Tag: ED

  • MUDA Case | ದಿನೇಶ್ ವಿಚಾರಣೆಯಿಂದ ಮತ್ತಷ್ಟು ಅಕ್ರಮ ಬಯಲು – ಇ.ಡಿಯಿಂದ 150 ಕೋಟಿ ಮೌಲ್ಯದ ಆಸ್ತಿ ಜಪ್ತಿ

    MUDA Case | ದಿನೇಶ್ ವಿಚಾರಣೆಯಿಂದ ಮತ್ತಷ್ಟು ಅಕ್ರಮ ಬಯಲು – ಇ.ಡಿಯಿಂದ 150 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಮೈಸೂರು: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ (MUDA Case) ಪ್ರಕರಣದಲ್ಲಿ ಬಂಧನವಾಗಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ವಿಚಾರಣೆಯಿಂದ ಕೋಟಿ ಕೋಟಿ ಅಕ್ರಮದ ಕಥೆ ಬಯಲಾಗಿದೆ. ದಿನೇಶ್ ಕುಮಾರ್ ವಿಚಾರಣೆಯಿಂದ ಸಿಕ್ಕ ದಾಖಲೆ ಪ್ರಕಾರ ಒಟ್ಟು 150 ಕೋಟಿ ಮೌಲ್ಯದ ಅಕ್ರಮದ ಸೈಟ್‌ಗಳನ್ನು ಇಡಿ ಜಪ್ತಿ ಮಾಡಿದೆ. ಈ ಮೂಲಕ ಮುಡಾ  ಬ್ರಹ್ಮಾಂಡ ಭ್ರಷ್ಟಾಚಾರದ ಕಿಂಗ್‌ಪಿನ್ ದಿನೇಶ್ ಎಂಬ ತೀರ್ಮಾನಕ್ಕೆ ಇಡಿ (ED) ಬಂದಂತೆ ಇದೆ. ಇಡಿಯ ಡೆಪ್ಯೂಟಿ ಡೈರೆಕ್ಟರ್ ಬರೆದ ಅಧಿಕೃತ ಪತ್ರದಲ್ಲಿ ಮುಡಾದ ಇದುವರೆಗಿನ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಉಲ್ಲೇಖವಿದೆ.

    ಇ.ಡಿ ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಸೈಟ್‌ಗಳ ವರ್ಗಾವಣೆ, ಮಾರಾಟ ಯಾವುದೂ ನಡೆಸುವಂತಿಲ್ಲ ಎಂದು ಎಲ್ಲಾ ಸಬ್ ರಿಜಿಸ್ಟರ್‌ಗಳಿಗೆ ಸೂಚನೆ ಪತ್ರ ರವಾನಿಸಿದೆ. ಈ ಪತ್ರದಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್, ದಿನೇಶ್ ಕುಮಾರ್ ಸಂಬಂಧಿಕರು ಹಾಗೂ ಸಿದ್ದರಾಮಯ್ಯ ಆಪ್ತ ಬೆಂಬಲಿಗ ಪಾಪಣ್ಣಗೆ ಸೇರಿದ ಅಕ್ರಮವಾಗಿ ಮಂಜೂರಾದ ನಿವೇಶನಗಳ ಪಟ್ಟಿ ಇದೆ. ಇದನ್ನೂ ಓದಿ: ಮೋದಿ ಮತಕ್ಕಾಗಿ ಡ್ಯಾನ್ಸ್ & ಡ್ರಾಮಾ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ – ರಾಹುಲ್‌ ಗಾಂಧಿ ಲೇವಡಿ

    ಮುಡಾ ಅಕ್ರಮಕ್ಕೆ ಮಾಜಿ ಆಯುಕ್ತ ದಿನೇಶ್ ಕುಮಾರ್ ತಮ್ಮ ಮನೆ ಮಂದಿಯನ್ನೆಲ್ಲ ಬಳಸಿಕೊಂಡಿದ್ದಾರೆ. ತಮ್ಮ ಹೆಂಡತಿ, ಹೆಂಡತಿಯ ತಮ್ಮ, ಹೆಂಡತಿಯ ಅಜ್ಜಿ, ಸಂಬಂಧಿಕರು, ಮಾವ, ಮನೆ ಕೆಲಸದವರು ಎಲ್ಲರ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದು ತನ್ನ ಬಳಿ ಅದನ್ನು ಇಟ್ಟುಕೊಂಡು ಅವರ ಹೆಸರಿನಲ್ಲಿ ಎಲ್ಲಾ ಅವ್ಯವಹಾರ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ದಿನೇಶ್ ಕುಮಾರ್ ತಮ್ಮ ಮನೆ ಮಂದಿಯ ಹೆಸರಿನಲ್ಲೇ ಹಣ ವರ್ಗಾವಣೆ, ಜಮೀನು ಖರೀದಿ ಸೇರಿದಂತೆ ಭಾರಿ ಅಕ್ರಮ ನಡೆಸಿರುವುದು ಸಾಕ್ಷಿಗಳ ಹೇಳಿಕೆ ಮೂಲಕ ಸಾಬೀತಾಗಿದೆ. ಇ.ಡಿಯ ವರದಿಯಲ್ಲಿ ಸಾಕ್ಷಿಗಳ ಹೇಳಿಕೆ ಸೇರಿದಂತೆ ಎಲ್ಲವೂ ಉಲ್ಲೇಖವಿದೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಚಾಮುಂಡೇಶ್ವರಿ ಸೌಹಾರ್ಧ ಸಹಕಾರ ಸಂಘ ಹೆಸರಿನಲ್ಲೇ ದಿನೇಶ್ ಬಹುದೊಡ್ಡ ಅಕ್ರಮ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ದಿನೇಶ್ ಕುಮಾರ್ ವಿಚಾರಣೆಯಿಂದ ಸಿಎಂ ಸಿದ್ದರಾಮಯ್ಯ ಪರಮಾಪ್ತನಿಗೆ ಸಂಕಷ್ಟ ಶುರುವಾಗಿದೆ. ಮೈಸೂರಿನ ಸಿಎಂ ಸಿದ್ದರಾಮಯ್ಯ ಅವರ ಬಹುಕಾಲಿನ ಪರಮಾಪ್ತ ಪಾಪಣ್ಣ, 50:50 ಅನುಪಾತದಲ್ಲಿ ಬಹುದೊಡ್ಡ ಫಲಾನುಭವಿ ಆಗಿದ್ದಾರೆ. ನ್ಯಾಯಾಲಯ ಪರಿಹಾರಕ್ಕೆ ಪಾಪಣ್ಣ ಅರ್ಹ ಅಲ್ಲ ಎಂದು ಆದೇಶಿಸಿದ್ದರೂ ಪರಿಹಾರದ ಮೂಲಕ ದಿನೇಶ್ ಕುಮಾರ್ ಇವರಿಗೆ ಸೈಟ್ ಕೊಟ್ಟಿದ್ದಾರೆ. ಪಾಪಣ್ಣಗೆ ಎಲ್ಲಾ ಕಾನೂನುಗಳನ್ನ ಗಾಳಿಗೆ ತೂರಿ ಒಟ್ಟು 31 ಸೈಟ್ ಅಕ್ರಮವಾಗಿ ನೀಡಲಾಗಿದೆ. ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಸಿಎಂ ಪರಮಾಪ್ತನಿಗೆ ಸಹಾಯ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆ ಎಲ್ಲಾ ಸೈಟ್‌ಗಳನ್ನು ಇ.ಡಿ ಜಪ್ತಿ ಮಾಡಿದೆ. ಇದನ್ನೂ ಓದಿ: 10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ

    ಒಟ್ಟಾರೆ ಇ.ಡಿ ನಿಧಾನವಾಗಿ ಇಡೀ ಹಗರಣದ ಮೂಲಕ್ಕೆ ಕೈ ಹಾಕಿ ಸಾಕ್ಷಿ ಸಮೇತ ಎಲ್ಲವನ್ನೂ ಬಯಲು ಮಾಡುತ್ತಿದೆ. ಪ್ರಕರಣದಲ್ಲಿ ಕೇಳಿ ಬಂದ ಇನ್ನಷ್ಟು ಅಧಿಕಾರಿಗಳ ಬಂಧನವಾದರೆ ಮತ್ತಷ್ಟು ಹಗರಣ ಬಯಲಿಗೆ ಬರುವುದು ನಿಶ್ಚಿತ. ಇದನ್ನೂ ಓದಿ: ದೆಹಲಿಯಲ್ಲಿ ಮೋಡ ಬಿತ್ತನೆ ಪ್ರಯೋಗ ವಿಫಲ – ತಾತ್ಕಲಿಕವಾಗಿ ಮುಂದೂಡಿಕೆ

  • 25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ

    25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ

    ಚೆನ್ನೈ: ತಮಿಳುನಾಡು ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಳಿಗೆ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

    ರಿಯಲ್ ಎಸ್ಟೇಟ್ ಸಂಸ್ಥೆ ಟಿವಿಹೆಚ್ ಮತ್ತು ಡಿಎಂಕೆ ಸಚಿವ ಕೆ.ಎನ್.ನೆಹರು ಅವರ ಸಂಬಂಧಿ ಒಳಗೊಂಡ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದಾಳಿಯ ಸಂದರ್ಭದಲ್ಲಿ ಈ ಹಗರಣ ಬೆಳಕಿಗೆ ಬಂದಿದೆ ಎಂದು ತಮಿಳುನಾಡು ಪೊಲೀಸರಿಗೆ ಇಡಿ ತಿಳಿಸಿದೆ. ಇದನ್ನೂ ಓದಿ: ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಸಹಾಯಕ ಎಂಜಿನಿಯರ್‌ಗಳು, ಜೂನಿಯರ್ ಎಂಜಿನಿಯರ್‌ಗಳು ಮತ್ತು ಪಟ್ಟಣ ಯೋಜನಾ ಅಧಿಕಾರಿಗಳಂತಹ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗಳು 25 ಲಕ್ಷದಿಂದ 35 ಲಕ್ಷ ರೂ.ಗಳವರೆಗೆ ಲಂಚವನ್ನು ನೀಡಿದ್ದಾರೆ ಎಂದು ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಇಡಿ ಆರೋಪಿಸಿದೆ. ಆ.6 ರಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದ್ದಾರೆ.

    2024–2025 ಮತ್ತು 2025–2026 ವರ್ಷಗಳ ನೇಮಕಾತಿ ಪ್ರಕ್ರಿಯೆಯನ್ನು ಜಾಣ್ಮೆಯಿಂದ ನಿರ್ವಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಕೆಲವು ವ್ಯಕ್ತಿಗಳಿಗೆ ಪರೀಕ್ಷಾ ಮಾಹಿತಿ ಮೊದಲೇ ಲಭ್ಯವಿತ್ತು. ಲಂಚದ ಹಣವನ್ನು ನಗದು ರೂಪದಲ್ಲಿ ಸಂಗ್ರಹಿಸಿ ಹವಾಲಾ ಮಾರ್ಗಗಳ ಮೂಲಕ ರವಾನಿಸಲಾಗಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಲಂಚ ನೀಡಿದ ಸುಮಾರು 150 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸರಿಗೆ ಬರೆದ ಪತ್ರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಹಲವಾರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಇಡಿ ಹೆಸರಿಸಿದೆ.

    ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವೇ ಇಡಿ ತನಿಖೆ ಆರಂಭಿಸಬೇಕಾಗುತ್ತದೆ. ಹೀಗಾಗಿ, ಹಗರಣದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ತಮಿಳುನಾಡು ಪೊಲೀಸರಿಗೆ ಇಡಿ ಒತ್ತಾಯಿಸಿದೆ.

  • ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – ನಾಗೇಂದ್ರ ಆಪ್ತರ ಮನೆ ಮೇಲೆ ಇಡಿ ದಾಳಿ

    ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – ನಾಗೇಂದ್ರ ಆಪ್ತರ ಮನೆ ಮೇಲೆ ಇಡಿ ದಾಳಿ

    ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ (Belekeri Iron Ore Case) ಸಂಬಂಧಿಸಿದಂತೆ ಬಳ್ಳಾರಿಯಲ್ಲಿ (Ballari) ಇಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ (Nagendra) ಅವರ ಆಪ್ತ ಕುರುಬರ ನಾಗರಾಜಗೆ ಸೇರಿದ ತಾಳೂರು ರಸ್ತೆಯ ಮನೆಯ ಮೇಲೆ ದಾಳಿ ಮಾಡಿರುವ  ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

    ಬೆಂಗಳೂರಿನಿಂದ ಬಂದಿರುವ 5 ಜನ ಅಧಿಕಾರಿಗಳಿಂದ ದಾಳಿ ಮುಂದುವರೆದಿದೆ. ಸದ್ಯ ನಾಗರಾಜ ಬೆಂಗಳೂರಿನಲ್ಲಿದ್ದು, ಮನೆಯಲ್ಲಿ ನಾಗರಾಜ ಅವರ ತಾಯಿ, ತಂಗಿ ಹಾಗೂ ತಂಗಿಯ ಪತಿ ಇದ್ದಾರೆ. ಇದನ್ನೂ ಓದಿ:  ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

     

    ಹೊಸಪೇಟೆಯ ಹೊಟೇಲ್ ಉದ್ಯಮಿ ಶ್ರೀನಿವಾಸ್ ರಾವ್ (ಸೀನಾಬಾಬು) ಅವರ ಪ್ರಿಯದರ್ಶನಿ ಹೋಟೆಲ್ ಮೇಲೂ ದಾಳಿಯಾಗಿದೆ. ವಿನಾಯಕ ನಗರ ಮನೆ ಮತ್ತು ಬಸವೇಶ್ವರ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಶ್ರೀನಿವಾಸ ಅವರು ದಾಳಿ ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಮರು ಜೀವ ನೀಡಿದ್ದರಿಂದ 17 ಜನ ಆರೋಪಿಗಳಿಗೆ ನಡುಕ ಹುಟ್ಟಿಸಿದೆ.

    ಇತ್ತೀಚೆಗಷ್ಟೇ ಶಾಸಕ ಸತೀಶ್ ಸೈಲ್ ಈ ಪ್ರಕರಣದಲ್ಲಿ ದೋಷಿ ಎಂದು ಜಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿತ್ತು. ಈ ಬೇಲಿಕೇರಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಬಿ ನಾಗೇಂದ್ರ, ಆನಂದ್ ಸಿಂಗ್ ಸೇರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಹಲವರಿದ್ದಾರೆ.

  • ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

    ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

    ನವದೆಹಲಿ: ಬೇಲೆಕೇರಿ ಬಂದರಿನ ಮೂಲಕ ಅಕ್ರಮ (Belekeri Illegal Iron Ore Case) ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

    ಹರಿಯಾಣದ ಗುರುಗ್ರಾಮ್‌ನ ಕೆಲವು ಸ್ಥಳಗಳು ಹಾಗೂ ಬೆಂಗಳೂರು ಮತ್ತು ಹೊಸಪೇಟೆ (ವಿಜಯನಗರ ಜಿಲ್ಲೆ)ಯಲ್ಲಿ ಕನಿಷ್ಠ 20 ಸ್ಥಳಗಳ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ದಾಳಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್‌- ಸೈಲ್‌ಗೆ ರಿಲೀಫ್‌, ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹೈಕೋರ್ಟ್‌

    ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಂತರ, ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಹಲವಾರು FIRಗಳು ಮತ್ತು ಚಾರ್ಜ್‌ಶೀಟ್‌ಗಳಿಂದ ಹಣ ವರ್ಗಾವಣೆ ತನಿಖೆ ಹುಟ್ಟಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಡಿ ಶೋಧದಲ್ಲಿ ಒಳಗೊಂಡಿರುವ ಕಂಪನಿಗಳಲ್ಲಿ MSPL ಲಿಮಿಟೆಡ್ (ಬಾಲ್ಡೋಟಾ ಗ್ರೂಪ್), ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ., ಅರ್ಷದ್ ಎಕ್ಸ್‌ಪೋರ್ಟ್ಸ್, SVM ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಮತ್ತು ಆಲ್ಫೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಸೇರಿದ್ದಾರೆ.

    ಆರೋಪಿಗಳು ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗೆದು, ಖರೀದಿಸಿ, ಮಾರಾಟ ಮಾಡಿ, ಸರಿಯಾದ ತೆರಿಗೆ ಮತ್ತು ರಾಯಧನವನ್ನು ಪಾವತಿಸದೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ರಾಜ್ಯದ ಖಜಾನೆಗೆ ಭಾರಿ ನಷ್ಟವನ್ನುಂಟು ಮಾಡಿತು. ಪರಿಸರಕ್ಕೆ ಅಪಾರ ಹಾನಿಯನ್ನುಂಟು ಮಾಡಿತು ಎಂದು ಇಡಿ ಮೂಲವೊಂದು ತಿಳಿಸಿದೆ. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

    ಈ ಬಂದರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಬಳ್ಳಾರಿಯಿಂದ ಬೇಲೆಕೇರಿಗೆ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಬಂಧಿಸಿತ್ತು.

  • MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    – ಇಡಿಯಿಂದ 59 ಮುಡಾ ಸೈಟ್‌ ಮುಟ್ಟುಗೋಲು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ(MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೇಟೆಯನ್ನು ಮುಂದುವರೆಸಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನದ ಬಳಿಕ 59 ಕ್ಕೂ ಹೆಚ್ಚು ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ವಶಕ್ಕೆ ಪಡೆದುಕೊಂಡಿದೆ.

    ವಶಪಡಿಸಿಕೊಂಡ 60 ಕೋಟಿ ರೂ. ಮೌಲ್ಯದ ಸೈಟ್‌ಗಳಲ್ಲಿ ಕಾಂಗ್ರೆಸ್ ಮುಖಂಡ ಎ ಪಾಪಣ್ಣ (Papanna) ಅವರದ್ದೇ ಅಗ್ರಪಾಲು. ಈ ಬಗ್ಗೆ ಪಬ್ಲಿಕ್ ಟಿವಿಯ ಬಳಿ ಎಕ್ಸ್ ಕ್ಲೂಸಿವ್ ದಾಖಲೆ ಸಿಕ್ಕಿದ್ದು ಎ ಪಾಪಣ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ:  ಇದನ್ನೂಓದಿ: ಗಗನಕ್ಕೇರಿದ ಬಂಗಾರದ ಬೆಲೆ 1.5 ಲಕ್ಷದ ಗಡಿ ದಾಟಿದ ಕೆ.ಜಿ ಬೆಳ್ಳಿ!

    ಪಾಪಣ್ಣ ಬಳಿಯಿದ್ದ 31 ಸೈಟ್‌ಗಳು ವಿಜಯನಗರದ ನಾಲ್ಕನೇ ಹಂತದ್ದೇ ಆಗಿರುವುದು ವಿಶೇಷ. ಮುಡಾ ಮಾಜಿ ಅಧ್ಯಕ್ಷ ಮರೀಗೌಡಗೆ ಕೂಡ ಅಕ್ರಮ ಸೈಟ್ ಮಂಜೂರು ಮಾಡಲಾಗಿದೆ. ಇದನ್ನೂ ಓದಿ:  ವಿಮೆ ಹಣದ ಮೇಲೆ ಕಣ್ಣು – ಅಳಿಯನನ್ನೇ ಕೊಲೆ ಮಾಡಿದ ಮಾವ & ಗ್ಯಾಂಗ್

    ದಿನೇಶ್ ಕುಮಾರ್ ತನ್ನ ಮನೆಯ ಕೆಲಸಕ್ಕಿದ್ದ ರಮೇಶ್‌ ಹೆಸರಲ್ಲೂ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಅತ್ತೆ, ಮಾವ, ಬಾಮೈದಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • MUDA Scam | 440 ಕೋಟಿ ಮೌಲ್ಯದ 242 ಮುಡಾ ಸೈಟ್ ಸೀಜ್

    MUDA Scam | 440 ಕೋಟಿ ಮೌಲ್ಯದ 242 ಮುಡಾ ಸೈಟ್ ಸೀಜ್

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧದ ಮುಡಾ ಹಗರಣ ಪ್ರಕರಣದ ತನಿಖೆಯನ್ನು ಇಡಿ ವರ್ಷದ ಬಳಿಕ ಮತ್ತೊಮ್ಮೆ ಚುರುಕುಗೊಳಿಸಿದೆ. ಮುಡಾದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದ 252 ಸೈಟ್ ಗಳನ್ನು ಇ.ಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    440 ಕೋಟಿ ರೂ. ಮೌಲ್ಯದ ನಿವೇಶನಗಳು ಅನ್ನೋದನ್ನು ಇಡಿ ಖಾತರಿ ಪಡಿಸಿದೆ. ತನಿಖೆ ಮುಂದುವರೆಸಿರೋ ಇಡಿ ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನದ ಬಳಿಕ ಇಡಿ ದಿನೇಶ್ ಬಳಿಯಲ್ಲಿ ಇದ್ದ 34 ಸೈಟ್‌ಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಕುಟುಂಬದವರು ಮತ್ತು ಮನೆ ಕೆಲಸದವರ ಹೆಸರಲ್ಲೂ ಕೂಡ ಬೇನಾಮಿ ಮಾಡಿದ್ದನ್ನು ಪತ್ತೆ ಮಾಡಿರೋ ಇಡಿ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 34 ಸೈಟ್ ಗಳನ್ನು 40.8 ಕೋಟಿ ಮೌಲ್ಯದ್ದು ಎಂಬುದನ್ನು ಸ್ಪಷ್ಟಪಡಿಸಿದೆ. ಬೇನಾಮಿ ಹೆಸರಲ್ಲಿ ಇದ್ದವರನ್ನೆಲ್ಲಾ ವಿಚಾರಣೆ ನಡೆಸಿರೋ ಇಡಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸ್ತಾ ಇದೆ.

  • ಲಡಾಖ್‌ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು

    ಲಡಾಖ್‌ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು

    – ಅಕ್ರಮವಾಗಿ ವಿದೇಶದಿಂದ ದೇಣಿಗೆ ಸ್ವೀಕಾರ

    ನವದೆಹಲಿ: ಲಡಾಖ್‌ನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಸರ್ಕಾರೇತರ ಸಂಸ್ಥೆ ಲಡಾಖ್‌ ವಿದ್ಯಾರ್ಥಿಗಳ ಲಡಾಖ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿಯ (Students’ Educational and Cultural Movement of Ladakh) FCRA ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.

    ನಾಲ್ವರು ಸಾವನ್ನಪ್ಪಿ ಇತರ ಅನೇಕರು ಗಾಯಗೊಂಡ ನಂತರ ಕೇಂದ್ರ ಸರ್ಕಾರವು ಗುರುವಾರ ವಿದೇಶಿ ನಿಧಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ SECMOL ಪರವಾನಗಿ ರದ್ದು ಮಾಡಿದೆ.

    ವಾಂಗ್‌ಚುಕ್ ಅವರ ವೈಯಕ್ತಿಕ ಮತ್ತು ಜಂಟಿ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಲಾಗಿದ್ದು ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ -2010 (FCRA) ಉಲ್ಲಂಘನೆಯಾಗಿದೆ. 2021 ಮತ್ತು 2024 ರ ನಡುವೆ ಅವರ ಎನ್‌ಜಿಒ ವಿದೇಶದಿಂದ ಕೋಟ್ಯಂತರ ರೂಪಾಯಿಗಳನ್ನು ಸ್ವೀಕರಿಸಿದೆ. ವಿದೇಶದಿಂದ ಬಂದ ಹಣವನ್ನು ಅಪರಿಚಿತ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ. ಇದನ್ನೂ ಓದಿ:  ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    59 ವರ್ಷ ವಯಸ್ಸಿನ ಸೋನಮ್ ವಾಂಗ್‌ಚುಕ್ 9 ಖಾತೆಗಳನ್ನು ಹೊಂದಿದ್ದು ಅವುಗಳಲ್ಲಿ 8 ಖಾತೆಗಳನ್ನು ಘೋಷಣೆ ಮಾಡಿಲ್ಲ. ಈ ಎಂಟರ ಪೈಕಿ ಹಲವು ಖಾತೆಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ರವಾನೆಯಾಗಿದೆ. ವಾಂಗ್‌ಚುಕ್ 2021 ಮತ್ತು 2024 ರ ನಡುವೆ ತಮ್ಮ ವೈಯಕ್ತಿಕ ಖಾತೆಯಿಂದ ವಿದೇಶಗಳಿಗೆ ಸುಮಾರು 2.3 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ:  ಅಗ್ನಿ ಪ್ರೈಮ್‌ ಆರ್ಭಟ – ಇನ್ಮುಂದೆ ರೈಲಿನಿಂದಲೂ ಶತ್ರುಗಳ ಮೇಲೆ ದಾಳಿ ನಡೆಸಬಹುದು

    ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವ ವಾಂಗ್‌ಚುಕ್ ವಿರುದ್ಧ ಸಿಬಿಐ ಸಹ ಪ್ರಾಥಮಿಕ ತನಿಖೆ ಆರಂಭಿಸಿದೆ.

    ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದರು. ಬುಧವಾರ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ವರು ಮೃತಪಟ್ಟಿದ್ದರು. 40 ಪೊಲೀಸ್ ಸಿಬ್ಬಂದಿ ಸೇರಿದಂತೆ 80 ಜನರು ಗಾಯಗೊಂಡರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ವಾಂಗ್‌ಚುಕ್ ನೀಡಿದ ಹೇಳಿಕೆಯೇ  ಕಾರಣ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

  • ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ (Illegal betting app) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಇಂದು (ಸೆ.23) ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

    ಇದು 1xBet ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಸೆ.16ರಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಇಡಿ ಸಮನ್ಸ್ ಜಾರಿಮಾಡಿತ್ತು. ಅದರಂತೆ ಯುವರಾಜ್ ಸಿಂಗ್ ಅವರು ತಮ್ಮ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಇಡೀ ವಿಚಾರಣೆಗೆ ಹಾಜರಾದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ಇದೇ ವೇಳೆ ಯುವರಾಜ್ ಸಿಂಗ್ ಜೊತೆಗೆ ಉದ್ಯಮಿ ಅನ್ವೇಶ್ ಜೈನ್ ಕೂಡ ಇದೇ ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ (ಸೆ.22) ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಕೂಡ ಇಡಿ ವಿಚಾರಣೆಗೆ ಹಾಜರಾಗಿದ್ದರು.

    ಇನ್ನೂ ಇದಕ್ಕೂ ಮೊದಲು ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಶಿಖರ್ ಧವನ್, ನಟಿ ಅಂಜಲಿ ಅರೋರಾ, ನಟಿ ಮಿಮಿ ಚಕ್ರವರ್ತಿ ಹಾಗೂ ನಟ ಅಂಕುಶ್ ಹಜಾರ, ಪ್ರಕಾಶ್ ರಾಜ್, ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ವಿಚಾರಣೆ ಎದುರಿಸಿದ್ದರು.

    ಏನಿದು ಕೇಸ್?
    ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲವಾರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರು, ಕ್ರಿಕೆಟಿಗರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

  • ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣದ ಜಾರಿ ನಿರ್ದೇಶನಾಲಯ (ED) ತನಿಖೆಗೆ ಇಂದು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa)  ಹಾಜರಾಗಿದ್ದಾರೆ.

    ದೆಹಲಿಯ (Delhi) ಇ.ಡಿ ಕಚೇರಿಗೆ ವಕೀಲರೊಂದಿಗೆ ರಾಬಿನ್ ಉತ್ತಪ್ಪ ಹಾಜರಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ಇದೇ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಹಾಗೂ ನಟ ಸೋನು ಸೂದ್‌ಗೆ (Sonu Sood) ಸಹ ವಿಚಾರಣೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಸೆ.23 ರಂದು ಯುವರಾಜ್ ಸಿಂಗ್ ಹಾಗೂ ಸೆ.34 ರಂದು ನಟ ಸೋನು ಸೂದ್ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜ್ರಾ, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ ಈ ಪ್ರಕರಣದ ಇ.ಡಿ ತನಿಖೆಯನ್ನು ಎದುರಿಸಿದ್ದರು.

  • MUDA Scam| ಜಾಮೀನು ಅರ್ಜಿ ವಜಾ, 9 ದಿನ ಇಡಿ ಕಸ್ಟಡಿಗೆ ದಿನೇಶ್‌ ಕುಮಾರ್‌

    MUDA Scam| ಜಾಮೀನು ಅರ್ಜಿ ವಜಾ, 9 ದಿನ ಇಡಿ ಕಸ್ಟಡಿಗೆ ದಿನೇಶ್‌ ಕುಮಾರ್‌

    – ಕೇಜ್ರಿವಾಲ್‌ಗೆ ನೀಡಿದಂತೆ ಜಾಮೀನು ನೀಡಿ ಎಂದ ವಕೀಲ
    – 14 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದ ಇಡಿ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಸೈಟ್‌ ಹಂಚಿಕೆ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ (Dinesh Kumar) ಅವರನ್ನು ಕೋರ್ಟ್‌ 9 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ.

    ಮಂಗಳವಾರ(ಸೆ.16) ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ದಿನೇಶ್‌ ಕುಮಾರ್‌ ಅವರನ್ನು ಇಡಿ ಬಂಧಿಸಿತ್ತು. ರಾತ್ರಿ ನ್ಯಾಯಾಧೀಶರ ಮನೆ ಹಾಜರು ಪಡಿಸಿ 1 ದಿನ ಕಸ್ಟಡಿಗೆ ಪಡೆದುಕೊಂಡಿದ್ದ ಇಡಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು.

    ವಿಚಾರಣೆ ಸಮಯದಲ್ಲಿ ದಿನೇಶ್‌ ಕುಮಾರ್‌ ಪರವಾಗಿ ಹಾಜರಾದ ವಕೀಲರು, ಒಂದು ವರ್ಷದಿಂದ ಸುಮ್ಮನಿದ್ದ ಇಡಿ ಅಧಿಕಾರಿಗಳು ಈಗ ತನಿಖೆಗೆ ದಿನೇಶ್‌ ಬೇಕು ಎನ್ನುತ್ತಿದ್ದಾರೆ. ಇಷ್ಟು ದಿನ ಬಂಧನ ಮಾಡದೇ ಇದ್ದವರನ್ನು ಈಗ ಬಂಧಿಸಿದ್ದು ಯಾಕೆ? ಈಗಾಗಲೇ ಬ್ಯಾಂಕ್ ವಿವರಗಳನ್ನು ಎಲ್ಲವನ್ನೂ ನೀಡಿದ್ದು ಈಗ ಮತ್ತೆ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ವಾದಿಸಿದರು. ಇದನ್ನೂ ಓದಿ:  ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    ನಮ್ಮ ಕಕ್ಷಿದಾರರು, ಅಸ್ತಮಾ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಮಧ್ಯಂತರ ಜಾಮೀನು ಆದೇಶ ಉಲ್ಲೇಖಿಸಿ ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಈ ವೇಳೆ ಜಡ್ಜ್‌, ದಿನೇಶ್‌ ಕುಮಾರ್‌ ರಾಜಕಾರಣಿ ಅಲ್ಲ. ಮುಡಾ ಪ್ರಕರಣದಲ್ಲಿ ಈ ಅಂಶವನ್ನು ಪ್ರಸ್ತಾಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

    ಇಡಿ ಪರ ವಕೀಲರು ನಮಗೆ ತನಿಖೆಗೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿದ್ದು 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಎರಡು ಕಡೆಯ ವಾದ ಆಲಿಸಿದ ಕೋರ್ಟ್‌ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಸೆ. 26 ರಂದು ಸಂಜೆ 5 ಗಂಟೆಗೆ ದಿನೇಶ್‌ಕುಮಾರ್‌ ಅವರನ್ನು ಹಾಜರುಪಡಿಸಬೇಕು ಎಂದು ಇಡಿಗೆ ಸೂಚಿಸಿತು.  ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿ ನಮ್ಮನ್ನು ತುಳಿಯುವ ಹುನ್ನಾರ: ಸಿಎಂ ವಿರುದ್ಧ ವಾಲ್ಮೀಕಿ ನಾಯಕ ಒಕ್ಕೂಟ ಆಕ್ರೋಶ

    ದಿನೇಶ್‌ ಕುಮಾರ್‌ ಮೇಲಿರುವ ಆರೋಪ ಏನು?
    ದಿನೇಶ್ ಕುಮಾರ್ ಆಯುಕ್ತರಾಗಿದ್ದ ಅವಧಿಯಲ್ಲಿ ಮಧ್ಯವರ್ತಿಗಳ ಮೂಲಕ 1000 ರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ನಡೆದಿದೆ. ನಿವೇಶನ ಹಂಚಿಕೆ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಬ್ಯಾಕ್‌ ವ್ಯವಹಾರದ ಮೂಲಕ ಸೈಟ್‌ ಹಂಚಿಕೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ ಎಂದು ಇಡಿ ಈ ಹಿಂದೆ ಹೇಳಿತ್ತು.