Tag: ED Case

  • ನ್ಯಾಷನಲ್ ಹೆರಾಲ್ಡ್ ಕೇಸ್‌ | ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್‌

    ನ್ಯಾಷನಲ್ ಹೆರಾಲ್ಡ್ ಕೇಸ್‌ | ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್‌

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ (Rahul Gandhi, Sonia Gandhi )ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

    ಜುಲೈ 29ರಂದು ಆದೇಶ ಪ್ರಕಟಿಸುವುದಾಗಿ ರೋಸ್‌ ಅವೆನ್ಯೂ ಕೋರ್ಟ್‌ (Rouse Avenue Court) ಸಂಕೀರ್ಣದಲ್ಲಿನ ಭ್ರಷ್ಟಾಚಾರ ತಡೆ ಕಾಯ್ದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ. ಗಾಂಧಿ ಕುಟುಂಬದವರಲ್ಲದೇ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಸುನಿಲ್‌ ಭಂಡಾರಿ ಹಾಗೂ ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಕೂಡ ಜಾರಿ ನಿರ್ದೇಶನಾಲಯ ಪ್ರಕರಣದ ಆರೋಪಿಗಳನ್ನಾಗಿ ಹೆಸರಿಸಿತ್ತು.

    ನ್ಯಾಷನಲ್‌ ಹೆರಾಲ್ಡ್‌ (National Herald) ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ ಕಾಂಗ್ರೆಸ್‌ 90 ಕೋಟಿ ರೂ.ನಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯನ್‌ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ 90 ಕೋಟಿ ರೂ.ನಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದನ್ನೂ ಓದಿ: ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    ಆ ಮೂಲಕ ಸುಮಾರು 2,000 ಕೋಟಿ ರೂ.ಗಿಂತಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಯಂಗ್‌ ಇಂಡಿಯನ್‌ (Young Indian) ಸಂಸ್ಥೆಯು ತನ್ನ ವಶಕ್ಕೆ ಪಡೆಯಲು ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಗಳ ಮೌಲ್ಯ, ಎಜೆಎಲ್‌ನ ಸ್ಥಿರ ಆಸ್ತಿಗಳು ಮತ್ತು ಅವುಗಳಿಂದ ದೊರೆಯುವ ಬಾಡಿಗೆಯನ್ನು ಅಪರಾಧದ ಗಳಿಕೆ ಎಂದು ಇಡಿ ದೂರಿತ್ತು. ಆದ್ರೆ ಆಸ್ತಿಯನ್ನ ಬಳಸದಿದ್ದರೂ ಅಥವಾ ಅಂದಾಜಿಸದಿದ್ದರೂ ಹಣ ವರ್ಗಾವಣೆ ಆರೋಪ ಮಾಡಿರುವುದು ವಿಚಿತ್ರ ಮತ್ತು ಹಿಂದೆಂದೂ ಕೇಳರಿಯದ ಪ್ರಕರಣ ಎಂದು ಗಾಂಧಿ ಕುಟುಂಬ ವಾದಿಸಿತ್ತು.

    ಸಾಲಕ್ಕೆ ಬದಲಾಗಿ ಎಜೆಎಲ್‌ನ ಆಸ್ತಿಗಳನ್ನು ಕಬಳಿಸಲು ಯಂಗ್ ಇಂಡಿಯನ್‌ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆ ಎಂಬ ಜಾರಿ ನಿರ್ದೇಶನಾಲಯದ ಆರೋಪಗಳನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು. ಎಜೆಎಲ್ ಕಂಪೆನಿಯನ್ನು ಸಾಲ ಮುಕ್ತಗೊಳಿಸಲು ಈ ಸಾಲ ನೀಡಲಾಗಿತ್ತು ಎಂದು ಅವರು ವಾದಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

    ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ – ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡುವ ಮೂಲಕ ಪ್ರಕರಣ ಬಹಿರಂಗಗೊಂಡಿತ್ತು.

    ಕಳೆದ ಏಪ್ರಿಲ್ 15 ರಂದು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹಾಗೂ ಇತರರ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್‌.ವಿ ರಾಜು, ವಿಶೇಷ ವಕೀಲ ಜೊಹೆಬ್ ಹೊಸೈನ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್‌.ಕೆ ಮಟ್ಟಾ ಮತ್ತವರ ತಂಡ ಇಡಿ ಪರವಾಗಿ ವಾದ ಮಂಡಿಸಿತ್ತು. ಸೋನಿಯಾ ಗಾಂಧಿ ಅವರನ್ನ ಡಾ. ಅಭಿಷೇಕ್‌ ಮನು ಸಿಂಘ್ವಿ ಹಾಗೂ ಅವರ ಕಾನೂನು ತಂಡ ಪ್ರತಿನಿಧಿಸಿತ್ತು. ಹಿರಿಯ ವಕೀಲ ಆರ್.ಎಸ್ ಮಾ ಅವರ ತಂಡ ರಾಹುಲ್‌ ಪರವಾಗಿ ವಾದ ಮಂಡಿಸಿತ್ತು. ಇದನ್ನೂ ಓದಿ: ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

    ಸುಮನ್ ದುಬೆ ಪರ ವಕೀಲರಾದ ಸುಶೀಲ್ ಬಜಾಜ್, ಅಲ್ಕಾ ಚೋಹರ್, ಆಶಿಶ್ ಚೋಹರ್ ಮತ್ತು ಅಕ್ಷ್ಯ ನಾಗರಾಜನ್, ಸ್ಯಾಮ್‌ ಪಿತ್ರೋಡಾ ಪರವಾಗಿ ವಕೀಲರಾದ ಕುಬೇರ್ ಬೋಧ್, ಮನಿಕಾ ಸಿಂಗ್ ಅವಿಜಿತ್ ಮತ್ತು ಸೋಮ್ಯಾ ಧವನ್, ಯಂಗ್‌ ಇಂಡಿಯನ್‌ ಪರ ವಕೀಲರಾದ ನಕುಲ್ ಗಾಂಧಿ, ಆಕಾಶ್ ಸಿಂಗ್, ಅಮಿತ್ ಮತ್ತು ಸಂಜೀವನಿ ಅವರೊಂದಿಗೆ ಹಿರಿಯ ವಕೀಲ ಮಾಧವ್ ಖುರಾನಾ, ಡೋಟೆಕ್ಸ್ ಮರ್ಚಂಡೈಸ್ ಪರವಾಗಿ ಹಿರಿಯ ವಕೀಲ ಪ್ರಮೋದ್ ಕುಮಾರ್ ದುಬೆ ಮತ್ತವರ ತಂಡ, ಸುನಿಲ್ ಭಂಡಾರಿ ಪರ ವಕೀಲರಾದ ಸೌಜನ್ಯಾ ಶಂಕರನ್, ಸಿದ್ಧಾರ್ಥ್ ಸತಿಜಾ, ಆಕಾಶ್ ಸಚನ್ ಮತ್ತು ಅನುಕಾ ಭಚಾವತ್ ವಾದ ಮಂಡಿಸಿದ್ದರು.

  • ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

    ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ.

    ನಟ, ನಟಿಯರ ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್, ಯುಟ್ಯೂಬರ್‌ಗಳ ವಿರುದ್ಧವೂ ಇಡಿ ಗುರುವಾರ ಪ್ರಕರಣ ದಾಖಲಿಸಿದೆ.

    5 ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?

    ಎಫ್‌ಐಆರ್‌ ದಾಖಲಾದ ಸೆಲಬ್ರಿಟಿಗಳ ಪಟ್ಟಿ
    ED ದಾಖಲಿಸಿಕೊಂಡಿರುವ ದೂರಿನಲ್ಲಿ ಮೂವರು ಸ್ಟಾರ್‌ ನಟರೊಂದಿಗೆ 29 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರೀತು ಚೌಧರಿ, ಬಂದಾರು ಶೇಷಾಯನಿ ಸುಪ್ರೀತ, ಬೆಟ್ಟಿಂಗ್ ವೇದಿಕೆಗಳ ನಿರ್ವಾಹಕರು, ಕಿರಣ್ ಗೌಡ್, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಜಯ್, ಸನ್ನಿ ಮತ್ತು ಸುಧೀರ್‌ ಹಾಗೂ ‘ಲೋಕಲ್ ಬಾಯ್ ನಾನಿ’ ಯೂಟ್ಯೂಬ್ ಚಾನೆಲ್‌ ವಿರುದ್ಧ ಕೇಸ್‌ ದಾಖಲಾಗಿದೆ.

    ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್ ರಮ್ಮಿ, ಜೀತ್‌ವಿನ್, ಲೋಟಸ್‌-365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಪ್ರಸ್ತುತಿ: ಮಹಾವತಾರ್ ನರಸಿಂಹ ಟ್ರೈಲರ್ ರಿಲೀಸ್

    ಈ ಪ್ರಕರಣ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಇನ್ನೂ ಕೆಲ ಎಫ್‌ಐಆರ್‌ಗಳನ್ನು ED ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ ಎಂದು ಇಡಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.  ಇದನ್ನೂ ಓದಿ: ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್

  • ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಪ್ರಕರಣ – ಸೆ.27ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಪ್ರಕರಣ – ಸೆ.27ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ. ಪ್ರಕರಣ ಮೂವರು ಆರೋಪಿಗಳು ಜಾರ್ಜ್‍ಶೀಟ್ ಜೊತೆಗೆ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಯಿತು.

    ಇಂದು ವಿಚಾರಣೆ ವೇಳೆ ಪ್ರಕರಣ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಶರ್ಮಾ, ರಾಜೇಂದ್ರ. ಎನ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಗೋಡಾನ್‍ನಿಂದ ಬರೋಬ್ಬರಿ 17 ಲಕ್ಷ ಮೌಲ್ಯದ ಚಾಕ್ಲೇಟ್ ಬಾರ್‌ಗಳನ್ನು ಕದ್ದ ಖದೀಮರು!

    ಇದಕ್ಕೆ ಒಪ್ಪಿದ ಇಡಿ ಪರ ವಕೀಲರು, ತರ್ಜುಮೆ ಮಾಡಿ ದಾಖಲೆಗಳನ್ನು ನೀಡಲು ನಾಲ್ಕೈದು ವಾರಗಳ ಸಮಯಬೇಕು ಎಂದು ಕೋರ್ಟ್‍ಗೆ ಹೇಳಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ

    ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಈಗಾಗಲೇ ಜಾಮೀನು ಸಿಕ್ಕಿದೆ. ಅದಾಗ್ಯೂ ನ್ಯಾಯಾಲಯಕ್ಕೆ ಗೌರವ ಕೊಟ್ಟು ಕೋರ್ಟ್‍ಗೆ ಹಾಜರಾಗಿದ್ದೆ. ಇತರೆ ಆರೋಪಿಗಳು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಕೊಟ್ಟ ಬಳಿಕ ಮುಂದೆ ನೋಡಿಕೊಂಡು ಮಾತನಾಡುತ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿಗೆ ತಿಹಾರ್ ಜೈಲೇ ಗತಿ – ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ

    ಡಿಕೆಶಿಗೆ ತಿಹಾರ್ ಜೈಲೇ ಗತಿ – ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ

    ನವದೆಹಲಿ: ಸದ್ಯ ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ.

    ಬುಧವಾರ ವಿಚಾರಣೆಯ ಸಂದರ್ಭದಲ್ಲಿ ಗೈರಾಗಿದ್ದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಕಲಾಪ ಆರಂಭಗೊಳ್ಳುವ ಮುನ್ನವೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದನ್ನು ಓದಿ: ಡಿಕೆಶಿಗೆ ವಿವಿಐಪಿ ಟ್ರೀಟ್, ಚಿದಂಬರಂ ಪಕ್ಕದ ಸೆಲ್‍ನಲ್ಲೇ ಬಂಡೆ

    ಆರಂಭದಲ್ಲಿ ಕ್ಷಮೆ ಕೋರಿ ವಾದ ಮಂಡಿಸಿದ ಅವರು ಡಿಕೆ ಶಿವಕುಮಾರ್ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ. ಕೊಲೆಗೆ ಹಫ್ತಾ ಅಥವಾ ಸುಪಾರಿ ಕೊಟ್ಟರೆ ಕೊಲೆ ಮಾಡಿದವ ಮಾತ್ರ ಮುಖ್ಯ ಅಲ್ಲ, ಕೊಲೆ ಮಾಡಿಸಿದವನು ಮುಖ್ಯ. ಅದನ್ನು ಕೂಡಾ ತನಿಖೆ ಮಾಡಬೇಕು. ಅಪರಾಧಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುವ ಕ್ರಮಗಳ ಕಾಯ್ದೆ ಅಡಿ ಉಲ್ಲೇಖವಾಗಿದೆ. ಹಫ್ತಾ ಖಾತೆಯಲ್ಲಿಟ್ಟು ತೆರಿಗೆ ಪಾವತಿಸಿದ್ದೇನೆ ಎಂದರೆ ಅದು ಹೇಗೆ? ಅದು ಅಕ್ರಮ ಹಣ. ಹಫ್ತಾ ಹಣದ ಹರಿವಿನ ಬಗ್ಗೆ ತನಿಖೆ ಆಗಬೇಕು ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ವಾದಿಸಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಾಣಲಿದೆ ಡಿಕೆಶಿ ಜೀವನಾಧಾರಿತ ಚಿತ್ರ?

    ಡಿಕೆಶಿ ಪರ ವಕೀಲರು ಆಸ್ತಿ ಬೆಲೆ ಏರಿಕೆಯಾಗಿದೆ. ವಾಣಿಜ್ಯ ವ್ಯವಹಾರಗಳಿಂದ ಆದಾಯ ಹೆಚ್ಚಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. 1 ಗಂಟೆ 40 ನಿಮಿಷಗಳ ಕಾಲ ನಟರಾಜ್ ವಾದ ಮಂಡಿಸಿದರು. ನಟರಾಜ್ ವಾದಕ್ಕೆ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು.

    ಹೈ ಬಿಪಿ ಮತ್ತು ಹೈ ಶುಗರ್ ಹಿನ್ನೆಲೆಯಲ್ಲಿ ಶನಿವಾರದಿಂದ ಡಿಕೆ ಶಿವಕುಮಾರ್ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರ ಎಂಬ ವರದಿ ನೀಡಿದ ಬೆನ್ನಲ್ಲೇ ಇಂದು ಮಧ್ಯಾಹ್ನ ತಿಹಾರ್ ಜೈಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಶಿಫ್ಟ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಕೋರ್ಟ್ ಅಕ್ಟೋಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.