಿಗಣಿಸಿದ ಮುಡಾ 60:40ರ ಅನುಪಾತದಲ್ಲಿ ಪರಿಹಾರ ಕೊಡಲು ಒಪ್ಪಿಗೆ ಸೂಚಿಸುತ್ತದೆ. ಅಂದು ನಟೇಶ್ ಮುಡಾ ಆಯುಕ್ತರಾಗಿರುತ್ತಾರೆ. ವಿನಾಕಾರಣ ವ್ಯಾಜ್ಯ ತಪ್ಪಿಸಲು ಹಾಗೂ ಮುಡಾಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಪಾರ್ವತಿ ಅವರಿಗೆ 60:40ರ ಅನುಪಾತದಲ್ಲಿ ಪರಿಹಾರ ಕೊಡಬಹುದು ಎಂದು ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಷರಾ ಬರೆಯುತ್ತಾರೆ.

    ಪಾರ್ವತಿ ಅವರ ಅರ್ಜಿಗೆ ವಿಶೇಷ ಮನ್ನಣೆ ನೀಡಿರುವುದು ಇದರಿಂದ ಗೊತ್ತಾಗುತ್ತದೆ. ಖುದ್ದು ನಟೇಶ್ ಅವರೇ ವೈಯಕ್ತಿಕ ಹಿತಾಸಕ್ತಿಯಿಂದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಪರಿಹಾರ ರೂಪದ ಸೈಟ್‌ಗಳನ್ನು ಗುರುತಿಸಿರುತ್ತಾರೆ.

    ಪರಿಹಾರ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಗುರುತಿಸಿಕೊಳ್ಳುವ ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಹಸ್ತಕ್ಷೇಪ ಎದ್ದು ಕಾಣುತ್ತದೆ. ಖಾತೆ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿ ಹಾಗೂ ಇತರೆ ಅರ್ಜಿಗಳಲ್ಲಿ ಪಾರ್ವತಿ ಅವರ ಸಹಿಯನ್ನು ದಿನೇಶ್ ಕುಮಾರ್ ನಕಲು ಮಾಡಿರುವುದು ಕಂಡುಬಂದಿದೆ. ದಿನೇಶ್ ಕುಮಾರ್ ಅವರ ಪ್ರಭಾವದ ಬಗ್ಗೆ ಮುಡಾ ಮಾಜಿ ಆಯುಕ್ತ ನಟೇಶ್ ಕೂಡ ಹೇಳಿದ್ದಾರೆ. ಮುಡಾ ಆಯುಕ್ತರ ಪಿಎ ಜೊತೆ ದಿನೇಶ್ ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಒಟ್ಟಾರೆ ಸೈಟ್ ಹಂಚಿಕೆಯಲ್ಲಿ ಪ್ರಭಾವ ನಡೆದಿರುವುದು ಕಂಡುಬಂದಿದೆ.


    ತನಿಖೆಯ ಅಂಶ- 5
    ಪರಿಹಾರ ಸೈಟ್ ಹಂಚಿಕೆಯಲ್ಲೂ ಅಕ್ರಮ
    ಮೂರು ಎಕರೆ ಜಮೀನು ಇದ್ದ ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲೇಕೆ 60:40 ಅನುಪಾತದಲ್ಲಿ ಸೈಟ್ ಕೊಡಲಿಲ್ಲ ಎಂಬ ಗಂಭೀರ ಪ್ರಶ್ನೆ ಕಾಣುತ್ತದೆ. ಕಾಯ್ದೆ ಕಾನೂನಿನ ಪ್ರಕಾರ ಪರಿಹಾರ ರೂಪದಲ್ಲಿ ಕಮರ್ಷಿಯಲ್ ಸೈಟ್‌ಗಳನ್ನು ಕೊಡುವಂತಿಲ್ಲ. ಹೀಗಿದ್ದರೂ ಪಾರ್ವತಿಯವರಿಗೆ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆ ಮಾಡಲಾಗಿದೆ.

    ಸೈಟ್ ಮಂಜೂರು ಮಾಡಿದಾಗ ಪಾರ್ವತಿ ಅವರ ಮಗ ಯತೀಂದ್ರ ವರುಣ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಮುಡಾ ಮಂಡಳಿಯ ಸದಸ್ಯರಾಗಿದ್ದರು. ಪಾರ್ವತಿ ಅವರ ಪತಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಇದೇ ವೇಳೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಹೇಳಿಕೊಳ್ಳುವ ದಿನೇಶ್ ಕುಮಾರ್ ಅವರು ಮುಡಾದಲ್ಲಿ ಪ್ರಭಾವ ಬಳಸಿರುವ ಸಾಧ್ಯತೆಯಿದೆ.

  • ಚುನಾವಣಾ ಬಾಂಡ್‌ ಬಳಸಿ ಸುಲಿಗೆ – ಸೀತಾರಾಮನ್‌, ಬಿಜೆಪಿ ನಾಯಕರ ಮೇಲಿದ್ದ ಕೇಸ್‌ ರದ್ದು

    ಚುನಾವಣಾ ಬಾಂಡ್‌ ಬಳಸಿ ಸುಲಿಗೆ – ಸೀತಾರಾಮನ್‌, ಬಿಜೆಪಿ ನಾಯಕರ ಮೇಲಿದ್ದ ಕೇಸ್‌ ರದ್ದು

    ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‌ (Electoral Bonds) ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), ಬಿಜೆಪಿ ನಾಯಕರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ (High Court) ರದ್ದುಗೊಳಿಸಿದೆ.

    ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆರೋಪಗಳಿಗೆ ಸಾಕಷ್ಟು ಆಧಾರಗಳಿಲ್ಲದ ಕಾರಣ ಎಫ್‌ಐಆರ್‌ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ. ಈ ಮೊದಲು ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿತ್ತು.

    ನಿರ್ಮಲಾ ಸೀತಾರಾಮನ್‌ ಸೇರಿ ಹಲವರು ಚುನಾವಣಾ ಬಾಂಡ್‌ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್‌ ಐಯ್ಯರ್‌ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

    ದೂರುದಾರರ ಆದರ್ಶ್ ಐಯ್ಯರ್ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ಎಸ್‌ಐಟಿ ರಚಿಸಿ ಈ ಪ್ರಕರಣದ ತನಿಖೆ ಮಾಡಬೇಕಿದೆ. ಜನರನ್ನು ಬೆದರಿಸಿ ಹಣ ಕಬಳಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಸುಲಿಗೆ ಮಾಡಲು ಬಳಸಿಕೊಂಡಿದ್ದಾರೆ ಎಂದು ವಾದಿಸಿದ್ದರು.

    ಪ್ರಕರಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದರೆ, ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್‌ ಕುಮಾರ್‌ ಕಟೀಲ್‌ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದರು.  ಇದನ್ನೂ ಓದಿ: ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ದೂರು ಏನಿತ್ತು?
    ಒತ್ತಡದ ತಂತ್ರವಾಗಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳನ್ನು ಉಲ್ಲೇಖಿಸಿ ಕಾರ್ಪೊರೇಟ್ ಸಂಸ್ಥೆಗಳು ಸಾವಿರಾರು ಕೋಟಿಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಒತ್ತಾಯಿಸಲಾಗಿದೆ ಈ ಎಲೆಕ್ಟೋರಲ್ ಬಾಂಡ್‌ಗಳನ್ನು ಬಿಜೆಪಿ ನಾಯಕರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಗದೀಕರಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಯೋಜನೆಯು ರಾಜಕೀಯ ಉದ್ದೇಶಗಳಿಗಾಗಿ ಅಕ್ರಮ ಹಣವನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

     

  • ವಿಧಾನಸೌಧಕ್ಕೆ ತಲುಪಿದ ಇಡಿ ತನಿಖೆ – ಬೈರತಿ ಸುರೇಶ್‌ ಕಚೇರಿ ಸಿಬ್ಬಂದಿಗೆ ನೋಟಿಸ್‌

    ವಿಧಾನಸೌಧಕ್ಕೆ ತಲುಪಿದ ಇಡಿ ತನಿಖೆ – ಬೈರತಿ ಸುರೇಶ್‌ ಕಚೇರಿ ಸಿಬ್ಬಂದಿಗೆ ನೋಟಿಸ್‌

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆ ಚುರುಕುಗೊಂಡಿದ್ದು ಈಗ ಬೈರತಿ ಸುರೇಶ್‌ (Byrathi Suresh) ಅವರ ಸಚಿವಾಲಯದ ಸಿಬ್ಬಂದಿಗೂ ನೋಟಿಸ್‌ ನೀಡಲಾಗಿದೆ.

    ವಿಧಾನಸೌಧದ ನಗಾರಭಿವೃದ್ಧಿ ಸಚಿವಾಲಯದ ಅಧಿಕಾರಿಗಳಿಗೆ ನೋಟಿಸ್‌ ನೀಡಿದ ಇಡಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

    ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಮನ್ಸ್ ನೀಡಿದ ಇಡಿ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    ಮುಡಾ ನಗರಾಭಿವೃದ್ದಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ಕಾರ್ಯದರ್ಶಿಗೆ ನೋಟಿಸ್‌ ನೀಡಲಾಗಿದೆ.

     

  • ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ (Chief Minister) ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರ‌ನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಇಡಿ ಮುಂದೆ ಹಾಜರಾದ ಮಲ್ಲಿಕಾರ್ಜುನ ಸ್ವಾಮಿ (Mallikarjunaswamy) ಅವರು ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದರು. ಸಂಜೆ ವೇಳೆಗೆ ವಿಚಾರಣೆ ಮುಗಿದ ಬಳಿಕ ಮನೆಗೆ ತೆರಳಿದರು. ಎ-4 ಹಾಗೂ ಭೂಮಾಲೀಕ ದೇವರಾಜು ಬಳಿ ಜಮೀನು ಪಡೆದು ಸಿಎಂ ಪತ್ನಿಗೆ ಎ-3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಕುಂಕುಮ ರೂಪದಲ್ಲಿ ಭೂಮಿ ನೀಡಿದ್ದರು. ಮುಡಾ ಪ್ರಕರಣದಲ್ಲಿ ಇಡಿ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿಎಂ ಪತ್ನಿ ಪಾರ್ವತಿ ಹಾಗೂ ಸಿದ್ದರಾಮಯ್ಯ (Siddaramaiah) ಅವರಿಗೂ ನೋಟಿಸ್‌ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ

    ಮುಡಾ ತನಿಖೆಯ ಸಂಬಂಧ ಈವರೆಗೆ ಯಾರ‍್ಯಾರಿಗೆ ಇಡಿ ನೋಟಿಸ್‌?

    * ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
    * ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
    * ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
    * ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜು ವಿಚಾರಣೆ
    * ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
    * ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
    * ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
    * ನವೆಂಬರ್ 12 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ವಿಚಾರಣೆ
    * ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ವಿಚಾರಣೆ
    * ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
    * ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮಾಳಿಗೆ ಶಂಕರ್, ಮರೀಗೌಡ ಆಪ್ತ
    ಶಿವಣ್ಣ ವಿಚಾರಣೆ
    * ನವೆಂಬರ್‌ 18ರಂದು ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ

    ಇನ್ನೂ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ಸೋಮಣ್ಣ ಮುಖಾಮುಖಿ ಆಗಿದ್ರು. ಸಿಎಂ ಆಗಮಿಸುವಾಗ ಸೋಮಣ್ಣ ಹೊರಡ್ತಿದ್ರು. ಈ ವೇಳೆ, ಸಿಎಂ ಬಳಿ ಮುಡಾ ಕೇಸ್ ಪ್ರಸ್ತಾಪಿಸಿದ ಸೋಮಣ್ಣ, ಮುಂಚೆಯೇ ಸೈಟ್ ವಾಪಸ್ ಮಾಡಿದ್ರೆ ಇಷ್ಟೆಲ್ಲಾ ರಾದ್ಧಾಂತ ಆಗ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ರು. ಅದಕ್ಕೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡ್ರು. ಹಾಗಿದ್ರೆ ಸದನದಲ್ಲೇಕೆ 65 ಕೋಟಿ ಸೈಟ್ ಅಂತಾ ಹೇಳಿದ್ದು ಎಂದು ಸೋಮಣ್ಣ ಕೇಳಿದ್ರು.. ಅದಕ್ಕೆ ಅದು ಹಾಗಲ್ಲ.. ನಾನು ಹೇಳಿದ್ದು ಬೇರೆ ಎಂದು ಸಿಎಂ ಸಮಜಾಯಿಷಿ ಕೊಟ್ರು.. ದೇವರು, ನಂಬಿಕೆಗಳ ವಿಚಾರಗಳು ಪ್ರಸ್ತಾಪ ಆದ್ವು. ನಾನು ದೇವರಲ್ಲಿ ನಂಬಿಕೆ ಇಟ್ಟಿಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೊಂಡ್ರು.

    ಈ ಮಧ್ಯೆ, ಜಿಟಿ ದೇವೇಗೌಡ ಸಂಬಂಧಿ ಮಹೇಂದ್ರಗೆ ಅಕ್ರಮವಾಗಿ 50:50 ಸೈಟ್ ನೀಡಿದ ಪ್ರಕರಣ ಸಂಬಂಧ ಇನ್ನಷ್ಟು ವಿಚಾರ ಬಯಲಾಗಿದೆ. 2020ರಲ್ಲಿ ಮಹೇಂದ್ರ ಜಮೀನು ಖರೀದಿಸಿದ್ರು. ಇದಾದ ಏಳೇ ತಿಂಗಳಿಗೆ ಮಹೇಂದ್ರಗೆ 50:50 ಅನುಪಾತದಲ್ಲಿ 19 ಸೈಟ್ ಹಂಚಿಕೆ ಆಗಿದ್ವು. ಮುಡಾ ವಶಪಡಿಸಿಕೊಂಡ ದೇವನೂರು ಭೂಮಿಯಲ್ಲಿ ಲೇಔಟ್ ಅಭಿವೃದ್ಧಿ ಆಗಿ, ಮನೆ ಕಟ್ಟಿದ ಸ್ಥಳದಲ್ಲಿನ ಜಮೀನನ್ನು ಮಹೇಂದ್ರ ಖರೀದಿಸಿದ್ದಾದ್ರೂ ಹೇಗೆ ಎಂಬುದೇ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್

  • ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    – ಮಾಜಿ ಮುಡಾ ಅಧಿಕಾರಿಗಳ ಸ್ಫೋಟಕ ಹೇಳಿಕೆ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಂಚಿಕೆ ಹಗರಣ (MUDA Scam) ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆಯಿದೆ.

    ಹೌದು. ಸಿಎಂ ವಿರುದ್ಧದ ಜಾರಿ ನಿರ್ದೇಶನಾಲಯದ (ED) ತನಿಖೆ ತೀವ್ರಗೊಳ್ಳುತ್ತಿದ್ದಂತೆ ಅಧಿಕಾರಿಗಳು ಈಗ ಇಬ್ಬರು ಸಚಿವರ ಹೆಸರನ್ನು ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಮಾಹಿತಿ ಸಿಕ್ಕಿದೆ.

    ಇಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡುವಾಗ ಇಬ್ಬರು ಸಚಿವರು ಪ್ರಭಾವ ಬೀರಿದ್ದಾರೆ. ಪ್ರಮುಖ ಸಚಿವರಿಂದಲೇ ಅಕ್ರಮ ನಡೆದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೀದರ್ ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

     

    ಮುಡಾ ಮಾಜಿ ಅಧಿಕಾರಿಗಳ ಹೇಳಿಕೆಯನ್ನು ಬೆನ್ನತ್ತಿರುವ ಇಡಿ ಈಗ ದಾಖಲೆ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಒಂದು ವೇಳೆ ಅಧಿಕಾರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಿಕ್ಕಿದರೆ ಇಡಿ  ಇಬ್ಬರು ಸಚಿವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಡಾದಲ್ಲಿ ಭಾರೀ ಅಕ್ರಮ – ಹಂಚಿಕೆಯಾದ 2 ಸಾವಿರ ಸೈಟ್‌ಗಳಿಗೆ ಮೂಲ ದಾಖಲೆ ಇಲ್ಲ

    ಮುಡಾ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿರುವ ಕಾನೂನು ತಂಡದ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.