Tag: earth quake

  • ಸರ್ಕಾರ ಭದ್ರವಾಗಿ ಬಂಡೆಯಂತಿದೆ- ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಎಚ್‍ಡಿಕೆ

    ಸರ್ಕಾರ ಭದ್ರವಾಗಿ ಬಂಡೆಯಂತಿದೆ- ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಬಂಡೆಯ ರೀತಿ ಇದೆ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಾವ್ಡೇಕರ್ ಹೇಳಿಕೆಗೆ ಉತ್ತರ ಕೊಡೋಕೆ ಆಗುತ್ತಾ? ಕಳೆದ ಆರು ತಿಂಗಳಿಂದಲೂ ಹೀಗೆ ಭೂಕಂಪ ಆಗುತ್ತದೆ ಎಂದು ಸೌಂಡ್ ಮಾಡುತ್ತಲೇ ಇದ್ದಾರೆ. ಅದರೆ ಇದೂವರೆಗೂ ಭೂಕಂಪದ ಎಫೆಕ್ಟ್ ಕಾಣಿಸಿಲ್ಲ. ನಮ್ಮ ಸರ್ಕಾರ ಭದ್ರವಾಗಿ ಬಂಡೆಯ ರೀತಿಯಲ್ಲಿದೆ. ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ಜಾವ್ಡೇಕರ್ ಹೇಳಿದ್ದೇನು?
    ರಾಜಸ್ಥಾನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಅವರು, ಕರ್ನಾಟಕ ರಾಜಕೀಯದಲ್ಲಿ ಯಾವಾಗ ಬೇಕಾದರೂ ಭೂಕಂಪ ಆಗಬಹುದು. ಈ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗ್ತಿಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಧಮಾಕ ಆಗೋದಂತೂ ನಿಶ್ಚಿತವಾಗಿದೆ. ಆದ್ರೆ ಆ ಧಮಾಕ ಯಾವಾಗ ಅಂತ ಯಡಿಯೂರಪ್ಪ ಅಷ್ಟೇ ಹೇಳಬಹುದು. ಕರ್ನಾಟಕದಲ್ಲಿ ನಮ್ಮದೇ ಅತೀ ದೊಡ್ಡ ಪಕ್ಷ. ನಮಗೆ 7 ಶಾಸಕರ ಸಂಖ್ಯೆಯಷ್ಟೇ ಕೊರತೆ ಇದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉತ್ತಮವಾದ ಸರ್ಕಾರ ನೀಡುತ್ತಿಲ್ಲವೆಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಕ್ಷಣಕಾಲ ಕಂಪಿಸಿದ ಭೂಮಿ- ಮನೆಯಿಂದ ಓಡಿ ಬಂದ ಜನ

    ಮಂಡ್ಯದಲ್ಲಿ ಕ್ಷಣಕಾಲ ಕಂಪಿಸಿದ ಭೂಮಿ- ಮನೆಯಿಂದ ಓಡಿ ಬಂದ ಜನ

    ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಮಿ ಕ್ಷಣಕಾಲ ಕಂಪಿಸಿದ ಅನುಭವವಾಗಿದ್ದು, ಗಾಬರಿಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಗುರುವಾರ ಮಧ್ಯಾಹ್ನ ನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಸುಮಾರು 3.42ರ ವೇಳೆ ಜಿಲ್ಲೆಯಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿತ್ತು. ದೊಡ್ಡದಾದ ಶಬ್ದ ಕೇಳಿ ಗಾಬರಿಗೊಂಡ ಜನ ಮನೆಯಿಂದ ಹೊರಗೆ ಬಂದು ಅಕ್ಕ-ಪಕ್ಕದ ಮನೆಯವರ ಬಳಿ ಆತಂಕದಿಂದ ಏನಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಇದಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲೂಕುಗಳಲ್ಲಿಯೂ ಕ್ಷಣಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಕೆಲವು ದಿನಗಳ ಹಿಂದೆಯೂ ಕೆಆರ್‍ಎಸ್ ವ್ಯಾಪ್ತಿಯಲ್ಲಿಯೂ ಭಾರೀ ಶಬ್ದ ಕೇಳಿಬಂದಿತ್ತು. ಅಲ್ಲದೇ ಭೂಮಿ ಕಂಪಿಸಿದ ಅನುಭವವು ವ್ಯಕ್ತವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಒಂದೂವರೆ ತಿಂಗಳ ಹಿಂದೆಯೇ ಕೊಡಗಿನಲ್ಲಿ ಭೂಕಂಪ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ

    ಒಂದೂವರೆ ತಿಂಗಳ ಹಿಂದೆಯೇ ಕೊಡಗಿನಲ್ಲಿ ಭೂಕಂಪ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ

    ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಜಲ ಪ್ರಳಯವಾಗುವ ಮುನ್ನ ಒಂದೂವರೆ ತಿಂಗಳ ಮೊದಲು ಭೂಕಂಪವಾಗಿತ್ತು ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಜುಲೈ 9ರ ಮಧ್ಯಾಹ್ನ 12.52ಕ್ಕೆ ಕೊಡಗು ಜಿಲ್ಲೆಯ 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 3.4 ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಈ ಸಂಬಂಧ ಅದೇ ದಿನ ಸಂಜೆ 4.58ಕ್ಕೆ ಭೂಕಂಪ ನಡೆದ ಸ್ಥಳದ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿತ್ತು.

    ಆದರೆ ಹವಾಮಾನ ಇಲಾಖೆಯ ವರದಿಯನ್ನು ಅಲ್ಲಗಳೆದಿರುವ ಭೂಗರ್ಭ ಶಾಸ್ತ್ರಜ್ಞರಾದ ಪ್ರಕಾಶ್‍ರವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇದು ಭೂಕಂಪನದಿಂದಾಗಿ ಸಂಭವಿಸಿದ ಘಟನೆಯಲ್ಲ, ಜಲಪ್ರಳಯದಿಂದಾಗಿ ಸಂಭವಿಸಿದ ಅವಘಡವಾಗಿದೆ. ಭೂಕಂಪನದ ಬಗ್ಗೆ ಹವಾಮಾನ ಇಲಾಖೆಗೆ ಹೇಗೆ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಭೂಕಂಪನವಾಗಿದ್ದರೆ, ನಮ್ಮ ಹಾರಂಗಿ, ಗೌರಿಬಿದನೂರು ಹಾಗೂ ಹೈದರಬಾದ್ ನಲ್ಲಿರುವ ಭೂಕಂಪ ಮಾಪನ ಕೇಂದ್ರದಲ್ಲಿ ದಾಖಲಾಗುತಿತ್ತು. ಅಲ್ಲದೇ ಅರಬ್ ಹಾಗೂ ಅಮೆರಿಕ ದೇಶಗಳಲ್ಲಿ ವಿಶ್ವದ ಯಾವುದೇ ಭಾಗಗಳಲ್ಲಿ ಭೂಕಂಪನ ಉಂಟಾದರೆ, ಪತ್ತೆಹಚ್ಚುವ ಕೇಂದ್ರಗಳಲ್ಲಿಯೂ ಈ ಬಗ್ಗೆ ವರದಿಯಾಗಿಲ್ಲ. ಒಂದು ವೇಳೆ ವರದಿಯಾಗಿದ್ದರೆ ಕೂಡಲೇ ಅಮೆರಿಕ ಭೂಗರ್ಭ ಇಲಾಖೆಯು ನಮಗೆ ಇ-ಮೇಲ್ ಅಥವಾ ಮೆಸೇಜ್ ಮೂಲಕ 15 ನಿಮಿಷಗಳೊಳಗೆ ಮಾಹಿತಿಯನ್ನು ತಲುಪಿಸುತ್ತವೆ ಎಂದು ತಿಳಿಸಿದರು.

    ಈ ಮೊದಲು 1924ರಲ್ಲಿ ಕೂರ್ಗ್ ಹಾಗೂ ಕೇರಳದಲ್ಲಿ ಈ ರೀತಿ ಭೂ-ಕುಸಿತ ಉಂಟಾಗಿತ್ತು, ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟಾಗ ಹವಾಯ್ ದ್ವೀಪದಲ್ಲಿ ಪ್ರಬಲವಾದ ಜ್ವಾಲಾಮುಖಿ ಉಂಟಾಗಿದ್ದರಿಂದ ಸುಮಾರು 28 ದಿನಗಳು ಲಾವಾರಸ ಹೊರ ಬಂದಿತ್ತು. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಇಲ್ಲೂ ಭೂ-ಕುಸಿತವಾಗಿತ್ತು. ಆದರೆ ಅಂದು ಜನವಸತಿ ಕಡಿಮೆಯಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲವೆಂದು ಹೇಳಿದರು.

    ಭೂ-ಕುಸಿತಗಳ ಬಗ್ಗೆ ಅಧ್ಯಯನ ನಡೆಸಲು, ಭಾರತೀಯ ಭೂ-ವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಲ್ಲಿ ಪ್ರತ್ಯೇಕವಾದ ವಿಭಾಗವನ್ನು ಹೊಂದಿದೆ. ಇಲ್ಲಿ ಪರಿಣಿತ ಅಧಿಕಾರಿಗಳು ಭೂ-ಕುಸಿತಗಳ ಬಗ್ಗೆ ನಿರಂತರ ಅಧ್ಯಯನ ಮಾಡುತ್ತಿರುತ್ತಾರೆ. ಬುಧವಾರ ನಾವು ಸಂಪಾಜೆ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಭೂ-ಕುಸಿತದ ಬಗ್ಗೆಯೂ ಸಹ ಅಧ್ಯಯನ ನಡೆಯುತ್ತಿದ್ದು, ಎರಡು ತಿಂಗಳ ಒಳಗಡೆ ನಿಖರ ವರದಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ಈ ವೇಳೆ ಸಾರ್ವಜನಿಕರು ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಕೊಡಗಿನಲ್ಲಿ 50, 60 ಡಿಗ್ರಿ ಇಳಿಜಾರು ಪ್ರದೇಶಗಳಲ್ಲಿರುವ ಗುಡ್ಡಗಾಡು ಪ್ರದೇಶಗಳು ಒಂದಲ್ಲ ಒಂದು ದಿನ ಕುಸಿಯುವುದು ಖಂಡಿತ. ಹೀಗಾಗಿ ಜನರು ಸಮತಟ್ಟವಾದ ಭೂ ಪ್ರದೇಶಗಳಲ್ಲಿ ವಾಸಸ್ಥಳಗಳನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಬಲ ಭೂಕಂಪಕ್ಕೆ 140ಕ್ಕೂ ಹೆಚ್ಚು ಜನ ಬಲಿ – ಇರಾನ್, ಇರಾಕ್ ಗಡಿಯಲ್ಲಿ ಮಹಾ ದುರಂತ

    ಪ್ರಬಲ ಭೂಕಂಪಕ್ಕೆ 140ಕ್ಕೂ ಹೆಚ್ಚು ಜನ ಬಲಿ – ಇರಾನ್, ಇರಾಕ್ ಗಡಿಯಲ್ಲಿ ಮಹಾ ದುರಂತ

    ಇರಕ್/ಇರಾನ್: ಇರಾನ್-ಇರಾಕ್ ಗಡಿಭಾಗಗಳಲ್ಲಿ 7.3 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದ್ದು, 140 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ 860 ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಭೂಕಂಪನದ ಅನುಭವವಾಗುತ್ತಿದ್ದಂತೆಯೇ ಉತ್ತರ ಇರಾನ್ ನ ಸುಲಯೈಮನಿಯಾದ ಕಟ್ಟಡದಲ್ಲಿ ನೆಲೆಸಿದ್ದ ಜನರು ಆತಂಕಗೊಳಗಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ದರ್ಬಾದಿಖಾನ್ ನಗರದಲ್ಲಿ ಗಾಜಿನ ಗೋಡೆ ಹಾಗೂ ಕಾಂಕ್ರೀಟ್ ಸ್ಟ್ರಕ್ಷರ್ ಗಳು ಕುಸಿದು ಬಿದ್ದಿವೆ.

    ಭೂಕಂಪನ ಸಂಭವಿಸುವಾಗ 61 ಜನರು ಸಾವನ್ನಪ್ಪಿದ್ದು, 300 ಜನರಿಗೆ ಗಾಯವಾಗಿತ್ತು. ಇರಾಕ್ ನ ಬಾರ್ಡರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಈ ಸಮಯದಲ್ಲಿ ತುರ್ತು ಪರಿಹಾರ ಶಿಬಿರಗಳನ್ನು ಆಯೋಜಿಸಿದ್ದೇವೆ ಎಂದು ಇರಾನ್ ನ ಉಪ ರಾಜ್ಯಪಾಲ ಮೋಜ್ತಬಾ ನಿಕೇರ್‍ದಾರ್ ಹೇಳಿದ್ದಾರೆ.

    ಸೌತ್‍ವೆಸ್ಟ್ ನ ಹಲಬ್ಜಾದಲ್ಲಿ ರಾತ್ರಿ ಸುಮಾರು 9.20 ಗಂಟೆಗೆ ಎಲ್ಲ ಜನರು ಮನೆಯಲ್ಲಿದ್ದಾಗ 30 ಕಿ.ಮೀನಷ್ಟು ಭೂಕಂಪಿಸಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ನಮ್ಮ ರಕ್ಷಣಾ ತಂಡವನ್ನು ಗ್ರಾಮಗಳಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದು ತುರ್ತು ಸೇವೆಗಳ ಮುಖ್ಯಸ್ಥ ಪಿರ್ ಹೊಸ್ಸಿನ್ ಕೂಲಿವಂಡ್ ತಿಳಿಸಿದ್ದಾರೆ.

    ನಾರ್ತ್‍ವೆಸ್ಟ್ ನಲ್ಲಿ ಕೆರ್ಮನ್ಹಾಹ್ ಮತ್ತು ಅಜ್ಗೆಲೆಹ್ನಲ್ಲಿನ ಕಸ್-ಇ-ಶಿರಿನ್ ನಲ್ಲಿ ಸಾಕಷ್ಟು ಹಾನಿಯಾಗಿದ್ದು, 40 ಕಿ.ಮೀನಷ್ಟು ಭೂಕಂಪನ ಆಗಿದೆ ಎಂದು ಐಆರ್‍ಎನ್‍ಎ ತಿಳಿಸಿದೆ.

    ಇರಾಕ್ ನ ಭೂಕಂಪನದಿಂದ ಇರಾನ್ ನ 8 ಗ್ರಾಮಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಕೂಡ ನಡೀತಿದೆ. ಅಲ್ಲದೇ ಪಾಕಿಸ್ತಾನ, ಲೆಬೆನಾನ್, ಕುವೈಟ್, ಟರ್ಕಿ ದೇಶದಲ್ಲೂ ಕಂಪನದ ಅನುಭವವಾಗಿದೆ.

    https://twitter.com/CiaranOhReally/status/929786178341146624

    https://twitter.com/thestevennabil/status/929780876258394112

    https://twitter.com/sassysassyred/status/929833730558095360

  • ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

    ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಸೋಮವಾರ ರಾತ್ರಿ 10.35ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ.

    ಸುಮಾರು 30 ಸೆಕೆಂಡ್‍ಗಳ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉತ್ತರಾಖಂಡದ ಪಿಥೌರಾಗಢ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

    ನವದೆಹಲಿ, ಎನ್‍ಸಿಆರ್, ಪಂಜಾಬ್, ಹರ್ಯಾಣ, ಚಂಡೀಗಢ, ಡೆಹ್ರಾಡೂನ್, ಸಹರಾನ್‍ಪುರ, ಮುಸ್ಸೋರಿ, ಗಾಜಿಯಾಬಾದ್, ಚಂಡೀಗಢದಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪ ಪ್ರಬಲವಾಗಿದ್ದರೂ ಇದುವರೆಗೆ ಯಾವುದೇ ಹಾನಿ ಅಥವಾ ಸಾವು ನೋವಿನ ವರದಿಯಾಗಿಲ್ಲ.