Tag: earth quake

  • ಟಿಬೆಟ್‌ನಲ್ಲಿ ಭಾರೀ ಭೂಕಂಪ – 32 ಮಂದಿ ಬಲಿ

    ಟಿಬೆಟ್‌ನಲ್ಲಿ ಭಾರೀ ಭೂಕಂಪ – 32 ಮಂದಿ ಬಲಿ

    ಬೀಜಿಂಗ್‌: ಇಂದು ಮುಂಜಾನೆ ನೇಪಾಳ (Nepal) ಮತ್ತು ಟಿಬೆಟ್‌ (Tibet) ಗಡಿಯಲ್ಲಿ 7.1 ತೀವ್ರತೆಯ ಭಾರೀ ಭೂಕಂಪ (EarthQuake) ಸಂಭವಿಸಿದೆ. ಟಿಬೆಟ್‌ನಲ್ಲಿ ಸಂಭವಿಸಿದರೂ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

    ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ (NCS), ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ.

    ಚೀನಾದ Xinhua ನ್ಯೂಸ್‌ ಏಜೆನ್ಸಿ 32 ಮಂದಿ ಮೃತಪಟ್ಟರೆ 38 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಇದನ್ನೂ ಓದಿ: “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್‌ ಮಾಡಿದ್ರೂ ಕಟ್‌ ಮಾಡ್ತಿದ್ರು” – ಟೆಕ್ಕಿ ಅನೂಪ್‌ ಡೆತ್‌ನೋಟ್‌ನಲ್ಲಿ ಏನಿದೆ?

    ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನ ಮನೆಯಿಂದ ಹೊರಗಡೆ ಓಡಿಕೊಂಡು ಬಂದಿರುವ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

  • ಜಮ್ಮು ಕಾಶ್ಮೀರದಲ್ಲಿ 5.2 ತೀವ್ರತೆಯ ಭೂಕಂಪ ದಾಖಲು

    ಜಮ್ಮು ಕಾಶ್ಮೀರದಲ್ಲಿ 5.2 ತೀವ್ರತೆಯ ಭೂಕಂಪ ದಾಖಲು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಇಂದು (ನ.13) 5.2 ತೀವ್ರತೆಯ ಭೂಕಂಪ (Earth Quake) ಸಂಭವಿಸಿದೆ.

    ಬುಧವಾರ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸದ್ಯ ಯಾವುದೇ ಜೀವಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ನಾಲಗೆ ಕಚ್ಚಿ, ಜೋರು ಗದರಿ ಕೈ ಎತ್ತಿದ ಸಿದ್ದರಾಮಯ್ಯ

    ಬೆಳಗ್ಗೆ 10:43ಕ್ಕೆ ಅಫ್ಘಾನಿಸ್ತಾನ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಕಾಶ್ಮೀರದ ಕಣಿವೆಯಲ್ಲಿ ಕಂಪನದ ಅನುಭವವಾಗಿದ್ದು, ಭಯಭೀತರಾಗಿ ಜನರು ಮನೆಯಿಂದಾಚೆ ಓಡಿ ಬಂದಿದ್ದಾರೆ.

    ಇದಕ್ಕೂ ಮುನ್ನ ಕಾಶ್ಮೀರದಲ್ಲಿ 2005ರಲ್ಲಿ ಅ.8 ರಂದು 7.6ರ ತೀವ್ರತೆಯೊಂದಿಗೆ ವಿನಾಶಕಾರಿ ಭೂಕಂಪನ ಸಂಭವಿಸಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಬಳಿ ಭೂಕಂಪವಾಗಿತ್ತು. ಇದು ಜಮ್ಮು ಮತ್ತು ಕಾಶ್ಮೀರದಾದ್ಯಂತ ವ್ಯಾಪಕ ವಿನಾಶವನ್ನು ಉಂಟುಮಾಡಿತ್ತು. ಇದರಿಂದಾಗಿ ಕಾಶ್ಮೀರದಲ್ಲಿ 80,000ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿ, ಸಾವಿರಾರು ಜನರು ಗಾಯಗೊಂಡಿದ್ದರು.ಇದನ್ನೂ ಓದಿ: PUBLiC TV Impact | ಕೃಷ್ಣಾ ನದಿಗೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ

  • ಕೊಡಗಿನಲ್ಲಿ ಈವರೆಗೆ ಒಟ್ಟು 7 ಬಾರಿ ಭೂಕಂಪನ

    ಕೊಡಗಿನಲ್ಲಿ ಈವರೆಗೆ ಒಟ್ಟು 7 ಬಾರಿ ಭೂಕಂಪನ

    ಮಡಿಕೇರಿ: ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು ಹಾಗೂ ಕರಿಕೆ ಭಾಗದಲ್ಲಿ ಇಂದು ಭೂಕಂಪನವಾಗಿದ್ದು, ಈ ಮೂಲಕ ಒಟ್ಟು 7 ಬಾರಿ ಭೂಕಂಪನವಾದ ಘಟನೆ ನಡೆದಿದೆ.

    ಕೊಡಗು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಕೊಡಗಿನ ಹಲವೆಡೆ ಸಣ್ಣಪುಟ್ಟ ಗುಡ್ಡ ಕುಸಿಯಲು ಆರಂಭವಾಗಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಹಾರಂಗಿ ಜಲಾನಯನ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಹಾರಂಗಿ ಜಲಶಯ ಬಹುತೇಕ ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1200 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಅಷ್ಟೇ ಅಲ್ಲದೇ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಕಂಪನ ಆಗಿದೆ.

    ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ಎಫೆಕ್ಟ್ ಏನೋ ಇದೀಗ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತವಾಗಿದೆ ಎಂಬ ಅನುಮಾನಗಳು ಕಾಡತೊಡಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 7 ಭೂಕಂಪಗಳಾಗಿದ್ದು, ಭೂಕಂಪಗಳಾದ ಪ್ರದೇಶದಲ್ಲೇ ಗುಡ್ಡಗಳು ಕುಸಿಯಲಾರಂಭಿಸಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ಮಣ್ಣು ಕುಸಿತವಾಗಿದೆ.

    ಮನೆಯ ಸಮೀಪವೇ ಇದ್ದ 10ಅಡಿ ಎತ್ತರದಿಂದ ಮಣ್ಣು ಕುಸಿತವಾಗಿದ್ದು, ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಹಾಗೆ ಮಡಿಕೇರಿ ತಾಲೂಕಿನ ಬೆಟ್ಟತೂರಿನಲ್ಲೂ ಸಣ್ಣಪ್ರಮಾಣದ ಗುಡ್ಡ ಕುಸಿವಾಗಿದೆ. ಮಡಿಕೇರಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, ಮಡಿಕೇರಿ ತಾಲೂಕಿನ ಮದೆನಾಡು- ಜೋಡುಪಾಲ ಮಧ್ಯೆ ರಸ್ತೆಗೆ ಮಣ್ಣು ಕುಸಿದಿದ್ದು, ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.

    ನಂತರ ರಸ್ತೆಗೆ ಬಿದ್ದ ಭಾರಿ ಗಾತ್ರದ ಮಣ್ಣನ್ನು ತೆರವುಗೊಳಿಸಿದ ಜಿಲ್ಲಾಡಳಿತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಇಂದು ಕೂಡ ಭೂಕಂಪನವಾಗಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು ಹಾಗೂ ಕರಿಕೆ ಭಾಗದಲ್ಲಿ ಮಧ್ಯಾಹ್ನ 1.20 ಸುಮಾರಿಗೆ ಸಂಭವಿಸಿದೆ. ಭಾರೀ ಶಬ್ದದೊಂದಿಗೆ ಭೂಕಂಪನವಗಿದೆ. ಇದೀಗ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತದೊಂದಿಗೆ ಗುಡ್ಡ ಕುಸಿತಗಳು ಆಗುತ್ತಿರೋದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ- ಆತಂಕಕ್ಕೀಡಾದ ಜನ

    ಒಟ್ಟಿನಲ್ಲಿ ಇದೀಗ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪಗಳು ಆಗುತ್ತಿರೋದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಆದರೆ ಜಿಲ್ಲಾಡಳಿತ ಮಾತ್ರ ಜನತೆ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಎಂಬ ಅಭಯ ನೀಡುತ್ತಿದೆ. ಮತ್ತೊಂದು ಕಡೆ ಮಳೆಯಿಂದ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    Live Tv

  • ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    ಬೆಂಗಳೂರು: ಹಾಸನ ಜಿಲ್ಲೆಯ ಹಲವೆಡೆ ಬೆಳಗಿನ ಜಾವ 4:30ರ ಸುಮಾರಿಗೆ 3.4 ತೀವ್ರತೆಯ ಕಂಪನವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಸ್‍ಎನ್‍ಡಿಎಂಸಿ) ಅಧಿಕೃತವಾಗಿ ತಿಳಿಸಿದೆ.

    ಇಂದು ಬೆಳಗ್ಗೆ ಹಾಸನದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಭಯಭೀತರಾಗಿದ್ದರು. ಹೊಳೇನರಸಿಪುರ, ಅರಕಲಗೂಡು, ಹಾಸನ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಇದನ್ನೂ ಓದಿ:  ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ

    ಹೇಳಿಕೆಯಲ್ಲಿ ಏನಿದೆ?
    ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಆಗಿದ್ದು ಭೂಮಿ ಅಡಿ 0.800 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ಕ್ರಮಾಂಕ ಕಂಪನ ಇದಾಗಿದ್ದು ಕೇಂದ್ರ ಬಿಂದುವಿನ 40-50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಇದನ್ನೂ ಓದಿ: ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ

    ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ.

    ಭೂಮಿ ಕಂಪನವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಜೀವ ಭಯದಲ್ಲಿ ಹೊರಬಂದಿದ್ದಾರೆ. ಸುಮಾರು 6 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿ, ಮಲಗಿದ್ದವರು ಮಕ್ಕಳೊಂದಿಗೆ ಹೊರಬಂದು ರಸ್ತೆಯಲ್ಲಿ ನಿಂತಿದ್ದಾರೆ.

    ಹೊಳೇನರಸಿಪುರ ತಾಲೂಕಿನ ಬೆಟ್ಟದ ಸಾತನಹಳ್ಳಿ, ಹಳ್ಳಿ ಮೈಸೂರು, ಕಲ್ಲಹಳ್ಳಿ, ದಾಳಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಅರಕಲಗೂಡು ತಾಲೂಕಿನ ಬೆಳವಾಡಿ, ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆ, ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್, ಸೇರಿದಂತೆ ತಾಲೂಕಿನ ಹಲವೆಡೆ ಭೂಮಿ ಕಂಪನವಾಗಿದೆ.

    ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಪಾತ್ರೆಗಳು ಹಾಗೂ ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲವು ವಸ್ತುಗಳು ಕಂಪನದ ಹಿನ್ನೆಲೆಯಲ್ಲಿ ಒಡೆದು ಹೋಗಿದೆ.

    Live Tv

  • ಚಿಕ್ಕಬಳ್ಳಾಪುರದಲ್ಲಿ ಪದೇ ಪದೇ ಭೂಕಂಪನ – ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೀಕರ ಶಬ್ದ

    ಚಿಕ್ಕಬಳ್ಳಾಪುರದಲ್ಲಿ ಪದೇ ಪದೇ ಭೂಕಂಪನ – ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೀಕರ ಶಬ್ದ

    ಚಿಕ್ಕಬಳ್ಳಾಪುರ: ಇಲ್ಲಿನ ಗ್ರಾಮವೊಂದರ ಜನ ಭಾನುವಾರ ರಾತ್ರಿ ಊಟ ಮಾಡಿ ಇನ್ನೇನು ನೆಮ್ಮದಿಯಿಂದ ಮಲಗೋಣ ಅಂತ ಹಾಸಿಗೆ ದಿಂಬು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ದಿಢೀರ್ ಅಂತ ಭೂಮಿಯ ಅಂತರಾಳದಿಂದ ಬಂದ ಅದೊಂದು ಸದ್ದು ಆ ಜನರನ್ನ ಇಡೀ ರಾತ್ರಿ ನಿದ್ದೆಯಿಲ್ಲದಂತೆ ಮಾಡಿ ಜಾಗರಣೆ ಮಾಡುವಂತೆ ಮಾಡಿತ್ತು. ಈಗಲೂ ಸಹ ಒಂದಲ್ಲ ಎರಡಲ್ಲ ಹತ್ತಾರು ಗ್ರಾಮಗಳಲ್ಲಿ ಪದೇ ಪದೇ ಅದೇ ರೀತಿಯ ಭಾರೀ ಸ್ಫೋಟದ ಸದ್ದು ಕೇಳಿಬರ್ತಿದ್ದು ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಭಾನುವಾರ ರಾತ್ರಿಯಿಂದ ಭೂಮಿಯ ಅಂತರಾಳದಿಂದ ವಿಚಿತ್ರ ಸದ್ದು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ದುಪ್ಪ್ ಅಂತ ಬರೋ ಆ ಸದ್ದಿಗೆ ಭೂಮಿಯೇ ಗಡ ಗಡ ನಡುಗುತ್ತಿದೆ. ಇದ್ರಿಂದ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸದ್ದು ರಾತ್ರಿ 9.30 ಹಾಗೂ 9.45 ರಲ್ಲಿ ಬಹಳಷ್ಟು ಜೋರಾಗಿ ಕೇಳಿಬಂದಿದೆ. ಇದರಿಂದ ಭೂಮಿಯೇ ಅಲುಗಾಡಿದ ಅನುಭವ ಆಗಿ ಮನೆಯಲ್ಲಿದ್ದವರೆಲ್ಲಾ ಕೀರಾಚಾಡುತ್ತಾ ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳಲ್ಲೆವೂ ಅಲುಗಾಡತೊಡಗಿವೆ. ಮಕ್ಕಳು ಭಯಭೀತರಾಗಿ ಚೀರಾಡಿ ಕಣ್ಣೀರು ಹಾಕಿದ್ದಾರೆ. ದಿಕ್ಕು ತೋಚದ ಜನ ಇಡೀ ರಾತ್ರಿ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಜಾಗರಣೆ ಮಾಡಿದ್ದಾರೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ

    ಅಂದಹಾಗೆ ಬಾಗೇಪಲ್ಲಿ ತಾಲೂಕಿನ ಪೆದ್ದತುಂಕೇಪಲ್ಲಿ, ಕದಿರನ್ನಗಾರಪಲ್ಲಿ, ದಾಸಯ್ಯಗಾರಪಲ್ಲಿ, ಟೆಂಕಮಾಕಲಪಲ್ಲಿ, ಲಘುಮದ್ದೇಪಲ್ಲಿ. ಮದ್ದಲಖಾನೆ, ಗುರ್ರಾಲದಿನ್ನೆ, ಈರಗಂಟಪಲ್ಲಿ, ಶಂಕವಾರಂಪಲ್ಲಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಈ ರೀತಿಯ ಅನುಭವ ಆಗಿದೆ. ಇನ್ನೂ ವಿಷಯ ತಿಳಿದ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ, ತಹಶೀಲ್ದಾರ್, ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪೆದ್ದತುಂಕೇಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡರು. ಸ್ವತಃ ಶಾಸಕರು ಅಧಿಕಾರಿಗಳ ಗ್ರಾಮದಲ್ಲಿ ಜನರ ಬಳಿ ಮಾಹಿತಿ ಪಡೆಯುವಾಗಲೇ ಜೋರಾದ ಸದ್ದು ಕೇಳಿಬಂದು ಎಲ್ಲರನ್ನ ದಂಗುಬಡಿಸಿತ್ತು.

    CKB

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಹಾಗೂ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಸದ್ದು ಭೂಮಿ ಕಂಪಿಸಿದ ಅನುಭವಗಳಾಗಿದ್ದವು. ಕೆಲವು ಬಾರಿ 3.0 ತೀವ್ರತೆಯ ಭೂಕಂಪನ ಸಹ ವರದಿಯಾಗಿತ್ತು. ಆದ್ರೆ ಕಳೆದ ರಾತ್ರಿಯಿಂದ ಬಾಗೇಪಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಿದ್ರೂ ರಿಕ್ಟರ್ ಮಾಪನದಲ್ಲಿ ಯಾವುದೇ ಭೂಕಂಪನದ ವರದಿ ಆಗಿಲ್ಲ. ಜಿಲ್ಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳಿಗೆ ಕಳೆದ ಬಾರಿ ಸುರಿದ ಭಾರೀ ಮಳೆಗೆ ಅಂತರ್ಜಲ ಹೆಚ್ಚಾಗಿ ಭೂಮಿಯ ಅಂತರಾಳದಲ್ಲಿ ಶೇಖರಣೆಯಾಗಿರೋ ಗಾಳಿ ಹೊರಬರುತ್ತಿರೋದು (ಏರ್ ಬ್ಲಾಸ್ಟ್) ಕಾರಣ ಅನ್ನೋದು ಅಧಿಕಾರಿಗಳ ಹಾಗೂ ಪರಿಣಿತರ ವರದಿಯಾಗಿದೆ. ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಸ್ಥಾನ, ಜೆಡಿಎಸ್‌ಗೆ ಬಸವರಾಜ ಹೊರಟ್ಟಿ ರಾಜೀನಾಮೆ

     

  • ಭೂಮಿಯಿಂದ ಭೀಕರ ಶಬ್ಧ – ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನ

    ಭೂಮಿಯಿಂದ ಭೀಕರ ಶಬ್ಧ – ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನ

    ಚಿಕ್ಕಬಳ್ಳಾಪುರ: ಇಲ್ಲಿನ ಬಾಗೇಪಲ್ಲಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

    CKB

    ಇಲ್ಲಿನ ಪೆದ್ದ ತುಮಕೇಪಲ್ಲಿ, ಲಘುಮದ್ದೇಪಲ್ಲಿ, ಗರ‍್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ಈರಗಂಟಪಲ್ಲಿ ಹಾಗೂ ಟೆಂಕಮಾಕಲಪಲ್ಲಿಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಭಾರೀ ಶಬ್ಧ ಕೇಳಿಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ 126 ಕೇಸ್ – 103 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    9:30 ಹಾಗೂ 9:45 ಗಂಟೆ ಸುಮಾರಿಗೆ ಎರಡು ಬಾರಿ ಶಬ್ಧ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಆತಂಕದಿಂದಲೇ ಕಾಲ ಕಳೆಯುವಂತಾಗಿದೆ.

  • ಜಪಾನ್‍ನಲ್ಲಿ ಭಾರೀ ಭೂಕಂಪ- ನಾಲ್ವರು ಸಾವು, 90 ಜನರಿಗೆ ಗಾಯ

    ಟೋಕಿಯೋ: ಉತ್ತರ ಜಪಾನ್‍ನ ಫುಕುಶಿಮಾ ಕರಾವಳಿ ಭಾಗದಲ್ಲಿ ನಡೆದ ಭೂಕಂಪದಿಂದಾಗಿ 4 ಜನ ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಉತ್ತರ ಜಪಾನ್‍ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಣ್ಣ ಮಟ್ಟದಲ್ಲಿ ಸುನಾಮಿಯ ಹಂತದಲ್ಲೂ ತಲುಪಿತ್ತು. ಭೂಕಂಪನದ ಹಿನ್ನೆಲೆಯಲ್ಲಿ ಪೀಠೋಪಕರಣ ಧ್ವಂಸಗೊಂಡಿದ್ದು, ವಿದ್ಯುತ್‍ಗೆ ನಾಲ್ವರು ಸಾವನ್ನಪ್ಪಿದ್ದಾರೆ.

    ಈ ಪ್ರದೇಶವು ಉತ್ತರ ಜಪಾನ್‍ನ ಭಾಗವಾಗಿದೆ. ಇಲ್ಲಿ ಕಳೆದ 11 ವರ್ಷಗಳ ಹಿಂದೆ 9.0 ತೀವ್ರತೆಯಲ್ಲಿ ಭೂಕಂಪ ಮತ್ತು ಸುನಾಮಿಯಾಗಿ ಅನೇಕ ಅನಾಹುತಗಳಾಗಿತ್ತು.

    ಈ ಬಗ್ಗೆ ಜಪಾನ್‍ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಗುರುವಾರ ಬೆಳಿಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಭೂಕಂಪದಿಂದಾ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಜೊತೆಗೆ 97 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ

    ಜಪಾನ್‍ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ ಬುಧವಾರ ಸಂಜೆ ಸಂಭವಿಸಿದೆ. ಭಾರೀ ತೀವ್ರತೆಯ ಭೂಕಂಪದಿಂದ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ನಂತೆ ಲಖಿಂಪುರ್‌ ಫೈಲ್ಸ್‌ನ್ನು ಯಾಕೆ ಮಾಡ್ಬಾರ್ದು: ಅಖಿಲೇಶ್ ಯಾದವ್ ಪ್ರಶ್ನೆ

  • ಚಿಂತಾಮಣಿಯಲ್ಲಿ ಭೂಕಂಪನದ ಅನುಭವ- ಭಯಭೀತರಾದ ಜನ

    ಚಿಂತಾಮಣಿಯಲ್ಲಿ ಭೂಕಂಪನದ ಅನುಭವ- ಭಯಭೀತರಾದ ಜನ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿ ಹತ್ತು ಹಲವು ಗ್ರಾಮಗಳಲ್ಲಿ ಕಳೆದ ರಾತ್ರಿ ಭೂಕಂಪನದ ಅನುಭವ ಆಗಿದ್ದು, ಜನ ಭಯಭೀತರಾಗಿದ್ದಾರೆ.

    ಕಳೆದ ರಾತ್ರಿ 08 ಗಂಟೆ 50 ನಿಮಿಷ ಸುಮಾರಿಗೆ ಭೂಮಿ ಕಂಪಿಸಿದೆ. ಜೋರು ಶಬ್ದ ಕೇಳಿಬಂದಿದ್ದು ಎರಡು ಬಾರಿ ಭೂಕಂಪನದ ಅನುಭವ ಆಗಿದೆ. ಮನೆಗಳಲ್ಲಿದ್ದ ಪಾತ್ರೆ, ವಸ್ತುಗಳು ಕೆಳಗೆ ಬಿದ್ದಿವೆ. ಇದರಿಂದ ಜನ ಆತಂಕಕ್ಕೊಳಗಾಗಿ ಮನೆಯಿಂದ ಹೊರ ಬಂದಿದ್ದಾರೆ. ರಾತ್ರಿ ಮನೆಯೊಳಗೆ ಮಲಗೋಕು ಜನ ಹೆದರುವಂತಾಗಿ ಬೀದಿಯಲ್ಲೇ ಕಾಲ ಕಳೆದಿದ್ದಾರೆ.

    ಯಾವ ಗ್ರಾಮಗಳಲ್ಲಿ ಅನುಭವ:
    ಮಿಟ್ಟಹಳ್ಳಿ, ನಂದನವನ, ಅಪ್ಪಸಾನಹಳ್ಳಿ, ಆಗ್ರಹಾರಹಳ್ಳಿ, ಗೋನೇನಹಳ್ಳಿ, ವೆಂಕಟರೆಡ್ಡಿಪಾಳ್ಯ, ಕೊಮ್ಮೇಪಲ್ಲಿ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದನ್ನೂ ಓದಿ: ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ

    ಅಧಿಕಾರಿಗಳ ಭೇಟಿ:
    ಈ ವಿಷಯ ತಿಳಿದು ಗ್ರಾಮಗಳಿಗೆ ಕೆಂಚಾರ್ಲಹಳ್ಳಿ ಪೊಲೀಸರು ಹಾಗೂ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ಜನರಿಗೆ ಧೈರ್ಯ ತುಂಬಿ ಅತಂಕ ದೂರ ಸರಿಸುವ ಕೆಲಸ ಮಾಡಿದ್ರು. ಭೂಕಂಪನದ ಭಯದಿಂದ ಮನೆಯಿಂದ ಹೊರಗೆ ಇದ್ದ ಜನ ಮನೆಯೊಳಗೆ ಮಲಗೋಕೆ ಹೆದರುತ್ತಿದ್ರು. ಅಧಿಕಾರಿಗಳ ಅಭಯದಿಂದ ಮುಂಜಾನೆ ನಿದ್ದೆಗೆ ಜಾರಿದ್ದಾರೆ.

    ಮತ್ತೆ ಭೂಮಿ ಕಂಪಿಸಿದ ಅನುಭವ:
    ಅಧಿಕಾರಿಗಳ ಅಭಯದಿಂದ ಮುಂಜಾನೆ ಮಲಗಿದ್ದವರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿ ನಿದ್ದೆಯಿಂದ ಎದ್ದು ಕೂತಿದ್ದಾರೆ. ಈಗಲೂ ಗ್ರಾಮದ ಜನರಲ್ಲಿ ಭೀತಿ ಮುಂದುವರೆದಿದ್ದು..11 ಗಂಟೆಗೆ ಭೂ ಕಂಪನದ ನಿಖರ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೆಲ ಮನೆಗಳು ಬಿರುಕು ಸಹ ಬಿಟ್ಟಿವೆ. ಜನರ ಆತಂಕ ಮುಂದುವರಿದಿದೆ.

  • ಕೊರೊನಾ ಆತಂಕ ಮಧ್ಯೆ ಕೊಡಗು, ಹಾಸನದಲ್ಲಿ ಲಘು ಭೂಕಂಪನ

    ಕೊರೊನಾ ಆತಂಕ ಮಧ್ಯೆ ಕೊಡಗು, ಹಾಸನದಲ್ಲಿ ಲಘು ಭೂಕಂಪನ

    ಹಾಸನ/ಕೊಡಗು: ಕೊರೊನಾ ಆತಂಕದ ನಡುವೆ ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ.

    ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ ಜನ ಭಯಭೀತರಾಗಿದ್ದಾರೆ. ಕಾಳೇನಹಳ್ಳಿ, ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಇಂದು ಸಂಜೆ 5.20ರ ಸಮಯದಲ್ಲಿ ಭೂಮಿ ಕಂಪಿಸಿ ನಡುಗಿದ ಅನುಭವವಾಗಿದ್ದು, ಬೆಚ್ಚಿಬಿದ್ದ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿರುವ ಅನುಭವವಾಗಿದೆ.ಕೊರೊನಾ ಭೀತಿಯ ನಡುವೆ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಲ್ಲದೇ ಮೈಸೂರು-ಹಾಸನ ಭಾಗವಾದ ಕೆ.ಆರ್.ನಗರ, ಅರಕಲಗೂಡು ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವಾಗಿದೆ. ಸಂಜೆ 5.30ಕ್ಕೆ ಹಾರಂಗಿ, ಬೆಂಗಳೂರು ಸಿಸ್ಮೋಗ್ರಾಫ್ ಕೇಂದ್ರಗಳಲ್ಲಿ 2.6ರ ತೀವ್ರತೆ ದಾಖಲಾಗಿದೆ ಎಂದು ಆಣೆಕಟ್ಟು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ

    ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ

    ನವದೆಹಲಿ: ದೆಹಲಿ, ಪಂಜಾಬ್, ಜಮ್ಮುಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವೆಡೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.

    ಸಂಜೆ 4:30ರ ಆಸುಪಾಸಿನಲ್ಲಿ ಭಾರತ ಪಾಕಿಸ್ತಾನದ ಗಡಿ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ಜನರ ಭಯದಿಂದ ಮನೆ, ಕಚೇರಿಯಿಂದ ಹೊರ ಬಂದಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಿಂದ 80 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

    ಇಸ್ಲಾಮಾಬಾದ್, ರಾವಲ್ಪಿಂಡಿ, ಸಿಯಾಲ್‍ಕೋಟ್, ಮುಲ್ತಾನ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಂಪನದ ಅನುಭವವಾಗಿದೆ.