Tag: ED Notice

  • ಮುಡಾದಲ್ಲಿ ನನ್ನ ಪತ್ನಿಗೆ ಇಡಿ ಕೊಟ್ಟಿರೋ ನೋಟಿಸ್ ರಾಜಕೀಯ ಪ್ರೇರಿತ – ಸಿಎಂ

    ಮುಡಾದಲ್ಲಿ ನನ್ನ ಪತ್ನಿಗೆ ಇಡಿ ಕೊಟ್ಟಿರೋ ನೋಟಿಸ್ ರಾಜಕೀಯ ಪ್ರೇರಿತ – ಸಿಎಂ

    ಬೆಂಗಳೂರು: ಮುಡಾದಲ್ಲಿ (MUDA) ನನ್ನ ಪತ್ನಿಗೆ ಇಡಿ ಕೊಟ್ಟಿರುವ ನೋಟಿಸ್ ರಾಜಕೀಯ ಪ್ರೇರಿತ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಕೇಸ್‌ನಲ್ಲಿ ನನ್ನ ಪತ್ನಿಗೆ ಇಡಿಯವರು ನೋಟಿಸ್ ಕೊಟ್ಟಿದ್ದರು. ಅದಕ್ಕೆ ಹೈಕೋರ್ಟ್ ತಡೆ ನೀಡಿದೆ. ಯಾಕೆ ಇಷ್ಟು ಆತುರ ಮಾಡ್ತಿದ್ದೀರಾ? ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡಬೇಕಾ? ಬೇಡವಾ? ಎನ್ನುವ ಬಗ್ಗೆ ಚರ್ಚೆ ಆಗ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಹೀಗಾಗಿ ಬಗ್ಗೆ ಆದೇಶ ಕಾಯ್ದಿರಿಸಿದೆ. ಈ ಹಂತದಲ್ಲಿ ನೀವು ಆತುರ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಕೋರ್ಟ್ ತಡೆ ಕೊಟ್ಟಿದೆ ಎಂದರು.ಇದನ್ನೂ ಓದಿ: 2ನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್

    ಇಡಿ ನೋಟಿಸ್ ರಾಜಕೀಯ ಪ್ರೇರಿತನಾ ಎಂಬ ಪ್ರಶ್ನೆಗೆ ಉತ್ತರಿದ ಅವರು, ಇಡಿ ನೋಟಿಸ್ ರಾಜಕೀಯ ಪ್ರೇರಿತವಲ್ಲದೇ ಇನ್ನೇನು? ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು.

    ಇನ್ನೂ ಮುಡಾ ಕೇಸ್ ಸಿಬಿಐಗೆ ತನಿಖೆ ಕೊಡುವ ಬಗ್ಗೆ ಆತಂಕ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಯಾಧೀಶರು ಏನು ಮಾಡುತ್ತಾರೆ ಎಂದು ಗೊತ್ತಿಲ್ಲ. ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ. ನನಗೆ ಯಾಕೆ ಆತಂಕ ಆಗುತ್ತದೆ. ನನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

  • ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ

    ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ

    ಬೆಂಗಳೂರು: ಪಾರ್ವತಿ ಸಿದ್ದರಾಮಯ್ಯ ಅವರಿಗೆ ಇಡಿ ನೋಟಿಸ್ ನೀಡಿರುವುದು ಎಲ್ಲ ಬಾರಿಯೂ ರಾಜಕೀಯ ಎನ್ನಲು ಸಾಧ್ಯವಿಲ್ಲ. ನೋಟಿಸ್ ಕೊಟ್ಟಿದ್ದಾರೆ ಅವರು ಉತ್ತರ ಕೊಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಪತ್ನಿ, ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ಎಲ್ಲ ಸಮಯದಲ್ಲಿಯೂ ಅದನ್ನು ರಾಜಕೀಯ ಎನ್ನಲು ಸಾಧ್ಯವಿಲ್ಲ. ಅದು ಹೊಸದೇನಲ್ಲ. ನಾವು ರಾಜಕೀಯವಾಗಿ ನೋಡಬಾರದು. ನೋಟಿಸ್‌ಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ. ಪ್ರತಿಕ್ರಿಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾನು ಆ ಡಿಪಾರ್ಟ್ಮೆಂಟ್ ಹೆಡ್ ಅಲ್ಲ. ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಡಬೇಕು ಅಷ್ಟೇ ಎಂದರು.ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

    ಇದೇ ವೇಳೆ ದಲಿತ ನಾಯಕರ ಸಭೆ ಕುರಿತು ಮಾತನಾಡಿ, ಸಭೆಯಲ್ಲಿ ನಾನು ಕೇವಲ ಸದಸ್ಯ. ಮಾನವ ಬಂಧುತ್ವ ವೇದಿಕೆ ಮೂಲಕ ಮೊದಲಿನಿಂದಲೂ ಪಕ್ಷ ಸಂಘಟನೆ ಮಾಡ್ತಿದ್ದೇವೆ. ಈಗ ಮಾಡುತ್ತಿರುವುದಲ್ಲ. ಮೊದಲಿನಿಂದಲೂ ಟ್ರೈನಿಂಗ್ ಕೊಡುತ್ತಿದ್ದೇವೆ. ಮೊದಲಿನಿಂದಲೂ ವೇದಿಕೆ ಮೂಲಕ ನಡೆದಿದೆ. ಇನ್ನೂ ದಲಿತ ಸಚಿವರ ಸಭೆ ಮುಂದೂಡಿಕೆ ವಿಚಾರವಾಗಿ ನನ್ನನ್ನು ಕೇಳಿದ್ರ‍್ರೆ ಹೇಗೆ ನೀವು ಗೃಹ ಮಂತ್ರಿಯವರನ್ನ ಕೇಳಬೇಕು. ನಾವು ಸದಸ್ಯರಷ್ಟೆ. ನೀವು ಅವರನ್ನೇ ಕೇಳಬೇಕು ಎಂದರು.

    ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಜಮೀರ್ ಹೇಳಿಕೆ ವಿಚಾರವಾಗಿ, ಉತ್ತರಕ್ಕೆ ನಾನೇನು ಮಾಡಲಿ. ನಾನು ಹೈಕಮಾಂಡ್ ಅಲ್ಲ. ಅದೇನು ಪ್ರಯೋಜನ ಇಲ್ಲ, ಎಲ್ಲ ಅವರವರ ಸ್ಥಾನದಲ್ಲಿ ಇದ್ದಾರೆ. ನಮ್ಮ ಡಿಮಾಂಡ್‌ನ್ನು ಪ್ರತಿದಿನ ಹೇಳಬೇಕು ಅಂತಿಲ್ಲ. ಒಂದು ಸಲ ಹೇಳಿದ್ರೆ ಸಾಕು. ಅದು ಹೈಕಮಾಂಡ್‌ಗೆ ಇರಸುಮುರುಸು ಆಗಿದೆ. ಅದಕ್ಕೆ ಹೈಕಮಾಂಡ್ ಹೇಳಿರಬೇಕು. ಈಗ ಚರ್ಚೆ ನಡೆಯುತ್ತಿಲ್ಲ, ಅದೆಲ್ಲ ಅನಾವಶ್ಯಕ. ಮಾತನಾಡಿದರೆ ಏನು ಪ್ರಯೋಜನ? ಅನವಶ್ಯಕ ಚರ್ಚೆ ಯಾಕೆ? ಗಾಳಿಯಲ್ಲಿ ಸುತ್ತೋದು ಯಾಕೆ? ದೆಹಲಿಗೆ ಹೋಗುವುದು ಫಿಕ್ಸ್ ಆಗಿಲ್ಲ. ಕಾರ್ಯಕ್ರಮ ಮುಂದಕ್ಕೆ ಹೋಗಿದೆ ಎಂದು ಹೇಳಿದರು.ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

  • ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

    ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

    ಬೆಂಗಳೂರು: ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದರು.ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ, ಬೈರತಿ ಸುರೇಶ್‌ಗೆ ನೋಟಿಸ್ ವಿಚಾರವಾಗಿ ಇದೆಲ್ಲಾ ರಾಜಕೀಯ ಪ್ರೇರಿತ. ನನ್ನ ಕೇಸ್‌ನಲ್ಲಿಯೂ ಇದೇ ರೀತಿ ಆಗಿತ್ತು. ಎರಡು ಘಟನೆಗಳು ಒಂದೇ ಸಲ ನಡೆಯಲ್ಲ. ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೀತಿದೆ. ಈ ವೇಳೆ ಬೇರೆ ಸಂಸ್ಥೆಯವರು ತನಿಖೆ ಮಾಡೋದಕ್ಕೆ ಆಗಲ್ಲ ಎಂದು ಅನೇಕ ತೀರ್ಪಿನಲ್ಲಿದೆ. ಅದೇನು ಎಂದು ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ನನ್ನ ಕೇಸ್‌ನಲ್ಲಿ ಸಿಬಿಐ ಮತ್ತು ಇಡಿಯವರು ತನಿಖೆ ಮಾಡುತ್ತಿದ್ದರು. ಈ ರೀತಿ ಮಾಡೋದಕ್ಕೆ ಬರಲ್ಲ ಎಂದು ಕೆಲವು ಜಡ್ಜ್ಮೆಂಟ್ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಇದೆಲ್ಲ ರಾಜಕೀಯ ಪ್ರೇರಿತ ಎಂದರು.

    ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಬಗ್ಗೆ ನಾಯಕರ ಹೇಳಿಕೆ ವಿಚಾರವಾಗಿ, ಅವರು ಯಾರು ಏನೂ ಮಾತಾಡಿಲ್ಲ. ಸರ್ಕಾರ ಸುಭದ್ರವಾಗಿದೆ. ನಾವೆಲ್ಲಾ ಸಿಎಂ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಯಾವ ಐದು ವರ್ಷವೂ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

     

  • ಇಡಿ ನೋಟಿಸ್‌ನಿಂದ ಸಿಎಂಗೆ ಆಘಾತ, ಡಿಕೆಶಿಗೆ ಸಂತಸ – ವಿಜಯೇಂದ್ರ

    ಇಡಿ ನೋಟಿಸ್‌ನಿಂದ ಸಿಎಂಗೆ ಆಘಾತ, ಡಿಕೆಶಿಗೆ ಸಂತಸ – ವಿಜಯೇಂದ್ರ

    -ರಾಜ್ಯಾಧ್ಯಕ್ಷ ಚುನಾವಣೆ; ಎಲ್ಲದಕ್ಕೂ ಸಿದ್ಧ ಎಂದ ಶಾಸಕ

    ಬೆಂಗಳೂರು: ಇಡಿ ನೋಟಿಸ್ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ದೊಡ್ಡ ಹಿನ್ನಡೆಯಾಗಿದೆ, ಆದರೆ ಡಿಕೆ ಶಿವಕುಮಾರ್‌ಗೆ (DK Shivakumar) ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಅವರು, ಲೋಕಾಯುಕ್ತದಿಂದ `ಬಿ’ ರಿಪೋರ್ಟ್ ತೆಗೆದುಕೊಂಡು ಬರುವ ಲೆಕ್ಕಾಚಾರದಲ್ಲಿ ಸಿಎಂ ಇರುವಾಗ ಇಡಿಯಿಂದ ನೋಟಿಸ್ ಕೊಡಲಾಗಿದೆ. ಅವರ ಧರ್ಮಪತ್ನಿಯವರಿಗೆ ಹಾಗೂ ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಕೊಡಲಾಗಿದೆ. ಇವರಿಬ್ಬರು ತನಿಖೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇಡಿ ನೋಟಿಸ್ ಸಿದ್ದರಾಮಯ್ಯರಿಗೆ ದೊಡ್ಡ ಆಘಾತ ತಂದಿದೆ. ಮುಡಾ ಅಕ್ರಮದ ಪರಿಣಾಮವನ್ನು ಸಿಎಂ ಎದುರಿಸಲೇಬೇಕು ಎಂದರು.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ – ಡಿಸಿ, ಎಸ್ಪಿಗಳಿಗೆ ಕೃಷ್ಣಬೈರೇಗೌಡ ಸೂಚನೆ

    ಇನ್ನೂ ಇಡಿ ನೋಟಿಸ್ ಕೊಟ್ಟಿರೋದು ಡಿಕೆಶಿಗೆ ಒಳಗೊಳಗೇ ಸಂತೋಷ ತಂದಿರುತ್ತದೆ. ಇದರಲ್ಲಿ ಅಚ್ಚರಿ ಏನಿಲ್ಲ. ನಾನು ಡಿಕೆಶಿ ಅವರ ಹೇಳಿಕೆಯನ್ನು ಗಮನಿಸಿದೆ. ಡಿಕೆಶಿ ಮುಖದಲ್ಲಿ ಮಂದಹಾಸ ಕಾಣ್ತಿತ್ತು. ಅಬ್ಬಾ, ಸಿಎಂಗೆ ನೋಟಿಸ್ ಕೊಟ್ರಲ್ಲ ಅನ್ನುವ ಮಂದಹಾಸ ಡಿಕೆಶಿ ಮುಖದಲ್ಲಿತ್ತು ಎಂದು ಲೇವಡಿ ಮಾಡಿದರು.

    ಇದೇ ವೇಳೆ ಸ್ಪರ್ಧೆ ಖಚಿತ, ಜಯ ನಿಶ್ಚಿತ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ. ರಾಜ್ಯಾಧ್ಯಕ್ಷ ಚುನಾವಣೆಯನ್ನು ಯಾವ ರೀತಿ ನಡೆಸಬೇಕು ಎಂದು ಹೈಕಮಾಂಡ್‌ನವರು ಗಮನಿಸ್ತಾರೆ. ಆದರೆ ನಾನು ಕೂಡಾ ಎಲ್ಲದಕ್ಕೂ ಸಿದ್ಧವಾಗಿಯೇ ಇದ್ದೇನೆ. ಒಳ್ಳೆಯದಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದು ಹೇಳಿದರು.ಇದನ್ನೂ ಓದಿ: ಕಾದುನೋಡಿ.. ಸುದೀಪ್‌ ಸರ್‌ ಇಲ್ಲದೇ ‘ಬಿಗ್‌ ಬಾಸ್‌’ ಇಲ್ಲ: ಶೋ ನಿರ್ದೇಶಕ ಪ್ರಕಾಶ್‌

     

  • ಬಿಜೆಪಿ ಬೆದರಿಕೆ ಪತ್ರಕ್ಕೆ ಡಿಕೆಶಿ ಆಗ್ಲಿ, ಕಾಂಗ್ರೆಸ್ ಆಗ್ಲಿ ಹೆದರೋ ಪ್ರಶ್ನೆಯೇ ಇಲ್ಲ : ಡಿ.ಕೆ ಸುರೇಶ್

    ಬಿಜೆಪಿ ಬೆದರಿಕೆ ಪತ್ರಕ್ಕೆ ಡಿಕೆಶಿ ಆಗ್ಲಿ, ಕಾಂಗ್ರೆಸ್ ಆಗ್ಲಿ ಹೆದರೋ ಪ್ರಶ್ನೆಯೇ ಇಲ್ಲ : ಡಿ.ಕೆ ಸುರೇಶ್

    ರಾಮನಗರ: ಡಿ.ಕೆ ಶಿವಕುಮಾರ್‌ಗೆ ಕಳುಹಿಸಿರುವುದು ಇಡಿ ನೋಟಿಸ್(ED Notice) ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಕಾಂಗ್ರೆಸ್ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್(D. K. Suresh) ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ(Channapatna) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮೇಲೆ ಆಗಾಗ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಇದು ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಕಾಂಗ್ರೆಸ್(Congress) ಆಗಲಿ ಹೆದರುವ ಪ್ರಶ್ನೆಯೇ ಇಲ್ಲ. ಅವರು ಏನೇ ಮಾಡಿದರೂ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆ. ಡಿಕೆಶಿ ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೋ ದೈಹಿಕವಾಗಿ ಕುಗ್ಗಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ಬಿಜೆಪಿ ಪಕ್ಷದ ನೋಟಿಸ್ ಅಷ್ಟೇ. ಬಿಜೆಪಿ ಕಚೇರಿಯಿಂದ ಇಡಿ ಕಚೇರಿಗೆ, ಇಡಿ ಕಚೇರಿಯಿಂದ ಬಿಜೆಪಿ ಕಚೇರಿ ಪತ್ರ ವ್ಯವಹಾರ ಇದೆ. ಹಾಗಾಗಿ ಇದು ಬಿಜೆಪಿ ಪಕ್ಷದ ವತಿಯಿಂದ ಬಂದಿರುವ ಬೆದರಿಕೆ ಪತ್ರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಚಿವರೇ ಉತ್ತರ ಸಾಕು ಕುಳಿತುಕೊಳ್ಳಿ – ವಿಧಾನ ಪರಿಷತ್‍ನಲ್ಲಿ ಹಾಸ್ಯ ಪ್ರಸಂಗ

    ಇದೇ ವೇಳೆ, 75 ವರ್ಷಗಳಿಂದ ರಾಮನಗರ ಅಭಿವೃದ್ಧಿಯಾಗಿಲ್ಲ ಎಂಬ ಸಚಿವ ಅಶ್ವಥ್ ನಾರಾಯಣ್(Ashwath Narayana) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಂತಹ ಕೊಳಕು ಹಾಗೂ ಭ್ರಷ್ಟ ರಾಜಕೀಯ 75 ವರ್ಷದಲ್ಲಿ ಇರಲಿಲ್ಲ. ನಾಡಕಚೇರಿ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಆಗಬೇಕು ಅಂದರೆ ಹಣ ಕೊಡಬೇಕು. ಪೊಲೀಸ್ ಠಾಣೆಯಲ್ಲಿ ಕೆಲಸ ಆಗಬೇಕಾದರೆ ಹಣ ಕೊಡಬೇಕು. ಯಾರಿಗಾದರೂ ಉದ್ಯೋಗ ಕೊಡಬೇಕಾದರೂ ಹಣ ಕೊಡಬೇಕು. ಬಿಜೆಪಿ(BJP) ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಕಾಂಗ್ರೆಸ್(Congress) ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ(Siddaramaiah) ಆಡಳಿತ ಅವಧಿ ಬಗ್ಗೆ ತನಿಖೆ ಮಾಡುತ್ತೇವೆ ಅಂತಿದ್ದಾರೆ. ತನಿಖೆ ಮಾಡಿ ಅವರ ತಾಕತ್ತನ್ನು ಪ್ರದರ್ಶನ ಮಾಡಲಿ. ಬರೀ ಭಾಷಣದಲ್ಲಿ ತಾಕತ್ತು ಪ್ರದರ್ಶನ ಆಗುವುದು ಬೇಡ. ಅವರ ಬಳಿ ಆಧಾರ ಇದ್ದರೆ, ರಾಜ್ಯದ ಜನರ ಬಳಿ ಬಹಿರಂಗ ಪಡಿಸಲಿ. ಇವರ ಈ ಬೆದರಿಕೆಗೆ ಹೆದರುವಂತಹ ವ್ಯಕ್ತಿತ್ವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್‍ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಘಟಾನುಘಟಿಗಳ ಕಾಲದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಅಶ್ವಥ್ ನಾರಾಯಣ್ ಹೇಳಿಕೆಗೆ, ಅಶ್ವಥ್ ನಾರಾಯಣ್ ಅವರೇ ಮೊದಲು ರಾಮನಗರ(Ramanagara) ಕ್ಲೀನ್ ಮಾಡಿ. ಅವರು ಏನ್ ಏನ್ ಕ್ಲೀನ್ ಮಾಡಿದ್ದಾರೆ ಅಂತ ನೀವೇ ನೋಡುತ್ತಿದ್ದೀರಾ. ಸಚಿವರು ರೈತರ ಭೂಮಿ ಕಸಿದುಕೊಂಡಿದ್ದಾರೆ. ಅವರು ಜಮೀನು ಕೊಡಲು ಯೋಗ್ಯತೆ ಇಲ್ಲದಿದ್ದವರು. ಕ್ಷುಲ್ಲಕ ರಾಜಕಾರಣದ ವಿರುದ್ಧ ಮಾಗಡಿ ಭಾಗದ ರೈತರ ಹಾಗೂ ದಲಿತರ ಬಳಿ ಭೂಮಿ ಕಸಿದುಕೊಂಡಿದ್ದಾರೆ. ಅಂತಹ ನೀಚ ಪ್ರವೃತ್ತಿ ಹೊಂದಿರುವವರ ಬಗ್ಗೆ ನಾನು ಏನು ಮಾತನಾಡಲಿ? ಮೊದಲು ಬೆಂಗಳೂರಿನ ಸ್ಯಾಂಕಿ ಟ್ಯಾಕ್ ಬಳಿ ಕ್ಲೀನ್ ಮಾಡಿಸಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ- ಹೆಡ್ ಲೈಟ್‌ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಲಾಯಿಸಿದರೆ ಕೇಸ್: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

    ಮುಂಬೈ: ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಾಯದಿಂದ ಸಮನ್ಸ್ ಪಡೆದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೇಶ ತೊರೆಯದಂತೆ ವಲಸೆ ಅಧಿಕಾರಿಗಳು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.

    ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳುತ್ತಿದ್ದ ವೇಳೆ ಜಾಕ್ವೆಲಿನ್ ಅವರನ್ನು ತಡೆದು ಅಧಿಕಾರಿಗಳು ಬಂಧಿಸಿ, ಸಂಪೂರ್ಣ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಿಟ್ಟಿದ್ದಾರೆ. ಅಲ್ಲದೇ ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ದೆಹಲಿ ತನಿಖಾ ಸಂಸ್ಥೆ ತಿಳಿಸಿದೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ವಿರುದ್ಧ ಇಡಿ ಹೊಸ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಜಾಕ್ವೆಲಿನ್‌ಗೆ ಕಿಸ್ ಮಾಡುತ್ತಿರುವ ಸುಕೇಶ್ ಚಂದ್ರಶೇಖರ್ – ರೋಮ್ಯಾಂಟಿಕ್ ಫೋಟೋ ವೈರಲ್

    ಇತ್ತೀಚೆಗಷ್ಟೇ ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್ ಜೊತೆಗಿರುವ ರೋಮ್ಯಾಂಟಿಕ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಹಲವಾರು ಅನುಮಾನಗಳಿಗೆ ಕಾರಣವಾಯಿತು. 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

    ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ತಿಹಾರ್ ಜೈಲಿನಲ್ಲಿಯೇ ಇದ್ದುಕೊಂಡು ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಇನ್ನೂ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಹಣಕಾಸಿನ ವಹಿವಾಟುಗಳನ್ನು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

  • ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ತುಮಕೂರು: ಸೆಪ್ಟೆಂಬರ್ 24 ರಂದು ಕೊರಿಯರ್ ನಲ್ಲಿ ನನಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ. ಅಕ್ಟೋಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡಿ ಸಹಾಯಕ ನಿರ್ದೇಶಕರು ದೂರವಾಣಿ ಕರೆ ಮಾಡಿ 8 ರಂದು ದಸರಾ ಇರುವುದರಿಂದ ರಾತ್ರಿ 8ಕ್ಕೆ ಬರಲು ಹೇಳಿದರು. ನಂತರ ಇಮೇಲ್ ಮಾಡಿದ್ದು, 9 ರಂದು ಬರಲು ಸೂಚಿಸಿದ್ದಾರೆ. ಯಾವ ಕೇಸು, ಯಾವ ದಾಖಲೆ ಎನ್ನೋದು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ನನ್ನ ಪ್ರಕಾರ ನಾವು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಂಪನಿಗೆ ಸಾಥ್ ಕೊಟ್ಟಿದ್ದೇವೆ. ಆ ಹಿನ್ನೆಲೆಯಲ್ಲಿ ಸಮನ್ಸ್ ನೀಡಿರಬಹುದು. ಅಪೆಕ್ಸ್ ಬ್ಯಾಂಕ್ ಆಡಿಯಲ್ಲಿ ಬರುವ ಕೆಲ ಬ್ಯಾಂಕ್‍ಗಳು ಸೇರಿಕೊಂಡು ಅವರಿಗೆ ಸುಮಾರು 300 ಕೋಟಿಯಷ್ಟು ಸಾಲ ನೀಡಿದ್ದೇವೆ. ಆದರಲ್ಲಿ ನಮ್ಮ ತುಮಕೂರು ಡಿಸಿಸಿ ಬ್ಯಾಂಕಿನಿಂದ ಹರ್ಷ ಶುಗರ್ಸ್ ಗೆ 25 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನೋಟಿಸ್ ಬಂದಿರಬಹುದು. ಇದರ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದ ಜಿ.ಪರಮೇಶ್ವರ್ ಟಾಂಗ್ ಕೊಟ್ಟ ರಾಜಣ್ಣ, ಅವರು ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಲಿಲ್ಲ. ಡಿಸಿಎಂ ಆಗಿ, ಜಿಲ್ಲಾ ಉಸ್ತುವಾರಿಯಾಗಿದ್ದರು. ಕಾಂಗ್ರೆಸ್‍ನಲ್ಲಿ ನಂಬರ್ ಒನ್ ಮುಖಂಡರಾಗಿದ್ದರು. ಎಲ್ಲಾ ಅಧಿಕಾರ ಇದ್ದಾಗ ಮಾಡದೇ ಇದ್ದವರು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಮಾಡಿದ್ದೆ. ಪಿಡಬ್ಲ್ಯುಡಿ ವಿಭಾಗ, ಆರ್‍ಟಿಓ ಎಲ್ಲ ಇದೆ. ಶೈಕ್ಷಣಿಕ ಜಿಲ್ಲೆ ಆಗಿದೆ. ಎಸ್‍ಪಿ ಮತ್ತು ಡಿಸಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಿವೆ. ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವಾಗ ಮಾಡಲಿಲ್ಲ. ಈಗ ತಾನು ಏನೋ ಮಾಡೋಕೆ ಹೊರಟಿದ್ದೇನೆ ಎಂದು ತೋರಿಸಿಕೊಳ್ಳಲು ಪತ್ರ ಬರೆದಿದ್ದಾರೆ. ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆನೆ. ಸೆಪ್ಟೆಂಬರ್ 9 ರಂದು ಭೇಟಿಯಾಗಿ ಮುಖ್ಯಮಂತಿ ಅವರನ್ನು ಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  • ಬಂಧನದ ಭೀತಿಯಲ್ಲಿ ಸಚಿವ ಡಿಕೆ ಶಿವಕುಮಾರ್..!

    ಬಂಧನದ ಭೀತಿಯಲ್ಲಿ ಸಚಿವ ಡಿಕೆ ಶಿವಕುಮಾರ್..!

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಕೇಸ್‍ಗೆ ಸಂಂಧಿಸಿದಂತೆ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಐವರಿಗೆ ಸಮನ್ಸ್ ನೋಟಿಸ್ ಜಾರಿ ಮಾಡಿದ್ದಾರೆ.

    ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯ ಸುನಿಲ್ ಶರ್ಮಾ, ಅಂಜನೇಯ, ರಾಜೇಂದ್ರ ಸೇರಿ ಐವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಡಿಕೆಶಿ ದೆಹಲಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಮನ್ಸ್ ಆಧರಿಸಿ ನಿರೀಕ್ಷಣಾ ಜಾಮೀನಿನ ಅರ್ಜಿಗೆ ತಯಾರಿ ಮಾಡಿಕೊಳ್ಳಲಿದ್ದಾರೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದ್ದರಿಂದ ಡಿಕೆಶಿಗೆ ಬಂಧನದ ಭೀತಿ ಎದುರಾಗಿದೆ. ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್ ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿತ್ತು.

    ಏನಿದು ಪ್ರಕರಣ?
    ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆಯ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದರು. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv