Tag: earthquake

  • ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

    ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

    ನವದೆಹಲಿ: ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಬುಧವಾರದಂದು ದೆಹಲಿ ಹಾಗೂ ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.

    ಉತ್ತರಾಖಂಡ್‍ನ ಪೂರ್ವ ಡೆಹ್ರಾಡೂನ್ ನಿಂದ 121 ಕಿ.ಮೀ ದೂರದ ರುದ್ರಪ್ರಯಾಗದಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ರಾತ್ರಿ 8:49 ರ ಸಮಯದಲ್ಲಿ 30 ಕಿ.ಮೀ ಭೂ ಆಳದಲ್ಲಿ ಭೂಕಂಪನ ಸಂಭವಿಸಿದೆ.

    ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರಾಖಂಡ್‍ನಲ್ಲಿ ಎರಡನೇ ಬಾರಿಗೆ ಭೂಕಂಪನವಾಗಿದೆ. ಮಂಗಳವಾರ 3.3 ತೀವ್ರತೆಯ ಭೂಕಂಪನ ಸಂಭವಿಸಿದ ಕುರಿತು ವರದಿಯಾಗಿತ್ತು. ಉತ್ತರಾಖಂಡ್‍ನ ರೂರ್ಕಿ, ಡೆಹ್ರಾಡೂನ್ ಜೊತೆಗೆ ಉತ್ತರ ಪ್ರದೇಶ ಹಾಗೂ ಹರಿಯಾಣದ ಕೆಲವು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ನಂತರ ಡೆಹ್ರಾಡೂನ್ ನಲ್ಲಿ ಹಲವು ಜನರು ತಮ್ಮ ಮನೆ ಹಾಗೂ ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆಂದು ವರದಿಯಾಗಿದೆ.

    ಭೂ ಕಂಪನದಿಂದ ಹಾನಿಯಾಗಿರುವ ಕುರಿತು ಯಾವುದೇ ವರದಿ ಬಂದಿಲ್ಲ. ಭೂಕಂಪನ ಅನುಭವವಾದ ಕೆಲವೇ ಕ್ಷಣಗಳಲ್ಲಿ ಹಲವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

  • ಬೀದರ್ ನಲ್ಲಿ ಲಘು ಭೂ ಕಂಪನ- ಚಳಿಯನ್ನು ಲೆಕ್ಕಿಸದೆ ರಾತ್ರಿ ಇಡೀ ಜಾಗರಣೆ

    ಬೀದರ್ ನಲ್ಲಿ ಲಘು ಭೂ ಕಂಪನ- ಚಳಿಯನ್ನು ಲೆಕ್ಕಿಸದೆ ರಾತ್ರಿ ಇಡೀ ಜಾಗರಣೆ

    ಬೀದರ್: 3ನೇ ಬಾರಿ ಲಘು ಭೂಕಂಪ ಉಂಟಾಗಿದ್ದು, ಚಳಿಯನ್ನು ಲೆಕ್ಕಿಸದೆ ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಶಮ್ತಾಬಾದ್‍ನಲ್ಲಿ ನಡೆದಿದೆ.

    ರಾತ್ತಿ ಸುಮಾರು 2 ಗಂಟೆಯಿಂದ 9 ಬಾರಿ ಭೂ ಕಂಪಿಸಿದ ಅನುಭವ ಜನರಲ್ಲಿ ಉಂಟಾಗಿದೆ. ಅಷ್ಟೇ ಅಲ್ಲದೇ ವಿಚಿತ್ರ ಧ್ವನಿಯೂ ಕೂಡ ಕೇಳಿಸಿದೆ. ಇದರಿಂದ ಹೆದರಿದ ಗ್ರಾಮಸ್ಥರು ಎಲ್ಲರು ಒಂದು ಕಡೆ ಸೇರಿ ಬೆಂಕಿ ಹಾಕಿ ಕಾಯಿಸಿಕೊಂಡು ಭಯದಲ್ಲಿ ಕಾಲಕಳೆದಿದ್ದಾರೆ.

    ಅಲ್ಲದೆ ಬೆಳಕೇರಾ, ಚಿಟ್ಟುಗುಪ್ಪ ಗ್ರಾಮಗಳಲ್ಲಿ ಕೂಡ ವಿಚಿತ್ರ ಧ್ವನಿ ಹಾಗೂ ಭೂಮಿ ನಡುಗಿದ ಅನುಭವ ಗ್ರಾಮಸ್ಥರಲ್ಲಿ ಉಂಟಾಗಿದೆ.

  • ಪ್ರಬಲ ಭೂಕಂಪಕ್ಕೆ ಮೆಕ್ಸಿಕೋ ತತ್ತರ – 149 ಬಲಿ

    ಪ್ರಬಲ ಭೂಕಂಪಕ್ಕೆ ಮೆಕ್ಸಿಕೋ ತತ್ತರ – 149 ಬಲಿ

    ಮೆಕ್ಸಿಕೋ: ಸತತ ಎರಡನೇ ಬಾರಿ ಮೆಕ್ಸಿಕೋದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ.

    ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು ಧರೆಗೆ ಉರುಳಿವೆ ಎಂದು ವರದಿಯಾಗಿದೆ.

    ಕಂಪನ ಆಗ್ತಿದಂತೆ ಜನರು ಕಟ್ಟಡಗಳಿಂದ ಹೊರಗೆ ಓಡಿಹೋಗಿದ್ದಾರೆ. ಆದರೆ ಅವರ ಮೇಲೂ ಕಟ್ಟಡಗಳು ಉರುಳಿಬಿದ್ದಿವೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು ಜಖಂ ಆಗಿವೆ. ವಿಚಿತ್ರ ಅಂದ್ರೆ ಇದೇ ದಿನ 32 ವರ್ಷಗಳ ಹಿಂದೆ 1985ರಂದು 8ರಷ್ಟು ತೀವ್ರತೆಯ ಭೂಕಂಪವಾಗಿತ್ತು. ಆ ಮಹಾ ದುರಂತದಲ್ಲಿ 5 ಸಾವಿರ ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಸಿಲುಕಿರುವ ಕೆಲವರು ತಮ್ಮ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋ ಮೂಲಕ ಸಹಾಯಕ್ಕಾಗಿ ತಮ್ಮ ಕುಟುಂಬದವರನ್ನು ಅಂಗಲಾಚಿದ್ದಾರೆ.

    ಮಾರ್ಲೋಸ್ ರಾಜ್ಯದಲ್ಲಿ 64 ಮಂದಿ, ಮೆಕ್ಸಿಕೋ ನಗರದಲ್ಲಿ 36 ಮಂದಿ ಮೃತಪಟ್ಟಿದ್ದಾರೆ. ರೊಮ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಬೆಡ್ ನಲ್ಲಿದ್ದ ರೋಗಿಗಳನ್ನು ವ್ಹೀಲ್‍ಚೇರ್ ಮೂಲಕ ಹೊರಗಡೆ ಕಳುಹಿಸಲಾಗಿದೆ.

    ಇಂದು ಭೂಕಂಪ ಪರಿಹಾರದ ಪ್ರಾತ್ಯಕ್ಷಿಕೆ ನಡೆದ ಕೆಲವೇ ಗಂಟೆಗಳಲ್ಲಿ ಮೆಕ್ಸಿಕೋ ಭೂಕಂಪನಕ್ಕೆ ಬೆಚ್ಚಿಬಿದ್ದಿದೆ.

    https://twitter.com/HurricaneData/status/910307660108566530

    https://twitter.com/the_friedz/status/910224536297136128

    https://twitter.com/Fred_Vega/status/910261269516640256

    https://twitter.com/kwilli1046/status/910215183003504645

  • ಧಾರವಾಡ ನಗರದಲ್ಲಿ ಭೂಕಂಪನದ ಅನುಭವ – ರಾತ್ರಿಯಿಡೀ ಜನರಿಗೆ ಜಾಗರಣೆ

    ಧಾರವಾಡ ನಗರದಲ್ಲಿ ಭೂಕಂಪನದ ಅನುಭವ – ರಾತ್ರಿಯಿಡೀ ಜನರಿಗೆ ಜಾಗರಣೆ

    ಧಾರವಾಡ: ನಗರದ ಹಲವು ಕಡೆ ಭೂಕಂಪನದ ಅನುಭವವಾಗಿದೆ. ನಗರದ ನಾರಾಯಣಪುರ, ಕುಮಾರೇಶ್ವರನಗರ ಸೇರಿದಂತೆ 5 ಕ್ಕೂ ಹೆಚ್ಚು ಬಡಾವಣೆಯಲ್ಲಿ ಭೂಕಂಪನ ಅನುಭವದಿಂದ ಜನರು ಆತಂಕಗೊಂಡ ಘಟನೆ ನಡೆದಿದೆ.

    ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಈ ವೇಳೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದ ಕಾರಣ ಜನರು ಮನೆಯಿಂದ ಓಡಿ ಹೊರ ಬಂದು ನಿಂತಿದ್ದಾರೆ. ಇನ್ನು ಕೆಲವು ಕಡೆ ಮನೆಗಳು ಬಿರುಕು ಕೂಡಾ ಬಂದಿದ್ದರಿಂದ ಜನರು ಇನ್ನಷ್ಟು ಆತಂಕಪಟ್ಟಿದ್ದಾರೆ. ಆದರೆ ನಗರದ ಯಾವುದೇ ಕಡೆ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

    ಇನ್ನೇನು ಜನರು ಮಲಗಬೇಕು ಎನ್ನುವಷ್ಟರಲ್ಲಿ ಈ ರೀತಿ ಭೂಮಿ ಕಂಪಿಸಿದ ಕಾರಣ ಜನರು ಭಯಭೀತರಾಗಿದ್ರು.

  • ಭೂಕಂಪ ಎಫೆಕ್ಟ್: ನೀರಿನ ಟ್ಯಾಂಕ್ ಗೋಡೆ ಕುಸಿತ-ಮಹಿಳೆಗೆ ಗಾಯ

    ಭೂಕಂಪ ಎಫೆಕ್ಟ್: ನೀರಿನ ಟ್ಯಾಂಕ್ ಗೋಡೆ ಕುಸಿತ-ಮಹಿಳೆಗೆ ಗಾಯ

    ಮಂಡ್ಯ: ಮಂಗಳವಾರ ಸಂಭವಿಸಿದ ಲಘು ಭೂಕಂಪನದಿಂದ ಶಿಥಿಲಗೊಂಡಿದ್ದ ಮನೆಯ ಮೇಲಿದ್ದ ನೀರಿನ ಟ್ಯಾಂಕ್‍ನ ಗೋಡೆ ಕುಸಿದು ಮತ್ತೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸರು ಗ್ರಾಮದಲ್ಲಿ ಗೋಡೆ ಕುಸಿತಗೊಂಡಿದೆ.

    ನಂದೀಶ್ ಎಂಬುವವರ ಮನೆಯ ಮೇಲಿದ್ದ ಪ್ಲಾಸ್ಟಿಕ್ ನೀರಿನ ಟ್ಯಾಂಕ್ ನಿನ್ನೆ ಸಂಭವಿಸಿದ ಭೂಕಂಪನದಿಂದ ಶಿಥಿಲವಾಗಿತ್ತು. ಇಂದು ಆ ಟ್ಯಾಂಕ್ ಕುಸಿದು ಬಿದ್ದಿದೆ. ಟ್ಯಾಂಕ್ ರಕ್ಷಣೆಗೆ ಕಟ್ಟಲಾಗಿದ್ದ ಸಿಮೆಂಟ್ ಗೋಡೆ ಮೇಲಿನಿಂದ ಕೆಳಗಿದ್ದ ಹೆಂಚಿನ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಈರಯ್ಯ ಎಂಬುವವರ ಮನೆಯ ಹೆಂಚುಗಳನ್ನ ಛಿದ್ರಗೊಳಿಸಿ ಒಳನುಗ್ಗಿದ ಸಿಮೆಂಟ್ ಗೋಡೆ ಮನೆಯೊಳಗಿದ್ದ ಜಯಮ್ಮ ಅವರಿಗೆ ತಾಗಿದೆ. ಇದರಿಂದ ಜಯಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಹೆಂಚಿನ ಮೇಲೆ ಸಿಮೆಂಟ್ ಗೋಡೆ ಬಿದ್ದ ಶಬ್ದ ಕೇಳಿ ಜಯಮ್ಮ ಪಕ್ಕಕ್ಕೆ ಸರಿದಿದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ನೀರಿನ ಟ್ಯಾಂಕ್ ಕುಸಿದ ಪರಿಣಾಮ ಮನೆ, ಸೋಲಾರ್ ವಾಟರ್ ಹೀಟರ್ ಸೇರಿದಂತೆ ಹಲವು ವಸ್ತುಗಳು ಜಖಂಗೊಂಡಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

     

  • ರಾಜ್ಯದ ಹಲವೆಡೆ ಲಘು ಭೂಕಂಪನದ ಅನುಭವ – ನಟಿ ಲೀಲಾವತಿ ಎಸ್ಟೇಟ್‍ನಲ್ಲೂ ಭೂಮಿ ಶೇಕ್

    ರಾಜ್ಯದ ಹಲವೆಡೆ ಲಘು ಭೂಕಂಪನದ ಅನುಭವ – ನಟಿ ಲೀಲಾವತಿ ಎಸ್ಟೇಟ್‍ನಲ್ಲೂ ಭೂಮಿ ಶೇಕ್

    ಬೆಂಗಳೂರು: ಮೈಸೂರಿನಲ್ಲಿ ಭೂಮಿಯೇ ಕೊತ-ಕೊತ ಕುದಿದು ಬಾಲಕನನ್ನ ಬಲಿ ಪಡೆದಿದ್ದಾಯ್ತು. ಇದೀಗ ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ, ಚನ್ನಪಟ್ಟಣ, ಮದ್ದೂರಲ್ಲಿ ಲಘು ಭೂಕಂಪನ ಅನುಭವವಾಗಿದ್ದು, ಕೆಲಕಾಲ ಜನರನ್ನು ಆತಂಕಕ್ಕೀಡುಮಾಡಿದೆ.

    ಬೆಂಗಳೂರಿನ ಯಲಹಂಕ ನ್ಯೂಟೌನ್, ಹನುಮಂತರನಗರ, ಶ್ರೀನಗರಗಳಲ್ಲಿ ಭೂಮಿ ಕಂಪಿಸಿದ್ದು, ಹಿರಿಯ ನಟಿ ಲೀಲಾವತಿ ನಟ ವಿನೋದ್ ರಾಜ್‍ಗೂ ಈ ಅನುಭವವಾಗಿದೆಯಂತೆ. ಸುಮಾರು 2-3 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದೆ. ಇದರಿಂದ ಭಯಗೊಂಡ ನಿವಾಸಿಗಳು ಮನೆಯಿಂದ ಹೊರ ಬಂದಿದ್ದಾರೆ.

    ನೆಲಮಂಗಲದಲ್ಲಿರುವ ಫಾರ್ಮ್ ಹೌಸ್, ಸೋಲದೇವನಹಳ್ಳಿ ಸುತ್ತಲೂ ಭೂಮಿ ಅಲುಗಾಡಿದ ಅನುಭವವಾಗಿದ್ದು, ಜನ ಆತಂಕದಿಂದ ಹೊರಬಂದಿದ್ದಾರೆ. ಇಲ್ಲಿ 5-6 ಸೆಕೆಂಡ್ ಗಳ ಕಾಲ ಭೂಮಿ ನಡುಗಿದೆ ಅಂತಾ ಸ್ಥಳೀಯರು ತಿಳಿಸಿದ್ದಾರೆ.

    ಮಂಡ್ಯದ ಮಳವಳ್ಳಿ ತಾಲೂಕಿನ ಬೆಳಕವಾಡಿ, ನೆಟ್ಕಲ್, ಕಿರಗಸೂರು ಗ್ರಾಮ ಸುತ್ತ ಭೂಮಿ ಕಂಪಿಸಿದ್ದು, ಗೋಡೆಗಳಲ್ಲಿ ಬಿರುಕು, ಮನೆಯಲ್ಲಿದ್ದ ಗಾಜಿನ ಗ್ಲಾಸ್‍ಗಳು ಚೆಲ್ಲಾಪಿಲ್ಲಿಯಾಗಿವೆ. ಇನ್ನು ರಾಮನಗರ- ಚನ್ನಪಟ್ಟಣದಲ್ಲಿಯೂ ಭೂಕಂಪನವಾಗಿದೆ. ಚಾಮರಾಜನಗರದ ಕೊಳ್ಳೇಗಾಲ, ತುಮಕೂರು ನಗರದ ಹಲವಡೆ ಬೆಳಗ್ಗೆ 7.38 ರಿಂದ 7.45 ಸುಮಾರಿಗೆ ಲಘು ಭೂಕಂಪನವಾಗಿದೆ.

  • ರಾಮನಗರದ ದೊಡ್ಡನಹಳ್ಳಿಯಲ್ಲಿ ಲಘು ಭೂಕಂಪ: ಐದು ಮನೆಗಳ ಗೋಡೆಗಳಲ್ಲಿ ಬಿರುಕು

    ರಾಮನಗರದ ದೊಡ್ಡನಹಳ್ಳಿಯಲ್ಲಿ ಲಘು ಭೂಕಂಪ: ಐದು ಮನೆಗಳ ಗೋಡೆಗಳಲ್ಲಿ ಬಿರುಕು

    ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಭೂಕಂಪಿಸಿದ್ದು ಗ್ರಾಮಸ್ಥರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

    ತಡರಾತ್ರಿ ಸುಮಾರು 12:20ರ ಸುಮಾರಿನಲ್ಲಿ ಸುಖನಿದ್ರೆಯಲ್ಲಿ ಮಲಗಿದ್ದ ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನು, ಟಿವಿ ಮೇಲಿದ್ದ ಸಾಮಾಗ್ರಿಗಳೆಲ್ಲ ಕೆಳಗೆ ಬಿದ್ದಿವೆ. ಕೂಡಲೇ ಮನೆಯವರೆಲ್ಲಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಘಟನೆಯಲ್ಲಿ 5 ಮನೆಗಳಲ್ಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದ ಚಿಕ್ಕೇಗೌಡ, ಚನ್ನಾಜಮ್ಮ, ತಮ್ಮಯಣ್ಣ, ಚಿಕ್ಕಮ್ಮ, ಹಾಗೂ ಸಿದ್ದೇಗೌಡ ಎಂಬುವವರ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಂಪನದಿಂದ ಇದೀಗ ಗ್ರಾಮಸ್ಥರು ಭಯದಲ್ಲಿದ್ದಾರೆ.

    ಗ್ರಾಮದಲ್ಲಿ ಈ ಹಿಂದೆ 9 ವರ್ಷಗಳ ಹಿಂದೆ ಸಹ ಲಘು ಭೂಕಂಪವಾಗಿ ಒಂದು ಮನೆ ಉರುಳಿ ಬಿದ್ದಿತ್ತು. ಅಲ್ಲದೇ ಹಲವು ಮನೆಗಳ ಗೋಡೆ ಸಹ ಬಿರುಕು ಮೂಡಿದ್ವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಒಟ್ಟಾರೆ ದೊಡ್ಡೇನಳ್ಳಿ ಗ್ರಾಮದ ಜನ ಇದೀಗ ತಡರಾತ್ರಿ ಉಂಟಾದ ಭೂ ಕಂಪನದಿಂದ ಭಯ ಭೀತರಾಗಿದ್ದು ರಿಕ್ಟರ್ ಮಾಪಕದಲ್ಲಿ ಎಷ್ಟು ತೀವ್ರತೆ ಯಲ್ಲಿ ಭೂಕಂಪನವಾಗಿದೆ ಎಂಬುದನ್ನು ತಿಳಿಯಲು ಕುತೂಹಲವನ್ನು ಸಹ ವ್ಯಕ್ತಪಡಿಸ್ತಾ ಇದ್ದಾರೆ.

  • ಚಿತ್ರದುರ್ಗ, ತುಮಕೂರಲ್ಲಿ ಭೂಮಿ ಕಂಪಿಸಿದ ಅನುಭವ

    ಚಿತ್ರದುರ್ಗ, ತುಮಕೂರಲ್ಲಿ ಭೂಮಿ ಕಂಪಿಸಿದ ಅನುಭವ

    – ಕೋಟೆ ನಾಡಲ್ಲಿ ಬಿರುಕು ಬಿಟ್ಟ ದೇವಸ್ಥಾನ

    ಚಿತ್ರದುರ್ಗ/ತುಮಕೂರು: ಇಂದು ಬೆಳ್ಳಂಬೆಳಗ್ಗೆ ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

    ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮ ಹಾಗೂ ಗೇಟ್‍ನಲ್ಲಿ ಇಂದು ಬೆಳಗ್ಗೆ 6.45ರ ವೇಳೆಗೆ ಭೂಕಂಪನದ ಅನುಭವವಾಗಿದ್ದು, ಜನ ಗಾಬರಿಗೊಳಗಾಗಿದ್ದಾರೆ. ಮಲಗಿದ್ದ ಮಕ್ಕಳನ್ನು ಹೊತ್ತು ಪೋಷಕರು ಹೊರಗೆ ಓಡಿದ್ದು, ಮಕ್ಕಳು ಹಾಗೂ ಮಹಿಳೆಯರು ಚೀರಾಡಿದ್ದಾರೆ.

    ಹೊಸದುರ್ಗ ತಾಲೂಕಿನ ಕಂಚೀಪುರ, ಕಿಟ್ಟದಾಳ್, ಚಿಕ್ಕ ಬ್ಯಾಲದಕೆರೆ, ನಾಗತಿಹಳ್ಳಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಕಿ.ಮೀ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದೆ. ಭೂ-ಕಂಪನದಿಂದಾಗಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದ ಕಂಚಿವರದಸ್ವಾಮಿ ದೇವಸ್ಥಾನದ ಮೇಲೆ ಕೆತ್ತಿದ್ದ ಗೊಂಬೆಗಳು ಬಿರುಕು ಬಿಟ್ಟಿವೆ

    ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ, ಗಾಣಧಾಳು ಸೇರಿದಂತೆ ಇನ್ನೂ ಕೆಲ ಗ್ರಾಮಗಳಲ್ಲಿ ಮುಂಜಾನೆ 6.30ರ ವೇಳೆ ಭೂಮಿ ಕಂಪಿಸಿದ ಅನುಭವ ಆಗಿದೆ. ಸುಮಾರು 5 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ್ದು, ಇದರಿಂದ ಮನೆಯಲ್ಲಿದ್ದ ಪಾತ್ರೆಗಳು ಬಿದಿವೆ. ಕೆಲವೆಡೆ ಗೋಡೆಗಳು ಬಿರುಕು ಬಿಟ್ಟಿವೆ. ಕಂಪನದಿಂದ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸದ್ಯ ರಿಕ್ಟರ್ ಮಾಪನದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದ್ದು, ಗಾಬರಿಗೊಂಡ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

  • ಕೊನೆಗೂ ಭೂಕಂಪ ಆಯ್ತು: ರಾಹುಲ್‍ಗೆ ಮೋದಿ ಟಾಂಗ್

    ನವದೆಹಲಿ: ಸೋಮವಾರದಂದು ಉತ್ತರ ಭಾರತದ ಹಲವೆಡೆ ಭೂಕಂಪ ಸಂಭವಿಸಿರುವ ಬೆನ್ನಲ್ಲೇ, ಕೊನೆಗೂ ಭೂಕಂಪ ಆಯ್ತು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

    ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕೊನೆಗೂ ಭೂಕಂಪ ಆಯ್ತು. ಭೂಮಿ ತಾಯಿ ಕೋಪಗೊಂಡಿರಬಹುದು ಎಂದರು. ಈ ಹಿಂದೆ ರಾಹುಲ್ ಗಾಂಧಿ, ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತೆ ಎಂದಿದ್ದರು.

    ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಮಾತನಾಡಿದ ಮೋದಿ, ಜನ ಶಕ್ತಿಯಿಂದಲೇ ಒಬ್ಬ ಟೀ ಮಾರುವವರ ಮಗ ದೇಶದ ಪ್ರಧಾನಿಯಾಗಿದ್ದು ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

    ಮಲ್ಲಿಕಾರ್ಜುನ್ ಖರ್ಗೆ ಅವರ ಟೀಕೆಗೆ ಉತ್ತರಿಸಿ, ನಾವು ನಾಯಿಗಳ ಪರಂಪರೆಯಿಂದ ಬೆಳೆದುಬಂದಿಲ್ಲ ಅಂದ್ರು. ಭಗತ್ ಸಿಂಗ್ ಮತ್ತು ಆಝಾದ್‍ರಂತಹವರು ಕೂಡ ಇದ್ದರು ಅನ್ನೋದನ್ನು ಇವರ ಬಾಯಲ್ಲಿ ಕೇಳೇ ಇಲ್ಲ. ಕೇವಲ ಒಂದು ಪರಿವಾರದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಅಂದುಕೊಂಡಿದ್ದಾರೆ ಅಂತ ಉತ್ತರಿಸಿದ್ರು.

    ಕಾಂಗ್ರೆಸ್‍ನಲ್ಲಿ ಜವಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯಂತ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ರು. ಆದ್ರೆ ಬಿಜೆಪಿಯಿಂದ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಖರ್ಗೆ ಹೇಳಿಕೆ ನೀಡಿದ್ದರು.