Tag: earthquake

  • ಬೈಂದೂರಲ್ಲಿ ಭೂ ಕಂಪನದ ಅನುಭವ – ಹಳ್ಳಿಗಾಡಿನ ಜರನಲ್ಲಿ ಆತಂಕವೋ ಆತಂಕ

    ಬೈಂದೂರಲ್ಲಿ ಭೂ ಕಂಪನದ ಅನುಭವ – ಹಳ್ಳಿಗಾಡಿನ ಜರನಲ್ಲಿ ಆತಂಕವೋ ಆತಂಕ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಗಂಗನಾಡು, ಅತ್ಯಾಡಿ ಪರಿಸರದಲ್ಲಿ ಕಂಪನದ ಅನುಭವ ಆಗಿದೆ ಅಂತ ಕೆಲ ಗ್ರಾಮಸ್ಥರು ಹೇಳಿದ್ದಾರೆ.

    ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಂಪಿಸಿದ ಅನುಭವ ಆಯ್ತು. ಇದರಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜನ ಭಯಗೊಂಡಿದ್ದಾರಂತೆ. ಸ್ಥಳೀಯರು ಹೇಳುವ ಮಾಹಿತಿ ಪ್ರಕಾರ ಗುಡುಗು ಬಂದ ರೀತಿಯ ಅನುಭವವಾಗಿದೆ. ಇನ್ನು ಕೆಲವರು ಹೆಲಿಕಾಪ್ಟರ್ ಹಾರಿರಬಹುದು, ವಿಮಾನ ಕೆಳಗಿನಿಂದ ಹೋಗಿರಬಹುದು ಎಂದು ಹೇಳಿದ್ದಾರೆ. ಕೇವಲ ಎರಡು ಸೆಕೆಂಡ್ ಗಳ ಕಾಲ ಕಂಪನವಾದಂತೆ ಆಗಿದ್ದು, ಕೆಲ ಗ್ರಾಮಸ್ಥರಿಗೆ ಜೋರು ಶಬ್ಧ ಬಂದ ಅನುಭವವಾಗಿದೆ. ಕಲ್ಲು ಗಣಿಗಾರಿಕೆಗೆ ಇಟ್ಟ ಸ್ಪೋಟಕದ ಶಬ್ಧದಿಂದ ಭೂಮಿ ನಡುಗಿರಬಹುದು ಎಂದು ಜನ ಮೂಗು ಮುರಿಯುತ್ತಿದ್ದಾರೆ.

    ಬೈಂದೂರು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಿದ್ದಾರೆ. ನಾನು ಭೇಟಿಕೊಟ್ಟ ಗ್ರಾಮಗಳಲ್ಲಿ ಬಿರುಕು ಬಿಡುವುದು, ವಸ್ತುಗಳು ಬೀಳುವಂತಹ ಘಟನೆ ನಡೆದಿಲ್ಲ. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ ಅಂತ ಪಬ್ಲಿಕ್ ಟಿವಿಗೆ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಭೂಗರ್ಭ ಶಾಸ್ತ್ರಜ್ಞರು ತನಿಖೆ ನಡೆಸಿದರೆ ಹೆಚ್ಚಿನ ಮಾಹಿತಿ ಬಹಿರಂಗ ಆಗಬಹುದು ಎಂದು ಸ್ಥಳೀಯ ಅರುಣ್ ಕುಮಾರ್ ಶೀರೂರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋನೇಷ್ಯಾದಲ್ಲಿ ಸುನಾಮಿಯಿಂದಾಗಿ ಮೃತಪಟ್ಟವರ ಸಂಖ್ಯೆ 400ಕ್ಕೆ ಏರಿಕೆ

    ಇಂಡೋನೇಷ್ಯಾ: ದ್ವೀಪವಾದ ಸುಲವೇಸಿಯಲ್ಲಿ ಅಪ್ಪಳಿಸಿದ ಸುನಾಮಿ ಹಾಗೂ ಭೂಕಂಪದಿಂದ ಮೃತಪಟ್ಟಿರುವ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ.

    ಇಂಡೋನೇಷ್ಯಾ ವಿಪತ್ತು ನಿಯಂತ್ರಣಾ ಸಂಸ್ಥೆಯ ವಕ್ತಾರ ಸುಟೋಪೊ ಪುರ್ವೋ ನುಗ್ರೂಹೂ, 384 ಜನರನ್ನು ಪಾಲು ನಗರದಲ್ಲೇ ಸತ್ತರು. ಶುಕ್ರವಾರ ಸಂಜೆ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದರಿಂದಾಗಿ 540 ಜನ ಗಾಯಗೊಂಡಿದ್ದು, 29 ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವೂ ಇದೆ ಎಂದು ಹೇಳಿದರು. ಇದನ್ನು ಓದಿ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ- ಸುನಾಮಿ ಎಚ್ಚರಿಕೆ: ತೆರೆಗಳು ಅಪ್ಪಳಿಸೋ ವಿಡಿಯೋ ನೋಡಿ

    ಮುಂಜಾಗ್ರತಾ ಕ್ರಮವಾಗಿ ಸುಲವೆಸಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಿದ್ದೇವು. ಜೊತೆಗೆ ದುರಸ್ತಿಗೊಂಡ ಕಟ್ಟಡಗಳಲ್ಲಿ ವಾಸಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಸುಟೋಪೊ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಸುಲವೆಸಿ ದ್ವೀಪದಿಂದ 56 ಕಿ.ಮಿ ದೂರದಲ್ಲಿರುವ ಡೊಂಗಗಲ್ ನ 9 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿತ್ತು.

    2004ರಲ್ಲಿ ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದ್ದ ಪರಿಣಾಮ, ಹಿಂದೂ ಮಹಾಸಾಗರಲ್ಲಿ ಸುನಾಮಿ ಉಂಟಾಗಿತ್ತು. ಈ ವೇಳೆ 13 ದೇಶಗಳು ಸುನಾಮಿಗೆ ತತ್ತರಿಸಿದ್ದು, ಇಂಡೋನೇಷ್ಯಾದ 1.20 ಲಕ್ಷ, ಭಾರತದಲ್ಲಿ 12 ಸಾವಿರ, ಸೇರಿದಂತೆ ಒಟ್ಟು ಒಟ್ಟು 2.26 ಲಕ್ಷ ಮಂದಿ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ- ಸುನಾಮಿ ಎಚ್ಚರಿಕೆ: ತೆರೆಗಳು ಅಪ್ಪಳಿಸೋ ವಿಡಿಯೋ ನೋಡಿ

    ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ- ಸುನಾಮಿ ಎಚ್ಚರಿಕೆ: ತೆರೆಗಳು ಅಪ್ಪಳಿಸೋ ವಿಡಿಯೋ ನೋಡಿ

    ಜಕಾರ್ತ: ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಶುಕ್ರವಾರ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಸುಲವೆಸಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಲಾಗಿದೆ. ಜೊತೆಗೆ ದುರಸ್ತಿಗೊಂಡ ಕಟ್ಟಡಗಳಲ್ಲಿ ವಾಸಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಇಂಡೋನೇಷ್ಯಾದ ವಿಪತ್ತು ನಿಯಂತ್ರಣಾ ಸಂಸ್ಥೆಯ ವಕ್ತಾರ ಸುಟೋಪೊ ಪುರ್ವೋ ನುಗ್ರೂಹೂ ಹೇಳಿದ್ದಾರೆ.

    ಇಂದು ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ ಮಧ್ಯಾಹ್ನ 7.5 ತೀವ್ರತೆ ಭೂಕಂಪ ಸಂಭವಿಸಿದೆ. ಸುಲವೆಸಿ ದ್ವೀಪದಿಂದ 56 ಕಿ.ಮಿ ದೂರದಲ್ಲಿರುವ ಡೊಂಗಗಲ್ ನ 9 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

    ಭೂಕಂಪದಿಂದಾಗಿ ಮನೆಗಳು ಕುಸಿದು ಬಿದ್ದಿದ್ದು, ಒಬ್ಬರು ಮೃತಪಟ್ಟಿದ್ದು, ಕನಿಷ್ಠ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    2004ರಲ್ಲಿ ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದ್ದ ಪರಿಣಾಮ, ಹಿಂದೂ ಮಹಾಸಾಗರಲ್ಲಿ ಸುನಾಮಿ ಉಂಟಾಗಿತ್ತು. ಈ ವೇಳೆ 13 ದೇಶಗಳು ಸುನಾಮಿಗೆ ತತ್ತರಿಸಿದ್ದು, ಇಂಡೋನೇಷ್ಯಾದ 1.20 ಲಕ್ಷ, ಭಾರತದಲ್ಲಿ 12 ಸಾವಿರ, ಸೇರಿದಂತೆ ಒಟ್ಟು ಒಟ್ಟು 2.26 ಲಕ್ಷ ಮಂದಿ ಮೃತಪಟ್ಟಿದ್ದರು.

    ರಾಮದಾನಿ ಇಕೋ ಎಂಬವರು ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಸುನಾಮಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ ಎಂದು ಹೇಳಿದ್ದಾರೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನದ ಆಲೂರು ಪಟ್ಟಣದಲ್ಲಿ ಭೂಕಂಪನದ ಅನುಭವ

    ಹಾಸನದ ಆಲೂರು ಪಟ್ಟಣದಲ್ಲಿ ಭೂಕಂಪನದ ಅನುಭವ

    ಹಾಸನ: ಭಾರೀ ಮಳೆಯಿಂದಾದ ಗುಡ್ಡ ಕುಸಿತಗಳಂತಹ ಆತಂಕದ ನಂತರ ಈಗ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಭೂಕಂಪದ ಅನುಭವವಾಗಿದೆ.

    ಭಾನುವಾರ ರಾತ್ರಿ 7ರಿಂದ 8 ಗಂಟೆಯ ನಡುವೆ ಎರೆಡು ಭಾರಿ ಭೂಕಂಪನವಾದ ಅನುಭವವನ್ನು ಸಾರ್ವಜನಿಕರು ತಹಶೀಲ್ದಾರರ ಬಳಿ ಹಂಚಿಕೊಂಡಿದ್ದಾರೆ. ಭೂಕಂಪನದ ಪರಿಣಾಮವಾಗಿ ಮನೆಯ ಅಡುಗೆ ಮನೆಯಲ್ಲಿ ಪಾತ್ರೆಗಳು ಅಲ್ಲಾಡುವ ಶಬ್ಧವನ್ನು ಕೇಳಿದ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ.

    ಪಟ್ಟಣದ ರಾಜಪ್ಪ ಬಡಾವಣೆ, ಹಳೇಸಂತೆ ಬೀದಿ, ದೊಡ್ಡಬೀದಿ, ಬಿಎಂರಸ್ತೆ, ಆಶಾ ಬಡಾವಣೆ ಸೇರಿದಂತೆ ಹಲವೆಡೆ ಭೂಕಂಪನ ಅನುಭವಕ್ಕೆ ಬಂದಿದೆ. ಎರಡು ಭಾರಿ ಭೂಕಂಪನದ ಅನುಭವವಾಗಿದ್ದು ಸಂಬಂದಿಸಿದ ಅಧಿಕಾರಿಗಳು ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೆಹಲಿ, ಹರಿಯಾಣದಲ್ಲಿ ಭೂಕಂಪನ!

    ದೆಹಲಿ, ಹರಿಯಾಣದಲ್ಲಿ ಭೂಕಂಪನ!

    ನವದೆಹಲಿ: ದೆಹಲಿ, ರಾಜಧಾನಿ ಪ್ರದೇಶ ಹಾಗೂ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ಭೂಕಂಪನ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಇಂದು ಮಧ್ಯಾಹ್ನ ದೆಹಲಿ ಹಾಗೂ ರಾಜಧಾನಿ ಪ್ರದೇಶ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭೂಕಂಪನ ಕಾಣಿಸಿಕೊಂಡರೆ. ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.8 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ.

    ಸುಮಾರು 4.37 ಗಂಟೆಗೆ ಭೂಕಂಪನವು ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಕೆಲವರು ತಮ್ಮ ಭೂಕಂಪದ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ವದಂತಿ- ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ

    ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ವದಂತಿ- ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇತಂಹ ಯಾವುದೇ ಮುನ್ನೆಚರಿಕೆ ಸಂದೇಶವನ್ನು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಇರುವ ಸಂದೇಶ ಹರಿದಾಡುತ್ತಿದ್ದು, ಇಂತಹ ಸಂದೇಶಗಳನ್ನು ನಂಬಿ ಜನರು ಕಿವಿಗೊಟ್ಟು ಆತಂಕಗೊಳ್ಳುವ ಅಗತ್ಯವಿಲ್ಲ. ಭೂ ಕಂಪನದ ಕುರಿತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಿಂದ ಯಾವುದೇ ಮುನ್ನೆಚ್ಚರಿಕೆ ಸಂದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.

    ಕೊಡಗಿನಲ್ಲಿ ಮಳೆ ಮುಂದುವರಿದಿರುವ ಪರಿಣಾಮ ಹಸಿಯಾಗಿರುವ ಗುಡ್ಡ ಕುಸಿಯುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜಿಲ್ಲೆಯ ಮುಕ್ಕೋಡ್ಲು ಗ್ರಾಮದಲ್ಲಿ ಮಣ್ಣು ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಜೊತೆಗೆ ಮತ್ತೊಬ್ಬರು ಮಣ್ಣಿನಲ್ಲಿ ಸಿಲುಕಿದ್ದಾರೆ. ಮಳೆ ಮತ್ತೆ ತನ್ನ ಮುಂದುವರಿದಿರುವ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿದೆ. ಈಗಾಗಲೇ ಒಟ್ಟು 40 ಜನರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ 120 ಮಂದಿ ರಕ್ಷಣೆಗೆ ಮಳೆ ಅಡ್ಡಿಯಾಗಿದೆ. ಇದರಲ್ಲಿ 80 ಜನರು ಅಪಾಯದ ಸ್ಥಿತಿಯಲ್ಲಿದ್ದಾರೆ. ಮುಕ್ಕೋಡ್ಲು ಭಾಗದಲ್ಲಿ ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ಇದು ಅಡ್ಡಿಯಾಗುತ್ತಿದೆ. ಅಪಾಯದ ಪರಿಸ್ಥಿತಿಯಲ್ಲೂ ಯೋಧರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ

    ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ

    ಚಿಕ್ಕಮಗಳೂರು: ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೊಗ್ರೆ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು.

    ಕಳೆದ ಮೂರು ತಿಂಗಳಿಂದ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸುತ್ತಿದ್ದು, ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಬೆಂಗಳೂರು ಹಾಗೂ ಕುಣಿಗಲ್ ನಿಂದ ಅಧಿಕಾರಿಗಳ ತಂಡ ಭೇಟಿ ನೀಡಿದೆ.

    ಎರಡು ದಿನಗಳ ಹಿಂದೆ ಸಂಜೆ ವೇಳೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಪರಿಣಾಮ ಮನೆಯಲ್ಲಿದ್ದ ಪಾತ್ರೆ ಪಿಠೋಪಕರಣಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿತ್ತು. ಸೋಮವಾರ ಮಧ್ಯಾಹ್ನದ ವೇಳೆಯಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!

    ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!

    ಚಿಕ್ಕಮಗಳೂರು: ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸದ್ಯ ಭೂಕಂಪದ ಭಯ ಆವರಿಸಿದೆ.

    ಸತತವಾಗಿ ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಈ ಭಾಗದಲ್ಲಿ ಭೂಮಿ ಒಳಗಿನಿಂದ ವಿಚಿತ್ರ ಶಬ್ಧಗಳು ಕೇಳಿ ಬರುತ್ತಿದೆ. ಭಾರೀ ಪ್ರಮಾಣದಲ್ಲಿ ಕೇಳಿಬರುತ್ತಿರುವ ಶಬ್ಧದಿಂದ  ಜನರು ಆತಂಕಕ್ಕೀಡಾಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ ಹಲವು ತಿಂಗಳಿಂದ ವಿಚಿತ್ರವಾದ ಶಬ್ಧ ಕೇಳಿ ಬರುತ್ತಿದೆ. ಇಂದು ಬೆಳಗ್ಗೆ ಕೂಡ 9.40ರ ಸುಮಾರಿಗೆ ಭಾರೀ ಶಬ್ಧವಾಗಿದ್ದು, ಜನ ಆತಂಕದಲ್ಲಿ ಮನೆಯಿಂದ ಹೊರಬಂದಿದ್ದಾರೆ. ಅಲ್ಲದೇ ಭೂಮಿ ಕಂಪಿಸಿದ ಅನುಭವವದೊಂದಿಗೆ ಮನೆಯ ಪಾತ್ರೆಗಳು ಕೂಡ ಕೆಳಗೆ ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಭಾರೀ ಪ್ರಮಾಣದ ಶಬ್ಧದಿಂದ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಅನ್ವಯ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಈಗಾಗಲೇ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಶಬ್ಧಕ್ಕೆ ಕಾರಣ ತಿಳಿದುಬಂದಿಲ್ಲ.

    ಸದ್ಯ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಗ್ರಾಮಸ್ಥರು ವಿಪತ್ತು ನಿರ್ವಹಣಾ ಇಲಾಖೆಯಿಂದ ಪರಿವೀಕ್ಷಣೆ ನಡೆಸಿ ಈ ಅಸಹಜ ಕ್ರಿಯೆಗೆ ಕಾರಣ ತಿಳಿಸಿ ಜನರ ಆತಂಕವನ್ನು ದೂರ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭೂಕಂಪನದ ನಡುವೆಯೇ ನಮಾಜ್ ಪೂರ್ಣಗೊಳಿಸಿದ ಇಮಾಮ್-ವಿಡಿಯೋ ವೈರಲ್

    ಭೂಕಂಪನದ ನಡುವೆಯೇ ನಮಾಜ್ ಪೂರ್ಣಗೊಳಿಸಿದ ಇಮಾಮ್-ವಿಡಿಯೋ ವೈರಲ್

    ಜಕಾರ್ತ: ಭೂಕಂಪನದಿಂದ ಮಸೀದಿಯ ಕಟ್ಟಡ ಅಲುಗಾಡುತ್ತಿದ್ದರೂ ಇಮಾಮ್ (ಮುಸ್ಲಿಂ ಧರ್ಮಗುರು) ನಮಾಜ್ ಪೂರ್ಣಗೊಳಿಸಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಡೊನೇಶಿಯಾದ ಲೋಮಬೋಕ್ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಲೋಮಬೋಕ್‍ನಲ್ಲಿ ಭೂಕಂಪ ಅವಘಡ ಸಂಭವಿಸುತ್ತಿದ್ದ ವೇಳೆ ಸ್ಥಳೀಯ ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಭೂಮಿ ಕಂಪಿಸಲು ಆರಂಭಿಸುತ್ತಿದ್ದಂತೆ ನಮಾಜ್ ನಲ್ಲಿ ನಿರತರಾಗಿದ್ದ ಹಲವರು ಜೀವ ಉಳಿಸಿಕೊಳ್ಳಲು ಮಸೀದಿಯಿಂದ ಹೊರ ಬಂದಿದ್ದಾರೆ. ಪ್ರಾರ್ಥನೆ ಮಾಡಿಸುತ್ತಿದ್ದ ಇಮಾಮ್ ಎಲ್ಲಿಯೂ ನಿಯತ್ (ಧ್ಯಾನ) ಬಿಡದೇ ಗೋಡೆಯನ್ನು ಆಸರೆಯಾಗಿ ಹಿಡಿದುಕೊಂಡೆ ನಮಾಜ್ ಪೂರ್ಣ ಮಾಡಿದ್ದಾರೆ. ಇಮಾಮ್ ರನ್ನು ನೋಡಿ ಓಡಿ ಹೋದವರು ಮತ್ತೆ ಬಂದು ನಮಾಜ್ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ದೃಶ್ಯಗಳು ಮಸೀದಿಯ ಒಳಗಡೆ ಹಾಕಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜುಲೈ 29ರಂದು ಇಂಡೊನೇಶಿಯಾದ ಲೋಮಬೋಕ್ ನಲ್ಲಿ ತೀವ್ರ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ಬಳಿಕ ಸುಮಾರು 20 ಸಾವಿರ ಜನರು ನಿರಾಶ್ರಿತರಾಗಿದ್ದು, ಲೋಮಬೋಕ್ ನಗರದ ಅರ್ಧಕ್ಕಿಂತ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಭಾನುವಾರ 6.9 ದಾಖಲಾಗಿತ್ತು. ಭಾನುವಾರದ ನಂತರವೂ ಲೋಮಬೋಕ್‍ನಲ್ಲಿ ಹಲವು ಬಾರಿ ಭೂಮಿ ಕಂಪಿಸಿದ್ದು, 5.3 ರಷ್ಟು ತೀವ್ರತೆ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಚಿಕ್ಕಬಳ್ಳಾಪುರದಲ್ಲಿ 1.2 ತೀವ್ರತೆಯ ಭೂಕಂಪನ- ಮನೆಯಲ್ಲಿನ ಪಾತ್ರೆಗಳು ಚೆಲ್ಲಾಪಿಲ್ಲಿ

    ಚಿಕ್ಕಬಳ್ಳಾಪುರದಲ್ಲಿ 1.2 ತೀವ್ರತೆಯ ಭೂಕಂಪನ- ಮನೆಯಲ್ಲಿನ ಪಾತ್ರೆಗಳು ಚೆಲ್ಲಾಪಿಲ್ಲಿ

    ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನವಾಗಿದೆ.

    ಆಂಧ್ರದ ಗಡಿಗೆ ಹೊಂದಿಕೊಂಡಿರುವ ಐವಾರಪಲ್ಲಿ, ಲಘು ಮದ್ದೇಪಲ್ಲಿ, ಚಿಕ್ಕ ತಿಮ್ಮನಹಳ್ಳಿ, ಪಾಕು ಪಟ್ಲಪಲ್ಲಿ ಸೇರಿದಂತೆ ತುಮಕೇಪಲ್ಲಿ ಹಾಗೂ ಹತ್ತು ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

    ಎರಡು ಬಾರಿ 5-6 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ್ದು, ಮನೆಗಳಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿವೆ. ಈ ವೇಳೆ ಕರ್ಕಶ ಶಬ್ಧ ಕೂಡ ಕೇಳಿಬಂದಿದೆ ಎನ್ನಲಾಗಿದ್ದು, ರಾತ್ರಿಯಿಡೀ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆದು ನಿದ್ದೆಗೆಟ್ಟಿದ್ದಾರೆ.

    ಭೂಮಿ ನಡುಗಿದ ಅನುಭವದಿಂದಾಗಿ ರಸ್ತೆ ಬದಿಯಲ್ಲಿಯೇ ಜನ ಕಾಲ ಕಳೆದಿದ್ದಾರೆ. ಆದರೆ ಭೂಕಂಪನದಿಂದ ಯಾವುದೇ ಅವಘಡ ಸಂಭವಿಸಿಲ್ಲ. ಭೂಕಂಪನವಾದ ಗ್ರಾಮಗಳಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಹಾಗೂ ಬಾಗೇಪಲ್ಲಿ ವೃತ್ತ ನಿರೀಕ್ಷಕ ಗೋವಿಂದರಾಜು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ.

    ಭೂಕಂಪನ ಆಗಿರುವುದು ಅಧಿಕೃತವಾಗಿ ದೃಢಪಟ್ಟಿದೆ. ರೆಕ್ಟರ್ ಮಾಪನದಲ್ಲಿ ಪರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇದರ ಪ್ರಮಾಣ 1.2 ರಷ್ಟು ತೀವ್ರತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಸ್ಪಷ್ಟಪಡಿಸಿದ್ದಾರೆ.