Tag: ED custody

  • Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    ಬೆಂಗಳೂರು: ಭೋವಿ ನಿಗಮ ಹಗರಣ ಪ್ರಕರಣದಲ್ಲಿ ಇಡಿ ಅಧಿಕಾರಿಗಳು (Enforcement Directorate) ನಿಗಮದ ಜನರಲ್ ಮ್ಯಾನೇಜರ್ ನಾಗರಾಜಪ್ಪ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ.

    ಪ್ರಕರಣ ಸಂಬಂಧ ಏ.4 ರಂದು ಇಡಿ ಅಧಿಕಾರಿಗಳು ಭೋವಿ ನಿಗಮ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ದಾಖಲೆಗಳು ಹಾಗೂ, ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನಿಗಮದ ಜನರಲ್ ಮ್ಯಾನೇಜರ್ ನಾಗರಾಜಪ್ಪ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    ಭೋವಿ ನಿಗಮದಲ್ಲಿ (Bhovi Corporation Scam) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಶರಣಾದ ಜೀವಾ ಅವರ ಪಾತ್ರ ಇತ್ತಾ ಎಂಬ ಅನುಮಾನ ಇದೆ. ಇದರ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜೀವಾ ಅವರ ಅನ್ನಿಕಾ ಎಂಟರ್ ಪ್ರೈಸಸ್‌ಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ.

    ಅನ್ನಿಕಾ ಎಂಟರ್ ಪ್ರೈಸಸ್‌ಗೆ 7.16 ಕೋಟಿ ರೂ., ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ ಒಟ್ಟು 10.9 ಕೋಟಿ ರೂ. ವರ್ಗವಾಗಿದೆ. ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪರವರ ಆಪ್ತರ ಪಾಲುದಾರಿಕೆ ಇದೆ.

    ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ 1.48 ಕೋಟಿ ರೂ. ಹಣ ವರ್ಗವಾಗಿದೆ. ಇಷ್ಟೆಲ್ಲಾ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಬಯಲಾಗಿತ್ತು. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಪರಮೇಶ್ವರ್

  • Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ನಾಗೇಂದ್ರ ಅವರನ್ನ ಮತ್ತೆ 5 ದಿನ ಇಡಿ ಕಸ್ಟಡಿಗೆ (ED Custody) ನೀಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯ (Representative Court) ಆದೇಶಿಸಿದೆ.

    6 ದಿನಗಳ ಇ.ಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಗುರುವಾರ (ಜು.18) ವೈದ್ಯಕೀಯ ಪರೀಕ್ಷೆ (Medical Test) ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್, ಇನ್ನೂ ವಿಚಾರಣೆ ಬಾಕಿ ಇರುವುದರಿಂದ 8 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದ್ರೆ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ಕೋರ್ಟ್ ಆದೇಶಿಸಿತು. 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ `ಸುಪಾರಿ’ ಗಲಾಟೆ: ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಕೆಂಡಾಮಂಡಲ!

    ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಇದೇ ಜುಲೈ 12ರಂದು ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. 6 ದಿನಗಳ ಕಸ್ಟಡಿ ಅಂತ್ಯಗೊಂಡ ಬೆನ್ನಲ್ಲೇ ನಾಗೇಂದ್ರ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ಇ.ಡಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್ ವಾದಿಸಿ, 8 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಇದಕ್ಕೆ ಆಕ್ಷೇಪಣೆ ಎತ್ತಿದ ಆರೋಪಿ ಪರ ವಕೀಲ ಶ್ಯಾಂ ಸುಂದರ್, ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಇದೂವರೆಗೂ ಸಂಪೂರ್ಣ ರಿಮ್ಯಾಂಡ್ ಕಾಪಿ ಸಿಕ್ಕಿಲ್ಲ. ಈಗ ಹಾಜರುಪಡಿಸುತ್ತಿದ್ದಾರೆ. ಇಡಿ ಅಧಿಕಾರಿಗಳು ಪೊಲೀಸರ ಅಲ್ಲ. ಅವರು ದಾಖಲು ಮಾಡೋದು ಇಸಿಐಆರ್, ಎಫ್‌ಐಆರ್ ಅಲ್ಲ. ಅವರಿಗೆ ಬಂಧನ ಮಾಡುವ ಅಧಿಕಾರವೇ ಇಲ್ಲ. ಯಾವ ಅಧಿಕಾರದಲ್ಲಿ ಕಸ್ಟಡಿಗೆ ಕೇಳುತ್ತಾ ಇದ್ದಾರೆ? ಯಾವ ವಿಚಾರ ಇಟ್ಟುಕೊಂಡು ಕೇಳಲಾಗ್ತಿದೆ? ಎಂದು ವಾದಿಸಿದರು. ಇದನ್ನೂ ಓದಿ: NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    ಇದಕ್ಕೆ ಪ್ರತಿವಾದ ಮಂಡಿಸಿದ ಪ್ರಸನ್ನಕುಮಾರ್, ಮತ್ತೆ ರಿಮ್ಯಾಂಡ್ ಕೇಳುತ್ತಾ ಇದ್ದಾರೆ. ನನಗೆ ಕಾಪಿ ಈಗ ಕೊಡ್ತಾ ಇದ್ದಾರೆ ಸರಿ ಅಲ್ಲ. ನೀವು ಹೊಸ ಅಡ್ವಕೇಟ್ ಅಲ್ಲ. ಕಾನೂನಿನ ಪ್ರಕಾರ ಮೊದಲೇ ರಿಮ್ಯಾಂಡ್ ಕಾಪಿ ಕೊಡಬೇಕು ಅಂತ ಇಲ್ಲ. ನಾವು ನ್ಯಾಯಾಲಯಕ್ಕೆ ಕೊಡಬೇಕು. ನ್ಯಾಯಾಲಯದ ಗಮನಕ್ಕೆ ತಂದ ಮೇಲೆಯೇ ಕಸ್ಟಡಿಗೆ ಪಡೆಯೋದು. ಡಿಫೆನ್ಸ್ ಅಡ್ವೊಕೇಟ್‌ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಇದೆಲ್ಲ ಅವರಿಗೆ ಗೊತ್ತಿದೆ ಎಂದು ಕುಟುಕಿದರು. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

    ಅಲ್ಲದೇ ತನಿಖೆಗೆ ನಾಗೇಂದ್ರ ಸಹಕರಿಸುತ್ತಿಲ್ಲ. ಹೆಚ್ಚಿನ ವಿಚಾರಣೆ ಮುಂದುವರಿಸುವ ಅಗತ್ಯ ಇದೆ. ಪಿಎಂಎಲ್‌ಎ ಸೆಕ್ಷನ್ 65 ಅಡಿ ಆರೋಪಿ ಹೇಳಿಕೆ ದಾಖಲಿಸಲು ಅಧಿಕಾರ ಇದೆ ಎಂದರು. ಈ ವೇಳೆ ಶ್ಯಾಂ ಸುಂದರ್ ಅವರು, ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿ, ಇಡಿ ಅಧಿಕಾರಿಗಳು ಅಲ್ಲಿಯೇ ವಿಚಾರಣೆ ಮಾಡಬಹುದು. ಇಲ್ಲಿದ್ದರೇ ಅವರ ಮೇಲೆ ಒತ್ತಡ ಹೇರಲಾಗುತ್ತೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ, ಈಗಾಗಲೇ ಹೇಳಿಕೆ ದಾಖಲು ಮಾಡಿ ಆಗಿದೆ ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಮತ್ತೆ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ಕಟ್ಟೆಯೊಡೆದ ಆಕ್ರೋಶ!

  • 5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್

    5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್

    ರಾಂಚಿ: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ (Hemanth Soren) ಅವರನ್ನು 5 ದಿನ ಜಾರಿ ನಿರ್ದೇಶನಾಲಯ (ED) ಕಸ್ಟಡಿಗೆ  ನೀಡಲಾಗಿದೆ.

    ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಹೇಮಂತ್‌ ಸೋರೆನ್‌ ಅವರನ್ನು ಬುಧವಾರ ಸಂಜೆ ಬಂಧಿಸಲಾಗಿತ್ತು. ಬಳಿಕ ಗುರುವಾರ ಮಧ್ಯಾಹ್ನ ಅವರನ್ನು ರಾಂಚಿಯ PMLA ಕೋರ್ಟಿಗೆ ಹಾಜರುಪಡಿಸಲಾಯಿತು. ಈ ವೇಳೆ ಇಡಿ 10 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ನ್ಯಾಯಾಲಯ ಸೋರೆನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಇಂದು 5 ದಿನಗಳ ಕಾಲ ಇಡಿ ಕಸ್ಟಡಿಗೆ ಹೇಮಂತ್‌ ಸೋರೆನ್‌ ಅವರನ್ನು ಒಪ್ಪಿಸಲಾಗಿದೆ.

    ಈ ನಡುವೆ ತಮ್ಮನ್ನು ಬಂಧಿಸಿದ ಜಾರಿ ನಿರ್ದೇಶನಾಲಯ (ED) ನಿರ್ಧಾರ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemanth Soren) ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠವು ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಹೇಮಂತ್ ಸೋರೆನ್ ಅರ್ಜಿ ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್

    ಬುಧವಾರ ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಬಂದ ಇಡಿ ಅಧಿಕಾರಿಗಳು ಹೇಮಂತ್ ಸೋರೆನ್‌ಗೆ ಪ್ರಶ್ನೆಗಳನ್ನು ಕೇಳಿದ್ದರು. ಸತತ 8 ಗಂಟೆಯ ವಿಚಾರಣೆಯ ಬಳಿಕ ಇಡಿ ಬಂಧಿಸಿತ್ತು. ಮುಂಜಾಗ್ರತಾ ಕ್ರಮವಾಗಿ ರಾಂಚಿಯಲ್ಲಿ ಭದ್ರತೆಗೆ 7ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ನಡುವೆ ಹೇಮಂತ್‌ ಸೋರೆನ್‌ ಅವರು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಾಂಚಿಯಲ್ಲಿ ಎಫ್‌ಐಆರ್ ದಾಖಲು ಮಾಡಿದರು.

  • ಇಡಿ ಕಸ್ಟಡಿಗೆ ಐಎಂಎ ಕಿಂಗ್‍ಪಿನ್ ಮನ್ಸೂರ್ ಖಾನ್

    ಇಡಿ ಕಸ್ಟಡಿಗೆ ಐಎಂಎ ಕಿಂಗ್‍ಪಿನ್ ಮನ್ಸೂರ್ ಖಾನ್

    ಬೆಂಗಳೂರು: 50 ಸಾವಿರಕ್ಕೂ ಹೆಚ್ಚು ಪಾಲುದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐಎಂಎ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್‍ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

    ದೆಹಲಿಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಮನ್ಸೂರ್‍ನನ್ನು ಬಂಧಿಸಲಾಗಿತ್ತು. ಇವತ್ತು ಬೆಂಗಳೂರಿನ ಶಾಂತಿ ನಗರದಲ್ಲಿರುವ ಇ.ಡಿ. ಕಚೇರಿಗೆ ಕರೆತಂದಿದ್ದರು. ಬಳಿಕ ಸಿವಿಲ್ ಕೋರ್ಟ್‍ಗೆ ಹಾಜರುಪಡಿಸಿದ್ದರು. ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ 15 ದಿನಗಳ ಕಾಲ ವಶಕ್ಕೆ ನೀಡಿ ಅಂತ ಇಡಿ ಕೇಳಿತು. ಆದರೆ, ಕೇವಲ 3 ದಿನಗಳಿಗೆ ಮಾತ್ರ ನೀಡೋದಾಗಿ ಜರ್ಡ್ ಆದೇಶಿಸಿದರು.

    ಐಎಂಎ ಕಚೇರಿ ಸೇರಿದಂತೆ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ಇ.ಡಿ. ವಿಚಾರಣೆ ನಡೆಸಲಿದೆ. ಇನ್ನೊಂದೆಡೆ, ಎಸ್‍ಐಟಿ ಹಾಗೂ ತೆಲಂಗಾಣ ಪೊಲೀಸರು ಕೂಡ ಮನ್ಸೂರ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.