Tag: earthquake

  • ಮಣಿಪುರದಲ್ಲಿ 5.2 ತೀವ್ರತೆಯ ಭೂಕಂಪ

    ಮಣಿಪುರದಲ್ಲಿ 5.2 ತೀವ್ರತೆಯ ಭೂಕಂಪ

    ಇಂಫಾಲ: ಮಣಿಪುರದಲ್ಲಿ (Manipur) 5.2 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

    ಬುಧವಾರ ಬೆಳಗಿನ ಜಾವ 1:54 ರ ವೇಳೆ ಸರಣಿ ಭೂಕಂಪ ಸಂಭವಿಸಿದೆ. ಚುರಾಚಂದ್‌ಪುರ ಜಿಲ್ಲೆಯಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು – 44 ಶಾಸಕರ ಬೆಂಬಲವಿದೆ ಎಂದ ಎನ್‌ಡಿಎ

    ನೊನಿ ಜಿಲ್ಲೆಯಲ್ಲಿ ಬೆಳಿಗ್ಗೆ 2:26 ಕ್ಕೆ 2.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 10:23 ಕ್ಕೆ ಚುರಾಚಂದ್‌ಪುರದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

    ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ದಾವಣಗೆರೆ | ಯುವತಿಗೆ ಕಮಿಷನ್ ಆಸೆ ತೋರಿಸಿ 13 ಲಕ್ಷ ನಾಮ!

  • ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ

    ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ

    ಇಸ್ಲಾಮಾಬಾದ್: ಕದನ ವಿರಾಮದ ಬಳಿಕವೂ ತನ್ನ ಬಾಲ ಬಿಚ್ಚುತ್ತಿರುವ ಪಾಕ್ (Pakistan) ಮೇಲೆ ಈಗ ಪ್ರಕೃತಿಯೂ ಮುನಿಸಿಕೊಂಡಂತಿದೆ. ಹೌದು. ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ (Earthquake) ಸಂಭವಿಸಿದೆ. ಕಳೆದ ಒಂದು ವಾರದಲ್ಲಿ ಇದು 4ನೇ ಪ್ರಕರಣವಾಗಿದೆ.ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ

    ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಇಂದು ಮಧ್ಯಾಹ್ನ 1:26ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, 10 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ. ಕಳೆದ ಒಂದು ವಾರದಲ್ಲಿ ಉಂಟಾಗಿರುವ ನಾಲ್ಕು ಭೂಕಂಪಗಳು ಒಂದೇ ಪ್ರಮಾಣದಲ್ಲಿವೆ ಎಂದು ತಿಳಿಸಿದೆ.

    ಪಾಕಿಸ್ತಾನವು ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಒಂದಾಗಿದ್ದು, ಆಗಾಗ್ಗೆ ಭೂಕಂಪ ಉಂಟಾಗುತ್ತಿರುತ್ತವೆ. ಇದಕ್ಕೂ ಮುನ್ನ ಮೇ 10ರಂದು 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು.ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

  • ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಶುವಾಯಾದಿಂದ ದಕ್ಷಿಣಕ್ಕೆ 136 ಮೈಲುಗಳಷ್ಟು ದೂರದಲ್ಲಿರುವ ಡ್ರೇಕ್ ಪ್ಯಾಸೇಜ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದಕ್ಷಿಣ ಚಿಲಿ (Chile) ಮತ್ತು ಅರ್ಜೆಂಟೀನಾದಲ್ಲಿ (Argentina) ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ.

    ಚಿಲಿಯ ಮಗಲ್ಲೇನ್ಸ್ ಪ್ರದೇಶ ಮತ್ತು ಅಂಟಾರ್ಕ್ಟಿಕ್ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ 3 ಮೀಟರ್‌ಗಳವರೆಗೆ ಅಲೆಗಳು ಏಳವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಕ್ಕೆ ಹೋಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆ ವಿಜಯನ್‌, ತರೂರ್‌ ಕುಳಿತಿರುವುದು ಹಲವರ ನಿದ್ದಗೆಡಿಸುತ್ತೆ: ಮೋದಿ

    ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ. ಚಿಲಿಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಕಚೇರಿ (ONEMI) ಸ್ಥಳಾಂತರಗೊಂಡ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.

    ಎರಡೂ ದೇಶಗಳ ಕರಾವಳಿ ಭಾಗಗಳು ಹೆಚ್ಚಿನ ಅಪಾಯದಲ್ಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಕರಾವಳಿಯ ನಿವಾಸಿಗಳು ಅಧಿಕೃತ ಮಾಹಿತಿ ನೀಡುವವರೆಗೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಲೆಗಳ ಆತಂಕ ಕಡಿಮೆಯಾಗುವವರೆಗೂ ಸುರಕ್ಷಿತ ಪ್ರದೇಶಗಳಲ್ಲೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ; ಹಲವೆಡೆ ಧರೆಗುರುಳಿದ ಮರ – ಎಲ್ಲೆಲ್ಲಿ ಎಷ್ಟು ಮಳೆ?

  • ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

    ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

    ಕಾಬೂಲ್‌/ನವದೆಹಲಿ: ಅಫ್ಘಾನಿಸ್ತಾನದಲ್ಲಿ (Afghanistan) 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ವರದಿ ಮಾಡಿದೆ.

    ಬಾಗ್ಲಾನ್‌ನಿಂದ ಪೂರ್ವಕ್ಕೆ 164 ಕಿಮೀ ದೂರದಲ್ಲಿ ಹಾಗೂ ಭೂಮಿಯ‌ ಮೇಲ್ಮೈನಿಂದ 121 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಇಎಂಎಸ್‌ಸಿ ಮೊದಲು ಭೂಕಂಪದ (Earthquake) ತೀವ್ರತೆಯನ್ನು 6.4 ತೀವ್ರತೆ ಎಂದು ವರೆದಿ ಮಾಡಿತ್ತು. ಬಳಿಕ ಪರಿಷ್ಕರಿಸಿ 5.6 ಎಂದು ಉಲ್ಲೇಖಿಸಿದೆ. ಇದರ ಪರಿಣಾಮ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ:  ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    ಸದ್ಯ ಹೆಚ್ಚಿನ ಹಾನಿಯಾಗಲಿ, ಸಾವುನೋವುಗಳಾಗಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಹಲವರು ಇದರ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಮೆಮ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ವ್ಯಂಗ್ಯ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

  • ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ಕಠ್ಮಂಡು: ಮ್ಯಾನ್ಮಾರ್‌, ಥಾಯ್ಲೆಂಡ್‌ ಹಾಗೂ ಜಪಾನ್‌ ಬಳಿಕ ಈಗ ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ (Nepal Earthquak) ಸಂಭವಿಸಿದೆ.

    ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಶುಕ್ರವಾರ ಸಂಜೆ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ರಾತ್ರಿ 7.52ಕ್ಕೆ (ಸ್ಥಳೀಯ ಕಾಲಮಾನ) ಭೂಮಿಯಿಂದ 20 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದರ ಪರಿಣಾಮ ಉತ್ತರ ಭಾರತದಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

    ಇತ್ತೀಚೆಗಷ್ಟೇ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯೇ ಭಾರೀ ಭೂಕಂಪ (Myanmar Earthquake) ಸಂಭವಿಸಿತ್ತು. ಇದರಿಂದ ನೂರಾರು ಗಗನಚುಂಬಿ ಕಟ್ಟಡಗಳು ನೆಲಸಮಗೊಂಡಿದ್ದಲ್ಲದೇ ಸಾವಿರಾರು ಸಂಖ್ಯೆಯ ಜನ ಸಾವನ್ನಪ್ಪಿದ್ದಾರೆ. ಈವರೆಗೆ ಸುಮಾರು 441 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ವಿಜಯಪುರದಲ್ಲಿ ಕಂಪಿಸಿದ ಭೂಮಿ – ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ ಜನ

    ವಿಜಯಪುರದಲ್ಲಿ ಕಂಪಿಸಿದ ಭೂಮಿ – ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ ಜನ

    ವಿಜಯಪುರ: ಜಿಲ್ಲೆಯ ತಿಕೋಟಾ(Tikota) ತಾಲೂಕಿನೆಲ್ಲೆಡೆ ಭೂಕಂಪನದ ಅನುಭವವಾಗಿದ್ದು, ಭೂಮಿಯಿಂದ ಕೇಳಿಸಿದ ಜೋರಾದ ಶಬ್ದಕ್ಕೆ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ.

    ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್ – ಬೆಂಗಳೂರಿಗೆ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ

    ಕಳೆದ ವರ್ಷ ನಾಲ್ಕೈದು ಬಾರಿ ಭೂಮಿ ಕಂಪಿಸಿದ್ದು, ಈ ವರ್ಷ ಮೊದಲ ಭೂಕಂಪನ ಅನುಭವವಾಗಿದೆ. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 41 ರೂ. ಇಳಿಕೆ

  • ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು, 60 ಮಸೀದಿಗಳಿಗೆ ಹಾನಿ: ಮ್ಯಾನ್ಮರ್‌ ಮುಸ್ಲಿಂ ಸಂಘಟನೆ

    ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು, 60 ಮಸೀದಿಗಳಿಗೆ ಹಾನಿ: ಮ್ಯಾನ್ಮರ್‌ ಮುಸ್ಲಿಂ ಸಂಘಟನೆ

    ನೈಪಿಡಾವ್: ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗಲೇ ಭೂಕಂಪ ಸಂಭವಿಸಿದ್ದರಿಂದ ಸುಮಾರು 700ಕ್ಕೂ ಹೆಚ್ಚು ಬಂಧುಗಳು ಮೃತಪಟ್ಟಿದ್ದಾರೆ ಎಂದು ಮ್ಯಾನ್ಮಾರ್ ಮುಸ್ಲಿಂ ಸಂಘಟನೆ (Myanmar Muslim Organisation) ತಿಳಿಸಿದೆ.

    ಪವಿತ್ರ ರಂಜಾನ್‌ (Ramadan) ಸಮಯದಲ್ಲಿ ಮಸೀದಿಯಲ್ಲಿ (Mosques) ಪ್ರಾರ್ಥನೆ (Friday Prayer) ನಡೆಯುತ್ತಿತ್ತು. ಈ ಸಂದರ್ಭದಲ್ಲೀ ಭೂಕಂಪ (Earthquake) ಸಂಭವಿಸಿದ್ದರಿಂದ ಸುಮಾರು 60 ಮಸೀದಿಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್‌ವರ್ಕ್‌ನ ಸ್ಟೀರಿಂಗ್ ಕಮಿಟಿಯ ಸದಸ್ಯರಾದ ತುನ್ ಕಿ ಹೇಳಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 334 ಅಣುಬಾಂಬ್‌ಗಳ ಶಕ್ತಿಗೆ ಹೋಲಿಸಿದ ವಿಜ್ಞಾನಿಗಳು

     

    ಮಸೀದಿಗಳಲ್ಲಿ ಸಾವನ್ನಪ್ಪಿದವರನ್ನು ಇದುವರೆಗಿನ ಭೂಕಂಪದಲ್ಲಿ ಸಾವನ್ನಪ್ಪಿದ 2 ಸಾವಿರಕ್ಕೂ  ಹೆಚ್ಚು ಜನರ ಅಧಿಕೃತ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

    ಭೂಕಂಪದ ಸಮಯದಲ್ಲಿ ಮಸೀದಿಗಳು ಉರುಳಿ ಬೀಳುವುದು ಮತ್ತು ಜನರು ಆ ಜಾಗದಿಂದ ಸುರಕ್ಷಿತ ಪ್ರದೇಶಕ್ಕೆ ಓಡಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾನಿಗೊಳಗಾದ ಹೆಚ್ಚಿನ ಮಸೀದಿಗಳು ಹಳೆಯ ಕಟ್ಟಡಗಳಾಗಿದ್ದವು ಎಂದು ತುನ್ ಕಿ ಹೇಳಿದರು. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

     

    ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ರಾಜಧಾನಿ ಮ್ಯಾನ್ಮಾರ್ ನೈಪಿಡಾವ್ ಮತ್ತು ಎರಡನೇ ಅತಿದೊಡ್ಡ ನಗರವಾದ ಮಂಡಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದೆ.

    ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

     

  • ಹೋಟೆಲ್‌ನಲ್ಲಿದ್ದಾಗ ಭೂಕಂಪ – 10ನೇ ಫ್ಲೋರ್‌ನಿಂದ ಕನ್ನಡಿಗರು ಬದುಕಿ ಬಂದಿದ್ದೇ ರೋಚಕ!

    ಹೋಟೆಲ್‌ನಲ್ಲಿದ್ದಾಗ ಭೂಕಂಪ – 10ನೇ ಫ್ಲೋರ್‌ನಿಂದ ಕನ್ನಡಿಗರು ಬದುಕಿ ಬಂದಿದ್ದೇ ರೋಚಕ!

    – ಭೂಕಂಪನದ ಕರಾಳ ಅನುಭವ ಬಿಚ್ಚಿಟ್ಟ ಬೆಂಗಳೂರಿನ ದಂಪತಿ

    ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಏನೂ ಇಲ್ಲ ಅನ್ನೋದಕ್ಕೆ ಮ್ಯಾನ್ಮಾರ್ (Myanmar) ಮತ್ತು ಥೈಲ್ಯಾಂಡ್‌ನಲ್ಲಿ (Thailand) ನಡೆದ ಭೂಕಂಪವೇ (Earthquake) ಸಾಕ್ಷಿ. ನೋಡ ನೋಡ್ತಿದ್ದಂತೆ ಭೂಮಿ ಪ್ರಬಲವಾಗಿ ಕಂಪಿಸಿ ಕ್ಷಣಮಾತ್ರದಲ್ಲೇ ಕೋಟ್ಯಂತರ ಜನರಿಗೆ ಇಷ್ಟೇ ಜೀವನ ಅನ್ನೋದನ್ನ ತೋರಿಸಿಬಿಟ್ಟಿತ್ತು. ಇತಂಹ ಘನಘೋರ ಭೂಕಂಪನದಿಂದ ಪಾರಾದ ಕನ್ನಡದ ದಂಪತಿ ತಾಯ್ನಾಡಿಗೆ ಮರಳಿದ್ದಾರೆ.

    ಹೌದು, ಹೀಗೆ ಆರಾಮಾಗಿ ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ದಂಪತಿ ಹೆಸರು ಅಕ್ಷಯ್ ಮತ್ತು ಜಾಗೃತಿ. ಕಳೆದ ವಾರ ತಮ್ಮ 2 ವರ್ಷದ ಮಗನೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. 4 ದಿನ ಥೈಲ್ಯಾಂಡ್‌ನ ವಿವಿಧ ಪ್ರವಾಸಿ ತಾಣಗಳನ್ನ ನೋಡಿ ಎಂಜಾಯ್ ಮಾಡಿ, ಶುಕ್ರವಾರ ಬ್ಯಾಂಕಾಕ್‌ಗೆ (Bangkok) ತಲುಪಿದ್ದರು. ಇನ್ನೂ 3 ದಿನ ಬ್ಯಾಂಕಾಕ್‌ನಲ್ಲೇ ಟೂರ್ ಮಾಡಿ ಬರಬೇಕಿದ್ದ ದಂಪತಿ ಶನಿವಾರವೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

    ಶುಕ್ರವಾರ ಮಧ್ಯಾಹ್ನ ಹೋಟೆಲ್‌ನಲ್ಲಿ ಚೆಕ್‌ಇನ್ ಆಗಿ ಮಗನಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಭೂಮಿ ಕಂಪಿಸಿದೆ. ತಾವಿದ್ದ ಹೋಟೆಲ್‌ ಕೂಡ ಕಂಪಿಸಿದೆ. ಮೊದಲು ಏನೋ ಹೋಟೆಲ್‌ನದ್ದೇ ಸಮಸ್ಯೆ ಇರಬೇಕು ಅಂದುಕೊಂಡಿದ್ದೆವು. ಆದರೆ ಯಾವಾಗ ಇನ್ನಷ್ಟು ಕಂಪನ ಜೋರಾದಾಗ ಮೊದಲು ಜೀವ ಉಳಿಸಿಕೊಳ್ಳೋಣ ಎಂದು ಕಂಕುಳಲ್ಲಿ ಮಗುವನ್ನ ಹಾಕಿಕೊಂಡು 10ನೇ ಫ್ಲೋರ್‌ನಿಂದ ಇಳಿದು ಬಂದಿದ್ದೇವೆ ಎಂದು ಜಾಗೃತಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ ಕಿತ್ತಾಟ – ರೈತರಿಂದ ಕೆಎಂಎಫ್ ಅಧ್ಯಕ್ಷರ ತರಾಟೆ

    ಇನ್ನೂ ಜಾಗೃತಿ ಅವರ ಪತಿ ಅಕ್ಷಯ್ ಮಾತನಾಡಿ, ಬದುಕುಳಿದರೆ ನಮ್ಮ ದೇಶಕ್ಕೆ ಹೋಗೋಣ ಎಂದು ಪಾಸ್‌ಪೋರ್ಟ್ ತೆಗದುಕೊಂಡು ಮಗು ಪತ್ನಿಯನ್ನ ಕರೆದುಕೊಂಡು ಆ ಹೋಟೆಲ್‌ನಿಂದ ಹೇಗೆ ಕೆಳಕ್ಕೆ ಬಂದೆವು ಎನ್ನುವುದೇ ಗೊತ್ತಾಗಲಿಲ್ಲ. ಭಯ, ರಸ್ತೆ ತುಂಬ ಜನ, ಎಲ್ಲಿ ಏನಾಗ್ತಿದೆ ಅನ್ನೋದೆ ತಿಳಿಯುತ್ತಿಲ್ಲ. ಭೂಮಿ ಕಂಪಿಸಿದ ರೀತಿ, ಹೋಟೆಲ್‌ ಕೂಡ ಶೇಕ್ ಆಗಿ ಏನು ಮಾಡುವುದು ಎಂದು ತಿಳಿಯದಂತಾಗಿತ್ತು. ದೇವರ ಧಯೆಯಿಂದ ಬದುಕಿ ಬಂದಿದ್ದೇವೆ ಎಂದು ಭೂಕಂಪನ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ಒಟ್ಟಿನಲ್ಲಿ ಬ್ಯಾಂಕಾಕ್ ಪ್ರವಾಸಕ್ಕೆ ಹೋದ ಬೆಂಗಳೂರಿನ (Bengaluru) ದಂಪತಿ ಭೂಕಂಪನದ ಅನುಭವವನ್ನ ಏಳೆಏಳೆಯಾಗಿ ಹೇಳಿದ್ದು, ಅಬ್ಬಾ ಹೇಗೋ ಸೇಫ್ ಆಗಿ ಬಂದಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

  • ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

    ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

    ನವದೆಹಲಿ: ಭೂಕಂಪದಿಂದ (Earthquake) ನಲುಗಿದ ಮ್ಯಾನ್ಮಾರ್‌ಗೆ (Myanmar) ಭಾರತ ʻಆಪರೇಷನ್ ಬ್ರಹ್ಮʼ (Operation Brahma) ಹೆಸರಿನಲ್ಲಿ ವಿಮಾನದ ಮೂಲಕ ರಕ್ಷಣಾ ಸಿಬ್ಬಂದಿ, ವೈದ್ಯರು ಹಾಗೂ ಅಗತ್ಯ ವಸ್ತುಗಳನ್ನು ರವಾನಿಸಿದೆ.

    ಭೂಕಂಪದ ನಂತರ ಕಾರ್ಯಾಚರಣೆಗೆ ಎರಡು NDRF ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ 55 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಮ್ಯಾನ್ಮಾರ್‌ಗೆ ಮೊದಲು ನೆರವು ನೀಡಿದ ದೇಶ ಭಾರತ. ಮೊದಲಿಗೆ ಸೇನಾ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ 2 ವಿಮಾನಗಳು ಶೀಘ್ರ ತೆರಳಲಿವೆ. ರಕ್ಷಣಾ ಕಾರ್ಯಾಚರಣೆಗಾಗಿ 80 ಎನ್‌ಡಿಆರ್‌ಎಫ್ ಸಿಬ್ಬಂದಿ ತೆರಳಿದ್ದಾರೆ. ಮೂರನೇ ಎನ್‌ಡಿಆರ್‌ಎಫ್ ತಂಡವನ್ನು ಕೋಲ್ಕತ್ತಾದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

    ಭಾರತದಿಂದ 118 ಫೀಲ್ಡ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮತ್ತು 2 ನೌಕಾಪಡೆ ಹಡಗು ರವಾನೆ ಆಗಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

    ಪರಿಹಾರ ಸಾಮಗ್ರಿಗಳಲ್ಲಿ ಟೆಂಟ್‌ಗಳು, ಬೆಡ್‌ಶೀಟ್‌ಗಳು, ಆಹಾರ ಸಾಮಾಗ್ರಿ, ನೀರು ಶುದ್ದೀಕರಣ ಉಪಕರಣಗಳು, ಸೌರದೀಪಗಳು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಿ130ಜೆ ಮಿಲಿಟರಿ ವಿಮಾನದ ಮೂಲಕ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತಲುಪಿಸಲಾಗಿದೆ. ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೋನ್‌ನ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೆ ಸರಬರಾಜಾದ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ.

    ಭಾರೀ ಭೂಕಂಪದಿಂದ ಮ್ಯಾನ್ಮಾರ್‌ನಲ್ಲಿ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಥೈಲ್ಯಾಂಡ್ ಇದುವರೆಗೆ 10 ಸಾವುಗಳನ್ನು ಖಚಿತಪಡಿಸಿದೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ

  • Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

    Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

    ನೇಪಿಟಾವ್/ಬ್ಯಾಂಕಾಕ್: ಮಯನ್ಮಾರ್‌ (Myanmar) ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಶುಕ್ರವಾರ ಬೆಳಗ್ಗೆ 11:50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಮೊದಲ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾಗಯಿಂಗ್‌ನ ವಾಯುವ್ಯಕ್ಕೆ ಭೂಮಿಯಿಂದ 10 ಕಿಮೀ ಆಳದಲ್ಲೇ ಕೇಂದ್ರ ಬಿಂದು ಪತ್ತೆಯಾಗಿತ್ತು. ಇದಾದ ಕೆಲವು ಗಂಟೆಗಳಲ್ಲಿ ಇನ್ನೂ ಮೂರ್ನಾಲ್ಕು ಭಾರಿ ಭೂಕಂಪ ಸಂಭವಿಸಿತ್ತು. ಸರಣಿ ಭೂಕಂಪದ ಹಿನ್ನೆಲೆ ಗಗನ ಚುಂಬಿ ಕಟ್ಟಡಗಳು ನೆಲಕ್ಕಪ್ಪಳಿಸಿದವು. ಇದರಿಂದ ಭಾರತದ ಕೆಲ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಈ ನಡುವೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ತುರ್ತುಸೇವೆಗಳು ದುರ್ಬಲವಾಗಿವೆ. ಅಲ್ಲದೇ ಅಲ್ಲಿನ ಸರ್ಕಾರವೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಹೇಳಲಾಗಿದೆ. ಸದ್ಯ ಮ್ಯಾನ್ಮಾರ್‌ ಒಂದರಲ್ಲೇ 1,640 ಮಂದಿ ಸಾವನ್ನಪ್ಪಿದ್ದು, ಬ್ಯಾಂಕಾಂಕ್‌ನಲ್ಲಿ ಈವರೆಗೆ 10 ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕುಸಿದ ಕಟ್ಟಡಗಳ ಅವಶೇಷಗಳ ಅಡಿ ನೂರಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ

    100 ವರ್ಷಗಳ ಹಳೆಯ ಸೇತುವೆ ಕುಸಿತ
    ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಅಲ್ಲದೇ ಸಾಗಯಿಂಗ್‌ನಿಂದ ಐರಾವಡ್ಡಿ ನದಿ ವರೆಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ನೀರಿನಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ